Homeರಾಜ್ಯ

ರಾಜ್ಯ

ಟೆಂಡರ್‌ನಲ್ಲಿ ಅಕ್ರಮ ಆರೋಪಿಸಿದ ವಿಶ್ವನಾಥ್: CM, DCM, ಜಲಸಂಪನ್ಮೂಲ ಇಲಾಖೆಯಿಂದ ಸ್ಪಷ್ಟನೆ

ಜಲಸಂಪನ್ಮೂಲ ಇಲಾಖೆಯಲ್ಲಿ ಭಾರಿ ಅಕ್ರಮ ನಡೆದಿದೆ ಎಂದು ವಿಧಾನಪರಿಷತ್‌ ಸದಸ್ಯ ಎಚ್‌.ವಿಶ್ವನಾಥ್ ಅವರ ಮಾಡಿರುವ ಆರೋಪಗಳ ಕುರಿತಂತೆ ಜಲಸಂಪನ್ಮೂಲ ಇಲಾಖೆ ಹಾಗೂ ಮುಖ್ಯಮಂತ್ರಿ...

ಕರೋನ 3ನೇ ಅಲೆ ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರೋದಿಲ್ಲ: WHO & AIMS ಸಂಶೋಧನೆ

ದೇಶದಲ್ಲಿ ಕರೋನ 2ನೇ ಅಲೆಯು ಇಳಿಕೆಯತ್ತ ಸಾಗುತ್ತಿದ್ದಂತೆ 3ನೇ ಅಲೆಯಲ್ಲಿ ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರಲಿದೆ ಎನ್ನಲಾಗಿತ್ತು. ಆದರೆ 3ನೇ ಅಲೆಯಲ್ಲಿ...

ನಾಯಕತ್ವ ಬಗ್ಗೆ ಚಿಂತೆಯಿಲ್ಲ; ಪಕ್ಷದ ವರ್ಚಸ್ಸೇ ಮುಖ್ಯ – BJPಯಲ್ಲಿ ಮೂರನೆ ಬಣ!

ಕಳೆದ ಕೆಲವು ತಿಂಗಳಿನಿಂದ ರಾಜ್ಯ ರಾಜಕಾರಣದಲ್ಲಿ ಸದ್ದು ಮಾಡುತ್ತಿರುವ ಬಿಜೆಪಿ ನಾಯಕತ್ವ ಬದಲಾವಣೆಯ ಕುರಿತು ಇನ್ನೂ ಗೊಂದಲಗಳು ಮುಗಿದಿಲ್ಲ. ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌ ಅವರು ರಾಜ್ಯಕ್ಕೆ ಆಗಮಿಸಿ ಬಿಜೆಪಿ ಶಾಸಕರೊಡನೆ ಚರ್ಚೆ ನಡೆಸಿದ್ದರೂ, ತಾರ್ಕಿಕ ಅಂತ್ಯಕ್ಕೆ ಬರಲು ಅವರಿಂದಲೂ ಸಾಧ್ಯವಾಗಿಲ್ಲ. ಭಿನ್ನಮತೀಯ ಶಾಸಕರ ಅಸಮಾಧಾನವನ್ನು ತಣಿಸಲು ಕೂಡಾ ಅವರು ವಿಫಲವಾಗಿದ್ದಾರೆ. ಇದುವರೆಗೂ ರಾಜ್ಯ ಬಿಜೆಪಿಯಲ್ಲಿ ಯಡಿಯೂರಪ್ಪ ಪರ ಒಂದು ಬಣವಿದ್ದರೆ, ಯಡಿಯೂರಪ್ಪ ವಿರುದ್ಧ ಒಂದು ಬಣ ಇರುವುದು ಬಹಿರಂಗಗೊಂಡಿತ್ತು. ಆದರೆ, ಅರುಣ್‌ ಸಿಂಗ್‌ ಆಗಮನದ ಬಳಿಕ ರಾಜ್ಯ ಬಿಜೆಪಿಯಲ್ಲಿ ಇದೆರಡಕ್ಕೂ ಹೊರತಾಗಿ ಮೂರನೆಯ ಒಂದು ಬಣ ಇರುವುದು ಸ್ಪಷ್ಟವಾಗಿದೆ. ಜಿಂದಾಲ್‌ ಕಂಪೆನಿಗೆ ಭೂಮಿ ಕೊಡುವ ವಿಚಾರದಲ್ಲಿ ಪಕ್ಷದೊಳಗೆದ್ದ ಅಸಹನೆಯ ವೇಳೆ ಈ ಮೂರನೆಯ ಬಣ ಇರುವ ಕುರಿತು ಅಸ್ಪಷ್ಟ ಸೂಚನೆ ಲಭಿಸಿತ್ತಾದರೂ, ಅರುಣ್‌ ಸಿಂಗ್‌ ಭೇಟಿಯ ಬಳಿಕ ಈ ಬಣದ  ಮುಖಂಡರು ಯಾರು ಎನ್ನುವುದು ಇನ್ನೂ ನಿಚ್ಚಳವಾಗಿದೆ. ಸಂಘದ ಹಿನ್ನೆಲೆಯಿಂದಲೇ ಬಂದ ಶಾಸಕರ ಈ  ಬಣವು ಯಡಿಯೂರಪ್ಪ ಅಥವಾ ಯಡಿಯೂರಪ್ಪ ವಿರೋಧಿ ಪಾಳೆಯಕ್ಕೆ ನಿಷ್ಟೆಯಾಗಿರದೆ,  ಕೇವಲ ಪಕ್ಷಕ್ಕೆ ನಿಷ್ಟವಾಗಿದೆ ಹಾಗೂ ಆರ್‌ಎಸ್‌ಎಸ್‌ ಜೊತೆಗೆ ನಿಕಟವಾಗಿದೆ. ಕಳೆದ ಕೆಲವು ತಿಂಗಳುಗಳಿಂದ ನಾಯಕತ್ವ ಬದಲಾವಣೆ, ನಾಯಕತ್ವ ಉಳಿಸುವಿಕೆ ಪ್ರಹಸನದಲ್ಲಿ ಉಳಿದೆರಡು ಬಣಗಳು ಹಗ್ಗ ಜಗ್ಗಾಟದಲ್ಲಿ ತೊಡಗಿಕೊಂಡಿದ್ದ ನಡುವೆಯೇ, ಈ ಮೂರನೆಯ ಬಣವು ಜಿಂದಾಲ್‌ ಕಂಪೆನಿಗೆ ಭೂ ಪರೆಭಾರೆ ವಿಚಾರದಲ್ಲಿ ಸರ್ಕಾರದ ನಿರ್ಧಾರಕ್ಕೆ ಅಸಮ್ಮತಿ ವ್ಯಕ್ತಪಡಿಸಿದ್ದವು. ಕಾಂಗ್ರೆಸ್-ಜೆಡಿಎಸ್‌ ಮೈತ್ರಿ ಸರ್ಕಾರವು ಅಧಿಕಾರದಲ್ಲಿದ್ದ ವೇಳೆ ಬಿಜೆಪಿಯು ಜಿಂದಾಲ್‌ಗೆ ಜಮೀನು  ಕೊಡುವ ವಿಚಾರದಲ್ಲಿ ವಿರೋಧ ವ್ಯಕ್ತಪಡಿಸಿತ್ತು. ಯಡಿಯೂರಪ್ಪ ನೇತೃತ್ವದ ಬಿಜೆಪಿ ರಾಜ್ಯ ಸರ್ಕಾರ ರಚಿಸಿದ ಬೆನ್ನಲ್ಲೇ ಜಿಂದಾಲ್‌ಗೆ ಭೂಮಿ ಪರಭಾರೆ ಮಾಡಿಕೊಟ್ಟಿತ್ತು. ಇದನ್ನು ವಿರೋಧಿಸಿ ಪಕ್ಷಕ್ಕೆ ನಿಷ್ಟವಾಗಿರುವ ಈ ಶಾಸಕರು ಭೂಮಿ ಪರಭಾರೆ ವಿಚಾರದಲ್ಲಿ ಸರ್ಕಾರದ ಬದಲಾದ ನಿಲುವಿನ ಕುರಿತು ಅಚ್ಚರಿ ವ್ಯಕ್ತಪಡಿಸಿತ್ತು. ಈ ಬಣದ ಮುಂಚೂಣಿ ನಾಯಕರೆನಿಸಿಕೊಂಡಿರುವ ಸರ್ಕಾರದ ಮುಖ್ಯ ಸಚೇತಕ ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್  ಭೂಮಿ ಮಂಜೂರಾತಿ ಕುರಿತು ಬಹಿರಂಗವಾಗಿಯೇ ತಮ್ಮ ಅಸಮ್ಮತಿ ವ್ಯಕ್ತಪಡಿಸಿದ್ದರು.  ಭೂಮಿ ಮಂಜೂರಾತಿ ವಿರುದ್ಧ ಕೇಂದ್ರ ನಾಯಕತ್ವಕ್ಕೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದ ಅವರು, “ಈ ಹಿಂದೆ ನಾವು ವಿರೋಧಿಸಿದ್ದ ವಿಷಯದ ಬಗ್ಗೆ ಪಕ್ಷದ ನಿಲುವು ಹೇಗೆ ಬದಲಾಯಿತು ಎಂಬುದು ನನಗೆ ತಿಳಿದಿಲ್ಲ ಎಂದು ಹೇಳಿದ್ದರು. ಪಕ್ಷದ ವೇದಿಕೆಯಲ್ಲಿ ಅಥವಾ ಶಾಸಕಾಂಗದಲ್ಲಿ ಇದನ್ನು ಯಾರೂ ಬಗೆಹರಿಸಿಲ್ಲ. ಈ ಭೂಮಿಯನ್ನು ಮಾರಾಟ ಮಾಡಬಾರದೆಂಬ ಪಕ್ಷದ ಮೂಲ ಅಭಿಪ್ರಾಯದೊಂದಿಗೆ ನಾನು ನಿಲ್ಲುತ್ತೇನೆ. ಪಕ್ಷ ಹೇಗೆ ತನ್ನ ನಿಲುವಿನಿಂದ ಬದಲಾಯಿತು ಎಂದು ಗೊತ್ತಿಲ್ಲ ಎಂದು ಹೇಳುವ ಮೂಲಕ, ತನ್ನ ಸೈದ್ಧಾಂತಿಕ ಬದ್ಧತೆಯನ್ನು ಪ್ರಕಟಿಸಿದ್ದರು. ನಾಯಕತ್ವ ಕುರಿತು ಚಿಂತೆಯಿಲ್ಲ; ಪಕ್ಷದ ವರ್ಚಸ್ಸು ಅಷ್ಟೇ ಮುಖ್ಯ ಬಿಎಸ್‌ವೈ ಪರ ವಿರೋಧಿ ಬಣಗಳು ಮಾಡುತ್ತಿರುವ ರಾಜಕೀಯ ಹೈಡ್ರಾಮಗಳಿಂದ ಪಕ್ಷದ ವರ್ಚಸ್ಸು ರಾಜ್ಯದಲ್ಲಿ ಕುಗ್ಗುತ್ತಿದೆ ಎನ್ನುವುದು ಸಂಘ ನಿಷ್ಠ ಶಾಸಕರ ಆತಂಕ. ಯಡಿಯೂರಪ್ಪ ನಾಯಕರಾಗಿಯೇ ಮುಂದುವರಿಯಲಿ, ಅಥವಾ ನಾಯಕತ್ವ ಬೇರೆಯವರಿಗೆ ಹೋಗಲಿ, ಆದರೆ ಪಕ್ಷದ ವರ್ಚಸ್ಸಿಗೆ ಕುಂದುಂಟಾಗುವ ರೀತಿಯಲ್ಲಿ ಉಭಯ ಬಣದ ನಾಯಕರು ವರ್ತಿಸಬಾರದು ಎನ್ನುವುದು ಮೂರನೆಯ ಬಣದ ಕಾಳಜಿ. ನಾವು ಯಾರ ಪರವೂ ಇಲ್ಲ, ವಿರುದ್ಧವೂ ಇಲ್ಲ. ಪಕ್ಷದ ವರಿಷ್ಟರು ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧವಾಗಿರುತ್ತೇವೆ ಎಂದು ಹೇಳುವ ಇವರು, ಬಿಜೆಪಿಗಿಂತ ಯಡಿಯೂರಪ್ಪ ಮುಖ್ಯ ಅಂತಲೋ, ಯಡಿಯೂರಪ್ಪ ಕುಟುಂಬ ರಾಜಕಾರಣ ನಮಗೆ ಸಮಸ್ಯೆ ಅಂತಲೋ ಎಂದು ಹೇಳಿಕೊಳ್ಳುವವರಲ್ಲ. ಇವರದ್ದೇನಿದ್ದರೂ ಪಕ್ಷ, ಸಂಘ ಅಷ್ಟೇ. ಕಾರ್ಕಳ ಶಾಸಕ ವಿ ಸುನಿಲ್‌ ಕುಮಾರ್‌ ಮುಂಚೂಣಿಯಲ್ಲಿರುವ ಈ ಬಣದಲ್ಲಿ ಕರಾವಳಿಯ ಬಹುತೇಕ ಶಾಸಕರಿದ್ದಾರೆ. ಮುಜರಾಯಿ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಕೂಡಾ ಈ ಬಣದದಲ್ಲಿರುವ ಪ್ರಮುಖರು. ಉಭಯ ಬಣದ ನಾಯಕರ ವಿರುದ್ಧ ವರಿಷ್ಟರಿಗೆ ದೂರು: ಶಿಸ್ತುಕ್ರಮಕ್ಕೆ ಆಗ್ರಹ ನಾಯಕತ್ವ ಬದಲಾವಣೆ ಜಂಜಾಟಗಳಿಂದ ಪಕ್ಷಕ್ಕೆ ಮುಜುಗರ ಉಂಟಾಗುತ್ತಿದೆ ಎಂದು ಭಾವಿಸುತ್ತಿರುವ ತೃತೀಯ ಬಣದ ಶಾಸಕರು ಪಕ್ಷದೊಳಗಿನ ರಾಜಕೀಯ ಹೈಡ್ರಾಮಗಳಿಗೆ ಬೇಸತ್ತು ಹೋಗಿದ್ದಾರೆ. ಮೊದಮೊದಲು ಬಸನಗೌಡ ಪಾಟೀಲ ಯತ್ನಾಳ್‌ ಮಾತ್ರ ಪಕ್ಷದ ವಿರುದ್ಧ ಹೇಳಿಕೆ ನೀಡಿ ಮುಜುಗರ ತರಿಸುತ್ತಿದ್ದರೆ, ಇದೀಗ ಬಹಿರಂಗ ಕಚ್ಚಾಟದಲ್ಲಿಯೇ ತೊಡಗಿ ಎಂಪಿ ರೇಣುಕಾಚಾರ್ಯ, ಎ ಹೆಚ್‌ ವಿಶ್ವನಾಥ್‌, ಅರವಿಂದ್‌ ಬೆಲ್ಲದ್‌ ಮೊದಲಾದವರು ಪಕ್ಷಕ್ಕೆ ತಲೆ ತಗ್ಗಿಸುವಂತಹ ಹೇಳಿಕೆಯನ್ನು ನೀಡಿ ಸರ್ಕಾರದ ಮಾನ ಹರಾಜಿಗಿಡುತ್ತಿದ್ದಾರೆ. ಮುಖ್ಯಮಂತ್ರಿ ಕುಟುಂಬಸ್ಥರು ಸರ್ಕಾರದೊಳಗೆ ಮಾಡುತ್ತಿರುವ ಹಸ್ತಕ್ಷೇಪದ ಕುರಿತು ಯತ್ನಾಳ್‌ ಬಹಿರಂಗ ಅಸಮಾಧಾನ ವ್ಯಕ್ತಪಡಿಸುತ್ತಿದ್ದರೆ, ಇತ್ತೀಚೆಗಷ್ಟೇ ಬಿಜೆಪಿ ಸೇರಿಕೊಂಡ ಎಹೆಚ್‌ ವಿಶ್ವನಾಥ್‌, ಬಿಎಸ್‌ವೈ ನಾಯಕರಾಗಿ ಮುಂದುವರಿಯಲು ಯೋಗ್ಯರಲ್ಲ ಎಂದು ಹೇಳಿಕೆ ನೀಡುತ್ತಿದ್ದಾರೆ. ಇವರ ವಿರುದ್ಧ ಯಡಿಯೂರಪ್ಪ ಆಪ್ತ ಎಂಪಿ ರೇಣುಕಾಚಾರ್ಯ ಕೂಡಾ ಬಹಿರಂಗವಾಗಿಯೇ ವಾಗ್ದಾಳಿ ನಡೆಸುತ್ತಿದ್ದಾರೆ. ಈ ಎಲ್ಲದರ ನಡುವೆ, ಅರವಿಂದ ಬೆಲ್ಲಡ್‌ ತನ್ನ ಫೋನ್‌ ಕದ್ದಾಲಿಕೆ ಆಗುತ್ತಿದೆ ಎಂದು ಪರೋಕ್ಷವಾಗಿ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಪಕ್ಷದ ಶಾಸಕರ ಈ ಬಹಿರಂಗ ಜಗಳಗಳಿಂದ ಪಕ್ಷಕ್ಕೆ ತೀವ್ರ ಹಾನಿಯಾಗುತ್ತಿದೆಯೆಂದು ಆರೋಪಿಸಿ ರಾಜ್ಯ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ ಅವರು ಕೇಂದ್ರ ವರಿಷ್ಟರಿಗೆ ದೂರು ನೀಡಿದ್ದಾರೆ. ಕೇಂದ್ರ ನಾಯಕರ ಎಚ್ಚರಿಕೆಯ ನಡುವೆಯೂ ಉಭಯ ಬಣದ ಶಾಸಕರು ಪರಸ್ಪರ ಕೆಸರೆರಚಾಟದಲ್ಲಿ ತೊಡಗಿರುವುದರಿಂದ ಪಕ್ಷಕ್ಕೆ ಹಾನಿಯಾಗುತ್ತಿದೆ. ಇವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಪತ್ರದಲ್ಲಿ ಆಗ್ರಹಿಸಲಾಗಿದೆ. ಮುಖ್ಯವಾಗಿ, ಅರವಿಂದ್‌ ಬೆಲ್ಲದ, ಎ ಹೆಚ್‌ ವಿಶ್ವನಾಥ್‌, ಎಂ ಪಿ ರೇಣುಕಾಚಾರ್ಯ ಮತ್ತು ಬಸನಗೌಡ ಪಾಟೀಲ ಯತ್ನಾಳ್‌ ಅವರ ಹೆಸರನ್ನು ಪತ್ರದಲ್ಲಿ ಉಲ್ಲೇಖಿಸಲಾಗಿದೆ ಎಂದು ತಿಳಿದು ಬಂದಿದೆ. ಒಟ್ಟಾರೆ, ಇದುವರೆಗೂ ರಾಜ್ಯ ಭಾಜಪಾದೊಳಗೆ ಎರಡು ಬಣಗಳು ಮಾತತ್ರವಲ್ಲ, ತಟಸ್ಥವಾಗಿರುವ ಮೂರನೆಯ ಬಣವೂ ಇದೆ ಎನ್ನುವುದು ಸಾಬೀತಾಗಿದೆ.

ಮೇಕೆದಾಟು ವಿವಾದ: ಸರ್ಕಾರವನ್ನೇ ನಡೆಸಲಾಗದ ಬಿಜೆಪಿಗೆ ಇನ್ನು ನೆಲ–ಜಲ, ಭಾಷೆ–ನುಡಿಯ ಬಗ್ಗೆ ಅಕ್ಕರೆ ಇದ್ದೀತೆ? : ಹೆಚ್‌ಡಿಕೆ ಟೀಕೆ

ತಮಿಳುನಾಡು ಸರ್ಕಾರ ಮೇಕೆದಾಟು ಜಲಾಶಯ–ಕಾವೇರಿ ನದಿ ನೀರಿನ ವಿಚಾರದಲ್ಲಿ ಕರ್ನಾಟಕಕ್ಕೆ ಪ್ರತಿಕೂಲವಾಗುವಂಥ ಹೆಜ್ಜೆ ಇಟ್ಟಿದೆ. ಇದರ ಬಗ್ಗೆ ಗಮನಹರಿಸಬೇಕಿದ್ದ ರಾಜ್ಯದ ಬಿಜೆಪಿ ಸರ್ಕಾರ...

ಲಾಕ್‌ಡೌನ್‌ನಿಂದಾಗಿ ಬೆಳೆಗಾರರಿಗೆ ಹುಳಿಯಾದ ಕಿತ್ತಳೆ

ಕೋವಿಡ್ ಲಾಕ್‌ಡೌನ್ ಪರಿಣಾಮ ಕಳೆದ ಎರಡು ವರ್ಷಗಳಿಂದ ಕೊಡಗಿನ ಕಿತ್ತಳೆಗೆ ಬೇಡಿಕೆ ಕುಸಿದಿದೆ. ಈ ಬಾರಿ ನಿರೀಕ್ಷೆಗೂ ಮೀರಿ ಫಸಲು ಬಂದಿದ್ದರೂ ಲಾಭ...

ಭಾಷಾ ವಿಷಯಗಳಿಗೆ ಮಿತಿ ಹೇರಿದರೆ ರಾಮಾಯಣ, ಮಹಾಭಾರತ ಕಲಿಯುವುದು ಹೇಗೆ? ಹೊಸ ಶಿಕ್ಷಣ ನೀತಿಯ ವಿರುದ್ಧ ಸಿದ್ದರಾಮಯ್ಯ ಆಕ್ರೋಶ

ಮೂರು ವರ್ಷಗಳ ಅವಧಿಯ ಪದವಿ ಶಿಕ್ಷಣದಲ್ಲಿ ಭಾಷಾ ವಿಷಯಗಳನ್ನು ನಾಲ್ಕು ಸೆಮಿಸ್ಟರ್‌ಗಳ ಅವಧಿಗಳಲ್ಲಿ ಕಲಿಸುತ್ತಿದ್ದು ಅದನ್ನು ಒಂದು ವರ್ಷದ ಅವಧಿಯ ಎರಡು ಸೆಮಿಸ್ಟರ್‌ಗಳಿಗೆ...

ಅರುಣ್ ಸಿಂಗ್ ಎಂಬ ಜೋಕರ್; ನಾಯಕತ್ವ ಬದಲಾವಣೆ ಎಂಬ ಪ್ರಹಸನ

ಮುಖ್ಯಮಂತ್ರಿ ಬಿ.ಎಸ್.‌ ಯಡಿಯೂರಪ್ಪ ಅವರನ್ನು ಬದಲಿಸಲು ಮೊದಲಿನಿಂದಲೂ ಪ್ರಯತ್ನಿಸುತ್ತಿರುವ ಬಿ.ಎಲ್. ಸಂತೋಷ್ ಬಣ ಈಗ ಇನ್ನಷ್ಟು ಸಕ್ರಿಯವಾಗಿದೆ. ನಡುವೆ ಸಚಿವ ಸಂಪುಟದ ಪುನರ್ರಚನೆ...

ಹೊಸ ಶಿಕ್ಷಣ ನೀತಿಯಿಂದ ಕನ್ನಡಕ್ಕೆ ಕುತ್ತು; ಎರಡೇ ಸೆಮಿಸ್ಟರ್‌ಗೆ ಸೀಮಿತವಾಯ್ತು ಮಾತೃಭಾಷೆ ಕನ್ನಡ.!

ಕೇಂದ್ರ ಸರ್ಕಾರದ ಮಹತ್ವಕಾಂಕ್ಷೆಯ 2020ರ ಹೊಸ ಶಿಕ್ಷಣ ನೀತಿ ಜಾರಿಗೊಳಿಸಲು ಹೊರಟಿದ್ದು ಇದರಲ್ಲಿ ಕನ್ನಡ ಭಾಷೆಯನ್ನು ಸಂಪೂರ್ಣ ಕಡೆಗಣಿಸಲಾಗಿದೆ. ಕೇಂದ್ರ ಸರ್ಕಾರದ ಈ...

Want to stay up to date with the latest news?

We would love to hear from you! Please fill in your details and we will stay in touch. It's that simple!