ವಿನಾಯಕ ದಾಮೋದರ್ ಸಾವರ್ಕರ್… ಸದ್ಯಕ್ಕೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಅತ್ಯಂತ ವಿವಾದಿತ ವ್ಯಕ್ತಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಶಿವಮೊಗ್ಗದಲ್ಲಿ ಕೋಮು ಸಂಘರ್ಷ, ಉಡುಪಿ ಮತ್ತು ತುಮಕೂರಿನಲ್ಲಿ ರಾಜಕೀಯ ಸಂಘರ್ಷಕ್ಕೆ ದಾರಿ ಮಾಡಿಕೊಟ್ಟಿರುವ ಸಾವರ್ಕರ್ ಹಿನ್ನೆಲೆ ಕೂಡಾ ಅಷ್ಟೇ ವಿವಾದಿತ. ಬಲ ಪಂಥೀಯ ಸಂಘಟನೆಗಳು ಬಿಟ್ಟರೆ ಬೇರೆ ಯಾರೂ ಇವರನ್ನು ಸ್ವಾತಂತ್ರ್ಯ ಹೋರಾಟಗಾರರು ಎಂದು ಒಪ್ಪಲು ಸಿದ್ದರಿಲ್ಲ. ಆದರೂ, ಹೇರಿಕೆ ಎಂಬ ವಿಷಯದಲ್ಲಿ ಪರಿಣಿತಿ ಹೊಂದಿರುವ ಬಲ ಪಂಥೀಯರು ಜನರಿಗೆ ಇಷ್ಟವಿಲ್ಲದಿದ್ದರೂ ಸಾವರ್ಕರ್ ಅವರನ್ನು ಸ್ವಾತಂತ್ರ್ಯ ಹೋರಾಟಗಾರ ಎಂದು ಬಿಂಬಿಸುತ್ತಲೇ ಬಂದಿದೆ. ಇದರೊಂದಿಗೆ, ಕಾಂಗ್ರೆಸ್’ನಲ್ಲಿದ್ದ ದೇಶದ ಪ್ರಥಮ ಗೃಹ ಮಂತ್ರಿ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಕುರಿತಾಗಿಯೂ ಅಪಾರ ಆತ್ಮಾಭಿಮಾನವನ್ನು ಬಿಜೆಪಿ ಪ್ರದರ್ಶಿಸುತ್ತಾ ಬಂದಿದೆ. ಭಾರತದ ಇತಿಹಾಸದಲ್ಲಿ ಬಲಪಂಥೀಯ ಸಂಘಟನೆಗಳ ವಿರುದ್ಧ ನಿರಂತರ ಹೋರಾಟ ನಡೆಸಿದ್ದ ಸರ್ದಾರ್ ಪಟೇಲ್, ಇಂದು ಅದೇ ಬಲಪಂಥೀಯರ ಗುರುವಾಗಿದ್ದಾರೆ. ಇಂದಿಗೂ ವಿವಾದಿತ ವ್ಯಕ್ತಿಯಾಗಿಯೇ ಉಳಿದುಕೊಂಡಿರುವ ಸಾವರ್ಕರ್ ಕುರಿತು ಸರ್ದಾರ್ ವಲ್ಲಭಭಾಯಿ ಪಟೇಲ್ ಯಾವ ರೀತಿಯ ಭಾವನೆಯನ್ನು ಹೊಂದಿದ್ದರು ಎಂಬುದು ಪ್ರಮುಖವಾಗಿ ಗಮನಿಸಬೇಕಾದ ಸಂಗತಿ. ಈ ಕುರಿತಾದ ಐತಿಹಾಸಿಕ ಘಟನೆಗಳ ಸಂಕ್ಷಿಪ್ತ ವಿವರ ಇಲ್ಲಿದೆ. 1946ರಲ್ಲಿ ಭಾರತದ ಹಲವೆಡೆ ಉಂಟಾದ ಕೋಮು ಸಂಘರ್ಷಗಳನ್ನು ಆರ್ ಎಸ್ ಎಸ್ ಮತ್ತು ಹಿಂದೂ ಮಹಾಸಭಾ ತನ್ನ ಸ್ವಾರ್ಥಕ್ಕಾಗಿ ಬಳಸಿಕೊಂಡಿತು. ಹಿಂದೂಗಳ ಪಾಲಿನ ರಕ್ಷಕರಾಗಿ ನಾವಿದ್ದೇವೆ ಎಂಬಂತೆ ಬಿಂಬಿಸಿಕೊಳ್ಳುವ ಹುನ್ನಾರದಲ್ಲಿ ಇವೆರಡೂ ಸಂಘಟನೆಗಳು ತೊಡಗಿಕೊಂಡಿದ್ದವು. ಅದಕ್ಕಾಗಿ ಸರ್ಕಾರ ವಿರೋಧಿ ಹಾಗೂ ಗಾಂಧೀ ವಿರೋಧಿ ಭಾಷಣ, ಲೇಖನಗಳನ್ನು ಬರೆದು ಜನರನ್ನು ಸರ್ಕಾರದ ವಿರುದ್ಧ ಎತ್ತಿಕಟ್ಟುವ ಕೆಲಸದಲ್ಲಿ ತೊಡಗಿದ್ದವು. “Organiser” ಎಂಬ ಬಲಪಂಥೀಯ ಪತ್ರಿಕೆಯಲ್ಲಿ ಲೇಖನಗಳನ್ನು ಬರೆದ ಹಿಂದೂ ಮಹಾಸಭಾ ನಾಯಕ ಶ್ಯಾಮ ಪ್ರಸಾದ್ ಮುಖರ್ಜಿ, ತ್ರಿವರ್ಣ ಧ್ವಜ ನಮ್ಮ ರಾಷ್ಟ್ರಧ್ವಜವೆಂದು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಕೇಸರಿ ಭಗವಾ ಧ್ವಜ ಒಂದೇ ನಿಜವಾದ ಧ್ವಜ. ಮೂರು ಎಂಬ ಸಂಖ್ಯೆಯೇ ಹಿಂದೂ ಸಂಪ್ರದಾಯದ ಪ್ರಕಾರ ಕೆಡುಕನ್ನು ತರುತ್ತದೆ. ಇದು ಭಾರತದ ಪಾಳಿಗೆ ಮುಳುವಾಗಲಿದೆ ಎಂದು ಹೇಳಿದ್ದರು. 1947ರಲ್ಲಿ ಭಾರತಪಾಕಿಸ್ತಾನ ವಿಭಜನೆಯ ಬಳಿಕ ಭಾರತ ಮತ್ತು ಪಾಕಿಸ್ತಾನದಲ್ಲಿ ನಡೆದ ದಂಗೆ, ಕೋಮು ಘರ್ಷವನ್ನು ಮುಂದಿಟ್ಟುಕೊಂಡು ಆರ್ ಎಸ್ ಎಸ್ ಮತ್ತು ಹಿಂದೂ ಮಹಾಸಭಾ ಮತ್ತೆ ಗಾಂಧಿ ವೀರೋಧಿ ನೀತಿಯನ್ನು ಮುಂದುವರೆಸಿತು. ಡಿಸೆಂಬರ್ 18,1947ರಲ್ಲಿ ದೆಹಲಿಯಲ್ಲಿ ನಡೆದ ಬೃಹತ್ ಸಭೆಯಲ್ಲಿ ಅಂದಿನ ಆರ್ ಎಸ್ ಎಸ್ ಮುಖ್ಯಸ್ಥ ಎಂ ಎಸ್ ಗೋಲ್ವೋಲ್ಕರ್, ಭಾರತ ಸರ್ಕಾರವನ್ನು ‘ಸೈತಾನ ಮತ್ತು ಭಾರತೀಯೇತರ’ ಸರ್ಕಾರ ಎಂದು ಕರೆದಿದ್ದರು. ಆರ್ ಎಸ್ ಎಸ್ ವಿರೋಧಿಗಳನ್ನು ಕೂಡಲೇ ‘ಮೌನವಾಗಿಸಬೇಕು’ ಎಂದು ಕರೆ ನೀಡಿದ್ದರು. ಈ ಬೆದರಿಕೆಯು 1848ರ ಜನವರಿ 30ರಂದು ಕಾರ್ಯರೂಪಕ್ಕೆ ಬಂದಿತ್ತು. ರಾಷ್ಟ್ರಪಿತ ಮಹಾತ್ಮಾ ಗಾಂಧಿ ನಾಥೂರಾಮ್ ಗೋಡ್ಸೆ ಎಂಬ ವ್ಯಕ್ತಿಯಿಂದ ಹುತಾತ್ಮರಾದರು. ಈ ಸಂದರ್ಭದಲ್ಲಿ ಭಾರತದ ಉಪಪ್ರಧಾನಿ ಹಾಗೂ ಗೃಹಮಂತ್ರಿಗಳಾದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು 25,000 ಆರ್ ಎಸ್ ಎಸ್ ಕಾರ್ಯಕರ್ತರನ್ನು ಬಂಧಿಸಿ ಆರ್ ಎಸ್ ಎಸ್ ಸಂಘಟನೆಯನ್ನೇ ನಿಷೇಧಿಸಿದರು. ನಿಷೇಧದ ಭಯದಿಂದ ಹಿಂದೂ ಮಹಾಸಭಾ ತನ್ನನ್ನು ತಾನೇ ವಿಸರ್ಜಿಸಿಕೊಂಡಿತು. ಗಾಂಧಿ ಹತ್ಯೆಯ ಷಡ್ಯಂತ್ರದಲ್ಲಿ ಸಾವರ್ಕರ್ ಪಾತ್ರ ಇರುವುದನ್ನೂ ಮನಗಂಡಿದ್ದ ಸರ್ದಾರ್ ಪಟೇಲ್, ಸಾವರ್ಕರ್ ಅನ್ನೂ ಬಂಧಿಸಿದ್ದರು. ಖುದ್ದು ವಕೀಲರಾಗಿದ್ದ ಪಟೇಲ್, ಗಾಂಧಿ ಹತ್ಯೆಯಲ್ಲಿ ಸಾವರ್ಕರ್ ಪತ್ರದ ಕುರಿತು ಎಷ್ಟು ಖಚಿತವಾಗಿದ್ದರೆಂದರೆ, ಆರೋಪಿಗಳ ಪಟ್ಟಿಯಲ್ಲಿ ಅವರ ಹೆಸರನ್ನೂ ಸೇರಿಸಿದ್ದರು. ಈ ಕುರಿತಾಗಿ ಜವಹರ್ ಲಾಲ್ ನೆಹರೂ ಬಳಿ ಮಾತನಾಡಿದ ಪಟೇಲ್ “ಸಾವರ್ಕರ್ ನಾಯಕತ್ವದಲ್ಲಿ ಹಿಂದೂ ಮಹಾಸಭಾದ ಹುಚ್ಚು ತಂಡ ನಡೆಸಿದ ಷಡ್ಯಂತ್ರ ಮತ್ತು ಹತ್ಯೆ,” ಎಂದು ಹೇಳಿದ್ದರು. ಮೇ 6, 1948ರಲ್ಲಿ ಹಿಂದೂ ಮಹಾಸಭಾ ನಾಯಕ ಶ್ಯಾಮ ಪ್ರಸಾದ್ ಮುಖರ್ಜಿ ಅವರಿಗೆ ಸರ್ದಾರ್ ಪಟೇಲ್ ಪತ್ರ ಬರೆದಿದ್ದರು. ಆ ಪತ್ರದ ಸಾರಾಂಶ ಹೀಗಿದೆ, “ಗಾಂಧಿ ಹತ್ಯೆಯ ಬಳಿಕ ತುಂಬಾ ಜನ ಹಿಂದೂ ಸಭಾ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿ ಸಿಹಿ ಹಂಚಿದ್ದಾರೆ. ಗಾಂಧಿ ಹತ್ಯೆಯ ಕೆಲವೇ ತಿಂಗುಳಗಳ ಹಿಂದೆ ಹಿಂದೂ ಮಹಾಸಭಾ ವಕ್ತಾರರಾದ ಮಹಾಂತ ದಿಗ್ವಿಜಯ್ ನಾಥ್, ರಾಮ್ ಸಿಂಗ್ ಮತ್ತು ದೇಶಪಾಂಡೆ ಅವರು ಮಾಡಿರುವಂತಹ ಕೋಮು ಪ್ರಚೋದಿತ ಭಾಷಣಗಳು ದೇಶದ ಭದ್ರತೆಗೆ ಮಾರಕ. ಇದೇ ನಿಯಮ ಆರ್ ಎಸ್ ಎಸ್’ಗೂ ಅನ್ವಯಿಸುತ್ತದೆ. ಆರ್ ಎಸ್ಎಸ್ ಜೊತೆ ಇರುವ ಹೆಚ್ಚುವರಿ ಅಪರಾಯ ಏನೆಂದರೆ, ಅದೊಂದು ಮಿಲಿಟರಿ ಅಥವಾ ಅರೆ ಮಿಲಿಟರಿ ಗುಂಪಾಗಿ ಕಾರ್ಯನಿರ್ವಹಿಸುತ್ತದೆ.” ಈ ರೀತಿ ಆರ್ ಎಸ್ ಎಸ್ ಮತ್ತು ಹಿಂದೂ ಮಹಾಸಭಾ ದೇಶದ ಭದ್ರತೆಗೇ ಅಪಾಯ ಉಂಟುಮಾಡುವ ಸಂಘಟನೆಗಳು ಎಂದು ಸರ್ದಾರ್ ಪಟೇಲ್ ಹೇಳಿರುವಾಗ, ಅವರನ್ನೇ ತಮ್ಮ ಮಡಿಲಿಗೆ ಹಾಕಿಕೊಂಡು ಅಪ್ರತಿಮ ದೇಶಭಕ್ತರಂತೆ ಬೃಹನ್ನಾಟಕವಾಡುತ್ತಿರುವ ಸಂಘಪರಿವಾದರ ನಾಯಕರು ಈಗ ಗಾಂಧಿ ಹತ್ಯೆ ಆರೋಪಿ ಸಾವರ್ಕರ್’ನಿಗೆ ದೇಶಭಕ್ತ, ಸ್ವಾತಂತ್ರ್ಯ ಹೋರಾಟಗಾರ ಎಂಬ ಬಿರುದನ್ನು ನೀಡಲು ಹೊರಟಿದೆ. ಒಂದು ವೇಳೆ ಈ ಸಂದರ್ಭದಲ್ಲಿ ಸರ್ದಾರ್ ಪಟೇಲ್ ಬದುಕಿದ್ದರೆ ಏನನ್ನುತ್ತಿದ್ದರೋ ಏನೋ…
Read moreDetails'ಹರ್ ಘರ್ ತಿರಂಗಾ' ಅಭಿಯಾನವು ಯಶಸ್ವಿಯಾಗಿದೆ. ಮನೆ ಮನೆಗಳಲ್ಲಿ ತಿರಂಗ ಹಾರಾಡುತ್ತಿವೆ. ಒಕ್ಕೂಟ ಸರ್ಕಾರವೂ ಪ್ರತಿ ಮನೆಗಳಲ್ಲಿ ತ್ರಿವರ್ಣಗಳನ್ನು ಹಾರಿಸಲು ಅಥವಾ ಪ್ರದರ್ಶಿಸಲು ಜನರಿಗೆ ಕರೆ ಕೊಟ್ಟಿತ್ತು....
Read moreDetailsಇಂದು ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಬಹಳ ವಿಜೃಂಭಣೆಯಿಂದ ಆಚರಿಸುತ್ತಿದೆ. ಆಗಸ್ಟ್ 15, 1947ರಂದು ಹುಟ್ಟಿದ ಹೊಸ ದೇಶಕ್ಕೆ ಇಂದು 75ರ ಸಂಭ್ರಮ. ಹಳೆಯ ಘಟನೆಗಳನ್ನು ಮೆಲುಕು...
Read moreDetailsದೇಶದ ಮೊದಲ ಪ್ರಧಾನಿ ಹಾಗೂ ಸ್ವಾತಂತ್ರ್ಯ ಹೋರಾಟಗಾರ ಜವಾಹರಲಾಲ್ ನೆಹರು ಅವರ ವಿರುದ್ಧ ಬಿಜೆಪಿ ಹಾಗೂ ಆರ್ ಎಸ್ ಎಸ್ ಅಸಮಾಧಾನ ಮುಂದುವರಿದಿದ್ದು, ಅವರ ಹೆಸರಿನಲ್ಲಿ ನಡೆಯುತ್ತಿರುವ...
Read moreDetailsಸರ್ಕಾರಿ ಯೋಜನೆಗಳನ್ನು ನೇರವಾಗಿ ಫಲಾನುಭವಿಗಳಿಗೆ ತಲುಪಿಸುವ ಉದ್ದೇಶದಿಂದ ಭಾರತದಲ್ಲಿ 2009 ರಲ್ಲಿ ಆಧಾರ್ ಅನ್ನು ಪರಿಚಯಿಸಲಾಯಿತು. ಈ ಕಾರ್ಡ್ಗಳು ವಿಶಿಷ್ಟ ಗುರುತಿನ ಸಂಖ್ಯೆಯನ್ನು ಹೊಂದಿರುತ್ತವೆ, ಮತ್ತು ಫೋಟೋ,...
Read moreDetailsಹೊಟ್ಟೆ ನೋವು ಎಂದು ಆಸ್ಪತ್ರೆಗೆ ಬಂದ 36 ವರ್ಷದ ವ್ಯಕ್ತಿಯೊಬ್ಬನ ಹೊಟ್ಟೆಯಲ್ಲಿ 1 ರೂಪಾಯಿಯ 63 ನಾಣ್ಯಗಳನ್ನು ಕಂಡು ವೈದ್ಯರೇ ಬೆಚ್ಚಿಬಿದ್ದ ಘಟನೆ ರಾಜಸ್ಥಾನದ ಜೋಧ್‍ಪುರದಲ್ಲಿ ನಡೆದಿದೆ....
Read moreDetailsಗೂಗಲ್ ಸ್ಟ್ರೀಟ್ ವ್ಯೂ ಎಂಬ ವಿಶೇಷ ಸೌಲಭ್ಯವು ಇದೀಗ ಭಾರತಕ್ಕೂ ಕಾಲಿಟ್ಟಿದ್ದು ದೇಶದ 10 ನಗರಗಳಲ್ಲಿ ಈ ಸೇವೆ ಇದೀಗ ಪ್ರಾರಂಭಗೊಂಡಿದ್ದು ವರ್ಷಾಂತ್ಯದಲ್ಲಿ 50 ನಗರಗಳಿಗೆ ಈ...
Read moreDetailsಪೊಲೀಸರು ಕರ್ತವ್ಯಕ್ಕೆ ಹೆಸರಾದವರು. ಕಟ್ಟುನಿಟ್ಟಿನ ಆಡಳಿತ ನಡೆಸುವ ಮೂಲಕ ಸಾರ್ವಜನಿಕರ ಆಕ್ರೋಶಕ್ಕೂ ಗುರಿಯಾಗುತ್ತಾರೆ. ಅದೇ ರೀತಿ ಮಾನವೀಯತೆ ಮೆರೆಯುವ ಮೂಲಕ ಹೃದಯಗೆದ್ದ ಹಲವಾರು ಉದಾಹರಣೆಗಳು ಕೂಡ ಇವೆ....
Read moreDetailsಸಾಮಾನ್ಯವಾಗಿ ಹುಟ್ಟು ಹಬ್ಬ ಆಚರಗಳಿಂದ ಪ್ರತಿಷ್ಟೆಯ ಪ್ರಶ್ನೆಯಾಗಿದೆ. ಅದ್ಧೂರಿ ಹುಟ್ಟುಹಬ್ಬ ಆಚರಿಸೋದು ತಮ್ಮ ಘನತೆ ಹೆಚ್ಚಿಸುತ್ತದೆ ಎಂದುಕೊಂಡವರೂ ಇದ್ದಾರೆ. ಇತ್ತಿಚೆಗೆ ತನ್ನ ಸಾಕು ನಾಯಿಯ ಬರ್ತಡೆ ಮಾಡಿ...
Read moreDetailsಹುಬ್ಬಳ್ಳಿ ಸೇರಿದಂತೆ ಉತ್ತರ ಕರ್ನಾಟಕದಲ್ಲಿ ಮಣ್ಣೇತ್ತಿನ ಅಮವಾಸ್ಯೆ ಅಂಗವಾಗಿ ಬಸವಣ್ಣ ಮೂರ್ತಿಗಳ ಮಾರಾಟ ಬಲು ಜೋರಾಗಿದೆ. ಮಣ್ಣು, ಎತ್ತುಗಳು ರೈತರ ಜೀವನಾಡಿ. ಎತ್ತುಗಳ ಸಹಾಯದಿಂದ ಬಿತ್ತುವ ರೈತರಿಗೆ,...
Read moreDetailsವಿಚ್ಛೇದನ ಪಡೆದು ದೂರ ಆಗಿದ್ದ ದಂಪತಿ ಇಳಿ ವಯಸ್ಸಿನಲ್ಲಿ ಅಂದರೆ ಸುಮಾರು 52 ವರ್ಷಗಳ ನಂತರ ಮತ್ತೆ ಒಂದಾದ ಅಪರೂಪದ ಘಟನೆ ಧಾರವಾಡದಲ್ಲಿ ನಡೆದಿದೆ. 85 ವರ್ಷದ...
Read moreDetailsಬೆಳಗಾವಿಯ ವ್ಯಕ್ತಿಯೊಬ್ಬರು 4000 ಅತಿಥಿಗಳನ್ನು ಕರೆದು 100 ಕೆಜಿ ತೂಕದ ಕೇಕ್ ತರಿಸಿ ತನ್ನ ಸಾಕು ನಾಯಿ ಬರ್ತಡೆಯನ್ನು ಭರ್ಜರಿಯಾಗಿ ಆಚರಿಸಿದ್ದಾರೆ. ಶಿವಪ್ಪ ಯಲ್ಲಪ್ಪ ಮಾರಾಡಿ ಎಂಬುವವರು...
Read moreDetailsಬ್ಯಾಕ್ಟಿರಿಯಾ ಅಂದರೆ ಕಣ್ಣಿಗೆ ಕಾಣದಷ್ಟು ಚಿಕ್ಕದಾಗಿರುತ್ತದೆ. ಕೆಲವು ಬ್ಯಾಕ್ಟಿರಿಯಾ ಕಾಯಿಲೆಗಳಿಗೆ ಕಾರಣವಾದರೆ, ಇನ್ನು ಕೆಲವು ಆರೋಗ್ಯಕಾರಿ. ಆದರೆ ಕಣ್ಣಿಗೆ ಕಾಣದಷ್ಟು ಚಿಕ್ಕದಾಗಿರುವ ಬ್ಯಾಕ್ಟಿರಿಯಾ ಇದೇ ಮೊದಲ ಬಾರಿಗೆ...
Read moreDetailsಒಂದೆಡೆ ಭಾರತದಲ್ಲಿ, ಗಿಗ್ ಆರ್ಥಿಕತೆ ಸೃಷ್ಟಿಸಿರುವ ಸವಾಲುಗಳ ಬಗ್ಗೆ ಚರ್ಚೆಯಾಗುತ್ತಿದ್ದರೆ ಇನ್ನೊಂದೆಡೆ ಇದೇ ಆರ್ಥಿಕತೆ ಸೃಷ್ಟಿಸಿರುವ ಉದ್ಯೋಗಾವಕಾಶಗಳ ಬಗ್ಗೆ ಚರ್ಚೆಯಾಗುತ್ತಿದೆ. ಇದರ ಮಧ್ಯೆ ಚೈನ್ನೈನ ಗಣೇಶ್ ಮುರುಗನ್...
Read moreDetailsಔಷಧ ಮತ್ತು ಸೌಂದರ್ಯವರ್ಧಕ ಉತ್ಪನ್ನಗಳ ಕ್ಷೇತ್ರದಲ್ಲಿ ಕತ್ತೆ ಹಾಲನ್ನು ವ್ಯಾಪಕವಾಗಿ ಬಳಸಲಾಗುತ್ತದೆ. ಆದರೆ ಭಾರತದ ಮಟ್ಟಿಗೆ ಹಾಲಿನ ಉದ್ಯಮದಲ್ಲಿ ಕತ್ತೆಯ ಹಾಲು ಎನ್ನುವುದು ಬಹುತೇಕ ಅಪರಿಚಿತವೇ. ದನದ...
Read moreDetailsಯುರೋಪಿಯನ್ ಯೂನಿಯನ್ ಆಡಳಿತಾಧಿಕಾರಿಗಳು ತಮ್ಮ ಅಡಿಯಲ್ಲಿ ಬರುವ ಎಲ್ಲಾ ದೇಶಗಳಲ್ಲಿ ಮಾರಾಟವಾಗುವ ಮೊಬೈಲ್ ಮತ್ತು ಎಲೆಕ್ಟ್ರಾನಿಕ್ ಸಾಧನಗಳು 2024 ರ ಹೊತ್ತಿಗೆ USB-C ಸಂಪರ್ಕ ಪೋರ್ಟ್ ಹೊಂದಿರಲೇಬೇಕು...
Read moreDetailsನಮ್ಮ ಸುತ್ತಲಿನ ವಾತಾವರಣವನ್ನೂ ಮೀರಿದ ವಿಶಾಲ ಪ್ರಪಂಚದ ಅರಿವು ಅತ್ಯವಶ್ಯ
Read moreDetailsಪ್ರೀತಿಗಾಗಿ ಏಳು ಸಾಗರಗಳನ್ನು ದಾಟಿ ಹೋದ, ವಿವಿಧ ಸವಾಲುಗಳನ್ನು ಸ್ವೀಕರಿಸಿ ಪ್ರೀತಿ ಪಡೆದ, ಯುದ್ಧ ಮಾಡಿ ಗೆದ್ದು ಪ್ರೇಮವನ್ನು ತಮ್ಮದಾಗಿಸಿಕೊಂಡ ಹಲವಾರು ಪುರಾಣ ಕಥನಗಳನ್ನು, ನಾಟಕಗಳನ್ನು, ರೊಮ್ಯಾಂಟಿಕ್...
Read moreDetailsತ್ಯಾಗಕ್ಕೆ ಮತ್ತೊಂದು ಹೆಸರೇ ಅಮ್ಮ. ಅಮ್ಮ ಮಕ್ಕಳಿಗಾಗಿ ಏನೆಲ್ಲಾ ತ್ಯಾಗ ಮಾಡುತ್ತಾಳೆ ಅಂದರೆ ಅದು ಆಕೆಗಷ್ಟೇ ಗೊತ್ತಿರುತ್ತೆ. ಅದನ್ನು ಊಹಿಸಲು ಕೂಡ ಯಾರಿಂದಲೂ ಸಾಧ್ಯವಿಲ್ಲ. ಅಂತಹ ಊಹೆಗೂ...
Read moreDetailsಕರಾವಳಿಯಲ್ಲಿ ಮುಸ್ಲಿಂ (ಬ್ಯಾರಿ) ವ್ಯಾಪಾರಿ ಕಟ್ಟಿದ ಬಪ್ಪನಾಡು ದೇವಿಯ ಕ್ಷೇತ್ರದ ಕತೆ ಜನಜನಿತವಾದದ್ದು ಯಕ್ಷಗಾನದ ಮೂಲಕ. ಇದೀಗ ಹಿಂದುತ್ವ ರಾಜಕಾರಣವು ಯಕ್ಷಗಾನದಲ್ಲೂ ಕರಾಳ ಪ್ರಭಾವ ಬೀರಿದ್ದು, ಚರಿತ್ರೆ...
Read moreDetails© 2024 www.pratidhvani.com - Analytical News, Opinions, Investigative Stories and Videos in Kannada