ಮತದಾರರ ಮಾಹಿತಿ ಕಳ್ಳತನ | ಚಿಲುಮೆ ಹಗರಣದ ಬೆನ್ನತ್ತಿದಾಗ… (ಭಾಗ-2)
ಅಪಾರದರ್ಶಕ ನಡೆಯ ಸರ್ಕಾರಿ ಅಧಿಕಾರಿಗಳ ( government Officers) ನಡುವೆ ಇದು ನಮ್ಮ ಮೊದಲ ಪ್ರಮುಖ ಪ್ರಗತಿಯಾಗಿತ್ತು. ನಾವು ಮೂರು ತಂಡಗಳಾಗಿ ವಿಂಗಡನೆಯಾದೆವು. ನಕ್ಷೆಗಳನ್ನು ಬಳಸಿ, ಮಹದೇವಪುರದಲ್ಲಿ...
Read moreDetailsಅಪಾರದರ್ಶಕ ನಡೆಯ ಸರ್ಕಾರಿ ಅಧಿಕಾರಿಗಳ ( government Officers) ನಡುವೆ ಇದು ನಮ್ಮ ಮೊದಲ ಪ್ರಮುಖ ಪ್ರಗತಿಯಾಗಿತ್ತು. ನಾವು ಮೂರು ತಂಡಗಳಾಗಿ ವಿಂಗಡನೆಯಾದೆವು. ನಕ್ಷೆಗಳನ್ನು ಬಳಸಿ, ಮಹದೇವಪುರದಲ್ಲಿ...
Read moreDetailsಬೆಂಗಳೂರಿನಾದ್ಯಂತ ಸುಮಾರು 15,000 ಕಾರ್ಮಿಕರನ್ನು ಎನ್‌ಜಿಒ ಅಕ್ರಮ ದತ್ತಾಂಶ ಸಂಗ್ರಹ ಅಭಿಯಾನಕ್ಕೆ ನಿಯೋಜಿಸಿದೆ ಎಂದು ಪೊಲೀಸ್ ಅಧಿಕಾರಿಗಳು ಈಗ ಅಂದಾಜಿಸಿದ್ದಾರೆ ಬೆಂಗಳೂರಿನಲ್ಲಿ ಮತದಾರರ ಜಾಗೃತಿ ಅಭಿಯಾನದ ನೆಪದಲ್ಲಿ...
Read moreDetailsಇನ್ನುಮುಂದೆ ಪ್ರಾಥಮಿಕ ಶಾಲೆಯ (ಒಂದರಿಂದ ಎಂಟನೇ ತರಗತಿವರೆಗಿನ) ಹಿಂದುಳಿದ ಹಾಗೂ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ನೀಡದಿರಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ ಕುರಿತು ರಾಷ್ಟ್ರೀಯ ವಿದ್ಯಾರ್ಥಿವೇತನ ವೆಬ್...
Read moreDetailsಬೆಂಗಳೂರಿನಲ್ಲಿ ನಡೆದ ಭಾರೀ ಪರಮಾಣದ ಮತದಾರರ ಮಾಹಿತಿ ಕಳ್ಳತನದ ಕುರಿತು ದಿ ನ್ಯೂಸ್ ಮಿನಿಟ್ ಮತ್ತು ಪ್ರತಿದ್ವನಿ ತಂಡ ನಡೆಸಿ ತನಿಖಾ ವರದಿಯ ಬಳಿಕ, ಭಾರತೀಯ ಚುನಾವಣಾ...
Read moreDetails2020 ರಲ್ಲಿ ಕೋವಿಡ್ ಸಾಂಕ್ರಾಮಿಕ ರೋಗದ ಉಲ್ಬಣಿಸುತ್ತಿದ್ದಂತೆ, ಲಕ್ಷಾಂತರ ಜನರು ತಮ್ಮ ಉದ್ಯೋಗಗಳನ್ನು ಕಳೆದುಕೊಂಡರು ಮಾತ್ರವಲ್ಲ ಆರ್ಥಿಕತೆಯು ಸ್ಥಗಿತಗೊಂಡಿತ್ತು. ಆದರೆ, ಬೆಂಗಳೂರಿನ ಹೊರವಲಯದಲ್ಲಿರುವ ಕಲ್ಲನಾಯಕನಹಳ್ಳಿಯ ಕೆಲವು ರೈತರ...
Read moreDetailsಸುಮಾರು ಮೂರು ತಿಂಗಳ ತನಿಖೆಯ ನಂತರ ಪ್ರತಿಧ್ವನಿ ಮತ್ತು TNM ಬಹಿರಂಗಪಡಿಸಿದ ಬೆಂಗಳೂರಿನ ಮತದಾರರ ಡೇಟಾ ಕಳ್ಳತನದಲ್ಲಿ ತೊಡಗಿರುವ ಚಿಲುಮೆ ಶೈಕ್ಷಣಿಕ ಸಾಂಸ್ಕೃತಿಕ ಮತ್ತು ಗ್ರಾಮೀಣ ಅಭಿವೃದ್ಧಿ...
Read moreDetailsತಮ್ಮನ್ನು ಕೃಷಿಕ ಮತ್ತು ಉದ್ಯಮಿ ಎಂದು ಬಣ್ಣಿಸಿರುವ ಬಿಜೆಪಿಯ ಮಾಜಿ ಶಾಸಕ ನಂದೀಶ ರೆಡ್ಡಿ ಅವರು 2018 ರಲ್ಲಿ ಕೆಆರ್ ಪುರಂ ಶಾಸಕರ ಚುನಾವಣೆಯಲ್ಲಿ ಸ್ಪರ್ಧಿಸಿ, ಸೋತಿದ್ದಾರೆ....
Read moreDetailsಅಕ್ಟೋಬರ್ ಮೂರನೇ ವಾರದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಮತ್ತು ಮತದಾರರ ಪಟ್ಟಿಯಿಂದ ಅಳಿಸುವ ನೆಪದಲ್ಲಿ ಬೂತ್ ಮಟ್ಟದ ಅಧಿಕಾರಿಗಳೆಂದು ಹೇಳಿಕೊಳ್ಳುವ ಜನರ ಗುಂಪು ತಮ್ಮ ಮನೆಗಳಿಗೆ ಬಂದಿದೆ...
Read moreDetailsಬಲಪಂಥೀಯರು ಹಾಗೂ ಹಿಂದುತ್ವವಾದಿಗಳು ಹಕ್ಕು ಸಾಧಿಸಲು ಪ್ರಯತ್ನ ಪಡುತ್ತಿರುವ ಮಾಜಿ ರಾಷ್ಟ್ರಪತಿ, ಇಸ್ರೋ ವಿಜ್ಞಾನಿ ಡಾ. ಎಪಿಜೆ ಅಬ್ದುಲ್ ಕಲಾಂ ಅವರಿಗೆ ಆರ್‌ಎಸ್‌ಎಸ್ ಜೊತೆ ತನ್ನನ್ನು ಗುರುತಿಸಿಕೊಳ್ಳುವುದು...
Read moreDetailsಬಿಜೆಪಿಯ ರಾಜಕೀಯ ಆಟದ ಒಳಸುಳಿಗಳನ್ನು ಅರಿಯಲು ಸೋತಿರುವ ಪಕ್ಷಗಳು ಇಂದು ವಿರೋಧ ಪಕ್ಷದ ಖುರ್ಚಿಯಲ್ಲಿ ಅಸಮಾಧಾನ ಪಡುವಂತಾಗಿದೆ. ರಾಜಕೀಯ ಪಕ್ಷವಾಗಿ ರೂಪುಗೊಂಡು ಶತಕ ಕಳೆದರೂ ಕಾಂಗ್ರೆಸ್ ಇನ್ನೂ...
Read moreDetailsಧರ್ಮ ರಾಜಕಾರಣದ ಕೆಟ್ಟ ಪರಿಣಾಮಗಳು ಕರ್ನಾಟಕ ಶಿಕ್ಷಣ ಸಂಸ್ಥೆಗಳನ್ನು ಬಿಟ್ಟಿಲ್ಲ. ನಿರ್ದಿಷ್ಟ ಸಮುದಾಯದ ಧಾರ್ಮಿಕ ಚಹರೆಗಳನ್ನು ಸಮಾಜದ ಮುಖ್ಯವಾಹಿನಿಯಿಂದ ಅಳಿಸುವ ವ್ಯವಸ್ಥಿತ ಷಡ್ಯಂತ್ರಕ್ಕೆ ಸ್ವತಃ ಸರ್ಕಾರವೇ ಇಳಿದು...
Read moreDetailsಗುಜರಾತಿನಲ್ಲಿ ಈಗಾಗಲೇ ಆಂತರಿಕ ಭಿನ್ನಮತದಿಂದಾಗಿ ಚುನಾವಣೆಗೂ ಮೊದಲೇ ಬಳಲಿರುವ ಕಾಂಗ್ರೆಸ್’ಗೆ ‘ರಾಜಸ್ಥಾನ ಮಾಡೆಲ್’ ಜೀವ ತುಂಬುತ್ತಿದೆ. 2014ರಲ್ಲಿ ಬಿಜೆಪಿ ಗುಜರಾತ್ ಮಾಡೆಲ್ ಬಳಸಿ ದೇಶದಲ್ಲಿ ಅಧಿಕಾರ ಹಿಡಿದಿತ್ತು. ಈಗ ಕಾಂಗ್ರೆಸ್ ಅದೇ ಗುಜರಾತಿಗೆ ರಾಜಸ್ಥಾನ ಮಾಡೆಲ್’ನ ಕನಸು ತೋರಿಸುತ್ತಿದೆ. ಈ ಬಗ್ಗೆ ಬುಧವಾರ ಮಾಹಿತಿ ನೀಡಿರುವ ಗುಜರಾತ್ ಕಾಂಗ್ರೆಸ್ ನಾಯಕರು ಪಕ್ಕದ ರಾಜಸ್ಥಾನ ಸರ್ಕಾರ ಜಾರಿಗೆ ತಂದಿರುವ ಹಲವು ಜನಪರ ಯೋಜನೆಗಳನ್ನು ಗುಜರಾತಿನಲ್ಲಿಯೂ ಅನುಷ್ಟಾನಗೊಳಿಸುವ ಭರವಸೆ ನೀಡಿದ್ದಾರೆ. ಈ ಯೋಜನೆಗಳನ್ನು ಪಕ್ಷದ ಅಧಿಕೃತ ಪ್ರಣಾಳಿಕೆಯಲ್ಲಿ ಸೇರಿಸಿ ಗುಜರಾತ್ ಮತದಾರರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದೆ. ಮುಖ್ಯವಾಗಿ, ರಾಜಸ್ಥಾನ ಸರ್ಕಾರವು ತಮ್ಮ ರಾಜ್ಯದ ಆರೋಗ್ಯ ವ್ಯವಸ್ಥೆಯನ್ನು ದೇಶದ ಅತ್ಯುತ್ತಮ ಆರೋಗ್ಯ ವ್ಯವಸ್ಥೆ ಎಂದು ಬಣ್ಣಿಸಿದೆ. ಈ ವ್ಯವಸ್ಥೆಯನ್ನು ಗುಜರಾತಿನಲ್ಲಿ ಅಳವಡಿಸುವುದು ಜೊತೆಗೆ ಹಳೆಯ ಪಿಂಚಣಿ ಯೋಜನೆಯನ್ನು ಇನ್ನಷ್ಟು ವಿಸ್ತರಿಸುವುದು ಕಾಂಗ್ರೆಸ್ ಗುರಿ. ಎಲ್ಲದಕ್ಕೂ ಮಿಗಿಲಾಗಿ, ಗುಜರಾತ್ ಚುನಾವಣೆಯ ಉಸ್ತುವಾರಿಯಾಗಿ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಅವರನ್ನು ನೇಮಿಸಿದ್ದು, ರಾಜಸ್ಥಾನ ಮಾಡೆಲ್ ಅನುಷ್ಟಾನಕ್ಕೆ ಮತ್ತಷ್ಟು ಸಹಕಾರಿಯಾಗಿದೆ. ಚುನಾವಣೆಗೆ ಪಕ್ಷದ ತಂತ್ರಗಾರಿಕೆಯನ್ನು ವಿವರಿಸಿರುವ ಸಿಎಂ ಗೆಹ್ಲೋಟ್, ಪಕ್ಷವು ಪ್ರಣಾಳಿಕೆ ತಯಾರಿಸಲು ಮತದಾರರ ಅಭಿಪ್ರಾಯವನ್ನು ಸಂಗ್ರಹಿಸುತ್ತಿದೆ. ರಾಜಸ್ಥಾನ ಸರ್ಕಾರದ ಕೆಲವು ಜನಪ್ರಿಯ ಯೋಜನೆಗಳನ್ನು ಈ ಪ್ರಣಾಳಿಕೆಯಲ್ಲಿ ಸೇರಿಸಲಾಗುತ್ತದೆ, ಎಂದಿದ್ದಾರೆ. “ಮೊದಲನೇಯದಾಗಿ, ದೇಶದ ಅತ್ಯುತ್ತಮ ಆರೋಗ್ಯ ವ್ಯವಸ್ಥೆಯಾದ ಚಿರಂಜೀವಿ ಆರೋಗ್ಯ ಯೋಜನೆಯನ್ನು ಸೇರಿಸಲಾಗುವುದು. ಆಯುಷ್ಮಾನ್ ಭಾರತ್ ಯೋಜನೆ ನಿಗದಿತ ಗುರಿಯನ್ನು ಮುಟ್ಟದೇ ಇದ್ದಾಗ ಚಿರಂಜೀವಿ ಯೋಜನೆಯನ್ನು ಜಾರಿಗೊಳಿಸುವಂತೆ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರಿಗೆ ನಾನು ಸಲಹೆ ನೀಡಿದ್ದೆ. ಈ ಯೋಜನೆಯು ಹತ್ತು ಲಕ್ಷದವರೆಗೆ ವಿಮಾ ಸುರಕ್ಷತೆಯನ್ನು ಒದಗಿಸುತ್ತದೆ. ಇದರೊಂದಿಗೆ, ರಾಜಸ್ಥಾನದಲ್ಲಿ ಮಾಡಿರುವಂತೆ ಹಳೆಯ ಪಿಂಚಣಿ ಯೋಜನೆಯನ್ನೂ ವಿಸ್ತರಿಸುವ ಭರವಸೆಯನ್ನು ನಾವು ನೀಡುತ್ತೇವೆ. ಗುಜರಾತಿನ ಮತದಾರರು ಬಿಜೆಪಿಯ 27 ವರ್ಷಗಳ ದುರಾಡಳಿತದಿಂದ ಬೇಸತ್ತು ಹೋಗಿದ್ದಾರೆ,” ಎಂದು ಗೆಹ್ಲೋಟ್ ಹೇಳಿದ್ದಾರೆ. ನಗರ ಭಾಗದ ಜನರಿಗೆ ನೂರು ದಿನಗಳ ಉದ್ಯೋಗ ನೀಡುವ ಇಂದಿರಾ ಗಾಂಧಿ ನಗರ ಉದ್ಯೋಗ ಖಾತ್ರಿ ಯೋಜನೆಯು ಈಗಾಗಲೇ ರಾಜಸ್ಥಾನದಲ್ಲಿ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿರುವ ಯೋಜನೆ. ಈ ಯೋಜನೆಯನ್ನು ಗುಜರಾತಿನಲ್ಲಿ ಜಾರಿಗೆ ತರಲು ಕಾಂಗ್ರೆಸ್ ಚಿಂತನೆ ನಡೆಸಿದೆ. ಇದರೊಂದಿಗೆ, ಗ್ರಾಮೀಣ ಭಾಗದ ಆಂಗ್ಲ ಮಾಧ್ಯಮ ಶಾಲೆಗಳಿಗೆ, ದಿನಕ್ಕೆ ಎಂಟು ರೂಪಾಯಿಯಂತೆ ಊಟ ಒದಗಿಸುವ ಇಂದಿರಾ ರಸೋಯಿ ಯೋಜನೆಯನ್ನು ಸೇರಿಸುವ ಸಾಧ್ಯತೆಯಿದೆ. ಸೆಪ್ಟೆಂಬರ್ 5ರಂದು ಕಾಂಗ್ರೆಸ್ ಯುವ ನಾಯಕ ರಾಹುಲ್ ಗಾಂಧಿಯವರು ಬಹಿರಂಗ ಸಭೆ ನಡೆಸುವ ಮೂಲಕ ಗುಜರಾತಿನಲ್ಲಿ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಲಿದ್ದಾರ. ಹಿಂದಿನಿಂದಲೂ ಗುಜರಾತ್ ಚುನಾವಣೆ ವಿಚಾರದಲ್ಲಿ ಅತ್ಯಂತ ಗಂಭೀರವಾಗಿ ಕಾರ್ಯನಿರ್ವಹಿಸುತ್ತೇವೆ ಎಂದು ಹೇಳುತ್ತಾ ಬಂದಿರುವ ಕಾಂಗ್ರೆಸ್ 2017ರಿಂದ ಇಲ್ಲಿಯವರೆಗೆ ಸುಮಾರು ಹನ್ನೆರಡಕ್ಕೂ ಹೆಚ್ಚು ಪ್ರಮುಖ ನಾಯಕರನ್ನು ಕಳೆದುಕೊಂಡಿದೆ. ಎಲ್ಲರೂ ಬಿಜೆಪಿ ಪಾಳೆಯದಲ್ಲಿ ಕಾಂಗ್ರೆಸ್ ವಿರುದ್ಧ ಕೆಲಸ ಮಾಡಲು ಸಜ್ಜಾಗಿದ್ದಾರೆ. ಮುಖ್ಯವಾಗಿ, ಒಬಿಸಿ ನಾಯಕರಾದ ಅಲ್ಪೇಶ್ ಠಾಕುರ್ ಮತ್ತು ಪಾಟಿದಾರ್ ಸಮಾಜದ ನಾಯಕ ಹಾರ್ದಿಕ್ ಪಟೇಲ್ ಪಕ್ಷ ತೊರೆದಿರುವುದು ಕಾಂಗ್ರೆಸ್ ಪಾಲಿಗೆ ಮುಳುವಾಗಲಿದೆ. ಮಾತ್ರವಲ್ಲದೇ, ಗುಜರಾತಿನಲ್ಲಿ ಆಮ್ ಆದ್ಮಿ ಪಕ್ಷದ ವರ್ಚಸ್ಸು ಬೆಳೆಯುತ್ತಿರುವುದ ಕೂಡಾ ಕಾಂಗ್ರೆಸ್ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. 300 ಯೂನಿಟ್ ಉಚಿತ ವಿದ್ಯುತ್, ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದ ಅಭಿವೃದ್ಧಿ, ಮಾಸಿಕ ನಿರುದ್ಯೋಗ ಭತ್ಯೆ ಸೇರಿದಂತೆ ಹಲವು ಯೋಜನೆಗಳ ಭರವಸೆಯನ್ನು ಆಮ್ ಆದ್ಮಿ ಪಕ್ಷ ಈಗಾಗಲೇ ನೀಡಿದೆ. ಬಿಜೆಪಿಯ ಗುಜರಾತ್ ಮಾಡೆಲ್, ಆಮ್ ಆದ್ಮಿಯ ದೆಹಲಿ ಮಾಡೆಲ್ ನಡುವೆ ಈಗ ಕಾಂಗ್ರೆಸ್’ನ ರಾಜಸ್ಥಾನ ಮಾಡೆಲ್ ಚುನಾವಣಾ ಅಖಾಡಕ್ಕೆ ಇಳಿಯಲು ಸಜ್ಜಾಗಿದೆ. ಈ ಮೂರು ಮಾಡೆಲ್’ಗಳಲ್ಲಿ ಯಾರಿಗೆ ಜಯ ಸಿಗುತ್ತದೆ ಎಂದು ಕಾದುನೋಡಬೇಕಿದೆ.
