ಬೆಂಗಳೂರು : ನಗರದ ಬ್ಯಾಡರಹಳ್ಳಿಯ ಮನೆಯಲ್ಲಿ ಯುವಕ ಸಾವು ಪ್ರಕರಣಕ್ಕೆ ರೋಚಕ ಟ್ವಿಸ್ಟ್, ಯುವತಿಯಿಂದಲೇ ಯುವಕನ ಹತ್ಯೆಯಾಗಿರುವ ಮಾಹಿತಿ ಹೊರಬಿದ್ದಿದೆ. ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಂದಿರುವ ಪ್ರೇಮಾ, ತಾನು ಬಚಾವಾಗಲು ಸಣ್ಣಪುಟ್ಟ ಗಾಯ ಮಾಡಿಕೊಂಡಿದ್ದಳು ಎಂದು ಪೊಲೀಸ್ ವಿಚಾರಣೆ ವೇಳೆ ಸತ್ಯ ಬಾಯಿಬಿಟ್ಟಿದ್ದಾಳೆ ಆರೋಪಿ ಪ್ರೇಮಾ.

ಇನ್ನೂ ಮೇಲ್ನೋಟಕ್ಕೆ ಇದೊಂದು ಆತ್ಮಹತ್ಯೆ ಎಂದು ಕಾಣುತಿತ್ತು ಆದರೆ ಯುವತಿಯೇ ಆತನನ್ನು ಕೊಲೆ ಮಾಡಿದ್ದಾಳೆ. ಪೆಟ್ರೋಲ್ ಹಾಗೂ ಸೀಮೆಎಣ್ಣೆ ಬಳಸಿ ಕೊಲೆ ಮಾಡಿದ್ದಳು. ಆಕೆಯನ್ನು ಆತ ನಿರ್ಲಕ್ಷಿಸುತ್ತಿದ್ದ ಎಂದು ಭಾವಿಸುತ್ತಿದಳು. ಹೀಗಾಗಿ ಕರೆ ಮಾಡಿ ಆತನನ್ನು ಮನೆಗೆ ಕರೆದಿದ್ದಾಳೆ. ಬಳಿಕ ಒಬ್ಬಳೇ ಈ ಕೃತ್ಯದಲ್ಲಿ ಭಾಗಿಯಾಗಿದ್ದಳೋ ಅಥವಾ ಇನ್ನು ಯಾರಾದರೂ ಇದರಲ್ಲಿ ಇದ್ದಾರೆಯೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ವಾಯುವ್ಯ ವಿಭಾಗ ಡಿಸಿಪಿ ನಾಗೇಶ್ ತಿಳಿಸಿದ್ದಾರೆ.
ಪ್ರಮುಖವಾಗಿ ಈ ಪ್ರಕರಣದಲ್ಲಿ ಪ್ರೀತಿಸಿ ಕೈಕೊಡಲು ಮುಂದಾಗಿದ್ದ ಪ್ರಿಯತಮನಿಗೆ ಪ್ರೇಯಸಿ ಪ್ರೇಮಾಳೇ ಬೆಂಕಿ ಇಟ್ಟಿದ್ದಾಳೆ. ಆಗಸ್ಟ್ ನಲ್ಲಿ ಇಬ್ಬರ ಮಧ್ಯೆ ಪರಿಚಯವಾಗಿತ್ತು. ಬಳಿಕ ಫೆಬ್ರವರಿ 14 ರಂದು ಪ್ರೇಮಾ ಪ್ರೇಮ ನಿವೇದನೆ ಮಾಡಿದ್ದಳು. ಈ ಪ್ರಪೋಸಲನ್ನು ಕಿರಣ್ ಒಪ್ಪಿಕೊಂಡಿದ್ದ. ಕಿರಣ್ ಗಾಗಿ ನಾಲ್ಕೂವರೆ ಲಕ್ಷದ ಬೈಕ್,ಮೊಬೈಲ್ ಗಿಫ್ಟ್ ನೀಡಬೇಕು ಪ್ರೇಮಾ ಯೋಚಿಸಿದ್ದಳು ಎಂದು ಖುದ್ದು ಆರೋಪಿಯೇ ಬ್ಯಾಡರಹಳ್ಳಿ ಪೊಲೀಸರ ವಿಚಾರಣೆ ವೇಳೆ ಎಲ್ಲಾ ಸತ್ಯವನ್ನು ಬಾಯ್ಬಿಟ್ಟಿದ್ದಾಳೆ.
ಇದನ್ನೂ ಓದಿ : ರಾಹುಲ್ ಯಡವಟ್ಟಿನಿಂದ ಹೈದ್ರಾಬಾದ್ ಎದುರು ಶರಣಾದ ಡೆಲ್ಲಿ ಕ್ಯಾಪಿಟಲ್ಸ್..
ಆದರೆ ಇತ್ತೀಚೆಗೆ ಯುವತಿಯಿಂದ ಅಂತರ ಕಾಯ್ದುಕೊಂಡಿದ್ದ ಕಿರಣ್, ಇದರಿಂದ ಪ್ರೇಮಾ ಸಾಕಷ್ಟು ನೊಂದು ಹೋಗಿದ್ದಳು. ಹೀಗಾಗಿ ಆತನನ್ನು ಕೊಂದು ತಾನು ಸಾಯಲು ನಿರ್ಧರಿಸಿದ್ದಳು. ಇದಕ್ಕಾಗಿಯೇ ಪೆಟ್ರೋಲ್ ಮತ್ತು ಸೀಮೆ ಎಣ್ಣೆ ಎರಡನ್ನು ಖರೀದಿಸಿಟ್ಟಿದ್ದಳು ಕಿರಾತಕಿ ಪ್ರೇಮಾ.
ಮೊದಲು ಇಬ್ಬರು ಹೋಗಿ ಬೈಕ್ ಅನ್ನು ನೋಡಿಕೊಂಡಿದ್ದರು. ಆದರೆ ಮದುವೆ ವಿಚಾರವಾಗಿ ಮತ್ತೆ ಇಬ್ಬರ ಮಧ್ಯೆ ಗಲಾಟೆ ನಡೆದಿದೆ. ಈ ವೇಳೆ ಈ ವೇಳೆ ಫಾರಿನ್ ಸ್ಟೈಲ್ ಲವ್ ಮಾಡುವುದಾಗಿ ಕಿರಣ್ ಎರಡೂ ಕೈ ಕಾಲುಗಳನ್ನು ಕಟ್ಟಿ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿ ವಿಕೃತಿ ಮೆರೆದಿದ್ದಾಳೆ. ಬೆಂಕಿಯ ಜ್ವಾಲೆಗೆ ಪ್ರೇಮಾಳ ಮನೆಯಲ್ಲಿಯೇ ಕಿರಣ್ ಸುಟ್ಟು ಕರಕಲಾಗಿದ್ದ.
ಇತ್ತೀಚಿನ ದಿನಗಳಲ್ಲಿ ಪ್ರೀತಿ ಪ್ರೇಮದ ವಿಚಾರದಲ್ಲಿ ಈ ರೀತಿಯ ಅಪರಾಧಗಳು ನಡೆಯುತ್ತಿರುವುದು ನಿಜಕ್ಖೂ ಆಘಾತಕಾರಿ ಸಂಗತಿಯಾಗಿದೆ. ಪ್ರೀತಿಯನ್ನು ನಿರಾಕರಿಸಿದ ಎನ್ನುವ ಕಾರಣಕ್ಕೆ ಇಡೀ ಜೀವ ಹಾಗೂ ಜೀವನವನ್ನೇ ಬಲಿ ತೆಗೆದುಕೊಳ್ಳುವುದು ಎಷ್ಟು ಸರಿ..? ಎನ್ನುವುದನ್ನು ಯೋಚಿಸಬೇಕಿದೆ. ಯುವತಿಯಾಗಲಿ ಅಥವಾ ಯುವಕರಾಗಲಿ ಪ್ರೀತಿಯೆಂಬ ಎಂಬ ಬೆಂಕಿಯನ್ನು ಮುಟ್ಟುವ ಮುನ್ನ ಹತ್ತಾರು ಬಾರಿ ಯೋಚಿಸಿ ನಿರ್ಧಾರ ಮಾಡುವುದು ಸೂಕ್ತ. ಪ್ರೀತಿಯಿಂದಾಚೆಗೆ ಕುಟುಂಬ ಎಂಬ ಅದ್ಭುತ ಬಳಗ ನಿಮಗಾಗಿ ಕಾಯುತ್ತಿರುತ್ತದೆ ಎನ್ನುವುದನ್ನು ಮರೆಯಬಾರದು. ಪ್ರೀತಿಯೇ ಎಲ್ಲ ಎಂಬ ಭ್ರಮೆಯಿಂದ ಹೊರಬಂದು ಬದುಕಿನಲ್ಲಿ ಆನಂದಿಸೋಕೆ ಹಲವಾರು ಸಂಗತಿಗಳು ಇವೆ ಎಂಬ ಸತ್ಯವನ್ನು ಅರಿತುಕೊಳ್ಳಬೇಕು.






