• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Tuesday, April 21, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ಅಫ್ಘಾನ್ ಬಿಕ್ಕಟ್ಟು: ಪ್ರಮುಖ ಸಭೆಗೆ ಭಾರತವನ್ನು ಆಮಂತ್ರಿಸದ ರಷ್ಯಾ

Shivakumar A by Shivakumar A
August 6, 2021
in ದೇಶ, ರಾಜಕೀಯ
0
ಅಫ್ಘಾನ್ ಬಿಕ್ಕಟ್ಟು: ಪ್ರಮುಖ ಸಭೆಗೆ ಭಾರತವನ್ನು ಆಮಂತ್ರಿಸದ ರಷ್ಯಾ
Share on WhatsAppShare on FacebookShare on Telegram

ಅಫ್ಘಾನಿಸ್ತಾನದಲ್ಲಿ ಹೆಚ್ಚುತ್ತಿರುವ ತಾಲಿಬಾನ್ ಕ್ರೂರತೆಯನ್ನು ಪಟ್ಟ ಹಾಕಲು ರಷ್ಯಾ ಮುಖ್ಯವಾದ ಸಭೆಯನ್ನು ಕರೆದಿದೆ. ಈ ಸಭೆಗೆ ಪಾಕಿಸ್ತಾನ, ಚೀನಾ ಮತ್ತು ಅಮೇರಿಕಾವನ್ನು ಆಹ್ವಾನಿಸಿರುವ ರಷ್ಯಾವು ಭಾರತಕ್ಕೆ ಆಮಂತ್ರಣವನ್ನು ನೀಡಿಲ್ಲ. 

ADVERTISEMENT

ಅಫ್ಘಾನ್’ನಲ್ಲಿ ಹೆಚ್ಚುತ್ತಿರುವ ತಾಳಿಬಾನ್ ಆಕ್ರಮಣವನ್ನು ತಡೆಯಲು ರಷ್ಯಾ ಮುಂದೆ ಬಂದಿದ್ದು, ಈ ವಿಚಾರಕ್ಕೆ ಹೊಂದಿಕೊಂಡಿರುವ ರಾಷ್ಟ್ರಗಳನ್ನು ಪ್ರಮುಖವಾದ ಸಭೆಗೆ ಕರೆದಿದೆ. ಈ ಸಭೆಯು ಆಗಸ್ಟ್ 11ರಂದು ಕತಾರ್’ನಲ್ಲಿ ನಡೆಯಲಿದೆ ಎಂದು ಪಿಟಿಐ ವರದಿ ಮಾಡಿದೆ. ಮಾರ್ಚ್ 18 ಮತ್ತು ಏಪ್ರಿಲ್ 30ರಂದು ನಡೆದಿದ್ದ ಸಭೆಯ ರೀತಿಯಲ್ಲಿಯೇ ಈ ಸಭೆಯೂ ನಡೆಯಲಿದೆ ಎಂದು ವರದಿಯಾಗಿದೆ. 

ಕಳೆದ ತಿಂಗಳು ರಷ್ಯಾದ ವಿದೇಶಾಂಗ ಮಂತ್ರಿಯಾಗಿರುವ ಸೆರ್ಗಿ ಲಾವ್ರೋವ್ ಅವರು ತಾಷ್ಕೆಂಟ್’ನಲ್ಲಿ ಮಾತನಾಡುತ್ತಾ ಅಫ್ಘಾನಿಸ್ತಾನದ ಪರಿಸ್ಥಿತಿಯನ್ನು ನಿಭಾಯಿಸಲು ಭಾರತ ಸೇರಿದಂತೆ ಇತರ ರಾಷ್ಟ್ರಗಳೊಡನೆ ರಷ್ಯಾ ತನ್ನ ಸಂಬಂಧವನ್ನು ಮುಂದುವರೆಸುತ್ತದೆ ಎಂದು ಹೇಳಿದ್ದರು. 

ಈ ಹೇಳಿಕೆಯ ನಂತರ ಆಗಸ್ಟ್ 11ರ ಸಭೆಗೆ ಭಾರತಕ್ಕೆ ಆಹ್ವಾನ ನೀಡಲಾಗುತ್ತದೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ, ಆ ರೀತಿ ನಡೆಯಲಿಲ್ಲ. ಅಮೇರಿಕಾದೊಂದಿಗೆ ‘ಎಕ್ಸ್ಟೆಂಡೆಡ್ ಟ್ರಯೋಕಾ’ ಮಾದರಿಯ ಸಭೆಗಳನ್ನು ನಡೆಸುವುದರ ಜತೆಗೆ, ಮಧ್ಯ ಏಷ್ಯಾ ರಾಷ್ಟ್ರಗಳಾದ ಭಾರತ, ಇರಾನ್’ನೊಂದಿಗೆ ಸಭೆ ನಡೆಸುವುದಾಗಿ ಲಾವ್ರೋವ್ ಹೇಳಿದ್ದರು. 

ರಷ್ಯಾ ಮತ್ತು ಅಮೇರಿಕಾದ ನಡುವೆ ಹಲವಾರು ವಿಚಾರಗಳಲ್ಲಿ ವೈಮನಸ್ಯವಿದ್ದರೂ, ತಾಲಿಬಾನಿಗಳ ಆಕ್ರಮಣವನ್ನು ಮಟ್ಟಹಾಕುವ ಸಲುವಾಗಿ ಎರಡೂ ರಾಷ್ಟ್ರಗಳು ಈಗ ಪರಸ್ಪರ ಕೈಜೋಡಿಸುವ ನಿರ್ಧಾರಕ್ಕೆ ಬಂದಿವೆ. ಪ್ರಸ್ತುತ ಬಹುಮುಖ್ಯವಾದ ಸಭೆಗೆ ಭಾರತವನ್ನು ಆಹ್ವಾನಿಸದೇ ಇರುವುದರ ಕುರಿತು ಭಾರತದ ವಿದೇಶಾಂಗ ಇಲಾಖೆಯಿಂದ ಯಾವುದೇ ಅಧಿಕೃತವಾದ ಹೇಳಿಕೆ ಹೊರಬಿದ್ದಿಲ್ಲ. 

ವಿಶ್ವಸಂಸ್ಥೆಯಲ್ಲಿ ಭಾರತದ ರಾಯಭಾರಿಯಾಗಿರುವ ಟಿ ಎಸ್ ತಿರುಮೂರ್ತಿಯವರು ಶುಕ್ರವಾರದಂದು ನಡೆಯಲಿರುವ ವಿಶ್ವ ಭದ್ರತಾ ಪಡೆಗಳ ಸಭೆಯಲ್ಲಿ ಅಫ್ಘಾನ್ ಪರಿಸ್ಥಿತಿಯನ್ನು ಚರ್ಚಿಸಲಾಗುವುದು ಎಂದು ಘೋಷಿಸಿದ್ದಾರೆ. 

ಮೇ 1ರಂದು ಅಫ್ಘಾನಿಸ್ತಾನದಿಂದ ಅಮೇರಿಕಾವು ತನ್ನ ಭದ್ರತಾ ಪಡೆಯನ್ನು ವಾಪಾಸ್ ಕರೆಯಲು ಆರಂಭಿಸಿದ ನಂತರ ಅಫ್ಘಾನ್’ನಲ್ಲಿ ತಾಲೀಬಾನಿಗಳು ಮತ್ತೆ ಜೀವಂತವಾಗಿದ್ದರೆ. ಈಗಾಗಲೇ ಅಮೇರಿಕಾದ ಬಹುಪಾಲು ಭದ್ರತಾ ಸಿಬ್ಬಂದಿಗಳು ಅಮೇರಿಕಾಕ್ಕೆ ವಾಪಾಸಾಗಿದ್ದು, ಆಗಸ್ಟ್ 31ರ ವೇಳೆಗೆ ಸಂಪೂರ್ಣವಾಗಿ ಎಲ್ಲಾ ಸೈನ್ಯ ನೆಲೆಗಳನ್ನು ಮುಚ್ಚುವ ಯೋಜನೆ ಹಾಕಲಾಗಿದೆ. 

ಅಫ್ಘಾನಿಸ್ತಾನದಲ್ಲಿ ಶಾಂತಿಯನ್ನು ಮರುಸ್ಥಾಪಿಸುವಲ್ಲಿ ಭಾರತವೂ ಪ್ರಮುಖ ಪಾತ್ರ ವಹಿಸಿದೆ. ಯುದ್ಧಪೀಡಿತ ರಾಷ್ಟ್ರದ ಪುನರ್ ನಿರ್ಮಾಣಕ್ಕಾಗಿ ಭಾರತವು ಈಗಾಗಲೇ 3 ಬಿಲಿಯಲ್ ಡಾಲರ್ ಬಂಡವಾಳ ಹೂಡಿದೆ. ಈಗ ಇದೇ ದೇಶವನ್ನು ಅತ್ಯಂತ ಪ್ರಮುಖವಾದ ಸಭೆಯಿಂದ ದೂರ ಇಟ್ಟಿರುವುದು ಅಂತರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದೆ. 

Tags: ಅಫ್ಘಾನಿಸ್ತಾಅಮೇರಿಕಾಚೀನಾಪಾಕಿಸ್ತಾನಭಾರತರಷ್ಯಾ
Previous Post

ರಾಜಕೀಯ ನಿವೃತ್ತಿ ಘೋಷಿಸಿದ ಹಿರಿಯ ಬಿಜೆಪಿ ನಾಯಕ ಶ್ರೀನಿವಾಸ ಪ್ರಸಾದ್

Next Post

OBC ಜನಗಣತಿಯನ್ನು ನಡೆಸಲು ಕೇಂದ್ರ ನಿರ್ಧರಿಸಿದರೆ ನಮ್ಮ ಪಕ್ಷ ಸಂಪೂರ್ಣ ಬೆಂಬಲಿಸುತ್ತದೆ: BSP ವರಿಷ್ಠೆ ಮಾಯಾವತಿ

Related Posts

ಸಿದ್ದರಾಮಯ್ಯನವ್ರೇ ನೀವು ಕರ್ನಾಟಕದ ಮುಖ್ಯಮಂತ್ರಿಗಳೋ ಅಥವಾ ಮೈಸೂರು ಜಿಲ್ಲೆಗೆ ಮಾತ್ರನೋ : ಶಾಸಕ ಕಂದಕೂರ್‌ ಆಕ್ರೋಶ..!
Top Story

ಸಿದ್ದರಾಮಯ್ಯನವ್ರೇ ನೀವು ಕರ್ನಾಟಕದ ಮುಖ್ಯಮಂತ್ರಿಗಳೋ ಅಥವಾ ಮೈಸೂರು ಜಿಲ್ಲೆಗೆ ಮಾತ್ರನೋ : ಶಾಸಕ ಕಂದಕೂರ್‌ ಆಕ್ರೋಶ..!

by ಪ್ರತಿಧ್ವನಿ
April 20, 2026
0

ಬೆಂಗಳೂರು : ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ನಗನೂರು ಗ್ರಾಮದ ಕೃಷಿ ಹೊಂಡದಲ್ಲಿ ಈಜಲು ಹೋಗಿದ್ದ ಒಂದೇ ಕುಟುಂಬದ ನಾಲ್ವರು ಮಕ್ಕಳು‌ ಕಳೆದ ಮಾರ್ಚ್‌ 29ರಂದು ಜಲಸಮಾಧಿಯಾಗಿರುವ ಘಟನೆಗೆ...

Read moreDetails
ಹೊಸ ಪಕ್ಷವೊಂದು MGR ರೀತಿ ಆಗೋಕೆ ಹೊರಟಿದೆ, ಅದೆಲ್ಲ ಸಿನಿಮಾದಲ್ಲಿ ಕೈ ಬೀಸಲಷ್ಟೇ ಇಲ್ಲಿ ನಡೆಯಲ್ಲ  : ಥಳಪತಿ ವಿಜಯ್‌ ವಿರುದ್ಧ ಡಿಕೆ ಶಿವಕುಮಾರ್‌ ವಾಗ್ದಾಳಿ

ಹೊಸ ಪಕ್ಷವೊಂದು MGR ರೀತಿ ಆಗೋಕೆ ಹೊರಟಿದೆ, ಅದೆಲ್ಲ ಸಿನಿಮಾದಲ್ಲಿ ಕೈ ಬೀಸಲಷ್ಟೇ ಇಲ್ಲಿ ನಡೆಯಲ್ಲ : ಥಳಪತಿ ವಿಜಯ್‌ ವಿರುದ್ಧ ಡಿಕೆ ಶಿವಕುಮಾರ್‌ ವಾಗ್ದಾಳಿ

April 20, 2026
“ನಮ್ಮ ಸರ್ಕಾರ ಬುದ್ಧ, ಬಸವ, ಅಂಬೇಡ್ಕರ್ ಕಂಡ ಕನಸಿನ ಸಮಾಜ ನಿರ್ಮಾಣ ಮಾಡುವ ಉದ್ದೇಶ ಹೊಂದಿದೆ”

“ನಮ್ಮ ಸರ್ಕಾರ ಬುದ್ಧ, ಬಸವ, ಅಂಬೇಡ್ಕರ್ ಕಂಡ ಕನಸಿನ ಸಮಾಜ ನಿರ್ಮಾಣ ಮಾಡುವ ಉದ್ದೇಶ ಹೊಂದಿದೆ”

April 20, 2026
ಹ್ಯಾಕರ್‌ ಶ್ರೀಕಿ ನಂಟು, ನಲಪ್ಪಾಡ್‌ ಬುಡಕ್ಕೆ ಬಿಟ್‌ ಕಾಯಿನ್‌ ಬೆಂಕಿ : ಇಡಿ ರೇಡ್‌ಗೆ ಸಿಎಂ ಏನಂದ್ರು..?

ಹ್ಯಾಕರ್‌ ಶ್ರೀಕಿ ನಂಟು, ನಲಪ್ಪಾಡ್‌ ಬುಡಕ್ಕೆ ಬಿಟ್‌ ಕಾಯಿನ್‌ ಬೆಂಕಿ : ಇಡಿ ರೇಡ್‌ಗೆ ಸಿಎಂ ಏನಂದ್ರು..?

April 20, 2026
ಪ್ರಧಾನಿ ಕಿವಿಯಲ್ಲಿ ಏನು ಹೇಳಿದೆ ಅಂದ್ರೆ.. : ಮೋದಿ ಜೊತೆಗಿನ ಮಾತುಕತೆ ಗುಟ್ಟು ಬಿಚ್ಚಿಟ್ಟ ಸಿಎಂ..

ಪ್ರಧಾನಿ ಕಿವಿಯಲ್ಲಿ ಏನು ಹೇಳಿದೆ ಅಂದ್ರೆ.. : ಮೋದಿ ಜೊತೆಗಿನ ಮಾತುಕತೆ ಗುಟ್ಟು ಬಿಚ್ಚಿಟ್ಟ ಸಿಎಂ..

April 20, 2026
Next Post
OBC ಜನಗಣತಿಯನ್ನು ನಡೆಸಲು ಕೇಂದ್ರ ನಿರ್ಧರಿಸಿದರೆ ನಮ್ಮ ಪಕ್ಷ ಸಂಪೂರ್ಣ ಬೆಂಬಲಿಸುತ್ತದೆ: BSP ವರಿಷ್ಠೆ ಮಾಯಾವತಿ

OBC ಜನಗಣತಿಯನ್ನು ನಡೆಸಲು ಕೇಂದ್ರ ನಿರ್ಧರಿಸಿದರೆ ನಮ್ಮ ಪಕ್ಷ ಸಂಪೂರ್ಣ ಬೆಂಬಲಿಸುತ್ತದೆ: BSP ವರಿಷ್ಠೆ ಮಾಯಾವತಿ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!