Read moreDetailsಗುರುವಾರ ಕೊಡಗಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆದು ಕಪ್ಪು ಬಾವುಟ ಪ್ರದರ್ಶಿಸಿದ ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರು ಅತ್ಯಂತ ಕೆಟ್ಟ ಉದಾಹರಣೆಯನ್ನು ಸೃಷ್ಟಿಸಿದ್ದಾರೆ. ವಿಪಕ್ಷಗಳ...
Read moreDetailsಸಿಎಂ ಸ್ಥಾನಕ್ಕೆ ರಾಜಿನಾಮೆ ನೀಡಿ ಅಧಿಕಾರವಿಲ್ಲದೆ ಸುಮ್ಮನೆ ಕುಳಿತಿದ್ದ ಬಿ ಎಸ್ ಯಡಿಯೂರಪ್ಪ ಅವರಿಗೆ ಕೊನೆಗೂ ಬಿಜೆಪಿ ಹೈಕಮಾಂಡ್ ಪಕ್ಷದಲ್ಲಿ ಸ್ಥಾನ ನೀಡಿ ಗೌರವಿಸಿದೆ. ಬರೋಬ್ಬರಿ ಒಂದು...
Read moreDetailsಬುಲ್ಡೋಝರ್ ನ್ಯಾಯದ ಹೆಸರಿನಲ್ಲಿ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಆರೋಪಿಗಳ ಮನೆಗಳ ಮೇಲೆ ಬುಲ್ಡೋಝರ್ ಗಳನ್ನು ಚಲಾಯಿಸುವ ಕಾರ್ಯಾಚರಣೆಗೆ ದೇಶದಲ್ಲಿ ಮಾತ್ರವಲ್ಲದೆ ಅಂತರಾಷ್ಟ್ರೀಯ ಮಟ್ಟದಲ್ಲೂ ವಿರೋಧ ವ್ಯಕ್ತವಾಗತೊಡಗಿವೆ. ಅಮೇರಿಕಾದ...
Read moreDetailsವಿನಾಯಕ ದಾಮೋದರ್ ಸಾವರ್ಕರ್… ಸದ್ಯಕ್ಕೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಅತ್ಯಂತ ವಿವಾದಿತ ವ್ಯಕ್ತಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಶಿವಮೊಗ್ಗದಲ್ಲಿ ಕೋಮು ಸಂಘರ್ಷ, ಉಡುಪಿ ಮತ್ತು ತುಮಕೂರಿನಲ್ಲಿ ರಾಜಕೀಯ ಸಂಘರ್ಷಕ್ಕೆ ದಾರಿ ಮಾಡಿಕೊಟ್ಟಿರುವ ಸಾವರ್ಕರ್ ಹಿನ್ನೆಲೆ ಕೂಡಾ ಅಷ್ಟೇ ವಿವಾದಿತ. ಬಲ ಪಂಥೀಯ ಸಂಘಟನೆಗಳು ಬಿಟ್ಟರೆ ಬೇರೆ ಯಾರೂ ಇವರನ್ನು ಸ್ವಾತಂತ್ರ್ಯ ಹೋರಾಟಗಾರರು ಎಂದು ಒಪ್ಪಲು ಸಿದ್ದರಿಲ್ಲ. ಆದರೂ, ಹೇರಿಕೆ ಎಂಬ ವಿಷಯದಲ್ಲಿ ಪರಿಣಿತಿ ಹೊಂದಿರುವ ಬಲ ಪಂಥೀಯರು ಜನರಿಗೆ ಇಷ್ಟವಿಲ್ಲದಿದ್ದರೂ ಸಾವರ್ಕರ್ ಅವರನ್ನು ಸ್ವಾತಂತ್ರ್ಯ ಹೋರಾಟಗಾರ ಎಂದು ಬಿಂಬಿಸುತ್ತಲೇ ಬಂದಿದೆ. ಇದರೊಂದಿಗೆ, ಕಾಂಗ್ರೆಸ್’ನಲ್ಲಿದ್ದ ದೇಶದ ಪ್ರಥಮ ಗೃಹ ಮಂತ್ರಿ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಕುರಿತಾಗಿಯೂ ಅಪಾರ ಆತ್ಮಾಭಿಮಾನವನ್ನು