ಭಾರತದ ರಕ್ಷಣಾ ಪಡೆಗಳ ಇತಿಹಾಸ ನೋಡಿದರೆ, ಒಂದಕ್ಕಿಂತ ಒಂದು ರೋಚಕ ಎನ್ನಬಹುದು. ಒಂದಕ್ಕೊಂದು ಇತಿಹಾಸ ಸೃಷ್ಟಿಸಿ ಅಳಿಸಲಾಗದ ದಾಖಲೆಗಳನ್ನು ಬರೆದಿವೆ. ಅದರಲ್ಲೂ ಭಾರತೀಯ ವಾಯುಸೇನೆ ಸೇನೆ ಮಾತ್ರ ಸದಾ ಒಂದಲ್ಲಾ ಒಂದು ಸಾಹಸ ಮಾಡುತ್ತಲೇ ಇರುತ್ತದೆ. ಈಗ ವಾಹನಗಳು ಓಡಾಡುವ ಹೆದ್ದಾರಿಯಲ್ಲಿ ಸೂಪರ್ ಹರ್ಕ್ಯುಲಸ್ C-130J ವಿಮಾನ ಇಳಿಸುವ ಮೂಲಕ ವಿಶ್ವದ ಗಮನ ಸೆಳೆದಿದೆ.
ಹೆಚ್ಚು ಓದಿದ ಸ್ಟೋರಿಗಳು
ಹೌದು, ಭಾರತೀಯ ವಾಯುಸೇನೆ ಲೋಹದ ಹಕ್ಕಿಗಳ ಸಾಹಸಮಯ ಹಾರಾಟ ನೋಡಿದರೆ ಎಂಥವರಿಗೂ ಎದೆಯಲ್ಲಿ ನಡುಕ ಹುಟ್ಟಿಸುತ್ತೆ. ಕಾರ್ಗಿಲ್ ಯುದ್ಧದ ವಿಜಯದಲ್ಲಿ ವಾಯುಪಡೆ ಪ್ರಮುಖ ಪಾತ್ರ ವಹಿಸಿದೆ. ಅದು ನಮ್ಮ ಭಾರತೀಯ ವಾಯುಪಡೆಗೆ ಇರುವ ತಾಕತ್ತು ಎನ್ನಬಹುದು. ಅದೇ ಲೋಹದ ಹಕ್ಕಿಗಳ ಬಲವನ್ನು ನೂರ್ಮಡಿಗೊಳಿಸಲು, ಇದೀಗ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಾಗೂ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಭಾರತೀಯ ವಾಯುಪಡೆಗೆ ಸೇರಿದ ಸೂಪರ್ ಹರ್ಕ್ಯುಲಸ್ C-130J ವಿಮಾನವನ್ನು ರಾಷ್ಟ್ರೀಯ ಹೆದ್ದಾರಿಯಲ್ಲಿ ತುರ್ತು ಭೂಸ್ಪರ್ಶ ಮಾಡಿಸುವ ಮೂಲಕ ವಾಯುಪಡೆಯ ಸಾಹಸದ ಕೀರ್ತಿ ಪತಾಕೆಯನ್ನು ಇನ್ನಷ್ಟು ಎತ್ತರಕ್ಕೆ ಹಾರಿಸಿದ್ದಾರೆ.
ಈ ಹೈವೇಯನ್ನು ಭಾರತಮಾಲಾ ಯೋಜನೆಯಡಿ 765.52 ಕೋಟಿ ವೆಚ್ಚದಲ್ಲಿ ಹೈವೇ ನಿರ್ಮಾಣ ಮಾಡಲಾಗಿದೆ. ಗಗರಿಯಾ – ಭಕಾಸರ್ನ ದ್ವಿಪಥದಲ್ಲಿ ಒಟ್ಟು 196.97 ಕಿ.ಮೀ. ಉದ್ದದ ರಸ್ತೆಯನ್ನು ನಿರ್ಮಿಸಿದ್ದು, ರಾಜಸ್ಥಾನದ ಬಾರ್ಮರ್ ಜಿಲ್ಲಾ ವ್ಯಾಪ್ತಿಯಲ್ಲಿ ಈ ಹೆದ್ದಾರಿ ಇದೆ. ಇನ್ನೂ ಈ ರಾಷ್ಟ್ರೀಯ ಹೆದ್ದಾರಿ ಪಾಕಿಸ್ತಾನದ ಗಡಿಗೆ ಕೇವಲ 40 ಕಿ.ಮೀ ದೂರದಲ್ಲಿದ್ದು, ದೇಶದ ಮೊಟ್ಟ ಮೊದಲ ಅತೀ ದೊಡ್ಡ ಪ್ಲೈಟ್ ಲ್ಯಾಂಡಿಂಗ್ ನ್ಯಾಷನಲ್ ಹೈವೇ ಇದಾಗಿದೆ.
ಇನ್ನು, ಹೆದ್ದಾರಿಯಲ್ಲಿ ಸಿ130, ಎಎನ್ 32, ಎಎಸ್ಯು 30, ಎಂಕೆಐ 37 ಫ್ಲೈಟ್ ಲ್ಯಾಂಡಿಂಗ್ ಮಾಡಬಹುದು. ಇದರ ಜೊತೆಗೆ ಸೂಪರ್ ಹರ್ಕ್ಯುಲಸ್ C-130J, SU 30 MKI ಡೇಂಜರ್ ಫೈಟರ್ ಜೆಟ್ಗಳನ್ನು ಸಹ ಇಲ್ಲಿ ತುರ್ತು ಭೂಸ್ಪರ್ಶ ಮಾಡಬಹುದು. ಈ ಹೆದ್ದಾರಿ ವಾಯುಪಡೆ ತುರ್ತು ಭೂ ಸ್ಪರ್ಶಕ್ಕಾಗಿ ಬಳಸಲಾಗಿರುವ ಮೊದಲ ರಾಷ್ಟ್ರೀಯ ಹೆದ್ದಾರಿ ಎಂಬ ಕೀರ್ತಿಗೆ ಪಾತ್ರವಾಗಿದೆ.

ಅಂತಾರಾಷ್ಟ್ರೀಯ ಗಡಿ ಪ್ರದೇಶಗಳಲ್ಲಿ ಹೈವೇ ಏರ್‌ಸ್ಟ್ರಿಪ್ನಿರ್ಮಾಣ ಮಾಡಲಾಗಿದೆ. ಭಾರತದ ಸೂಕ್ಷ್ಮ ಗಡಿ ಪ್ರದೇಶಗಳಲ್ಲಿ ಹೈವೇ ಏರ್‌ಸ್ಟ್ರಿಪ್ ಇದ್ದು, ಪಾಕ್, ಚೀನಾ ಗಡಿ ಪ್ರದೇಶಗಳಲ್ಲಿ ಹೈವೇ ಏರ್‌ಸ್ಟ್ರಿಪ್ನಿರ್ಮಿಸಲಾಗಿದೆ. ಇದರ ಜೊತೆಗೆ ವಾಯುಪಡೆಯ ತುರ್ತು ಭೂಸ್ಪರ್ಶದ ಸೌಲಭ್ಯಕ್ಕಾಗಿ ಬಳಕೆ ಮಾಡಬಹುದಾಗಿದ್ದು, ಯುದ್ಧ ಸಂದರ್ಭದಲ್ಲಿ ವಿಮಾನಗಳನ್ನು ಎಮರ್ಜೆನ್ಸಿ ಲ್ಯಾಂಡಿಗ್ ಮಾಡಬಹುದು. ಮಿಲಿಟರಿ ಯುದ್ಧ ವಿಮಾನಗಳನ್ನು ತುರ್ತು ಭೂಸ್ಪರ್ಶ ಮಾಡುವ ಸಾಮರ್ಥ್ಯ ಈ ಹೆದ್ಧಾರಿಗಿದ್ದು, ಬೃಹತ್ ತೂಕದ ಫೈಟರ್ ಜೆಟ್, ಏರ್ಕ್ರ್ಯಾಫ್ಟ್ಗಳನ್ನ ಲ್ಯಾಂಡ್ ಮಾಡಲಾಗುತ್ತದೆ.
ಭಾರತದಲ್ಲಿ ಜಮ್‌ಶೆಡ್‌ಪುರ-ಬಾಲಾಸೋರ್ ಹೆದ್ದಾರಿ, ಛತ್ರಪುರ-ದಿಘಾ ಹೆದ್ದಾರಿ, ಕಿಶನ್‌ಘಂಜ್-ಇಸ್ಲಾಮ್‌ಪುರ ಹೆದ್ದಾರಿ, ದೆಹಲಿ-ಮೊರಾದಾಬಾದ್ ಹೆದ್ದಾರಿ, ದೆಹಲಿ-ಉತ್ತರಪ್ರದೇಶ ಹೆದ್ದಾರಿ, ಬಿಜ್ಬೆಹಾರ್-ಚೀನಾರ್ ಬಾಗ್ ಹೆದ್ದಾರಿಗಳಲ್ಲಿ ಲ್ಯಾಂಡಿಂಗ್ ವ್ಯವಸ್ಥೆ ಮಾಡಲಾಗಿದೆ. ಇದರ ಜೊತೆಗೆ ರಾಂಪುರ – ಕತ್ಗೋಡಮ್ ಹೆದ್ದಾರಿ, ಲಕ್ನೋ – ವಾರಾಣಾಸಿ ಹೆದ್ದಾರಿ, ದ್ವಾರಕ – ಮಲ್ಯ ಹೆದ್ದಾರಿ, ಖಾರಗ್ಪುರ್ – ಕಿಯೋಂಜಾರ್ ಹಾಗೂ ಮೋಹನ್ಬರಿ-ತಿನ್ಸುಕಿಯಾ ಹೆದ್ದಾರಿಗಳಲ್ಲಿ ತುರ್ತು ಭೂಸ್ಪರ್ಶ ಮಾಡಬಹುದಾಗಿದೆ.
ಒಟ್ಟಿನಲ್ಲಿ ಇಂದು ಭಾರತೀಯ ವಾಯುಪಡೆ ಹೈವೇಯಲ್ಲಿ ತುರ್ತು ಭೂಸ್ಪರ್ಶ ಮಾಡುವ ಮೂಲಕ ವಿಶ್ವದ ಗಮನ ಸೆಳೆದಿದೆ. ಭಾರತದ ರಕ್ಷಣಾ ವಲಯದಲ್ಲಿ ಈ ಸಾಧನೆ ಮಹತ್ವದ್ದಾಗಿದ್ದು, ಭಾರತದ ಭದ್ರತೆ ವಿಷಯದಲ್ಲಿ ಬಾರೀ ಸಹಾಯಕಾರಿಯಾಗಲಿದೆ. ಇನ್ನೂ ಈ ಯೋಜನೆಯಿಂದ ಭಾರತದ ರಕ್ಷಣಾ ಕ್ಷೇತ್ರಕ್ಕೆ ಆನೆ ಬಲ ಬಂದಂತಾಗಿದೆ.