
ಉತ್ತರ ಕರ್ನಾಟಕದ ಅಭಿವೃದ್ಧಿ, ವಕ್ಫ್, ರೇಷನ್ ಕಾರ್ಡ್, ಬಳ್ಳಾರಿಯಲ್ಲಿ ಬಾಣಂತಿಯರ ಸಾವು ಸೇರಿದಂತೆ ಕಾಂಗ್ರೆಸ್ ಸರ್ಕಾರದ ಹಗರಣಗಳನ್ನ ಮುಂದಿಟ್ಟು ವಿರೋಧ ಪಕ್ಷಗಳು ಅಬ್ಬರಿಸಿವೆ. ಅಧಿವೇಶನದ ಮೊದಲ ದಿನವಾದ ಸೋಮವಾರ ಅಗಲಿದ ಗಣ್ಯರ ಸಾವಿಗೆ ಸಂತಾಪ ಸೂಚಿಸಿದ ಬೆನ್ನಲ್ಲೇ ಸಂಡೂರು, ಶಿಗ್ಗಾವಿ, ಚನ್ನಪಟ್ಟಣದ ನೂತನ ಶಾಸಕರು ಪ್ರಮಾಣವಚನ ಸ್ವೀಕರಿಸಿದ್ರು. ಅದಾದ ಬಳಿಕ ವಿಪಕ್ಷನಾಯಕ ಆರ್.ಅಶೋಕ್, ಮೊದಲು ವಕ್ಫ್ ಆಸ್ತಿ ವಿವಾದದ ಬಗ್ಗೆ ಚರ್ಚೆ ಆಗ್ಬೇಕು.. ಇಲ್ಲದಿದ್ರೆ ಅನುಭವ ಮಂಟಪವನ್ನೂ ವಕ್ಫ್ ಆಸ್ತಿ ಅಂದುಕೊಂಡು ಬಿಡ್ತಾರೆ ಅಂದಾಗ ಗಲಾಟೆ ಜೋರಾಯ್ತು..
ಬೆಳಗ್ಗೆ 11 ಗಂಟೆಗೆ ಶುರುವಾದ ಅಧಿವೇಶನದಲ್ಲಿ ಮಧ್ಯಾಹ್ನದ ತನಕ ವಕ್ಫ್ ವಿಚಾರದಲ್ಲೇ ಗದ್ದಲ ನಡೀತು. ಬಿಜೆಪಿ, ಹಾಗು ಕಾಂಗ್ರೆಸ್ ನಾಯಕರ ಸಮರ ನಿಲ್ಲಿಸಲು ಸ್ಪೀಕರ್ ಯು.ಟಿ ಖಾದರ್ ಹರಸಾಹಸ ಮಾಡಿದ್ರು. ಕೊನೆಗೆ ವಕ್ಫ್ ವಿಚಾರದಲ್ಲಿ ಚರ್ಚೆಗೆ ಸಮಯ ನಿಗದಿ ಮಾಡೋದಾಗಿ ಹೇಳಿದ ಬಳಿಕ ಸದನ ಶಾಂತವಾಯ್ತಯ, ಇದ್ರ ನಡುವೆ ಪಂಚಮಸಾಲಿ ಲಿಂಗಾಯತರ ಮೀಸಲಾತಿ ವಿಚಾರದಲ್ಲಿ ಸರ್ಕಾರದ ಕ್ರಮ ಖಂಡಿಸಿ ಪ್ರತಿಭಟಿಸಿದ್ರು. ಮಂಗಳವಾರ ಬೆಳಗಾವಿ ಸುವರ್ಣಸೌಧಕ್ಕೆ ಟ್ರ್ಯಾಕ್ಟರ್ ಱಲಿಗೆ ಸರ್ಕಾರ ಅಡ್ಡಿ ಮಾಡ್ತಿರೋ ಉದ್ದೇಶ ಏನು ಎಂದು ಪ್ರಶ್ನಿಸಿದ್ರು. ಜನರಿಗೆ ಸಮಸ್ಯೆ ಆಗುತ್ತೆ ಅಂತ ಜಿಲ್ಲಾಧಿಕಾರಿಗಳು ಅವಕಾಶ ಕೊಟ್ಟಿಲ್ಲ ಎಂದು ಪರಮೇಶ್ವರ್‌ಗೆ ಪ್ರತಿಭಟನೆಗೆ ಅವಕಾಶ ಕೊಡಿ ಎಂದು ಯತ್ನಾಳ್, ಬೆಲ್ಲದ್ ಆಗ್ರಹಿಸಿದ್ರು.

ಭೋಜನ ವಿರಾಮದ ಬಳಿಕ ಮತ್ತೆ ವಿಧಾನಸಭೆ ಕಲಾಪ ಆರಂಭ ಆದ ಬಳಿಕ ಮತ್ತೆ ಪಂಚಮಸಾಲಿಗೆ ಮೀಸಲಾತಿ ಹೋರಾಟಕ್ಕೆ ಅನುಮತಿ ಕೊಡ್ಬೇಕು ಎಂದು ಯತ್ನಾಳ್ ಟೀಂ ಆಗ್ರಹ ಮಾಡ್ತು. ಗೃಹಸಚಿವ ಪರಮೇಶ್ವರ್ ಅವರು ಬೆಳಗಾವಿಯಲ್ಲಿ 5 ಸಾವಿರ ಟ್ರ್ಯಾಕ್ಟರ್ ಮೂಲಕ ಹೋರಾಟ ಮಾಡಿದ್ರೆ, ಕಾನೂನು ಸುವ್ಯವಸ್ಥೆ ಹಾಳಾಗುತ್ತೆ ಅನ್ನೋ ಕಾರಣಕ್ಕೆ ಅವಕಾಶ ಕೊಡಲ್ಲ ಅಂದ್ರು.. ಆದರೆ ಸಿಎಂ ಸಿದ್ದರಾಮಯ್ಯ ಮಾತ್ರ ಮೀಸಲಾತಿ ವಿಷ್ಯದಲ್ಲಿ ಹೋರಾಟಕ್ಕೆ ಅಡ್ಡ ಬರಲ್ಲ ಎಂದು ಸದನದಲ್ಲೇ ಹೇಳಿದ್ರು. ಆಗ ಯತ್ನಾಳ್ ಮೀಸಲಾತಿ ಘೋಷಣೆ ಮಾಡಿ ಅಂತ ಕೇಳ್ಕೊಂಡ್ರು.. ಈ ವೇಳೆ ನಾಳೆ ಸರ್ಕಾರದಿಂದ ಉತ್ತರ ಕೊಡ್ತೀವಿ ಎಂದಿದ್ದಾರೆ.
ವಿಧಾನಸಭೆ ಕಲಾಪದಲ್ಲಿ ಒಂದಷ್ಟು ಜನಪರ ಚರ್ಚೆಗಳು ಶುರುವಾಯ್ತು. ಸದನದ ಹೊರಗೆ ನಾಳೆ ಪಂಚಮಸಾಲಿ ಮೀಸಲಾತಿ ಹೋರಾಟದ ವಿಷ್ಯ ಭಾರೀ ಚರ್ಚೆ ಆಯ್ತು. ನಾಳೆಯ ಪಂಚಮಸಾಲಿ ಮೀಸಲಾತಿ ಹೋರಾಟ ಯತ್ನಾಳ್ ಬಚಾವೋ ಅಷ್ಟೇ ಎಂದು ವಿಜಯಾನಂದ ಕಾಶಪ್ಪನವರ್ ಹೇಳಿದ್ರು. ಒಬ್ಬ ವ್ಯಕ್ತಿಯ ಕಾರಣಕ್ಕೆ ನಡೆಯುವ ಹೋರಾಟಕ್ಕೆ ನಾವು ಬೆಂಬಲ ನೀಡಲ್ಲ ಅಂದ್ರು.. ಆದ್ರೆ ಪಂಚಮಸಾಲಿ ಹೋರಾಟಕ್ಕೆ ನಾನು ಬೆಂಬಲ ಕೊಡ್ತೀವಿ, ಹೋರಾಟದಲ್ಲಿ ನಾನೂ ಕೂಡ ಭಾಗಿಯಾಗ್ತೇನೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ. ರಾಜಕಾರಣಕ್ಕಾಗಿ ನಾನು ಹೋರಾಟ ಮಾಡುವುದಿಲ್ಲ. ನನ್ನ ಕ್ಷೇತ್ರದಲ್ಲಿ 2 ಸಾವಿರ ಪಂಚಮಸಾಲಿ ಲಿಂಗಾಯತ ಮತದಾರರು ಇಲ್ಲ. ಆದರೂ ಸಮುದಾಯಕ್ಕಾಗಿ ಹೋರಾಟಕ್ಕೆ ನಾನು ಬರ್ತೀನಿ ಎಂದಿದ್ದಾರೆ.









