• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, April 22, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಇದೀಗ

BBMP ಕಸ ಗುತ್ತಿಗೆದಾರರ ಸಮಸ್ಯೆ ಇತ್ಯರ್ಥ : ಶೀಘ್ರವೇ  250 ಕೋಟಿ ಬಿಡುಗಡೆಯ ಭರವಸೆ!

ಕರ್ಣ by ಕರ್ಣ
February 19, 2022
in ಇದೀಗ
0
ಗುತ್ತಿಗೆ ಹಣ ಪಾವತಿ ಮಾಡದ ಬಿಬಿಎಂಪಿ : ಶುಕ್ರವಾರದಿಂದ ಕಸ ಎತ್ತದಿರಲು ಗುತ್ತಿಗೆದಾರರ ನಿರ್ಧಾರ!
Share on WhatsAppShare on FacebookShare on Telegram

ರಾಜಧಾನಿ ಬೆಂಗಳೂರಿಗ ( capital city Bangalore) ಕಳೆದೆರಡು ದಿನಗಳಿಂದ ತಲೆದೋರಿದ್ದ ಕಸದ ಸಮಸ್ಯೆ ಕಡೆಗೂ ಇತ್ಯರ್ಥವಾಗಿದೆ. ಗುತ್ತಿಗೆದಾರರೊಂದಿಗೆ ಸರ್ಕಾರದ ಅಪರ ಕಾರ್ಯದರ್ಶಿ ನಡೆಸಿದ ಸಭೆ ಯಶಸ್ವಿಯಾಗಿದ್ದು, ಕಸ ಗುತ್ತಿಗೆದಾರರಿಗೆ ಬರಬೇಕಿರುವ ಬಾಕಿ ಮೊತ್ತ ಶೀಘ್ರವೇ ಬಿಡುಡೆ ಮಾಡುವ ಭರವಸೆ ನೀಡಿದ್ದಾರೆ. ಒಟ್ಟಾರೆ 6 ತಿಂಗಳಿನಿಂದ‌ 250 ಕೋಟಿಗೂ ಅಧಿಕ ಹಣ ಬಾಕಿದ್ದು ಮಾರ್ಚ್ ಒಳಗಾಗಿ ಬಿಡುಗಡೆಯಾಗಲಿದೆ. ಇಂದಿನಿಂದಲೇ ಕಸ ವಿಲೇವಾರಿಗೆ ಗುತ್ತಿಗೆದಾರರು ಮುಂದಾಗಿದ್ದಾರೆ.

ADVERTISEMENT

ಗುತ್ತಿಗೆದಾರರಿಗೆ ಬರಬೇಕಾದ ಬಾಕಿ ಪಾವತಿಗೆ ಬಿಬಿಎಂಪಿ ಒಪ್ಪಿಗೆ.!!

ಕಳೆದ ಸೆಪ್ಟೆಂಬರ್ ತಿಂಗಳಿನಿಂದ  ಕಸ ವಿಲೇವಾರಿ (Garbage disposal) ಗುತ್ತಿಗೆದಾರರಿಗೆ ಬಿಬಿಎಂಪಿ ಬಾಕಿ ಉಳಿಸಿಕೊಂಡಿರುವ 250 ಕೋಟಿ ಹಣ ಬಿಡುಗಡೆ ಮಾಡಬೇಕೆಂದು ಒತ್ತಾಯಿಸು ಗುತ್ತಿಗೆದಾರರು ಕಳೆದ 2 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ರು. ನೆನ್ನೆಯಿಂದ ಪಾಲಿಕೆ (Palike) ವ್ಯಾಪ್ತಿಯಲ್ಲಿ ಕಸ ವೀಲೆವಾರಿ ಮಾಡುವುದನ್ನ ಸ್ಥಗಿತ ಮಾಡಿದ್ದ ಗುತ್ತಿಗೆದಾರರು ಕಸ ಎತ್ತದೆ ಪ್ರತಿಭಟಿಸಿದ್ರು. ಪ್ರತಿದಿನ ಬೆಂಗಳೂರಿನಲ್ಲಿ 4,500 ಟನ್ ಕಸ ಸಂಗ್ರಹಣೆಯಾಗುತ್ತಿದೆ. 4 ಸಾವಿರಕ್ಕೂ ಹೆಚ್ಚು ಗಾಡಿಗಳಿಂದ ಕಸ (Garbage disposal Vehicles) ವಿಲೇವಾರಿ ಮಾಡಲಾಗುತ್ತಿದೆ.  ನಿನ್ನೆಯಿಂದ ಕಸ ವಿಲೇವಾರಿ ಸ್ಥಗಿತ ಮಾಡಲಾಗಿದ್ದರಿಂದ ರಾಜಧಾನಿ ಇಂದು ಗಾರ್ಬೇಜ್ ಸಿಟಿಯಾಗಿತ್ತು.

ಎರಡು ದಿನಗಳಿಂದ ನಗರದೆಲ್ಲೆಡೆ ಕಸವೋ ಕಸ.!!

ಗುತ್ತಿಗೆದಾರರು ಕಸ ಎತ್ತದ ಹಿನ್ನೆಲೆ ಸಿಲಿಕಾನ್ ಸಿಟಿ, ಗಾರ್ಡನ್ ಸಿಟಿ ಎಂದೆಲ್ಲಾ ಕರೆಸಿಕೊಳ್ಳೋ ನಮ್ಮ ಬೆಂಗಳೂರು ಇಂದು ಅಕ್ಷರಶಃ ಗಾರ್ಬೇಜ್ ಸಿಟಿಯಾಗಿ ಕಾಣ್ತಿತ್ತು. ನಗರದ ಕೆ.ಆರ್ ಮಾರ್ಕೆಟ್, ಕಲಾಸಿಪಾಳ್ಯ, ಮಲ್ಲೇಶ್ವರಂ, ಯಶವಂತಪುರ, ಮೆಜೆಸ್ಟಿಕ್, ಚಾಮರಾಜಪೇಟೆ, ಮಹಾಲಕ್ಷ್ಮೀ ಲೇಔಟ್ ಸೇರಿದಂತೆ ನಗರದಾದ್ಯಂತ ಎಲ್ಲೆಂದರಲ್ಲಿ ಕಸರದ ರಾಶಿ ರಾಶಿ ಕಾಣುತ್ತಿತ್ತು. 

ಶೀಘ್ರವೇ 250 ಕೋಟಿ ಬಿಡುಗಡೆಗೆ ಒಪ್ಪಿದ ಪಾಲಿಕೆ.!!

ಬೆಂಗಳೂರಿನ ಕಸದ ಸಮಸ್ಯೆಯನ್ನು ಕಂಡ ಸರ್ಕಾರ ಹಾಗೂ ಬಿಬಿಎಂಪಿ ಸರ್ಕಾರದ ಅಪರ ಕಾರ್ಯದರ್ಶಿ ಅವರ ನೇತೃತ್ವದಲ್ಲಿ ಗುತ್ತಿಗೆದಾರರೊಂದಿಗೆ ಸಭೆ ನಡೆಸಿ ಅವರ ಮನವೊಲಿಸಿದರು. ಕಳೆದ 6 ತಿಂಗಳಿಂದ ಗುತ್ತಿಗೆದಾರರಿಗೆ ಬರಬೇಕಾದ 250 ಕೋಟಿ ಹಣ ಬಿಡುಗಡೆಗೆ ಸರ್ಕಾರ ಗ್ರೀನ್ ಸಿಗ್ನಲ್ ಕೊಟ್ಟಿದೆ. ಮಾರ್ಚ್ ಅಂತ್ಯದೊಳಗೆ ಹಣ ಬಿಡುಗಡೆ ಮಾಡುವಂತೆ  ಬಿಬಿಎಂಪಿಗೆ ತಾಕೀತು ಮಾಡಿದೆ. ಕಸ ಗುತ್ತಿಗೆದಾರರಿಂದ ಸರ್ಕಾರದ ನಿರ್ಧಾರಕ್ಕೆ ಸಂತಸ ವ್ಯಕ್ತಪಡಿಸಿದ್ದು ಇಂದಿನಿಂದಲೇ ಕಸ ವಿಲೇವಾರಿಗೆ ಮುಂದಾಗಿದ್ದಾರೆ.  ನಾಳೆ ಸಂಜೆಯೊಳಗೆ ಬೆಂಗಳೂರಿನ ಎಲ್ಲಾ ಕಸವನ್ನ ವಿಲೇವಾರಿ ಮಾಡುತ್ತೇವೆ ಎಂದು ತಿಳಿಸಿದರು. 


ಕಳೆದೆರಡು ದಿನದಿಂದ ತಲೆದೋರಿದ್ದ ಕಸದ ಸಮಸ್ಯೆ ಸದ್ಯಕ್ಕೆ ದೂರವಾಗಿದ್ದು, ಮಾರ್ಚ್ ಅಂತ್ಯದೊಳಗೆ ಬಾಕಿ ಹಣ ಪಾವತಿಯಾಗದಿದ್ದರೆ ಮತ್ತೆ ಹೋರಾಟ ಮಾಡೋದಾಗಿ ಗುತ್ತಿಗೆದಾರರು ಎಚ್ಚರಿಕೆ ನೀಡಿದ್ದಾರೆ. ಈ ಹಿಂದೆಯೂ ಸಾಕಷ್ಟು ಬಾರಿ ಭರವಸೆ ನೀಡಿದ್ದರೂ ಈಡೇರಲಿಲ್ಲ. ಹೀಗಾಗಿ ಕೊಟ್ಟಮಾತಿನಂತೆ ಬಿಬಿಎಂಪಿ ಅವರ ಬಾಕಿ ಕ್ಲಿಯರ್ ಮಾಡಿ ಮತ್ತೆ ಕಸದ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕಾಗಿದೆ. 

Tags: BBMPbengaluruKarnataka Politicsಕರ್ನಾಟಕ ಸರ್ಕಾರಕಸ ವಿಲೆವಾರಿಗುತ್ತಿಗೆದಾರರು
Previous Post

ಉಕ್ರೇನ್ ಬಿಕ್ಕಟ್ಟು : ಭಾರತದ ಬೆಂಬಲದ ನಿರೀಕ್ಷೆಯಲ್ಲಿ ಅಮೆರಿಕ

Next Post

ʼನೀಲಿ ಸಾಗರವಾದ ಬೆಂಗಳೂರುʼ: ಅಂಬೇಡ್ಕರ್‌ ಅಪಮಾನ ಖಂಡಿಸಿ ಬೃಹತ್‌ ಜಾಥಾ

Related Posts

ರಾಜಕಾರಣಿಗಳಿಂದ ರಸ್ತೆ ತಡೆ ಮಾಡಿಸಿ ಪ್ರತಿಭಟನೆ : ಕೆರಳಿತು ಸಾರ್ವಜನಿಕರ ತಾಳ್ಮೆ..!
Top Story

ರಾಜಕಾರಣಿಗಳಿಂದ ರಸ್ತೆ ತಡೆ ಮಾಡಿಸಿ ಪ್ರತಿಭಟನೆ : ಕೆರಳಿತು ಸಾರ್ವಜನಿಕರ ತಾಳ್ಮೆ..!

by ಪ್ರತಿಧ್ವನಿ
April 22, 2026
0

ಮುಂಬೈ : ಟ್ರಾಪೀಕ್‌ ಕಿರಿ ಕಿರಿ ಅನುಭವಿಸಿದ ಮಹಿಳೆಯೊಬ್ಬಳು ಪೊಲೀಸ್‌ ಅಧಿಕಾರಿ ಹಾಗೂ ಇಲ್ಲಿನ ಸಚಿವರಿಗೆ ಖಡಕ್‌ ಕ್ಲಾಸ್‌ ತೆಗೆದುಕೊಂಡ ಘಟನೆ ನಡೆದಿದೆ. ಮಂಗಳವಾರ ವರ್ಲಿ ಪ್ರದೇಶದಲ್ಲಿ...

Read moreDetails
ಗಮನ ಸೆಳೆದ ಗದಗ ಜಿಲ್ಲಾಸ್ಪತ್ರೆ : ಬಿಸಿಲಿನ ಬೇಗೆಯಲ್ಲಿ ರೋಗಿಗಳಿ ಆಶಾಕಿರಣವಾದ ವೈದ್ಯರು, ಏನಿದು ವಿಶೇಷ..?

ಗಮನ ಸೆಳೆದ ಗದಗ ಜಿಲ್ಲಾಸ್ಪತ್ರೆ : ಬಿಸಿಲಿನ ಬೇಗೆಯಲ್ಲಿ ರೋಗಿಗಳಿ ಆಶಾಕಿರಣವಾದ ವೈದ್ಯರು, ಏನಿದು ವಿಶೇಷ..?

April 22, 2026
ಫಾರಿನ್‌ ಸ್ಟೈಲ್‌ ಲವ್‌ & ಮರ್ಡರ್‌ : ಕಿರಾತಕಿ ಪ್ರೇಮಾಳಿಂದ ಕೊಲೆ ಸ್ಫೋಟಕ ರಹಸ್ಯ ಬಯಲು..

ಫಾರಿನ್‌ ಸ್ಟೈಲ್‌ ಲವ್‌ & ಮರ್ಡರ್‌ : ಕಿರಾತಕಿ ಪ್ರೇಮಾಳಿಂದ ಕೊಲೆ ಸ್ಫೋಟಕ ರಹಸ್ಯ ಬಯಲು..

April 22, 2026
ರಾಹುಲ್‌ ಯಡವಟ್ಟಿನಿಂದ ಹೈದ್ರಾಬಾದ್‌ ಎದುರು ಶರಣಾದ ಡೆಲ್ಲಿ ಕ್ಯಾಪಿಟಲ್ಸ್..

ರಾಹುಲ್‌ ಯಡವಟ್ಟಿನಿಂದ ಹೈದ್ರಾಬಾದ್‌ ಎದುರು ಶರಣಾದ ಡೆಲ್ಲಿ ಕ್ಯಾಪಿಟಲ್ಸ್..

April 22, 2026
ಸಂವಿಧಾನದ ಅಶಯಗಳು -ಬಾಬು ಜಗಜೀವನ್ ರಾಮ್-

ಸಂವಿಧಾನದ ಅಶಯಗಳು -ಬಾಬು ಜಗಜೀವನ್ ರಾಮ್-

April 21, 2026
Next Post
ʼನೀಲಿ ಸಾಗರವಾದ ಬೆಂಗಳೂರುʼ: ಅಂಬೇಡ್ಕರ್‌ ಅಪಮಾನ ಖಂಡಿಸಿ ಬೃಹತ್‌ ಜಾಥಾ

ʼನೀಲಿ ಸಾಗರವಾದ ಬೆಂಗಳೂರುʼ: ಅಂಬೇಡ್ಕರ್‌ ಅಪಮಾನ ಖಂಡಿಸಿ ಬೃಹತ್‌ ಜಾಥಾ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada