Pratidhvani
Advertisement
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ
No Result
View All Result
Pratidhvani
No Result
View All Result

ಮಗಳಿಗಾಗಿ  30 ವರ್ಷ ಗಂಡಸಿನ ವೇಷದಲ್ಲಿ ಬದುಕಿದ ದಿಟ್ಟ ಮಹಿಳೆ!

ಪ್ರತಿಧ್ವನಿ

ಪ್ರತಿಧ್ವನಿ

May 14, 2022
Share on FacebookShare on Twitter

ತ್ಯಾಗಕ್ಕೆ ಮತ್ತೊಂದು ಹೆಸರೇ ಅಮ್ಮ. ಅಮ್ಮ ಮಕ್ಕಳಿಗಾಗಿ ಏನೆಲ್ಲಾ ತ್ಯಾಗ ಮಾಡುತ್ತಾಳೆ ಅಂದರೆ ಅದು ಆಕೆಗಷ್ಟೇ ಗೊತ್ತಿರುತ್ತೆ. ಅದನ್ನು ಊಹಿಸಲು ಕೂಡ ಯಾರಿಂದಲೂ ಸಾಧ್ಯವಿಲ್ಲ. ಅಂತಹ ಊಹೆಗೂ ನಿಲುಕದಂತೆ ಮಹಿಳೆಯೊಬ್ಬರು 30 ವರ್ಷ ಗಂಡಸಿನ ವೇಷದಲ್ಲಿ ಬದುಕಿದ ಘಟನೆಯೊಂದು ಬೆಳಕಿಗೆ ಬಂದಿದೆ.

ಹೆಚ್ಚು ಓದಿದ ಸ್ಟೋರಿಗಳು

ಫ್ಯಾಕ್ಟ್ ಚೆಕ್ಕರ್ ಆದ ಬೆಂಗಳೂರಿನ ಟೆಕ್ಕಿ: ಜುಬೈರ್ ಬದುಕಿನ ಸ್ಪೂರ್ತಿದಾಯಕ ಕಥೆ

ಎತ್ತಿಗೂ ಜನ್ಮದಿನ: ರೈತ ಕುಟುಂಬದಲ್ಲಿ ಸಂಭ್ರಮ

ಗೋಧ್ರಾ ಹತ್ಯಾಕಾಂಡ ಪ್ರಕರಣ: ಆರೋಪ ಸಾಬೀತಾಗದಿದ್ದರೆ ದೂರು ನೀಡಿದವರನ್ನು ಶಿಕ್ಷಿಸುವುದು ಸರಿಯೇ?

ತಮಿಳುನಾಡಿನ ತೂತುಕುಡಿ ಜಿಲ್ಲೆಯ ತೂತುಕುಡಿ ಎಂಬ ಗ್ರಾಮದ ಪೀಚಿಯಮ್ಮಾಳ್‌ ಎಂಬ ಮಹಿಳೆ 30 ವರ್ಷಗಳ ಕಾಲ ಗಂಡಸರಂತೆ ವೇಷ ಧರಿಸಿ ಜೀವನ ನಡೆಸಿ ಸೈ ಎನಿಸಿಕೊಂಡಿದ್ದಾರೆ.

ಕೇವಲ ತನ್ನ ಮಗಳಿಗಾಗಿ ಪೀಚಿಯಮ್ಮಾಳ್‌ ಗಂಡಸರಂತೆ ಬದುಕಿದ್ದೂ ಅಲ್ಲದೇ ಮುತ್ತು ಎಂಬ ಹೆಸರಿನಲ್ಲಿ ಯಾರಿಗೂ ಗೊತ್ತಾಗದಂತೆ ಗಂಡಸಿನ ವೇಷ ಧರಿಸಿದ್ದೂ ಮಾತ್ರವಲ್ಲ, ಗಂಡಸರಂತೆ ಹೊರಗಿನ ಸಮಾಜದಲ್ಲಿ ಜೀವನ ಸಾಗಿಸಿದ್ದಾರೆ.

ಪೀಚಿಯಮ್ಮಾಳ್‌ 20 ವರ್ಷದವರಿದ್ದಾಗಲೇ ಮದುವೆ ಆಗಿತ್ತು. ಮದುವೆ ಆಗಿ 15 ದಿನಕ್ಕೇ ಗಂಡ ಹೃದಯಾಘಾತದಿಂದ ಮೃತಪಟ್ಟರು. ಇದೇ ವೇಳೆ ಗರ್ಭಿಣಿಯಾಗಿದ್ದ ಪೀಚಿಯಮ್ಮಾಳ್‌ ಹೆಣ್ಣು ಮಗುವಿಗೆ ಜನ್ಮ ನೀಡಿದಳು.

ಮಗು ಜನಿಸಿದ ನಂತರ ಆಕೆಯ ಬದುಕು ಕಟ್ಟಲು ಹಾಗೂ ಜೀವನ ರೂಪಿಸಿಕೊಳ್ಳಲು ಪೀಚಿಯಮ್ಮಾಳ್‌ ಕೆಲಸಕ್ಕೆ ಹೋಗಲು ಪ್ರಾರಂಭಿಸಿದರು. ಆದರೆ ಯೌವ್ವನದಲ್ಲಿದ್ದ ಆಕೆಯ ಬಗ್ಗೆ ಜನರು ದಿನಕ್ಕೊಂದು ಮಾತುಗಳನ್ನು ಆಡತೊಡಗಿದರು. ಅಲ್ಲದೇ ಕೆಲಸದ ಜಾಗದಲ್ಲಿ ಕಿರುಕುಳ ನೀಡಲು ಆರಂಭಿಸಿದರು.

ಇದರಿಂದ ಬೇಸತ್ತ ಪೀಚಿಯಮ್ಮಾಳ್‌ ಮಗಳಿಗಾಗಿ ಗಂಡಸರ ವೇಷ ಧರಿಸಲು ನಿರ್ಧರಿಸಿ ತಲೆ ಕೂದಲು ಕತ್ತರಿಸಿಕೊಂಡು ಲುಂಗಿ ಧರಿಸಿ, ಶರ್ಟ್‌ ಧರಿಸಿ ಗಂಡಸರಂತೆ ಓಡಾಡಲು ಶುರು ಮಾಡಿದರು. ಯಾರೂ ಹೆಣ್ಣು ಎಂದು ಗುರುತಿಸಲಾಗದಷ್ಟು ಬದಲಾದ ಪೀಚಿಯಮ್ಮಾಳ್‌, ಚೆನ್ನೈ ಸೇರಿದಂತೆ ಹಲವೆಡೆ ಹೋಟೆಲ್‌, ಚಹಾ ಅಂಗಡಿ ಮುಂತಾದೆಡೆ ಕೆಲಸ ಮಾಡಿ ಜೀವನ ಸಾಗಿಸಿದರು.

ಮುತ್ತು ಬರು ಬರುತ್ತಾ ಮುತ್ತು ಮಾಸ್ಟರ್‌ ಎಂದೇ ಖ್ಯಾತಿ ಗಳಿಸಿದ್ದು, ಪರೋಟಾ ಮತ್ತು ಟೀ ಮಾಡುವುದರಲ್ಲಿ ಫೇಮಸ್‌ ಆದರು.

ತನ್ನ ಜೀವನದ ಬಗ್ಗೆ ಮಾತನಾಡಿದ ಪೀಚಿಯಮ್ಮಾಳ್‌, ನಾನು ಪೇಂಟರ್‌,  ಹೋಟೆಲ್‌ ಸೇರಿದಂತೆ ಎಲ್ಲಾ ರೀತಿಯ ಕೆಲಸ ಮಾಡಿದ್ದೇನೆ. ನನ್ನನ್ನು ಮುತ್ತು ಮಾಸ್ಟರ್‌ ಎಂದೇ ಎಲ್ಲರೂ ಗುರುತಿಸುತ್ತಾರೆ. ಮಗಳ ಜೀವನದ ಭದ್ರತೆಗಾಗಿ ಪ್ರತಿಯೊಂದು ಪೈಸೆ ಕೂಡಿಟಿದ್ದೇನೆ. ಅಷ್ಟೇ ಏಕೆ ನನ್ನ ಆಧಾರ್‌ ಕಾರ್ಡ್‌, ರೇಷನ್‌ ಕಾರ್ಡ್‌ ಎಲ್ಲದರಲ್ಲೂ ಮುತ್ತು ಎಂದೇ ಗುರುತಿಸುತ್ತಾರೆ ಎಂದು ಹೇಳಿದ್ದಾರೆ.

ಈಗ ಪೀಚಿಯಮ್ಮಾಳ್‌ ಗೆ ೫೭ ವರ್ಷ. ಮಗಳಿಗೆ ಮದುವೆ ಆಗಿ ಗಂಡನ ಮನೆ ಸೇರಿದ್ದಾಳೆ. ಇಷ್ಟು ದಿನ ನಾನು ನಡೆಸಿದ ಜೀವನ ಸಾರ್ಥಕ ಎನಿಸಿದೆ. ನನ್ನ ಜೀವನದ ಕೊನೆಯವರೆಗೂ ಮುತ್ತು ಆಗಿಯೇ ಬದಕುಲು ಬಯಸುತ್ತೇನೆ. ಸರಕಾರದಿಂದ ಪಿಂಚಣಿ ಸಿಕ್ಕರೆ ನಾನು ಇದೇ ಜೀವನ ಮುಂದುವರಿಸುತ್ತೇನೆ. ಏಕೆಂದರೆ ಸರಕಾರದ ಹಲವಾರು ಸವಲತ್ತುಗಳಿಂದ ನಾನು ವಂಚಿತಳಾಗಿದ್ದೇನೆ ಎಂದು ಪೀಚಿಯಮ್ಮಾಳ್‌ ಹೇಳುತ್ತಾರೆ.

