ಗಣರಾಜ್ಯೋತ್ಸವ ದಿನದಂದು ( Republic Day) ಸಂವಿಧಾನಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ( Dr. BR. Ambedkar) ಅವರ ಭಾವಚಿತ್ರ ತೆರವುಗೊಳಿಸುವಂತೆ ಹೇಳಿ ಅಪಮಾನಿಸಿದ್ದ ರಾಯಚೂರು (Raichur) ಜಿಲ್ಲಾ ಮತ್ತು ಸೆಷನ್ಸ್ ಕೋರ್ಟ್ನ ನ್ಯಾಯಮೂರ್ತಿ ಮಲ್ಲಿಕಾರ್ಜುನ ಗೌಡ ( Mallikarjun Gowda) ಅವರನ್ನು ವಜಾಗೊಳಿಸುವಂತೆ ಆಗ್ರಹಿಸಿ ಬೆಂಗಳೂರಿನಲ್ಲಿ ಶನಿವಾರ ಬೃಹತ್ ಜಾಥಾ ನಡೆದಿದೆ. ಸಂವಿಧಾನ ಸಂರಕ್ಷಣಾ ಮಹಾ ಒಕ್ಕೂಟದ ನೇತೃತ್ವದಲ್ಲಿ ವಿಧಾನಸೌಧ ಹಾಗೂ ಹೈಕೋರ್ಟ್ ಚಲೋ ಜಾಥಾದಲ್ಲಿ ಅಂಬೇಡ್ಕರ್ರನ್ನು ಅವಮಾನಿಸಿದ ನ್ಯಾಯಾಧೀಶ ಮಲ್ಲಿಕಾರ್ಜುನಗೌಡ ಅವರನ್ನು ತಕ್ಷಣ ವಜಾಗೊಳಿಸುವಂತೆ ಆಗ್ರಹಿಸಲಾಗಿದೆ.
ಗಣರಾಜ್ಯೋತ್ಸವ ದಿನದಂದು ಅಂಬೇಡ್ಕರ್ ಫೋಟೋ ತೆರವುಗೊಳಿಸಿ ಧ್ವಜಾರೋಹಣ ಮಾಡಿದ್ದ ನ್ಯಾಯಾಧೀಶರನ್ನು ರಾಯಚೂರಿನಿಂದ ಬೆಂಗಳೂರಿಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿತ್ತು.
‘ರಾಯಚೂರು ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ಅವರನ್ನು,ಬೆಂಗಳೂರಿನಲ್ಲಿರುವ, ಕರ್ನಾಟಕ ರಾಜ್ಯ ಸಾರಿಗೆ ಮೇಲ್ಮನವಿ ನ್ಯಾಯಮಂಡಳಿ ಅಧ್ಯಕ್ಷರನ್ನಾಗಿ ವರ್ಗಾವಣೆ ಮಾಡಲಾಗಿದೆ’ ಎಂದು ಹೈಕೋರ್ಟ್ ರಿಜಿಸ್ಟ್ರಾರ್ ( High Court Register) ಜನರಲ್ ಶುಕ್ರವಾರ ಅಧಿಸೂಚನೆ ಹೊರಡಿಸಿದ್ದರು. ಅಂಬೇಡ್ಕರ್ ರನ್ನು ಅವಮಾನಿಸಿದ ನ್ಯಾಯಾಧೀಶರನ್ನು ವಜಾ ಮಾಡದೆ ವರ್ಗಾವಣೆ ಮಾಡಿರುವುದು ಆಕ್ರೋಶಕ್ಕೆ ಕಾರಣವಾಗಿತ್ತು.
ಈ ಹಿನ್ನೆಲೆಯಲ್ಲಿ, ಶನಿವಾರ ನಡೆದ ಪ್ರತಿಭಟನೆಯಲ್ಲಿ ನ್ಯಾಯಾಧೀಶನನ್ನು ಕರ್ತವ್ಯದಿಂದ ವಜಾ ಮಾಡಲೇಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.

ಇನ್ನು, ಬೆಂಗಳೂರಿಗೆ ರಾಜ್ಯದ ಮೂಲೆ ಮೂಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಅಂಬೇಡ್ಕರ್ ಅನುಯಾಯಿಗಳು ಆಗಮಿಸಿ ಜಾಥಾವನ್ನು ಯಶಸ್ಸುಗೊಳಿಸಿದ್ದಾರೆ. ದಲಿತ ವಿದ್ಯಾರ್ಥಿ ಪರಿಷತ್, ಬಿಎಸ್ಪಿ, ಕರ್ನಾಟಕ ದಲಿತ ವಿಮೋಚನಾ ಸಮಿತಿ, ಎಸ್ಡಿಪಿಐ , ಭಾರತೀಯ ದಲಿತ ಫ್ಯಾಂಥರ್ ಮೊದಲಾದ ಹಲವು ಸಂಘಟನೆಗಳು ಸಂವಿಧಾನ ಸಂರಕ್ಷಣಾ ಮಹಾ ಒಕ್ಕೂಟದ ಭಾಗವಾಗಿ ಪ್ರತಿಭಟನೆಯನ್ನು ನಡೆಸಿದೆ. ಕೊಳ್ಳೇಗಾಲ ಪಟ್ಟಣ ಒಂದರಿಂದಲೇ ವಿಧಾನ ಸೌಧ-ಹೈಕೋರ್ಟ್ ಚಲೋ ಹೋರಾಟಕ್ಕೆ 80 ಬಸ್ಸುಗಳು ಬಂದಿದೆ.
ಬೆಂಗಳೂರಿನ ಕೇಂದ್ರ ರೈಲ್ವೆ ನಿಲ್ದಾಣದಿಂದ ಪ್ರೀಡಂ ಪಾರ್ಕ್ವರೆಗೆ ಮೆರವಣಿಗೆ ಸಾಗಿದ್ದು, ಮೆರವಣಿಗೆಯುದ್ದಕ್ಕೂ ಜೈಭೀಮ್ ಘೋಷಣೆಗಳೊಂದಿಗೆ ನೀಲಿ ಭಾವುಟ (Blue Flags) ಹಾರಾಡಿದೆ. ನೀಲಿ ಶಾಲುಗಳು, ನೀಲಿ ಟೋಪಿಗಳು ಹಾಕಿದ್ದ ಪ್ರತಿಭಟನಾಕಾರರು ಜಾಥಾ ಹೋಗುವ ರಸ್ತೆ ಸಂಪೂರ್ಣ ನೀಲಿಮಯ ಮಾಡಿದ್ದರು. ವಾದ್ಯ ನುಡಿಸುತ್ತಾ ಪ್ರತಿಭಟನಾಕಾರರನ್ನು ಹುರಿದುಂಬಿಸುತ್ತಾ ವಾದ್ಯ ಕಲಾವಿದರು ಗಮನ ಸೆಳೆದಿದ್ದಾರೆ.

ಇನ್ನು ಪ್ರತಿಭಟನಾ ನಡೆಯುತ್ತಿದ್ದ ಫ್ರೀಡಂ ಪಾರ್ಕ್ ಮೈದಾನಕ್ಕೆ (Freedom Park Ground) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Bommai)ಆಗಮಿಸಬೇಕು, ನಮ್ಮ ಅಹವಾಲು ಸ್ವೀಕರಿಸಬೇಕು ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದಿದ್ದರಿಂದ ಸಿಎಂ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ್ದಾರೆ.
ಪ್ರತಿಭಟನಾಕಾರರೊಂದಿಗೆ ಮಾತನಾಡಿದ ಸಿಎಂ, ಬೇಡಿಕೆಗಳನ್ನು ಈಡೇರಿಸುವ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದ್ದಾರೆ. ಹೋರಾಟಗಾರರ ಮನವಿ ಪತ್ರವನ್ನು ಸಿಎಂ ಸ್ವೀಕರಿಸಿದ ಸಿಎಂ ಮಲ್ಲಿಕಾರ್ಜುನ ಗೌಡ ಅವರ ನಡೆಯನ್ನು ಖಂಡಿಸಿದ್ದಾರೆ. ಮಾತ್ರವಲ್ಲ ಜೈ ಭೀಮ್ ಘೋಷಣೆ ಕೂಗಿದ್ದಾರೆ ಎಂದು ಸ್ಥಳದಲ್ಲಿ ನೆರೆದಿದ್ದವರು ತಿಳಿಸಿದ್ದಾರೆ.
“ಅಂಬೇಡ್ಕರ್ ಫೋಟೋ ತೆರವು ಮಾಡಿಸಿ ಅವಮಾನ ಮಾಡಿದ ಘಟನೆಯು ನಮಗೂ ಕಣ್ಣು ತೆರೆಸಿದೆ. ಘಟನೆ ಸಂಬಂಧ ದಲಿತ ಸಮುದಾಯಗಳ ಮುಖಂಡರು ನನಗೆ ವಿವರಿಸಿದ್ದಾರೆ. ಶೀಘ್ರದಲ್ಲಿಯೇ ಸಂಬಂಧಪಟ್ಟವರಿಗೆ ಪತ್ರ ಬರೆಯಲಾಗುವುದು” ಎಂದು ಸಿಎಂ ಹೇಳಿದ್ದಾರೆ.

ಹೋರಾಟಗಾರರೊಡನೆ ಮಾತಾಡುವ ವೇಳೆ, ʼನಿಮಗೆ ನ್ಯಾಯ ಕೊಡಿಸುತ್ತೇವೆʼ ಎಂದು ಸಿಎಂ ಹೇಳಿರುವುದು ಕೆಲವು ಪ್ರತಿಭಟನಾಕಾರರ ಅಸಮಾಧಾನಕ್ಕೆ ಕಾರಣವಾಗಿದೆ. ʼಅಂಬೇಡ್ಕರ್ ನಮಗೆ ಮಾತ್ರ ಸೇರಿದವರಾ? ಅವರನ್ನು ಅಪಮಾನಿಸಿದವರಿಗೆ ಶಿಕ್ಷೆ ಕೊಡುವುದು ನಮಗೆ ನ್ಯಾಯ ನೀಡುವುದು ಹೇಗಾಗುತ್ತೆ ಎಂಬ ಪ್ರಶ್ನೆಯೂ ಪ್ರತಿಭಟನಾಕಾರರಲ್ಲಿ ಮೂಡಿದೆ.
ಬೃಹತ್ ಪ್ರತಿಭಟನಾ ರ್ಯಾಲಿ ಕುರಿತು ಮಾತಾಡಿರು ನಟ ಚೇತನ್ ಅವರ ವಿಡಿಯೋ ಇಲ್ಲಿದೆ.