ಸಂಸತ್ತಿಗೆ ಸಮಾನಾಂತರವಾಗಿ ದೆಹಲಿಯ ಜಂತರ್ ಮಂತರ್’ನಲ್ಲಿ ನಡೆಯುತ್ತಿರುವ ರೈತ ಸಂಸತ್ತಿಗೆ ದಿನದಿಂದ ದಿನಕ್ಕೆ ಬೆಂಬಲ ಹೆಚ್ಚಾಗುತ್ತಿದೆ. 12ನೇ ದಿನಕ್ಕೆ ಈ ಸಂಸತ್ತು ಕಾಲಿಟ್ಟಿದೆ. ಶುಕ್ರವಾರದಂದು ರೈತ ಸಂಸತ್ತಿನಲ್ಲಿ...
Read moreDetailsಉತ್ತರ ಪ್ರದೇಶದಲ್ಲಿ ಬಿಜೆಪಿ ಮತ್ತೆ ಜಾತಿ ರಾಜಕಾರಣದ ಕಾರ್ಡನ್ನು ಮುನ್ನೆಲೆಗೆ ತಂದಿದೆ. ಈಗಾಗಲೇ ಹಿಂದುಳಿದ ವರ್ಗಗಳಿಗೆ 27% ನೀಟ್ ಮೀಸಲಾತಿ ಘೋಷಿಸಿ ತಳ ಸಮುದಾಯಗಳ ಓಲೈಕೆಗೆ ಮುಂದಾಗಿರುವ...
Read moreDetailsಕೇಂದ್ರ ಸರಕಾರದ ರೈತ ವಿರೋಧಿ ನೀತಿ, ಕರಾಳ ಕಾಯ್ದೆಗಳನ್ನು ವಿರೋಧಿಸಿ ಕಳೆದೊಂದು ವರ್ಷದಿಂದ ಹರಿಯಾಣ, ದೆಹಲಿ ಗಡಿಭಾಗದ ಕುಂದಲಿಯಲ್ಲಿ ಸುದೀರ್ಘ ಪ್ರತಿಭಟನೆ ನಡೆಸುತ್ತಿರುವ ರೈತರು ಹಾಗೂ ರೈತ...
Read moreDetailsಕಳೆದ ಸುಮಾರು ಹತ್ತು ದಿನಗಳಿಂದ ಅಸ್ಸಾಂ ಹಾಗೂ ಮಿಜೊರಾಂ ನಡುವೆ ನಡೆಯುತ್ತಿದ್ದ ಘರ್ಷಣೆಗೆ ಕೊನೆಗೂ ತೆರೆ ಬಿದ್ದಿದೆ. ಎರಡೂ ರಾಜ್ಯಗಳ ಪ್ರತಿನಿಧಿಗಳು ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ....
Read moreDetailsಶಿವಸೇನಾ ನಾಯಕ ಸಂಜಯ್ ರಾವುತ್ ಶುಕ್ರವಾರ ಮೋದಿ ಸರ್ಕಾರ ಇಸ್ರೇಲ್ ಪೆಗಾಸಸ್ ಸ್ಪೈವೇರ್ ಬಳಸಿ ನುಣುಚಿಕೊಳ್ಳುವ ಮೂಲಕ ಪ್ರಜಾಪ್ರಭುತ್ವದ ನಾಲ್ಕು ಸ್ತಂಭಗಳನ್ನು ದುರ್ಬಲಗೊಳಿಸಿದೆ ಎಂದು ಆರೋಪಿಸಿದ್ದಾರೆ. ದೆಹಲಿಯಲ್ಲಿ...
Read moreDetailsಆತ್ಮನಿರ್ಭರಭಾರತ ಸೂಕ್ಷ್ಮ ಮನುಜ ಸಂವೇದನೆಗಳನ್ನೂ ಕಳೆದುಕೊಂಡು ಬೆತ್ತಲಾಗುತ್ತಿದೆ. ದೇಶದ ರಾಜಧಾನಿಯಲ್ಲಿ ನಡೆಯುವ ಒಂದು ಅತ್ಯಾಚಾರ ಮತ್ತು ಕೊಲೆಗೆ ಸಂತಾಪವನ್ನೂ ಸೂಚಿಸದ ಒಂದು ಸರ್ಕಾರ ಈ ದೇಶದಲ್ಲಿ ಅಧಿಕಾರದ...
