• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, April 25, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ಬ್ರೆಜಿಲ್ ಪಾಲುದಾರರೊಂದಿಗೆ ಒಪ್ಪಂದ ಕೊನೆಗೊಳಿಸಿದ ಭಾರತ್ ಬಯೋಟೆಕ್: ಇನ್ನಾದರೂ ವಿವಾದ ತಣ್ಣಗಾಗಲಿದೆಯೇ?

ಫಾತಿಮಾ by ಫಾತಿಮಾ
July 24, 2021
in ದೇಶ, ರಾಜಕೀಯ, ವಿದೇಶ
0
ಬ್ರೆಜಿಲ್ ಪಾಲುದಾರರೊಂದಿಗೆ ಒಪ್ಪಂದ ಕೊನೆಗೊಳಿಸಿದ ಭಾರತ್ ಬಯೋಟೆಕ್: ಇನ್ನಾದರೂ ವಿವಾದ ತಣ್ಣಗಾಗಲಿದೆಯೇ?
Share on WhatsAppShare on FacebookShare on Telegram

ಬ್ರೆಜಿಲ್ ಮಾರುಕಟ್ಟೆಗೆ ತನ್ನ COVID-19 ಲಸಿಕೆಯಾದ ಕೋವಾಕ್ಸಿನ್‌ನನ್ನು ವಿತರಿಸಲು ಪ್ರೆಸಿಸಾ ಮೆಡಿಸಿಮೆಂಟೋಸ್ ಮತ್ತು ಎನ್ವಿಕ್ಸಿಯಾ ಫಾರ್ಮಾಸ್ಯುಟಿಕಲ್ಸ್ LL.C ಕಂಪೆನಿಗಳೊಂದಿಗೆ ಮಾಡಿಕೊಂಡಿದ್ದ ತಿಳುವಳಿಕೆಯ ಒಪ್ಪಂದವನ್ನು ಕೊನೆಗೊಳಿಸಲಾಗಿದೆ ಎಂದು ಭಾರತ್ ಬಯೋಟೆಕ್ ಶುಕ್ರವಾರ ತಿಳಿಸಿದೆ.

ADVERTISEMENT

20 ಮಿಲಿಯನ್ ಡೋಸ್ ಲಸಿಕೆಗಳನ್ನು ಪೂರೈಸಲು ಬ್ರೆಜಿಲ್ ಸರ್ಕಾರದೊಂದಿಗೆ ಮಾಡಿಕೊಂಡ ಒಪ್ಪಂದವು ವಿವಾದಕ್ಕೆ ಒಳಗಾದ  ನಂತರ ಮತ್ತು ಆ ದೇಶದಲ್ಲಿ ತನಿಖೆಯು ಪ್ರಾರಂಭವಾದ ನಂತರ ಈ ಒಪ್ಪಂದವನ್ನು ಮುಕ್ತಾಯಗೊಳಿಸಲಾಯಿತು.

ಪ್ರೆಸಿಸಾ ಮೆಡಿಕಮೆಂಟೋಸ್ ಬ್ರೆಜಿಲ್ನಲ್ಲಿ ಭಾರತ್ ಬಯೋಟೆಕ್‌ನ ಪಾಲುದಾರರಾಗಿದ್ದು, ಪರವಾನಗಿ, ವಿತರಣೆ, ವಿಮೆ ಮತ್ತು ಮೂರನೇ ಹಂತದ ಕ್ಲಿನಿಕಲ್ ಪ್ರಯೋಗಗಳ ನಿರ್ವಹಣೆಯಲ್ಲಿ ಸಹಾಯ, ಮಾರ್ಗದರ್ಶನ ಮತ್ತು ಬೆಂಬಲವನ್ನು ಒದಗಿಸುತ್ತಿತ್ತು.

“ಕಂಪನಿಯು ಈ ಒಪ್ಪಂದವನ್ನು ತಕ್ಷಣದಿಂದ ಜಾರಿಗೆ ತಂದಿದೆ. ಒಪ್ಪಂದ ಮುಕ್ತಾಯದ ಹೊರತಾಗಿಯೂ, ಭಾರತ್ ಬಯೋಟೆಕ್ ಅನುಮೋದನಾ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಬ್ರೆಜಿಲ್‌ನ ಔಷಧ ನಿಯಂತ್ರಣ ಸಂಸ್ಥೆಯಾದ ANVISA ಯೊಂದಿಗೆ ಬದ್ಧತೆಯಿಂದ ಕೆಲಸ ಮಾಡುವುದನ್ನು ಮುಂದುವರಿಸುತ್ತದೆ” ಎಂದು ಅದು ಹೇಳಿಕೊಂಡಿದೆ. ಅಲ್ಲದೆ, ಭಾರತ್ ಬಯೋಟೆಕ್ ಪ್ರತಿ ದೇಶದಲ್ಲಿ ಅನ್ವಯವಾಗುವ ಕಾನೂನು ಅವಶ್ಯಕತೆಗಳ ಪ್ರಕಾರ ವಿವಿಧ ದೇಶಗಳಲ್ಲಿ ಅನುಮೋದನೆಗಳನ್ನು ಪಡೆಯುತ್ತಿದೆ ಎಂದು ಅದು ಹೇಳಿದೆ.

ಭಾರತ್ ಬಯೋಟೆಕ್ ಬ್ರೆಜಿಲ್‌ನಲ್ಲಿ ಕೋವಾಕ್ಸಿನ್ ಅನ್ನು ಪರಿಚಯಿಸುವ ಉದ್ದೇಶದಿಂದ ನವೆಂಬರ್ 20 ರಂದು ಪ್ರೆಸಿಸಾ ಮೆಡಿಕಮೆಂಟೋಸ್ ಮತ್ತು ಎನ್ವಿಕ್ಸಿಯಾ ಫಾರ್ಮಾಸ್ಯುಟಿಕಲ್ಸ್ ಎಲ್.ಎಲ್.ಸಿ ಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿತ್ತು.

ಲಸಿಕೆಯ ಜಾಗತಿಕ ಬೆಲೆ $ 15-20ರ ನಡುವೆ ನಿಗದಿಪಡಿಸಲಾಗಿದೆ ಮತ್ತು ಅದರ ಪ್ರಕಾರ ಕೋವ್ಯಾಕ್ಸಿನ್ನನ್ನು ಬ್ರೆಜಿಲ್ ಸರ್ಕಾರಕ್ಕೆ ಪ್ರತಿ ಡೋಸ್‌ಗೆ $ 15 ದರದಲ್ಲಿ ನೀಡಲಾಯಿತು ಎಂದು ಭಾರತ್ ಬಯೋಟೆಕ್ ತಿಳಿಸಿದೆ.ಕಂಪನಿಯು ಯಾವುದೇ ಮುಂಗಡ ಪಾವತಿಗಳನ್ನು ಸ್ವೀಕರಿಸಿಲ್ಲ, ಅಥವಾ ಬ್ರೆಜಿಲ್‌ನ ಆರೋಗ್ಯ ಸಚಿವಾಲಯಕ್ಕೆ ಯಾವುದೇ ಲಸಿಕೆಗಳನ್ನು ನೀಡಿಲ್ಲ ಎಂದು ಕಂಪನಿ ತಿಳಿಸಿದೆ.

ಲಸಿಕೆ ತಯಾರಕ ತನ್ನ ಜಾಗತಿಕ ವ್ಯವಹಾರಗಳನ್ನು ಒಳಗೊಂಡಂತೆ ಅದರ ಎಲ್ಲಾ ಕಾರ್ಯಗಳನ್ನು ಸ್ಥಳೀಯ ಕಾನೂನುಗಳಿಗೆ ಅನುಗುಣವಾಗಿ ಮಾಡಲಾಗುತ್ತದೆ ಮತ್ತು ಕಂಪನಿಯು ಎಲ್ಲಾ ಸಮಯದಲ್ಲೂ ನೈತಿಕತೆ, ಸಮಗ್ರತೆ ಮತ್ತು ಅನುಸರಣೆಯ ಉನ್ನತ ಮಾನದಂಡಗಳನ್ನು ಬಳಸಿಕೊಳ್ಳುತ್ತದೆ ಮತ್ತು ಅನುಸರಿಸುತ್ತದೆ ಎಂದು ಒತ್ತಿ ಹೇಳಿದೆ.

ಮೂರನೇ ಹಂತದ ಕ್ಲಿನಿಕಲ್ ಪ್ರಯೋಗಕ್ಕೆ ಒಳಪಡದಿದ್ದರೂ, ವಿಶ್ವ ಆರೋಗ್ಯ ಸಂಸ್ಥೆ ಕೊವ್ಯಾಕ್ಸಿನ್‌ಗೆ ಅನುಮೋದನೆ ನೀಡದಿದ್ದರೂ ಬ್ರೆಜಿಲ್ ಸರ್ಕಾರ ಕುದ್ದು ಮುಂದೆ ನಿಂತು ಕೊವ್ಯಾಕ್ಸಿನ್‌ಗೆ ಹಸಿರು ನಿಶಾನೆ ತೋರಿಸಿತ್ತು. ಇದರ ಹಿಂದೆ ವ್ಯಾಪಕ ಭ್ರಷ್ಟಾಚಾರ ಇದೆ ಎಂದು ಅಲ್ಲಿನ ಜನತೆ ಬೀದಿಗಿಳಿದಿದ್ದರು. ಅಲ್ಲದೆ ಪೂರೈಸಬೇಕಾಗಿದ್ದ ಲಸಿಕೆಯನ್ನು ಇನ್ನೂ ಪೂರೈಸಿಲ್ಲ ಎಂದೂ ವಿವಾದವಾಗಿತ್ತು. ಈಗ ಕೊವ್ಯಾಕ್ಸಿನ್‌ ಉತ್ಪಾದಕರಾದ ಭಾರತ್ ಬಯೋಟೆಕ್ ತನ್ನ ಬ್ರೆಜಿಲ್ ಪಾಲುದಾರರೊಂದಿಗೆ ಒಪ್ಪಂದ ಕೊನೆಗೊಳಿಸಿದ್ದು ಇನ್ನಾದರೂ ವಿವಾದ ತಣ್ಣಗಾಗುತ್ತದಾ ಎಂದು ಕಾದು ನೋಡಬೇಕು.

Tags: bharath bioteccovaccinecovid-19 vaccineಕೋವಿಡ್-19ನರೇಂದ್ರ ಮೋದಿಬಿಜೆಪಿ
Previous Post

ಡಾನಿಷ್ ಸಿದ್ದಿಖಿ – ಅಸಹಿಷ್ಣುತೆಗೆ ಮತ್ತೊಂದು ಬಲಿ

Next Post

ಉದಾರೀಕರಣಕ್ಕೆ 3 ದಶಕ: ʼದೇಶದ ಈಗಿನ ಪರಿಸ್ಥಿತಿ 1991 ಕ್ಕಿಂತಲೂ ಭೀಕರವಾಗಿದೆʼ – ಮನಮೋಹನ್ ಸಿಂಗ್

Related Posts

ಒಳ ಮೀಸಲಾತಿ ಹಂಚಿಕೆ: ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ
ರಾಜಕೀಯ

ಒಳ ಮೀಸಲಾತಿ ಹಂಚಿಕೆ: ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ

by ಪ್ರತಿಧ್ವನಿ
April 24, 2026
0

ಬೆಂಗಳೂರು: ಒಳ ಮೀಸಲಾತಿ ಹಂಚಿಕೆ ಕುರಿತಂತೆ ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ವಿಶೇಷ ಸಂಪುಟ ಸಭೆಯಲ್ಲಿ ಪರಿಶಿಷ್ಟ ಜಾತಿಗಳ...

Read moreDetails
ದೆಹಲಿ ಭೇಟಿ ಕುರಿತು ಡಿಕೆ ಶಿವಕುಮಾರ್ ಗುಟ್ಟು ಮಾತು: ಹೈಕಮಾಂಡ್ ಭೇಟಿ ಸುಳಿವು

ದೆಹಲಿ ಭೇಟಿ ಕುರಿತು ಡಿಕೆ ಶಿವಕುಮಾರ್ ಗುಟ್ಟು ಮಾತು: ಹೈಕಮಾಂಡ್ ಭೇಟಿ ಸುಳಿವು

April 24, 2026
ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಶಾಕ್: ಮೂರನೇ ಪರೀಕ್ಷೆ ರದ್ದು

ಭಾರತ-ಚೀನಾವನ್ನು ಅವಹೇಳನ ಮಾಡಿದ ಪೋಸ್ಟ್ ರೀಶೇರ್: ಟ್ರಂಪ್ ವಿರುದ್ಧ ಹೊಸ ವಿವಾದ

April 23, 2026
ಬೆಸ್ಕಾಂನ ‘ಹೆಚ್‌ಟಿ ಮಿತ್ರ’  ಪೋರ್ಟಲ್‌ಗೆ ಚಾಲನೆ ನೀಡಿದ ಇಂಧನ ಸಚಿವ ಕೆ.ಜೆ. ಜಾರ್ಜ್

ಬೆಸ್ಕಾಂನ ‘ಹೆಚ್‌ಟಿ ಮಿತ್ರ’ ಪೋರ್ಟಲ್‌ಗೆ ಚಾಲನೆ ನೀಡಿದ ಇಂಧನ ಸಚಿವ ಕೆ.ಜೆ. ಜಾರ್ಜ್

April 23, 2026
ಇನ್ನು ಮುಂದೆ ಬೆಂಗಳೂರು ಒನ್ ಕೇಂದ್ರಗಳಲ್ಲೂ ಇ-ಸ್ವತ್ತು ಅರ್ಜಿ ಸಲ್ಲಿಸಬಹುದು. ಸಚಿವ ಪ್ರಿಯಾಂಕ ಖರ್ಗೆ

ಇನ್ನು ಮುಂದೆ ಬೆಂಗಳೂರು ಒನ್ ಕೇಂದ್ರಗಳಲ್ಲೂ ಇ-ಸ್ವತ್ತು ಅರ್ಜಿ ಸಲ್ಲಿಸಬಹುದು. ಸಚಿವ ಪ್ರಿಯಾಂಕ ಖರ್ಗೆ

April 23, 2026
Next Post
ಉದಾರೀಕರಣಕ್ಕೆ 3 ದಶಕ: ʼದೇಶದ ಈಗಿನ ಪರಿಸ್ಥಿತಿ 1991 ಕ್ಕಿಂತಲೂ ಭೀಕರವಾಗಿದೆʼ – ಮನಮೋಹನ್ ಸಿಂಗ್

ಉದಾರೀಕರಣಕ್ಕೆ 3 ದಶಕ: ʼದೇಶದ ಈಗಿನ ಪರಿಸ್ಥಿತಿ 1991 ಕ್ಕಿಂತಲೂ ಭೀಕರವಾಗಿದೆʼ – ಮನಮೋಹನ್ ಸಿಂಗ್

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada