• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Tuesday, April 21, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಸಂವಿಧಾನದ ಅಶಯಗಳು -ಬಾಬು ಜಗಜೀವನ್ ರಾಮ್-

(ಡಾ ಬಾಬು ಜಗಜೀವನ್ರಾಮ್ ಅಧ್ಯಯನ, ಸಂಶೋಧನೆ ಮತ್ತು ವಿಸ್ತರಣ ಕೇಂದ್ರ

ಪ್ರತಿಧ್ವನಿ by ಪ್ರತಿಧ್ವನಿ
April 21, 2026
in Top Story, ಅಂಕಣ, ಇದೀಗ, ಕರ್ನಾಟಕ, ದೇಶ, ರಾಜಕೀಯ
0
ಸಂವಿಧಾನದ ಅಶಯಗಳು -ಬಾಬು ಜಗಜೀವನ್ ರಾಮ್-
Share on WhatsAppShare on FacebookShare on Telegram

ವಿಶೇಷ ಲೇಖನ : ನಾ. ದಿವಾಕರ್‌..

(ಡಾ ಬಾಬು ಜಗಜೀವನ್ರಾಮ್ ಅಧ್ಯಯನ, ಸಂಶೋಧನೆ ಮತ್ತು ವಿಸ್ತರಣ ಕೇಂದ್ರ ಹಾಗೂ ಪರಿಶಿಷ್ಟ ಜಾತಿ/ಪಂಗಡ ವಿಶೇಷ ಘಟಕ ಮೈಸೂರು ವಿಶ್ವವಿದ್ಯಾನಿಲಯ
ಜಂಟಿ ಆಶ್ರಯದಲ್ಲಿ ದಿನಾಂಕ ೦೬-೦೪-೨೦೨೬ರಂದು ನಡೆದ ಬಾಬೂಜಿ ಅವರ ೧೧೯ನೆ ಜನ್ಮದಿನದ ಸಂರ‍್ಭದಲ್ಲಿ ಮಂಡಿಸಿದ ಉಪನ್ಯಾಸ –ಲೇಖನ ರೂಪ)

ADVERTISEMENT

ಭಾಗ ೧

ಸ್ವತಂತ್ರ ಭಾರತದ ಕನಸು ಸ್ವಾತಂತ್ರ‍್ಯಪರ‍್ವ ಭಾರತ ಮತ್ತು ಸ್ವಾತಂತ್ರ‍್ಯೋತ್ತರ ಭಾರತದಲ್ಲಿ, ದೇಶವನ್ನು ಸಾರ‍್ವಭೌಮ-ಸ್ವಾವಲಂಬಿ ರಾಷ್ಟ್ರವಾಗಿ ಕಟ್ಟುವ ಕನಸು ಕಂಡಿದ್ದ ದಾರ್ಶನಿಕರು, ಹೋರಾಟಗಾರು, ಚಿಂತಕರು, ರಾಜಕೀಯ ನಾಯಕರು ನಮ್ಮ ನಡುವೆ ಅಪಾರ ಸಂಖ್ಯೆಯಲ್ಲಿದ್ದರು. ಇವರಲ್ಲಿ ಅನೇಕರು ಸ್ವಾತಂತ್ರ‍್ಯ ಸಾಕಾರವಾಗುವುದನ್ನು ನೋಡಲು ಬದುಕುಳಿಯಲಿಲ್ಲ, ಇನ್ನು ಕೆಲವರು ಕೆಲವೇ ಧರ್ಮಗಳ ಫಲಾನುಭವಿಗಳಾಗಿ ಸಂಭ್ರಮಿಸಿದರು. ಹಲವರು ದಶಕಗಳಗಳ ಕಾಲ ಸ್ವತಂತ್ರ ಸರ್ಕಾರ ಚುನಾಯಿತ ಪ್ರತಿನಿಧಿಗಳಾಗಿ, ಜನಸೇವೆ ಸಲ್ಲಿಸಿ, ತಾವು ಕಂಡ ಕನಸುಗಳನ್ನು ಈಡೇರಿಸುವ ʼ ಪ್ರಾಮಾಣಿಕ ʼ ಪ್ರಯತ್ನ ಮಾಡಿ ತದನಂತರ ತಮ್ಮ ಪಯಣಕ್ಕೆ ಇತಿಶ್ರೀ ಹಾಡಿದರು. ಇಲ್ಲಿ ʼ ಪ್ರಾಮಾಣಿಕ ʼ ಎನ್ನುವ ಪದ ವಿಶೇಷವಾಗಿ ಕಾಣುವುದೇಕೆಂದರೆ, ಪ್ರಸಕ್ತ ರಾಜಕಾರಣದಲ್ಲಿ, ಆಡಳಿತದಲ್ಲಿ ಇದನ್ನು ಗುರುತಿಸಲು ಸೂಕ್ಷ್ಮ ಮನಸ್ಥಿತಿಯೇ ಬೇಕು.

Tamil Nadu Polls : ತಮಿಳುನಾಡು ಸಿಎಂ ವಿರುದ್ಧ ರೊಚ್ಚಿಗೆದ್ದ ರೈತ..... #pratidhvani

ಶತಮಾನಗಳ ಅಧ್ಯಾತ್ಮ, ಸಾಮಾಜಿಕ ಸ್ಥಿತ್ಯಂತರಗಳು, ಸಾಂಸ್ಕೃತಿಕ ವಿರೋಧಾಭಾಸಗಳು ಹಾಗೂ ನೈಜ ಧರ‍್ಮಿಕ ವಿಚಾರಧಾರೆಗಳು ಹಾಗೂ ಇವುಗಳ ನಡುವೆ ಇದ್ದಂತಹ ಪರಸ್ಪರ ಸಂಬಂಧಗಳು ರ‍್ತಮಾನದ ಭಾರತವನ್ನು ರೂಪಿಸಿರುವುದು ಸತ್ಯ. ಒಂದು ರಾಷ್ಟ್ರವಾಗಿ ಭಾರತದ ಅಂತಃಸತ್ವ ಏನು ಎಂಬ ಪ್ರಶ್ನೆಗೆ ನಿಖರವಾಗಿ ಉತ್ತರಿಸುವುದು ಸುಲಭವಲ್ಲ. ಏಕೆಂದರೆ ಈ ಸತ್ವ ಶೋಧನೆಯ ಹಾದಿಯಲ್ಲಿ ಸತ್ಯ-ಅಸತ್ಯ-ಮಿಥ್ಯೆ-ವಾಸ್ತವಗಳು ಮತ್ತು ಪೌರಾಣಿಕ ಕಲ್ಪನೆಗಳು ನಿರಂತರ ಮುಖಾಮುಖಿಯಾಗುತ್ತವೆ. ಧರ್ಮ-ಅಧ್ಯಾತ್ಮ-ಸುಧಾರಣಾವಾದ-ಕ್ರಾಂತಿಕಾರಕ ಆಲೋಚನೆಗಳು ಹಾಗೂ ಇವುಗಳ ಒಳಸೂಕ್ಷ್ಮಗಳನ್ನು ಒಟ್ಟಾರೆಯಾಗಿ ಗ್ರಹಿಸಿ, ವಿಚಾರಮಂಥನ ಮಾಡಿದಾಗ ನಮಗೆ ರ‍್ತಮಾನ ಭಾರತದ ಅಂತಃಸತ್ವ ಅಥವಾ ತಿರುಳು ಸ್ಪಷ್ಟವಾಗುತ್ತದೆ.

Jagjivan Ram - Wikipedia

ಇದನ್ನೇ ಜವಹರಲಾಲ್ ನೆಹರೂ ಅವರ ವಿವಿಧತೆಯಲ್ಲಿ ಏಕತೆ (Uಟಿiಣಥಿ iಟಿ ಆiveಡಿsiಣಥಿ) ವ್ಯಾಖ್ಯಾನವನ್ನು ಈ ದೃಷ್ಟಿಯಿಂದ ನರ‍್ವಚಿಸುವಾಗ , ಈ ಅಂತಃಸತ್ವವನ್ನು ಮತ್ತು ಅದರೊಳಗಿನ ಚಾರಿತ್ರಿಕ ತಿರುಳನ್ನು ನಾವು ಭಾರತದ ಸಂವಿಧಾನದಲ್ಲಿ ಕಂಡುಕೊಳ್ಳಬಹುದು. ಸಂವಿಧಾನವನ್ನು ಎರಡು ನೆಲೆಗಳಲ್ಲಿ ನೋಡಬಹುದು. ಮೊದಲನೆಯದು ಗ್ರಾಂಥಿಕ ದೃಷ್ಟಿಕೋನ. ಇದು ಆಡಳಿತ, ಕಾನೂನು ಮತ್ತು ರ‍್ತಮಾನದ ಸ್ಥಿತ್ಯಂತರಗಳ ವಿರ‍್ಶೆಗೆ ಆಕರವಾಗುತ್ತದೆ. ಎರಡನೆಯದು ಆಶಯಗಳ ನೆಲೆಯಲ್ಲಿ ನೋಡಿದಾಗ, ಸಂವಿಧಾನದ ಪ್ರಸ್ತಾವನೆಯಲ್ಲಿರುವ ಪದಪದವೂ ತನ್ನದೇ ಆದ ವಿಶಾಲ ರ‍್ಥಗಳನ್ನು ಪರಿಚಯಿಸುತ್ತದೆ. ಪ್ರಸ್ತಾವನೆಯಲ್ಲಿ ಇಲ್ಲ ಎಂದ ಮಾತ್ರಕ್ಕೆ ಆ ಒಂದು ಭಾವನೆ ಅಥವಾ ಗುರಿ ಸಂವಿಧಾನದಲ್ಲಿಲ್ಲ ಎಂದು ಹೇಳುವುದು ಬಾಲಿಶ ಎನಿಸುತ್ತದೆ. ಏಕೆಂದರೆ ಗ್ರಾಂಥಿಕವಲ್ಲದ ಆಶಯಗಳು ಈ ಗ್ರಂಥದಲ್ಲಿ ಅಂರ‍್ಗತವಾಗಿದೆ.

ಇದನ್ನೂ ಓದಿ : ರಾಜ್ಯ ಸರ್ಕಾರಕ್ಕೆ ಚಾಟಿ ಬೀಸಿದ ಹೈಕೋರ್ಟ್‌ : SSLC ಹಿಂದಿ ಗ್ರೇಡ್‌ ವಿವಾದಕ್ಕೆ ನ್ಯಾಯಾಲಯ ಹೇಳಿದ್ದೇನು..?

ಸಂವಿಧಾನ ಆಶಯ ಮತ್ತು ಮೌಲ್ಯ

ಸಂವಿಧಾನದ ಪ್ರಸ್ತಾವನೆಯನ್ನು ನಾವು ರ‍್ಚಿಸುವಾಗ ಬಹಳ ಮುಖ್ಯವಾಗಿ ಗುರುತಿಸಬೇಕಿರುವುದು ಪ್ರತಿಯೊಂದು ಪದದ ಹಿಂದಿರುವ ಆಶಯಗಳನ್ನು. ಸಮಾನತೆ, ಭ್ರಾತೃತ್ವ, ಸ್ವಾತಂತ್ರ‍್ಯ, ಅಭಿವ್ಯಕ್ತಿ, ನ್ಯಾಯ, ಅವಕಾಶ, ಸ್ಥಾನಮಾನ, ಗೌರವ ಮತ್ತು ಕೊನೆಯದಾಗಿ ಸ್ವಯಂ ಸಂಕಲ್ಪ. ಎಲ್ಲ ಜನರಿಗೆ, ಎಲ್ಲರ ನಡುವೆ, ಎಲ್ಲರನ್ನೂ ಒಳಗೊಂಡು, ಎಲ್ಲರಿಗೂ ಸಲ್ಲುವ ಈ ಉದಾತ್ತ ಹಕ್ಕು-ಬಾಧ್ಯತೆಗಳು ವ್ಯಕ್ತಿಗತ ಬದುಕಿನಲ್ಲಿ ನಾವು ಅಳವಡಿಸಿಕೊಳ್ಳಬೇಕಾದ ನೀತಿ ಸಂಹಿತೆಯ ಹಾಗೆ ಸಂವಿಧಾನವನ್ನು ನೋಡಬೇಕಿದೆ. ಇದು ನಮಗೆ ನಾವೇ (ಅಂದರೆ ದೇಶದ ಸಮಸ್ತ ಜನತೆ) ರ‍್ಪಿಸಿಕೊಂಡಿರುವ ನೀತಿ ಸಂಹಿತೆಗಳ ಶಾಸನರೂಪದ ಗ್ರಂಥ ಹಾಗಾಗಿ ವ್ಯಕ್ತಿಗತ ನೆಲೆಯಲ್ಲಿ ನಮ್ಮ ಸಂಕಲ್ಪವೇ ಸಂವಿಧಾನದ/ಸಾಂವಿಧಾನಿಕ ಆಶಯಗಳ ಸರ‍್ಥಕತೆಯನ್ನು ನರ‍್ದೇಶಿಸುತ್ತವೆ. ಪೀಠಿಕೆ ಅಥವಾ ಪ್ರಸ್ತಾವನೆಯ ನಿತ್ಯ ಪಠಣಕ್ಕೂ, ಸಂಕಲ್ಪಕ್ಕೂ ಇರುವ ವ್ಯತ್ಯಾಸವನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳುವುದು ಅವಶ್ಯ.

ಸಂಗತ | ಸಂವಿಧಾನ ಓದು: ಮೌಲ್ಯ ಅರಿಯೋಣ

ಸಮಾನತೆ ಎನ್ನುವುದು ಬಹಳ ವಿಶಾಲವಾದ ಪದ. ರ‍್ಥಿಕ ಸಾಮಾಜಿಕ ರಾಜಕೀಯ ಸಾಂಸ್ಕೃತಿಕ ನೆಲೆಯಲ್ಲಿ ನಾವು ಮಾತನಾಡುತ್ತಲೇ ಇರುತ್ತೇವೆ. ಸರ‍್ವಜನಿಕ ಸಂಕಥನಗಳಲ್ಲಿ ರ‍್ಚೆ ಮಾಡುತ್ತಲೇ ಇರುತ್ತೇವೆ. ಆದರೆ ಸಂವಿಧಾನದ ಆಶಯದಂತೆ ಲಿಂಗತ್ವ ಸಮಾನತೆ ನಮ್ಮ ರ‍್ಚೆಯ ವಿಷಯವಾಗುವುದು ಅಪರೂಪ. ಇದು ಸಾಮುದಾಯಿಕ ಅಥವಾ ಒಂದು ಸಮಾಜದೊಳಗಿನ ಪ್ರಶ್ನೆಯಲ್ಲ. ಜಾತಿ ಭೇದದಷ್ಟೇ ಅಪಾಯಕಾರಿಯಾದ ವಿದ್ಯಮಾನ ಎಂದರೆ ಲಿಂಗ ಭೇದ ಮತ್ತು ತಾರತಮ್ಯ. ಪ್ರಸ್ತಾವನೆಯಲ್ಲಿ ಸ್ಪಷ್ಟಪದಗಳಲ್ಲಿ ಹೇಳದಿದ್ದರೂ, ಪಿತೃಪ್ರಧಾನ-ಊಳಿಗಮಾನ್ಯ (ಯಜಮಾನಿಕೆಯ) ಮೌಲ್ಯಗಳನ್ನು ವ್ಯಕ್ತಿಗತ ನೆಲೆಯಿಂದಲೇ ಮೂಲೋತ್ಪಾಟನೆ ಮಾಡುವ ಆಶಯವನ್ನು ಸಂವಿಧಾನ ರಚನಾ ಸಭೆಯ ರ‍್ಚೆಗಳಲ್ಲಿ ಗುರುತಿಸಬಹುದು.

ಧರ್ಮ, ಜಾತಿ, ಭಾಷೆ ಇವೆಲ್ಲವೂ ಹೊರನೋಟಕ್ಕೆ ಕಾಣುವ, ವ್ಯಕ್ತವಾಗುವ ವಿದ್ಯಮಾನಗಳು ಆದರೆ ಲಿಂಗತ್ವದ ಸ್ಥಾನಮಾನಗಳು ನರ‍್ಧಾರವಾಗುವುದು ಕೌಟುಂಬಿಕವಾಗಿ, ನಾಲ್ಕು ಗೋಡೆಗಳ ನಡುವೆ. ಭಾರತದಲ್ಲಿ ಎಷ್ಟು ಕುಟುಂಬಗಳು ಈ ಮೌಲ್ಯವನ್ನು ಅಳವಡಿಸಿಕೊಂಡಿವೆ ಎಂದು ಪ್ರಶ್ನಿಸಿಕೊಂಡಾಗ ನಿರುತ್ತರರಗಾಗುತ್ತೇವೆ.

Zameer Ahmed: ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ದರೆ ದಾಖಲೆ ಕೊಡಬೇಕಲ್ವಾ? ಜಮೀರ್ ಪ್ರಶ್ನೆ! #pratidhvani

ಹೌದಲ್ಲವೇ ? ಇದೇ ಪ್ರಮೇಯವನ್ನು ಧರ‍್ಮಿಕ-ಉಪಾಸನಾ-ಆಚರಣೆಯ ಸ್ವಾತಂತ್ರ‍್ಯಕ್ಕೂ ಅನ್ವಯಿಸಿ ನೋಡಿದಾಗ ಹೊರ ಜಗತ್ತಿನಲ್ಲಿ ಕಾನೂನು ಕಟ್ಟಳೆಗಳು ಇದನ್ನು ಆಗುಮಾಡುತ್ತವೆ. ಆದರೆ ಕುಟುಂಬದ ಒಳಗೆ ? ಮುಟ್ಟಾದ ಮಹಿಳೆಗೆ, ವಿಧವೆ ಮಹಿಳೆಗೆ, ಅವಿವಾಹಿತ ಕನ್ಯೆಯರಿಗೆ, ಪರಿತ್ಯಕ್ತರಿಗೆ ನಾವು ವಿಧಿಸುವ ಕಟ್ಟುಪಾಡುಗಳು ಈ ಸಾಂವಿಧಾನಿಕ ಹಕ್ಕುಗಳನ್ನು ಸದ್ದಿಲ್ಲದೇ ಕಸಿದುಕೊಳ್ಳುತ್ತದೆ. ಉದಾಹರಣೆಗಳು ಸಾವಿರಾರು. ಈ ಯಾವುದೇ ಕಟ್ಟಳೆಗಳು ಪುರುಷರಿಗೆ ಅನ್ವಯಿಸುವುದಿಲ್ಲ. ಹಾಗಾದರೆ ಸಂವಿಧಾನದ ಆಶಯ ಎಲ್ಲಿ ಹೋಯಿತು ? ಯಾವ ಸಮಾನತೆಯನ್ನು ನಾವು ಪಾಲಿಸುತ್ತಿದ್ದೇವೆ ?

ಸಮಾನತೆಯ ಕನಸು-ವಾಸ್ತವ

ಸಮಾನ ಗೌರವ-ಸ್ಥಾನಮಾನ-ಅವಕಾಶ ಮತ್ತು ಅಭಿವ್ಯಕ್ತಿ ಈ ಉದಾತ್ತ ಆಶಯಗಳತ್ತ ಒಮ್ಮೆ ಹೊರಳೋಣ. ರ‍್ತಮಾನ ಭಾರತದಲ್ಲಿ ಇವೆಲ್ಲವೂ ಘಾಸಿಗೊಂಡಿವೆ. ಒಂದಲ್ಲಾ ಒಂದು ರೀತಿಯಲ್ಲಿ ಆಕ್ರಮಿಸಲ್ಪಡುತ್ತಿವೆ, ನಿರಾಕರಿಸಲ್ಪಡುತ್ತಿವೆ, ದಾಳಿಗೊಳಗಾಗುತ್ತಿವೆ. ಕೆಲವೊಮ್ಮೆ ಕಸಿದುಕೊಳ್ಳಲಾಗುತ್ತಿದೆ. ಸದ್ಯಕ್ಕೆ ಇದನ್ನು ಪಕ್ಕಕ್ಕಿಡೋಣ. ಮತ್ತೆ ಕುಟುಂಬದ ಕಡೆ ನೋಡೋಣ. ಸಾಂಪ್ರದಾಯಿಕ ಭಾರತದ ಪಿತೃಪ್ರಧಾನ ವ್ಯವಸ್ಥೆಯಲ್ಲಿ ಪ್ರತಿಯೊಂದು ಕುಟುಂಬವೂ ಒಂದು ರಿಪಬ್ಲಿಕ್ ಆಗಿರುತ್ತದೆ. ಆಳುವ-ಆಳಿಸಿಕೊಳ್ಳುವ, ಅಧಿಕಾರದ-ಅಧೀನತೆಯ, ಆಧಿಪತ್ಯದ-ವಿಧೇಯತೆಯ ನಿಯಮಗಳಿರುವ ಘಟಕಗಳಾಗಿರುತ್ತವೆ. ಯುವ ಪೀಳಿಗೆಯಲ್ಲೂ ಇದೇ ಮನೋಭಾವ ಆಳವಾಗಿರುತ್ತದೆ.

ಸ್ತ್ರೀ ದ್ವೇಷ, ಮೇಲರಿಮೆ, ಯಜಮಾನಿಕೆ ಇವುಗಳು ಗಂಡುಮಕ್ಕಳ ಸಹಜ ಗುಣಗಳೆಂದೇ ನಮ್ಮ ಸಮಾಜ ಭಾವಿಸುತ್ತದೆ.
ಆದರೂ ನಾವು ಸಂವಿಧಾನದ ಪ್ರಸ್ತಾವನೆ ಪಠಿಸುವಾಗ ಭ್ರಾತೃತ್ವದ ಬಗ್ಗೆ ಹೆಚ್ಚು ಮಾತನಾಡುತ್ತೇವೆ. ವಾಸ್ತವದಲ್ಲಿ (ಈ ಪದವೇ ಪುರುಷಪ್ರಧಾನ. ಇದು Fraternity ಯ ಸಂವಾದಿ ಪದ. ಈ ಪದದ ಮೂಲ 18ನೆ ಶತಮಾನದ್ದು.

ಸುಡು ವಾಸ್ತವಗಳ ನಡುವೆ ಅಂಬೇಡ್ಕರ್‌ ಪ್ರಸ್ತುತತೆ - Bevarahani Digital | Read  latest news in Kannada

ಹಾಗಾದರೆ ಮಹಿಳೆಯ ಸ್ಥಾನವೇನು. ವಿದ್ವಾಂಸರ ನಡುವೆ ಈ ವಾದಗಳು Sorority ಎಂಬ ಪದವನ್ನು ಹುಟ್ಟುಹಾಕಲಾಯಿತು. ಇದು ಮಹಿಳಾ ಸೂಚಕ ಪದ. ಇದು ವಿದ್ಯಾರ್ಥಿಗಳ ತಿಳುವಳಿಕೆಗಾಗಿ ಹೇಳಿದ ಮಾಹಿತಿ.) ನಾವು ನಿಜವಾಗಲೂ ಭ್ರಾತೃತ್ವ ಅಥವಾ ಬಂಧುತ್ವವನ್ನು ಪಾಲಿಸುತ್ತಿದ್ದೇವೆಯೇ ? ಅಂರ‍್ಜಾತಿ-ಅಂರ‍್ಧರ‍್ಮೀಯ ವಿವಾಹಗಳಲ್ಲಿ, ಹೆತ್ತವರೇ ಮಕ್ಕಳನ್ನು ಕೊಲ್ಲುತ್ತಿರುವ ಸಮಾಜದಲ್ಲಿ ಬಂಧುತ್ವ ಪದಕ್ಕೆ ರ‍್ಥ ಇರಲು ಸಾಧ್ಯವೇ ?
ಇಲ್ಲಿ ನಮಗೆ ಸಾಂವಿಧಾನಿಕ ಆಶಯ ಪ್ರಸ್ತುತವೆನಿಸುತ್ತದೆ.

ಪಿತೃಪ್ರಧಾನ-ಊಳಿಗಮಾನ್ಯ ಸಮಾಜದಲ್ಲಿ ಬಂಧುತ್ವ ಎನ್ನುವುದು subject to subjugation of the weak , women and downtrodden ಆಗಿರುತ್ತದೆ. ಇದು ಕುಟುಂಬದ ಒಳಗೂ ಸಹ ಅಷ್ಟೇ ಪರಿಣಾಮಕಾರಿಯಾಗಿರುತ್ತದೆ. ಸಾಮಾನ್ಯವಾಗಿ ಕಟ್ಟಳೆ ಮೀರಿದ ಗಂಡು ಮಕ್ಕಳು ಹೆಚ್ಚೆಂದರೆ ಬಹಿಷ್ಕೃತರಾಗುತ್ತಾರೆ, ಹೆಣ್ಣು ಮಕ್ಕಳು ಸದ್ದಿಲ್ಲದೆ ಕೊಲೆಯಾಗುತ್ತಾರೆ. ಒಂದು ಕುಟುಂಬದ ಒಳಗೇ ಬಂಧುತ್ವವನ್ನು ಸಾಧಿಸಲು ನಮ್ಮಿಂದ ಸಾಧ್ಯವಾಗುತ್ತಿಲ್ಲ ಅಲ್ಲವೇ ? ಇದು ಸರ‍್ವತ್ರಿಕ ಲಕ್ಷಣ ಅಲ್ಲದಿರಬಹುದು ಆದರೆ ಹೆಚ್ಚು ಪ್ರಮಾಣದಲ್ಲಿ ಕಣ್ಣಿಗೆ ಕಾಣುವ ಸತ್ಯ.

ಸಾಂಪ್ರದಾಯಿಕ ಹಿಂದೂ ಸಮಾಜದ ವಿವಾಹಗಳಲ್ಲಿನ ಕನ್ಯಾದಾನ ಮತ್ತು ಮುಸ್ಲಿಂ ಸಮಾಜದ ತಲಾಕ್ ಪದ್ಧತಿಗಳು ಈ ಬಂಧುತ್ವದ ಔದಾತ್ಯವನ್ನು ಭಂಗಗೊಳಿಸುವುದನ್ನು ಕಾಣುತ್ತಲೇ ಇದ್ದೇವೆ. ಈ ಆಶಯಗಳ ಅನುಸರಣೆ, ಅನುಕರಣೆಯ ವ್ಯತ್ಯಯಗಳ ನಡುವೆ ನಾವು ಸಾಮಾಜಿಕ-ರ‍್ಥಿಕ-ರಾಜಕೀಯ ನ್ಯಾಯ ಸಾಧಿಸಬೇಕಿದೆ. ನ್ಯಾಯದ ಕಲ್ಪನೆ ಈ ಎಲ್ಲ ಔದಾತ್ಯಗಳ ಮಿಶ್ರಣ, ಹೂರಣ ಮತ್ತು ಅಂತಃಸತ್ವ. ನ್ಯಾಯ ಸಲ್ಲಬೇಕಿರುವುದು ಯಾರಿಗೆ, ಯಾರಿಂದ, ಯಾವ ನೆಲೆಯಲ್ಲಿ, ಯಾವ ಸಂರ‍್ಭದಲ್ಲಿ ? ಈ ಪ್ರಶ್ನೆಯನ್ನು ಪ್ರತಿಯೊಬ್ಬ ವ್ಯಕ್ತಿ ತನಗೆ ತಾನೇ ಕೇಳಿಕೊಂಡಾಗ, ತಾನು ಎಲ್ಲಿ ನಿಂತಿದ್ದೇನೆ, ನಿಲ್ಲಬೇಕಿತ್ತು ಎನ್ನುವುದೂ ಅರಿವಾಗುತ್ತದೆ.

ಕಾನೂನು ಪರಿಪಾಲನೆ ಅಥವಾ ನೀತಿ ಸಂಹಿತೆಯ ಅಳವಡಿಕೆಯಷ್ಟೇ ಸಾಲುವುದಿಲ್ಲ. ಅದನ್ನೂ ಮೀರಿದ ಮಾನವೀಯ ಮೌಲ್ಯಗಳು ಇಲ್ಲಿ ಬೇಕಾಗುತ್ತವೆ. ಇದನ್ನೇ ಡಾ. ಬಿ.ಆರ್. ಅಂಬೇಡ್ಕರ್ ಸಾಂವಿಧಾನಿಕ ಮೌಲ್ಯಗಳು  ಎಂದು ಕರೆಯುತ್ತಾರೆ. ಈ ಆಶಯಗಳನ್ನು ಹೊತ್ತು 77 ವರ್ಷಗಳನ್ನು ಪೂರೈಸಿರುವ ನವ ಭಾರತ ವಿಕಸಿತ ಆಗುವತ್ತ ಧಾವಿಸುತ್ತಿರುವಾಗ, ಇದರ ಸಾರ್ಥಕತೆಯನ್ನು ಮನಗಾಣಬೇಕಿರುವುದು ವರ್ತಮಾನದ ಯುವ ಸಮಾಜ ಅಥವಾ ಮಿಲೆನಿಯಂ ಸಮಾಜದ ಭವಿಷ್ಯದ ದೃಷ್ಟಿಯಿಂದ. ಸಹಜವಾಗಿ ಈ ರೀತಿಯ ಜಿಜ್ಞಾಸೆ ಎದುರಾದಾಗ ನಾವು ಚರಿತ್ರೆಯನ್ನು ತಡಕಾಡುತ್ತೇವೆ, ಚಾರಿತ್ರಿಕ ವ್ಯಕ್ತಿಗಳನ್ನು ಶೋಧಿಸುತ್ತೇವೆ, ಗತಕಾಲದ ಘಟನೆಗಳ ಅವಲೋಕನ ಮಾಡುತ್ತೇವೆ.

ಸಂವಿಧಾನ ಮೌಲ್ಯಗಳೂ ತಿದ್ದುಪಡಿಯ ಹಪಹಪಿಯೂ - Pratidhvani

ಅವರೊಳಗಿನ ತತ್ವ , ನೈತಿಕತೆ, ನಿಷ್ಠೆ, ಶ್ರದ್ಧೆ, ಪ್ರಾಮಾಣಿಕತೆ ಮತ್ತು ಮಾನವೀಯ ಗುಣಗಳನ್ನು ನಮ್ಮ ಮಾದರಿಗಳಾಗಿ ಪರಿಗಣಿಸುತ್ತೇವೆ. ಇಂದು ಮಿಲೆನಿಯಂ ಸಮಾಜದ ಮುಂದೆ ಅಂತಹ ಸಮಕಾಲೀನ ಮಾದರಿಗಳು ಬಹುಮಟ್ಟಿಗೆ ಇಲ್ಲವೇ ಇಲ್ಲ. ಹಾಗಾಗಿ ಮತ್ತೆ ಮತ್ತೆ ಸ್ವಾತಂತ್ರ‍್ಯಪರ‍್ವ ಭಾರತ ಅಥವಾ ೨೦ನೆಯ ಶತಮಾನದ ಉತ್ತರರ‍್ಧಕ್ಕೆ ಹೊರಳುತ್ತೇವೆ. 1950ರ ನಂತರದ ಅವಧಿಯನ್ನು ಕಾಣುವುದು ಶೂನ್ಯ ಸಂಪಾದನೆಯೇ.

ಬಾಬು ಜಗಜೀವನ್ ರಾಮ್ ಪ್ರಸ್ತುತತೆ

ಇಂದು ನಾವು ಆಚರಿಸುತ್ತಿರುವ 119 ನೆಯ ಜನ್ಮದಿನಾಚರಣೆ ಅಂತಹ ಒಂದು ಮಾದರಿ ವ್ಯಕ್ತಿತ್ವದ ನೆನಪಿನಲ್ಲಿ. ಬಾಬು ಜಗಜೀವನ್ ರಾಮ್ ಸ್ವಾತಂತ್ರ‍್ಯೋತ್ತರ ಭಾರತ ಕಂಡಂತಹ ರಾಜಕೀಯ ಮುತ್ಸದ್ದಿಗಳಲ್ಲಿ ಒಬ್ಬರು. ಒಬ್ಬರು ಎನ್ನುವುದಕ್ಕಿಂತ ಅಪರೂಪದ ವ್ಯಕ್ತಿ ಎಂದು ಹೇಳಬಹುದು. ಜಗಜೀವನ್ ರಾಮ್ ಅವರ 40 ವರ್ಷಗಳ ರಾಜಕೀಯ ಪಯಣದ ಬಗ್ಗೆ ಹಲವು ಸಮಕಾಲೀನರು, ಐಎಎಸ್ ಅಧಿಕಾರಿಗಳು ಬರೆದಿರುವ ವಿಪುಲ ಸಾಹಿತ್ಯವಿದೆ. ಈ ಬರಹಗಳನ್ನು ಮತ್ತು ಬಾಬೂಜಿ ಅವರ ರಾಜಕೀಯ ನಡೆಯನ್ನು ಗಮನಿಸಿದಾಗ ತೋರುವ ಹೆಮ್ಮೆಯ ವಿಚಾರ ಎಂದರೆ ಎಲ್ಲಿಯೂ ಸಹ ಅವರ ವಿರುದ್ಧ ಒಂದು ಸಣ್ಣ ಆರೋಪವಾಗಲೀ, ಆಪಾದನೆಯಾಗಲೀ ಕೇಳಿಬರುವುದಿಲ್ಲ.

ರಾಜಕೀಯ ಪಕ್ಷದ ರಾಷ್ಟ್ರೀಯ ನಾಯಕರಾಗಿ, ಪ್ರಮುಖ ಇಲಾಖೆಗಳ ಕೇಂದ್ರ ಸಚಿವರಾಗಿ ಸಮರ್ಥವಾಗಿ ಕರ್ತವ್ಯ ನಿರ್ವಹಿಸಿರುವ ಬಾಬೂಜಿ ವಿರುದ್ಧ ಒಂದೇ ಒಂದು ಭ್ರಷ್ಟಾಚಾರ ಅಥವಾ ಸ್ವಜನಪಕ್ಷಪಾತದ ಆಪಾದನೆ ಕಾಣುವುದಿಲ್ಲ. ವ್ಯಕ್ತಿಗತ ಜೀವನದಲ್ಲೂ ಸಹ ಅವರ ಕೌಟುಂಬಿಕ ಸಂಬಂಧಗಳ ಬಗ್ಗೆ, ಸ್ನೇಹ ಬಾಂಧವ್ಯದ ಬಗ್ಗೆ ಕಳಂಕಪ್ರಾಯವಾದ ಒಂದು ಮಾತೂ ಕೇಳಿಬರುವುದಿಲ್ಲ. ಸ್ಥಿರಾಸ್ತಿಗಳು, ಸಂಘಟನಾತ್ಮಕ ಚಟುವಟಿಕೆಗಳು, ನಾಯಕತ್ವದ ವರ್ತನೆ ಈ ವಿಚಾರಗಳಲ್ಲೂ ಬಾಬೂಜಿ ಅವರ ಬಗ್ಗೆ ವಿರೋಧಾಭಾಸಗಳು ಕಾಣುವುದಿಲ್ಲ. ಹಾಗಾಗಿಯೇ ಅವರನ್ನು ಅಪರೂಪದ ವ್ಯಕ್ತಿ ಎಂದು ಹೇಳಬೇಕಾಯಿತು.

Babu Jagjivan Ram

ಅವರ ಸಮಕಾಲೀನರಲ್ಲಿ ಸಹ ಈ ರೀತಿ ಕಪ್ಪು ಚುಕ್ಕೆ ಇಲ್ಲದ ವ್ಯಕ್ತಿತ್ವವನ್ನು ಕಾಪಾಡಿಕೊಂಡಿರುವವರು ವಿರಳ. ಇದು ಬಾಬು ಜಗಜೀವನ್ ರಾಮ್ ಅವರ ಮೇರು ವ್ಯಕ್ತಿತ್ವಕ್ಕೆ ಸಾಕ್ಷಿ. ಸಚ್ಛಾರಿತ್ರ‍್ಯ ಎನ್ನುವುದು ಮ್ಯೂಸಿಯಂ ವಸ್ತುವಾಗಿರುವ ವರ್ತಮಾನದ ರಾಜಕಾರಣದಲ್ಲಿ ಬಾಬೂಜಿ ಈ ಕಾರಣಕ್ಕಾಗಿ ಹೆಚ್ಚು ಪ್ರಸ್ತುತ ಎನಿಸುತ್ತಾರೆ. ನಾವು ಸಂವಿಧಾನದ ಆಶಯಗಳ ಬಗ್ಗೆ ಮಾತನಾಡುವಾಗ, ಒಬ್ಬ ರಾಜಕೀಯ ನಾಯಕ ತನ್ನ ವ್ಯಕ್ತಿ ಬದುಕಿನಲ್ಲಿ ಈ ಆಶಯಗಳನ್ನು ಅಳವಡಿಸಿಕೊಂಡು ಹೇಗೆ ಆಡಳಿತ ವ್ಯವಸ್ಥೆಯಲ್ಲೂ ಅನುಕರಿಸಬಹುದು ಎನ್ನುವುದಕ್ಕೆ ಬಾಬೂಜಿ ಸಾಕ್ಷಿಯಾಗುತ್ತಾರೆ.

ಭಾರತದ ಜಾತಿ ಸಮಾಜದ ಶ್ರೇಣಿಯಲ್ಲಿ ಅತ್ಯಂತ ಕೆಳಸ್ತರದ ಚಮ್ಮಾರ ಜಾತಿಯಲ್ಲಿ ಜನಿಸಿದ ಬಾಬೂಜಿ ಹಸಿವು, ಬಡತನ ಇತ್ಯಾದಿ ಸಂಕಟಗಳನ್ನು ಅನುಭವಿಸಲಿಲ್ಲ. ಅವರ ತಂದೆ ಸೇನೆಯಲ್ಲಿದ್ದುದರಿಂದ ಉತ್ತಮ ಶಿಕ್ಷಣವನ್ನೂ ಪಡೆಯಲು ಸಾಧ್ಯವಾಯಿತು. ರವಿದಾಸ್ ಪರಂಪರೆಯಿಂದ ಸಾಂಸ್ಕೃತಿಕವಾಗಿ ಪ್ರಭಾವಿತರಾಗಿದ್ದ ಬಾಬೂಜಿ ನಿಷ್ಠರಾಗಿದ್ದರು, ಆಧ್ಯಾತ್ಮಿಕತೆಗೆ ಹೆಚ್ಚು ಒಲವು ಹೊಂದಿದ್ದರು. ಭಾರತದ ಆಧ್ಯಾತ್ಮಿಕ ಚರಿತ್ರೆ ಅವರನ್ನು ಬಹಳ ಪ್ರಭಾವಿಸಿತ್ತು. ಸಮಾನಾಂತರವಾಗಿ ಧರ್ಮ ಸಮಾಜ, ಥಿಯೋಸಫಿಕಲ್ ಸೊಸೈಟಿ ಮುಂತಾದ ಸಾಮಾಜಿಕ ಸುಧಾರಣಾ ಚಳುವಳಿಗಳಿಗೂ ತೆರೆದುಕೊಂಡಿದ್ದರು. ಹಿಂದೂ ಧರ್ಮದ ಬಗ್ಗೆ ಅವರ ನಿಷ್ಠೆ ಅಚಲವಾಗಿದ್ದುದು ವಿಶೇಷ.

ಮುಂದುವರೆಯುತ್ತದೆ,,,,,
-೦-೦-೦-೦-

Tags: Constituonal Valuesconstitution of indiaDr B R AmbedkarDr Babu Jagajeevan RAmFormer PM Of IndiaFraternityGreen RevolutinaryIndian PoliticsMoral ValuewsNA Divakar's ArticleNon CorruptPoliticsPratidhvanisocial Justice
Previous Post

“ನನ್ನ ಚುನಾವಣೆಯ ವೇಳೆ ಮನೆ ಸುತ್ತ ಹಳದಿ ನೀರು, ಏನೇನೋ ಹಾಕಿ ಹೋಗ್ತಿದ್ರು, ಸಿಎಂಗೂ ಮಾಟ ಮಂತ್ರ ಮಾಡಿಸಿದ್ದಾರೆ ಅನ್ಸುತ್ತೆ”

Related Posts

“ನನ್ನ ಚುನಾವಣೆಯ ವೇಳೆ ಮನೆ ಸುತ್ತ ಹಳದಿ ನೀರು, ಏನೇನೋ ಹಾಕಿ ಹೋಗ್ತಿದ್ರು, ಸಿಎಂಗೂ ಮಾಟ ಮಂತ್ರ ಮಾಡಿಸಿದ್ದಾರೆ ಅನ್ಸುತ್ತೆ”
Top Story

“ನನ್ನ ಚುನಾವಣೆಯ ವೇಳೆ ಮನೆ ಸುತ್ತ ಹಳದಿ ನೀರು, ಏನೇನೋ ಹಾಕಿ ಹೋಗ್ತಿದ್ರು, ಸಿಎಂಗೂ ಮಾಟ ಮಂತ್ರ ಮಾಡಿಸಿದ್ದಾರೆ ಅನ್ಸುತ್ತೆ”

by ಪ್ರತಿಧ್ವನಿ
April 21, 2026
0

 ಬೆಂಗಳೂರು : ದಾವಣಗೆರೆ ಉಪಚುನಾವಣೆಯ ಬಳಿಕ ರಾಜ್ಯ ಕಾಂಗ್ರೆಸ್‌ ಪಾಳಯದಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಸ್ಥಿತಿ ನಿರ್ಮಾಣವಾಗಿದೆ. ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸ್ಥಾನಕ್ಕೆ ಅಬ್ದುಲ್‌ ಜಬ್ಬಾರ್‌ ರಾಜೀನಾಮೆಯಿಂದ ಆರಂಭವಾದ...

Read moreDetails
ರಾಜ್ಯ ಸರ್ಕಾರಕ್ಕೆ ಚಾಟಿ ಬೀಸಿದ ಹೈಕೋರ್ಟ್‌ : SSLC ಹಿಂದಿ ಗ್ರೇಡ್‌ ವಿವಾದಕ್ಕೆ ನ್ಯಾಯಾಲಯ ಹೇಳಿದ್ದೇನು..?

ರಾಜ್ಯ ಸರ್ಕಾರಕ್ಕೆ ಚಾಟಿ ಬೀಸಿದ ಹೈಕೋರ್ಟ್‌ : SSLC ಹಿಂದಿ ಗ್ರೇಡ್‌ ವಿವಾದಕ್ಕೆ ನ್ಯಾಯಾಲಯ ಹೇಳಿದ್ದೇನು..?

April 21, 2026
ತಮಿಳುನಾಡಿಗೆ ಡಿಎಂಕೆ ಮೈತ್ರಿಕೂಟದಿಂದಲೇ ಭವಿಷ್ಯ: ಡಿಸಿಎಂ ಡಿ.ಕೆ. ಶಿವಕುಮಾರ್‌

ತಮಿಳುನಾಡಿಗೆ ಡಿಎಂಕೆ ಮೈತ್ರಿಕೂಟದಿಂದಲೇ ಭವಿಷ್ಯ: ಡಿಸಿಎಂ ಡಿ.ಕೆ. ಶಿವಕುಮಾರ್‌

April 21, 2026
ಕುಮಾರಸ್ವಾಮಿ ದೊಡ್ಡ ವ್ಯಕ್ತಿ ಇರಬಹುದು, ಆದ್ರೆ ನನಗೂ ಸಣ್ಣ ಅನುಭವವಿದೆ : ಹೆಚ್‌ಡಿಕೆಗೆ ಡಿಕೆಶಿ ಡಿಚ್ಚಿ..

ಕುಮಾರಸ್ವಾಮಿ ದೊಡ್ಡ ವ್ಯಕ್ತಿ ಇರಬಹುದು, ಆದ್ರೆ ನನಗೂ ಸಣ್ಣ ಅನುಭವವಿದೆ : ಹೆಚ್‌ಡಿಕೆಗೆ ಡಿಕೆಶಿ ಡಿಚ್ಚಿ..

April 21, 2026
ದೇವೇಗೌಡರಿಗೆ ಸಿದ್ದರಾಮಯ್ಯ ಭರ್ಜರಿ ಗಿಫ್ಟ್..!‌: ಗುರುವಿಗೆ ಶಿಷ್ಯನ ಕೊಡುಗೆ ಏನು..?

ದೇವೇಗೌಡರಿಗೆ ಸಿದ್ದರಾಮಯ್ಯ ಭರ್ಜರಿ ಗಿಫ್ಟ್..!‌: ಗುರುವಿಗೆ ಶಿಷ್ಯನ ಕೊಡುಗೆ ಏನು..?

April 21, 2026
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada