2020 ರಲ್ಲಿ ಕೋವಿಡ್ ಸಾಂಕ್ರಾಮಿಕ ರೋಗದ ಉಲ್ಬಣಿಸುತ್ತಿದ್ದಂತೆ, ಲಕ್ಷಾಂತರ ಜನರು ತಮ್ಮ ಉದ್ಯೋಗಗಳನ್ನು ಕಳೆದುಕೊಂಡರು ಮಾತ್ರವಲ್ಲ ಆರ್ಥಿಕತೆಯು ಸ್ಥಗಿತಗೊಂಡಿತ್ತು. ಆದರೆ, ಬೆಂಗಳೂರಿನ ಹೊರವಲಯದಲ್ಲಿರುವ ಕಲ್ಲನಾಯಕನಹಳ್ಳಿಯ ಕೆಲವು ರೈತರ ಖಾತೆಗಳಿಗೆ ನಿಗೂಢ ಮೂಲದಿಂದ ಹಣ ಹರಿದು ಬಂದಿತ್ತು. ಅವರ ಬ್ಯಾಂಕ್ ಖಾತೆಗಳಿಗೆ ಮೂರು ಹಂತಗಳಲ್ಲಿ ಬಂದ ಹಣವು ಕೋವಿಡ್ ಬಿಕ್ಕಟ್ಟಿನ ಸಮಯದಲ್ಲಿ ಅವರ ಕಷ್ಟಕ್ಕೆ ನೆರವಾಗಬೇಕಿತ್ತು, ಆದರೆ, ಹಾಗಾಗಲಿಲ್ಲ. ಬದಲಾಗಿ, ಅದನ್ನು ತಮ್ಮ ಹಳ್ಳಿಯ ಪ್ರಭಾವಿ ವ್ಯಕ್ತಿಗೆ ನಗದಾಗಿ ನೀಡಬೇಕಿತ್ತು. ಆ ಪ್ರಭಾವಿ ಇನ್ಯಾರೂ ಅಲ್ಲ, ಮತದಾರರ ಮಾಹಿತಿ ಕಳ್ಳತನದ ಕಿಂಗ್‌ಪಿನ್ ಎಂದು ಈಗ ಬೆಂಗಳೂರಿನಲ್ಲಿ ಪೊಲೀಸರ ವಶದಲ್ಲಿರುವ ಚಿಲುಮೆ ಟ್ರಸ್ಟ್‌ನ ಸಂಸ್ಥಾಪಕ ರವಿಕುಮಾರ್ ಕೃಷ್ಣಪ್ಪ ಆಗಿದ್ದ.
ರವಿಕುಮಾರ್ ಮತ್ತು ಅವರ ಚಿಲುಮೆ ಎನ್‌ಜಿಒನಿಂದ ಡೇಟಾ ಕಳ್ಳತನವನ್ನು ಬಹಿರಂಗಪಡಿಸಿದ ನಮ್ಮ ತನಿಖೆಯ ಭಾಗವಾಗಿ, ಚಿಲುಮೆ ಟ್ರಸ್ಟ್‌ನ ಸಂಸ್ಥಾಪಕ ರವಿಕುಮಾರ್ ನನ್ನು ಒಳಗೊಂಡ ಇನ್ನೂ ದೊಡ್ಡ ಹಗರಣದ ಸಾಧ್ಯತೆಯನ್ನು ಸೂಚಿಸುವ ಅನುಮಾನಾಸ್ಪದ ಹಣದ ಜಾಡು ನಮ್ಮ ತಂಡಕ್ಕೆ ದೊರೆತಿದೆ. ರವಿಕುಮಾರ್ ಅವರ ಹಳ್ಳಿಯ ಹಲವಾರು ರೈತರಿಗೆ ಭಾರತ ಸರ್ಕಾರದ ಕಂಪನಿಯೆಂದು ತೋರುವ ಖಾತೆಯಿಂದ ಸಂಶಯಾಸ್ಪದ ರೀತಿಯಲ್ಲಿ ಬ್ಯಾಂಕ್ ವಹಿವಾಟುಗಳು ನಡೆದಿವೆ. ಅದಕ್ಕೆ ಸಂಬಂಧಪಟ್ಟ ದಾಖಲೆಗಳು ನಮ್ಮ ಬಳಿ ಇವೆ.
ಪ್ರತಿಧ್ವನಿ ಹಾಗೂ TheNewsMinute ಜಂಟಿಯಾಗಿ ಮತದಾರರ ಡೇಟಾ ಕಳ್ಳತನ ಕುರಿತಂತೆ ಜಂಟಿ ತನಿಖಾ ವರದಿ ಪ್ರಕಟಿಸುತ್ತಿದ್ದಂತೆ ನೆಲಮಂಗಲದ ಕಲ್ಲನಾಯಕನಹಳ್ಳಿ ಗ್ರಾಮದ ನಿವಾಸಿಗಳ ಗುಂಪೊಂದು ನಮ್ಮ (theNewsMinute) ಕಚೇರಿಗೆ ಭೇಟಿ ನೀಡಿತ್ತು. ಕಲ್ಲನಾಯಕನಹಳ್ಳಿಯ ಕನಿಷ್ಠ 100 ನಿವಾಸಿಗಳು ತಲಾ ಒಂದು ಲಕ್ಷ ರೂಪಾಯಿಗಳನ್ನು ಬ್ಯಾಂಕ್ ಠೇವಣಿ ಮೂಲಕ ಪಡೆದಿದ್ದಾರೆ ಎಂದು ಆಶ್ಚರ್ಯಕರ ಮಾಹಿತಿಯನ್ನು ನಮಗೆ ಅವರು ನೀಡಿದರು. ಅವರ ಪ್ರಕಾರ ನಿವಾಸಿಗಳ ಬ್ಯಾಂಕ್ ಖಾತೆಗಳ ಮೂಲಕ ರವಿಕುಮಾರ್ ಹಣ ಲಪಟಾಯಿಸಿದ್ದಾರೆ.

ಅವರ ಆರೋಪವನ್ನು ಪರಿಶೀಲಿಸಲು ನಾವು ಗ್ರಾಮಕ್ಕೆ ಭೇಟಿ ನೀಡಿದ್ದೇವೆ. ರವಿಕುಮಾರ್ ಆದೇಶದ ಮೇರೆಗೆ ಅಪರಿಚಿತ ಮೂಲಗಳಿಂದ ತಮ್ಮ ಖಾತೆಗಳಿಗೆ ಹಣ ಪಡೆಯುತ್ತಿರುವುದನ್ನು ಬಹಿರಂಗಪಡಿಸಿದ ಕನಿಷ್ಟ 10 ನಿವಾಸಿಗಳ ಸಂಪರ್ಕವನ್ನು ನಾವು ಪಡೆದುಕೊಂಡಿದ್ದೇವೆ. ನಾವು ಭೇಟಿಯಾದವರಲ್ಲಿ, “CSC ಇ-ಆಡಳಿತ ಸೇವೆಗಳು IN” ಹೆಸರಿನ ಖಾತೆಯಿಂದ 2020 ರಲ್ಲಿ ಐದು ಜನರು NEFT (ಆನ್‌ಲೈನ್ ಬ್ಯಾಂಕ್ ವರ್ಗಾವಣೆ) ಮೂಲಕ ಹಣವನ್ನು ಸ್ವೀಕರಿಸಿದ್ದಾರೆ. ಅವರೆಲ್ಲರೂ 40 ಸಾವಿರದಿಂದ 1.40 ಲಕ್ಷದವರೆಗೆ 2020 ರಲ್ಲಿ ಮೂರು ನಿರ್ದಿಷ್ಟ ದಿನಾಂಕಗಳಲ್ಲಿ ಹಣವನ್ನು ಪಡೆದಿದ್ದಾರೆ. ಅಕ್ಟೋಬರ್ 27, ನವೆಂಬರ್ 12 ಮತ್ತು ಡಿಸೆಂಬರ್ 15 ದಿನಾಂಕಗಳಲ್ಲಿ ಈ ಮೊತ್ತವನ್ನು ಅವರು ಪಡೆದಿದ್ದಾರೆ. ಮೊತ್ತವನ್ನು ಠೇವಣಿ ಮಾಡಿದ ಕೆಲವೇ ದಿನಗಳಲ್ಲಿ ತಮ್ಮ ಖಾತೆಯಲ್ಲಿದ್ದ ಹಣವನ್ನು ನಗದು ರೂಪದಲ್ಲಿ ರವಿಕುಮಾರ್ ಗೆ ಕೊಟ್ಟಿರುವುದಾಗಿ ಅವರು ಹೇಳಿದ್ದಾರೆ. ಪಾಸ್‌ಬುಕ್‌ಗಳ ಪ್ರತಿಗಳನ್ನು ನಾವು ಪಡೆದುಕೊಂಡಿದ್ದೇವೆ, ಅದರಲ್ಲಿ ಈ ವಹಿವಾಟುಗಳು ಸ್ಪಷ್ಟವಾಗಿವೆ.
ಚೆಲ್ಲಯ್ಯ (ಹೆಸರು ಬದಲಾಯಿಸಲಾಗಿದೆ), ಎಂಬ ರೈತ, CSC e-Governance ಎಂಬ ಖಾತೆಯಿಂದ ಮೂರು ಬಾರಿ ಪಾವತಿಗಳನ್ನು ಸ್ವೀಕರಿಸಿದ್ದಾರೆ . ಅಕ್ಟೋಬರ್ 27, 2020 ರಂದು ಮೊದಲ ವಹಿವಾಟಿನಲ್ಲಿ ಚೆಲ್ಲಯ್ಯ ಅವರು 44,245 ರೂ. ನವೆಂಬರ್ 12, 2020 ರಂದು, ರೂ 1,31,284. ಪಡೆದಿದ್ದಾರೆ. ನಂತರ ಅವರು ಅದೇ CSC e-Governance ಖಾತೆಯಿಂದ ಡಿಸೆಂಬರ್ 15, 2020 ರಂದು 50,352 ರೂಗಳನ್ನು ಪಡೆದರು. ಎಲ್ಲಾ ಮೂರು ಸಂದರ್ಭಗಳಲ್ಲಿ, ಖಾತೆಗೆ ವರ್ಗಾಯಿಸಿದ ಕೆಲವೇ ದಿನಗಳಲ್ಲಿ ಮೊತ್ತವನ್ನು ನಗದು ಮಾಡಲಾಗಿದೆ.
CSC ಇ-ಗವರ್ನೆನ್ಸ್ ಸರ್ವೀಸಸ್ ಇಂಡಿಯಾ ಲಿಮಿಟೆಡ್ ಅನ್ನು(CSC SPV), ಭಾರತ ಸರ್ಕಾರದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (MeitY), ಸಾಮಾನ್ಯ ಸೇವಾ ಕೇಂದ್ರಗಳ ಯೋಜನೆ (CSC ಗಳು) ಅನುಷ್ಠಾನವನ್ನು ಮೇಲ್ವಿಚಾರಣೆ ಮಾಡಲು ಸಂಯೋಜಿಸಲಾಗಿದೆ. ಇದು ಸಾರ್ವಜನಿಕವಾಗಿ ಪಟ್ಟಿ ಮಾಡಲಾದ ಕಂಪನಿಯಾಗಿದ್ದು, ಇದರಲ್ಲಿ ಭಾರತ ಸರ್ಕಾರವು ದೊಡ್ಡ ಪಾಲು ಹೊಂದಿದೆ ಮತ್ತು ಆದ್ದರಿಂದ 2013 ರ ಕಂಪನಿಗಳ ಕಾಯಿದೆ ಮತ್ತು ಇತರ ಕಾನೂನುಗಳ ನಿಬಂಧನೆಗಳ ಅಡಿಯಲ್ಲಿ ‘ಸರ್ಕಾರಿ ಕಂಪನಿ’ ಎಂದು ಪರಿಗಣಿಸಲಾಗುತ್ತದೆ. CSC ಇ-ಗವರ್ನೆನ್ಸ್ ದೇಶದಾದ್ಯಂತ ವಿಶೇಷವಾಗಿ ಹಳ್ಳಿಗಳಲ್ಲಿ ಕೇಂದ್ರಗಳನ್ನು ಸ್ಥಾಪಿಸುತ್ತದೆ, ಅದು ಎಲ್ಲಾ ಸರ್ಕಾರಿ ಯೋಜನೆಗಳು ಮತ್ತು ಹಲವಾರು ವ್ಯಾಪಾರ ಸೇವೆಗಳಿಗೆ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತದೆ.

ಮತ್ತೊಬ್ಬ ನಿವಾಸಿ ಸಿದ್ದಣ್ಣ (ಹೆಸರು ಬದಲಾಯಿಸಲಾಗಿದೆ) ಕೂಡಾ ಚೆಲ್ಲಯ್ಯ ಅವರು ಹಣ ಪಡೆದ ಅದೇ ದಿನಾಂಕಗಳಲ್ಲಿ ಮೂರು ಠೇವಣಿಗಳನ್ನು ಪಡೆದಿದ್ದಾರೆ. ಅವರೂ ತನ್ನ ಪಾಸ್‌ಬುಕ್ ಅನ್ನು ನಮಗೆ ತೋರಿಸಿದ್ದಾರೆ. ಅದೂ ಕೂಡಾ CSC ಇ-ಗವರ್ನೆನ್ಸ್ ಖಾತೆಯಿಂದ ಪಡೆದುಕೊಂಡ ಠೇವಣಿಯಾಗಿತ್ತು. ಅವರು ಅಕ್ಟೋಬರ್ 27, 2020 ರಂದು ರೂ 63,859; ನವೆಂಬರ್ 12, 2020 ರಂದು ರೂ 60,472; ಮತ್ತು ಡಿಸೆಂಬರ್ 15, 2020 ರಂದು ರೂ 23,108. ಅವರು ಹಣವನ್ನು ಸ್ವೀಕರಿಸಿದ್ದಾರೆ. ಹಾಗೂ ದುಡ್ಡು ಪಡೆದ ಕೆಲವೇ ದಿನಗಳಲ್ಲಿ ಈ ಮೊತ್ತವನ್ನು ಡ್ರಾ ಮಾಡಿಕೊಂಡಿದ್ದಾರೆ.
ಎಲ್ಲಾ ವಹಿವಾಟುಗಳನ್ನು NEFT (ರಾಷ್ಟ್ರೀಯ ಎಲೆಕ್ಟ್ರಾನಿಕ್ ಫಂಡ್‌ಗಳ ವರ್ಗಾವಣೆ) ಎಂದು ಗುರುತಿಸಲಾಗಿದೆ. ಅಂದರೆ, ಇವು ಆನ್‌ಲೈನ್ ಹಣ ವರ್ಗಾವಣೆಗಳಾಗಿವೆ.
ಹರಿ (ಹೆಸರು ಬದಲಾಯಿಸಲಾಗಿದೆ), ಅವರ ಪಾಸ್‌ಬುಕ್ ಅನ್ನು ನಮಗೆ ತೋರಿಸಲು ಇಷ್ಟ ಪಡಲಿಲ್ಲ; ಆದಾಗ್ಯೂ, ಅವರು ಸುಮಾರು 2,00,000 ರೂಪಾಯಿಗಳನ್ನು ಅದೇ ಖಾತೆಯಿಂದ ಸ್ವೀಕರಿಸಿದ್ದಾರೆ ಎಂದು ದೃಢಪಡಿಸಿದರು. “ರವಿಕುಮಾರ್ ನನ್ನ ಸಂಬಂಧಿ. ಅವರ ವ್ಯಕ್ತಿಗಳು ನನ್ನ ಖಾತೆ ಸಂಖ್ಯೆಯನ್ನು ಬಲವಂತವಾಗಿ ತೆಗೆದುಕೊಂಡರು. ಹಣ ಬಂದಾಗ ಖಾತೆಯಿಂದ ನಗದು ತೆಗೆದು ರವಿಕುಮಾರ್ ಗೆ ನೀಡಿದ್ದೆ. ದೆಹಲಿ, ಕೇಂದ್ರ ಸರ್ಕಾರದಿಂದ ನನಗೆ ಮೂರು ಠೇವಣಿಗಳಲ್ಲಿ ಹಣ ಬಂದಿದೆ.” ಎಂದು ಅವರು ಹೇಳಿದ್ದಾರೆ.

CSC ಯೋಜನೆಯು ಗ್ರಾಮ ಮಟ್ಟದ ಉದ್ಯಮಿಗಳು ಅಥವಾ VLE ಗಳ ಮೂಲಕ ನಡೆಯುತ್ತದೆ. ಅವರು CSC ಫ್ರಾಂಚೈಸಿಗಳಾಗಿದ್ದು, ಮರಣ/ಜನನ ಪ್ರಮಾಣಪತ್ರಗಳನ್ನು ಸಲ್ಲಿಸುವುದು, ಸರ್ಕಾರಿ ಸಮೀಕ್ಷೆಗಳನ್ನು ನಡೆಸುವುದು ಮತ್ತು ಆಧಾರ್ ನೋಂದಣಿ ಸೇರಿದಂತೆ ವಿವಿಧ ಸೇವೆಗಳನ್ನು ಒದಗಿಸುತ್ತಾರೆ. ಈ VLE ಗಳು ಅವರು ಸಲ್ಲಿಸುವ ಸೇವೆಗಳಿಗೆ ಕಮಿಷನ್‌ಗಳನ್ನು ಪಾವತಿಸಲಾಗುತ್ತದೆ. ದೊಡ್ಡ ಮೊತ್ತದ ಹಣ ಪಡೆದ ಕಲ್ಲನಾಯಕನಹಳ್ಳಿ ನಿವಾಸಿಗಳಲ್ಲಿ ಯಾರೂ ವಿಎಲ್‌ಇಗಳಲ್ಲ, ಅವರಿಗೂ ಸಿಎಸ್‌ಸಿಗಳಿಗೂ ಯಾವುದೇ ಸಂಬಂಧವಿಲ್ಲ.
ರವಿಕುಮಾರ್ ಅಥವಾ ಅವರ ಯಾರಾದರೂ ಯಾವುದಾದರೂ ದಾಖಲೆಗೆ ಸಹಿ ಮಾಡಿದ್ದಾರೆಯೇ ಎಂದು ನಾವು ಅವರನ್ನು ಕೇಳಿದಾಗ, ಅವರೆಲ್ಲರೂ ನಕಾರಾತ್ಮಕವಾಗಿ ಉತ್ತರಿಸಿದರು. “ರವಿಕುಮಾರ್ ಅವರ ಆಪ್ತರು ನಮ್ಮ ಮನೆಗೆ ಬಂದು ನಮ್ಮ ಪಾಸ್‌ಬುಕ್‌ಗಳನ್ನು ಸಂಗ್ರಹಿಸಿದರು. ಅವರು ನಮ್ಮಿಂದ ಬೇರೆ ಯಾವುದೇ ದಾಖಲೆಗಳನ್ನು ಕೇಳಿಲ್ಲ” ಎಂದು ಗ್ರಾಮದ ನಿವಾಸಿಯೊಬ್ಬರು ತಿಳಿಸಿದರು.
ಹರಿ ಮತ್ತು ಇತರ ಕಲ್ಲನಾಯಕನಹಳ್ಳಿ ನಿವಾಸಿಗಳು ಟಿಎನ್‌ಎಂ ಮಾತನಾಡಿ, ಕಳೆದ ಕೆಲವು ವರ್ಷಗಳಿಂದ ಗ್ರಾಮದ 100 ಕ್ಕೂ ಹೆಚ್ಚು ಜನರು ತಮ್ಮ ಖಾತೆಗಳಲ್ಲಿ ನಿಗೂಢ ಠೇವಣಿಗಳನ್ನು ಪಡೆದಿದ್ದಾರೆ, ಆದರೂ ನಾವು ಆ ಖಾತೆಸಂಖ್ಯೆಯನ್ನು ಸ್ವತಂತ್ರವಾಗಿ ಖಚಿತಪಡಿಸಲು ಸಾಧ್ಯವಿಲ್ಲ.

ಠೇವಣಿ ಮಾಡಿದ ಕೆಲವೇ ದಿನಗಳಲ್ಲಿ ಎಟಿಎಂಗಳಿಂದ ಹಣವನ್ನು ಹಿಂಪಡೆಯಲಾಗಿದೆ ಎಂದು ಪಾಸ್‌ಬುಕ್ ದಾಖಲೆಗಳು ತೋರಿಸುತ್ತವೆ. ಚೆಲ್ಲಯ್ಯ ಪ್ರಕರಣದಲ್ಲಿ, ಅಕ್ಟೋಬರ್ 27, 2020 ರಂದು ಮೊದಲ ಠೇವಣಿ ನಂತರ ರೂ 44,000 ಅನ್ನು ರೂ 25,000 ಮತ್ತು ರೂ 19,000 ರ ಎರಡು ಕಂತುಗಳಲ್ಲಿ ಹಿಂಪಡೆಯಲಾಗಿದೆ. ನವೆಂಬರ್ 12, 2020 ರಂದು ಸ್ವೀಕರಿಸಿದ ಮೊತ್ತವನ್ನು ನವೆಂಬರ್ 21 ಮತ್ತು ಡಿಸೆಂಬರ್ 5 ರ ನಡುವೆ ಪಡೆಯಲಾಗಿದೆ.
ಗ್ರಾಮದ ಎಲ್ಲಾ ನಿವಾಸಿಗಳು ಹಣವನ್ನು ಹಿಂತೆಗೆದುಕೊಂಡು ನೇರವಾಗಿ ರವಿಕುಮಾರ್ ಅವರಿಗೆ ಅಥವಾ ರವಿಕುಮಾರ್ ಜನರಿಗೆ ಹಸ್ತಾಂತರಿಸಿದ್ದಾರೆ ಎಂದು ಹೇಳಿದ್ದಾರೆ. ಆದಾಗ್ಯೂ, ನಾವು ರವಿಕುಮಾರ್ ಆರಂಭಿಸಿದ ಚಿಲುಮೆ ಎಂಟರ್‌ಪ್ರೈಸಸ್ ಪ್ರೈವೇಟ್ ಲಿಮಿಟೆಡ್‌ನ ಬ್ಯಾಲೆನ್ಸ್ ಶೀಟ್‌ಗಳನ್ನು ಪರಿಶೀಲಿಸಿದ್ದು. 2021 ರಲ್ಲಿ, CSC ಇ-ಗವರ್ನೆನ್ಸ್ ಪಡೆದ 15 ಲಕ್ಷ ರೂಪಾಯಿಗಳನ್ನು ‘ವ್ಯಾಪಾರ ಸ್ವೀಕೃತಿಗಳು’ ಎಂದು ಗುರುತಿಸಲಾಗಿದೆ ಮತ್ತು 2022 ರಲ್ಲಿ 1.5 ಲಕ್ಷ ಮೊತ್ತವನ್ನು ಇದೇ ರೀತಿಯಲ್ಲಿ ಸ್ವೀಕರಿಸಿದೆ.
ಬ್ಯಾಲೆನ್ಸ್ ಶೀಟ್ ನಮೂದು ಅಧಿಕೃತವಾಗಿದ್ದರೆ, ರವಿಕುಮಾರ್ ಅವರು ಸಿಎಸ್‌ಸಿ ಕೇಂದ್ರವನ್ನು ನಡೆಸುತ್ತಿದ್ದರು ಎಂದು ಅರ್ಥೈಸಬಹುದು ಎಂದು ಸಿಎಸ್‌ಸಿ ಇ-ಆಡಳಿತ ಯೋಜನೆಯಲ್ಲಿ ಕೆಲಸ ಮಾಡಿದ ಅಧಿಕಾರಿಯೊಬ್ಬರು ಹೇಳಿದ್ದಾರೆ.
CSC ಇ-ಗವರ್ನೆನ್ಸ್ TNM ನ ಫೋನ್‌ನಲ್ಲಿನ ಪ್ರಶ್ನೆಗಳಿಗೆ ಅಥವಾ ಇಮೇಲ್ ಮೂಲಕ ಕಳುಹಿಸಲಾದ ನಮ್ಮ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಲಿಲ್ಲ.

