Tag: Reservation

ಎಸ್‌ಸಿ/ಎಸ್‌ಟಿಗೆ ಮೀಸಲಾತಿ ವಿಸ್ತರಣೆ: ಸುಪ್ರೀಂ ಕೋರ್ಟ್ ಪರಿಶೀಲನೆ

ಎಸ್‌ಸಿ/ಎಸ್‌ಟಿಗೆ ಮೀಸಲಾತಿ ವಿಸ್ತರಣೆ: ಸುಪ್ರೀಂ ಕೋರ್ಟ್ ಪರಿಶೀಲನೆ

ನವದೆಹಲಿ: ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಎಸ್‌ಸಿ/ಎಸ್‌ಟಿ ಮೀಸಲಾತಿಯ ಗಡುವನ್ನು ವಿಸ್ತರಿಸಲು ಸಂಸತ್ತು ತನ್ನ ಸಂವಿಧಾನಾತ್ಮಕ ಅಧಿಕಾರವನ್ನು ಬಳಸಬಹುದೇ ಎಂಬುದನ್ನು ಪರಿಶೀಲಿಸಲು ಸುಪ್ರೀಂ ಕೋರ್ಟ್ ಒಪ್ಪಿಕೊಂಡಿದೆ.  ಸಂವಿಧಾನದ 334 ...

ಲಿಂಗಾಯತರೆಲ್ಲ ಭ್ರಷ್ಟರೆಂದು ನಾನು ಹೇಳಿಯೇ ಇಲ್ಲ, ಇದು ಬಿಜೆಪಿ ಷಡ್ಯಂತ್ರ : ಸಿದ್ದರಾಮಯ್ಯ

ಮೀಸಲಾತಿ ಕುರಿತ ಗೊಂದಲ ನಿವಾರಣೆಗೆ ಪ್ರತ್ಯೇಕ ಸಭೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ

ಬೆಂಗಳೂರು, ಜುಲೈ 05 :  ಮೀಸಲಾತಿ ವಿಚಾರದಲ್ಲಿ ಬಿಜೆಪಿ ಸರ್ಕಾರ ಸೃಷ್ಟಿಸಿರುವ ಗೊಂದಲಗಳ ನಿವಾರಣೆಗೆ  ಬಜೆಟ್ ಅಧಿವೇಶನ ಮುಗಿದ  ನಂತರ ಅಡ್ವೊಕೇಟ್ ಜನರಲ್,  ಕಾನೂನು ಇಲಾಖೆ ಹಾಗೂ ...

ಮುಸ್ಲಿಮರ ಮೀಸಲಾತಿ ಹೆಚ್ಚಿಸುತ್ತೇನೆ ಎನ್ನುವ ಸಿದ್ದರಾಮಯ್ಯ ಯಾರ ಮೀಸಲಾತಿ ಕಡಿತಗೊಳಿಸುತ್ತಾರೆಂದು ಸ್ಪಷ್ಟಪಡಿಸಲಿ : ಅಮಿತ್​ ಶಾ

ಮುಸ್ಲಿಮರ ಮೀಸಲಾತಿ ಹೆಚ್ಚಿಸುತ್ತೇನೆ ಎನ್ನುವ ಸಿದ್ದರಾಮಯ್ಯ ಯಾರ ಮೀಸಲಾತಿ ಕಡಿತಗೊಳಿಸುತ್ತಾರೆಂದು ಸ್ಪಷ್ಟಪಡಿಸಲಿ : ಅಮಿತ್​ ಶಾ

ದೆಹಲಿ : ಕಾಂಗ್ರೆಸ್​ ಸರ್ಕಾರ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಮುಸ್ಲಿಮರ ಮೀಸಲಾತಿ ಹೆಚ್ಚಿಸುತ್ತೇನೆ ಎಂದು ಹೇಳುತ್ತಿರುವ ಮಾಜಿ ಸಿಎಂ ಸಿದ್ದರಾಮಯ್ಯರನ್ನು ಕೇಂದ್ರ ಗೃಹ ಸಚಿವ ಅಮಿತ್​ ಶಾ ...

ಕರ್ನಾಟಕ ಸರ್ಕಾರದ ಮೀಸಲಾತಿಗೆ ತಡೆ ಕೊಟ್ಟ ಸುಪ್ರೀಂಕೋರ್ಟ್​..!

ಕರ್ನಾಟಕ ಸರ್ಕಾರದ ಮೀಸಲಾತಿಗೆ ತಡೆ ಕೊಟ್ಟ ಸುಪ್ರೀಂಕೋರ್ಟ್​..!

ಕರ್ನಾಟಕ ಬಿಜೆಪಿ ಸರ್ಕಾರ ಮೀಸಲಾತಿ ಹೆಚ್ಚಳ ಹಾಗು ಒಳ ಮೀಸಲಾತಿ ಪ್ರಕಟ ಮಾಡಿತ್ತು. ಒಳ ಮೀಸಲಾತಿ ನೀಡಿರುವುದು ರಾಜಕೀಯವಾಗಿ ಬಿಜೆಪಿಗೆ ಲಾಭ ನೀಡುವ ಸಾಧ್ಯತೆಗಳಿವೆ ಅನ್ನೋ ಚರ್ಚೆಗಳು ...

ಬಂಜಾರ ಪ್ರತಿಭಟನೆ ತಡೆಯಲು ಅಶೋಕ್ ನಾಯ್ಕ್ ವಿಫಲ : ಯಡಿಯೂರಪ್ಪ ಮೇಲೆ ಹೆಚ್ಚಿದ ಅನುಕಂಪ

ಬಂಜಾರ ಪ್ರತಿಭಟನೆ ತಡೆಯಲು ಅಶೋಕ್ ನಾಯ್ಕ್ ವಿಫಲ : ಯಡಿಯೂರಪ್ಪ ಮೇಲೆ ಹೆಚ್ಚಿದ ಅನುಕಂಪ

ಶಿವಮೊಗ್ಗ: ಮಾ.೩೦: ಶಿಕಾರಿಪುರದಲ್ಲಿ ಬಂಜಾರ ಸಮುದಾಯದವರು ಪ್ರತಿಭಟನೆ ನಡೆಸುವ ವೇಳೆ ಮಾಜಿ ಸಿಎಂ ಯಡಿಯೂರಪ್ಪ ಮನೆಗೆ ಕಲ್ಲು ತೂರಾಟ ನಡೆಸಿದ ಬೆನ್ನಲ್ಲೇ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಲಿಂಗಾಯತ ...

ಬಿಜೆಪಿ ಮೀಸಲಾತಿ ನೀಡಿದ್ದನ್ನು ನೋಡಿ ಕಾಂಗ್ರೆಸ್​ಗೆ ಹೊಟ್ಟೆಯುರಿ : ಗೋವಿಂದ ಕಾರಜೋಳ ವ್ಯಂಗ್ಯ

ಬಿಜೆಪಿ ಮೀಸಲಾತಿ ನೀಡಿದ್ದನ್ನು ನೋಡಿ ಕಾಂಗ್ರೆಸ್​ಗೆ ಹೊಟ್ಟೆಯುರಿ : ಗೋವಿಂದ ಕಾರಜೋಳ ವ್ಯಂಗ್ಯ

ಬಾಗಲಕೋಟೆ : ಬಿಜೆಪಿ ಸರ್ಕಾರ ಎಂದಿಗೂ ಸಂವಿಧಾನದ ಆಶಯದಂತೆ ಕೆಲಸ ಮಾಡಿದೆಯೇ ಹೊರತು ಬೇಕಾಬಿಟ್ಟಿ ಕೆಲಸವನ್ನು ಎಂದಿಗೂ ಮಾಡಿಲ್ಲ ಅಂತಾ ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ. ಬಾಗಲಕೋಟೆಯಲ್ಲಿ ...

ಲಿಂಗಾಯತರನ್ನು ಕೆಣಕಿದ್ದ ಕಾಂಗ್ರೆಸ್, ಈಗ ಪಂಚಮಸಾಲಿಗಳ ಸರದಿ..!

ಲಿಂಗಾಯತರನ್ನು ಕೆಣಕಿದ್ದ ಕಾಂಗ್ರೆಸ್, ಈಗ ಪಂಚಮಸಾಲಿಗಳ ಸರದಿ..!

2013ರಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ದಾಖಲಿಸಿದ್ದ ಕಾಂಗ್ರೆಸ್ ಪಕ್ಷ ಸಿದ್ದರಾಮಯ್ಯ ನೇತೃತ್ವದಲ್ಲಿ ಉತ್ತಮ ಆಡಳಿತವನ್ನೂ ನೀಡಿತ್ತು. 5 ವರ್ಷಗಳಲ್ಲಿ ಸಅಕಷ್ಟು ಯೋಜನೆಗಳನ್ನು ಜಾರಿ ಮಾಡಿ ಸಿದ್ದರಾಮಯ್ಯ ...

ಅಂಬೇಡ್ಕರ್ ಅವರು ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರಾಗದೆ ಹೋಗಿದ್ದರೆ ನಮಗೆ ಇಂಥಾ ಶ್ರೇಷ್ಠ ಸಂವಿಧಾನ ಸಿಗುತ್ತಿರಲಿಲ್ಲ:  ಸಿದ್ದರಾಮಯ್ಯ

ಅಂಬೇಡ್ಕರ್ ಅವರು ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರಾಗದೆ ಹೋಗಿದ್ದರೆ ನಮಗೆ ಇಂಥಾ ಶ್ರೇಷ್ಠ ಸಂವಿಧಾನ ಸಿಗುತ್ತಿರಲಿಲ್ಲ: ಸಿದ್ದರಾಮಯ್ಯ

ಅಂಬೇಡ್ಕರ್ ಅವರು ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರಾಗದೆ ಹೋಗಿದ್ದರೆ ನಮಗೆ ಇಂಥಾ ಶ್ರೇಷ್ಠ ಸಂವಿಧಾನ ಸಿಗುತ್ತಿರಲಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ...

ವಿಧಾನಸಭೆ ಪ್ರವೇಶಿಸಿದ 2ಎ ಮೀಸಲಾತಿ ಹೋರಾಟ; ಯತ್ನಾಳ್, ಬೆಲ್ಲದ್ ಧರಣಿ

ವಿಧಾನಸಭೆ ಪ್ರವೇಶಿಸಿದ 2ಎ ಮೀಸಲಾತಿ ಹೋರಾಟ; ಯತ್ನಾಳ್, ಬೆಲ್ಲದ್ ಧರಣಿ

ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವ ಕುರಿತ ಹೋರಾಟ ಈಗ ವಿಧಾನಸಭೆಯನ್ನು ಪ್ರವೇಶಿಸಿದೆ. ಮಿಸಲಾತಿ ನೀಡುವ ಕುರಿತಾಗಿ ಸಿಎಂ ಬಸವರಾಜ ಬೊಮ್ಮಾಯಿ ಸದನದಲ್ಲಿಯೇ ಉತ್ತರ ನೀಡಬೇಕೆಂದು ಪಟ್ಟುಹಿಡಿದ ಬಿಜೆಪಿ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಅರವಿಂದ ಬೆಲ್ಲದ್ ವಿಧಾನಸಭೆಯಲ್ಲಿಯೇ ಧರಣಿ ನಡೆಸಿದ್ದಾರೆ. ಬಸನಗೌಡ ಪಾಟೀಲ ಯತ್ನಾಳ್ ಅವರು ಶೂನ್ಯವೇಳೆಯಲ್ಲಿ ಮೀಸಲಾತಿ ಕುರಿತ ವಿಚಾರವನ್ನು ಪ್ರಸ್ತಾಪಿಸಿದರು. ಪಂಚಮಸಾಲಿ ಸಮುದಾಯವನ್ನು ಹಿಂದುಳಿದ ವರ್ಗ 2ಎಗೆ ಸೇರಿಸುವ ಕುರಿತು ಮಾಜಿ ಸಿಎಂ ಯಡಿಯೂರಪ್ಪ ಅವರು ನೀಡಿದ ಭರವಸೆಯನ್ನು ಯತ್ನಾಳ್ ಸದನದ ಗಮನಕ್ಕೆ ತಂದರು.  “ಎಸ್‌ಟಿ ಸಮುದಾಯಕ್ಕೆ ನೀಡಿರುವ ಮೀಸಲಾತಿಯನ್ನು ಶೇ.3ರಿಂದ ಶೇ.7.5ಕ್ಕೆ ಏರಿಸಿ ವಾಲ್ಮೀಕಿ, ಉಪ್ಪಾರ ಸೇರಿದಂತೆ ಇತರ ಎಸ್‌ಟಿ ಸಮುದಾಯಗಳಿಗೆ ಅನುಕೂಲ ಕಲ್ಪಿಸುವುದು ಹಾಗೂ ಕುರುಬ ಸಮಾಜವನ್ನು ಎಸ್‌ಟಿಗೆ ಸೇರಿಸುವುದಾಗಿ ಆರು ತಿಂಗಳ ಹಿಂದೆ ನಡೆದ ಸದನದಲ್ಲಿ ಸರ್ಕಾರದಿಂದ ಭರವಸೆ ನೀಡಿಲಾಗಿತ್ತು. ಇದರೊಂದಿಗೆ, ಪಂಚಮಸಾಲಿ ಸಮುದಾಯವನ್ನು ಹಿಂದುಳಿದ ವರ್ಗ 2ಎಗೆ ಸೇರಿಸಲು ಆರು ತಿಂಗಳಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಬಿ ಎಸ್ ವೈ ಭರವಸೆ ನೀಡಿದ್ದರು,” ಎಂದು ಯತ್ನಾಳ್ ಹೇಳಿದ್ದಾರೆ.  ಈಗಾಗಲೇ, ಸರ್ಕಾರ ನೀಡಿದ ಗಡುವು ಸೆಪ್ಟೆಂಬರ್ 15ಕ್ಕೆ ಅಂತ್ಯವಾಗಿದೆ. ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಐದನೇ ಹಂತದ ಚಳವಳಿಯನ್ನು ಮಲೆ ಮಹದೇಶ್ವರ ಬೆಟ್ಟದಿಂದ ಆರಂಭಿಸಲಾಗಿದೆ, ಎಂದರು.  ಇದಕ್ಕೆ ಉತ್ತರ ನೀಡಿದ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಸಿಎಂ ಹಾಗೂ ಕಾನೂನು ಸಚಿವರು ವಿಧಾನಪರಿಷತ್ ಕಲಾಪದಲ್ಲಿ ಭಾಗವಹಿಸುತ್ತಿರುವುದರಿಂದ ನಂತರ ಉತ್ತರ ನೀಡಲಾಗುವುದು, ಎಂದು ಹೇಳಿದರು.  ಇಷ್ಟಕ್ಕೆ ಸಮಾಧಾನಗೊಳ್ಳದ ಯತ್ನಾಳ್, ಸಿಎಂ ಯಾವಾಗ ಉತ್ತರ ನೀಡುತ್ತಾರೆ ಎಂಬುದನ್ನು ಸ್ಪಷ್ಟಪಡಿಸಬೇಕೆಂದು ಪಟ್ಟು ಹಿಡಿದರು. ಯತ್ನಾಳ್ ತೆ ದನಿಗೂಡಿಸಿದ ಶಾಸಕ ಅರವಿಂದ ಬೆಲ್ಲದ್ ಸರ್ಕಾರ ತನ್ನ ಭರವಸೆ ಈಡೇರಿಸದ ಕಾರಣ ಜನರಲ್ಲಿ ಅಸಮಾಧಾನ ಹೆಚ್ಚಾಗುತ್ತಿದೆ, ಎಂದರು.  ಮೀಸಲಾತಿ ಕುರಿತ ವಿಚಾರಕ್ಕೆ ಸಂಬಂಧಿಸಿ ಉತ್ತರ ನೀಡಲು ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿದ ಶಾಸಕದ್ವಯರು, ಸಭಾಧ್ಯಕ್ಷರ ಪೀಠದ ಎದುರು ಧರಣಿ ನಡೆಸಿದರು. ಈ ವೇಳೆ ಇಬ್ಬರಿಗೂ ಬುದ್ದಿ ಹೇಳಲು ಮುಂದಾದ ವಿಪಕ್ಷ ನಾಯಕ ಸಿದ್ದರಾಮಯ್ಯ, ಸಿಎಂ ಉತ್ತರ ನೀಡುತ್ತಾರೆ ಎಂದು ಸಭಾಧ್ಯಕ್ಷರು ಹೇಳಿದ ಬಳಿಕವೂ ಆಡಳಿತ ಪಕ್ಷದ ಸದಸ್ಯರೇ ಈ ರೀತಿ ಧರಣಿ ನಡೆಸುವುದು ಸರಿಯಲ್ಲ ಎಂದರು.  ಸಿಎಂ ವಿದೇಶಕ್ಕೆ ಹೋಗಿಲ್ಲ. ವಿಧಾನಪರಿಷತ್ತಿಗೆ ಹೋಗಿದ್ದಾರೆ. ಧರಣಿಯನ್ನು ಕೈಬಿಡಿ ಎಂದು ಸಭಾಧ್ಯಕ್ಷರು ಹೇಳಿದ ನಂತರ ಯತ್ನಾಳ್ ಹಾಗೂ ಬೆಲ್ಲದ್ ಧರಣಿ ಕೈಬಿಟ್ಟರು.  ಕಳೆದ ಸುಮಾರು ಒಂದು ವರ್ಷದಿಂದ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಬೇಕೆಂಬ ಕುರಿತು ನಿರಂತರ ಹೊರಾಟ ನಡೆಯುತ್ತಲೇ ಇದೆ. ಹೊರಾಟದ ಮುಂಚೂಣಿಯಲ್ಲಿರುವ ಬಸವ ಜಯಮೃತ್ಯುಂಜಯ ಸ್ವಾಮೀಜಿ, ಮೀಸಲಾತಿ ನೀಡದಿದ್ದಲ್ಲಿ ಅಮರಣಾಂತ ಉಪವಾಸ ಕೈಗೊಳ್ಳುವ ಎಚ್ಚರಿಕೆಯನ್ನೂ ನೀಡಿದ್ದರು.  ಕರ್ನಾಟಕ, ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶದ ಕೆಲವು ಭಾಗಗಳನ್ನು ಸೇರಿದಂತೆ ಅಂದಾಜು ಒಂದು ಕೋಟಿಯಷ್ಟು ಜನಸಂಖ್ಯೆಯನ್ನು ಪಂಚಮಸಾಲಿ ಸಮಾಜವನ್ನು ಹೊಂದಿದೆ. ಮೀಸಲಾತಿ ಹೋರಾಟದ ನೆಪದಲ್ಲಿ ಈ ಹಿಂದೆ ಬಸನಗೌಡ ಪಾಟೀಲ್ ಯತ್ನಾಳ್ ಅವರು ಯಡಿಯೂರಪ್ಪ ಪುತ್ರ ವಿಜಯೇಂದ್ರ ವಿರುದ್ದ ಹರಿಹಾಯ್ದಿದ್ದರು. ಮೀಸಲಾತಿಗಾಗಿ ಬೇಡಿಕೆ ಇಟ್ಟಿದ್ದಕ್ಕಿಂತಲೂ ಹೆಚ್ಚಾಗಿ ಇದೊಂದು ರಾಜಕೀಯ ಲಾಭಕ್ಕಾಗಿ ನಡೆಯುತ್ತಿರುವ ಹೋರಾಟದಂತೆ ಭಾಸವಾಗಿತ್ತು. ಹೊರಾಟದ ತೀವ್ರತೆ ಹೆಚ್ಚುತ್ತಿದ್ದಂತೆಯೇ, ಮಧ್ಯಪ್ರವೇಶಿಸಿದ ಮಾಜಿ ಸಿಎಂ ಯಡಿಯೂರಪ್ಪ, ಆರು ತಿಂಗಳಲ್ಲಿ ಈ ಕುರಿತಾಗಿ ನಿರ್ಧಾರ ಪ್ರಕಟಿಸಲಾಗುವುದು ಎಂದು ಭರವಸೆ ನೀಡಿದ್ದರು. ಈಗ ಆರು ತಿಂಗಳು ಕಳೆದರೂ, ಈ ಕುರಿತಾಗಿ ಸರ್ಕಾರ ತುಟಿಪಿಟಕ್ಕೆನ್ನದ ಕಾರಣ ಮತ್ತೆ ಹೋರಾಟ ಮುಂದುವರೆಸುವ ಕುರಿತು ಯೋಜನೆಗಳನ್ನು ರೂಪಿಸಲಾಗುತ್ತಿದೆ. 

OBC ಮೀಸಲಾತಿ: ಸರ್ಕಾರಿ ವಿಶ್ವವಿದ್ಯಾಲಯಗಳಲ್ಲಿ  55% ಮೀಸಲಾತಿ ಹುದ್ದೆಗಳು ಖಾಲಿ!

OBC ಮೀಸಲಾತಿ: ಸರ್ಕಾರಿ ವಿಶ್ವವಿದ್ಯಾಲಯಗಳಲ್ಲಿ  55% ಮೀಸಲಾತಿ ಹುದ್ದೆಗಳು ಖಾಲಿ!

ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ವೈದ್ಯಕೀಯ ಸೀಟುಗಳಿಗಾಗಿ ಇತರ ಹಿಂದುಳಿದ ವರ್ಗಗಳಿಗೆ (ಒಬಿಸಿ) ಮೀಸಲಾತಿ ವಿಸ್ತರಿಸುವ ನಿರ್ಧಾರವನ್ನು ಭಾರತ ಸರ್ಕಾರ ಘೋಷಿಸಿದ ಕೆಲವೇ ದಿನಗಳ ನಂತರ‌ ಮಾಹಿತಿಯೊಂದು ಬಹಿರಂಗವಾಗಿದ್ದು ...

Page 1 of 2 1 2