• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, September 28, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ದೈನಿಕ್ ಭಾಸ್ಕರ್ ಪತ್ರಿಕೆಯ ಕಚೇರಿಗಳ ಮೇಲೆ ಐಟಿ ದಾಳಿ

Any Mind by Any Mind
July 22, 2021
in ದೇಶ
0
ದೈನಿಕ್ ಭಾಸ್ಕರ್ ಪತ್ರಿಕೆಯ ಕಚೇರಿಗಳ ಮೇಲೆ ಐಟಿ ದಾಳಿ
Share on WhatsAppShare on FacebookShare on Telegram

ಭಾರತದ ಅತ್ಯಂತ ಪ್ರಮುಖ ದಿನಪತ್ರಿಕೆಯಾದ ದೈನಿಕ್ ಭಾಸ್ಕರ್ ಕಚೇರಿಗಳ ಮೇಲೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ತೆರಿಗೆ ಕಳ್ಳತನದ ಆರೋಪದ ಮೇಲೆ ಈ ದಾಳಿ ನಡೆಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ADVERTISEMENT

ದೈನಿಕ್ ಭಾಸ್ಕರ್ ನ ದೆಹಲಿ, ಮಧ್ಯ ಪ್ರದೇಶ, ರಾಜಸ್ಥಾನ, ಗುಜರಾತ್ ಮತ್ತು ಮಹಾರಾಷ್ಟ್ರದ ಕಚೇರಿಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಲಾಗಿದೆ. ಇದರೊಂದಿಗೆ ದೈನಿಕ್ ಭಾಸ್ಕರ್ ಗ್ರೂಪ್ ನ ಒಡೆತನ ಹೊಂದಿರುವವರ ಮನೆಗಳ ಮೇಲೆಯೂ ದಾಳಿ ನಡೆಸಲಾಗಿದೆ.

ಏಪ್ರಿಲ್‌,ಮೇ ತಿಂಗಳಲ್ಲಿ ಕರೋನಾ ಎರಡನೇ ಅಲೆಯ ಅಬ್ಬರದ ಸಾಕ್ಷಾತ್ ಚಿತ್ರಣವನ್ನು ದೈನಿಕ್ ಭಾಸ್ಕರ್ ಜನರ ಮುಂದೆ ಇಟ್ಟಿತ್ತು. ಮುಖ್ಯವಾಗಿ ಗುಜರಾತ್ ನ ಕೋವಿಡ್ ಸಾವುಗಳ ಕುರಿತು ಸರ್ಕಾರ ಸುಳ್ಳು ಹೇಳುತ್ತಿರುವುದನ್ನು ದೈನಿಕ್ ಭಾಸ್ಕರ್ ವರದಿ ಮಾಡಿತ್ತು. ಇದರಿಂದಾಗಿ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿತ್ತು.

ಕೇವಲ ಕೋವಿಡ್ ಸಾವುಗಳಷ್ಟೇ ಅಲ್ಲದೇ, ಆಕ್ಸಿಜನ್, ಬೆಡ್, ಲಸಿಕೆಗಳ ಕೊರತೆಯ ಕುರಿತು ಕೂಡಾ ಸರ್ಕಾರದ ಗಮನ ಸೆಳೆಯಲು ಪ್ರಯತ್ನಿಸಿತ್ತು. ಆದರೆ, ದೈನಿಕ್ ಭಾಸ್ಕರ್ ನ ಈ ಪ್ರಯತ್ನವು ಸರ್ಕಾರದ ಕೋಪಕ್ಕೆ ಕಾರಣವಾಯಿತೇ ಹೊರತು, ಸರ್ಕಾರ ಮಾತ್ರ ಪರಿಸ್ಥಿತಿಯನ್ನು ಉತ್ತಮಗೊಳಿಸುವ ಪ್ರಯತ್ನ ಮಾಡಲಿಲ್ಲ.

ಇದರೊಂದಿಗೆ, ಉತ್ತರ ಪ್ರದೇಶದಲ್ಲಿ ಗಂಗಾ ನದಿಯಲ್ಲಿ ತೇಲಿ ಬಂದ ಶವಗಳ ಕುರಿತು ಸರಣಿ ವರದಿಗಳನ್ನು ಪ್ರಕಟಿಸಿತ್ತು. ಈ ಘಟನೆಯ ಕಹಿ ಸತ್ಯವನ್ನು ಜನರ ಮುಂದೆ ತೆರೆದಿಟ್ಟಿತ್ತು. ಗಂಗಾ ನದಿಯ ದಡದಲ್ಲಿಯೇ ಆ ಶವಗಳನ್ನು ದಫನ್ ಮಾಡಿರುವ ಕುರಿತಾಗಿಯೂ ವರದಿಯನ್ನು ಪ್ರಕಟಿಸಿತ್ತು.

ಸುಮಾರು ಒಂದು ತಿಂಗಳ ಹಿಂದೆ, ದೈನಿಕ್ ಭಾಸ್ಕರ್ ಸಂಪಾದಕರಾದ ಓಮ್ ಗೌರ್ ಅವರ ಸಂಪಾದಕೀಯ ಲೇಖನವನ್ನು ‘The New York Times’ ಪತ್ರಿಕೆಯು ಪ್ರಕಟಿಸಿತ್ತು. ಕರೋನಾ ಸೋಂಕು ನಿರ್ವಹಿಸುವಲ್ಲಿ ಸರ್ಕಾರದ ವೈಫಲ್ಯತೆಯನ್ನು ಕಣ್ಣಿಗೆ ಕಟ್ಟುವ ರೀತಿ ವಿವರಿಸಲಾಗಿತ್ತು. “ದೇಶದ ಪವಿತ್ರ ನದಿನರೇಂದ್ರ ಮೋದಿ ಆಡಳಿತದ ವೈಫಲ್ಯತೆ ಹಾಗೂ ಮೋಸದಾಟವನ್ನು ತೆರೆದಿಟ್ಟಿದೆ,” ಎಂದು ಅವರು ಬರೆದಿದ್ದರು.

ಈ ಎಲ್ಲಾ ಕಾರಣಗಲಿಗೆ ಇತ್ತೀಚಿನ ದಿನಗಳಲ್ಲಿ ಸಾಮಾನ್ಯವೆಂಬಂತೆ ಕೇಂದ್ರ ಸರ್ಕಾರವು ತನ್ನ ಅಧೀನ ಸಂಸ್ಥೆಗಳನ್ನು ಪತ್ರಿಕೆಯ ವಿರುದ್ದ ಛೂ ಬಿಟ್ಟಿದೆ. ಇಲ್ಲಿಯವರೆಗೆ ರಾಜಕೀಯ ವಿರೋಧಿಗಳ ಬಳಕೆಯಾಗುತ್ತಿದ್ದ ಐಟಿ, ಸಿಬಿಐ, ಇಡಿ ಅಸ್ತ್ರ ಈಗ ಪತ್ರಿಕೆಗಳ ವಿರುದ್ದವೂ ಬಳಕೆಯಾಗುತ್ತಿದೆ. ಪತ್ರಿಕಾ ಸ್ವಾತಂತ್ರ್ಯದ ದಮನದ ವಿರುದ್ದ ದನಿ ಎತ್ತಬೇಕಾದ ಅನಿವಾರ್ಯತೆ ಎದುರಾಗಿದೆ.

Tags: ainik Bhaskarincome tax
Previous Post

ಬಿಎಸ್‌ವೈರನ್ನು ತೆಗೆದುಹಾಕುವುದು ತಪ್ಪು, ಅವರಿಲ್ಲದೆ ಅಧಿಕಾರಕ್ಕೆ ಬರುವುದು ಅಸಾಧ್ಯ: ಸುಬ್ರಮಣಿಯನ್ ಸ್ವಾಮಿ

Next Post

BJP-RSS ನಾಯಕರುಣಿಸಿದ ಕಹಿಯುಂಡು ಅವರಿಗೆ ಸಿಹಿ ಬಡಿಸಿದ ಯಡಿಯೂರಪ್ಪ!

Related Posts

Havent received your income tax refund yet
Top Story

ಆದಾಯ ತೆರಿಗೆ ರಿಫಂಡ್ ಇನ್ನೂ ಬಂದಿಲ್ಲವೇ? ದೂರು ನೀಡುವ ಮುನ್ನ ಈ 3 ವಿಷಯ ಪರಿಶೀಲಿಸಿ | ITR

by ಪ್ರತಿಧ್ವನಿ
September 28, 2026
0

ನವದೆಹಲಿ : ಆದಾಯ ತೆರಿಗೆ ರಿಟರ್ನ್ (ITR) ಸಲ್ಲಿಕೆ ಪ್ರಕ್ರಿಯೆ ಪೂರ್ಣಗೊಂಡ ತಕ್ಷಣವೇ ಮರುಪಾವತಿ (Refund) ಮೊತ್ತ ಖಾತೆಗೆ ಜಮೆಯಾಗುತ್ತದೆ ಎಂದೇನೂ ಇಲ್ಲ. ಇಲಾಖೆಯು ರಿಟರ್ನ್ ಪರಿಶೀಲಿಸಿ...

Read moreDetails
Gold ring for newborns in government hospitals CM Vijay launches new scheme

ಸರ್ಕಾರಿ ಆಸ್ಪತ್ರೆಗಳಲ್ಲಿ ಜನಿಸುವ ನವಜಾತ ಶಿಶುಗಳಿಗಾಗಿ `ಚಿನ್ನದ ಉಂಗುರು’ : ಹೊಸ ಯೋಜನೆಗೆ ಸಿಎಂ ವಿಜಯ್ ಚಾಲನೆ | CM Vijay

September 28, 2026
Supreme Court refuses to stay implementation of UPI charges

ಯುಪಿಐ ಶುಲ್ಕ ಜಾರಿಗೆ ತಡೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಣೆ | Supreme Court

September 28, 2026
World Heart Day Why is awareness crucial for preventing heart disease

ಇಂದು ವಿಶ್ವ ಹೃದಯ ದಿನ: ಹೃದ್ರೋಗ ತಡೆಗೆ ಜಾಗೃತಿ ಏಕೆ ಮುಖ್ಯ? ತಿಳಿಯಿರಿ ಮಹತ್ವ | World Heart Day

September 28, 2026
TRAIs new rule for 30day validity call and SMS plans

ಮೊಬೈಲ್ ಗ್ರಾಹಕರಿಗೆ ಸಿಹಿಸುದ್ದಿ: 30 ದಿನಗಳ ವ್ಯಾಲಿಡಿಟಿ ಕರೆ, SMS ಪ್ಲಾನ್‌ಗಳಿಗೆ TRAI ಹೊಸ ನಿಯಮ | TRAI

September 28, 2026
Next Post
BJP-RSS ನಾಯಕರುಣಿಸಿದ ಕಹಿಯುಂಡು ಅವರಿಗೆ ಸಿಹಿ ಬಡಿಸಿದ ಯಡಿಯೂರಪ್ಪ!

BJP-RSS ನಾಯಕರುಣಿಸಿದ ಕಹಿಯುಂಡು ಅವರಿಗೆ ಸಿಹಿ ಬಡಿಸಿದ ಯಡಿಯೂರಪ್ಪ!

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada