• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, April 19, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ರೈತರಿಗೆ ಅಪಮಾನ; ಕ್ಷಮೆ ಕೇಳಿದ ಕೇಂದ್ರ ಸಚಿವೆ

ಪ್ರತಿಧ್ವನಿ by ಪ್ರತಿಧ್ವನಿ
July 23, 2021
in ದೇಶ
0
ರೈತರಿಗೆ ಅಪಮಾನ; ಕ್ಷಮೆ ಕೇಳಿದ ಕೇಂದ್ರ ಸಚಿವೆ
Share on WhatsAppShare on FacebookShare on Telegram

ADVERTISEMENT

ಗುರುವಾರದಂದು ರೈತರನ್ನು ಅಪಮಾನಿಸಿದ್ದ ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ ಕೊನೆಗೂ ಕ್ಷಮೆ ಕೇಳಿದ್ದಾರೆ.ಇವರು ರೈತರಲ್ಲ, ಗೂಂಡಾಗಳು ಎಂದು ಹೇಳಿದ್ದ ಸಚಿವೆ, ತನ್ನ ಮಾತಿನಿಂದ ಯಾರಿಗಾದರೂ ನೋವಾಗಿದ್ದರೆ, ನಾನು ಕ್ಷಮೆ ಕೇಳುತ್ತೇನೆ ಎಂದು ಹೇಳಿದ್ದಾರೆ. 

ಜಂತರ್ ಮಂತರ್’ನಲ್ಲಿ ರೈತ ಸಂಸತ್ ನಡೆಯುತ್ತಿರುವಾಗ ಪತ್ರಕರ್ತರೊಬ್ಬರ ಮೇಲೆ ದಾಳಿ ನಡೆದಿದೆ ಎಂದು ಆರೋಪಿಸಿದ್ದ ಮೀನಾಕ್ಷಿ ಲೇಖಿ ಅವರು, ಪತ್ರಿಕಾಗೋಷ್ಠಿಯಲ್ಲಿ ರೈತರನ್ನು ಗೂಂಡಾಗಳೆಂದು ಕರೆದು ಅಪಮಾನಿಸಿದ್ದರು. ಈ ಹೇಳಿಕೆ ಬಹಿರಂಗಗೊಂಡ ಬೆನ್ನಲ್ಲೇ ಸಾಕಷ್ಟು ಜನರು ವಿರೋಧ ವ್ಯಕ್ತಪಡಿಸಿದ್ದರು. 

ಪಂಜಾಬ್ ಸಿಎಂ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರು “ಲೇಖಿ ಅವರಿಗೆ ರೈತರನ್ನು ಅಪಮಾನಿಸುವ ಯಾವ ಅಧಿಕಾರವೂ ಇಲ್ಲ. ರೈತರ ವಿರುದ್ದ ಈ ರಿತಿಯ ಹೇಳಿಕೆ ನೀಡಲು ಬಿಜೆಪಿಗೆ ಅಧಿಕಾರವೇ ಇಲ್ಲ,” ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದರು.

ಭಾರತೀಯ ಕಿಸಾನ್ ಯೂನಿಯನ್ ಮುಖಂಡರಾಗಿರುವ ರಾಕೇಶ್ ಟಿಕಾಯತ್ ಅವರು ಮೀನಾಕ್ಷಿ ಲೇಖಿ ಹೇಳಿಕೆಯನ್ನು ಖಂಡಿಸಿ, ರೈತರು ಅನ್ನದಾತರು, ಗೂಂಡಾಗಳಲ್ಲ. ಏನೂ ಇಲ್ಲದೇ ಇರುವವರು ಗೂಂಡಾಗಳಾಗಬಹುದು. ರೈತರ ವಿರುದ್ದ ಈ ರೀತಿಯ ಹೇಳಿಕೆ ನಿಡುವುದು ಸರಿಯಲ್ಲ ಎಂದಿದ್ದರು. 

ಮತ್ತೊಬ್ಬ ರೈತ ನಾಯಕರಾಗಿರುವ ಶಿವಕುಮಾರ್ ಅವರು ಮಾತನಾಡಿ, ಮೀನಾಕ್ಷಿ ಲೇಖಿ 80 ಕೋಟಿ ರೈತರನ್ನು ಅಪಮಾನಿಸಿದ್ದಾರೆ. ನಾವು ಗೂಂಡಾಗಳಾದರೆ ನೀವು ನಾವು ಬೆಳೆದ ಅನ್ನವನ್ನು ತಿನ್ನುವುದು ಬಿಟ್ಟುಬಿಡಿ. ಅವರಿಗೆ ನಾಚಿಕೆಯಾಗಬೇಕು. ಲೇಖಿ ಅವರ ಹೇಳಿಕೆಯನ್ನು ಖಂಡಿಸಿ ನಾವು ರೈತ ಸಂಸತ್ ನಲ್ಲಿ ನಿರ್ಣಯ ಅಂಗೀಕಾರ ಮಾಡಿದ್ದೇವೆ, ಎಂದಿದ್ದಾರೆ. ಇದರೊಂದಿಗೆ, ಪತ್ರಕರ್ತರ ಮೇಲೆ ದಾಳಿ ನಡೆಸಿದವರ ವಿರುದ್ದ ಕಠಿಣ ಕ್ರಮಕ್ಕೂ ಒತ್ತಾಯಿಸಿದ್ದಾರೆ.  

ಇದಾದ ಬಳಿಕೆ ಮೆತ್ತಗಾಗಿರುವ ಸಚಿವೆ ಮೀನಾಕ್ಷಿ ಲೇಖಿ ಅವರು, “ನಾನು ಜನವರಿ 26ರಂದು ಕೆಂಪುಕೋಟೆಯಲ್ಲಿ ನಡೆದ ಘಟನೆ ಹಾಗೂ ಗುರುವಾರ ಪತ್ರಕರ್ತರ ಮೇಲಾದ ದಾಳಿಯನ್ನು ಉಲ್ಲೇಖಿಸಿ ಮಾತನಾಡುತ್ತಿದ್ದೆ. ಗೂಂಡಾಗಳಲ್ಲದೆ, ರೈತರು ಈ ರೀತಿಯ ಚಟುವಟಿಕೆಗಳಲ್ಲಿ ಭಾಗವಹಿಸಲು ಸಾಧ್ಯವಿಲ್ಲ ಎಂದು ಹೇಳಿದ್ದೆ. ನನ್ನ ಹೇಳಿಕೆಯನ್ನು ತಿರುಚಲಾಗಿದೆ. ಆದರೆ, ನನ್ನ ಹೇಳಿಕೆಯಿಂದ ರೈತರಿಗೆ ಅಥವಾ ಯಾರಿಗಾದರೂ ನೋವಾಗಿದ್ದರೆ ನಾನು ಕ್ಷಮೆ ಕೇಳುತ್ತೇನೆ. ನನ್ನ ಮಾತುಗಳನ್ನು ವಾಪಾಸ್ ತೆಗೆದುಕೊಳ್ಳುತ್ತೇನೆ,” ಎಂದು ಹೇಳಿದ್ದಾರೆ. 

ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ, “ಅವರು ರೈತರಲ್ಲ. ಅವರು ಗೂಂಡಾಗಳು. ಇವೆಲ್ಲಾ ಅಪರಾಧ ಕೃತ್ಯಗಳು. ಜನವರಿ 26ರ ಘಟನೆ ಕೂಡಾ ನಾಚಿಕೆಗೇಡಿನ ಅಪರಾಧಿ ಕೃತ್ಯ. ವಿರೋಧ ಪಕ್ಷದವರು ಇಂತಹ ಕೃತ್ಯಗಳಿಗೆ ಬೆಂಬಲ ನೀಡುತ್ತಿದ್ದಾರೆ,” ಎಂದು ಕೇಂದ್ರ ವಿದೇಶಾಂಗ ವ್ಯವಹಾರಗಳ ರಾಝ್ಯ ಖಾತೆಯ ಸಚಿವೆ ಮೀನಾಕ್ಷಿ ಲೇಖಿ ಹೇಳಿದ್ದರು. 

Tags: BJPfarmersprotestmeenakshi lekhi
Previous Post

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ವಿವಿಧೆಡೆ ಪ್ರವಾಹ ಪರಿಸ್ಥಿತಿ

Next Post

ಬಿಜೆಪಿಗೆ ದಲಿತರ ಬಗ್ಗೆ ಕಾಳಜಿ ಇದ್ದರೆ ಬಿಎಸ್ವೈ ರಾಜಿನಾಮೆ ಬಳಿಕ ದಲಿತರನ್ನೇ ಸಿಎಂ ಮಾಡಲಿ: ಸಿದ್ದರಾಮಯ್ಯ

Related Posts

ನಾವು ಮಹಿಳಾ ಮೀಸಲಾತಿಯ ವಿರೋಧಿಗಳಲ್ಲಾ : ಬಿಜೆಪಿಗೆ ಸಿದ್ದರಾಮಯ್ಯ ತಿರುಗೇಟು..!
Top Story

ನಾವು ಮಹಿಳಾ ಮೀಸಲಾತಿಯ ವಿರೋಧಿಗಳಲ್ಲಾ : ಬಿಜೆಪಿಗೆ ಸಿದ್ದರಾಮಯ್ಯ ತಿರುಗೇಟು..!

by ಪ್ರತಿಧ್ವನಿ
April 19, 2026
0

ಹಾವೇರಿ : ಮಹಿಳಾ ಮೀಸಲಾತಿ ಮಸೂದೆ ರಾಜ್ಯಸಭೆ ಮತ್ತು ಲೋಕಸಭೆಯಲ್ಲಿ 2023ರಲ್ಲಿಯೇ ಅಂಗೀಕಾರವಾಗಿದೆ. ಪ್ರಸ್ತುತ ಕ್ಷೇತ್ರ ಮರುವಿಂಗಡನೆಯನ್ನು ಸೇರಿಸಿ ಮಂಡಿಸಿದ್ದಾರೆ. ನಾವು ಮಹಿಳಾ ಮೀಸಲಾತಿಗೆ ವಿರೋಧವಿಲ್ಲ ಎಂದು...

Read moreDetails
ಮಹಿಳಾ ಮೀಸಲಾತಿ ಹೆಸರಲ್ಲಿ ದಕ್ಷಿಣ ಭಾರತದ ಮೇಲೆ ‘ರಾಜಕೀಯ ಸರ್ಜಿಕಲ್ ಸ್ಟ್ರೈಕ್’ಗೆ ಬಿಜೆಪಿ ಸಂಚು: ಡಿ.ಕೆ. ಶಿವಕುಮಾರ್

ಮಹಿಳಾ ಮೀಸಲಾತಿ ಹೆಸರಲ್ಲಿ ದಕ್ಷಿಣ ಭಾರತದ ಮೇಲೆ ‘ರಾಜಕೀಯ ಸರ್ಜಿಕಲ್ ಸ್ಟ್ರೈಕ್’ಗೆ ಬಿಜೆಪಿ ಸಂಚು: ಡಿ.ಕೆ. ಶಿವಕುಮಾರ್

April 19, 2026
ಟಿಎಂಸಿ ಸಂವಿಧಾನದ ಕತ್ತು ಹಿಸುಕುವ ಕೆಲಸ ಮಾಡುತ್ತಿದೆ : ಮಮತಾ ವಿರುದ್ಧ ಮೋದಿ ತೀವ್ರ ವಾಗ್ದಾಳಿ..

ಟಿಎಂಸಿ ಸಂವಿಧಾನದ ಕತ್ತು ಹಿಸುಕುವ ಕೆಲಸ ಮಾಡುತ್ತಿದೆ : ಮಮತಾ ವಿರುದ್ಧ ಮೋದಿ ತೀವ್ರ ವಾಗ್ದಾಳಿ..

April 19, 2026
ಅಂಬೇಡ್ಕರ್‌ ಮತ್ತು ಸಂವಿಧಾನ – ವಾಸ್ತವಗಳು

ಅಂಬೇಡ್ಕರ್‌ ಮತ್ತು ಸಂವಿಧಾನ – ವಾಸ್ತವಗಳು

April 19, 2026
ಇರಾನ್‌ – ಅಮೆರಿಕ ನಡುವೆ ಮುನೀರ್‌ ಮಧ್ಯಸ್ಥಿಕೆ : ದೊಡ್ಡಣ್ಣ ಎಂದು ಕೊಚ್ಚಿಕೊಳ್ಳುವ ಟ್ರಂಪ್‌ಗ್ಯಾಕೆ ಬಂತು ಈ ದುಸ್ಥಿತಿ..?

ಇರಾನ್‌ – ಅಮೆರಿಕ ನಡುವೆ ಮುನೀರ್‌ ಮಧ್ಯಸ್ಥಿಕೆ : ದೊಡ್ಡಣ್ಣ ಎಂದು ಕೊಚ್ಚಿಕೊಳ್ಳುವ ಟ್ರಂಪ್‌ಗ್ಯಾಕೆ ಬಂತು ಈ ದುಸ್ಥಿತಿ..?

April 19, 2026
Next Post
ಸಂವಿಧಾನ ವಿರೋಧಿಸುವವರು ಮನುಷ್ಯತ್ವ ಇಲ್ಲದವರು: ಸಿದ್ದರಾಮಯ್ಯ

ಬಿಜೆಪಿಗೆ ದಲಿತರ ಬಗ್ಗೆ ಕಾಳಜಿ ಇದ್ದರೆ ಬಿಎಸ್ವೈ ರಾಜಿನಾಮೆ ಬಳಿಕ ದಲಿತರನ್ನೇ ಸಿಎಂ ಮಾಡಲಿ: ಸಿದ್ದರಾಮಯ್ಯ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada