Tag: ಕೇರಳ

ಕೇರಳ | ಪೊರೋಟ ತಂದ ಪೊಟ್ಟಣದಲ್ಲಿ ಹಾವಿನ ಪೊರೆ : ಹೊಟೇಲಿಗೆ ಬೀಗ ಜಡಿದ ಅಧಿಕಾರಿಗಳು

ಹೊಟೇಲಿನಿಂದ ತರಿಸಿದ ಆಹಾರದ ಪೊಟ್ಟಣದಲ್ಲಿ ಹಾವಿನ ಚರ್ಮದ ಅವಶೇಷಗಳು ಪತ್ತೆಯಾದ ಬಳಿಕ ತಿರುವನಂತಪುರಂನ ನೆಡುಮಂಗಡದಲ್ಲಿರುವ ಹೋಟೆಲ್ ಅನ್ನು ಆಹಾರ ಸುರಕ್ಷತಾ ಅಧಿಕಾರಿಗಳು ತಾತ್ಕಾಲಿಕವಾಗಿ ಮುಚ್ಚಿದ್ದಾರೆ. ಮೇ 5 ...

Read moreDetails

ಕೇರಳ, ತೆಲಂಗಾಣದಲ್ಲಿ ನೆಲೆ ಕಂಡುಕೊಳ್ಳಲು ಬಿಜೆಪಿ ಪ್ರಯತ್ನ

ದೇಶದ ಬಹುತೇಕ ರಾಜ್ಯಗಳಲ್ಲಿ ಅಧಿಕಾರವನ್ನು ಪಡೆಯಲು ಬಿಜೆಪಿ ಯಶಸ್ವಿಯಾಗಿದ್ದರೂ, ದಕ್ಷಿಣ ಭಾರತದಲ್ಲಿ ಮಾತ್ರ ಹೆಚ್ಚಿನ ಯಶಸ್ಸು ಗಳಿಸಲು ಸಾಧ್ಯವಾಗಲಿಲ್ಲ. ಕರ್ನಾಟಕ, ಗೋವಾ ಹೊರತಾಗಿ ಬೇರೆ ಯಾವುದೇ ರಾಜ್ಯದಲ್ಲಿ ಅಧಿಕಾರಿ ಪಡೆಯಲು ಬಿಜೆಪಿ ವಿಫಲವಾಗಿದೆ. ಪ್ರಮುಖವಾಗಿ ಕೇರಳ ಹಾಗೂ ತೆಲಂಗಾಣದಲ್ಲಿ ಬಿಜೆಪಿ ಪ್ರದರ್ಶನ ಅತ್ಯಂತ ಕಳಪೆಯಾಗಿದ್ದು, ಈಗ ಈ ರಾಜ್ಯಗಳಲ್ಲಿ ಬಿಜೆಪಿಗೆ ಜೀವ ತುಂಬುವ ಪ್ರಯತ್ನ ನಡೆಸಲಾಗುತ್ತಿದೆ.  2016ರಲ್ಲಿ ಕೇರಳ ವಿಧಾನಸಭೆಗೆ ಬಿಜೆಪಿ ಮೊತ್ತಮೊದಲು ಪ್ರವೇಶ ಪಡೆದಿತ್ತು.2021ರಲ್ಲಿ ಆ ಸ್ಥಾನವನ್ನೂ ಕಳೆದುಕೊಂಡು ವಿಧಾನಸಭೆಯಲ್ಲಿ ಅಸ್ಥಿತ್ವವೇ ಇಲ್ಲದ ಪರಿಸ್ಥಿಗೆ ಬಿಜೆಪಿ ಇಳಿದಿದೆ. ಇನ್ನು ತೆಲಂಗಾಣ ಸಿಎಂ ಕೆ ಚಂದ್ರಶೇಖರ್ ರಾವ್ ಅವರು ತಮ್ಮನ್ನು ತಾವೇ ಮುಂದಿನ ಪ್ರಧಾನಿ ಹುದ್ದೆಯ ಅಭ್ಯರ್ಥಿ ಎಂಬಂತೆ ಬಿಂಬಿಸಿಕೊಳ್ಳುತ್ತಿದ್ದಾರೆ.  ಇವೆರಡೂ ರಾಜ್ಯಗಳಲ್ಲಿ ಬಿಜೆಪಿಯ ಪ್ರಭಾವ ಅಷ್ಟಕ್ಕಷ್ಟೇ. ಈ ಕಾರಣಕ್ಕೆ, ಕೇರಳ ಹಾಗು ತೆಲಂಗಾಣದಲ್ಲಿ ಬಿಜೆಪಿ ಕಾರ್ಯಕರ್ತರ ಉತ್ಸಾಹ ಹೆಚ್ಚಿಸಲು ಹಾಗೂ ಮುಂಬರುವ ಚುನಾವಣೆಗಳಿಗೆ ತಯಾರಿಯಾಗಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಅವರು ಇಂದು ಮತ್ತು ನಾಳೆ ಭೇಟಿ ನೀಡಲಿದ್ದಾರೆ. ಈ ವೇಳೆ ಸರಣಿ ಸಭೆಗಳನ್ನು ನಡೆಸಿ, ಪಕ್ಷದ ಅಸ್ಥಿತ್ವನ್ನು ಮತ್ತಷ್ಟು ಗಟ್ಟಿಗೊಳಿಸುವ ಕುರಿತು ಚರ್ಚೆ ನಡೆಸಲಿದ್ದಾರೆ.  ತೆಲಂಗಾಣದಲ್ಲಿ ಬಿಜೆಪಿ ಜೊತೆಗಿನ ವೈಮನಸ್ಯವನ್ನು ಟಿಆರ್ಎಸ್ ಮುಂದುವರೆಸಿದೆ. ಈ ಕಾರಣಕ್ಕೆ ಅಲ್ಲಿ ರೈತರ ಸಮಸ್ಯೆಗಳನ್ನು ಚುನಾವಣಾ ಸರಕಾಗಿಸಿ ಪ್ರಚಾರ ಪಡೆಯುವ ಕುರಿತು ಚಿಂತನೆ ನಡೆದಿದೆ. ಕಳೆದ ಚುನಾವಣೆಯಲ್ಲಿ ಕೇವಲ ಮೂರು ವಿಧಾನಸಭಾ ಕ್ಷೇತ್ರಗಳನ್ನು ಗೆಲ್ಲುವಲ್ಲಿ ಸಫಲವಾಗಿದ್ದ ಬಿಜೆಪಿ, ಮುಂದಿನ ಚುನಾವಣೆಗೆ ಈಗಾಗಲೇ ನೀಲಿ ನಕ್ಷೆ ತಯಾರಿಸಿದೆ.  ಟಿಆರ್ಎಸ್ ಸರ್ಕಾರದ ವೈಫಲ್ಯಗಳು, ರೈತರ ಸಮಸ್ಯೆ ಹಾಗೂ ಇನ್ನಿತರ ವಿಚಾರಗಳನ್ನು ಮುಂದಿಟ್ಟುಕೊಂಡು ಕ್ಷೇತ್ರವಾರು ಪ್ರಚಾರಕ್ಕೆ ತಯಾರಿ ನಡೆಸಲಾಗಿದೆ. ಇದರೊಂದಿಗೆ ಪಕ್ಷದ ಕಾರ್ಯಕರ್ತರನ್ನು ಒಗ್ಗೂಡಿಸುವ ಸಲುವಾಗಿ ಹಾಗೂ ಅವರಲ್ಲಿ ಆತ್ಮವಿಶ್ವಾಸ ತುಂಬಿಸಲು ಜೆ ಪಿ ನಡ್ಡಾ ಅವರು ಮೆಹಬೂಬ್ ನಗರದಲ್ಲಿ ಬಹಿರಂಗ ಸಮಾವೇಶವನ್ನೂ ಹಮ್ಮಿಕೊಳ್ಳಲಿದ್ದಾರೆ.  ಕೇರಳದ ಕಲ್ಲಿಕೋಟೆಯಲ್ಲಿಯೂ ಬಹಿರಂಗ ಸಮಾವೇಶವನ್ನು ಏರ್ಪಡಿಸಲಾಗಿದೆ. ಇಲ್ಲಿಯೂ ಪಕ್ಷದ ಪ್ರಮುಖರ ಸಭೆ ಕರೆದು, ಮುಂದಿನ ಲೋಕಸಭಾ ಹಾಗೂ ನಾಲ್ಕು ವರ್ಷಗಳ ನಂತರ ಬರುವ ವಿಧಾನಸಭಾ ಚುನಾವಣೆಗೆ ಈಗಿಂದಲೇ ತಯಾರಿ ನಡೆಸುವ ಕುರಿತು ಚರ್ಚೆ ನಡೆಸಲಾಗುತ್ತದೆ ಎಂದು ವರದಿಯಾಗಿದೆ.  “ರಾಜ್ಯದ ಬಿಜೆಪಿ ಕಾರ್ಯಕರ್ತರನ್ನು ಹುರಿದುಂಬಿಸಲು ರಾಷ್ಟ್ರ ನಾಯಕರು ಆಗಿಸುತ್ತಿದ್ದಾರೆ. ರಾಜ್ಯ ಸರ್ಕಾರದ ವೈಫಲ್ಯಗಳನ್ನು ಡಿಜಿಟಲ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಬಹಿರಂಗಗೊಳಿಸುವ ಕುರಿತು ಚರ್ಚೆ ನಡೆಸಲಾಗುತ್ತದೆ,” ಎಂದು ಕೇರಳದ ಹಿರಿಯ ಮುಖಂಡರೊಬ್ಬರು ತಿಳಿಸಿದ್ದಾರೆ.  ಒಟ್ಟಿನಲ್ಲಿ, ನೆಲೆಯಿಲ್ಲದ ಕಡೆಗಳಲ್ಲಿ ಹೊಸತೊಂದು ನೆಲೆ ಕಂಡುಕೊಳ್ಳಲು ಬಿಜೆಪಿ ಶ್ರಮಪಡುತ್ತಿದೆ. ಎಡರಂಗ ಹಾಗು ಪ್ರಾದೇಶಿಕ ಪಕ್ಷದ ಪ್ರಭಾವವನ್ನು ಮೀರಿ ನಿಂತು ಸರ್ಕಾರ ರಚಿಸಲು ಬಿಜೆಪಿಗೆ ಸಾಧ್ಯವಾಗಬಹುದೇ ಎಂದು ಕಾದುನೋಡಬೇಕಿದೆ. 

Read moreDetails

ಕರಾವಳಿ ಕರ್ನಾಟಕ & ಕೇರಳ ಏಕೆ ಹಿಂಸಾತ್ಮಕ ರಾಜಕೀಯದ ಕೇಂದ್ರಗಳಾಗಿವೆ? – ಭಾಗ – 3

"ವಿಪರ್ಯಾಸವೆಂದರೆ, ಉಡುಪಿಯ ಅತಿದೊಡ್ಡ ಮೀನುಗಾರಿಕಾ ಕಂಪನಿಯನ್ನು ಮುಸ್ಲಿಂ ಮತ್ತು ಹಿಂದೂ ಸಹಭಾಗಿತ್ವದಲ್ಲಿ ನಡೆಸಲಾಗುತ್ತಿದೆ, ಆದರೆ ಚುನಾವಣಾ ದಿನದಂದು ಎಲ್ಲಾ ಸಾಮರಸ್ಯ ಮರೆತುಹೋಗುತ್ತದೆ"

Read moreDetails

ಶ್ರೀಮಂತ ಮುಸ್ಲಿಮರು, ಆಕ್ರಮಣಕಾರಿ ಹಿಂದುಗಳು: ಕರಾವಳಿ ಕರ್ನಾಟಕ ಮತ್ತು ಕೇರಳ ಏಕೆ ಹಿಂಸಾತ್ಮಕ ರಾಜಕೀಯದ ಕೇಂದ್ರಗಳಾಗಿವೆ? ಭಾಗ – 1

ಕರ್ನಾಟಕ ಹಾಗೂ ಕೇರಳ ಎರಡೂ ರಾಜ್ಯಗಳಲ್ಲಿ ನಡೆಯುವ ರಕ್ತಪಾತಕ್ಕೆ ದೀರ್ಘ ಇತಿಹಾಸವಿದ್ದು, ಕೇರಳದ ಉತ್ತರ ಮಲಬಾರ್ ಜಿಲ್ಲೆಗಳಲ್ಲಿ ರಕ್ತಪಾತವು ಹೆಚ್ಚಾಗಿ ಪಕ್ಷ ನಿಷ್ಠೆಯ ಹೆಸರಿನಲ್ಲಿ ನಡೆಯುತ್ತದೆ, ಆದರೆ ...

Read moreDetails

ಉತ್ತರ ಪ್ರದೇಶ ಕೇರಳವಾಗುವುದನ್ನು ತಪ್ಪಿಸಲು ಮತದಾರರಿಂದ ಮಾತ್ರ ಸಾಧ್ಯ : ಯೋಗಿ ಆದಿತ್ಯನಾಥ್

ಬರುವ ಉತ್ತರಪ್ರದೇಶದ ಚುನಾವಣೆ ನಿಮಿತ್ತ ಮೊದಲನೇ ಹಂತದ ಮತದಾನಕ್ಕು ಮುನ್ನ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತದಾರರು ಮತದಾನದ ವೇಳೆ ತಪ್ಪು ಮಾಡಿದರೆ ಮುಂದಿನ ದಿನಗಳಲ್ಲಿ ಉತ್ತರಪ್ರದೇಶ ...

Read moreDetails

ಕೇರಳ ವಿಶ್ವವಿದ್ಯಾಲಯಗಳ ಕುಲಪತಿ ನೇಮಕದಲ್ಲಿ ರಾಜಕೀಯ ಹಸ್ತಕ್ಷೇಪ : ಪಿಣಾರಾಯ್ ಸರ್ಕಾರಕ್ಕೆ ಖಡಕ್ ಪತ್ರ ಬರೆದ ರಾಜ್ಯಪಾಲ ಆರಿಫ್!

ಕೇರಳ ರಾಜ್ಯದ ವಿಶ್ವವಿದ್ಯಾಲಯಗಳ ಉಪ-ಕುಲಪತಿ ಹುದ್ದೆಯಲ್ಲಿ ರಾಜಕೀಯ ಹಸ್ತಕ್ಷೇಪ ನಡೆಯುತ್ತಿರುವ ಬಗ್ಗೆ ಅಲ್ಲಿನ ರಾಜ್ಯಪಾಲ, ವಿಶ್ವವಿದ್ಯಾಲಯಗಳ ಕುಲಪತಿಯೂ ಆಗಿರುವ ಆರಿಫ್ ಮೊಹಮ್ಮದ್ ಖಾನ್  ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ...

Read moreDetails

ಭಾರತದಲ್ಲಿ ಸತತ ಮೂರನೇ ಬಾರಿ ಸಪ್ಟೆಂಬರ್‌ನಲ್ಲಿ ನಿಗದಿಗಿಂತ ಹೆಚ್ಚು ಮಳೆ!

ಭಾರತದ ಸುಮಾರು 75% ಮಳೆಗೆ ಕಾರಣವಾಗುವ ಮುಂಗಾರು ಸಾಮಾನ್ಯವಾಗಿ ಕೇರಳದ ಮೂಲಕ ಜೂನ್‌ನಲ್ಲಿ ಭಾರತಕ್ಕೆ ಪ್ರವೇಶಿಸಿ, ಜುಲೈಯಲ್ಲಿ ಇಡೀ ಭಾರತದಾದ್ಯಂತ ಹರಡಿ ಸಪ್ಟೆಂಬರ್‌ನಲ್ಲಿ ಅಂತ್ಯವಾಗುತ್ತದೆ. ಆದರೆ ಸತತವಾಗಿ ...

Read moreDetails

ಕೇರಳದ ಕಣ್ಣೂರು ವಿವಿಯಲ್ಲಿ ಸಾವರ್ಕರ್ & ಗೋಳ್ವಾಲ್ಕರ್ ಬಗ್ಗೆ ಪಠ್ಯ ಕ್ರಮ: ಕೇಸರೀಕರಣ ಆಗುತ್ತಿದೆಯೇ ದೇವರ ನಾಡು.!?

ಕೇರಳದ ಕಣ್ಣೂರು ವಿಶ್ವವಿದ್ಯಾನಿಲಯದ ಪಠ್ಯಕ್ರಮ ಸಂಪೂರ್ಣವಾಗಿ ಆರ್​ಎಸ್​ಎಸ್​ ಮಯವಾಗಿದೆ. ವಿಡಿ ಸಾವರ್ಕರ್ ಮತ್ತು ಎಂ.ಎಸ್. ಗೋಲ್ವಾಲ್ಕರ್ ಅವರ ಕೃತಿಗಳನ್ನು ಪಠ್ಯಕ್ರಮದಲ್ಲಿ ಸೇರಿಸಲಾಗಿದೆ ಎಂದು ಆರೋಪಿಸಲಾಗಿತ್ತು. ಇದು ಕೇರಳದಲ್ಲಿ ...

Read moreDetails

ಕೇರಳದಲ್ಲಿ ನಿಫಾ ಸೋಂಕು ಹಿನ್ನೆಲೆ ರಾಜ್ಯ ಸರ್ಕಾರದಿಂದ ಸೋಂಕಿನ ಗುಣ ಲಕ್ಷಣಗಳ ಪಟ್ಟಿ ಬಿಡುಗಡೆ!

ಪಕ್ಕದ ಕೇರಳದಲ್ಲಿ ಕೊರೋನಾ ನಡುವೆ ನಿಫಾ ವೈರಸ್ ಕೂಡ ದಾಳಿ ಇಟ್ಟಂತಿದೆ ಈಗಾಗಲೇ ಕೊರೋನಾಗೆ ಬಸವಳಿದಿರುವ ಕೇರಳ ನಿಫಾ ಕಬಂಧಬಾಹುನಲ್ಲಿದೆ. ಈ ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮವಾಗಿ ರಾಜ್ಯ ...

Read moreDetails

ಮತ್ತೆ ಹೆಚ್ಚಾಗುತ್ತಿರುವ ಕೊರೋನಾ ಪ್ರಕರಣಗಳು, ಇದು 3ನೇ ಅಲೆಯ ಮುನ್ಸೂಚನೆಯೇ?

ಭಾರತವು ಕೊರೊನಾ ವೈರಸ್ ಸಾಂಕ್ರಾಮಿಕ ರೋಗದ ಮೂರನೇ ಅಲೆಯ ಉತ್ತುಂಗದಲ್ಲಿದೆಯೇ? ಗುರುವಾರದ ಅಂಕಿಅಂಶಗಳು ಅಂತಹ ಅನುಮಾನಗಳನ್ನು ಹುಟ್ಟುಹಾಕಿವೆ. ದೇಶವು ಮತ್ತೊಂದು ಉಲ್ಬಣವನ್ನು ಎದುರಿಸಲು ಸಜ್ಜಾಗಬೇಕು ಎಂಬ ಸುಳಿವು ...

Read moreDetails

ಇಂದು ತಾಂತ್ರಿಕ ಸಲಹಾ ಸಮಿತಿ ಜೊತೆ ಸಿಎಂ ಮಹತ್ವದ ಸಭೆ : ಗೌರಿ ಗಣೇಶ ಹಬ್ಬಕ್ಕೆ ಅನುಮತಿ ಸಾಧ್ಯತೆ!

ಇಂದು ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಕೊರೋನಾ ತಾಂತ್ರಿಕ ಸಲಹಾ ಸಮಿತಿ ಸಭೆ ನಡೆಯಲಿದೆ. ಸಂಜೆ ನಾಲ್ಕು ಗಂಟೆಗೆ ನಡೆಯಲಿರುವ ಈ ಸಭೆಯಲ್ಲಿ ಮಹತ್ವದ ಆದೇಶಗಳು ಹೊರ ಬೀಳುವ ...

