Tag: ಭಾರತ

ಧರ್ಮದ ಆಧಾರದ ಮೇಲೆ ದಾಳಿ ಮಾಡುವವರು ಪುಕ್ಕಲರು : ಶಮಿ ಟ್ರೋಲ್ ವಿರುದ್ಧ ಕೊಹ್ಲಿ ಹೇಳಿಕೆ

ಟಿ-20 ಕ್ರಿಕೆಟ್‌ ವಿಶ್ವಕಪ್‌ ಸರಣಿಯಲ್ಲಿ  ಪಾಕಿಸ್ತಾನದೆದುರು ಭಾರತ ಸೋತ ಬಳಿಕ ತಂಡದ ಆಟಗಾರ ಶಮಿ ವಿರುದ್ಧ ನಿಂದನಾತ್ಮಕ ಟೀಕೆಗಳ ಕುರಿತಂತೆ ತಂಡದ ಕ್ಯಾಪ್ಟನ್‌ ವಿರಾಟ್‌ ಕೊಹ್ಲಿ ಆಕ್ರೋಶ ...

Read more

ಗಡಿ ಪ್ರದೇಶ ಅತಿಕ್ರಮಣಕ್ಕೆ ಮುಂದಾದ ಚೀನಾ; ಕಣ್ಗಾವಲು ಹೆಚ್ಚಿಸಿದ ಭಾರತದಿಂದ ಹೆರಾನ್ ಡ್ರೋಣ್ ಅಳವಡಿಕೆ

ಚೀನಾ ದೇಶ ಕೆಲವಾರು ತಿಂಗಳುಗಳಿಂದಲೂ ಲಡಾಖ್ ಗಡಿಭಾಗದಲ್ಲಿ ಪ್ರಮುಖ ಸ್ಥಳಗಳನ್ನ ಅತಿಕ್ರಮಿಸಿಕೊಳ್ಳಲು ನಿರಂತರ ಪ್ರಯತ್ನ ಮಾಡುತ್ತಿದೆ. ಇದಕ್ಕೆ ಹಿಂದಿನಿಂದಲೂ ಭಾರತೀಯ ಸೈನಿಕರು ತೀವ್ರ ಪ್ರತಿರೋಧ ಒಡ್ಡುತ್ತಲೇ ಇದ್ದಾರೆ. ...

Read more

ಐತಿಹಾಸಿಕ ಮೈಲುಗಲ್ಲಿನ ಸಾಧಿಸಿದ ಭಾರತ, ದೇಶದಲ್ಲಿ 100 ಕೋಟಿ ಡೋಸ್ ಲಸಿಕೆ ವಿತರಣೆ ; ಕೆಂಪುಕೋಟೆಯಲ್ಲಿ ವಿಶ್ವದ ಅತಿ ದೊಡ್ಡ ರಾಷ್ಟ್ರ ಧ್ವಜ ಪ್ರದರ್ಶನ!

ಜಗತ್ತಿನಲ್ಲಿಯೇ 100 ಕೋಟಿ ಡೋಸ್ ಕೋವಿಡ್ ಲಸಿಕೆ ನೀಡಲಿರುವ ಮೊದಲ ದೇಶ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾದೆ. ಜಗತ್ತಿನ ಅತಿ ದೊಡ್ಡ ಲಸಿಕೀಕರಣ ಕಾರ್ಯಕ್ರಮವಾಗಿರುವ ಭಾರತದ ಈ ...

Read more

ಕೋವಿಡ್ ಸಾಂಕ್ರಾಮಿಕದ ನಡುವೆ ಸರಕಾರಿ ಶಾಲೆಗಳಲ್ಲಿ ದೇಶಾದ್ಯಂತ ದಾಖಲಾತಿ ಹೆಚ್ಚಳ

ಕೋವಿಡ್ 19 ಸಾಂಕ್ರಾಮಿಕ ರೋಗದಿಂದ ಹಣಕಾಸಿನ ಸಮಸ್ಯೆಗಳನ್ನು ಎದುರಿಸಿದ ಹಲವಾರು ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಂದ ಬಿಡಿಸಿ ಸರಕಾರಿ ಶಾಲೆಗಳಿಗೆ ಸೇರಿಸುತ್ತಿದ್ದಾರೆ. ಖಾಸಗಿ ಶಾಲೆಗಳ ದುಬಾರಿ ...

Read more

ವಿದ್ಯುತ್ ಬಿಕ್ಕಟ್ಟಿನ ಅಂಚಿನಲ್ಲಿದೆ ದೇಶ – ಕರ್ನಾಟದಲ್ಲೂ ಕಲ್ಲಿದ್ದಲ ಭಾರಿ ಕೊರತೆ!

ದೇಶಾದ್ಯಂತ ಕಲ್ಲಿದ್ದಲಿಗೆ ಅಭಾವ ಸೃಷ್ಟಿಯಾಗಿರುವ ಬೆನ್ನಲ್ಲೇ ರಾಜ್ಯದಲ್ಲೂ ಶಾಖೋತ್ಪನ್ನ ವಿದ್ಯುತ್‌ ಘಟಕಗಳಿಗೆ ಕಲ್ಲಿದ್ದಲಿನ ತೀವ್ರ ಕೊರತೆ ಉಂಟಾಗಿದೆ. ಪರಿಣಾಮ ವಿದ್ಯುತ್‌ ಉತ್ಪಾದನೆ ಶೇ.70ರಷ್ಟುಕುಸಿದಿದ್ದು, ಕೊರತೆ ಇದೇ ರೀತಿ ...

Read more

ಮುಂದುವರೆದ ಸಾರಿಗೆ ನೌಕರರ ಗೋಳು: ಸಂಬಳವಿಲ್ಲದೆ ಪರದಾಡುತ್ತಿರುವ ಸಾರಿಗೆ ಕಾರ್ಮಿಕರು.!!

ಕೊರೋನಾ ಲಾಕ್ಡೌನ್ ನಿಂದಾಗಿ  ರಾಜ್ಯ ಸಾರಿಗೆ ನಿಗಮಗಳು ಮಕಾಡೆ ಮಲಗಿವೆ. ಸದ್ಯ ಅನ್ ಲಾಕ್ ಆಗಿ ಸಂಪೂರ್ಣ ಬಸ್ ಸಂಚಾರ ಆರಂಭವಾದರೂ ನೌಕರರಿಗೆ ಸಂಬಳವನ್ನೂ ಕೊಡಲಾರದ ಸ್ಥಿತಿಗೆ  ...

Read more

ಭಾರತದಲ್ಲಿ ಸತತ ಮೂರನೇ ಬಾರಿ ಸಪ್ಟೆಂಬರ್‌ನಲ್ಲಿ ನಿಗದಿಗಿಂತ ಹೆಚ್ಚು ಮಳೆ!

ಭಾರತದ ಸುಮಾರು 75% ಮಳೆಗೆ ಕಾರಣವಾಗುವ ಮುಂಗಾರು ಸಾಮಾನ್ಯವಾಗಿ ಕೇರಳದ ಮೂಲಕ ಜೂನ್‌ನಲ್ಲಿ ಭಾರತಕ್ಕೆ ಪ್ರವೇಶಿಸಿ, ಜುಲೈಯಲ್ಲಿ ಇಡೀ ಭಾರತದಾದ್ಯಂತ ಹರಡಿ ಸಪ್ಟೆಂಬರ್‌ನಲ್ಲಿ ಅಂತ್ಯವಾಗುತ್ತದೆ. ಆದರೆ ಸತತವಾಗಿ ...

Read more

ಯುವ ರಾಜಕಾರಣದ ಆಶಯಗಳೂ ರಾಜಕೀಯ ವಾಸ್ತವಗಳೂ

ಭಾರತದ ರಾಜಕಾರಣದಲ್ಲಿ ಯುವ ಶಕ್ತಿಯ ಅನಿವಾರ್ಯತೆ ದಿನ ಕಳೆದಂತೆ ಹೆಚ್ಚಾಗುತ್ತಲೇ ಇದೆ. ಸ್ವಾತಂತ್ರ್ಯಾನಂತರದಲ್ಲಿ ಎರಡು ಪೀಳಿಗೆಗಳ ಅಧಿಕಾರ ರಾಜಕಾರಣದ ಸಾಫಲ್ಯ ವೈಫಲ್ಯಗಳನ್ನು ಸಹಿಸಿಕೊಂಡೇ ಬಂದಿರುವ ಭಾರತದ ನವ ...

Read more

ಭಾರತೀಯ ರಣಹದ್ದು ಗಜೇಂದ್ರಗಡ ಬೆಟ್ಟ ವಲಯ ಪ್ರದೇಶದಲ್ಲಿ ಮತ್ತೆ ಗೋಚರ!

ಅಕ್ಷಿಪಿಟ್ರಿಡೆ ಕುಟುಂಬಕ್ಕೆ ಸೇರಿದ ಅಳಿವಿನಂಚಿನಲ್ಲಿರು ವಿರಳಜಾತಿಯ ರಣಹದ್ದು (ವೈಜ್ಞಾನಿಕ ಹೆಸರು: ಜಿಪ್ಸ ಇಂಡಿಕಸ್, ಸಾಮಾನ್ಯ ಹೆಸರು: ಇಂಡಿಯನ್ ವಲ್ಚರ್ ಅಥವಾ ಇಂಡಿಯನ್ ಲಾಂಗ್ ಬಿಲ್‍ಡ ವಲ್ಚರ್) ಗಜೇಂದ್ರಗಡ ಬೆಟ್ಟವಲಯದಲ್ಲಿ ಪತ್ತೆಯಾಗಿದ್ದು ಪಕ್ಷಿಪ್ರೇಮಿಗಳಲ್ಲಿ ಸಂತಸತಂದಿದೆ. ಇದು ಭಾರತ, ನೇಪಾಳ ಪಾಕಿಸ್ತಾನ ಮೂಲದ ರಣಹದ್ದಾಗಿದೆ. ರಣಹದ್ದು! ಈ ಹೆಸರು ಕೇಳಿದರೇ ಸಾಮಾನ್ಯವಾಗಿ ಭಯಪಡುತ್ತಾರೆ..6.5 ಯಿಂದ 7.8 ಫೂಟ್ ಗಾತ್ರಹೊಂದಿದ್ದು ಆಯಾಸ ವಿಲ್ಲದೆ ಹಾರಾಟ ನಡೆಸುತ್ತವೆ. ರೆಕ್ಕೆಬಡಿಯದೇ ಆಕಾಶದಲ್ಲಿ ತಾಸುಗಟ್ಟಲೆ ಸುತ್ತುಹೊಡೆಯ ಬಲ್ಲದು. ಇದರ ದೃಷ್ಟಿ ಮಾನವನಿಗಿಂದ 8 ಪಟ್ಟು ಸೂಕ್ಷ್ಮ ಅಂದರೆ ಇವು 3 ಅಡಿ ಎತ್ತರದ ಪ್ರಾಣಿಗಳನ್ನು ನಾಲ್ಕು ಮೈಲಿಯಷ್ಟು ಎತ್ತರದಿಂದಲೇ ಸ್ಪಷ್ಟವಾಗಿ ಗುರಿತಿಸಬಲ್ಲವು. ಸತ್ತ ಸಾಕು ಮತ್ತು ವನ್ಯ ಪ್ರಾಣಿಗಳು ಇವುಗಳ ಆಹಾರ. ಸತ್ತ ಕೊಳೆತ ಪ್ರಾಣಿಗಳ ಸುತ್ತ ಗುಂಪುಗುಂಪಾಗಿ ತಿನ್ನುವುದು ಸಾಮಾನ್ಯ.  ಇಂತಹ ಸತ್ತ,ಕೊಳೆತ ಪ್ರಾಣಿಗಳನ್ನು ಭಕ್ಷಿಸುವ ಮೂಲಕ ರಣಹದ್ದುಗಳು ಊರನ್ನು ದುರ್ವಾಸನೆಯಿಂದಷ್ಟೆ ಅಲ್ಲದೆ ಸತ್ತ ಪ್ರಾಣಿಗಳಿಂದ ಸಾಂಕ್ರಾಮಿಕ ರೋಗಗಳ ಹರಡದಂತೆ ನೈಸರ್ಗಿಕ  ಸ್ಕ್ಯಾವೆಂಜರ್‍ಗಳಾಗಿ ಪರಿಸರವನ್ನು ಸ್ವಚ್ಛವಾಗಿಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ರಣಹದ್ದುಗಳು 12 ಕಿ.ಮೀ ಗಿಂತಲೂ  ಎತ್ತರಕ್ಕೆ ಹಾರುತ್ತವೆ ಅಲ್ಲದೇ ತಾಸಿಗೆ 80 ಕಿ.ಮೀ ವೇಗದಲ್ಲಿ ಸಾವಿರಾರು ಕಿ.ಮಿ ಸುತ್ತಳತೆಯಲ್ಲಿ ಗಸ್ತುಹೊಡೆಯತ್ತವೆ. ಆಹಾರ ಕಂಡೊಡನೆ ಗಂಟೆಗೆ 120 ಕಿ.ಮೀ ವೇಗದಲ್ಲಿ ನೆಲಕ್ಕೆರಗಿ ಶವಗಳ ಸುತ್ತ ಪ್ರತ್ಯಕ್ಷವಾಗುತ್ತವೆ. ಇವು ಬೆಟ್ಟಗುಡ್ಡಗಳ ಎತ್ತರ ಸುರಕ್ಷಿತ ಬಂಡೆಗಳ ಮೇಲೆ ಗೂಡು ನಿರ್ಮಿಸುತ್ತವೆ. ಎತ್ತರ ಮರದ ಮೇಲು ಕೂಡ ಗೂಡು ನಿರ್ಮಿಸ ಬಲ್ಲವು. ಸಂರಕ್ಷಣೆಯ ಅಗತ್ಯ: ಈಗಾಗಲೆ ಅಳಿವಿನಂಚಿನ ಭೀತಿಯೆದುರುಸುತ್ತಿರುವ ರಣಹದ್ದುಗಳ ಪರಿಸರ ಸಮತೋಲನದಲ್ಲಿ ಪ್ರಮುಖ ಪಾತ್ರ ವಹಿಸುವದರಿಂದ ಸಂರಕ್ಷಣೆ ಮುಖ್ಯವಾಗಿದ್ದು ಅರಣ್ಯ ಇಲಾಖೆಯ ಜೊತೆ ಸ್ಥಳೀಯ ಸಾರ್ವಜನಿಕರ ಸಹಕಾರ ಕೂಡಾ ಅವಶ್ಯ. ಗಜೇಂದ್ರಗಡ, ನಾಗೆಂದ್ರಗಡ, ಕಾಲಕಾಲೇಶ್ವರ ಬೆಟ್ಟ, ಶಾಂತೇಶ್ವರ ಬೆಟ್ಟಗಳು ರಣಹದ್ದು ಸೇರಿದಂತೆ ಇತರ ಹದ್ದುಗಳಿಗೆ ಸೂಕ್ತ ನೈಸರ್ಗಿಕ ಆವಾಸ ಸ್ಥಾನ ವಾಗಿದ್ದು ಇಲ್ಲಿ ಈಗಾಗಲೆ ಅಳಿವಿಂಚಿನಲ್ಲಿರುವ ತೋಳ ಹಾಗೂ ಕತ್ತೆಕಿರುಬಗಳು ಇದ್ದು ಸಂರಕ್ಷಣೆಯ ಕ್ರಮಗಳು ಅವಶ್ಯವಾಗಿದೆ. ವಿಶ್ವದಲ್ಲಿರುವ 23 ಜಾತಿಯ ರಣಹದ್ದುಗಳ ಪೈಕಿ 16 ಜಾತಿಯ ರಣಹದ್ದುಗಳು ಅಳಿವಿನಂಚು ತಲುಪಿವೆ. ಭಾರತದಲ್ಲಿ 9 ವಿವಿಧ ಬಗೆಯ ರಣಹದ್ದುಗಳಿದ್ದು 4 ಜಾತಿಯ ರಣಹದ್ದುಗಳು ಅಳಿವಿನ ಭೀತಿಯನ್ನೆದುರಿಸುತ್ತವೆ. ಭಾರತದಲ್ಲಿ ರಣಹದ್ದುಗಳ ಸಂರಕ್ಷಣೆಗಾಗಿ ನಮ್ಮ ರಾಜ್ಯದ ರಾಮನಗರ ಜಿಲ್ಲೆಯ 346 ಹೆಕ್ಟೆರ್ “ರಾಮದೇವರ ಬೆಟ್ಟ”  ಎಕೈಕ ಪ್ರದೇಶವಾಗಿದೆ. (2012 ರ ಜನೆವರಿಯಲ್ಲಿ ರಣಹದ್ದುಗಳ ಸಂರಕ್ಷಿತ ತಾಣ ವಾಗಿ ಘೋಷಣೆ) ರಣಹದ್ದುಗಳು ಸತ್ತು ಕೊಳೆಯುತ್ತಿರುವ ವನ್ಯಪ್ರಾಣಿ ಮತ್ತು ಸಾಕು ಪ್ರಾಣಿಗಳನ್ನು ತಿನ್ನುವುದರ ಮೂಲಕ ದುರ್ವಾಸನೆ ಹಾಗೂ ಅವುಗಳಿಂದ ಹರಡಬಹುದಾದ ರೋಗ ರುಜಿನಗಳನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಸುಮಾರು 2 ದಶಕಗಳ ಹಿಂದೆ ಅಪಾರ ಸಂಖ್ಯೆಯಲ್ಲಿದ್ದ ರಣಹದ್ದುಗಳ ಜಾನುವಾರುಗಳಿಗೆ ಬಳಸುತ್ತಿದ್ದ ಡೈಕ್ಲೋಫೀನಾಕ್ ಔಷಧಿಯಿಂದಾಗ ಹದ್ದುಗಳ ಆರೋಗ್ಯದ ಮೇಲಾಗು ದುಷ್ಪರಿಣಾಮದಿಂದಾಗಿ ಗಣನೀಯವಾಗಿ ಕುಸಿದು ಅಳಿವಿಂಚು ಸೇರುತ್ತಿದೆ. ರಣಹದ್ದುಗಳ ಸಂರಕ್ಷಣೆಗಾಗಿ ಸರಕಾರ 4 ವರ್ಷದಿಂದ ಡೈಕ್ಲೋಫಿನಾಕ್ ಬಳಕೆಗೆ ನಿಷೇದ ಹೆರಿದ್ದು ಗಮನಾರ್ಹ ವಿಷಯ. ಕಳೆದ ವಾರ ಗದಗ ಜಿಲ್ಲೆಯ ಎ.ಸಿ.ಎಫ್ ಪರಿಮಳ ಹುಲಗನ್ನವರವರ ಹಿರೇಹಾಳ ಗ್ರಾಮದಲ್ಲಿರುವ ಹೊಲದಲ್ಲಿ ರಣಹದ್ದು ಗೊಚರಿಸಿದೆ. ಶಾಂತಗೇರಿ ಬೆಟ್ಟದಲ್ಲಿನ ಅರಣ್ಯ ರಕ್ಷಕ ಸಿಬ್ಬಂದಿಗಳಾದ ಈಶ್ವರ ಮರ್ತೂರ, ಮಲ್ಲೇಶ ಹುಲ್ಲಣ್ಣವರ, ಶಾಂತಪ್ಪ ಹಟ್ಟಿಮನಿ ಮತ್ತು ಯಮನೂರ ಪಿಳಮಂಟರ ಇವರಿಗೂ ಸಹ ಗೂಚರಿಸಿವೆ. ಅರಣ್ಯ ಇಲಾಖೆ ಇವುಗಳ ಸಂರಕ್ಷಣೆಗೆ ಬೇಕಾದ ಕ್ರಮಗಳನ್ನು ಕೈಗೊಳ್ಳುತ್ತಿದೆ. ಮಂಜುನಾಥ ಎಸ್ ನಾಯಕ, ಜೀವವೈವಿಧ್ಯ ಸಂಶೋಧಕರ ಪ್ರಕಾರ “ರಣ ಹದ್ದುಗಳು ಗದಗ್ ಜಿಲ್ಲೆಯ ಗಜೇಂದ್ರಗಡ ಗಿರಿಗಳತ್ತ ಬಂದಿದ್ದೆ ...

Read more

ಅಫ್ಘಾನ್ನಲ್ಲಿ ಸರ್ಕಾರ ರಚನೆಗೆ ಮುಂದಾದ ತಾಲಿಬಾನ್; ಯಾರಿಗೆ ಯಾವ ಖಾತೆ? ಇಲ್ಲಿದೆ ಡೀಟೆಲ್ಸ್

ಅಮೆರಿಕಾ ತನ್ನ ಸೇನೆಯನ್ನು ಸಂಪೂರ್ಣ ವಾಪಸ್ಸು ಕರೆಸಿಕೊಂಡ ಬೆನ್ನಲ್ಲೇ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರು ರಾಜ್ಯಭಾರ ನಡೆಸಲು ತುದಿಗಾಲಲ್ಲಿ ನಿಂತಿದ್ದಾರೆ. ತಾಲಿಬಾನ್ ಸಂಘಟನೆಯ ಸರ್ವೋಚ್ಛ ನಾಯಕ ಹೈಬತ್ ಉಲ್ಲಾ ...

Read more

ಟೆರರ್ ಗ್ರೂಪ್ ಹಣೆಪಟ್ಟಿ ಕಳಚುತ್ತಲೇ ಭಾರತದ ವಿರುದ್ಧ ಯೂ ಟರ್ನ್ ಹೊಡೆದ ತಾಲಿಬಾನ್ !

ಅತ್ತ ವಿಶ್ವಸಂಸ್ಥೆಯ ಅಧಿಕೃತ ಭಯೋತ್ಪಾದಕ ಸಂಘಟನೆ ಎಂಬ ಹಣೆಪಟ್ಟಿ ಕಳಚಿದ ಮೂರೇ ದಿನದಲ್ಲಿ ತಾಲಿಬಾನ್ ರಾಗ ಬದಲಾಗಿದೆ. ಕಾಶ್ಮೀರ ವಿಷಯ ಭಾರತದ ಆಂತರಿಕ ವಿಷಯ ಎಂದಿದ್ದ ತಾಲಿಬಾನ್, ...

Read more

ಮತ್ತೆ ಹೆಚ್ಚಾಗುತ್ತಿರುವ ಕೊರೋನಾ ಪ್ರಕರಣಗಳು, ಇದು 3ನೇ ಅಲೆಯ ಮುನ್ಸೂಚನೆಯೇ?

ಭಾರತವು ಕೊರೊನಾ ವೈರಸ್ ಸಾಂಕ್ರಾಮಿಕ ರೋಗದ ಮೂರನೇ ಅಲೆಯ ಉತ್ತುಂಗದಲ್ಲಿದೆಯೇ? ಗುರುವಾರದ ಅಂಕಿಅಂಶಗಳು ಅಂತಹ ಅನುಮಾನಗಳನ್ನು ಹುಟ್ಟುಹಾಕಿವೆ. ದೇಶವು ಮತ್ತೊಂದು ಉಲ್ಬಣವನ್ನು ಎದುರಿಸಲು ಸಜ್ಜಾಗಬೇಕು ಎಂಬ ಸುಳಿವು ...

Read more

ತಾಲಿಬಾನ್ ನೀಡಿದ ಗಡುವು ಅಂತ್ಯವಾಗುವ ವೇಳೆ ಚುರುಕು ಪಡೆದ ಸ್ಥಳಾಂತರ ಕಾರ್ಯಾಚರಣೆ

ಅಫ್ಘಾನಿಸ್ತಾನದಿಂದ ವಿದೇಶಿಯರನ್ನು ಹಾಗೂ ಕಳೆದ ಎರಡು ದಶಕಗಳಿಂದ ಅಲ್ಲಿ ಬೀಡುಬಿಟ್ಟಿದ್ದ ಅಮೇರಿಕಾದ ಸೇನಾಪಡೆಗಳನ್ನು ವಾಪಾಸ್ ಕರೆಸಿಕೊಳ್ಳಲು ತಾಲಿಬಾನ್ ನೀಡಿರುವ ಗಡುವು ಮುಗಿಯುತ್ತಾ ಬಂದಿದೆ. ಭಾನುವಾರದಂದು ಅಮೇರಿಕಾವು 1,200 ...

Read more

ತಾಲಿಬಾನ್ ಬದಲಾಗಿದೆ ಎಂಬ ಮಾತು ಎಷ್ಟು ನಿಜ, ಎಷ್ಟು ಪೊಳ್ಳು?

ತಾಲಿಬಾನ್ ಉಗ್ರಗಾಮಿ ಸಂಘಟನೆ ಅಧಿಕಾರ ಹಿಡಿದ ಬಳಿಕ ಆಫ್ಘಾನಿಸ್ತಾನದಲ್ಲಿ ದಿನದಿಂದ ದಿನಕ್ಕೆ, ತಾಲಿಬಾನ್ ಆಡಳಿತಕ್ಕೆ ನಾಗರಿಕ ಪ್ರತಿರೋಧ ಭುಗಿಲೇಳತೊಡಗಿದೆ. ಬುಧವಾರ, ಗುರುವಾರ ತಮ್ಮ ದೇಶದ ರಾಷ್ಟ್ರಧ್ವಜ ಹಿಡಿದು ...

Read more

ಆಫ್ಘಾನಿಸ್ತಾನದ ವಿಷಯದಲ್ಲಿ ಭಾರತ ಮೌನಕ್ಕೆ ಕಾರಣವೇನು?

ತಾಲಿಬಾನಿಗಳ ವಿಷಯದಲ್ಲಿ ಏನನ್ನೂ ದಿಢೀರನೇ ನಿರ್ಧರಿಸುವ, ತತಕ್ಷಣದ ನಿಲುವಿಗೆ ಬರುವ ಸ್ಥಿತಿಯಲ್ಲಿ ಕೂಡ ಭಾರತ ಇಲ್ಲ. ನಿಜಕ್ಕೂ ಇದು ನುಂಗಲೂ ಆಗದ, ಉಗಿಯಲೂ ಆಗದ ಬಿಸಿ ತುಪ್ಪವನ್ನು ...

Read more

ಅಮೃತಘಳಿಗೆಯ ವಿಜೃಂಭಣೆಯೂ, ಪ್ರಜಾತಂತ್ರ ಭಾರತದ ಆತಂಕಗಳೂ

ಎರಡು ಶತಮಾನಗಳ ವಸಾಹತು ಶೋಷಣೆ ಸಂಕೋಲೆಗಳಿಂದ ವಿಮೋಚನೆ ಪಡೆದು ಒಂದು ಸ್ವತಂತ್ರ ರಾಷ್ಟ್ರವಾಗಿ ರೂಪುಗೊಂಡ ಭಾರತ ಇಂದು ತನ್ನ 75ನೆಯ ವರ್ಷವನ್ನು ಪ್ರವೇಶಿಸುತ್ತಿದೆ. ಸಾಮಾಜಿಕಾರ್ಥಿಕ ಅಸಮಾನತೆಯನ್ನು ಹೊದ್ದುಕೊಂಡೇ ...

Read more

2031ರಲ್ಲಿ ಭಾರತದ ವೃದ್ಧರ ಜನಸಂಖ್ಯೆ 194 ಮಿಲಿಯನ್‌ಗೆ ಏರಿಕೆಯಾಗಲಿದೆ : NSO ವರದಿ

ರಾಷ್ಟ್ರೀಯ ಅಂಕಿಅಂಶ ಕಚೇರಿ (National Statistical Office) ಹೊರ ಬಿಟ್ಟಿರುವ ವರದಿಯಲ್ಲಿ ಭಾರತದ ಹಿರಿಯರ ಜನಸಂಖ್ಯೆ (60 ವರ್ಷ ಮೇಲ್ಟಟ್ಟವರು)‌ 2031ರ ಹೊತ್ತಿಗೆ 194 ಮಿಲಿಯನ್ ತಲುಪಲಿದೆ ...

Read more

ಅಫ್ಘಾನ್ ಬಿಕ್ಕಟ್ಟು: ಪ್ರಮುಖ ಸಭೆಗೆ ಭಾರತವನ್ನು ಆಮಂತ್ರಿಸದ ರಷ್ಯಾ

ಅಫ್ಘಾನಿಸ್ತಾನದಲ್ಲಿ ಹೆಚ್ಚುತ್ತಿರುವ ತಾಲಿಬಾನ್ ಕ್ರೂರತೆಯನ್ನು ಪಟ್ಟ ಹಾಕಲು ರಷ್ಯಾ ಮುಖ್ಯವಾದ ಸಭೆಯನ್ನು ಕರೆದಿದೆ. ಈ ಸಭೆಗೆ ಪಾಕಿಸ್ತಾನ, ಚೀನಾ ಮತ್ತು ಅಮೇರಿಕಾವನ್ನು ಆಹ್ವಾನಿಸಿರುವ ರಷ್ಯಾವು ಭಾರತಕ್ಕೆ ಆಮಂತ್ರಣವನ್ನು ನೀಡಿಲ್ಲ.  ಅಫ್ಘಾನ್’ನಲ್ಲಿ ಹೆಚ್ಚುತ್ತಿರುವ ತಾಳಿಬಾನ್ ಆಕ್ರಮಣವನ್ನು ತಡೆಯಲು ರಷ್ಯಾ ಮುಂದೆ ಬಂದಿದ್ದು, ಈ ವಿಚಾರಕ್ಕೆ ಹೊಂದಿಕೊಂಡಿರುವ ರಾಷ್ಟ್ರಗಳನ್ನು ಪ್ರಮುಖವಾದ ಸಭೆಗೆ ಕರೆದಿದೆ. ಈ ಸಭೆಯು ಆಗಸ್ಟ್ 11ರಂದು ಕತಾರ್’ನಲ್ಲಿ ನಡೆಯಲಿದೆ ಎಂದು ಪಿಟಿಐ ವರದಿ ಮಾಡಿದೆ. ಮಾರ್ಚ್ 18 ಮತ್ತು ಏಪ್ರಿಲ್ 30ರಂದು ನಡೆದಿದ್ದ ಸಭೆಯ ರೀತಿಯಲ್ಲಿಯೇ ಈ ಸಭೆಯೂ ನಡೆಯಲಿದೆ ಎಂದು ವರದಿಯಾಗಿದೆ.  ಕಳೆದ ತಿಂಗಳು ರಷ್ಯಾದ ವಿದೇಶಾಂಗ ಮಂತ್ರಿಯಾಗಿರುವ ಸೆರ್ಗಿ ಲಾವ್ರೋವ್ ಅವರು ತಾಷ್ಕೆಂಟ್’ನಲ್ಲಿ ಮಾತನಾಡುತ್ತಾ ಅಫ್ಘಾನಿಸ್ತಾನದ ಪರಿಸ್ಥಿತಿಯನ್ನು ನಿಭಾಯಿಸಲು ಭಾರತ ಸೇರಿದಂತೆ ಇತರ ರಾಷ್ಟ್ರಗಳೊಡನೆ ರಷ್ಯಾ ತನ್ನ ಸಂಬಂಧವನ್ನು ಮುಂದುವರೆಸುತ್ತದೆ ಎಂದು ಹೇಳಿದ್ದರು.  ಈ ಹೇಳಿಕೆಯ ನಂತರ ಆಗಸ್ಟ್ 11ರ ಸಭೆಗೆ ಭಾರತಕ್ಕೆ ಆಹ್ವಾನ ನೀಡಲಾಗುತ್ತದೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ, ಆ ರೀತಿ ನಡೆಯಲಿಲ್ಲ. ಅಮೇರಿಕಾದೊಂದಿಗೆ ‘ಎಕ್ಸ್ಟೆಂಡೆಡ್ ಟ್ರಯೋಕಾ’ ಮಾದರಿಯ ಸಭೆಗಳನ್ನು ನಡೆಸುವುದರ ಜತೆಗೆ, ಮಧ್ಯ ಏಷ್ಯಾ ರಾಷ್ಟ್ರಗಳಾದ ಭಾರತ, ಇರಾನ್’ನೊಂದಿಗೆ ಸಭೆ ನಡೆಸುವುದಾಗಿ ಲಾವ್ರೋವ್ ಹೇಳಿದ್ದರು.  ರಷ್ಯಾ ಮತ್ತು ಅಮೇರಿಕಾದ ನಡುವೆ ಹಲವಾರು ವಿಚಾರಗಳಲ್ಲಿ ವೈಮನಸ್ಯವಿದ್ದರೂ, ತಾಲಿಬಾನಿಗಳ ಆಕ್ರಮಣವನ್ನು ಮಟ್ಟಹಾಕುವ ಸಲುವಾಗಿ ಎರಡೂ ರಾಷ್ಟ್ರಗಳು ಈಗ ಪರಸ್ಪರ ಕೈಜೋಡಿಸುವ ನಿರ್ಧಾರಕ್ಕೆ ಬಂದಿವೆ. ಪ್ರಸ್ತುತ ಬಹುಮುಖ್ಯವಾದ ಸಭೆಗೆ ಭಾರತವನ್ನು ಆಹ್ವಾನಿಸದೇ ಇರುವುದರ ಕುರಿತು ಭಾರತದ ವಿದೇಶಾಂಗ ಇಲಾಖೆಯಿಂದ ಯಾವುದೇ ಅಧಿಕೃತವಾದ ಹೇಳಿಕೆ ಹೊರಬಿದ್ದಿಲ್ಲ.  ವಿಶ್ವಸಂಸ್ಥೆಯಲ್ಲಿ ಭಾರತದ ರಾಯಭಾರಿಯಾಗಿರುವ ಟಿ ಎಸ್ ತಿರುಮೂರ್ತಿಯವರು ಶುಕ್ರವಾರದಂದು ನಡೆಯಲಿರುವ ವಿಶ್ವ ಭದ್ರತಾ ಪಡೆಗಳ ಸಭೆಯಲ್ಲಿ ಅಫ್ಘಾನ್ ಪರಿಸ್ಥಿತಿಯನ್ನು ಚರ್ಚಿಸಲಾಗುವುದು ಎಂದು ಘೋಷಿಸಿದ್ದಾರೆ.  ಮೇ 1ರಂದು ಅಫ್ಘಾನಿಸ್ತಾನದಿಂದ ಅಮೇರಿಕಾವು ತನ್ನ ಭದ್ರತಾ ಪಡೆಯನ್ನು ವಾಪಾಸ್ ಕರೆಯಲು ಆರಂಭಿಸಿದ ನಂತರ ಅಫ್ಘಾನ್’ನಲ್ಲಿ ತಾಲೀಬಾನಿಗಳು ಮತ್ತೆ ಜೀವಂತವಾಗಿದ್ದರೆ. ಈಗಾಗಲೇ ಅಮೇರಿಕಾದ ಬಹುಪಾಲು ಭದ್ರತಾ ಸಿಬ್ಬಂದಿಗಳು ಅಮೇರಿಕಾಕ್ಕೆ ವಾಪಾಸಾಗಿದ್ದು, ಆಗಸ್ಟ್ 31ರ ವೇಳೆಗೆ ಸಂಪೂರ್ಣವಾಗಿ ಎಲ್ಲಾ ಸೈನ್ಯ ನೆಲೆಗಳನ್ನು ಮುಚ್ಚುವ ಯೋಜನೆ ಹಾಕಲಾಗಿದೆ.  ಅಫ್ಘಾನಿಸ್ತಾನದಲ್ಲಿ ಶಾಂತಿಯನ್ನು ಮರುಸ್ಥಾಪಿಸುವಲ್ಲಿ ಭಾರತವೂ ಪ್ರಮುಖ ಪಾತ್ರ ವಹಿಸಿದೆ. ಯುದ್ಧಪೀಡಿತ ರಾಷ್ಟ್ರದ ಪುನರ್ ನಿರ್ಮಾಣಕ್ಕಾಗಿ ಭಾರತವು ಈಗಾಗಲೇ 3 ಬಿಲಿಯಲ್ ಡಾಲರ್ ಬಂಡವಾಳ ಹೂಡಿದೆ. ಈಗ ಇದೇ ದೇಶವನ್ನು ಅತ್ಯಂತ ಪ್ರಮುಖವಾದ ಸಭೆಯಿಂದ ದೂರ ಇಟ್ಟಿರುವುದು ಅಂತರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದೆ. 

Read more

ಅಮೆರಿಕ-ಯುರೋಪಿನಲ್ಲಿ ಡೆಲ್ಟಾ ಹಾವಳಿ: ಸಿಡಿಸಿಯ ಬೆಚ್ಚಿಬೀಳಿಸುವ ವರದಿ ಏನು?

ಅಪಾರ ವೈದ್ಯಕೀಯ ತಂತ್ರಜ್ಞಾನದ ರಾಷ್ಟ್ರಗಳಲ್ಲೇ ಡೆಲ್ಟಾ ವೈರಸ್ ಆತಂಕ ಹುಟ್ಟಿಸಿದೆ. ಶೇ.50-70ರಷ್ಟು ಲಸಿಕೆ ಪ್ರಗತಿ ಸಾಧಿಸಿರುವ ದೇಶಗಳಲ್ಲೇ ಈ ರೂಪಾಂತರಿ ವೈರಾಣು ತಳಿ ಅಲ್ಲೋಲ- ಕಲ್ಲೋಲ ಸೃಷ್ಟಿಸಿದೆ. ...

Read more

ಭಾರತದಿಂದ ಚೀನಾಗೆ ಮರಳುವಂತೆ ಆಪಲ್ ಘಟಕಗಳಿಗೆ ಕರೆ ನೀಡಿದ ಚೀನಾ ನೆಟ್ಟಿಗರು

ಹೂಡಿಕೆಯ ವಿಷಯದಲ್ಲಿಯೂ ಭಾರತದಲ್ಲಿ ವಿದೇಶಿ ಹೂಡಿಕೆಗೆ ಪೂರಕವಾದ ವಾತಾವರಣವಿಲ್ಲ ಜೊತೆಗೆ ,ಕೈಗಾರಿಕಾ ಘಟಕಗಳಿಗೆ ಬೆಂಕಿ ಹಚ್ಚಿ ನಾಶಪಡಿಸುವ

Read more
Page 3 of 6 1 2 3 4 6

Recent News

Welcome Back!

Login to your account below

Retrieve your password

Please enter your username or email address to reset your password.

error: Content is protected !!