Tag: ಬಿಜೆಪಿ

ಸೆ.13ಕ್ಕೆ ಜಂಟಿ ಅಧಿವೇಶನ; ಸರ್ಕಾರವನ್ನು ಹಣಿಯಲು ಮುಂದಾದ ವಿಪಕ್ಷಗಳು; ಬೊಮ್ಮಾಯಿಗೆ ಸಾಲು ಸಾಲು ಸವಾಲುಗಳು

ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ದೆಹಲಿ ಪ್ರವಾಸ ಮುಗಿಸಿಕೊಂಡು ಕರ್ನಾಟಕಕ್ಕೆ ವಾಪಸ್ಸಾಗಿದೆ. ಭೇಟಿ ವೇಳೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾರೊಂದಿಗೆ ಮಹತ್ವದ ವಿಚಾರಗಳನ್ನು ಚರ್ಚಿಸಿದ್ದರು. ಒಂದೆಡೆ ಸಂಪುಟದಲ್ಲಿ ...

Read more

ಸಿದ್ದರಾಮಯ್ಯ ವಿರುದ್ಧ ಸಿಡಿದೆದ್ದ ಚೇತನ್ ಅಹಿಂಸಾ ಹಿಂದೆ ಯಾರಿದ್ದಾರೆ?

ದಿಡ್ಡಳ್ಳಿ ಆದಿವಾಸಿಗಳ ಭೂಮಿ ಹೋರಾಟದ ಮೂಲಕ ರಾಜ್ಯದ ಸಾರ್ವಜನಿಕ ಬದುಕಿನಲ್ಲಿ ಗಮನ ಸೆಳೆದ ನಟ ಚೇತನ್ ಅಹಿಂಸಾ, ಕಳೆದ ಒಂದು ವಾರದಿಂದ ಭಾರೀ ಸುದ್ದಿಯಲ್ಲಿದ್ದಾರೆ. ಕಾಂಗ್ರೆಸ್ ನಾಯಕ, ...

Read more

ಲೋಕಾಯುಕ್ತ ಕಾಯ್ದೆ ಬಲಪಡಿಸುವ ಆಶ್ವಾಸನೆ ಮತ್ತು ಜನಪ್ರತಿನಿಧಿಗಳ ಕರ್ತವ್ಯ?

ಲೋಕಾಯುಕ್ತ ಕಾಯ್ದೆಯನ್ನು ಬಲಪಡಿಸಿ ಭ್ರಷ್ಟಾಚಾರ ನಿಗ್ರಹ ದಳವನ್ನು ರದ್ದುಪಡಿಸುವುದಾಗಿ ನಾಡಿನ ಜನರಿಗೆ ಆಶ್ವಾಸನೆ ಕೊಟ್ಟ ವಯೋವೃದ್ಧ ಮುಖ್ಯಮಂತ್ರಿಯೊಬ್ಬರು ಆಡಳಿತ ನಡೆಸಿ ಈಗ ಹೊರನಡೆದಿದ್ದಾರೆ. ಆದರೆ ಅವರು ಕೊಟ್ಟ ...

Read more

ಬೊಮ್ಮಾಯಿ ದೆಹಲಿ ಪ್ರವಾಸ ಫಲಪ್ರದ; ಸಂಪುಟ ವಿಸ್ತರಣೆಗೆ ಹೈಕಮಾಂಡ್ ಗ್ರೀನ್ ಸಿಗ್ನಲ್; ಮಂತ್ರಿ ಸ್ಥಾನಕ್ಕೆ ಭಾರೀ ಪೈಪೋಟಿ

ಕಳೆದ ಎರಡು ದಿನಗಳಿಂದ ದೆಹಲಿಯಾತ್ರೆಯಲ್ಲಿದ್ದ ಸಿಎಂ ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ರಾಷ್ಟ್ರ ರಾಜಧಾನಿಯಲ್ಲಿ ಕೇಂದ್ರ ಸಚಿವರು, ತಮ್ಮ ವರಿಷ್ಠರನ್ನ ಭೇಟಿ ಮಾಡಿ ಬಂದಿದ್ದಾರೆ. ಇದು ವಿಧಾನಮಂಡಲ ಅಧಿವೇಶನಕ್ಕೂ ...

Read more

ಪಾಕ್ ಗಡಿ ಸಮೀಪ ನ್ಯಾಷನಲ್ ಹೈವೇನಲ್ಲಿ ತುರ್ತು ಭೂಸ್ಪರ್ಶ ಮೈದಾನ ಉದ್ಘಾಟಿಸಿದ ಸಿಂಗ್, ಗಡ್ಕರಿ; ಏನಿದರ ವಿಶೇಷತೆ?

ಭಾರತದ ರಕ್ಷಣಾ ಪಡೆಗಳ ಇತಿಹಾಸ ನೋಡಿದರೆ, ಒಂದಕ್ಕಿಂತ ಒಂದು ರೋಚಕ ಎನ್ನಬಹುದು. ಒಂದಕ್ಕೊಂದು ಇತಿಹಾಸ ಸೃಷ್ಟಿಸಿ ಅಳಿಸಲಾಗದ ದಾಖಲೆಗಳನ್ನು ಬರೆದಿವೆ. ಅದರಲ್ಲೂ ಭಾರತೀಯ ವಾಯುಸೇನೆ ಸೇನೆ ಮಾತ್ರ ...

Read more

RSS ಮುಕ್ತ ಭಾರತಕ್ಕೆ ಕರೆ ನೀಡಿದ ಮಾಜಿ IPS ಅಧಿಕಾರಿ ನಾಗೇಶ್ವರ ರಾವ್

ಸದಾ ವಿವಾದಗಳಿಂದಲೇ ಸುದ್ದಿಯಲ್ಲಿರುವ ನಿವೃತ್ತ ಐಪಿಎಸ್ ಅಧಿಕಾರಿ ಎಂ ನಾಗೇಶ್ವರ ರಾವ್ ಅವರು ಈಗ ಹೊಸತೊಂದು ಕಾರಣಕ್ಕೆ ಸುದ್ದಿಯಲ್ಲಿದ್ದಾರೆ. 2019ರಲ್ಲಿ ಸಣ್ಣ ಅವಧಿಗೆ ಸಿಬಿಐ ಹಂಗಾಮಿ ಮುಖ್ಯಸ್ಥರಾಗಿ ...

Read more

ಕಾಂಗ್ರೆಸ್‍ ನಾಯಕತ್ವಕ್ಕೆ ಲಿಂಗಾಯತರ ಲಗ್ಗೆ: ಎಸ್‍.ಆರ್‌. ಪಾಟೀಲ್‌ ಮಠ ಯಾತ್ರೆಗೆ ಹೈಕಮಾಂಡ್‍ ಬೆಂಬಲ?

ಕಾಂಗ್ರೆಸ್‍ ಈಗ ಲಿಂಗಾಯತರನ್ನು  ಮತ್ತೆ ಒಲಿಸಿಕೊಳ್ಳುವ ಕ್ರಿಯೆಗೆ ಸದ್ದಿಲ್ಲದೇ ಮುಂದಾಗಿದೆ. ಈ ಕುರಿತು ನಿಮ್ಮ ‘ಪ್ರತಿಧ್ವನಿ’ ವಿಶೇಷ ಬರಹ ನೀಡುತ್ತಿದೆ. ಕಳೆದ ಎರಡು ತಿಂಗಳಿನಿಂದ ವಿಧಾನ ಪರಿಷತ್‍ ...

Read more

ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ: ಕರ್ನಾಟಕದ ಕಾಲೇಜುಗಳಲ್ಲಿ ವ್ಯಾಪಕ ಭಿನ್ನಮತ

ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಆರಂಭದಿಂದಲೂ ವಿವಾದಾತ್ಮಕವಾಗಿಯೇ ಇದೆ. ಗುಜರಾತ್, ಉತ್ತರಪ್ರದೇಶದಂತಹ ಕಟ್ಟಾ ಬಿಜೆಪಿ ಆಡಳಿತವಿರುವ ರಾಜ್ಯಗಳಿಗೂ ಮೊದಲೇ ನಮ್ಮ ಕರ್ನಾಟಕ ಸರ್ಕಾರ ಈ ನೀತಿಯನ್ನು ಇದೇ ...

Read more

ಛತ್ತೀಸ್ ಘಡದಲ್ಲಿ ಹೆಚ್ಚುತ್ತಿರುವ ಗಣಿಗಾರಿಕೆ; ಆತಂಕದಲ್ಲಿ ಆದಿವಾಸಿಗಳು

ಅತ್ಯಂತ ಅಮೂಲ್ಯವಾದ ಅರಣ್ಯ ಸಂಪತ್ತನ್ನು ಹೊಂದಿರುವ ಛತ್ತೀಸ್ ಘಡದಲ್ಲಿ ಕಬ್ಬಿಣದ ಅದಿರು ಕೂಡಾ ಯಥೇಚ್ಚವಾಗಿ ಲಭ್ಯವಿದೆ. ಈ ಕಾರಣಕ್ಕೆ ಕಳೆದ ಕೆಲವು ವರ್ಷಗಳಿಂದ ಸುಮಾರು 4,920 ಹೆಕ್ಟೇರ್’ನಷ್ಟು ಕಾಡು ಪ್ರದೇಶ ಗಣಿಗಾರಿಕೆಗೆ ಆಹುತಿಯಾಗಿದೆ. ವಿರಳವಾದ ಸಸ್ಯಪ್ರಬೇಧ ಹಾಗು ಪ್ರಾಣಿ ಪ್ರಬೇಧವನ್ನು ಒಳಗೊಂಡಿರುವ ಈ ಅರಣ್ಯ ಪ್ರದೇಶವು ದಿನಗಳೆದಂತೆ ಗಣಿಗಾರಿಕೆಯ ಮುಷ್ಟಿಯೊಳಗೆ ಸಿಲುಕಿ ನರಳಾಡುತ್ತಿದೆ.  ಛತ್ತೀಸ್ ಘಡ ಸರ್ಕಾರದ ಅಧಿಕೃತ ದಾಖಲೆಗಳ ಪ್ರಕಾರ ದಾಂತೇವಾಡ, ಬಸ್ತಾರ್, ಕಾನ್ಕೇರ್, ನಾರಾಯಣಪುರ್, ರಾಜನಂದಗಾಂವ್, ದುರ್ಗ್ ಹಾಗೂ ಕಬೀರಧಾಮ್ ಜಿಲ್ಲೆಗಳಲ್ಲಿ ಹಬ್ಬಿಕೊಂಡಿರುವ ಸುಮಾರು 370 ಕಿ.ಮೀ.ಗಳಷ್ಟು ಉದ್ದದ ಖನಿಜ ಸಂಪತ್ತು ಕೈಗಾರಿಕೆಗಳನ್ನು ಕೈಬೀಸಿ ಕರೆಯುತ್ತಿದೆ. ಛತ್ತೀಸ್ ಘಡದಲ್ಲಿ ಸುಮಾರು 4031ಮಿಲಿಯನ್ ಟನ್’ನಷ್ಟು ಹೆಮಟೈಟ್ ಅದಿರು ಲಭ್ಯವಿದೆ. ದೇಶದ ಶೇ. 91ರಷ್ಟು ಕಬ್ಬಿಣದ ಅದಿರು ಛತ್ತೀಸ್ ಘಡದಲ್ಲಿ ಶೇಖರವಾಗಿದೆ.  ಆದರೆ, ಇಲ್ಲಿನ ನಿಜವಾದ ಸಮಸ್ಯೆ ಅಡಗಿರುವುದು ಈ ಕಾಡನ್ನೇ ನಂಬಿ ಬದುಕುತ್ತಿರುವ ಆದಿವಾಸಿ ತಾಂಡಾಗಳಲ್ಲಿ. ಬಸ್ತಾರ್’ನ ದಟ್ಟ ಅರಣ್ಯಗಳ ನಡುವೆ ಆದಿವಾಸಿ ಸಮುದಾಯಗಳು ಹಿಂದಿನಿಂದಲೂ ತಮ್ಮ ಪ್ರಾಬಲ್ಯವನ್ನು ಸಾಧಿಸುತ್ತಾ ಬಂದಿವೆ. ಈಗ ಗಣಿಗಾರಿಕೆಯ ನೆಪದಲ್ಲಿ ಮರಗಳಿಗೆ ಕೊಡಲಿ ಇಡಬೇಕಾದ ಪರಿಸ್ಥಿತಿ ಬಂದಿದ್ದರಿಂದ ಈ ಆದಿವಾಸಿ ಸಮುದಾಯಗಳ ವಾಸ್ತವ್ಯಕ್ಕೆ ಅಪಾಯ ಒದಗಿ ಬಂದಿದೆ. ಹಲವು ಕಡೆಗಳಲ್ಲಿ ನಕಲಿ ದಾಖಲೆಗಳನ್ನು ಬಳಸಿ ಗಣಿಗಾರಿಕೆಗೆ ಅನುಮತಿ ಪಡೆಯಲಾಗಿದೆ ಎಂದು ಸ್ಥಳಿಯ ಆದಿವಾಸಿಗಳು ಆರೋಪವನ್ನೂ ಮಾಡಿದ್ದಾರೆ.  ನಾರಾಯಣಪುರ ಜಿಲ್ಲೆಯಲ್ಲಿ ಜೈಸ್ವಾಲ್ ನೆಕೊ ಇಂಡಸ್ಟ್ರೀಸ್ ಲಿಮಿಟೆಡ್ ಎಂಬ ಕಂಪೆನಿಗೆ ಸುಮಾರು 192 ಹೆಕ್ಟೇರ್ ಪ್ರದೇಶದಲ್ಲಿ ಗಣಿಗಾರಿಕೆ ನಡೆಸಲು ಅನುಮತಿ ನೀಡಲಾಗಿತ್ತು. ಈ ಪ್ರದೇಶದಲ್ಲಿ ಕಬ್ಬಿಣ ಅದಿರಿನ ಶೇಖರಣೆ ದಟ್ಟವಾಗಿತ್ತು. 