RS 500
RS 1500

SCAN HERE

don't miss it !

ಎರಡು ತಿಂಗಳ ಬಳಿಕ ನಿರ್ಧಾರ ಪ್ರಕಟ : ಜಿ.ಟಿ. ದೇವೇಗೌಡ
ದೇಶ

ಎರಡು ತಿಂಗಳ ಬಳಿಕ ನಿರ್ಧಾರ ಪ್ರಕಟ : ಜಿ.ಟಿ. ದೇವೇಗೌಡ

by ಪ್ರತಿಧ್ವನಿ
July 4, 2022
WHO Report | ‘ಮೋದಿ ಸುಳ್ಳು ಹೇಳಬಹುದು ಆದರೆ ವಿಜ್ಞಾನ ಸುಳ್ಳು ಹೇಳುವುದಿಲ್ಲ’ : ರಾಹುಲ್ ಗಾಂಧಿ
ದೇಶ

‘ಆಳುವ ಸರ್ಕಾರ ಈ ವಾತಾವರಣವನ್ನು ಸೃಷ್ಟಿಸಿದೆ’ : ರಾಹುಲ್ ಗಾಂಧಿ

by ಪ್ರತಿಧ್ವನಿ
July 1, 2022
ಸಂವಿಧಾನಕ್ಕೆ ಮಾತ್ರ ನ್ಯಾಯಾಂಗ ಉತ್ತರ : ರಾಜಕೀಯ ಪಕ್ಷಗಳ ವಿರುದ್ಧ ಸಿಜೆಐ ರಮಣ ವಾಗ್ದಾಳಿ
ದೇಶ

ಸಂವಿಧಾನಕ್ಕೆ ಮಾತ್ರ ನ್ಯಾಯಾಂಗ ಉತ್ತರ : ರಾಜಕೀಯ ಪಕ್ಷಗಳ ವಿರುದ್ಧ ಸಿಜೆಐ ರಮಣ ವಾಗ್ದಾಳಿ

by ಪ್ರತಿಧ್ವನಿ
July 3, 2022
ಸಿಕ್ಕಿಂನಲ್ಲಿ ಆಸಿಡ್‌ ನೊಣದ ಹಾವಳಿ: ಈ ನೊಣದಿಂದ ಉಂಟಾಗಬಹುದು ಕುರುಡುತನ, ಚರ್ಮದ ಸೋಂಕು!
ದೇಶ

ಸಿಕ್ಕಿಂನಲ್ಲಿ ಆಸಿಡ್‌ ನೊಣದ ಹಾವಳಿ: ಈ ನೊಣದಿಂದ ಉಂಟಾಗಬಹುದು ಕುರುಡುತನ, ಚರ್ಮದ ಸೋಂಕು!

by ಪ್ರತಿಧ್ವನಿ
July 6, 2022
ವಾಸ್ತುತಜ್ಞ ಚಂದ್ರಶೇಖರ ಗುರೂಜಿ ಅವರ ಭೀಕರ ಹತ್ಯೆ ಈ ಕೆಲವು ಸಾಲುಗಳನ್ನು ಹೊರಹೊಮ್ಮಿಸಿದೆ
ಕರ್ನಾಟಕ

ವಾಸ್ತುತಜ್ಞ ಚಂದ್ರಶೇಖರ ಗುರೂಜಿ ಅವರ ಭೀಕರ ಹತ್ಯೆ ಈ ಕೆಲವು ಸಾಲುಗಳನ್ನು ಹೊರಹೊಮ್ಮಿಸಿದೆ

by ನಾ ದಿವಾಕರ
July 5, 2022
Next Post
ಮುಂಬೈ ನಂತರ ಗುಜರಾತ್‌ ನಲ್ಲಿ ಎಕ್ಸ್‌ ವಿ ವೈರಸ್‌ ಪತ್ತೆ!

ರಾಜ್ಯದಲ್ಲಿಂದು 103 ಕೊರೊನಾ ಸೋಂಕು ದೃಢ

ಕೆಜಿಎಫ್-‌ 2 ಮೊದಲ ದಿನವೇ 200 ಕೋಟಿ ದಾಖಲೆ ಸಂಗ್ರಹ?

ಅಕ್ಟೋಬರ್ ನಲ್ಲಿ ಕೆಜಿಎಫ್-3 ಶೂಟಿಂಗ್ ಶುರು: ನಿರ್ಮಾಪಕರು ಹೇಳಿದ್ದೇನು?

ರಸೆಲ್‌ ದಾಳಿಗೆ ಕುಸಿದ ಗುಜರಾತ್‌ ಗೆ ಹಾರ್ದಿಕ್‌ ಅರ್ಧಶತಕದ ನೆರವು!

ಕೆಕೆಆರ್ ಗೆಲುವಿನಲ್ಲಿ ಮಿಂಚಿದ ರಸೆಲ್: ಹೈದರಾಬಾದ್ ಗೆ 54 ರನ್ ಆಘಾತ

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist