“ಜವಾಬ್ದಾರಿಯುತ ಸ್ಥಾನದಲ್ಲಿರುವವರು ಏನು ಮಾತನಾಡಬೇಕೆಂದು ತಿಳಿದಿರಬೇಕು ಕೆಡಿಪಿ ಸಭೆಯಲ್ಲಿ ಜಿಲ್ಲಾಧಿಕಾರಿಗೆ ಧಮ್ಕಿ ಹಾಕಿದರೆ , ನಾವು ಯಾರು ಬಳೆ ತೊಟ್ಟು ಕುಳಿತುಕೊಂಡಿಲ್ಲ ಎಂದು ಸಂಸದ ಪ್ರತಾಪ್ ಸಿಂಹ ಹೇಳಿಕೆಗೆ ಶಾಸಕ ತನ್ವೀರ್ ಸೇಠ್ ತಿರುಗೇಟು ನೀಡಿದ್ದಾರೆ.
ಚುನಾಯಿತ ಜನ ಪ್ರತಿನಿಧಿಗಳು ಜನರ ರಕ್ಷಣೆಗೆ ನಿಲ್ಲಬೇಕೆ ಹೊರತು , ಪರಸ್ಪರ ಎತ್ತಿಕಟ್ಟುವುದಲ್ಲ ಕೋಮು ಭಾವನೆಗಳನ್ನು ಕೆರಳಿಸುವ ವಿಚಾರದಲ್ಲಿ ರಾಜಕೀಯ ಮಾಡಬಾರದು ಅನಧಿಕೃತ ಧಾರ್ಮಿಕ ಕಟ್ಟಡಗಳ ಪಟ್ಟಿಯನ್ನು ನಿನ್ನೆ ಮೊನ್ನೆ ತಯಾರಿಸಿ ಕೊಟ್ಟಿಲ್ಲ 2013ರಲ್ಲಿಯೇ ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು ಎಂದು ಪ್ರತಿಪಾದಿಸಿದ್ದಾರೆ.

ನೀವು ಒಂದು ಧರ್ಮವನ್ನೇ ಟಾರ್ಗೆಟ್ ಮಾಡಿಕೊಂಡು ದೇವಸ್ಥಾನಗಳನ್ನ ತೆರವು ಮಾಡುತ್ತಿದ್ದಿರಿ. ನೀವು ಇದುವರೆಗೂ ಎಷ್ಟು ಅನಧಿಕೃತ ದರ್ಗಾಗಳನ್ನ ತೆರವು ಮಾಡಿದ್ದೀರಿ ಆದರೆ ಅನಧಿಕೃತ ದರ್ಗಾವನ್ನು ಒಡೆಯಲು ನಿಮಗೆ ಏಕೆ ಭಯ ಎಂದು ನಿನ್ನೆ ನಡೆದ ಮೈಸೂರು ಜಿಲ್ಲಾ ಕೆಡಿಪಿ ಸಭೆಯಲ್ಲಿ ಪ್ರತಾಪ್ ಸಿಂಹ ಜಿಲ್ಲಾಡಳಿತವನ್ನ ಪ್ರಶ್ನಿಸಿದ್ದರು.
ಹಿಂದೂ ದೇವಸ್ಥಾನಗಳನ್ನ ಮುಟ್ಟುವ ಮೊದಲು ಅನಧಿಕೃತ ದರ್ಗಾ ತೆರವು ಮಾಡಿ ಎಂದು ಜಿಲ್ಲಾಡಳಿತಕ್ಕೆ ಸವಾಲೆಸೆದಿದ್ದ ಅವರು, ನಿಮ್ಮ ಕೈಲಿ ಆಗದಿದ್ದರೆ ಹೇಳಿ ನಾವೇ ಬೀದಿಗೆ ಇಳಿಯುತ್ತೇವೆ. ನಮ್ಮ ಮೇಲೆ ಕೇಸ್ ಆದರೂ ಚಿಂತೆಯಿಲ್ಲ ಎಂದು ಜಿಲ್ಲಾಡಳತದ ವಿರುದ್ದ ಪ್ರತಾಪ್ ಸಿಂಹ ಹರಿಹಾಯ್ದಿದಿದ್ದ ಪ್ರತಾಪ ಸಿಂಹ ವಿರುದ್ಧ ವಿರೋಧ ಪಕ್ಷಗಳು ಕಿಡಿಕಾರಿವೆ .