ಪಂಜಾಬ್ ಬೆನ್ನಲ್ಲೀಗ ರಾಜಸ್ಥಾನ ಕಾಂಗ್ರೆಸ್‌ನಲ್ಲಿಯೂ ಬಂಡಾಯ ಭುಗಿಲೆದ್ದಿದೆ. ಹೀಗಾಗಿ ನ್ಯಾಷನಲ್ ಕಾಂಗ್ರೆಸ್ ಹೈಕಮಾಂಡ್ ಈಗ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಮತ್ತು ಸಚಿನ್ ಪೈಲಟ್ ನಡುವಣ ಭಿನ್ನಾಭಿಪ್ರಾಯನ್ನು...
Read moreDetailsಈಗ ಪೆಗಾಸಸ್ ಎಂಬ ಸಾಫ್ಟ್ವೇರ್ ಎಂಬ ‘ಅಸ್ತ್ರ’ದ ಬಗ್ಗೆ ಚರ್ಚೆ ನಡೆಯುತ್ತಿದೆ. ಇದರ ಹಿಂದೆ UAPA ಎಂಬ ಕಾಯಿದೆಯಿದೆ. ಇದಕ್ಕೂ ಎನ್ಐಎ (ರಾಷ್ಟ್ರೀಯ ತನಿಖಾ ದಳ)ಗೂ ಲಿಂಕ್...
Read moreDetailsದಕ್ಷಿಣ ಆಫ್ರಿಕಾದ ಕೆಲವು ಭಾಗಗಳಲ್ಲಿ ಭಾರತೀಯ ಸಮುದಾಯಗಳ ಮೇಲೆ(ಇತರ ಸಮುದಾಯಗಳ ಮೇಲೂ ಸಹ) ನಡೆಯುತ್ತಿರುವ ಅಮಾನುಷ ದಾಳಿಗಳು ಮತ್ತು ಲೂಟಿಗಳು ಕ್ವಾಝುಲು-ನಟಾಲ್ ಪ್ರಾಂತ್ಯದ ಡರ್ಬನ್‌ನ ಫೀನಿಕ್ಸ್ ಪಟ್ಟಣ...
Read moreDetails2024ರ ಆಂಧ್ರಪ್ರದೇಶ ವಿಧಾನಸಭಾ ಚುನಾವಣೆಗೆ ಈಗಿನಿಂದಲೇ ಪವನ್ ಕಲ್ಯಾಣ್ ನೇತೃತ್ವದ ಜನಸೇನಾ ಮುಂದಾಗಿದೆ. ಈ ಸಾರ್ವತ್ರಿಕ ಚುನಾವಣೆಗೆ ಇನ್ನೂ ಮೂರು ವರ್ಷಗಳು ಇರುವಾಗಲೇ ಬಿಜೆಪಿಯೊಂದಿಗೆ ಮೈತ್ರಿಯಾಗಿ ಭಾರೀ...
Read moreDetailsಪಂಜಾಬ್ ಕಾಂಗ್ರೆಸ್’ನಲ್ಲಿನ ಭಿನ್ನಾಭಿಪ್ರಾಯ ಅಲ್ಪ ಮಟ್ಟಿಗೆ ತಗ್ಗಿದ ಬೆನ್ನಲ್ಲೇ, ರಾಜಸ್ಥಾನದಲ್ಲಿ ಆಂತರಿಕ ಕಲಹ ಆರಂಭವಾಗಿದೆ. ಕಳೆದ ವರ್ಷ ಇನ್ನೇನು ಸರ್ಕಾರ ಉರುಳಿಹೋಯಿತು ಎಂದು ಅಂದುಕೊಳ್ಳುವಷ್ಟರಲ್ಲಿ ಸಂದಾನ ಯಶಸ್ವಿಯಾಗಿತ್ತು....
Read moreDetailsಗೋವಾ ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನೇನು ಎಂಟು ತಿಂಗಳು ಮಾತ್ರ ಬಾಕಿ ಇದೆ. ಈ ಚುನಾವಣೆ ತಯಾರಿ ಹಿನ್ನೆಲೆಯಲ್ಲಿಯೇ ಇಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ...
Read moreDetailsನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಒಕ್ಕೂಟ ವ್ಯವಸ್ಥೆಯ ಮೇಲೆ ನಂಬಿಕೆ ಇಟ್ಟಿಲ್ಲ, ಒಕ್ಕೂಟ ವ್ಯವಸ್ಥೆಯ ತತ್ವಗಳನ್ನು ಪಾಲಿಸುತ್ತಿಲ್ಲ ಮಾತ್ರವಲ್ಲ ತನ್ನ ತಪ್ಪುಗಳನ್ನೂ ರಾಜ್ಯಗಳ ಮೇಲೆ ಹೊರಿಸಿ,...
Read moreDetailsಕಾಂಗ್ರೆಸ್ ನಾಯಕರ ದೂರವಾಣಿ ಕದ್ದಾಲಿಕೆ ಆರೋಪವನ್ನು ಮುಂದಿಟ್ಟುಕೊಂಡು ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕರು ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಗುರುವಾರ ಪ್ರತಿಭಟನೆ ನಡೆಸುತ್ತಿದ್ದರು ಈ ಪ್ರತಿಭಟನೆಯಲ್ಲಿ...
Read moreDetailsಬ್ರೆಜಿಲ್ ಮಾರುಕಟ್ಟೆಗೆ ತನ್ನ COVID-19 ಲಸಿಕೆಯಾದ ಕೋವಾಕ್ಸಿನ್‌ನನ್ನು ವಿತರಿಸಲು ಪ್ರೆಸಿಸಾ ಮೆಡಿಸಿಮೆಂಟೋಸ್ ಮತ್ತು ಎನ್ವಿಕ್ಸಿಯಾ ಫಾರ್ಮಾಸ್ಯುಟಿಕಲ್ಸ್ LL.C ಕಂಪೆನಿಗಳೊಂದಿಗೆ ಮಾಡಿಕೊಂಡಿದ್ದ ತಿಳುವಳಿಕೆಯ ಒಪ್ಪಂದವನ್ನು ಕೊನೆಗೊಳಿಸಲಾಗಿದೆ ಎಂದು ಭಾರತ್...
Read moreDetailsರಾಜ್ಯದಲ್ಲಿ ಮುಖ್ಯಮಂತ್ರಿಗಳ ಬದಲಾವಣೆ ವಿಚಾರ ಎಲ್ಲೆಡೆ ಚರ್ಚೆಯಾಗುತ್ತಿದ್ದರೆ, ಮತ್ತೊಂದೆಡೆ ಸಿಎಂ ಯಡಿಯೂರಪ್ಪ ರಾಜೀನಾಮೆ ನೀಡ್ತಿದ್ದಾರೆ ಎಂಬ ವಿಚಾರ ದಿನದಿಂದ ದಿನಕ್ಕೆ ಕಾವೇರಿರುತ್ತಿದೆ. ಈ ಕುರಿತು ಈಗ ಚಾಮರಾಜನಗರ...
Read moreDetailsಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ವಿರುದ್ಧ ಯಾವುದೇ ಆಧಾರರಹಿತ ಸುದ್ದಿ ಪ್ರಸಾರ ಮಾಡದಂತೆ ಟಿವಿ 5 ಕನ್ನಡಕ್ಕೆ ಆನೇಕಲ್ ನ್ಯಾಯಾಲಯ ಮಧ್ಯಂತರ ಆದೇಶ ನೀಡಿದೆ. ಸುದ್ದಿ...
Read moreDetailsಉತ್ತರ ಪ್ರದೇಶದಲ್ಲಿ ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ಅಭಿವೃದ್ದಿ ಕಾರ್ಯಕ್ರಮಗಳ ಶಿಲಾನ್ಯಾಸ ಜೋರಾಗಿಯೇ ಸಾಗಿದೆ. ಖುದ್ದು ಪ್ರಧಾನಮಂತ್ರಿಯೇ ಆಸಕ್ತಿವಹಿಸಿ ಶಿಲಾನ್ಯಾಸ ಕಾರ್ಯಕ್ರಮ ನೆರವೇರಿಸುತ್ತಿದ್ದಾರೆ. ಇತ್ತೀಚಿಗೆ ಸುಮಾರು ರೂ.744 ಕೋಟಿ ಮೊತ್ತದ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ ಮೋದಿ, “ಇಂದು ಉತ್ತರ ಪ್ರದೇಶ ವೈದ್ಯಕೀಯ ಮೂಲಭೂತ ಸೌಕರ್ಯ ಕ್ಷೇತ್ರದಲ್ಲಿ ಅದ್ಬುತವಾದ ಪ್ರಗತಿ ಕಾಣುತ್ತಿದೆ. ಗ್ರಾಮೀಣ ಆರೋಗ್ಯ ಕೇಂದ್ರಗಳು, ಏಮ್ಸ್ ಸಂಸ್ಥೆಗಳು ಸೇರಿದಂತೆ ಹಲವು ರೀತಿಯ ಅಭಿವೃದ್ದಿ ಕೆಲಸಗಳು ನಡೆದಿವೆ. ಕೇವಲ ನಾಲ್ಕು ವರ್ಷದ ಹಿಂದೆ ರಾಜ್ಯದಲ್ಲಿ ಒಂದು ಡಜನ್ (ಹನ್ನೆರಡು) ಮೆಡಿಕಲ್ ಕಾಲೇಜುಗಳಿದ್ದವು. ಈಗ ಅವುಗಳ ಸಂಖ್ಯೆ ನಾಲ್ಕು ಪಟ್ಟು ಹೆಚ್ಚಾಗಿದೆ. ಇನ್ನೂ ಅನೇಕ ಕಾಲೇಜುಗಳು ನಿರ್ಮಾಣ ಹಂತದಲ್ಲಿವೆ,” ಎಂದಿದ್ದರು. https://twitter.com/PIB_India/status/1415569916711735306 ಉತ್ತರ ಪ್ರದೇಶದಲ್ಲಿ ಕೇವಲ ಹನ್ನೆರಡು ಅಥವಾ ಅದಕ್ಕಿಂತ ಕಡಿಮೆ ಮೆಡಿಕಲ್ ಕಾಲೇಜುಗಳಿದ್ದವು ಎಂಬ ವಾದವನ್ನು ಮುಂದಿಟ್ಟಿದ್ದು ಪ್ರಧಾನಿ ನರೇಂದ್ರ ಮೋದಿಯವರಷ್ಟೇ ಅಲ್ಲ, ಇದಕ್ಕೂ ಮೊದಲು ಯೋಗಿ ಆದಿತ್ಯನಾಥ್ ಸರ್ಕಾರದ ಹಲವು ಉನ್ನತ ಮಟ್ಟದ ಅಧಿಕಾರಿಗಳು ಇದೇ ರೀತಿಯ ಹೇಳಿಕೆಗಳನ್ನು ನೀಡಿದ್ದಾರೆ. ಸುಳ್ಳನ್ನು ನೂರು ಬಾರಿ ಹೇಳಿದರೆ ಸತ್ಯವಾಗುತ್ತದೆ ಎಂಬ ಕಾರಣಕ್ಕೇನೋ, ವೈದ್ಯಕೀಯ ಕಾಲೇಜುಗಳ ಕುರಿತಾಗಿರುವ ಅಂಕಿ ಸಂಖ್ಯೆಗಳು ಉತ್ತರ ಪ್ರದೇಶದಲ್ಲಿ ಹಲವು ಬಾರಿ ಕೇಳಿ ಬಂದಿವೆ. ಆದರೆ, ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ನೀಡಿರುವ ಹಾಗೂ ಅಧಿಕೃತವಾಗಿರುವ ಇತರ ದಾಖಲೆಗಳು ಸತ್ಯವನ್ನು ತೆರೆದಿಟ್ಟಿವೆ. ಸರ್ಕಾರದ ಮೂರು ಅಧಿಕೃತ ದಾಖಲೆಗಳು ಸತ್ಯ ಏನೆಂದು ಹೇಳುತ್ತಿವೆ. ಸಂಸತ್ತಿನ ಗ್ರಂಥಾಲಯದಲ್ಲಿರುವ Status of Medical Education in India ಎಂಬ ದಾಖಲೆಯ ಪ್ರಕಾರ 2016-17ನೇ ಸಾಲಿನಲ್ಲಿ ಉತ್ತರ ಪ್ರದೇಶದಲ್ಲಿ 45 ಮೆಡಿಕಲ್ ಕಾಲೇಜುಗಳಿದ್ದವು. ಅವುಗಳಲ್ಲಿ 16 ಸರ್ಕಾರಿ 29 ಖಾಸಗಿ. 2016 ಜುಲೈ 22ರಂದು ಅಂದಿನ ಕೇಂದ್ರ ಆರೋಗ್ಯ ಇಲಾಖೆಯ ರಾಜ್ಯ ಸಚಿವರಾಗಿದ್ದ ಫಗ್ಗಾನ್ ಸಿಂಗ್ ಕುಲಾಸ್ತೆ ಅವರು ಲೋಕಸಭೆಯಲ್ಲಿ ನೀಡಿರುವ ಉತ್ತರದಲ್ಲಿ, ಭಾರತದಲ್ಲಿ 439 ಮೆಡಿಕಲ್ ಕಾಲೇಜುಗಳಿದ್ದರೆ, ಉತ್ತರ ಪ್ರದೇಶದಲ್ಲಿ 38 ಕಾಲೇಜುಗಳಿವೆ ಎಂದು ಹೇಳಿದ್ದರು. ಕೊನೆಯದಾಗಿ ಉತ್ತರ ಪ್ರದೇಶ ಸರ್ಕಾರದ ಅಡಿಯಲ್ಲಿರುವ ವೈದ್ಯಕೀಯ ಶಿಕ್ಷಣ ಹಾಗೂ ತರಬೇತಿ ನಿರ್ದೇಶನಾಲಯದ ದಾಖಲೆಯ ಪ್ರಕಾರ ...
Read moreDetailsಗುರುವಾರದಂದು ರೈತರನ್ನು ಅಪಮಾನಿಸಿದ್ದ ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ ಕೊನೆಗೂ ಕ್ಷಮೆ ಕೇಳಿದ್ದಾರೆ.ಇವರು ರೈತರಲ್ಲ, ಗೂಂಡಾಗಳು ಎಂದು ಹೇಳಿದ್ದ ಸಚಿವೆ, ತನ್ನ ಮಾತಿನಿಂದ ಯಾರಿಗಾದರೂ ನೋವಾಗಿದ್ದರೆ, ನಾನು ಕ್ಷಮೆ ಕೇಳುತ್ತೇನೆ ಎಂದು ಹೇಳಿದ್ದಾರೆ. ಜಂತರ್ ಮಂತರ್’ನಲ್ಲಿ ರೈತ ಸಂಸತ್ ನಡೆಯುತ್ತಿರುವಾಗ ಪತ್ರಕರ್ತರೊಬ್ಬರ ಮೇಲೆ ದಾಳಿ ನಡೆದಿದೆ ಎಂದು ಆರೋಪಿಸಿದ್ದ ಮೀನಾಕ್ಷಿ ಲೇಖಿ ಅವರು, ಪತ್ರಿಕಾಗೋಷ್ಠಿಯಲ್ಲಿ ರೈತರನ್ನು ಗೂಂಡಾಗಳೆಂದು ಕರೆದು ಅಪಮಾನಿಸಿದ್ದರು. ಈ ಹೇಳಿಕೆ ಬಹಿರಂಗಗೊಂಡ ಬೆನ್ನಲ್ಲೇ ಸಾಕಷ್ಟು ಜನರು ವಿರೋಧ ವ್ಯಕ್ತಪಡಿಸಿದ್ದರು. ಪಂಜಾಬ್ ಸಿಎಂ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರು “ಲೇಖಿ ಅವರಿಗೆ ರೈತರನ್ನು ಅಪಮಾನಿಸುವ ಯಾವ ಅಧಿಕಾರವೂ ಇಲ್ಲ. ರೈತರ ವಿರುದ್ದ ಈ ರಿತಿಯ ಹೇಳಿಕೆ ನೀಡಲು ಬಿಜೆಪಿಗೆ ಅಧಿಕಾರವೇ ಇಲ್ಲ,” ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದರು. ಭಾರತೀಯ ಕಿಸಾನ್ ಯೂನಿಯನ್ ಮುಖಂಡರಾಗಿರುವ ರಾಕೇಶ್ ಟಿಕಾಯತ್ ಅವರು ಮೀನಾಕ್ಷಿ ಲೇಖಿ ಹೇಳಿಕೆಯನ್ನು ಖಂಡಿಸಿ, ರೈತರು ಅನ್ನದಾತರು, ಗೂಂಡಾಗಳಲ್ಲ. ಏನೂ ಇಲ್ಲದೇ ಇರುವವರು ಗೂಂಡಾಗಳಾಗಬಹುದು. ರೈತರ ವಿರುದ್ದ ಈ ರೀತಿಯ ಹೇಳಿಕೆ ನಿಡುವುದು ಸರಿಯಲ್ಲ ಎಂದಿದ್ದರು. ಮತ್ತೊಬ್ಬ ರೈತ ನಾಯಕರಾಗಿರುವ ಶಿವಕುಮಾರ್ ಅವರು ಮಾತನಾಡಿ, ಮೀನಾಕ್ಷಿ ಲೇಖಿ 80 ಕೋಟಿ ರೈತರನ್ನು ಅಪಮಾನಿಸಿದ್ದಾರೆ. ನಾವು ಗೂಂಡಾಗಳಾದರೆ ನೀವು ನಾವು ಬೆಳೆದ ಅನ್ನವನ್ನು ತಿನ್ನುವುದು ಬಿಟ್ಟುಬಿಡಿ. ಅವರಿಗೆ ನಾಚಿಕೆಯಾಗಬೇಕು. ಲೇಖಿ ಅವರ ಹೇಳಿಕೆಯನ್ನು ಖಂಡಿಸಿ ನಾವು ರೈತ ಸಂಸತ್ ನಲ್ಲಿ ನಿರ್ಣಯ ಅಂಗೀಕಾರ ಮಾಡಿದ್ದೇವೆ, ಎಂದಿದ್ದಾರೆ. ಇದರೊಂದಿಗೆ, ಪತ್ರಕರ್ತರ ಮೇಲೆ ದಾಳಿ ನಡೆಸಿದವರ ವಿರುದ್ದ ಕಠಿಣ ಕ್ರಮಕ್ಕೂ ಒತ್ತಾಯಿಸಿದ್ದಾರೆ. ಇದಾದ ಬಳಿಕೆ ಮೆತ್ತಗಾಗಿರುವ ಸಚಿವೆ ಮೀನಾಕ್ಷಿ ಲೇಖಿ ಅವರು, “ನಾನು ಜನವರಿ 26ರಂದು ಕೆಂಪುಕೋಟೆಯಲ್ಲಿ ನಡೆದ ಘಟನೆ ಹಾಗೂ ಗುರುವಾರ ಪತ್ರಕರ್ತರ ಮೇಲಾದ ದಾಳಿಯನ್ನು ಉಲ್ಲೇಖಿಸಿ ಮಾತನಾಡುತ್ತಿದ್ದೆ. ಗೂಂಡಾಗಳಲ್ಲದೆ, ರೈತರು ಈ ರೀತಿಯ ಚಟುವಟಿಕೆಗಳಲ್ಲಿ ಭಾಗವಹಿಸಲು ಸಾಧ್ಯವಿಲ್ಲ ಎಂದು ಹೇಳಿದ್ದೆ. ನನ್ನ ಹೇಳಿಕೆಯನ್ನು ತಿರುಚಲಾಗಿದೆ. ಆದರೆ, ನನ್ನ ಹೇಳಿಕೆಯಿಂದ ರೈತರಿಗೆ ಅಥವಾ ಯಾರಿಗಾದರೂ ನೋವಾಗಿದ್ದರೆ ನಾನು ಕ್ಷಮೆ ಕೇಳುತ್ತೇನೆ. ನನ್ನ ಮಾತುಗಳನ್ನು ವಾಪಾಸ್ ತೆಗೆದುಕೊಳ್ಳುತ್ತೇನೆ,” ಎಂದು ಹೇಳಿದ್ದಾರೆ. ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ, “ಅವರು ರೈತರಲ್ಲ. ಅವರು ಗೂಂಡಾಗಳು. ಇವೆಲ್ಲಾ ಅಪರಾಧ ಕೃತ್ಯಗಳು. ಜನವರಿ 26ರ ಘಟನೆ ಕೂಡಾ ನಾಚಿಕೆಗೇಡಿನ ಅಪರಾಧಿ ಕೃತ್ಯ. ವಿರೋಧ ಪಕ್ಷದವರು ಇಂತಹ ಕೃತ್ಯಗಳಿಗೆ ಬೆಂಬಲ ನೀಡುತ್ತಿದ್ದಾರೆ,” ಎಂದು ಕೇಂದ್ರ ವಿದೇಶಾಂಗ ವ್ಯವಹಾರಗಳ ರಾಝ್ಯ ಖಾತೆಯ ಸಚಿವೆ ಮೀನಾಕ್ಷಿ ಲೇಖಿ ಹೇಳಿದ್ದರು.
Read moreDetailsದೇಶದ ಪ್ರಧಾನಿಯೇ ದೂರವಾಣಿ ಕದ್ದಾಲಿಕೆ ಪ್ರಕರಣದಲ್ಲಿ ನೇರ ಭಾಗಿಯಾಗಿದ್ದಾರೆ, ಈ ಪೆಗಾಸಸ್ ಸ್ಪೈವೇರ್‌ನ ದೂರವಾಣಿ ಕದ್ದಾಲಿಕೆ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸಬೇಕು. ಸುಪ್ರೀಂಕೋರ್ಟ್ ಹಾಲಿ ನ್ಯಾಯಮೂರ್ತಿಗಳು ತನಿಖೆಯ...
Read moreDetailsದೇಶದೆಲ್ಲೆಡೆ ಕೋವಿಡ್ ಕಾರಣದಿಂದ ಜನರು ಸಾಯುತ್ತಾ ಇದ್ದರೂ, ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರ ಮಾತ್ರ ತನ್ನ ವರ್ಚನ್ನು ವೃದ್ದಿಸುವತ್ತ ಗಮನ ಹರಿಸಿತ್ತು. ಬರೋಬ್ಬರಿ...
Read moreDetailsಪೇಗಾಸಸ್ ಲೀಕ್ಸ್ ಹಗರಣ ಜಾಗತಿಕ ಮಟ್ಟದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದೆ. ಪಾಕಿಸ್ತಾನ ಸೇರಿದಂತೆ ಜಗತ್ತಿನ ಹತ್ತು ದೇಶಗಳ ಪ್ರಧಾನಮಂತ್ರಿಗಳು, ಫ್ರಾನ್ಸ್ ಸೇರಿದಂತೆ ಮೂರು ದೇಶಗಳ ಅಧ್ಯಕ್ಷರು...
Read moreDetailsಭಾರತದ ಅತ್ಯಂತ ಪ್ರಮುಖ ದಿನಪತ್ರಿಕೆಯಾದ ದೈನಿಕ್ ಭಾಸ್ಕರ್ ಕಚೇರಿಗಳ ಮೇಲೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ತೆರಿಗೆ ಕಳ್ಳತನದ ಆರೋಪದ ಮೇಲೆ ಈ ದಾಳಿ...
Read moreDetailsಕರ್ನಾಟಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಭೇಟಿಯಾದ ಕೆಲ ದಿನಗಳ ನಂತರ, ದಕ್ಷಿಣ ರಾಜ್ಯದಲ್ಲಿ ನಾಯಕತ್ವದ ಬದಲಾವಣೆಯ ಕೂಗು ಕೇಳಿ ಬರುತ್ತಿದಂತೆ 78 ವರ್ಷದ...
Read moreDetailsಸುಮಾರು ಎರಡು ತಿಂಗಳ ಹಗ್ಗ ಜಗ್ಗಾಟದ ನಂತರ ಪಂಜಾಬ್ ಕಾಂಗ್ರೆಸ್ ನ ಚುಕ್ಕಾಣಿ ನವಜೋತ್ ಸಿಂಗ್ ಸಿಧು ಅವರಿಗೆ ಲಭಿಸಿದೆ. ಆದರೆ, ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್...
Read moreDetailsಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ) ದೇಶದ ಮುಸ್ಲಿಮರಿಗೆ ಯಾವುದೇ ಹಾನಿ ಮಾಡುವುದಿಲ್ಲ ಎಂದು ಬಿಜೆಪಿಯ ಸೈದ್ಧಾಂತಿಕ ಮಾರ್ಗದರ್ಶಕ ಆರ್‌ಎಸ್‌ಎಸ್ ಮುಖ್ಯಸ್ಥ...
Read moreDetails© 2024 www.pratidhvani.com - Analytical News, Opinions, Investigative Stories and Videos in Kannada