ಇತ್ತಿಚಿನ ದಿನಗಳಲ್ಲಿ ಹೆಣ್ಣು ಮಕ್ಕಳಿಂದ ಹೆಚ್ಚಾಗಿ ಕೇಳ್ತಾ ಇರುವಂತ ಒಂದು ಕಂಪ್ಲೇಂಟ್ ಅಂದ್ರೆ ರೆಗ್ಯುಲರ್ ಆಗಿ ಪಿರಿಯಡ್ಸ್ ಆಗ್ತಾ ಇಲ್ಲ.. ಪ್ರತಿ ತಿಂಗಳು ಮುಟ್ಟು ಲೇಟ್ ಆಗಿ ಆಗುತ್ತದೆ ಇಲ್ಲವಾದ್ರೆ ಬೇಗನೆ ಆಗುತ್ತದೆ.. ಇದಕ್ಕೆ ಕಾರಣಗಳು ಹಲವಾರಿವೆ.ನಮ್ಮ ಲೈಫ್ ಸ್ಟೈಲ್, ಒತ್ತಡ, ಹಾರ್ಮೋನಲ್ ಇಂಬ್ಯಾಲೆನ್ಸ್, ಕೆಲವು ಹೆಣ್ಣು ಮಕ್ಕಳು ಗರ್ಭ ನಿರೋದಕ ಮಾತ್ರೆಗಳನ್ನ ತಗೊಳ್ತಾರೆ, ಇದೆಲ್ಲದರ ಜೊತೆಗೆ ಮತ್ತೊಂದು ಪ್ರಮುಖ ಕಾರಣ ಅಂದ್ರೆ ಆಹಾರ ಪದ್ಧತಿ,ಕಲವರು ಊಟ ತಿಂಡಿಯ ಬಗ್ಗೆ ಕಾಳಜಿ ಇರುವುದಿಲ್ಲಾ ಸರಿಯಾದ ಸಮಯಕ್ಕೆ ಆಹಾರ ಸೇವಿಸದೆ ಇರುವುದು.. ಇನ್ನೂ ಕೆಲವರು ಸಿಕ್ಕಿದ್ದೆಲ್ಲಾ ತಿನ್ನುವುದು..ಥೈರಾಯ್ಡ್ ಸಮಸ್ಯೆ ಇಂದಾಗು ಕೂಡ ಮುಟ್ಟು ಸರಿಯಾಗಿ ಆಗದೆ ಇರುವುದಕ್ಕೆ ಮುಖ್ಯ ರೀಸನ್ಗಳು

ಆದ್ರೆ ವೈದ್ಯರು ಹೇಳುವ ಪ್ರಕಾರ ೨೩ ರಿಂದ ೨೮ ದಿನಗಳ ಒಳಗೆ ಪ್ರತಿ ತಿಂಗಳು ಮುಟ್ಟು ಆಗ್ಬೇಕು . ಇಲ್ಲವಾದ್ರೆ ಇದರಿಂದ ಇತರೆ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ..ಮುಖ್ಯವಾಗಿ ಪ್ರೆಗ್ನೆನ್ಸಿ ತೊಂದರೆ ಇರುತ್ತದೆ.. ಇರ್ರೆಗುಲರ್ ಪಿರಿಯಡ್ಸ್ ಪ್ರಾಬ್ಲೆಮ್ ನಿವಾರಣೆ ಮಾಡಿಕೊಳ್ಳಲು ಪ್ರತಿದಿನ ತಪ್ಪದೆ ಈ ರೂಟಿನ್ ಫಾಲೋ ಮಾಡಿ.

ಹೈಡ್ರೇಟೆಡ್ ಆಗಿರಿ
ದೇಹಕ್ಕೆ ಅಗತ್ಯವಿರುವಷ್ಟು ಅಂದ್ರೆ ದಿನಕ್ಕೆ ಎರಡರಿಂದ ಮೂರು ಲೀಟರ್ ಅಷ್ಟು ನೀರನ್ನ ಕುಡಿಯುವುದರಿಂದ ಸಾಕಷ್ಟು ಆರೋಗ್ಯ ಸಮಸ್ಯೆಗಳು ನಿವಾರಣೆಯಾಗುತ್ತದೆ .ಅದರಲ್ಲಿ ಮುಟ್ಟಿನ ಸಮಸ್ಯೆಯೂ ಕೂಡ ಒಂದು.ಹಾರ್ಮೋನುಗಳು ಮತ್ತು ರಕ್ತದ ಹರಿವನ್ನು ನಿಯಂತ್ರಿಸಲು ಸಹಾಯ ಮಾಡಲು ಸಾಕಷ್ಟು ನೀರು ಕುಡಿಯಿರಿ. ಹಾಗಂತ ಬರಿ ಪಿರೇಡ್ಸ್ ಆದ ಸಂದರ್ಭದಲ್ಲಿ ಮಾತ್ರ ಹೆಚ್ಚು ನೀರನ್ನು ಕುಡಿಯುವುದಲ್ಲ , ಪ್ರತಿದಿನವೂ ಈ ರೂಟಿನ್ ಫಾಲೋ ಮಾಡೋದು ಉತ್ತಮ.

ಎಕ್ಸರ್ಸೈಜ್
ರೆಗ್ಯುಲರ್ ಆಗಿ ಪಿರೇಡ್ಸ್ ಆಗ್ಬೇಕು ಅಂದ್ರೆ ಎಕ್ಸರ್ಸೈಜ್ ಕೂಡ ತುಂಬಾನೇ ಇಂಪಾರ್ಟೆಂಟ್. ಹಾರ್ಮೋನ್ ಗಳನ್ನ ಬ್ಯಾಲೆನ್ಸ್ ಮಾಡಲು ಮತ್ತು ಸ್ಟ್ರೆಸ್ ಅನ್ನ ಕಡಿಮೆ ಮಾಡಲು ವ್ಯಾಯಾಮ ಅತ್ಯಗತ್ಯ.

ಮ್ಯಾನೆಜ್ ವೈಟ್
ಅತಿಯಾಗಿ ದಪ್ಪವಿದ್ದರೆ ಅಥವಾ ತುಂಬಾನೇ ತಳ್ಳಗಿದ್ದರು ಕೂಡ ಪಿರೇಡ್ಸ್ ತೊಂದರೆ ಕಾಣುವುದು ಸಾಮಾನ್ಯ. ಹಾಗಾಗಿ ಹೆಣ್ಣು ಮಕ್ಕಳು ವೆಯಿಟ್ ಮ್ಯಾನೇಜ ಮಾಡಬೇಕು. ಹಾಗಾಗಿ ಹೆಣ್ಣು ಮಕ್ಕಳು ವೆಯಿಟ್ ಮ್ಯಾನೇಜ ಮಾಡಬೇಕು. ಇದರಿಂದಾಗಿ ಪಿರಿಯಡ್ಸ್ ರೆಗುಲರ್ ಆಗಿ ಆಗುತ್ತದೆ.
ನಿದ್ದೆ
ಒಬ್ಬ ಮನುಷ್ಯನಿಗೆ ದಿನಕ್ಕೆ ಎಂಟು ಗಂಟೆಗಳ ಕಾಲ ನಿದ್ದೆ ಅಗತ್ಯ.ನಿದ್ದೆ ಸರಿಯಾಗಿ ಆಗದಿದ್ದರೂ ಕೂಡ ಸಾಕಷ್ಟು ಆರೋಗ್ಯ ಸಮಸ್ಯೆಗಳು ಎದುರಾಗುತ್ತದೆ .ಮುಖ್ಯವಾಗಿ ನಿದ್ದೆ ಸರಿಯಾಗಿ ಆಗದಿದ್ದರೆ ಹಾರ್ಮೋನ್ಸ್ ಅಲ್ಲಿ ಬದಲಾವಣೆಗಳು ಆಗುತ್ತದೆ. ಇದರಿಂದಾಗಿಯೂ ಮುಟ್ಟಿನ ತೊಂದರೆ ಬರುತ್ತದೆ.

ಕೆಫೆನ್
ಕೆಫಿನ್ ಅಂಶ ಅತಿಯಾಗಿರುವ ಪದಾರ್ಥಗಳನ್ನ ಅಥವಾ ಪಾನ್ಯಗಳನ್ನ ಕುಡಿಯುವುದನ್ನು ನಿಲ್ಲಿಸಬೇಕು. ಸಕ್ಕರೆ ಅಂಶ ಹೆಚ್ಚುವ ಪದಾರ್ಥಗಳನ್ನ ಕೂಡ ಲಿಮಿಟಲ್ಲಿ ಸೇವಿಸಬೇಕು ಹೀಗೆ ಮಾಡುವುದರಿಂದ ಹಾರ್ಮೋನುಗಳ ಅಡೆತಡೆಗಳನ್ನು ಕಡಿಮೆ ಮಾಡಲು ಈ ಪದಾರ್ಥಗಳನ್ನು ಮಿತಿಗೊಳಿಸಿ ಅಥವಾ ತಪ್ಪಿಸಿ.
ಆಹಾರ
ನೀವು ಸೇವಿಸುವ ಆಹಾರದ ಬಗ್ಗೆ ಹೆಚ್ಚು ಗಮನ ವಹಿಸಿ..ಅದರಲ್ಲೂ ಮುಟ್ಟಿನ ಆರೋಗ್ಯವನ್ನು ಬೆಂಬಲಿಸಲು ಒಮೆಗಾ-3, ವಿಟಮಿನ್ ಡಿ, ಅಥವಾ ಕಬ್ಬಿಣಾಂಶ ಹೆಚ್ಚಿರುವ ಪದಾರ್ಥಗಳನ್ನು ಸೇವಿಸಿ.