Read moreDetailsಇತರೆ ಹಿಂದಿಳಿದ ವರ್ಗಗಳ ಜನಗಣತಿ ನಡೆಸಲು ಕೇಂದ್ರ ಸರ್ಕಾರ ರಚನಾತ್ಮಕ ಕ್ರಮಗಳನ್ನು ಕೈಗೊಂಡರೆ ಸಂಸತ್ತಿನ ಒಳಗಡೆ ಮತ್ತು ಹೊರಗಡೆ ಬೆಂಬಲಿಸುವುದಾಗಿ ಬಿಎಸ್ಪಿ ವರಿಷ್ಠೆ ಮಾಯಾವತಿ ಶುಕ್ರವಾರ ಹೇಳಿದ್ದಾರೆ....
Read moreDetailsಅಫ್ಘಾನಿಸ್ತಾನದಲ್ಲಿ ಹೆಚ್ಚುತ್ತಿರುವ ತಾಲಿಬಾನ್ ಕ್ರೂರತೆಯನ್ನು ಪಟ್ಟ ಹಾಕಲು ರಷ್ಯಾ ಮುಖ್ಯವಾದ ಸಭೆಯನ್ನು ಕರೆದಿದೆ. ಈ ಸಭೆಗೆ ಪಾಕಿಸ್ತಾನ, ಚೀನಾ ಮತ್ತು ಅಮೇರಿಕಾವನ್ನು ಆಹ್ವಾನಿಸಿರುವ ರಷ್ಯಾವು ಭಾರತಕ್ಕೆ ಆಮಂತ್ರಣವನ್ನು ನೀಡಿಲ್ಲ. ಅಫ್ಘಾನ್’ನಲ್ಲಿ ಹೆಚ್ಚುತ್ತಿರುವ ತಾಳಿಬಾನ್ ಆಕ್ರಮಣವನ್ನು ತಡೆಯಲು ರಷ್ಯಾ ಮುಂದೆ ಬಂದಿದ್ದು, ಈ ವಿಚಾರಕ್ಕೆ ಹೊಂದಿಕೊಂಡಿರುವ ರಾಷ್ಟ್ರಗಳನ್ನು ಪ್ರಮುಖವಾದ ಸಭೆಗೆ ಕರೆದಿದೆ. ಈ ಸಭೆಯು ಆಗಸ್ಟ್ 11ರಂದು ಕತಾರ್’ನಲ್ಲಿ ನಡೆಯಲಿದೆ ಎಂದು ಪಿಟಿಐ ವರದಿ ಮಾಡಿದೆ. ಮಾರ್ಚ್ 18 ಮತ್ತು ಏಪ್ರಿಲ್ 30ರಂದು ನಡೆದಿದ್ದ ಸಭೆಯ ರೀತಿಯಲ್ಲಿಯೇ ಈ ಸಭೆಯೂ ನಡೆಯಲಿದೆ ಎಂದು ವರದಿಯಾಗಿದೆ. ಕಳೆದ ತಿಂಗಳು ರಷ್ಯಾದ ವಿದೇಶಾಂಗ ಮಂತ್ರಿಯಾಗಿರುವ ಸೆರ್ಗಿ ಲಾವ್ರೋವ್ ಅವರು ತಾಷ್ಕೆಂಟ್’ನಲ್ಲಿ ಮಾತನಾಡುತ್ತಾ ಅಫ್ಘಾನಿಸ್ತಾನದ ಪರಿಸ್ಥಿತಿಯನ್ನು ನಿಭಾಯಿಸಲು ಭಾರತ ಸೇರಿದಂತೆ ಇತರ ರಾಷ್ಟ್ರಗಳೊಡನೆ ರಷ್ಯಾ ತನ್ನ ಸಂಬಂಧವನ್ನು ಮುಂದುವರೆಸುತ್ತದೆ ಎಂದು ಹೇಳಿದ್ದರು. ಈ ಹೇಳಿಕೆಯ ನಂತರ ಆಗಸ್ಟ್ 11ರ ಸಭೆಗೆ ಭಾರತಕ್ಕೆ ಆಹ್ವಾನ ನೀಡಲಾಗುತ್ತದೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ, ಆ ರೀತಿ ನಡೆಯಲಿಲ್ಲ. ಅಮೇರಿಕಾದೊಂದಿಗೆ ‘ಎಕ್ಸ್ಟೆಂಡೆಡ್ ಟ್ರಯೋಕಾ’ ಮಾದರಿಯ ಸಭೆಗಳನ್ನು ನಡೆಸುವುದರ ಜತೆಗೆ, ಮಧ್ಯ ಏಷ್ಯಾ ರಾಷ್ಟ್ರಗಳಾದ ಭಾರತ, ಇರಾನ್’ನೊಂದಿಗೆ ಸಭೆ ನಡೆಸುವುದಾಗಿ ಲಾವ್ರೋವ್ ಹೇಳಿದ್ದರು. ರಷ್ಯಾ ಮತ್ತು ಅಮೇರಿಕಾದ ನಡುವೆ ಹಲವಾರು ವಿಚಾರಗಳಲ್ಲಿ ವೈಮನಸ್ಯವಿದ್ದರೂ, ತಾಲಿಬಾನಿಗಳ ಆಕ್ರಮಣವನ್ನು ಮಟ್ಟಹಾಕುವ ಸಲುವಾಗಿ ಎರಡೂ ರಾಷ್ಟ್ರಗಳು ಈಗ ಪರಸ್ಪರ ಕೈಜೋಡಿಸುವ ನಿರ್ಧಾರಕ್ಕೆ ಬಂದಿವೆ. ಪ್ರಸ್ತುತ ಬಹುಮುಖ್ಯವಾದ ಸಭೆಗೆ ಭಾರತವನ್ನು ಆಹ್ವಾನಿಸದೇ ಇರುವುದರ ಕುರಿತು ಭಾರತದ ವಿದೇಶಾಂಗ ಇಲಾಖೆಯಿಂದ ಯಾವುದೇ ಅಧಿಕೃತವಾದ ಹೇಳಿಕೆ ಹೊರಬಿದ್ದಿಲ್ಲ. ವಿಶ್ವಸಂಸ್ಥೆಯಲ್ಲಿ ಭಾರತದ ರಾಯಭಾರಿಯಾಗಿರುವ ಟಿ ಎಸ್ ತಿರುಮೂರ್ತಿಯವರು ಶುಕ್ರವಾರದಂದು ನಡೆಯಲಿರುವ ವಿಶ್ವ ಭದ್ರತಾ ಪಡೆಗಳ ಸಭೆಯಲ್ಲಿ ಅಫ್ಘಾನ್ ಪರಿಸ್ಥಿತಿಯನ್ನು ಚರ್ಚಿಸಲಾಗುವುದು ಎಂದು ಘೋಷಿಸಿದ್ದಾರೆ. ಮೇ 1ರಂದು ಅಫ್ಘಾನಿಸ್ತಾನದಿಂದ ಅಮೇರಿಕಾವು ತನ್ನ ಭದ್ರತಾ ಪಡೆಯನ್ನು ವಾಪಾಸ್ ಕರೆಯಲು ಆರಂಭಿಸಿದ ನಂತರ ಅಫ್ಘಾನ್’ನಲ್ಲಿ ತಾಲೀಬಾನಿಗಳು ಮತ್ತೆ ಜೀವಂತವಾಗಿದ್ದರೆ. ಈಗಾಗಲೇ ಅಮೇರಿಕಾದ ಬಹುಪಾಲು ಭದ್ರತಾ ಸಿಬ್ಬಂದಿಗಳು ಅಮೇರಿಕಾಕ್ಕೆ ವಾಪಾಸಾಗಿದ್ದು, ಆಗಸ್ಟ್ 31ರ ವೇಳೆಗೆ ಸಂಪೂರ್ಣವಾಗಿ ಎಲ್ಲಾ ಸೈನ್ಯ ನೆಲೆಗಳನ್ನು ಮುಚ್ಚುವ ಯೋಜನೆ ಹಾಕಲಾಗಿದೆ. ಅಫ್ಘಾನಿಸ್ತಾನದಲ್ಲಿ ಶಾಂತಿಯನ್ನು ಮರುಸ್ಥಾಪಿಸುವಲ್ಲಿ ಭಾರತವೂ ಪ್ರಮುಖ ಪಾತ್ರ ವಹಿಸಿದೆ. ಯುದ್ಧಪೀಡಿತ ರಾಷ್ಟ್ರದ ಪುನರ್ ನಿರ್ಮಾಣಕ್ಕಾಗಿ ಭಾರತವು ಈಗಾಗಲೇ 3 ಬಿಲಿಯಲ್ ಡಾಲರ್ ಬಂಡವಾಳ ಹೂಡಿದೆ. ಈಗ ಇದೇ ದೇಶವನ್ನು ಅತ್ಯಂತ ಪ್ರಮುಖವಾದ ಸಭೆಯಿಂದ ದೂರ ಇಟ್ಟಿರುವುದು ಅಂತರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದೆ.
Read moreDetailsಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತೀಯ ಮಹಿಳಾ ಹಾಕಿ ತಂಡವು 3 ಬಾರಿ ಒಲಿಂಪಿಕ್ ಚಾಂಪಿಯನ್ ಆಗಿದ್ದ ಆಸ್ಟ್ರೇಲಿಯಾವನ್ನು ಸೋಲಿಸಿ ಸೆಮಿಫೈನಲ್‌ಗೆ ಪ್ರವೇಶ ಪಡೆದ ನಂತರ ಇಡೀ ಭಾರತವು ಸಂಭ್ರಮಾಚರಣೆಯಲ್ಲಿ ತೊಡಗಿದ್ದರೆ,...
Read moreDetailsಒಂದು ಕಡೆ ‘ರಾಜಾಹುಲಿ’, ಮತ್ತೊಂದು ಕಡೆ ‘ಸಾಹುಕಾರ’. ಈ ನಡುವೆ, ಪಕ್ಷನಿಷ್ಠೆಯ ಹೆಸರಿನಲ್ಲಿ ಅಧಿಕಾರದ ಮೇಲೆ ಕಣ್ಣಿಟ್ಟಿರುವ ತೃತೀಯ ಶಕ್ತಿ! ಈ ಮೂರೂ ಅತೃಪ್ತ ಮತ್ತು ಒಂದರ್ಥದಲ್ಲಿ...
Read moreDetailsಮುಂದಿನ ವರ್ಷ ನಡೆಯಲಿರುವ ಉತ್ತರ ಪ್ರದೇಶ ಚುನಾವಣೆ ಗೆಲ್ಲಲು ಆಡಳಿತರೂಢ ಬಿಜೆಪಿ, ಬಿಎಸ್‌ಪಿ, ಕಾಂಗ್ರೆಸ್ ಸೇರಿದಂತೆ ಮಾಜಿ ಸಿಎಂ ಮುಲಾಯಂ ಸಿಂಗ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷವೂ...
Read moreDetailsಭಾರತದಲ್ಲಿ ಮೂಲಸೌಕರ್ಯ ಅಭಿವೃದ್ದಿಗೆ ಮೀನಾಮೇಷ ಎಣಿಸುವುದು ‘ಸಾಮಾನ್ಯ’ ಪರಿಸ್ಥಿತಿಯೆಂಬಂತಾಗಿದೆ. ದೇಶದ ಹಲವು ಹಳ್ಳಿಗಳಿಗೆ ಇಂದಿಗೂ ರಸ್ತೆ ಹಾಗೂ ವಿದ್ಯುತ್ ಭಾಗ್ಯ ಒದಗಿ ಬಂದಿಲ್ಲ. ಪರಿಸ್ಥಿತಿ ಹೀಗಿರುವಾಗ ಆಧುನಿಕತೆಗೆ...
Read moreDetailsಭಾರತಕ್ಕೆ ಪೆಗಾಸಸ್ ಹೊಸತೇನಲ್ಲ. 2019ರ ಕೊನೆಯ ದಿನಗಳಲ್ಲಿ ಇದು ನಮ್ಮ ಸಾರ್ವಜನಿಕ ಚರ್ಚೆಯ ಭಾಗವಾಗಿತ್ತು. ಟೊರೋಂಟೋ ವಿಶ್ವವಿದ್ಯಾಲಯದ ಪೌರ ಪ್ರಯೋಗಾಲಯದ ಸಂಶೋಧಕರು ಭಾರತದಲ್ಲಿ ಕೆಲವರ ದೂರವಾಣಿಗೆ ಕರೆ...
Read moreDetailsಸಂಸತ್ತಿನಲ್ಲಿ ಪೆಗಾಸಸ್ ವಿರುದ್ದ ನಡೆಯುತ್ತಿರುವ ಪ್ರತಿಭಟನೆ ಬುಧವಾರವೂ ಮುಂದುವರೆದಿತ್ತು. ವಿರೋಧ ಪಕ್ಷದ ನಾಯಕರು ಪೆಗಾಸಸ್ ಪ್ರಕರಣದ ವಿರುದ್ದ ಉನ್ನತ ಮಟ್ಟದ ತನಿಖೆಗಾಗಿ ಬೇಡಿಕೆ ಇಟ್ಟಿದ್ದಾರೆ. ಆದರೆ, ಸರ್ಕಾರ...