2016ರಲ್ಲಿ ಸ್ಥಳೀಯ ಜನರ ವಿರೋಧದ ನಡುವೆಯೂ ಇಲ್ಲಿ ಗಣಿಗಾರಿಕೆ ಆರಂಭವಾಗಿತ್ತು. ಐದು ವರ್ಷಗಳ ನಂತರ ಇದೇ ಕಂಪೆನಿ ತನ್ನ ವ್ಯಾಪ್ತಿಯನ್ನು ವಿಸ್ತರಿಸಲು ಮರು ಮನವಿ ಸಲ್ಲಿಸಿದೆ. ಮತ್ತೆ ಇಲ್ಲಿನ ಸ್ಥಳೀಯ ಆದಿವಾಸಿಗಳ ವಿರೋಧ ಅರಣ್ಯ ರೋಧನವಾಗಿಯೇ ಉಳಿದಿದೆ.  ಸ್ಥಳೀಯ ಗ್ರಾಮ ಪಂಚಾಯಿತಿಯ ಅನುಮತಿಯಿಲ್ಲದೆಗಣಿಗಾರಿಕೆಗೆ ಅನುಮತಿ ನೀಡಲಾಗಿದೆ ಎಂದು ಆರೋಪಿಸಲಾಗಿದೆ.ಇಲ್ಲಿ ಗಣಿಗಾರಿಕೆಯನ್ನು ವಿರೋಧಿಸಿ ನಡೆಸಿದ ಪ್ರತಿಭಟನೆಯು ಉಗ್ರ ಸ್ವರೂಪವನ್ನು ತಾಳಿದೆ.  ನಾರಾಯಣಪುರದ ಎನ್ ಜಿ ಒ ಒಂದರ ಸದಸ್ಯರಾಗಿರುವ ರಾಜೇಂದ್ರ ಕುಮಾರ್ ಅವರು ಗಣಿಗಾರಿಕೆಗೆ ಅಲ್ಲಿನ ಆದಿವಾಸಿಗಳು  ಒಡ್ಡಿರುವ ವಿರೋಧಕ್ಕೆ ಬೆಂಬಲ ನೀಡಿದ್ದಾರೆ “ಇಲ್ಲಿನ ಆದಿವಾಸಿಗಳು ತಮ್ಮ ಜೀವನಕ್ಕಾಗಿ ಕಾಡನ್ನು  ಅವಲಂಬಿಸಿದ್ದಾರೆ. ಬಿದಿರು,  ತೆಂಡು ಎಲೆ ಹಾಗೂ ಉರುವಲು ಇವರ ಜೀವನೋಪಾಯವಾಗಿದೆ. ಆದಿವಾಸಿಗಳು  ಪವಿತ್ರವೆಂದು ನಂಬಿರುವ ಅರಣ್ಯ ದೇವತೆಗಳ ಅಸ್ಥಿತ್ವಕ್ಕೂ ಗಣಿಗಾರಿಕೆ ಅಪಾಯ ಉಂಟುಮಾಡಿದೆ. ಈ ಕಾರಣಕ್ಕಾಗಿ ಆದಿವಾಸಿಗಳು ಗಣಿಗಾರಿಕೆಯನ್ನು ವಿರೋಧಿಸುತ್ತಿದ್ದಾರೆ. ಇದರ ಹೊರತಾಗಿ, ಗಣಿಗಾರಿಕೆಯಿಂದ ಅಪಾರ ಪ್ರಮಾಣದ ಅರಣ್ಯ ನಾಶವಾಗುವ ಭಯವೂ ಇದೆ,” ಎಂದು ರಾಜೇಂದ್ರ ಕುಮಾರ್ ಹೇಳಿದ್ದಾರೆ. ಗಣಿಗಾರಿಕೆ ಆರಂಭಿಸಿದ ಬಳಿಕ ಆದಿವಾಸಿಗಳಿಗೆ ಉದ್ಯೋಗ ನೀಡುವ ಭರವಸೆಯನ್ನೂ ನೀಡಲಾಗಿತ್ತು. ಈ ಭರವಸೆಯೂ ಈಗ ಪೊಳ್ಳಾಗಿದೆ. ಸ್ಥಳೀಯರಿಗೆ ಯಾವುದೇ ಉದ್ಯೋಗವನ್ನು ನೀಡಲಾಗಿಲ್ಲ ಎಂದು ಅಲ್ಲಿನ ಸಾಮಾಜಿಕ ಹೋರಾಟಗಾರರು ಆರೋಪಿಸಿದ್ದಾರೆ.  ಒಟ್ಟಿನಲ್ಲಿ, ಕೇವಲ ಅರಣ್ಯವನ್ನೇ ನಂಬಿಕೊಂಡು ಬದುಕುತ್ತಿರುವ ಆದಿವಾಸಿ ಸಮುದಾಯಗಳಿಗೆ ಅರಣ್ಯ ಬಿಟ್ಟರೆ ಬೇರೆ ಪ್ರಪಂಚವೇ ಇಲ್ಲ. ಇಂತಹ ಸಂದರ್ಭಧಲ್ಲಿ ಅವರನ್ನು ಒಕ್ಕಲೆಬ್ಬಿಸುವುದು ಆದಿವಾಸಿಗಳ ಜೀವಿಸುವ ಹಕ್ಕನ್ನು ಕಸಿದುಕೊಂಡಂತಾಗುತ್ತದೆ. ಅವರ ಬದುಕಿನಲ್ಲಿ ಎಂದೂ ಸರಿಯದ ಕಗ್ಗತ್ತಲು ಆವರಿಸಿಕೊಳ್ಳುವ ಭಯವಿದೆ. ಹಿಂದಿನ ಸರ್ಕಾರ ಖಾಸಗಿ ಕಂಪೆನಿಗಳ ಪರವಾಗಿ ಕಾರ್ಯನಿರ್ವಹಿಸಿ ಆದಿವಾಸಿಗಳ ಜೀವನದ ಮೇಲೆ ಬರೆ ಎಳೆದಿತ್ತು. ಇನ್ನಾದರೂ, ಗಣಿಗಾರಿಕೆಯ ಕಾರ್ಮೋಡಗಳು ದೂರ ಸರಿಯುವ ಆಶಾಭಾವನೆಯನ್ನು ಸರ್ಕಾರವು ಆದಿವಾಸಿಗಳಿಗೆ ನೀಡಬೇಕಿದೆ. 

Read more

ಪ್ರತಾಪ್ ಸಿಂಹ ಹೇಳಿಕೆಗೆ ತಿರುಗೇಟು ನೀಡಿದ ಶಾಸಕ ತನ್ವೀರ್ ಸೇಠ್

“ಜವಾಬ್ದಾರಿಯುತ ಸ್ಥಾನದಲ್ಲಿರುವವರು ಏನು ಮಾತನಾಡಬೇಕೆಂದು ತಿಳಿದಿರಬೇಕು ಕೆಡಿಪಿ ಸಭೆಯಲ್ಲಿ ಜಿಲ್ಲಾಧಿಕಾರಿಗೆ ಧಮ್ಕಿ ಹಾಕಿದರೆ , ನಾವು ಯಾರು ಬಳೆ ತೊಟ್ಟು ಕುಳಿತುಕೊಂಡಿಲ್ಲ ಎಂದು ಸಂಸದ ಪ್ರತಾಪ್ ಸಿಂಹ ...

Read more

ಕಾಂಗ್ರೆಸ್ ಮತ್ತು RSS ಒಂದಕ್ಕೊಂದು ಬೆಸೆದುಕೊಂಡಿದೆ, ನಾವು ಎರಡನ್ನೂ ಸೋಲಿಸಬೇಕು -ನಟ ಚೇತನ್

ಕಳೆದ ವಾರ ಮಾಜಿ ಸಿಎಂ ಸಿದ್ಧರಾಮಯ್ಯ ವಿರುದ್ಧ ಬ್ರಾಹ್ಮಣ್ಯವನ್ನು ಬೇರೂರಿಸುವ ಜಾತಿ ನಾಯಕ ಎಂದು ಗುಡುಗಿದ ನಟ ಚೇತನ್‌ ಈಗ ಮತ್ತೆ ಸುದ್ದಿಯಲ್ಲಿದ್ದು ಕಾಂಗ್ರೆಸ್ ಮತ್ತು ಆರ್ ಎಸ್ ...

Read more

ಕರ್ನಾಟಕದ ಇಂಟರ್ನೆಟ್ ಸಂಪರ್ಕ ಸುಧಾರಿಸಲು MeitY ಕಾರ್ಯಪಡೆ ರಚನೆ!: ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌

ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (MeitY) ಬುಧವಾರ ಕರ್ನಾಟಕದಲ್ಲಿ ಅಂತರ್ಜಾಲ ಸಂಪರ್ಕವನ್ನು ಸುಧಾರಿಸಲು ಕಾರ್ಯಪಡೆ ರಚಿಸಿದ್ದು, ರಾಜೀವ್ ಚಂದ್ರಶೇಖರ್ ಅವರ ಸೂಚನೆಗಳ ಮೇರೆಗೆ ರಾಜ್ಯಕ್ಕೆ ...

Read more

ತೆರೆಯಲ್ಲಿ ಎಡ, ಮರೆಯಲ್ಲಿ ಬಲ : ‘ಇನ್ಫೋಸಿಸ್ – RSS’ ಒಂದೇ ನಾಣ್ಯದ ಎರಡು ಮುಖ!

ಐಟಿ ದೈತ್ಯ ಇನ್ಫೋಸಿಸ್ ಅನ್ನು 'ದೇಶವಿರೋಧಿ' ಎಂದು ಹೇಳುವ ಆರ್ಎಸ್ಎಸ್ ಮುಖವಾಣಿ ಪಾಂಚಜನ್ಯ ಲೇಖನವು ಬೆಂಗಳೂರಿನ ಐಟಿ ಸಮುದಾಯದಲ್ಲಿ ದೊಡ್ಡ ಚರ್ಚೆಯನ್ನು ಹುಟ್ಟುಹಾಕಿದೆ. ದಿ ನ್ಯೂಸ್ ಮಿನಿಟ್ ...

Read more

ಬೆಳಗಾವಿ: 15 ಜನ ಎಂಇಎಸ್ ಬೆಂಬಲಿತರು ಬಿಜೆಪಿಗೆ.?

ಈ ಸಲದ ಬೆಳಗಾವಿ ಪಾಲಿಕೆಯ ಚುನಾವಣಾ ವೈಶಿಷ್ಟ್ಯವೇನೆಂದರೆ ಭಾಷಿಕ ರಾಜಕಾರಣ ಹಿನ್ನೆಲೆಗೆ ಸರಿದಿದೆ. ಎಂಇಎಸ್‍ ಎಂಬ ಪುಂಡರ  ಅಜೆಂಡಾಕ್ಕೆ ಮಹಾ ಹಿನ್ನಡೆಯಾಗಿದೆ. ಬೆಳಗಾವಿ ಪಾಲಿಕೆ ಹುಟ್ಟಿದಾಗಿನಿಂದ ಭಾಷಿಕ ...

Read more

ಮಾತು ಮರೆತ  ಪ್ರಧಾನಿ ಮೋದಿ; ಮುಂದುವರೆದ ಅಂಗನವಾಡಿ ಕಾರ್ಯಕರ್ತೆಯರ ಗೋಳು

ಕರೋನಾದಂತಹ ಸಂಕಷ್ಟದ ಸಮಯದಲ್ಲಿ ವೈದ್ಯರು ಹಾಗೂ ದಾದಿಯರು ಯಾವ ರೀತಿ ಯೋಧರಂತೆ ಸೇವೆ ಸಲ್ಲಿಸಿದರೋ, ಅದೇ ರೀತಿ ದೇಶದ ಲಕ್ಷಾಂತರ ಅಂಗನವಾಡಿ ಕಾರ್ಯಕರ್ತೆಯರು ಕೂಡಾ ಲಾಕ್ಡೌನ್ ಹಾಗೂ ಕರೋನಾ ಭಯದ ನಡುವೆಯೂ ಸೇವೆಯನ್ನು ಸಲ್ಲಿಸಿದ್ದಾರೆ. ಇವರಿಗೆಲ್ಲಾ ಕರೋನಾ ವಾರಿಯರ್ಸ್ ಎಂಬ ‘ಬಿರುದು’ ಬಿಟ್ಟರೆ ಬೇರೆ ಯಾವ ರೀತಿಯ ಸವಲತ್ತುಗಳು ಕೂಡಾ ದಕ್ಕಲಿಲ್ಲ. ಇಂದಿಗೂ ದೇಶದ ಮೂಲೆ ಮೂಲೆಗಳಲ್ಲಿ ತಮ್ಮ ಹಕ್ಕಿಗಾಗಿ ಅಂಗನವಾಡಿ ಕಾರ್ಯಕರ್ತೆಯರು ಪ್ರತಿಭಟಸುತ್ತಲೇ ಇದ್ದಾರೆ. ಆದರೆ, ಸರ್ಕಾರ ಮಾತ್ರ ಎಂದಿನಂತೆ ಕಣ್ಣಿದ್ದೂ ಕುರುಡಾಗಿ, ಕಿವಿಯಿದ್ದೂ ಕಿವುಡಾಗಿ ಕುಳಿತಿದೆ.  ರೈತ ಆಂದೋಲನದ ಕೇಂದ್ರ ಬಿಂದುವಾದ ದೆಹಲಿಯಲ್ಲಿ ಮಂಗಳವಾರದಂದು ಅಂಗನವಾಡಿ ಕಾರ್ಯಕರ್ತೆಯರು ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದರು. ಗೌರವಧನ ಹೆಚ್ಚಳ, ಬಾಕಿ ಉಳಿದಿರುವ ಗೌರವಧನ ಬಿಡುಗಡೆ ಸೇರಿದಂತೆ ಹಲವು ದೀರ್ಘ ಕಾಲದ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರದ ಮೇಲೆ ಒತ್ತಡವನ್ನು ಹೇರುವ ಪ್ರಯತ್ನ ಮಾಡಿದ್ದರು.  ಕರ್ನಾಟಕದಲ್ಲಿಯೂ ಅಂಗನವಾಡಿ ಕಾರ್ಯಕರ್ತೆಯರ ಸಂಘಟನೆ ಹಾಗೂ ಒಕ್ಕೂಟಗಳಿಂದ ನಿರಂತರವಾಗಿ ಪ್ರತಿಭಟನೆಗಳು ನಡೆಯುತ್ತಾ ಬಂದಿವೆ. ಪ್ರತಿ ಜಿಲ್ಲಾ ಕೇಂದ್ರಗಳಲ್ಲಿಯೂ ಅಂಗನವಾಡಿ ಕಾರ್ಯಕರ್ತೆಯರು ಒಕ್ಕೊರಲಿನಿಂದ ತಮ್ಮ ಬೇಡಿಕೆಗಳನ್ನು ಸರ್ಕಾರದ ಮುಂದೆ ಇಟ್ಟಿದ್ದಾರೆ. ಮುಖ್ಯವಾಗಿ ಅಂಗನವಾಡಿ ಕಾರ್ಯಕರ್ತೆಯರಿಗೆ ‘ಗೌರವ’ದಿಂದ ಸಲ್ಲಬೇಕಾದ ಗೌರವಧನವನ್ನು ಹೆಚ್ಚಿಸುತ್ತ ಸರ್ಕಾರ ಗಮನವೇ ನೀಡುತ್ತಿಲ್ಲ.  ಪ್ರಧಾನಿ ಮೋದಿಯವರು ಸೆಪ್ಟೆಂಬರ್ 11,2018ರಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಗೌರವಧನವನ್ನು ಹೆಚ್ಚಿಸುವ ಭರವಸೆ ನೀಡಿದ್ದರು. ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರೊಂದಿಗೆ ನಡೆಸಿದ ಆನ್ಲೈನ್ ಸಂವಾದದಲ್ಲಿ ಶೀಘ್ರವೇ ಗೌರವಧನ ಹೆಚ್ಚಿಸುವುದಾಗಿ ಹೇಳಿದ್ದರು. ಈ ಭರವಸೆಯೂ ಇತರ ಭರವಸೆಗಳಂತೆ ಪೊಳ್ಳಾಗಿಯೇ ಉಳಿದಿದೆ. ಭರವಸೆ ನೀಡಿ ಮೂರು ವರ್ಷಗಳು ಕಳೆದರೂ, ಇನ್ನೂ ಪರಿಷ್ಕೃತ ವೇತನ ದರ ನಿಗದಿ ಮಾಡಲು ಕೇಂದ್ರ ಸರ್ಕಾರ ಮುಂದಾಗಲಿಲ್ಲ.  “ಯಾರಿಗೆ ರೂ. 3,000 ವೇತನ ಲಭಿಸುತ್ತಿದೆಯೋ ಅವರಿಗೆ ರೂ. 4,500 ಹಾಗೂ ಯಾರಿಗೆ ರೂ. 2,200 ಲಭಿಸುತ್ತಿದೆಯೋ ಅವರಿಗೆ ರೂ.3,500ದಷ್ಟು ವೇತನ ಹೆಚ್ಚಳ ಮಾಡಲಾಗುವುದು. ಇದರಂತೆ ಅಂಗನವಾಡಿ ಸಹಾಯಕಿಯರಿಗೂ ಶೇ.50ರಷ್ಟು ವೇತನ ಹೆಚ್ಚಳ ಮಾಡಲಾಗುವುದು,” ಎಂದು ಪ್ರಧಾನಿ ಮೋದಿ ಹೇಳಿದ್ದರು.  ಆದರೆ, ಪ್ರಧಾನಿಯವರ ಭರವಸೆಗಳ ಸತ್ಯಾಸತ್ಯತೆಯನ್ನು ಬಹಿರಂಗಪಡಿಸಿರುವ ದೆಹಲಿ ಅಂಗನವಾಡಿ ಕಾರ್ಯರ್ತೆಯರು ಹಾಗೂ ಸಹಾಯಕಿಯರ ಸಂಘಟನೆಯ ಸದಸ್ಯೆ ವೃಷಾಲಿ ಅವರು, ಕೆಲವು ಭಾಗಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಒಂದೂವರೆ ಸಾವಿರ ಗೌರವಧನವನ್ನು ‘ದಾಖಲೆ’ಗಳಲ್ಲಿ ಹೆಚ್ಚಿಸಲಾಗಿದೆ. ಆದರೆ, ಆ ಹಣ ಇನ್ನೂ ಕಾರ್ಯಕರ್ತೆಯರ ಕೈ ಸೇರಿಲ್ಲ. ಆಗಸ್ಟ್ 2021ರ ಹೊತ್ತಿಗೆ, ಅಂಗನವಾಡಿ ಕಾರ್ಯಕರ್ತೆಯರ ರೂ.51,000 ಹಾಗೂ ಸಹಾಯಕಿಯರ ರೂ.25,500 ಬಾಕಿ ಹಣ ಇನ್ನೂ ಪಾವತಿಯಾಗಿಲ್ಲ, ಎಂದಿದ್ದಾರೆ.  ಕಾರ್ಯಕರ್ತೆಯರ ಇನ್ನೊಂದು ಪ್ರಮುಖ ಬೇಡಿಕೆ ಏನೆಂದರೆ, ಅಂಗನವಾಡಿ ಕಾರ್ಯಕರ್ತೆಯರನ್ನು ಸರ್ಕಾರ ನೌಕರರೆಂದು ಪರಿಗಣಿಸಬೇಕು. ಎಲ್ಲಾ ಕಾರ್ಯಕರ್ತೆಯರಿಗೂ ಹಾಗೂ ಸಹಾಯಕಿಯರಿಗೂ ಇಎಸ್ಐ, ಪಿಎಫ್ ಸೇರಿದಂತೆ ಪಿಂಚಣಿ ಸೌಲಭ್ಯವನ್ನು ಕೂಡಾ ನೀಡಬೇಕು.  ಈ ವಿಚಾರವಾಗಿ ಕರ್ನಾಟಕದಲ್ಲಿಯೂ ಕಳೆದ ಹಲವು ವರ್ಷಗಳಿಂದ ಪ್ರತಿಭಟನೆಗಳು ನಡೆಯುತ್ತಲೇ ಇವೆ. ಆದರೆ, ಸರ್ಕಾರ ಮಾತ್ರ ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸುತ್ತಿಲ್ಲ. 2016ರ ನಂತರ ನಿವೃತ್ತರಾದ ಕಾರ್ಯಕರ್ತೆಯರಿಗೆ ಇನ್ನೂ ಎನ್ ಪಿ ಎಸ್ ಹಾಗೂ ಪಿಎಫ್ ನೀಡಲಾಗಿಲ್ಲ. ಹದಿನೈದು ವರ್ಷಗಳಿಂದಲೂ ಸೇವೆ ಸಲ್ಲಿಸುತ್ತಿರುವ ಹಿರಿಯ ಕಾರ್ಯಕರ್ತೆಯರ ಗೌರವಧನ ಇನ್ನೂ ಹತ್ತು ಸಾವಿರ ಮಾತ್ರವೇ ಇದೆ.  ಹೀಗೆ ಒಂದಲ್ಲ ಒಂದು ರೀತಿಯಲ್ಲಿ ನಿರಂತರವಾಗಿ ಸರ್ಕಾರದ ಅವಗಣನೆಗೆ ಒಳಗಾಗುತ್ತಿರುವ ಅಂಗನವಾಡಿ ನೌಕರರ ಸಂಕಷ್ಟಕ್ಕೆ ಸರ್ಕಾರ ತುರ್ತಾಗಿ ಸ್ಪಂದಿಸಬೇಕಾಗಿದೆ. ಕರೋನಾ ಸಂಕಷ್ಟದ ವೇಳೆ ಸೇವೆ ಸಲ್ಲಿಸಿ, ಸೋಂಕಿನಿಂದ ಮೃತಪಟ್ಟ ಕಾರ್ಯಕರ್ತೆಯರ ಕುಟುಂಬದ ನೆರವಿಗೆ ಸರ್ಕಾರ ಬರಬೇಕಿದೆ. ಕೇವಲ ಬಾಯಿ ಮಾತಿನ ಚಪಲಕ್ಕೆ ಹಾಗೂ ಪ್ರಚಾರದ ತೆವಲಿಗೆ ಬಿದ್ದು ಅಂಗನವಾಡಿ ಕಾರ್ಯಕರ್ತೆಯನ್ನು ಕರೋನಾ ವಾರಿಯರ್ಸ್ ಎಂದು ಹೊಗಳುವ ಬದಲು, ಅವರ ಪಾಲಿನ ಹಕ್ಕುಗಳನ್ನು ಅವರಿಗೆ ನೀಡಿದ್ದಲ್ಲಿ, ಅದು ನಿಜವಾಗಿಯೂ ಅಂಗನವಾಡಿ ಕಾರ್ಕರ್ತೆಯರಿಗೆ ನೀಡುವ ಗೌರವವಾಗುವುದು. 

Read more

ವ್ಯವಸ್ಥೆಯ ಕ್ರೌರ್ಯವೂ ಪರ್ಯಾಯದ ಅನಿವಾರ್ಯತೆಯೂ

ಸಾಂವಿಧಾನಿಕ ಪ್ರಜಾಪ್ರಭುತ್ವವನ್ನು ಒಪ್ಪಿಕೊಂಡಿರುವ ಒಂದು ಸಮಾಜದಲ್ಲಿ ಸಾಮಾಜಿಕ ಸ್ವಾಸ್ಥ್ಯವನ್ನು ಅಳೆಯುವುದಾದರೂ ಹೇಗೆ ? ವಿಶ್ವದ ಅತಿದೊಡ್ಡ ಪ್ರಜಾತಂತ್ರ ಎಂಬ ಹೆಗ್ಗಳಿಕೆ ಇರುವ ಭಾರತ, ವಸಾಹತು ಆಳ್ವಿಕೆಯ ದಾಸ್ಯದಿಂದ ...

Read more

ಗಣಪತಿ ಮೂರ್ತಿ 2-4 ಅಡಿ ನಿರ್ಬಂಧ ಹಿಂಪಡೆಯಲು ಸರ್ಕಾರಕ್ಕೆ ಡಿ.ಕೆ. ಶಿವಕುಮಾರ್ ಆಗ್ರಹ

'ಗಣೇಶ ಹಬ್ಬಕ್ಕೆ ಕೇವಲ ಮೂರು ದಿನ ಬಾಕಿ ಇರುವಾಗ ರಾಜ್ಯ ಸರಕಾರವು ಮನೆಯಲ್ಲಿ 2 ಅಡಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ 4 ಅಡಿ ಗಣೇಶ ಮೂರ್ತಿ ಇಡಬೇಕೆಂಬ ...

Read more

ಸಂಪುಟದಲ್ಲಿ ಉಳಿದ ನಾಲ್ಕು ಸಚಿವ ಸ್ಥಾನಗಳ ಭರ್ತಿಗಾಗಿ ಬೊಮ್ಮಾಯಿ ಸರ್ಕಸ್; ಹೈಕಮಾಂಡ್ ಜತೆ ಚರ್ಚೆ ಸಾಧ್ಯತೆ

ಸಿಎಂ ಬಸವರಾಜ ಬೊಮ್ಮಾಯಿ ಅವರು ಎರಡು ದಿನಗಳ ದೆಹಲಿ ಪ್ರವಾಸಕ್ಕೆ ತೆರಳಿದ್ದಾರೆ. ಇದು ಬಿಜೆಪಿ ಸಚಿವಕಾಂಕ್ಷಿಗಳಲ್ಲಿ ಆಂತಕ ಮೂಡಿಸಿದೆ. ಉಳಿದ ನಾಲ್ಕು ಸಚಿವ ಸ್ಥಾನಗಳ ಭರ್ತಿಗಾಗಿ ಹೈಕಮಾಂಡ್ ...

Read more

ಕೇರಳದಲ್ಲಿ ನಿಫಾ ಸೋಂಕು ಹಿನ್ನೆಲೆ ರಾಜ್ಯ ಸರ್ಕಾರದಿಂದ ಸೋಂಕಿನ ಗುಣ ಲಕ್ಷಣಗಳ ಪಟ್ಟಿ ಬಿಡುಗಡೆ!

ಪಕ್ಕದ ಕೇರಳದಲ್ಲಿ ಕೊರೋನಾ ನಡುವೆ ನಿಫಾ ವೈರಸ್ ಕೂಡ ದಾಳಿ ಇಟ್ಟಂತಿದೆ ಈಗಾಗಲೇ ಕೊರೋನಾಗೆ ಬಸವಳಿದಿರುವ ಕೇರಳ ನಿಫಾ ಕಬಂಧಬಾಹುನಲ್ಲಿದೆ. ಈ ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮವಾಗಿ ರಾಜ್ಯ ...

Read more

ನಮ್ಮ ತಾಳ್ಮೆ ಪರೀಕ್ಷಿಸಲಾಗುತ್ತಿದೆ, ಟ್ರಿಬ್ಯುನಲ್ ನೇಮಕಾತಿ ವಿಳಂಬ ಕುರಿತು ಕೇಂದ್ರದ ವಿರುದ್ಧ ಸುಪ್ರೀಂ ಆಕ್ರೋಶ

ವಿವಿಧ ನ್ಯಾಯಮಂಡಳಿಗೆ ನೇಮಕಾತಿಗಳನ್ನು ಮಾಡುವಲ್ಲಿ ವಿಳಂಬ ನೀತಿ ಅನುಸರಿಸುತ್ತಿರುವ ಕೇಂದ್ರದ ನಡೆಯ ವಿರುದ್ಧ ಸುಪ್ರೀಂಕೋರ್ಟ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಟ್ರಿಬ್ಯೂನಲ್ *ನ್ಯಾಯಮಂಡಳಿಗಳು) ಸದಸ್ಯರ ಆಯ್ಕೆ ಮತ್ತು ಅಧಿಕಾರಾವಧಿಯಲ್ಲಿ ...

Read more
Page 549 of 574 1 548 549 550 574

Recent News

Welcome Back!

Login to your account below

Retrieve your password

Please enter your username or email address to reset your password.

error: Content is protected !!