Read moreDetails

ಆಗುಂಬೆ ಸಿಂಗಳೀಕಕ್ಕೆ ಮುಳುವಾಗಿದೆ ಮನುಷ್ಯನ ಅವಿವೇಕಿ ಔದಾರ್ಯ

ಆಗುಂಬೆ ಹಲವು ಕಾರಣಗಳಿಗಾಗಿ ಇತ್ತೀಚಿನ ದಿನಗಳಲ್ಲಿ ಸುದ್ದಿಯಲ್ಲಿದೆ. ಪ್ರತಿ ಮಳೆಗಾಲದ ಗುಡ್ಡ ಕುಸಿತ, ರಸ್ತೆ ಸಂಚಾರ್ ಬಂದ್, ಮತ್ತು ಸಹಜವಾಗೇ ಭಾರೀ ಮಳೆಯ ಕಾರಣಕ್ಕೆ ಆಗುಂಬೆ ಸುದ್ದಿಯಾಗುವುದು ...

Read moreDetails

ಕರೋನಾ ನಡುವೆ ಬಂತು ಹೊಸ ವೈರಸ್ ಝೀಕಾ ವೈರಸ್.?

ಕೋವಿಡ್ ಎರಡನೇ ಅಲೆತ ಭೀಕರತೆ ಕ್ರಮೇಣ ಇಳಿಮುಖವಾಗಿ, ನಿಯಂತ್ರಣಕ್ಕೆ ಬಂತು ಎಂಬ ನಿರಾಳತೆಯ ನಡುವೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತರಾತುರಿಯಲ್ಲಿ ಲಾಕ್ಡೌನ್ ತೆರವು ಮಾಡಿ ಎಲ್ಲವೂ ಮುಗಿದುಹೋಯಿತು. ಇನ್ನೇನು ಆತಂಕವೇ ಇಲ್ಲ ಎಂಬ ರೀತಿಯಲ್ಲಿ ವರ್ತಿಸುತ್ತಿರುವಾಗ ಮತ್ತೊಂದು ಆಘಾತಕಾರಿ ಸೋಂಕು ಇದೀಗ ದೇಶದಲ್ಲಿ ಕಾಣಿಸಿಕೊಂಡಿದೆ. ನಿಫಾ ಮತ್ತು ಕೋವಿಡ್ ಸೋಂಕಿಗೆ ದೇಶದಲ್ಲೇ ಮೊದಲ ಸಾಕ್ಷಿಯಾಗಿದ್ದ, ಆ ಮೂಲಕ ಭಯಾನಕ ಸೋಂಕು ಪತ್ತೆ ಮತ್ತು ನಿರ್ವಹಣೆಯ ...

Read moreDetails

ಪರಿಸರ ರಕ್ಷಿಸುವ ಮೂಲಕ ಜೀವನ ಸಾಗಿಸುವ ಪೋಲಿಯೋ ಸಂತ್ರಸ್ತ ರಾಜಪ್ಪನ್

2018ರ ಕೇರಳ ಪ್ರವಾಹದ ಸಂದರ್ಭದಲ್ಲಿ ರಾಜಪ್ಪನ್ ಅವರ ಮನೆ ಸಾಕಷ್ಟು ಹಾನಿಗೊಳಗಾಗಿದೆ. ಆಗಲೂ, ರಾಜಪ್ಪನ್ ಯಾರ ಸಹಾಯವನ್ನು ಕೇಳಲಿಲ್ಲ

Read moreDetails

ಕೇರಳ ಚುನಾವಣೆ; ಎಡ ಮೈತ್ರಿ ಗೆಲುವು, ಕಾಂಗ್ರೆಸ್‌ಗೆ ಭಾರೀ ಹಿನ್ನಡೆ, ಪ್ರಗತಿ ಸಾಧಿಸಿದ ಬಿಜೆಪಿ

ಕಳೆದ ಬಾರಿ ತಿರುವನಂತಪುರ ಪಾಲಿಕೆಯಲ್ಲಿ 34 ಸ್ಥಾನ ತನ್ನ ಮಡಿಗೇರಿಸಿಕೊಂಡಿದ್ದ ಬಿಜೆಪಿ ಈ ಬಾರಿ 40ರ ಆಸುಪಾಸು ಗೆದ್ದು ತುಸು ಬಲ ಹೆಚ್ಚಿಸ

Read moreDetails

ವಿವಾದಾತ್ಮಕ ʼಕೇರಳ ಪೊಲೀಸ್ ಕಾಯ್ದೆ ತಿದ್ದುಪಡಿʼಯಿಂದ ಹಿಂದೆ ಸರಿದ ಕೇರಳ

ಪೊಲೀಸ್ ಕಾಯ್ದೆ ತಿದ್ದುಪಡಿಯ ನಿರ್ಧಾರಕ್ಕೆ ಪ್ರತಿಪಕ್ಷಗಳು, ಸಾಮಾಜಿಕ ಹೋರಾಟಗಾರರು, ಕಾನೂನು ತಜ್ಞರು ವಿರೋಧ ವ್ಯಕ್ತಪಡಿಸಿದ್ದರು.

Read moreDetails

ಕೇರಳ: ವಿವಾದಾತ್ಮಕ ಪೊಲೀಸ್ ಕಾಯ್ದೆ ತಿದ್ದುಪಡಿ ಸುಗ್ರೀವಾಜ್ಞೆಗೆ ರಾಜ್ಯಪಾಲರ ಅಂಗೀಕಾರ

ಪ್ರಸ್ತುತ ಇರುವ ಕಾನೂನು ಸೈಬರ್‌ ಅಪರಾಧಗಳನ್ನು ನಿಯಂತ್ರಿಸಲು ಸಾಧ್ಯವಾಗುವುದಿಲ್ಲ ಎಂದು ಹೇಳಿರುವ ಸರ್ಕಾರ ತಿದ್ದುಪಡಿಯನ್ನು ಸಮರ್ಥಿಸಿದೆ.

Read moreDetails

ಕೇರಳ: ಖೈದಿಗಳ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ರೂ. 20 ಲಕ್ಷ ಮೀಸಲು

ಮನೆಯಲ್ಲಿ ದುಡಿದು ತರುವ ವ್ಯಕ್ತಿಯು ಕಾರಣಾಂತರಗಳಿಂದ ಜೈಲಿನಲ್ಲಿದ್ದರೆ, ಅವರ ಮಕ್ಕಳ ವಿದ್ಯಾಭ್ಯಾಸವು ಮೊಟಕುಗೊಳ್ಳುತ್ತದೆ. ಯಾವುದೇ ಮಕ್ಕಳ

Read moreDetails

ಉತ್ತಮ ಆಡಳಿತ ಪಟ್ಟಿಯಲ್ಲಿ ಕೇರಳ ಪ್ರಥಮ, ಕೊನೆಯ ಸ್ಥಾನದಲ್ಲಿ ಉತ್ತರ ಪ್ರದೇಶ

ದೊಡ್ಡ ರಾಜ್ಯಗಳ ಪೈಕಿ ಮೊದಲ ನಾಲ್ಕೂ ಸ್ಥಾನವನ್ನು ದಕ್ಷಿಣದ ಭಾರತದ ರಾಜ್ಯಗಳು ಪಡೆದಿವೆ. ತೆಲಂಗಾಣ ಆರನೇ ಸ್ಥಾನ ಪಡೆದಿದೆ. ಸಣ್ಣ ರಾಜ್ಯಗಳ

Read moreDetails

ಕೇರಳದಲ್ಲಿ ಹೆಚ್ಚುತ್ತಿರುವ ಕೋವಿಡ್‌ ಪ್ರಕರಣಗಳು: ಪ್ರತಿಭಟನೆಗಳ ವಿರುದ್ದ ಹೈಕೋರ್ಟ್‌ ಗರಂ

ನ್ಯಾಯಾಲಯದ ಆದೇಶವಿದ್ದರೂ ಪ್ರತಿಭಟನೆಗಳಲ್ಲಿ ಕೋವಿಡ್‌ ಶಿಷ್ಟಾಚಾರದ ಪರಿಪಾಲನೆ ಆಗುತ್ತಿಲ್ಲ, ಎಂದು ಹೈಕೋರ್ಟ್ ಹೇಳಿದೆ.

Read moreDetails
Page 2 of 3 1 2 3

Recent News

Welcome Back!

Login to your account below

Retrieve your password

Please enter your username or email address to reset your password.

error: Content is protected !!