Read moreDetailsಅಫ್ಗಾನಿಸ್ತಾನ, ಪಾಕಿಸ್ತಾನ ಮತ್ತು ಬಾಂಗ್ಲಾದೇಶಕ್ಕೆ ಮೂಲದ ಹಿಂದೂಗಳು ಭಾರತೀಯ ಪೌರತ್ವಕ್ಕಾಗಿ ಸಲ್ಲಿಸಿದ್ದ ಒಟ್ಟು 4,046 ಅರ್ಜಿಗಳು ವಿವಿಧ ರಾಜ್ಯ ಸರ್ಕಾರಗಳ ಬಳಿ ಬಾಕಿ ಇವೆ ಎಂದು ರಾಜ್ಯಸಭೆಯಲ್ಲಿ...
Read moreDetailsಅಲೋಪಥಿ ವೈದ್ಯರು ಹಾಗೂ ಆಯುಷ್ ವೈದ್ಯರ ನಡುವೆ ವೇತನ ತಾರತಮ್ಯ ಸಲ್ಲದು ಎಂದು ದೆಹಲಿ ಹೈಕೋರ್ಟ್ ಹೇಳಿದೆ. ಜತೆಗೆ, ಉತ್ತರ ದೆಹಲಿ ಮುನ್ಸಿಪಾಲಿಟಿ ಕಾರ್ಪೊರೇಷನ್’ಗೆ ನಿರ್ದೇಶನ ನೀಡಿರುವ...
Read moreDetailsಜನವರಿ 16, 2020ರಂದು JNU ವಿದ್ಯಾರ್ಥಿ ಶಾರ್ಜಿಲ್ ಇಮಾಮ್ ಅವರು ಅಸ್ಸಾಂನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ, ಜನರಿಗೆ ಪ್ರತಿಭಟನೆಯಲ್ಲಿ ಭಾಗವಹಿಸುವಂತೆ ಕರೆಕೊಟ್ಟರು. ರಸ್ತೆಗಳನ್ನು ಬಂದ್ ಮಾಡಿ, ರೈಲು ಹಳಿಗಳನ್ನು...
Read moreDetailsಭಾರತಕ್ಕೆ ಕೋಟ್ಯಾಂತರ ವೆಚ್ಚದ ಹರ್ಪೂನ್ ಜಾಯಿಂಟ್ ಕಾಮನ್ ಟೆಸ್ಟ್ ಸೆಟ್ (ಜೆಸಿಟಿಎಸ್) ಮತ್ತು ಸಂಬಂಧಿತ ಉಪಕರಣಗಳನ್ನು ಮಾರಾಟ ಮಾಡಲು ಅಮೆರಿಕಾ ಅನುಮೋದನೆ ನೀಡಿದೆ. ಈ ಮೂಲಕ ಭಾರತದೊಂದಿಗೆ...
Read moreDetailsಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ವೈದ್ಯಕೀಯ ಸೀಟುಗಳಿಗಾಗಿ ಇತರ ಹಿಂದುಳಿದ ವರ್ಗಗಳಿಗೆ (ಒಬಿಸಿ) ಮೀಸಲಾತಿ ವಿಸ್ತರಿಸುವ ನಿರ್ಧಾರವನ್ನು ಭಾರತ ಸರ್ಕಾರ ಘೋಷಿಸಿದ ಕೆಲವೇ ದಿನಗಳ ನಂತರ ಮಾಹಿತಿಯೊಂದು ಬಹಿರಂಗವಾಗಿದ್ದು...
Read moreDetailsದಿ ಕ್ವಿಂಟ್ ವರದಿ ಮಾಡಿರುವ ಪ್ರಕಾರ ಪೆಗಸಸ್ ಬೇಹುಗಾರಿಕೆಗೆ ಗುರಿಯಾಗಿದ್ದ ಐವರು ಪತ್ರಕರ್ತರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾರೆ. ಸರ್ಕಾರಿ ಸಂಸ್ಥೆಗಳು ಅನಧಿಕೃತವಾಗಿ ಗೂಢಚರ್ಯೆ ನಡೆಸುವುದು ಸಂವಿಧಾನ ಬದ್ಧವಾಗಿ...
Read moreDetails© 2024 www.pratidhvani.com - Analytical News, Opinions, Investigative Stories and Videos in Kannada