ಫೈಝ್

ಫೈಝ್

ಮಲ್ಯ, ಚೋಕ್ಸಿ, ಮೋದಿಯಿಂದ ನಷ್ಟಕ್ಕೊಳಗಾದ ಬ್ಯಾಂಕ್‌ಗಳಿಗೆ 9,371 ಕೋಟಿ ಮೌಲ್ಯದ ಆಸ್ತಿ ಹಸ್ತಾಂತರ

ಸಾವಿರಾರು ಕೋಟಿ ರುಪಾಯಿ ವಂಚನೆ ಮಾಡಿ ವಿದೇಶಗಳಿಗೆ ಪರಾರಿಯಾಗಿರುವ ಉದ್ಯಮಿಗಳಾದ ವಿಜಯ್ ಮಲ್ಯ, ಮೆಹುಲ್ ಚೋಕ್ಸಿ ಮತ್ತು ನೀರವ್ ಮೋದಿ ಮಾಡಿದ ಆರ್ಥಿಕ ವಂಚನೆಯಿಂದಾಗಿ ನಷ್ಟ ಅನುಭವಿಸಿದ ಸಾರ್ವಜನಿಕ ವಲಯದ ಬ್ಯಾಂಕುಗಳಿಗೆ , 8,441 ಕೋಟಿ ರೂಪಾಯಿ  ಮೌಲ್ಯದ  ಆಸ್ತಿಯನ್ನು ಜಾರಿ ನಿರ್ದೇಶನಾಲಯ (ED) ವರ್ಗಾಯಿಸಿದೆ. ಈ ವರ್ಗಾವಣೆಯೊಂದಿಗೆ, ಇದುವರೆಗೆ ಜಾರಿ  ನಿರ್ದೇಶನಾಲಯ ಬ್ಯಾಂಕುಗಳಿಗೆ ಹಸ್ತಾಂತರಿಸಲಾದ ಆಸ್ತಿಯ ಮೌಲ್ಯ ಒಟ್ಟು 9,371.17 ಕೋಟಿ  ರೂ.ಗಳಿಗೆ ತಲುಪಿದೆ....

Read moreDetails

ಯಡಿಯೂರಪ್ಪ ಲಿಂಗಾಯತ ನಾಯಕರಾಗಿದ್ದೇ RSS ಅಸಹನೆಗೆ ಕಾರಣವಾಯಿತೇ?

ರಾಜ್ಯ ರಾಜಕಾರಣದಲ್ಲಿ ಕಳೆದ ಹಲವಾರು ತಿಂಗಳುಗಳಿಂದ ಬಿಜೆಪಿ ನಾಯಕತ್ವ ಬದಲಾವಣೆ ಕುರಿತ ಗೊಂದಲಗಳು ಸಾಕಷ್ಟು ಸದ್ದು ಮಾಡುತ್ತಿವೆ. ಬಿ ಎಲ್‌ ಸಂತೋಷ್‌ ಕುಮಾರ್‌, ಪ್ರಹ್ಲಾದ್‌ ಜೋಷಿ, ಲಕ್ಷ್ಮಣ...

Read moreDetails

ಕರ್ನಾಟಕ: ʼಹೆಚ್ಚುವರಿ ಮರಣʼ ಸಂಖ್ಯೆಯಲ್ಲಿ 5.8 ಪಟ್ಟು ಏರಿಕೆ

ಹಿಂದಿನ ವರ್ಷಗಳಿಗೆ ಹೋಲಿಸಿದರೆ, ಕೋವಿಡ್‌ ಸಾಂಕ್ರಾಮಿಕ ಕಾಲದಲ್ಲಿ (2020 ಎಪ್ರಿಲ್‌ ನಿಂದ ಮೇ 2021 ರವರೆಗೆ) ರಾಜ್ಯದಲ್ಲಿ ಮರಣ ಪ್ರಮಾಣ ಗಣನೀಯ ಹೆಚ್ಚಳ ಕಂಡುಬಂದಿದೆ. ಈ ಹಿಂದೆ...

Read moreDetails

ʼತನಿಖಾ ಸಂಸ್ಥೆಗಳ ಕಿರುಕುಳ ಅಸಹನೀಯʼ ಬಿಜೆಪಿಯ ಸೇಡಿನ ರಾಜಕಾರಣಕ್ಕೆ ಕನ್ನಡಿ ಹಿಡಿದ ಶಿವಸೇನೆ ಶಾಸಕನ ಪತ್ರ

ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿಯು ಕೇಂದ್ರೀಯ ತನಿಖಾ ಸಂಸ್ಥೆಗಳ ಮೂಲಕ ತನ್ನ ರಾಜಕೀಯ ಎದುರಾಳಿಗಳ ನೈತಿಕ ಸ್ಥೈರ್ಯ ಕುಗ್ಗಿಸಲು ಪ್ರಯತ್ನಿಸುತ್ತಿದೆ ಎಂಬ ಆರೋಪ ಹಿಂದಿನಿಂದಲೂ ಕೇಳಿಬರುತ್ತಿದೆ. ಇದೀಗ, ಈ...

Read moreDetails

ನಾಯಕತ್ವ ಬಗ್ಗೆ ಚಿಂತೆಯಿಲ್ಲ; ಪಕ್ಷದ ವರ್ಚಸ್ಸೇ ಮುಖ್ಯ – BJPಯಲ್ಲಿ ಮೂರನೆ ಬಣ!

ಕಳೆದ ಕೆಲವು ತಿಂಗಳಿನಿಂದ ರಾಜ್ಯ ರಾಜಕಾರಣದಲ್ಲಿ ಸದ್ದು ಮಾಡುತ್ತಿರುವ ಬಿಜೆಪಿ ನಾಯಕತ್ವ ಬದಲಾವಣೆಯ ಕುರಿತು ಇನ್ನೂ ಗೊಂದಲಗಳು ಮುಗಿದಿಲ್ಲ. ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌ ಅವರು ರಾಜ್ಯಕ್ಕೆ ಆಗಮಿಸಿ ಬಿಜೆಪಿ ಶಾಸಕರೊಡನೆ ಚರ್ಚೆ ನಡೆಸಿದ್ದರೂ, ತಾರ್ಕಿಕ ಅಂತ್ಯಕ್ಕೆ ಬರಲು ಅವರಿಂದಲೂ ಸಾಧ್ಯವಾಗಿಲ್ಲ. ಭಿನ್ನಮತೀಯ ಶಾಸಕರ ಅಸಮಾಧಾನವನ್ನು ತಣಿಸಲು ಕೂಡಾ ಅವರು ವಿಫಲವಾಗಿದ್ದಾರೆ. ಇದುವರೆಗೂ ರಾಜ್ಯ ಬಿಜೆಪಿಯಲ್ಲಿ ಯಡಿಯೂರಪ್ಪ ಪರ ಒಂದು ಬಣವಿದ್ದರೆ, ಯಡಿಯೂರಪ್ಪ ವಿರುದ್ಧ ಒಂದು ಬಣ ಇರುವುದು ಬಹಿರಂಗಗೊಂಡಿತ್ತು. ಆದರೆ, ಅರುಣ್‌ ಸಿಂಗ್‌ ಆಗಮನದ ಬಳಿಕ ರಾಜ್ಯ ಬಿಜೆಪಿಯಲ್ಲಿ ಇದೆರಡಕ್ಕೂ ಹೊರತಾಗಿ ಮೂರನೆಯ ಒಂದು ಬಣ ಇರುವುದು ಸ್ಪಷ್ಟವಾಗಿದೆ. ಜಿಂದಾಲ್‌ ಕಂಪೆನಿಗೆ ಭೂಮಿ ಕೊಡುವ ವಿಚಾರದಲ್ಲಿ ಪಕ್ಷದೊಳಗೆದ್ದ ಅಸಹನೆಯ ವೇಳೆ ಈ ಮೂರನೆಯ ಬಣ ಇರುವ ಕುರಿತು ಅಸ್ಪಷ್ಟ ಸೂಚನೆ ಲಭಿಸಿತ್ತಾದರೂ, ಅರುಣ್‌ ಸಿಂಗ್‌ ಭೇಟಿಯ ಬಳಿಕ ಈ ಬಣದ  ಮುಖಂಡರು ಯಾರು ಎನ್ನುವುದು ಇನ್ನೂ ನಿಚ್ಚಳವಾಗಿದೆ. ಸಂಘದ ಹಿನ್ನೆಲೆಯಿಂದಲೇ ಬಂದ ಶಾಸಕರ ಈ  ಬಣವು ಯಡಿಯೂರಪ್ಪ ಅಥವಾ ಯಡಿಯೂರಪ್ಪ ವಿರೋಧಿ ಪಾಳೆಯಕ್ಕೆ ನಿಷ್ಟೆಯಾಗಿರದೆ,  ಕೇವಲ ಪಕ್ಷಕ್ಕೆ ನಿಷ್ಟವಾಗಿದೆ ಹಾಗೂ ಆರ್‌ಎಸ್‌ಎಸ್‌ ಜೊತೆಗೆ ನಿಕಟವಾಗಿದೆ. ಕಳೆದ ಕೆಲವು ತಿಂಗಳುಗಳಿಂದ ನಾಯಕತ್ವ ಬದಲಾವಣೆ, ನಾಯಕತ್ವ ಉಳಿಸುವಿಕೆ ಪ್ರಹಸನದಲ್ಲಿ ಉಳಿದೆರಡು ಬಣಗಳು ಹಗ್ಗ ಜಗ್ಗಾಟದಲ್ಲಿ ತೊಡಗಿಕೊಂಡಿದ್ದ ನಡುವೆಯೇ, ಈ ಮೂರನೆಯ ಬಣವು ಜಿಂದಾಲ್‌ ಕಂಪೆನಿಗೆ ಭೂ ಪರೆಭಾರೆ ವಿಚಾರದಲ್ಲಿ ಸರ್ಕಾರದ ನಿರ್ಧಾರಕ್ಕೆ ಅಸಮ್ಮತಿ ವ್ಯಕ್ತಪಡಿಸಿದ್ದವು. ಕಾಂಗ್ರೆಸ್-ಜೆಡಿಎಸ್‌ ಮೈತ್ರಿ ಸರ್ಕಾರವು ಅಧಿಕಾರದಲ್ಲಿದ್ದ ವೇಳೆ ಬಿಜೆಪಿಯು ಜಿಂದಾಲ್‌ಗೆ ಜಮೀನು  ಕೊಡುವ ವಿಚಾರದಲ್ಲಿ ವಿರೋಧ ವ್ಯಕ್ತಪಡಿಸಿತ್ತು. ಯಡಿಯೂರಪ್ಪ ನೇತೃತ್ವದ ಬಿಜೆಪಿ ರಾಜ್ಯ ಸರ್ಕಾರ ರಚಿಸಿದ ಬೆನ್ನಲ್ಲೇ ಜಿಂದಾಲ್‌ಗೆ ಭೂಮಿ ಪರಭಾರೆ ಮಾಡಿಕೊಟ್ಟಿತ್ತು. ಇದನ್ನು ವಿರೋಧಿಸಿ ಪಕ್ಷಕ್ಕೆ ನಿಷ್ಟವಾಗಿರುವ ಈ ಶಾಸಕರು ಭೂಮಿ ಪರಭಾರೆ ವಿಚಾರದಲ್ಲಿ ಸರ್ಕಾರದ ಬದಲಾದ ನಿಲುವಿನ ಕುರಿತು ಅಚ್ಚರಿ ವ್ಯಕ್ತಪಡಿಸಿತ್ತು. ಈ ಬಣದ ಮುಂಚೂಣಿ ನಾಯಕರೆನಿಸಿಕೊಂಡಿರುವ ಸರ್ಕಾರದ ಮುಖ್ಯ ಸಚೇತಕ ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್  ಭೂಮಿ ಮಂಜೂರಾತಿ ಕುರಿತು ಬಹಿರಂಗವಾಗಿಯೇ ತಮ್ಮ ಅಸಮ್ಮತಿ ವ್ಯಕ್ತಪಡಿಸಿದ್ದರು.  ಭೂಮಿ ಮಂಜೂರಾತಿ ವಿರುದ್ಧ ಕೇಂದ್ರ ನಾಯಕತ್ವಕ್ಕೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದ ಅವರು, “ಈ ಹಿಂದೆ ನಾವು ವಿರೋಧಿಸಿದ್ದ ವಿಷಯದ ಬಗ್ಗೆ ಪಕ್ಷದ ನಿಲುವು ಹೇಗೆ ಬದಲಾಯಿತು ಎಂಬುದು ನನಗೆ ತಿಳಿದಿಲ್ಲ ಎಂದು ಹೇಳಿದ್ದರು. ಪಕ್ಷದ ವೇದಿಕೆಯಲ್ಲಿ ಅಥವಾ ಶಾಸಕಾಂಗದಲ್ಲಿ ಇದನ್ನು ಯಾರೂ ಬಗೆಹರಿಸಿಲ್ಲ. ಈ ಭೂಮಿಯನ್ನು ಮಾರಾಟ ಮಾಡಬಾರದೆಂಬ ಪಕ್ಷದ ಮೂಲ ಅಭಿಪ್ರಾಯದೊಂದಿಗೆ ನಾನು ನಿಲ್ಲುತ್ತೇನೆ. ಪಕ್ಷ ಹೇಗೆ ತನ್ನ ನಿಲುವಿನಿಂದ ಬದಲಾಯಿತು ಎಂದು ಗೊತ್ತಿಲ್ಲ ಎಂದು ಹೇಳುವ ಮೂಲಕ, ತನ್ನ ಸೈದ್ಧಾಂತಿಕ ಬದ್ಧತೆಯನ್ನು ಪ್ರಕಟಿಸಿದ್ದರು. ನಾಯಕತ್ವ ಕುರಿತು ಚಿಂತೆಯಿಲ್ಲ; ಪಕ್ಷದ ವರ್ಚಸ್ಸು ಅಷ್ಟೇ ಮುಖ್ಯ ಬಿಎಸ್‌ವೈ ಪರ ವಿರೋಧಿ ಬಣಗಳು ಮಾಡುತ್ತಿರುವ ರಾಜಕೀಯ ಹೈಡ್ರಾಮಗಳಿಂದ ಪಕ್ಷದ ವರ್ಚಸ್ಸು ರಾಜ್ಯದಲ್ಲಿ ಕುಗ್ಗುತ್ತಿದೆ ಎನ್ನುವುದು ಸಂಘ ನಿಷ್ಠ ಶಾಸಕರ ಆತಂಕ. ಯಡಿಯೂರಪ್ಪ ನಾಯಕರಾಗಿಯೇ ಮುಂದುವರಿಯಲಿ, ಅಥವಾ ನಾಯಕತ್ವ ಬೇರೆಯವರಿಗೆ ಹೋಗಲಿ, ಆದರೆ ಪಕ್ಷದ ವರ್ಚಸ್ಸಿಗೆ ಕುಂದುಂಟಾಗುವ ರೀತಿಯಲ್ಲಿ ಉಭಯ ಬಣದ ನಾಯಕರು ವರ್ತಿಸಬಾರದು ಎನ್ನುವುದು ಮೂರನೆಯ ಬಣದ ಕಾಳಜಿ. ನಾವು ಯಾರ ಪರವೂ ಇಲ್ಲ, ವಿರುದ್ಧವೂ ಇಲ್ಲ. ಪಕ್ಷದ ವರಿಷ್ಟರು ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧವಾಗಿರುತ್ತೇವೆ ಎಂದು ಹೇಳುವ ಇವರು, ಬಿಜೆಪಿಗಿಂತ ಯಡಿಯೂರಪ್ಪ ಮುಖ್ಯ ಅಂತಲೋ, ಯಡಿಯೂರಪ್ಪ ಕುಟುಂಬ ರಾಜಕಾರಣ ನಮಗೆ ಸಮಸ್ಯೆ ಅಂತಲೋ ಎಂದು ಹೇಳಿಕೊಳ್ಳುವವರಲ್ಲ. ಇವರದ್ದೇನಿದ್ದರೂ ಪಕ್ಷ, ಸಂಘ ಅಷ್ಟೇ. ಕಾರ್ಕಳ ಶಾಸಕ ವಿ ಸುನಿಲ್‌ ಕುಮಾರ್‌ ಮುಂಚೂಣಿಯಲ್ಲಿರುವ ಈ ಬಣದಲ್ಲಿ ಕರಾವಳಿಯ ಬಹುತೇಕ ಶಾಸಕರಿದ್ದಾರೆ. ಮುಜರಾಯಿ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಕೂಡಾ ಈ ಬಣದದಲ್ಲಿರುವ ಪ್ರಮುಖರು. ಉಭಯ ಬಣದ ನಾಯಕರ ವಿರುದ್ಧ ವರಿಷ್ಟರಿಗೆ ದೂರು: ಶಿಸ್ತುಕ್ರಮಕ್ಕೆ ಆಗ್ರಹ ನಾಯಕತ್ವ ಬದಲಾವಣೆ ಜಂಜಾಟಗಳಿಂದ ಪಕ್ಷಕ್ಕೆ ಮುಜುಗರ ಉಂಟಾಗುತ್ತಿದೆ ಎಂದು ಭಾವಿಸುತ್ತಿರುವ ತೃತೀಯ ಬಣದ ಶಾಸಕರು ಪಕ್ಷದೊಳಗಿನ ರಾಜಕೀಯ ಹೈಡ್ರಾಮಗಳಿಗೆ ಬೇಸತ್ತು ಹೋಗಿದ್ದಾರೆ. ಮೊದಮೊದಲು ಬಸನಗೌಡ ಪಾಟೀಲ ಯತ್ನಾಳ್‌ ಮಾತ್ರ ಪಕ್ಷದ ವಿರುದ್ಧ ಹೇಳಿಕೆ ನೀಡಿ ಮುಜುಗರ ತರಿಸುತ್ತಿದ್ದರೆ, ಇದೀಗ ಬಹಿರಂಗ ಕಚ್ಚಾಟದಲ್ಲಿಯೇ ತೊಡಗಿ ಎಂಪಿ ರೇಣುಕಾಚಾರ್ಯ, ಎ ಹೆಚ್‌ ವಿಶ್ವನಾಥ್‌, ಅರವಿಂದ್‌ ಬೆಲ್ಲದ್‌ ಮೊದಲಾದವರು ಪಕ್ಷಕ್ಕೆ ತಲೆ ತಗ್ಗಿಸುವಂತಹ ಹೇಳಿಕೆಯನ್ನು ನೀಡಿ ಸರ್ಕಾರದ ಮಾನ ಹರಾಜಿಗಿಡುತ್ತಿದ್ದಾರೆ. ಮುಖ್ಯಮಂತ್ರಿ ಕುಟುಂಬಸ್ಥರು ಸರ್ಕಾರದೊಳಗೆ ಮಾಡುತ್ತಿರುವ ಹಸ್ತಕ್ಷೇಪದ ಕುರಿತು ಯತ್ನಾಳ್‌ ಬಹಿರಂಗ ಅಸಮಾಧಾನ ವ್ಯಕ್ತಪಡಿಸುತ್ತಿದ್ದರೆ, ಇತ್ತೀಚೆಗಷ್ಟೇ ಬಿಜೆಪಿ ಸೇರಿಕೊಂಡ ಎಹೆಚ್‌ ವಿಶ್ವನಾಥ್‌, ಬಿಎಸ್‌ವೈ ನಾಯಕರಾಗಿ ಮುಂದುವರಿಯಲು ಯೋಗ್ಯರಲ್ಲ ಎಂದು ಹೇಳಿಕೆ ನೀಡುತ್ತಿದ್ದಾರೆ. ಇವರ ವಿರುದ್ಧ ಯಡಿಯೂರಪ್ಪ ಆಪ್ತ ಎಂಪಿ ರೇಣುಕಾಚಾರ್ಯ ಕೂಡಾ ಬಹಿರಂಗವಾಗಿಯೇ ವಾಗ್ದಾಳಿ ನಡೆಸುತ್ತಿದ್ದಾರೆ. ಈ ಎಲ್ಲದರ ನಡುವೆ, ಅರವಿಂದ ಬೆಲ್ಲಡ್‌ ತನ್ನ ಫೋನ್‌ ಕದ್ದಾಲಿಕೆ ಆಗುತ್ತಿದೆ ಎಂದು ಪರೋಕ್ಷವಾಗಿ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಪಕ್ಷದ ಶಾಸಕರ ಈ ಬಹಿರಂಗ ಜಗಳಗಳಿಂದ ಪಕ್ಷಕ್ಕೆ ತೀವ್ರ ಹಾನಿಯಾಗುತ್ತಿದೆಯೆಂದು ಆರೋಪಿಸಿ ರಾಜ್ಯ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ ಅವರು ಕೇಂದ್ರ ವರಿಷ್ಟರಿಗೆ ದೂರು ನೀಡಿದ್ದಾರೆ. ಕೇಂದ್ರ ನಾಯಕರ ಎಚ್ಚರಿಕೆಯ ನಡುವೆಯೂ ಉಭಯ ಬಣದ ಶಾಸಕರು ಪರಸ್ಪರ ಕೆಸರೆರಚಾಟದಲ್ಲಿ ತೊಡಗಿರುವುದರಿಂದ ಪಕ್ಷಕ್ಕೆ ಹಾನಿಯಾಗುತ್ತಿದೆ. ಇವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಪತ್ರದಲ್ಲಿ ಆಗ್ರಹಿಸಲಾಗಿದೆ. ಮುಖ್ಯವಾಗಿ, ಅರವಿಂದ್‌ ಬೆಲ್ಲದ, ಎ ಹೆಚ್‌ ವಿಶ್ವನಾಥ್‌, ಎಂ ಪಿ ರೇಣುಕಾಚಾರ್ಯ ಮತ್ತು ಬಸನಗೌಡ ಪಾಟೀಲ ಯತ್ನಾಳ್‌ ಅವರ ಹೆಸರನ್ನು ಪತ್ರದಲ್ಲಿ ಉಲ್ಲೇಖಿಸಲಾಗಿದೆ ಎಂದು ತಿಳಿದು ಬಂದಿದೆ....

Read moreDetails

ಟ್ವಿಟರ್‌ ಎಂಡಿಯನ್ನು ವಿಚಾರಣೆಗೆ ಒಳಪಡಿಸಲು ಬೆಂಗಳೂರಿಗೆ ದೌಡಾಯಿಸಿದ ದೆಹಲಿ ಪೊಲೀಸ್‌

ಸಾಮಾಜಿಕ ಜಾಲತಾಣ ದೈತ್ಯ ಟ್ವಿಟರ್‌ ಹಾಗೂ ಕೇಂದ್ರ ಸರ್ಕಾರದ ನಡುವಿನ ವಿವಾದ ಸಂಘರ್ಷದ ಮಟ್ಟಕ್ಕೆ ತಲುಪಿದೆ. ಭಾರತದಲ್ಲಿ ಕಾನೂನು ರಕ್ಷೆಯನ್ನು ಕಳೆದುಕೊಂಡ ಒಂದೇ ದಿನದೊಳಗೆ ಟ್ವಿಟರ್‌ಗೆ ಮತ್ತೊಂದು...

Read moreDetails

ಕೋವಿಡ್‌ ನಿಯಂತ್ರಣದಲ್ಲಿ ತನ್ನ ವೈಫಲ್ಯ ಮರೆಮಾಚಲು ಹೊಸ ಕಾರ್ಯಯೋಜನೆ ರೂಪಿಸಿದ ಬಿಜೆಪಿ

ಕೋವಿಡ್‌ ಮೊದಲನೇ ಹಾಗೂ ಎರಡನೇ ಅಲೆಯನ್ನು ನಿಯಂತ್ರಿಸಲು ವಿಫಲವಾದ ಭಾರತ ಸರ್ಕಾರದ ಮುಜುಗರ ತಪ್ಪಿಸಲು ಭಾರತೀಯ ಜನತಾ ಪಕ್ಷವು ರಚನಾತ್ಮಕ ಕಾರ್ಯತಂತ್ರ ರೂಪಿಸಿದ್ದು, ತನ್ನ ಸರ್ಕಾರದ ವೈಫಲ್ಯದಿಂದ...

Read moreDetails

ನಿಮಿಷಗಳೊಳಗೆ 9 ಪಟ್ಟು ಹೆಚ್ಚಿದ ಆಸ್ತಿಮೌಲ್ಯ: ಹಗರಣದ ಸುಳಿಯಲ್ಲಿ ರಾಮಮಂದಿರ ನಿರ್ಮಾಣ ಟ್ರಸ್ಟ್

ಭಾರತ ರಾಜಕೀಯ ಇತಿಹಾಸದಲ್ಲಿ ದೀರ್ಘಕಾಲದ ವಿವಾದಾಸ್ಪದ ವಿಷಯವಾಗಿದ್ದ ಅಯೋಧ್ಯೆ ರಾಮಮಂದಿರ ನಿರ್ಮಾಣ, ನ್ಯಾಯಾಲಯದಲ್ಲಿ ತನ್ನ ಪರವಾಗಿ ತೀರ್ಪು ಬಂದ ಬಳಿಕವೂ ವಿವಾದಗಳಿಂದ ಹೊರತಾಗಿಲ್ಲ. ಬಿಜೆಪಿಯ ರಾಜಕೀಯ ಮಹತ್ವಾಕಾಂಕ್ಷೆಗೆ...

Read moreDetails

ಪ್ರಧಾನಮಂತ್ರಿ ದೇವೇಗೌಡರನ್ನು ಪಡೆಯಲು ಮುಖ್ಯಮಂತ್ರಿ ದೇವೇಗೌಡರನ್ನು ಕಳೆದುಕೊಂಡ ಕನ್ನಡಿಗರು!

ಕನ್ನಡ ಮಣ್ಣಿನ ಮಗ ಎಂದೇ ಪ್ರಸಿದ್ಧವಾಗಿರುವ, ಹಿರಿಯ ರಾಜಕಾರಣಿ ಹೆಚ್‌ ಡಿ ದೇವೇಗೌಡರು ಭಾರತ ಸರ್ಕಾರದ ಪ್ರಧಾನಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ 25 ವರ್ಷಗಳು ಪೂರೈಸಿವೆ. ಕನ್ನಡ ನಾಡಿನ...

Read moreDetails

ರಾಜ್ಯ ಸರ್ಕಾರದೊಂದಿಗೆ ಜಿದ್ದಾಜಿದ್ದಿಗೆ ಬಿದ್ದ ಕೇಂದ್ರ ಸರ್ಕಾರ: ಒಕ್ಕೂಟ ವ್ಯವಸ್ಥೆಯ ಅಣಕ!

ಬಹುತ್ವದ ಪರಿಕಲ್ಪನೆ, ಒಕ್ಕೂಟ ವ್ಯವಸ್ಥೆಯೊಂದಿಗೆ ವಿಶ್ವದ ಇತರೆ ರಾಷ್ಟ್ರಗಳಿಗಿಂತ ವಿಭಿನ್ನವಾಗಿ ನಿಲ್ಲುತ್ತದೆ ಭಾರತ. ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರದ ಅಡಿಯಲ್ಲಿ ರಾಜ್ಯ ಸರ್ಕಾರಗಳು ಇರುವುದಲ್ಲ, ಬದಲಾಗಿ...

Read moreDetails

ವ್ಯಾಕ್ಸಿನ್ ಬ್ಲಾಕಿಂಗ್ ಪ್ರಕರಣ: ಬಿಜೆಪಿ ಶಾಸಕ ರವಿ ಸುಬ್ರಹ್ಮಣ್ಯ ವಿರುದ್ದ ದೂರು ದಾಖಲು

ಉಚಿತವಾಗಿ ನೀಡಬೇಕಾದ ಲಸಿಕೆಯನ್ನು ಬಸವನಗುಡಿ ಶಾಸಕ ರವಿ ಸುಬ್ರಹ್ಮಣ್ಯ ಅಕ್ರಮವಾಗಿ ಮಾರಾಟ ಮಾಡುತ್ತಿದ್ದಾರೆಂದು ಆರೋಪಿಸಿ ಬೆಂಗಳೂರು ನಗರ ಪೊಲೀಸ್‌ ಆಯುಕ್ತ ಕಮಲ್‌ ಪಂತ್‌ ಅವರಿಗೆ ಸಾಮಾಜಿಕ, RTI...

Read moreDetails

ಬಂಗಾಳದಲ್ಲಾದ ಸೋಲನ್ನು ನಿಮ್ಮಿಂದ ಅರಗಿಸಲಾಗಿಲ್ಲವೆಂದು ನಮಗೆ ಅವಮಾನ ಮಾಡಬೇಡಿ: ಪ್ರಧಾನಿ ಮೋದಿಗೆ ತಿವಿದ ದೀದಿ

ಯಾಸ್‌ ಚಂಡಮಾರುತದ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಮಮತಾ ಬ್ಯಾನರ್ಜಿ ನಡುವೆ ನಡೆದ ಸಭೆಯಲ್ಲಿ ಪ್ರಧಾನಿ ಮೋದಿಗೆ ಮಮತಾ ಬ್ಯಾನರ್ಜಿ ಅಗೌರವ ತೋರಿ ಸಭೆಯಿಂದ ಅರ್ಧದಿಂದ ಎದ್ದು...

Read moreDetails

ಮೋದಿ – ದೀದಿ ಬಿಕ್ಕಟ್ಟು: ಬಂಗಾಳದ ಮುಖ್ಯ ಕಾರ್ಯದರ್ಶಿಯನ್ನು ವಾಪಸ್‌ ಕರೆಸಿಕೊಂಡ ಕೇಂದ್ರ ಸರ್ಕಾರ

ಪ್ರಧಾನಿ ನರೇಂದ್ರ ಮೋದಿ ಹಾಗೂ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಡುವಿನ ಸಭೆ ಬಳಿಕ ಉಂಟಾದ ಬಿಕ್ಕಟ್ಟಿನ ಬೆನ್ನಲ್ಲೇ ಕೇಂದ್ರ ಸರ್ಕಾರ ಬಂಗಾಳದ ಮುಖ್ಯ ಕಾರ್ಯದರ್ಶಿ...

Read moreDetails

ಮುಖ್ಯಮಂತ್ರಿ ರೇಸ್‌ನಲ್ಲಿ ಅರವಿಂದ್‌ ಬೆಲ್ಲದ್‌ ಹೆಸರು: ಲಿಂಗಾಯತರಲ್ಲಿಯೇ ಉಳಿಯುತ್ತಾ ಸಿಎಂ ಪಟ್ಟ?

ಕರೋನಾ ಎರಡನೇ ಅಲೆ, ಬ್ಲ್ಯಾಕ್‌ ಫಂಗಸ್‌, ವೈಟ್‌ ಫಂಗಸ್‌ ಮೊದಲಾದ ಆರೋಗ್ಯ ಕ್ಷೇತ್ರದ ಬಿಕ್ಕಟ್ಟುಗಳು ರಾಜ್ಯದ ಸಮಾಧಾನ ಕೆಡಿಸಿದ್ದರೂ, ಬಿಜೆಪಿ ನಾಯಕರು ಮಾತ್ರ ತಮ್ಮ ಅಧಿಕಾರದ ಲಾಲಸೆಯ...

Read moreDetails

ವ್ಯಾಕ್ಸಿನೇಷನ್: ಬದ್ಧತೆ ಮರೆತ ಮೋದಿ ಸರ್ಕಾರದ ಮಾನ ಉಳಿಸಲು ಹೋಗಿ ಆರ್ಥಿಕ ಹೊರೆ ಹೊತ್ತ ರಾಜ್ಯ ಸರ್ಕಾರ!

ವ್ಯಾಕ್ಸಿನೇಷನ್‌ ವಿಚಾರದಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಾಡಿಕೊಂಡ ಎಡವಟ್ಟಿಗೆ ರಾಜ್ಯ ಸರ್ಕಾರ ಆರ್ಥಿಕ ಹೊರೆ ಹೊರುವಂತಾಗಿದೆ. ದಿ ಫೈಲ್‌ ಎಂಬ ಕನ್ನಡದ ಆನ್‌ಲೈನ್‌ ಪೋರ್ಟಲ್‌...

Read moreDetails

99% ಮುಸ್ಲಿಮರಿರುವ ದ್ವೀಪದಲ್ಲಿ ಮಧ್ಯ ನಿಷೇಧಕ್ಕೆ ತೆರವು, ಗೋಹತ್ಯೆ ನಿಷೇಧ: ಅಭಿವೃದ್ಧಿ ಹೆಸರಿನಲ್ಲಿ ಲಕ್ಷದ್ವೀಪದ ಪಾರಂಪರಿಕ ಅಸ್ಮಿತೆಗೆ ಸವಾಲು!

ಅರಬ್ಬಿ ಸಮುದ್ರದ ನಡುವೆ ಭಾರತ ಉಪಖಂಡಕ್ಕೆ ದೃಷ್ಟಿಬೊಟ್ಟಿನಂತಿರುವ ಭಾರತದ ಅತಿ ಸಣ್ಣ ಕೇಂದ್ರಾಡಳಿತ ಪ್ರದೇಶ ʼಲಕ್ಷದ್ವೀಪʼ ಇದೀಗ ತನ್ನ ಸಾಂಪ್ರದಾಯಿಕ ಅಸ್ಮಿತೆಯನ್ನೇ ಕಳೆದುಕೊಳ್ಳುವ ಭೀತಿಯಲ್ಲಿದೆ. ಹೊಸದಾಗಿ ಆಡಳಿತಾಧಿಕಾರಿಯಾಗಿ...

Read moreDetails

ಹೊರಬರಲಾಗದ ಕೋವಿಡ್ ರೋಗಿಗಳ ಪಾಲಿಗೆ ಆಪತ್ಬಾಂಧವ: ಮನೆಬಾಗಿಲಿಗೇ ಬಂದು ಚಿಕಿತ್ಸೆ ನೀಡುವ ʼಕಾರ್ ಡಾಕ್ಟರ್ʼ

ಕಾರ್ಪೋಟಿಕರಣಗೊಂಡ ದೇಶದ ವೈದ್ಯಕೀಯ ಕ್ಷೇತ್ರ ಹಾಗೂ ಬಹುಪಾಲು ವೈದ್ಯರ ನಡುವೆ, ನಮ್ಮ ಬೆಂಗಳೂರಿನಲ್ಲಿ ಓರ್ವ ಡಾಕ್ಟರ್‌ ʼಸೇವೆಯೇ ಜೀವನಧರ್ಮʼವೆಂಬ ತತ್ವ ಪಾಲಿಸುತ್ತಾ ಮನೆಯಿಂದ ಹೊರಬರಲಾಗದ ಕೋವಿಡ್ ರೋಗಿಗಳ...

Read moreDetails

ಕೋವಿಡ್ ಬಯಲು ಮಾಡುತ್ತಿರುವ ಗುಜರಾತ್ ಮಾದರಿಯ ಅಸಲಿ ಮುಖ!

ಕೋವಿಡ್‌ ಸೋಂಕು ಭಾರತಕ್ಕೆ ಕಾಲಿಟ್ಟಂದಿನಿಂದ ಒಕ್ಕೂಟ ಮತ್ತು ರಾಜ್ಯ ಸರ್ಕಾರಗಳ ಬೇಜವಾಬ್ದಾರಿ ಮತ್ತು ಯಡವಟ್ಟುಗಳು ಬಹಿರಂಗಗೊಳ್ಳುತ್ತಿವೆ. ಕೋವಿಡ್‌ ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟಕ್ಕೆಂದು ಸ್ಥಾಪನೆಯಾದ ಪಿಎಂಕೇರ್ಸ್‌ ನಿಧಿಯಿಂದ...

Read moreDetails

ಕಾರ್ಯಾಂಗ ಹಾಗೂ ನ್ಯಾಯಾಂಗದ ನಡುವಿನ ಸಂಘರ್ಷಕ್ಕೆ ಎಡೆ ಮಾಡಿಕೊಟ್ಟ ಚಾಮರಾಜನಗರ ಜಿಲ್ಲಾಸ್ಪತ್ರೆ ದುರಂತ

ಚಾಮರಾಜನಗರ ಜಿಲ್ಲಾ ಕೋವಿಡ್‌ ಆಸ್ಪತ್ರೆಯಲ್ಲಿ ಮೇ 3ರಂದು ಆಮ್ಲಜನಕದ ಕೊರತೆಯಿಂದ ಕೋವಿಡ್‌ ರೋಗಿಗಳು ಮೃತಪಟ್ಟಿರುವ ಪ್ರಕರಣದ ಕುರಿತು ಏಕಕಾಲದಲ್ಲಿ ಐದು ರೀತಿಯ ತನಿಖೆಗಳು ನಡೆಯುತ್ತಿದೆ. ದುರ್ಘಟನೆಯ ಬೆನ್ನಲ್ಲೇ...

Read moreDetails

ಕರೋನಾ ನಿರ್ವಹಣೆಯಲ್ಲಿ ಯೋಗಿ ಆದಿತ್ಯನಾಥ್‌ ವಿಫಲ: ಕೇಂದ್ರ ಸಚಿವ, ಬಿಜೆಪಿ ಸಂಸದರಿಂದಲೇ ಅಸಮಾಧಾನ

ಉತ್ತರ ಪ್ರದೇಶ ರಾಜ್ಯ ಸರ್ಕಾರ ಕೋವಿಡ್19‌ ನಿರ್ವಹಣೆಯಲ್ಲಿ ಸಮರ್ಥವಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಕೇಂದ್ರ ಸಚಿವರು ಹಾಗೂ ಬಿಜೆಪಿ ಸಂಸದರೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಮ್ಮ ಕ್ಷೇತ್ರದಲ್ಲಿ ಜನತೆ...

Read moreDetails
Page 7 of 9 1 6 7 8 9

Recent News

Welcome Back!

Login to your account below

Retrieve your password

Please enter your username or email address to reset your password.

error: Content is protected !!