ರಾಷ್ಟ್ರೀಯ

ಭಾರತದ ಜತೆ 600 ಕೋಟಿ ಮೊತ್ತದ ಹರ್ಪೂನ್ ಕ್ಷಿಪಣಿ ಒಪ್ಪಂದ; ಅಮೆರಿಕ ಅನುಮೋದನೆ

ಭಾರತಕ್ಕೆ ಕೋಟ್ಯಾಂತರ ವೆಚ್ಚದ ಹರ್ಪೂನ್ ಜಾಯಿಂಟ್ ಕಾಮನ್ ಟೆಸ್ಟ್ ಸೆಟ್ (ಜೆಸಿಟಿಎಸ್) ಮತ್ತು ಸಂಬಂಧಿತ ಉಪಕರಣಗಳನ್ನು ಮಾರಾಟ ಮಾಡಲು ಅಮೆರಿಕಾ ಅನುಮೋದನೆ ನೀಡಿದೆ. ಈ ಮೂಲಕ ಭಾರತದೊಂದಿಗೆ ಅಮೆರಿಕಾ ಅಧ್ಯಕ್ಷ ಜೋ ಬೈಡನ್...

OBC ಮೀಸಲಾತಿ: ಸರ್ಕಾರಿ ವಿಶ್ವವಿದ್ಯಾಲಯಗಳಲ್ಲಿ  55% ಮೀಸಲಾತಿ ಹುದ್ದೆಗಳು ಖಾಲಿ!

ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ವೈದ್ಯಕೀಯ ಸೀಟುಗಳಿಗಾಗಿ ಇತರ ಹಿಂದುಳಿದ ವರ್ಗಗಳಿಗೆ (ಒಬಿಸಿ) ಮೀಸಲಾತಿ ವಿಸ್ತರಿಸುವ ನಿರ್ಧಾರವನ್ನು ಭಾರತ ಸರ್ಕಾರ ಘೋಷಿಸಿದ ಕೆಲವೇ ದಿನಗಳ ನಂತರ‌ ಮಾಹಿತಿಯೊಂದು ಬಹಿರಂಗವಾಗಿದ್ದು ದೇಶದ ಶಿಕ್ಷಣ ಸಂಸ್ಥೆಗಳಲ್ಲಿ ಒಬಿಸಿ...

ಪೆಗಸಸ್ ಬೇಹುಗಾರಿಕೆ ಪಟ್ಟಿಯಲ್ಲಿರುವ ಐವರು ಪತ್ರಕರ್ತರಿಂದ ಸುಪ್ರೀಂ ಕೋರ್ಟ್ ಗೆ ಅರ್ಜಿ : ತನಿಖೆಗೆ ಆದೇಶಿಸುವಂತೆ ಮನವಿ!

ದಿ‌ ಕ್ವಿಂಟ್ ವರದಿ ಮಾಡಿರುವ ಪ್ರಕಾರ ಪೆಗಸಸ್ ಬೇಹುಗಾರಿಕೆಗೆ ಗುರಿಯಾಗಿದ್ದ ಐವರು ಪತ್ರಕರ್ತರು ಸುಪ್ರೀಂಕೋರ್ಟ್‌ ಮೊರೆ ಹೋಗಿದ್ದಾರೆ. ಸರ್ಕಾರಿ ಸಂಸ್ಥೆಗಳು ಅನಧಿಕೃತವಾಗಿ ಗೂಢಚರ್ಯೆ ನಡೆಸುವುದು ಸಂವಿಧಾನ ಬದ್ಧವಾಗಿ ನೀಡಲಾದ ತಮ್ಮ ಮೂಲಭೂತ ಹಕ್ಕುಗಳ...

NEET ಮೀಸಲಾತಿ: ಇದು ಬಿಜೆಪಿಯ ರಾಜಕೀಯ ಷಡ್ಯಂತ್ರವೋ? ಸಾಮಾಜಿಕ ನ್ಯಾಯದ ಬದ್ಧತೆಯೊ?

ದೇಶದಲ್ಲಿ ಜಾತಿವ್ಯವಸ್ಥೆ ಎಂಬುವುದು ಆಳವಾಗಿ ಬೇರೂರಿರುವ ಪಿಡುಗು. ಇತರೆ ಎಲ್ಲಾ ಧರ್ಮಗಳಿಗಿಂತಲೂ ಹಿಂದೂ ಧರ್ಮಗಳಲ್ಲಿ ಹುಟ್ಟುವ ಪ್ರತಿಯೋಬ್ಬರು ಕೂಡ ಸಾಯುವವರೆಗೂ ಈ ಜಾತಿವ್ಯವಸ್ಥೆಯಲ್ಲೇ ಬದುಕು ಕಟ್ಟಿಕೊಳ್ಳಬೇಕು. ದೇಶ ಹಲವು ಸಾಮಾಜಿಕ ಸುದಾರಣೆಗಳಿಗೆ, ಆಧುನಿಕತೆಗೆ...

ದೇಶದ 24 ವಿಶ್ವವಿದ್ಯಾಲಯಗಳು ನಕಲಿ!

ದೇಶದ 24 ವಿಶ್ವವಿದ್ಯಾಲಯಗಳು ನಕಲಿ ಎಂದು University Grants Commission (UGC) ಘೋಷಿಸಿದೆ. ಇದರೊಂದಿಗೆ ಎರಡು ಇತರ ವಿಶ್ವವಿದ್ಯಾಲಯಗಳು ಯುಜಿಸಿಯ ನಿಮಯಗಳನ್ನು ಮೀರಿ ಕಾರ್ಯಚರಿಸುತ್ತಿವೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ತಿಳಿಸಿದ್ದಾರೆ.  ಲೋಕಸಭೆಯಲ್ಲಿ ಲಿಖಿತ ಪ್ರಶ್ನೆಗೆ ಉತ್ತರಿಸಿರುವ ಧರ್ಮೇಂದ್ರ ಪ್ರಧಾನ್ ಅವರು, ವಿದ್ಯಾರ್ಥಿಗಳು, ಪೋಷಕರು, ಸಾರ್ವಜನಿಕರು ಹಾಗೂ ಮಾಧ್ಯಮಗಳ ಮೂಲಕ ಬಂದಿರುವ ದೂರುಗಳನ್ನು ಯುಜಿಸಿ ಪರಿಗಣಿಸಿತ್ತು. ಆ ನಂತರ 24 ವಿವಿಗಳನ್ನು ನಕಲಿ ಎಂದು ಘೋಷಿಸಿದೆ, ಎಂದಿದ್ದಾರೆ.  “ಇನ್ನೆರಡು ವಿಶ್ವವಿದ್ಯಾಲಯಗಳು, ಉತ್ತರ ಪ್ರದೇಶದ ಲಕ್ನೋದಲ್ಲಿ ಇರುವಂತಹ ಭಾರತೀಯ ಶಿಕ್ಷಾ ಪರಿಷದ್ ಹಾಗೂ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಪ್ಲಾನಿಂಗ್ ಆ್ಯಂಡ್ ಮ್ಯಾನೇಜ್ಮೆಂಟ್, ನವದೆಹಲಿ 1956ರ ಯುಜಿಸಿ ಕಾಯ್ದೆಗೆ ವಿರುದ್ದವಾಗಿ ಕಾರ್ಯಾಚರಿಸುತ್ತಿರುವುದು ಕಂಡು ಬಂದಿದೆ. ಇವೆರಡೂ ವಿವಿಗಳ ಪ್ರಕರಣ ಪ್ರಸ್ತುತ ನ್ಯಾಯಾಲಯದಲ್ಲಿ ವಿಚಾರಣೆಯ ಹಂತದಲ್ಲಿದೆ,” ಎಂದು ಹೇಳಿದ್ದಾರೆ.  ನಕಲಿ ವಿವಿಗಳ ಪಟ್ಟಿಯಲ್ಲಿ ಉತ್ತರ ಪ್ರದೇಶ ಮೊದಲ ಸ್ಥಾನದಲ್ಲಿದೆ. ವಾರಣಾಸೇಯ ಸಂಸ್ಕೃತ ವಿವಿ, ವಾರಣಾಸಿ; ಮಹಿಳಾ ಗ್ರಾಮ್ ವಿದ್ಯಾಪೀಠ್, ಅಲಹಾಬಾದ್; ಗಾಂಧಿ ಹಿಂದಿ ವಿದ್ಯಾಪೀಠ್, ಅಲಹಾಬಾದ್; ನ್ಯಾಷನಲ್ ಯೂನಿವರ್ಸಿಟಿ ಆಫ್ ಎಲೆಕ್ಟ್ರೋ ಕಾಂಪ್ಲೆಕ್ಸ್ ಹೋಮಿಯೋಪಥಿ, ಕಾನ್ಪುರ್; ನೀತಾಜಿ ಸುಭಾಷ್ ಚಂದ್ರ ಬೋಸ್ ಮುಕ್ತ ವಿವಿ, ಆಲಿಗಢ್; ಉತ್ತರಪ್ರದೇಶ ವಿವಿ, ಮಥುರಾ; ಮಹಾರಾಣಾ ಪ್ರತಾಪ್ ಶಿಕ್ಷಾ ನಿಕೇತನ್ ವಿವಿ, ಪ್ರತಾಪಗಢ ಮತ್ತು ಇಂದ್ರಪ್ರಸ್ಥ ಶಿಕ್ಷಾ ಪರಿಷದ್, ನೋಯ್ಡಾ ಇವು ಉತ್ತರ ಪ್ರದೇಶದಲ್ಲಿ ಸಕ್ರಿಯವಾಗಿದ್ದಂತಹ ಎಂಟು ನಕಲಿ ವಿವಿಗಳು.  ದೆಹಲಿಯಲ್ಲಿ ಏಳು ನಕಲಿ ವಿವಿಗಳು ಪತ್ತೆಯಾಗಿವೆ. ಕಮರ್ಷಿಯಲ್ ಯೂನಿವರ್ಸಿಟಿ ಲಿಮಿಟೆಡ್, ಯುನೈಟೆಡ್ ನೇಚನ್ಸ್ ಯೂನಿವರ್ಸಿಟಿ, ವೊಕೇಷನಲ್ ಯೂನಿವರ್ಸಿಟಿ, ಎಡಿಆರ್ ಸೆಂಟ್ರಿಕ್ ಜ್ಯೂರಿಡೀಷಿಯಲ್ ಯೂನಿವರ್ಸಿಟಿ, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಆ್ಯಂಡ್ ಇಂಜಿನಿಯರಿಂಗ್, ವಿಶ್ವಕರ್ಮ ಮುಕ್ತ ವಿವಿ ಮತ್ತು ಆಧ್ಯಾತ್ಮಿಕ ವಿವಿ ಎಂಬ ವಿವಿಗಳು ನಕಲಿಯಾಗಿವೆ.  ಒಡಿಶಾ ಹಾಗೂ ಪಶ್ಚಿಮ ಬಂಗಾಳದಲ್ಲಿ ತಲಾ ಎರಡು ನಕಲಿ ವಿವಿಗಳು ಪತ್ತೆಯಾಗಿವೆ. ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಅಲ್ಟರ್ನೇಟಿವ್ ಮೆಡಿಸಿನ್, ಕೊಲ್ಕತ್ತಾ ಹಾಗೂ ಅಲ್ಟರ್ನೇಟಿವ್ ಮೆಡಿಸಿನ್ ಆ್ಯಂಡ್ ರೀಸರ್ಚ್, ಕೊಲ್ಕತ್ತಾ ಇವು ಪಶ್ಚಿಮ ಬಂಗಾಳದಲ್ಲಿ ಇರುವ ನಕಲಿ ವಿವಿಗಳು. ಇನ್ನು ಒಡಿಶಾದಲ್ಲಿ ನಬಭಾರತ್ ಶಿಕ್ಷಾ ಪರಿಷದ್, ರೌರ್ಕೇಲಾ ಹಾಗೂ ನಾರ್ತ್ ಒರಿಸ್ಸಾ ಯೂನಿವರ್ಸಿಟಿ ಆಫ್ ಅಗ್ರಿಕಲ್ಚರ್ ಆ್ಯಂಡ್ ಟೆಕ್ನಾಲಜಿ ಎಂಬ ಎರಡು ನಕಲಿ ವಿವಿಗಳು ಕಾರ್ಯಾಚರಿಸುತ್ತಿವೆ.  ಉಳಿದಂತೆ, ಕರ್ನಾಟಕ, ಕೇರಳ, ಮಹಾರಾಷ್ಟ್ರ, ಪುದುಚೆರಿಯಲ್ಲಿ ಹಾಗೂ ಆಂಧ್ರಪ್ರದೇಶದಲ್ಲಿ ತಲಾ ಒಂದು ನಕಲಿ ವಿವಿಗಳಿವೆ. ಬೋಧಿ ಅಕಾಡೆಮಿ ಆಫ್ ಹೈಯರ್ ಎಜುಕೇಷನ್, ಪುದುಚೆರಿ; ಕ್ರೈಸ್ಟ್ ನ್ಯೂ ಟೆಸ್ಟಮೆಂಟ್ ಡೀಮ್ಡ್ ಯೂನಿವರ್ಸಿಟಿ, ಆಂಧ್ರ ಪ್ರದೇಶ; ರಾಜಾ ಅರೇಬಿಕ್ ಯೂನಿವರ್ಸಿಟಿ, ನಾಗ್ಪುರ್; ಸೈಂಟ್ ಜಾನ್ಸ್ ಯೂನಿವರ್ಸಿಟಿ, ಕೇರಳ ಹಾಗೂ ಬಡಗಾನ್ವಿ ಸರ್ಕಾರ್ ವಿಶ್ವ ಮುಕ್ತ ವಿವಿ, ಕರ್ನಾಟಕದಲ್ಲಿರುವ ನಕಲಿ ವಿವಿಗಳು.  ಈ ನಕಲಿ ವಿವಿಗಳ ಕುರಿತಾಗಿ ಜನರಿಗೆ ಜಾಗೃತಿ ಮೂಡಿಸುವ ಕಾರಣಕ್ಕೆ ಪತ್ರಿಕೆಗಳಲ್ಲಿ ಯುಜಿಸಿ ಪರವಾಗಿ ಜಾಹಿರಾತು ನೀಡಲಾಗುವುದು. ಇಷ್ಟು ಮಾತ್ರವಲ್ಲದೇ, ಆಯಾ ರಾಜ್ಯಗಳ ರಾಜ್ಯ ಮುಖ್ಯ ಕಾರ್ಯದರ್ಶಿ, ಶಿಕ್ಷಣ ಕಾರ್ಯದರ್ಶಿಗಳಿಗೆ ಮತ್ತು ಇಲಾಖೆಗಳ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದು ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಲಾಗುವುದು ಎಂದು ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ. 

ಕರೋನಾ ಸೋಂಕು: ಡೆಲ್ಟಾ ಪ್ಲಸ್ ರೂಪಾಂತರಿ ವಿರುದ್ದ ‘ಕೊವ್ಯಾಕ್ಸಿನ್’ ಪರಿಣಾಮಕಾರಿ- ಅಧ್ಯಯನ ವರದಿ

ಭಾರತ್ ಬಯೋಟೆಕ್ ಅಭಿವೃದ್ದಿಪಡಿಸಿದ ‘ಕೊವ್ಯಾಕ್ಸಿನ್’ ಲಸಿಕೆ ಕರೋನಾ ಡೆಲ್ಟಾ ಪ್ಲಸ್ ರೂಪಾಂತರಿ ವಿರುದ್ದ ಪರಿಣಾಮಕಾರಿಯಾಗಿ ಕೆಲಸ ಮಾಡಬಲ್ಲದು ಎಂದು ICMR ಅಧ್ಯಯನ ವರದಿ ತಿಳಿಸಿದೆ. ಭಾರತದಲ್ಲಿ ಎರಡನೇ ಅಲೆಗೆ ಪ್ರಮುಖ ಕಾರಣವಾಗಿದ್ದ ಈ ರೂಪಾಂತರಿ, ಅತೀ ಶೀಘ್ರದಲ್ಲಿ ಹರಡುತ್ತದೆ. ಇದರಿಂದಾಗಿ, ಸೋಂಕಿತರ ಸಂಖ್ಯೆಯಲ್ಲಿ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿತ್ತು.  “BBV152 ಲಸಿಕೆಯ ಎರಡೂ ಡೋಸ್ ಪಡೆದವರಲ್ಲಿ, IgG ರೋಗನಿರೋಧಕ ಶಕ್ತಿ ಉತ್ಪಾದನೆಯಾಗಿರುವುದು  ಅಧ್ಯಯನದಲ್ಲಿ ಕಂಡು ಬಂದಿದೆ. ಈ ಲಸಿಕೆಯು ಕರೋನಾ ರೂಪಾಂತರಿಯಾದ ಡೆಲ್ಟಾ, ಡೆಲ್ಟಾ AY.1 ಮತ್ತು B.1.617.3. ವಿರುದ್ದ ರೋಗನಿರೋಧಕ ಶಕ್ತಿಯನ್ನು ಅಭಿವೃದ್ದಿಪಡಿಸಿಕೊಂಡಿರುವುದು ಕಂಡು ಬಂದಿದೆ,” ಎಂದು ವರದಿ ಹೇಳಿದೆ.  ಮೂರನೇ ಹಂತದ ಕ್ಲಿನಿಕಲ್ ಟ್ರಯಲ್’ನಲ್ಲಿ ಡೆಲ್ಟಾ ರೂಪಾಂತರಿಯ ವಿರುದ್ದ 65.2 ಶೇಕಡದಷ್ಟು ಕೊವ್ಯಾಕ್ಸಿನ್ ಪರಿಣಾಮಕಾರಿಯಾಗಿದೆ ಎಂದು ಕಂಡುಬಂದಿದೆ. ಈಗಾಗಲೇ ಈ ಲಸಿಕೆಯು ಭಾರತದಲ್ಲಿ ಅತೀ ಹೆಚ್ಚು ಪ್ರಮಾಣದಲ್ಲಿ ನೀಡಲಾಗುತ್ತಿರುವ ಲಸಿಕೆಗಳಲ್ಲಿ ಒಂದಾಗಿದೆ.  ಆತಂಕದ ವಿಚಾರವೇನೆಂದರೆ, ಈಗಾಗಲೇ ಡೆಲ್ಟಾ ರೂಪಾಂತರಿಯ ಹಲವು ಮಾದರಿಗಳು ಭಾರತದಲ್ಲಿ ಪತ್ತೆಯಾಗಿವೆ.ಪ್ರಮುಖವಾಗಿ AY.1, AY.2, ಮತ್ತು AY.3 ಮಾದರಿಯ ಡೆಲ್ಟಾ ರೂಪಾಂತರಿ ಸೋಂಕು, ಮೂರನೇ ಅಲೆಯ ವೇಳೆ  ಹೆಚ್ಚಾಗಿ ಪತ್ತೆಯಾಗುವ ಸಾಧ್ಯತೆಯಿದೆ ಎಂದು ತಜ್ಞರ ಅಭಿಪ್ರಾಯವಾಗಿದೆ.  ಇವುಗಳಲ್ಲಿ AY.1 ಮಾದರಿಯ ಡೆಲ್ಟಾ ರೂಪಾಂತರಿ ಏಪ್ರಿಲ್ 2021ರಲ್ಲಿ ಭಾರತದಲ್ಲಿ ಮೊದಲ ಬಾರಿಗೆ ಪತ್ತೆಯಾಗಿತ್ತು. ಆ ನಂತರ ಇತರ 20 ರಾಷ್ಟ್ರಗಳಲ್ಲಿಯೂ ಪತ್ತೆಯಾಗಿತ್ತು.  ಮೂರನೇ ಹಂತದ ಕ್ಲಿನಿಕಲ್ ಟ್ರಯಲ್ ಮುಗಿಯುವ ಹೊತ್ತಿಗೆ, ಸಾಮಾನ್ಯ COVID19 ವಿರುದ್ದ ಕೊವ್ಯಾಕ್ಸಿನ್ 77.8 ಶೇಕಡಾ ಪರಿಣಾಮಕಾರಿ ಹಾಗೂ ಡೆಲ್ಟಾ ಮಾದರಿಯ ವಿರುದ್ದ 65.2 ಶೆಕಡಾದಷ್ಟು ಪರಿಣಾಮಕಾರಿ ಎಂದು ಭಾರತ್ ಬಯೋಟೆಕ್ ತನ್ನ ವರದಿಯಲ್ಲಿ ಹೇಳಿತ್ತು. 

