ಭಾರತದ ಶ್ರೇಷ್ಠ ಓಟಗಾರ ಮಿಲ್ಖಾ ಸಿಂಗ್ ಇನ್ನಿಲ್ಲ

0
ಭಾರತದ ಶ್ರೇಷ್ಠ ಓಟಗಾರ ಮಿಲ್ಖಾ ಸಿಂಗ್ ಕೊರೊನಾ ಸೋಂಕಿನಿಂದ ಉಂಟಾದ ಹಲವಾರು ಸಮಸ್ಯೆಗಳಿಂದ ಕೊನೆಯುಸಿರೆಳೆದಿದ್ದಾರೆ. ಚಂಡೀಗಡದ ಪಿಜಿಐ ಆಸ್ಪತ್ರೆಯಲ್ಲಿ ತಮ್ಮ 91 ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಕಳೆದ ತಿಂಗಳು ಮಿಲ್ಖಾ ಸಿಂಗ್ ಅವರಿಗೆ...
Video thumbnail
ಲಸಿಕಾಕೇಂದ್ರಗಳಿಗೆ ಭೇಟಿ ನೀಡಿ ವ್ಯಾಕ್ಸಿನೇಷನ್ ಪ್ರಕ್ರಿಯೆಯನ್ನು ಪರಿಶೀಲಿಸಿದ KJ ಜಾರ್ಜ್ #Karnataka #Vaccination
00:51
Video thumbnail
1 ಕೋಟಿ ಕುಟುಂಬಗಳಿಗೆ ತಲಾ 10000 ರುಪಾಯಿ ನೀಡಿ; ಸರ್ಕಾರಕ್ಕೆ ಮಾಜಿ ಸಿಎಂ ಹೆಚ್‌ ಡಿ ಕುಮಾರಸ್ವಾಮಿ ಆಗ್ರಹ #Karnataka
05:27
Video thumbnail
ರಾಮನ ಹೆಸರು ಹೇಳಲೂ ಇವರಿಗೆ ಯೋಗ್ಯತೆ ಇಲ್ಲ, ಯಡಿಯೂರಪ್ಪ ನಂಬರ್‌ ಒನ್ ಬಕಾಸುರ: ವಿ ಎಸ್‌ ಉಗ್ರಪ್ಪ #VSUgrappa #BSY
04:07
Video thumbnail
ಶಿಸ್ತಿನ ಪಕ್ಷ ಎನ್ನುವ ಬಿಜೆಪಿ ರಾಜ್ಯದಲ್ಲಿ ಮೂರು ಬಣಗಳಾಗಿ ಒಡೆದಿದೆ - VS ಉಗ್ರಪ್ಪ #BJP #VSUgrappa #karnataka
02:03
Video thumbnail
ಹಿಂದೂ ಧರ್ಮವನ್ನು ಉಳಿಸುತ್ತೇವೆ ಎಂದವರು, ಇಂದು ದೇವರ ಹೆಸರಿನಲ್ಲಿ‌ ದುಡ್ಡು ಮಾಡ್ತಿದ್ದಾರೆ: H M ರೇವಣ್ಣ #Rammandir
05:01
Video thumbnail
ಪರಭಾಷಿಕರಿಗೆ ಕನ್ನಡ ಕಲಿಸುವುದು ಹೇಗೆ? ಸಂಚಾರಿ ವಿಜಯ್‌ ಹಂಚಿಕೊಂಡ ಅನುಭವ #VideoViral #SanchariVijay #Kannada
01:37
Video thumbnail
ಹೆಚ್ ವಿಶ್ವನಾಥ್ ಪಕ್ಷಕ್ಕೆ ಹೊಸಬರು, ಅವರಿಗೆ ಪಕ್ಷದ ತತ್ವ ಸಿದ್ದಾಂತ ಗೊತ್ತಿಲ್ಲ - Arun Singh #BJP #BSY
06:27
Video thumbnail
ನನ್ನ ಫೋನ್ ಅನ್ನು ಕದ್ದು ಆಲಿಸಲಾಗುತ್ತಿದೆ: ಅರವಿಂದ್‌ ಬೆಲ್ಲಡ್‌ ಗಂಭೀರ ಆರೋಪ #Karnataka #BJP #BSYediyurappa
01:10
Video thumbnail
ಯಡಿಯೂರಪ್ಪ ಅವರಿಗೆ ಸರ್ಕಾರ ನಡೆಸುವಷ್ಟು ತಾಕತ್ತು ಇಲ್ಲ ಈಗ - ಎ ಹೆಚ್‌ ವಿಶ್ವನಾಥ್‌ #AHVishwanatah #Karnataka
02:23
Video thumbnail
ಬೆಳೆ ವಿಮೆ ಕಂಪೆನಿಗಳಿಗೆ ಲಾಭವಾಗಬೇಕೆಂಬ ಉದ್ದೇಶದಿಂದ ಸರ್ಕಾರ ರೈತ ವಿರೋಧಿ ನೀತಿ ಅನುಸರಿಸುತ್ತಿದೆ -ಈಶ್ವರ್‌ ಖಂಡ್ರೆ
05:22

ರಾಜಕೀಯ

ರಾಜಕೀಯ ಎಂದರೆ ರಾಜಿ ಇಲ್ಲದ ನಿಷ್ಠಾವಂತ ಆಡಳಿತ, ಅಷ್ಟೇ ನಿಷ್ಠೆಯಿಂದ ರಾಜಿ ಇಲ್ಲದ ರಾಜಕೀಯ ವಿಶ್ಲೇಷಣೆಗಳು ಮತ್ತು ವರದಿಗಳು ಮಾಡುತ್ತಿದೆ ನಮ್ಮ ಪ್ರತಿಧ್ವನಿ ಮಾಧ್ಯಮ. ಸುದ್ದಿಯಾಚೆಗಿನ ಸತ್ಯ ನಮ್ಮಲ್ಲಿ ವರದಿಗಳಲ್ಲಿ ಕಾಣಬಹುದು

ಒಂದೇ ದಿನದಲ್ಲಿ ಎರಡು ವಿವಿಧ ಕೋವಿಡ್-19 ಲಸಿಕೆಗಳನ್ನು ಪಡೆದ ಬಿಹಾರದ ಮಹಿಳೆ

ಬಿಹಾರದ 63 ವರ್ಷದ ಮಹಿಳೆಗೆ ಒಂದೇ ದಿನದಲ್ಲಿ ಎರಡು ವಿಭಿನ್ನ ಕಂಪನಿಯ ಕರೋನ ಲಸಿಕೆ ನೀಡಲಾಗಿದೆ. ಅವರು ಈಗ ವೈದ್ಯರ ನಿಗದಲ್ಲಿದ್ದು ಆರೋಗ್ಯವಾಗಿದ್ದಾರೆ ಎನ್ನಲಾಗಿದೆ. ಬಿಹಾರದ ಮಹಿಳೆ ಸುನಿಲಾ ದೇವಿ ಎಂಬುವವರಿಗೆ ಜೂನ್...

ಹತ್ತು ದಿನಗಳ ಅಂತರದಲ್ಲಿ ಕೇರಳ ಬಿಜೆಪಿ ರಾಜ್ಯಾಧ್ಯಕ್ಷ ಸುರೇಂದ್ರನ್ ವಿರುದ್ದ 2ನೇ ಪ್ರಕರಣ ದಾಖಲು

ಇತ್ತೀಚಿಗಷ್ಟೇ ಭ್ರಷ್ಟಾಚಾರ ಆರೋಪದ ಮೇಲೆ ದೇಶದೆಲ್ಲೆಡೆ ಸುದ್ದಿಯಾಗಿದ್ದ ಕೇರಳ ಬಿಜೆಪಿ ರಾಜ್ಯಾಧ್ಯಕ್ಷ ಸುರೇಂದ್ರ ಅವರಿಗೆ ಮತ್ತೊಂದು ಕಂಟಕ ಎದುರಾಗಿದೆ. ಬಿಜೆಪಿ ಮೈತ್ರಿಕೂಟವನ್ನು ಸೇರಿ ಚುನಾವಣೆಗೆ ಸ್ಪರ್ಧಿಸುವಂತೆ ಬುಡಕಟ್ಟು ಜನಾಂಗದ ಮುಖಂಡರೊಬ್ಬರಿಗೆ ಲಂಚ...

ನಾಯಕತ್ವ ಬಗ್ಗೆ ಚಿಂತೆಯಿಲ್ಲ; ಪಕ್ಷದ ವರ್ಚಸ್ಸೇ ಮುಖ್ಯ – BJPಯಲ್ಲಿ ಮೂರನೆ ಬಣ!

ಕಳೆದ ಕೆಲವು ತಿಂಗಳಿನಿಂದ ರಾಜ್ಯ ರಾಜಕಾರಣದಲ್ಲಿ ಸದ್ದು ಮಾಡುತ್ತಿರುವ ಬಿಜೆಪಿ ನಾಯಕತ್ವ ಬದಲಾವಣೆಯ ಕುರಿತು ಇನ್ನೂ ಗೊಂದಲಗಳು ಮುಗಿದಿಲ್ಲ. ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌ ಅವರು ರಾಜ್ಯಕ್ಕೆ ಆಗಮಿಸಿ ಬಿಜೆಪಿ ಶಾಸಕರೊಡನೆ ಚರ್ಚೆ ನಡೆಸಿದ್ದರೂ, ತಾರ್ಕಿಕ ಅಂತ್ಯಕ್ಕೆ ಬರಲು ಅವರಿಂದಲೂ ಸಾಧ್ಯವಾಗಿಲ್ಲ. ಭಿನ್ನಮತೀಯ ಶಾಸಕರ ಅಸಮಾಧಾನವನ್ನು ತಣಿಸಲು ಕೂಡಾ ಅವರು ವಿಫಲವಾಗಿದ್ದಾರೆ. ಇದುವರೆಗೂ ರಾಜ್ಯ ಬಿಜೆಪಿಯಲ್ಲಿ ಯಡಿಯೂರಪ್ಪ ಪರ ಒಂದು ಬಣವಿದ್ದರೆ, ಯಡಿಯೂರಪ್ಪ ವಿರುದ್ಧ ಒಂದು ಬಣ ಇರುವುದು ಬಹಿರಂಗಗೊಂಡಿತ್ತು. ಆದರೆ, ಅರುಣ್‌ ಸಿಂಗ್‌ ಆಗಮನದ ಬಳಿಕ ರಾಜ್ಯ ಬಿಜೆಪಿಯಲ್ಲಿ ಇದೆರಡಕ್ಕೂ ಹೊರತಾಗಿ ಮೂರನೆಯ ಒಂದು ಬಣ ಇರುವುದು ಸ್ಪಷ್ಟವಾಗಿದೆ. ಜಿಂದಾಲ್‌ ಕಂಪೆನಿಗೆ ಭೂಮಿ ಕೊಡುವ ವಿಚಾರದಲ್ಲಿ ಪಕ್ಷದೊಳಗೆದ್ದ ಅಸಹನೆಯ ವೇಳೆ ಈ ಮೂರನೆಯ ಬಣ ಇರುವ ಕುರಿತು ಅಸ್ಪಷ್ಟ ಸೂಚನೆ ಲಭಿಸಿತ್ತಾದರೂ, ಅರುಣ್‌ ಸಿಂಗ್‌ ಭೇಟಿಯ ಬಳಿಕ ಈ ಬಣದ  ಮುಖಂಡರು ಯಾರು ಎನ್ನುವುದು ಇನ್ನೂ ನಿಚ್ಚಳವಾಗಿದೆ. ಸಂಘದ ಹಿನ್ನೆಲೆಯಿಂದಲೇ ಬಂದ ಶಾಸಕರ ಈ  ಬಣವು ಯಡಿಯೂರಪ್ಪ ಅಥವಾ ಯಡಿಯೂರಪ್ಪ ವಿರೋಧಿ ಪಾಳೆಯಕ್ಕೆ ನಿಷ್ಟೆಯಾಗಿರದೆ,  ಕೇವಲ ಪಕ್ಷಕ್ಕೆ ನಿಷ್ಟವಾಗಿದೆ ಹಾಗೂ ಆರ್‌ಎಸ್‌ಎಸ್‌ ಜೊತೆಗೆ ನಿಕಟವಾಗಿದೆ. ಕಳೆದ ಕೆಲವು ತಿಂಗಳುಗಳಿಂದ ನಾಯಕತ್ವ ಬದಲಾವಣೆ, ನಾಯಕತ್ವ ಉಳಿಸುವಿಕೆ ಪ್ರಹಸನದಲ್ಲಿ ಉಳಿದೆರಡು ಬಣಗಳು ಹಗ್ಗ ಜಗ್ಗಾಟದಲ್ಲಿ ತೊಡಗಿಕೊಂಡಿದ್ದ ನಡುವೆಯೇ, ಈ ಮೂರನೆಯ ಬಣವು ಜಿಂದಾಲ್‌ ಕಂಪೆನಿಗೆ ಭೂ ಪರೆಭಾರೆ ವಿಚಾರದಲ್ಲಿ ಸರ್ಕಾರದ ನಿರ್ಧಾರಕ್ಕೆ ಅಸಮ್ಮತಿ ವ್ಯಕ್ತಪಡಿಸಿದ್ದವು. ಕಾಂಗ್ರೆಸ್-ಜೆಡಿಎಸ್‌ ಮೈತ್ರಿ ಸರ್ಕಾರವು ಅಧಿಕಾರದಲ್ಲಿದ್ದ ವೇಳೆ ಬಿಜೆಪಿಯು ಜಿಂದಾಲ್‌ಗೆ ಜಮೀನು  ಕೊಡುವ ವಿಚಾರದಲ್ಲಿ ವಿರೋಧ ವ್ಯಕ್ತಪಡಿಸಿತ್ತು. ಯಡಿಯೂರಪ್ಪ ನೇತೃತ್ವದ ಬಿಜೆಪಿ ರಾಜ್ಯ ಸರ್ಕಾರ ರಚಿಸಿದ ಬೆನ್ನಲ್ಲೇ ಜಿಂದಾಲ್‌ಗೆ ಭೂಮಿ ಪರಭಾರೆ ಮಾಡಿಕೊಟ್ಟಿತ್ತು. ಇದನ್ನು ವಿರೋಧಿಸಿ ಪಕ್ಷಕ್ಕೆ ನಿಷ್ಟವಾಗಿರುವ ಈ ಶಾಸಕರು ಭೂಮಿ ಪರಭಾರೆ ವಿಚಾರದಲ್ಲಿ ಸರ್ಕಾರದ ಬದಲಾದ ನಿಲುವಿನ ಕುರಿತು ಅಚ್ಚರಿ ವ್ಯಕ್ತಪಡಿಸಿತ್ತು. ಈ ಬಣದ ಮುಂಚೂಣಿ ನಾಯಕರೆನಿಸಿಕೊಂಡಿರುವ ಸರ್ಕಾರದ ಮುಖ್ಯ ಸಚೇತಕ ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್  ಭೂಮಿ ಮಂಜೂರಾತಿ ಕುರಿತು ಬಹಿರಂಗವಾಗಿಯೇ ತಮ್ಮ ಅಸಮ್ಮತಿ ವ್ಯಕ್ತಪಡಿಸಿದ್ದರು.  ಭೂಮಿ ಮಂಜೂರಾತಿ ವಿರುದ್ಧ ಕೇಂದ್ರ ನಾಯಕತ್ವಕ್ಕೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದ ಅವರು, “ಈ ಹಿಂದೆ ನಾವು ವಿರೋಧಿಸಿದ್ದ ವಿಷಯದ ಬಗ್ಗೆ ಪಕ್ಷದ ನಿಲುವು ಹೇಗೆ ಬದಲಾಯಿತು ಎಂಬುದು ನನಗೆ ತಿಳಿದಿಲ್ಲ ಎಂದು ಹೇಳಿದ್ದರು. ಪಕ್ಷದ ವೇದಿಕೆಯಲ್ಲಿ ಅಥವಾ ಶಾಸಕಾಂಗದಲ್ಲಿ ಇದನ್ನು ಯಾರೂ ಬಗೆಹರಿಸಿಲ್ಲ. ಈ ಭೂಮಿಯನ್ನು ಮಾರಾಟ ಮಾಡಬಾರದೆಂಬ ಪಕ್ಷದ ಮೂಲ ಅಭಿಪ್ರಾಯದೊಂದಿಗೆ ನಾನು ನಿಲ್ಲುತ್ತೇನೆ. ಪಕ್ಷ ಹೇಗೆ ತನ್ನ ನಿಲುವಿನಿಂದ ಬದಲಾಯಿತು ಎಂದು ಗೊತ್ತಿಲ್ಲ ಎಂದು ಹೇಳುವ ಮೂಲಕ, ತನ್ನ ಸೈದ್ಧಾಂತಿಕ ಬದ್ಧತೆಯನ್ನು ಪ್ರಕಟಿಸಿದ್ದರು. ನಾಯಕತ್ವ ಕುರಿತು ಚಿಂತೆಯಿಲ್ಲ; ಪಕ್ಷದ ವರ್ಚಸ್ಸು ಅಷ್ಟೇ ಮುಖ್ಯ ಬಿಎಸ್‌ವೈ ಪರ ವಿರೋಧಿ ಬಣಗಳು ಮಾಡುತ್ತಿರುವ ರಾಜಕೀಯ ಹೈಡ್ರಾಮಗಳಿಂದ ಪಕ್ಷದ ವರ್ಚಸ್ಸು ರಾಜ್ಯದಲ್ಲಿ ಕುಗ್ಗುತ್ತಿದೆ ಎನ್ನುವುದು ಸಂಘ ನಿಷ್ಠ ಶಾಸಕರ ಆತಂಕ. ಯಡಿಯೂರಪ್ಪ ನಾಯಕರಾಗಿಯೇ ಮುಂದುವರಿಯಲಿ, ಅಥವಾ ನಾಯಕತ್ವ ಬೇರೆಯವರಿಗೆ ಹೋಗಲಿ, ಆದರೆ ಪಕ್ಷದ ವರ್ಚಸ್ಸಿಗೆ ಕುಂದುಂಟಾಗುವ ರೀತಿಯಲ್ಲಿ ಉಭಯ ಬಣದ ನಾಯಕರು ವರ್ತಿಸಬಾರದು ಎನ್ನುವುದು ಮೂರನೆಯ ಬಣದ ಕಾಳಜಿ. ನಾವು ಯಾರ ಪರವೂ ಇಲ್ಲ, ವಿರುದ್ಧವೂ ಇಲ್ಲ. ಪಕ್ಷದ ವರಿಷ್ಟರು ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧವಾಗಿರುತ್ತೇವೆ ಎಂದು ಹೇಳುವ ಇವರು, ಬಿಜೆಪಿಗಿಂತ ಯಡಿಯೂರಪ್ಪ ಮುಖ್ಯ ಅಂತಲೋ, ಯಡಿಯೂರಪ್ಪ ಕುಟುಂಬ ರಾಜಕಾರಣ ನಮಗೆ ಸಮಸ್ಯೆ ಅಂತಲೋ ಎಂದು ಹೇಳಿಕೊಳ್ಳುವವರಲ್ಲ. ಇವರದ್ದೇನಿದ್ದರೂ ಪಕ್ಷ, ಸಂಘ ಅಷ್ಟೇ. ಕಾರ್ಕಳ ಶಾಸಕ ವಿ ಸುನಿಲ್‌ ಕುಮಾರ್‌ ಮುಂಚೂಣಿಯಲ್ಲಿರುವ ಈ ಬಣದಲ್ಲಿ ಕರಾವಳಿಯ ಬಹುತೇಕ ಶಾಸಕರಿದ್ದಾರೆ. ಮುಜರಾಯಿ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಕೂಡಾ ಈ ಬಣದದಲ್ಲಿರುವ ಪ್ರಮುಖರು. ಉಭಯ ಬಣದ ನಾಯಕರ ವಿರುದ್ಧ ವರಿಷ್ಟರಿಗೆ ದೂರು: ಶಿಸ್ತುಕ್ರಮಕ್ಕೆ ಆಗ್ರಹ ನಾಯಕತ್ವ ಬದಲಾವಣೆ ಜಂಜಾಟಗಳಿಂದ ಪಕ್ಷಕ್ಕೆ ಮುಜುಗರ ಉಂಟಾಗುತ್ತಿದೆ ಎಂದು ಭಾವಿಸುತ್ತಿರುವ ತೃತೀಯ ಬಣದ ಶಾಸಕರು ಪಕ್ಷದೊಳಗಿನ ರಾಜಕೀಯ ಹೈಡ್ರಾಮಗಳಿಗೆ ಬೇಸತ್ತು ಹೋಗಿದ್ದಾರೆ. ಮೊದಮೊದಲು ಬಸನಗೌಡ ಪಾಟೀಲ ಯತ್ನಾಳ್‌ ಮಾತ್ರ ಪಕ್ಷದ ವಿರುದ್ಧ ಹೇಳಿಕೆ ನೀಡಿ ಮುಜುಗರ ತರಿಸುತ್ತಿದ್ದರೆ, ಇದೀಗ ಬಹಿರಂಗ ಕಚ್ಚಾಟದಲ್ಲಿಯೇ ತೊಡಗಿ ಎಂಪಿ ರೇಣುಕಾಚಾರ್ಯ, ಎ ಹೆಚ್‌ ವಿಶ್ವನಾಥ್‌, ಅರವಿಂದ್‌ ಬೆಲ್ಲದ್‌ ಮೊದಲಾದವರು ಪಕ್ಷಕ್ಕೆ ತಲೆ ತಗ್ಗಿಸುವಂತಹ ಹೇಳಿಕೆಯನ್ನು ನೀಡಿ ಸರ್ಕಾರದ ಮಾನ ಹರಾಜಿಗಿಡುತ್ತಿದ್ದಾರೆ. ಮುಖ್ಯಮಂತ್ರಿ ಕುಟುಂಬಸ್ಥರು ಸರ್ಕಾರದೊಳಗೆ ಮಾಡುತ್ತಿರುವ ಹಸ್ತಕ್ಷೇಪದ ಕುರಿತು ಯತ್ನಾಳ್‌ ಬಹಿರಂಗ ಅಸಮಾಧಾನ ವ್ಯಕ್ತಪಡಿಸುತ್ತಿದ್ದರೆ, ಇತ್ತೀಚೆಗಷ್ಟೇ ಬಿಜೆಪಿ ಸೇರಿಕೊಂಡ ಎಹೆಚ್‌ ವಿಶ್ವನಾಥ್‌, ಬಿಎಸ್‌ವೈ ನಾಯಕರಾಗಿ ಮುಂದುವರಿಯಲು ಯೋಗ್ಯರಲ್ಲ ಎಂದು ಹೇಳಿಕೆ ನೀಡುತ್ತಿದ್ದಾರೆ. ಇವರ ವಿರುದ್ಧ ಯಡಿಯೂರಪ್ಪ ಆಪ್ತ ಎಂಪಿ ರೇಣುಕಾಚಾರ್ಯ ಕೂಡಾ ಬಹಿರಂಗವಾಗಿಯೇ ವಾಗ್ದಾಳಿ ನಡೆಸುತ್ತಿದ್ದಾರೆ. ಈ ಎಲ್ಲದರ ನಡುವೆ, ಅರವಿಂದ ಬೆಲ್ಲಡ್‌ ತನ್ನ ಫೋನ್‌ ಕದ್ದಾಲಿಕೆ ಆಗುತ್ತಿದೆ ಎಂದು ಪರೋಕ್ಷವಾಗಿ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಪಕ್ಷದ ಶಾಸಕರ ಈ ಬಹಿರಂಗ ಜಗಳಗಳಿಂದ ಪಕ್ಷಕ್ಕೆ ತೀವ್ರ ಹಾನಿಯಾಗುತ್ತಿದೆಯೆಂದು ಆರೋಪಿಸಿ ರಾಜ್ಯ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ ಅವರು ಕೇಂದ್ರ ವರಿಷ್ಟರಿಗೆ ದೂರು ನೀಡಿದ್ದಾರೆ. ಕೇಂದ್ರ ನಾಯಕರ ಎಚ್ಚರಿಕೆಯ ನಡುವೆಯೂ ಉಭಯ ಬಣದ ಶಾಸಕರು ಪರಸ್ಪರ ಕೆಸರೆರಚಾಟದಲ್ಲಿ ತೊಡಗಿರುವುದರಿಂದ ಪಕ್ಷಕ್ಕೆ ಹಾನಿಯಾಗುತ್ತಿದೆ. ಇವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಪತ್ರದಲ್ಲಿ ಆಗ್ರಹಿಸಲಾಗಿದೆ. ಮುಖ್ಯವಾಗಿ, ಅರವಿಂದ್‌ ಬೆಲ್ಲದ, ಎ ಹೆಚ್‌ ವಿಶ್ವನಾಥ್‌, ಎಂ ಪಿ ರೇಣುಕಾಚಾರ್ಯ ಮತ್ತು ಬಸನಗೌಡ ಪಾಟೀಲ ಯತ್ನಾಳ್‌ ಅವರ ಹೆಸರನ್ನು ಪತ್ರದಲ್ಲಿ ಉಲ್ಲೇಖಿಸಲಾಗಿದೆ ಎಂದು ತಿಳಿದು ಬಂದಿದೆ. ಒಟ್ಟಾರೆ, ಇದುವರೆಗೂ ರಾಜ್ಯ ಭಾಜಪಾದೊಳಗೆ ಎರಡು ಬಣಗಳು ಮಾತತ್ರವಲ್ಲ, ತಟಸ್ಥವಾಗಿರುವ ಮೂರನೆಯ ಬಣವೂ ಇದೆ ಎನ್ನುವುದು ಸಾಬೀತಾಗಿದೆ.

ರಾಷ್ಟ್ರೀಯ

ಅಭಿಮತ

ರಾಜಿ ಇಲ್ಲದ ಸವಿಸ್ತಾರವಾದ ಸುದ್ದಿ ಅಭಿಮತವನ್ನು ಪ್ರತಿಧ್ವನಿ ನಿಮ್ಮ ಮುಂದುಡುತ್ತದೆ. ನಿಮ್ಮ ಅಭಿಮತ ಸದಾ ನಮ್ಮೊಂದಿಗಿರಲಿ.

ಪ್ರತಿರೋಧದ ದನಿಗಳಿಗೆ ನ್ಯಾಯಾಂಗದ ಆಕ್ಸಿಜನ್

ಉಸಿರುಗಟ್ಟಿದಂತಾಗಿದ್ದ ಭಾರತದ ಅಭಿವ್ಯಕ್ತಿ ಸ್ವಾತಂತ್ರ್ಯದ ಧ್ವನಿಗೆ ಭಾರತದ ನ್ಯಾಯಾಂಗ ಇತ್ತೀಚಿನ ದಿನಗಳಲ್ಲಿ ಆಮ್ಲಜನಕ ಪೂರೈಸುವ ಮೂಲಕ ಈ ದೇಶದಲ್ಲಿ ಸಾಂವಿಧಾನಿಕ ಪ್ರಜಾತಂತ್ರದ ಜೀವಂತಿಕೆಯನ್ನು ನಿರೂಪಿಸುತ್ತಿದೆ. ಭಾರತದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಉಂಟಾಗಿಲ್ಲ...

ಪಶ್ಚಿಮ ಬಂಗಾಳದಲ್ಲಿ BJP ಯಿಂದ TMC ಯತ್ತ ಮತ್ತೆ ವಲಸೆ ನಾಯಕರ ಚಿತ್ತ

ಪಶ್ಚಿಮ ಬಂಗಾಳದ ರಾಜ್ಯ ರಾಜಕೀಯದಲ್ಲಿ ಕೋಲಾಹಲ ಉಂಟಾಗಿದ್ದು, ಪಂಚ ರಾಜ್ಯ ವಿಧಾನಸಭಾ ಚುನಾವಣೆಗೂ ಮುನ್ನ ಅಧಿಕಾರದ ಆಸೆಗೋ ಅಥವಾ ಆಮಿಷಕ್ಕೋ ಒಳಗಾಗಿ ತೃಣ ಮೂಲ ಕಾಂಗ್ರೆಸ್ನಿಂದ ಹಲವು ನಾಯಕರು ಬಿಜೆಪಿಗೆ ವಲಸೆ...

ಪಕ್ಷದ ಹಿರಿಯ ನಾಯಕರ ಬಂಡಾಯ; ಏಕಾಂಗಿಯಾದ LJPಯ ಚಿರಾಗ್ ಪಾಸ್ವಾನ್

ಕೇಂದ್ರ ಮಂತ್ರಿಯಾಗಿದ್ದ ರಾಮ್ ವಿಲಾಸ್ ಪಾಸ್ವಾನ್ ಅವರ ನಿಧನದ ನಂತರ ಲೋಕ ಜನಶಕ್ತಿ ಪಕ್ಷದ ನೇತೃತ್ವ ವಹಿಸಿದ್ದ ಚಿರಾಗ್ ಪಾಸ್ವಾನ್, ಈಗ ನಡು ನೀರಿನಲ್ಲಿ ಒಂಟಿಯಾಗಿ ನಿಂತಿದ್ದಾರೆ. LJPಯ ವಿಶ್ವಾಸಾರ್ಹ ನಾಯಕರು...