ಬಿಜೆಪಿ ಪ್ರದರ್ಶಿಸುತ್ತಾ ಬಂದಿದೆ. ಭಾರತದ ಇತಿಹಾಸದಲ್ಲಿ ಬಲಪಂಥೀಯ ಸಂಘಟನೆಗಳ ವಿರುದ್ಧ ನಿರಂತರ ಹೋರಾಟ ನಡೆಸಿದ್ದ ಸರ್ದಾರ್ ಪಟೇಲ್, ಇಂದು ಅದೇ ಬಲಪಂಥೀಯರ ಗುರುವಾಗಿದ್ದಾರೆ. ಇಂದಿಗೂ ವಿವಾದಿತ ವ್ಯಕ್ತಿಯಾಗಿಯೇ ಉಳಿದುಕೊಂಡಿರುವ ಸಾವರ್ಕರ್ ಕುರಿತು ಸರ್ದಾರ್ ವಲ್ಲಭಭಾಯಿ ಪಟೇಲ್ ಯಾವ ರೀತಿಯ ಭಾವನೆಯನ್ನು ಹೊಂದಿದ್ದರು ಎಂಬುದು ಪ್ರಮುಖವಾಗಿ ಗಮನಿಸಬೇಕಾದ ಸಂಗತಿ. ಈ ಕುರಿತಾದ ಐತಿಹಾಸಿಕ ಘಟನೆಗಳ ಸಂಕ್ಷಿಪ್ತ ವಿವರ ಇಲ್ಲಿದೆ. 1946ರಲ್ಲಿ ಭಾರತದ ಹಲವೆಡೆ ಉಂಟಾದ ಕೋಮು ಸಂಘರ್ಷಗಳನ್ನು ಆರ್ ಎಸ್ ಎಸ್ ಮತ್ತು ಹಿಂದೂ ಮಹಾಸಭಾ ತನ್ನ ಸ್ವಾರ್ಥಕ್ಕಾಗಿ ಬಳಸಿಕೊಂಡಿತು. ಹಿಂದೂಗಳ ಪಾಲಿನ ರಕ್ಷಕರಾಗಿ ನಾವಿದ್ದೇವೆ ಎಂಬಂತೆ ಬಿಂಬಿಸಿಕೊಳ್ಳುವ ಹುನ್ನಾರದಲ್ಲಿ ಇವೆರಡೂ ಸಂಘಟನೆಗಳು ತೊಡಗಿಕೊಂಡಿದ್ದವು. ಅದಕ್ಕಾಗಿ ಸರ್ಕಾರ ವಿರೋಧಿ ಹಾಗೂ ಗಾಂಧೀ ವಿರೋಧಿ ಭಾಷಣ, ಲೇಖನಗಳನ್ನು ಬರೆದು ಜನರನ್ನು ಸರ್ಕಾರದ ವಿರುದ್ಧ ಎತ್ತಿಕಟ್ಟುವ ಕೆಲಸದಲ್ಲಿ ತೊಡಗಿದ್ದವು. “Organiser” ಎಂಬ ಬಲಪಂಥೀಯ ಪತ್ರಿಕೆಯಲ್ಲಿ ಲೇಖನಗಳನ್ನು ಬರೆದ ಹಿಂದೂ ಮಹಾಸಭಾ ನಾಯಕ ಶ್ಯಾಮ ಪ್ರಸಾದ್ ಮುಖರ್ಜಿ, ತ್ರಿವರ್ಣ ಧ್ವಜ ನಮ್ಮ ರಾಷ್ಟ್ರಧ್ವಜವೆಂದು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಕೇಸರಿ ಭಗವಾ ಧ್ವಜ ಒಂದೇ ನಿಜವಾದ ಧ್ವಜ. ಮೂರು ಎಂಬ ಸಂಖ್ಯೆಯೇ ಹಿಂದೂ ಸಂಪ್ರದಾಯದ ಪ್ರಕಾರ ಕೆಡುಕನ್ನು ತರುತ್ತದೆ. ಇದು ಭಾರತದ ಪಾಳಿಗೆ ಮುಳುವಾಗಲಿದೆ ಎಂದು ಹೇಳಿದ್ದರು. 1947ರಲ್ಲಿ ಭಾರತಪಾಕಿಸ್ತಾನ ವಿಭಜನೆಯ ಬಳಿಕ ಭಾರತ ಮತ್ತು ಪಾಕಿಸ್ತಾನದಲ್ಲಿ ನಡೆದ ದಂಗೆ, ಕೋಮು ಘರ್ಷವನ್ನು ಮುಂದಿಟ್ಟುಕೊಂಡು ಆರ್ ಎಸ್ ಎಸ್ ಮತ್ತು ಹಿಂದೂ ಮಹಾಸಭಾ ಮತ್ತೆ ಗಾಂಧಿ ವೀರೋಧಿ ನೀತಿಯನ್ನು ಮುಂದುವರೆಸಿತು. ಡಿಸೆಂಬರ್ 18,1947ರಲ್ಲಿ ದೆಹಲಿಯಲ್ಲಿ ನಡೆದ ಬೃಹತ್ ಸಭೆಯಲ್ಲಿ ಅಂದಿನ ಆರ್ ಎಸ್ ಎಸ್ ಮುಖ್ಯಸ್ಥ ಎಂ ಎಸ್ ಗೋಲ್ವೋಲ್ಕರ್, ಭಾರತ ಸರ್ಕಾರವನ್ನು ‘ಸೈತಾನ ಮತ್ತು ಭಾರತೀಯೇತರ’ ಸರ್ಕಾರ ಎಂದು ಕರೆದಿದ್ದರು. ಆರ್ ಎಸ್ ಎಸ್ ವಿರೋಧಿಗಳನ್ನು ಕೂಡಲೇ ‘ಮೌನವಾಗಿಸಬೇಕು’ ಎಂದು ಕರೆ ನೀಡಿದ್ದರು. ಈ ಬೆದರಿಕೆಯು 1848ರ ಜನವರಿ 30ರಂದು ಕಾರ್ಯರೂಪಕ್ಕೆ ಬಂದಿತ್ತು. ರಾಷ್ಟ್ರಪಿತ ಮಹಾತ್ಮಾ ಗಾಂಧಿ ನಾಥೂರಾಮ್ ಗೋಡ್ಸೆ ಎಂಬ ವ್ಯಕ್ತಿಯಿಂದ ಹುತಾತ್ಮರಾದರು. ಈ ಸಂದರ್ಭದಲ್ಲಿ ಭಾರತದ ಉಪಪ್ರಧಾನಿ ಹಾಗೂ ಗೃಹಮಂತ್ರಿಗಳಾದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು 25,000 ಆರ್ ಎಸ್ ಎಸ್ ಕಾರ್ಯಕರ್ತರನ್ನು ಬಂಧಿಸಿ ಆರ್ ಎಸ್ ಎಸ್ ಸಂಘಟನೆಯನ್ನೇ ನಿಷೇಧಿಸಿದರು. ನಿಷೇಧದ ಭಯದಿಂದ ಹಿಂದೂ ಮಹಾಸಭಾ ತನ್ನನ್ನು ತಾನೇ ವಿಸರ್ಜಿಸಿಕೊಂಡಿತು. ಗಾಂಧಿ ಹತ್ಯೆಯ ಷಡ್ಯಂತ್ರದಲ್ಲಿ ಸಾವರ್ಕರ್ ಪಾತ್ರ ಇರುವುದನ್ನೂ ಮನಗಂಡಿದ್ದ ಸರ್ದಾರ್ ಪಟೇಲ್, ಸಾವರ್ಕರ್ ಅನ್ನೂ ಬಂಧಿಸಿದ್ದರು. ಖುದ್ದು ವಕೀಲರಾಗಿದ್ದ ಪಟೇಲ್, ಗಾಂಧಿ ಹತ್ಯೆಯಲ್ಲಿ ಸಾವರ್ಕರ್ ಪತ್ರದ ಕುರಿತು ಎಷ್ಟು ಖಚಿತವಾಗಿದ್ದರೆಂದರೆ, ಆರೋಪಿಗಳ ಪಟ್ಟಿಯಲ್ಲಿ ಅವರ ಹೆಸರನ್ನೂ ಸೇರಿಸಿದ್ದರು. ಈ ಕುರಿತಾಗಿ ಜವಹರ್ ಲಾಲ್ ನೆಹರೂ ಬಳಿ ಮಾತನಾಡಿದ ಪಟೇಲ್ “ಸಾವರ್ಕರ್ ನಾಯಕತ್ವದಲ್ಲಿ ಹಿಂದೂ ಮಹಾಸಭಾದ ಹುಚ್ಚು ತಂಡ ನಡೆಸಿದ ಷಡ್ಯಂತ್ರ ಮತ್ತು ಹತ್ಯೆ,” ಎಂದು ಹೇಳಿದ್ದರು. ಮೇ 6, 1948ರಲ್ಲಿ ಹಿಂದೂ ಮಹಾಸಭಾ ನಾಯಕ ಶ್ಯಾಮ ಪ್ರಸಾದ್ ಮುಖರ್ಜಿ ಅವರಿಗೆ ಸರ್ದಾರ್ ಪಟೇಲ್ ಪತ್ರ ಬರೆದಿದ್ದರು. ಆ ಪತ್ರದ ಸಾರಾಂಶ ಹೀಗಿದೆ, “ಗಾಂಧಿ ಹತ್ಯೆಯ ಬಳಿಕ ತುಂಬಾ ಜನ ಹಿಂದೂ ಸಭಾ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿ ಸಿಹಿ ಹಂಚಿದ್ದಾರೆ. ಗಾಂಧಿ ಹತ್ಯೆಯ ಕೆಲವೇ ತಿಂಗುಳಗಳ ಹಿಂದೆ ಹಿಂದೂ ಮಹಾಸಭಾ ವಕ್ತಾರರಾದ ಮಹಾಂತ ದಿಗ್ವಿಜಯ್ ನಾಥ್, ರಾಮ್ ಸಿಂಗ್ ಮತ್ತು ದೇಶಪಾಂಡೆ ಅವರು ಮಾಡಿರುವಂತಹ ಕೋಮು ಪ್ರಚೋದಿತ ಭಾಷಣಗಳು ದೇಶದ ಭದ್ರತೆಗೆ ಮಾರಕ. ಇದೇ ನಿಯಮ ಆರ್ ಎಸ್ ಎಸ್’ಗೂ ಅನ್ವಯಿಸುತ್ತದೆ. ಆರ್ ಎಸ್ಎಸ್ ಜೊತೆ ಇರುವ ಹೆಚ್ಚುವರಿ ಅಪರಾಯ ಏನೆಂದರೆ, ಅದೊಂದು ಮಿಲಿಟರಿ ಅಥವಾ ಅರೆ ಮಿಲಿಟರಿ ಗುಂಪಾಗಿ ಕಾರ್ಯನಿರ್ವಹಿಸುತ್ತದೆ.” ಈ ರೀತಿ ಆರ್ ಎಸ್ ಎಸ್ ಮತ್ತು ಹಿಂದೂ ಮಹಾಸಭಾ ದೇಶದ ಭದ್ರತೆಗೇ ಅಪಾಯ ಉಂಟುಮಾಡುವ ಸಂಘಟನೆಗಳು ಎಂದು ಸರ್ದಾರ್ ಪಟೇಲ್ ಹೇಳಿರುವಾಗ, ಅವರನ್ನೇ ತಮ್ಮ ಮಡಿಲಿಗೆ ಹಾಕಿಕೊಂಡು ಅಪ್ರತಿಮ ದೇಶಭಕ್ತರಂತೆ ಬೃಹನ್ನಾಟಕವಾಡುತ್ತಿರುವ ಸಂಘಪರಿವಾದರ ನಾಯಕರು ಈಗ ಗಾಂಧಿ ಹತ್ಯೆ ಆರೋಪಿ ಸಾವರ್ಕರ್’ನಿಗೆ ದೇಶಭಕ್ತ, ಸ್ವಾತಂತ್ರ್ಯ ಹೋರಾಟಗಾರ ಎಂಬ ಬಿರುದನ್ನು ನೀಡಲು ಹೊರಟಿದೆ. ಒಂದು ವೇಳೆ ಈ ಸಂದರ್ಭದಲ್ಲಿ ಸರ್ದಾರ್ ಪಟೇಲ್ ಬದುಕಿದ್ದರೆ ಏನನ್ನುತ್ತಿದ್ದರೋ ಏನೋ…
Read moreDetailsರಾಜ್ಯಸಭಾ ಸದಸ್ಯ, ನಟ ಜಗ್ಗೇಶ್ ಅವರು ʼವಿಶ್ವಭಾರತಿಗೆ ಕನ್ನಡದಾರತಿʼ ಶೀರ್ಷಿಕೆಯಡಿಯಲ್ಲಿ ʼವಂದೇ ಮಾತರಂʼ ವಿಡಿಯೋ ಸಾಂಗ್ ನಿರ್ಮಿಸಿದ್ದಾರೆ. ಸಂತೋಷ್ ಆನಂದ್ ರಾಮ್ ನಿರ್ದೇಶನದ ಈ ಹಾಡಿಗೆ ಪ್ರವೀಣ್...
Read moreDetailsಇಂದು ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಬಹಳ ವಿಜೃಂಭಣೆಯಿಂದ ಆಚರಿಸುತ್ತಿದೆ. ಆಗಸ್ಟ್ 15, 1947ರಂದು ಹುಟ್ಟಿದ ಹೊಸ ದೇಶಕ್ಕೆ ಇಂದು 75ರ ಸಂಭ್ರಮ. ಹಳೆಯ ಘಟನೆಗಳನ್ನು ಮೆಲುಕು...
Read moreDetails“ನಾನು ಇಂದು ನನ್ನ ಸ್ನೇಹಿತನನ್ನು ಕಳೆದುಕೊಂಡೆ. ಮುಂದಿನ ಸರದಿ ನಿಮ್ಮದಾಗಬಹುದು” ಎಂಬ ಬೋರ್ಡ್ ಹಿಡಿದುಕೊಂಡ ಹುಡುಗನೊಬ್ಬ ರಸ್ತೆ ಹೊಂಡಗಳ ವಿರುದ್ಧ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿ ಗಮನ...
Read moreDetailsಬಿಹಾರದಲ್ಲಿ ಆರಂಭವಾದ ರಾಜಕೀಯ ಪಲ್ಲಟ ಬಿಜೆಪಿಯನ್ನು ಅಧಿಕಾರದಿಂದ ಕಿತ್ತೆಸೆದಿದೆ. ಎನ್.ಡಿ.ಎ. ಜೊತೆಗಿದ್ದ ನಿತೀಶ್ ಕುಮಾರ್ ಅವರು ಈ ಮೈತ್ರಿಕೂಟದ ಸಖ್ಯ ತೊರೆದು ಆರ್.ಜೆ.ಡಿ. ಮತ್ತು ಇತರೆ ಪಕ್ಷಗಳ...
Read moreDetails© 2024 www.pratidhvani.com - Analytical News, Opinions, Investigative Stories and Videos in Kannada