RSS ನಾಯಕರಿಗಲ್ಲದೇ ನಾಲ್ವರು ವಲಸಿಗರಿಗೆ ಬಿಜೆಪಿ ಹೈಕಮಾಂಡ್ ಸಿಎಂ ಸ್ಥಾನ ನೀಡಿದ್ಯಾಕೇ?

ಬಿಜೆಪಿ ಯಾವುದೇ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೂ ತನ್ನ ಮಾತೃ ಸಂಘಟನೆಯಾದ ರಾಷ್ಟ್ರೀಯ ಸ್ವಯಂ ಸೇವ ಸಂಘದ ನಾಯರಿಗಷ್ಟೇ ಮುಖ್ಯಮಂತ್ರಿ ಸ್ಥಾನ ನೀಡುತ್ತಿದ್ದರು ಎಂಬುದು ವಾಸ್ತವ. ಆದರೀಗ, ಇತ್ತೀಚೆಗ್ಯಾಕೋ ಮುಂದೆ ಎದುರಾಗಲಿರುವ ಚುನಾವಣೆ ಮತ್ತು...

170 ದೇಶಗಳಲ್ಲಿ ಶಾಲೆ ತೆರೆದಿರುವಾಗ ನಿಮ್ಮ ರಾಜ್ಯಗಳಲ್ಲಿ ಏಕಿಲ್ಲ?: ರಾಜ್ಯ ಸರ್ಕಾರಗಳನ್ನು ಪ್ರಶ್ನಿಸಿದ ತಜ್ಞರು

50 ಕ್ಕೂ ಹೆಚ್ಚು ಐಐಟಿಯನ್ನರು, ವೈದ್ಯರು, ವಿಜ್ಞಾನಿಗಳು ಮತ್ತು ಪೋಷಕರು ದೆಹಲಿ, ಮಹಾರಾಷ್ಟ್ರ ಮತ್ತು ಕರ್ನಾಟಕದ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ತಮ್ಮ ತಮ್ಮ ರಾಜ್ಯಗಳಲ್ಲಿ ಶಿಕ್ಷಣ ಸಂಸ್ಥೆಗಳನ್ನು ಪುನಃ ತೆರೆಯಲು ತುರ್ತಾಗಿ ಕಾರ್ಯಪಡೆ...

ಟೋಕಿಯೋ ಒಲಿಂಪಿಕ್ಸ್: ಇತಿಹಾಸ ನಿರ್ಮಿಸಿದ ಭಾರತೀಯ ಮಹಿಳಾ ಹಾಕಿ ತಂಡ

ಭಾರತೀಯ ಮಹಿಳಾ ಹಾಕಿ ತಂಡವು ಮೂರಿ ಬಾರಿ ಒಲಿಂಪಿಕ್ಸ್ ಚಾಂಪಿಯನ್ಸ್ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ರೋಚಕವಾಗಿ ಮಣಿಸುವ ಮೂಲಕ ಟೋಕಿಯೋ ಒಲಿಂಪಿಕ್ಸ್ನಲ್ಲಿ ಸೆಮಿಫೈನಲ್ಗೆ ಲಗ್ಗೆಯಿಟ್ಟಿದೆ. ಈ ಮೂಲಕ ಒಲಿಂಪಿಕ್ಸ್ ಇತಿಹಾಸದಲ್ಲಿ ಮೊದಲ ಬಾರಿಗೆ...

ಸೂತ್ರಧಾರಿ ಕೇಂದ್ರವೂ ಪಾತ್ರಧಾರಿ ನಾಯಕರೂ

ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷ ಅಧಿಕಾರದಲ್ಲಿದ್ದರೆ ರಾಜ್ಯದ ಅಭಿವೃದ್ಧಿಯ ಮಾರ್ಗಗಳು ಸುಗಮವಾಗುತ್ತವೆ ಎನ್ನುವುದೊಂದು ನಂಬಿಕೆ. ಇದಕ್ಕೆ ಪೂರಕವಾಗಿ ಬೆಳೆದುಬಂದಿರುವ ಮತ್ತೊಂದು ನಂಬಿಕೆ ಎಂದರೆ ಕೇಂದ್ರದಲ್ಲಿ ಅನ್ಯ ಪಕ್ಷ ಅಧಿಕಾರದಲ್ಲಿದ್ದರೆ ರಾಜ್ಯ ಸರ್ಕಾರದ...
spot_img

Latest articles

Newsletter

[tdn_block_newsletter_subscribe description=”U3Vic2NyaWJlJTIwdG8lMjBzdGF5JTIwdXBkYXRlZC4=” input_placeholder=”Your email address” btn_text=”Subscribe” tds_newsletter2-image=”753″ tds_newsletter2-image_bg_color=”#c3ecff” tds_newsletter3-input_bar_display=”row” tds_newsletter4-image=”754″ tds_newsletter4-image_bg_color=”#fffbcf” tds_newsletter4-btn_bg_color=”#f3b700″ tds_newsletter4-check_accent=”#f3b700″ tds_newsletter5-tdicon=”tdc-font-fa tdc-font-fa-envelope-o” tds_newsletter5-btn_bg_color=”#000000″ tds_newsletter5-btn_bg_color_hover=”#4db2ec” tds_newsletter5-check_accent=”#000000″ tds_newsletter6-input_bar_display=”row” tds_newsletter6-btn_bg_color=”#da1414″ tds_newsletter6-check_accent=”#da1414″ tds_newsletter7-image=”755″ tds_newsletter7-btn_bg_color=”#1c69ad” tds_newsletter7-check_accent=”#1c69ad” tds_newsletter7-f_title_font_size=”20″ tds_newsletter7-f_title_font_line_height=”28px” tds_newsletter8-input_bar_display=”row” tds_newsletter8-btn_bg_color=”#00649e” tds_newsletter8-btn_bg_color_hover=”#21709e” tds_newsletter8-check_accent=”#00649e” tdc_css=”eyJhbGwiOnsibWFyZ2luLWJvdHRvbSI6IjAiLCJkaXNwbGF5IjoiIn19″ embedded_form_code=”YWN0aW9uJTNEJTIybGlzdC1tYW5hZ2UuY29tJTJGc3Vic2NyaWJlJTIy” tds_newsletter1-f_descr_font_family=”521″ tds_newsletter1-f_input_font_family=”521″ tds_newsletter1-f_btn_font_family=”521″ tds_newsletter1-f_btn_font_transform=”uppercase” tds_newsletter1-f_btn_font_weight=”600″ tds_newsletter1-btn_bg_color=”#dd3333″ descr_space=”eyJhbGwiOiIxNSIsImxhbmRzY2FwZSI6IjExIn0=” tds_newsletter1-input_border_color=”rgba(0,0,0,0.3)” tds_newsletter1-input_border_color_active=”#727277″ tds_newsletter1-f_descr_font_size=”eyJsYW5kc2NhcGUiOiIxMiIsInBvcnRyYWl0IjoiMTIifQ==” tds_newsletter1-f_descr_font_line_height=”1.3″ tds_newsletter1-input_bar_display=”eyJwb3J0cmFpdCI6InJvdyJ9″ tds_newsletter1-input_text_color=”#000000″]
Please follow and like us: