Tag: ಕೇರಳ

ಕರ್ನಾಟಕವನ್ನು ಸಿದ್ದರಾಮಯ್ಯ, ಡಿಕೆಶಿ ನೋಡ್ಕೊಳ್ತಾರೆ.. ನಿಮ್ಮದು ನೀವು ನೋಡ್ಕಳಿ..!

ಕರ್ನಾಟಕದ ಮಾನವನ್ನು ಕಳೆಯಲು ಮುಂದಾದ ಕೇರಳ ಕಾಂಗ್ರೆಸ್‌ಗೆ ಮಾಜಿ ಇನ್ಫೋಸಿಸ್‌ ಡೈರೆಕ್ಟರ್‌‌ ಮೋಹನ್‌ ದಾಸ್‌ ಪೈ (TV Mohan Das Pai) ಸರಿಯಾಗಿಯೇ ಚಾಟಿ ಬೀಸಿದ್ದಾರೆ. ಕೇರಳದ ...

Read more

ರಾಜೀವ್​ ಚಂದ್ರಶೇಖರ್​ ಆಸ್ತಿ ಕಡಿಮೆ ಆಗಿದ್ದು ಹೇಗೆ..? ನಷ್ಟ ಆಯ್ತಾ..? ಸುಳ್ಳು ಹೇಳ್ತಿದ್ದಾರಾ..?

ರಾಜೀವ್​ ಚಂದ್ರಶೇಖರ್​.. ಕೇರಳ ಮೂಲದ ಉದ್ಯಮಿ ಕಮ್​​ ಪೊಲಿಟಿಷಿಯನ್​. ಕರ್ನಾಟಕದಿಂದ ಎರಡು ಬಾರಿ ರಾಜಗ್ಯಸಭೆಗೆ ಆಯ್ಕೆ ಆಗಿದ್ದರು. ಎಂದೂ ಕರ್ನಾಟಕದ ಬಗ್ಗೆ ಮಾತನಾಡಿದ್ದು ಕಂಡು ಬರಲಿಲ್ಲ. ಆದರೆ ...

Read more

ಕೇರಳ | ಎರಡು ಅಸಹಜ ಸಾವು, ನಿಫಾ ವೈರಸ್‌ ಶಂಕೆ

ಕೇರಳ ಕೋಯಿಕ್ಕೋಡ್ ಜಿಲ್ಲೆಯಲ್ಲಿ ಎರಡು ಅಸಹಜ ಸಾವು ಪ್ರಕರಣ ದಾಖಲಾದ ಬೆನ್ನಲ್ಲೇ ನಿಫಾ ವೈರಸ್‌ ಸೋಂಕಿನ ಶಂಕೆ ವ್ಯಕ್ತವಾಗಿದೆ. ಜಿಲ್ಲೆಯಾದ್ಯಂತ ಕಟ್ಟೆಚ್ಚರ ವಹಿಸುವಂತೆ ಆರೋಗ್ಯ ಇಲಾಖೆ ಸೂಚಿಸಿದೆ. ...

Read more

ಕೇರಳ | ಭಾರತದ ಅತಿ ಉದ್ದದ ಸ್ಕೈ ವಾಕ್‌ ಗಾಜಿನ ಸೇತುವೆ ಉದ್ಘಾಟನೆ

ಭಾರತದ ಅತಿ ಉದ್ದದ ಸ್ಕೈ ವಾಕ್‌ ಗಾಜಿನ ಸೇತುವೆಯನ್ನು ಕೇರಳ ವಾಗಮೋನ್‌ ಪ್ರವಾಸಿ ಕೇಂದ್ರದಲ್ಲಿ ಬುಧವಾರ (ಸೆಪ್ಟೆಂಬರ್‌ 6) ಉದ್ಘಾಟನೆಗೊಂಡಿದೆ. ರಾಜ್ಯದ ಪ್ರವಾಸದೋದ್ಯಮ ಸಚಿವ ಮೊಹಮ್ಮದ್‌ ರಿಯಾಜ್ ...

Read more

ಕೇರಳ | ಮದ್ಯ ಸೇವಿಸಿ ಕೊಳವೊಂದರಲ್ಲಿ ಸ್ನಾನಕ್ಕಿಳಿದ ವ್ಯಕ್ತಿ ಸಾವು

ಸ್ನೇಹಿತರ ಜತೆ ಸ್ನಾನಕ್ಕೆಂದು ತೆರಳಿ ಕೊಳಕ್ಕೆ ಇಳಿದ ವ್ಯಕ್ತಿ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಕೇರಳದ ಉಳ್ಳಾಲ ನಡೆದಿರುವುದಾಗಿ ಮಂಗಳವಾರ (ಆಗಸ್ಟ್‌ 29) ವರದಿಯಾಗಿದೆ. ಕರ್ನಾಟಕ- ಕೇರಳ ...

Read more

ಕೇರಳ | ಗುದನಾಳದಲ್ಲಿ ಬಚ್ಚಿಟ್ಟುಕೊಂಡಿದ್ದ 90 ಲಕ್ಷ ರೂ. ಮೌಲ್ಯದ ಚಿನ್ನ ವಶ

ಕುವೈತ್ನಿಂದ ಕೇರಳ ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಮಹಿಳೆಯೊಬ್ಬರ ಬಳಿ ಕಸ್ಟಮ್ಸ್ ಅಧಿಕಾರಿಗಳು ಪೇಸ್ಟ್ ರೂಪದ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. ಆನಂದವಲ್ಲಿ ವಿಜಯಕುಮಾರ್ ಎಂಬ ಪ್ರಯಾಣಿಕರನ್ನು ತಪಾಸಣೆ ...

Read more

ಕೇರಳ | ಭದ್ರಕಾಳಿ ದೇವಾಲಯದಲ್ಲಿ ಇಸ್ರೊ ಅಧ್ಯಕ್ಷ ಎಸ್‌.ಸೋಮನಾಥ್‌ ಪೂಜೆ

ಚಂದ್ರಯಾನ 3 ಯೋಜನೆ ಯಶಸ್ಸಿನ ಬಳಿಕ ಮೊದಲ ಬಾರಿಗೆ ಕೇರಳದ ತಿರುವನಂತಪುರಕ್ಕೆ ಭೇಟಿ ನೀಡಿದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ಅಧ್ಯಕ್ಷ ಎಸ್.ಸೋಮನಾಥ್ ಇಲ್ಲಿಯ ದೇವಾಲಯಕ್ಕೆ ...

Read more

ಕರ್ನಾಟಕ, ಕೇರಳ ಗಡಿಯುದ್ದಕ್ಕೂ ನಡೆಯುತ್ತಿದೆ ತ್ಯಾಜ್ಯ ದಂಧೆ

ಹಣದ ಆಸೆಗಾಗಿ ಕೆಲವು ಜನ ಯಾವ ಲೆವೆಲ್ಗೂ ಇಳಿತಾರೆ ಅನ್ನೋದಕ್ಕೆ ದಕ್ಷಿಣ ಕನ್ನಡ ಜಿಲ್ಲೆಯಲ್ಲೊಂದು ಉದಾಹರಣೆ ದೊರೆತಿದ್ದು ಮಂಗಳೂರು ಜಿಲ್ಲೆಯ ಬಂಟ್ವಾಳ ತಾಲೂಕಿನ ಅಡ್ಯನಡ್ಕ ಗ್ರಾಮದ ಕುದ್ದುಪದವು ...

Read more

ಕೇರಳ | ಆಫ್ರಿಕನ್ ಹಂದಿ ಜ್ವರ ಪತ್ತೆ ; ಕೊಲ್ಲಲು ಹೇಳಿದ ಜಿಲ್ಲಾಧಿಕಾರಿ

ಕೇರಳದ ಕಣ್ಣೂರು ಜಿಲ್ಲೆಯ ಕಣಿಚಾ ಗ್ರಾಮದಲ್ಲಿ ಆಫ್ರಿಕನ್ ಹಂದಿ ಜ್ವರ ಪತ್ತೆಯಾಗಿದೆ. ಇದರ ಬೆನ್ನಲ್ಲೇ ಎರಡು ಫಾರ್ಮ್‌ಗಳಲ್ಲಿ ಹಂದಿಗಳನ್ನು ಕೊಲ್ಲಲು ಜಿಲ್ಲಾಧಿಕಾರಿ ಆದೇಶಿಸಿದ್ದಾರೆ ಎಂದು ಶನಿವಾರ (ಆಗಸ್ಟ್‌ ...

Read more

ಕೇರಳ | 2ನೇ ದಿನ ವಿವಿಧ ಕಾರ್ಯಕ್ರಮಗಳಲ್ಲಿ ರಾಹುಲ್‌ ಗಾಂಧಿ ಭಾಗಿ

ಲೋಕಸಭೆ ಸದಸ್ಯತ್ವ ಮರುಸ್ಥಾಪನೆಯ ನಂತರ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಶನಿವಾರ (ಆಗಸ್ಟ್‌ 11) ಸಂಜೆ ತಾವು ಸಂಸತ್ತಿಗೆ ಆಯ್ಕೆಯಾದ ಕೇರಳದ ವಯನಾಡು ಕ್ಷೇತ್ರಕ್ಕೆ ನೀಡಿರುವ ಭೇಟಿ ...

Read more

ಕೇರಳ ಇನ್ನು ಮುಂದೆ ಕೇರಳಂ | ನಿಲುವಳಿ ಮಂಡಿಸಿದ ಪಿಣರಾಯಿ

ಕೇರಳ ರಾಜ್ಯವನ್ನು ಇನ್ನು ಮುಂದೆ ಕೇರಳಂ ಎಂದು ಮರುನಾಮಕರಣ ಮಾಡಲು ಕೇಂದ್ರ ಸರ್ಕಾರಕ್ಕೆ ಮನವಿ ಮಾಡುವ ನಿಲುವಳಿಗೆ ರಾಜ್ಯ ವಿಧಾನಸಭೆ ಬುಧವಾರ (ಆಗಸ್ಟ್‌ 9) ಸರ್ವಾನುಮತದ ಒಪ್ಪಿಗೆ ...

Read more

ಕೇರಳ | ಪೌರ ಕಾರ್ಮಿಕ ಮಹಿಳೆಯರಿಗೆ ಒಲಿದ ಅದೃಷ್ಟ ; 11 ಮಂದಿಗೆ 10 ಕೋಟಿ ರೂ. ಲಾಟರಿ

ಕೇರಳ ಮಲಪ್ಪುರಂ ನಗರ ಸ್ವಚ್ಛಗೊಳಿಸುವ 11 ಪೌರಕಾಮಿಕ ಮಹಿಳೆಯರಿಗೆ ಅದೃಷ್ಟ ಒಲಿದು ಬಂದಿದೆ. 11 ಮಂದಿ ಮಹಿಳೆಯರ ಪೌರಕಾರ್ಮಿಕ ಗುಂಪಿಗೆ 110 ಕೋಟಿ ರೂ. ಲಾಟರಿ ಹಣ ...

Read more

ಕೇರಳಕ್ಕೆ ಎಂಟ್ರಿ ಕೊಟ್ಟ ಮುಂಗಾರು : ಮುಂದಿನ 48 ಗಂಟೆಗಳಲ್ಲಿ ಕರ್ನಾಟಕದಲ್ಲಿ ಮಳೆ

ತಡವಾಗಿಯಾದರೂ ಕೊನೆಗೂ ಕೇರಳಕ್ಕೆ ಮಾನ್ಸೂನ್​ ಎಂಟ್ರಿ ಕೊಟ್ಟಿದೆ. ಹೀಗಾಗಿ ಮುಂದಿನ 48 ಗಂಟೆಗಳಲ್ಲಿ ಮಧ್ಯ ಅರೇಬಿಯನ್​ ಸಮುದ್ರ, ಕರ್ನಾಟಕ, ತಮಿಳುನಾಡು , ಬಂಗಾಳ ಕೊಲ್ಲಿ ಹಾಗೂ ಈಶಾನ್ಯ ...

Read more

ರಾಜ್ಯದ ಹಲವೆಡೆ ಮುಂದಿನ 24 ಗಂಟೆಗಳಲ್ಲಿ ಭಾರೀ ಮಳೆ ಸಾಧ್ಯತೆ

ಬೆಂಗಳೂರು : ರಾಜ್ಯದ ನಾಲ್ಕು ಜಿಲ್ಲೆಗಳಲ್ಲಿ ಮುಂದಿನ 24 ಗಂಟೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಜೂನ್​​ 4ರಂದು ಕೇರಳಕ್ಕೆ ...

Read more

ಕೇರಳ ಸಿಎಂ ಪಿಣರಾಯಿ ವಿಜಯನ್ ಅವರ ಮಾಜಿ ಪ್ರಧಾನ ಕಾರ್ಯದರ್ಶಿ ಬಂಧಿಸಿದ ಇಡಿ

ತಿರುವನಂತಪುರ: ವಸತಿ ಯೋಜನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ಸಿಎಂ ಪಿಣರಾಯಿ ವಿಜಯನ್ ಅವರ ಮಾಜಿ ಪ್ರಧಾನ ಕಾರ್ಯದರ್ಶಿ ಎಂ. ಶಿವಶಂಕರ್ ಅವರನ್ನು ಜಾರಿ ನಿರ್ದೇಶನಾಲಯದ(ಇ ಡಿ) ಅಧಿಕಾರಿಗಳು ...

Read more

ಹಕ್ಕಿ ಜ್ವರ ಹರಡುವ ಭೀತಿ; ಹಲವು ರಾಜ್ಯಗಳಲ್ಲಿ ಕಟ್ಟೆಚ್ಚರ..!

ಮೈಸೂರು: ನೆರೆಯ ಕೇರಳ ರಾಜ್ಯದಲ್ಲಿ ಹಕ್ಕಿ ಜ್ವರ ವ್ಯಾಪಕವಾಗಿ ಹರಡುತ್ತಿದ್ದು, ಸೋಂಕು ಹರಡಿದ್ದ 6,000 ಕೋಳಿಗಳನ್ನು ಕೊಲ್ಲಲಾಗಿದೆ. ನೆರೆ ರಾಜ್ಯದ ಈ ಘಟನೆ ಕೇರಳದ ಗಡಿ ಪ್ರದೇಶವಾದ ...

Read more

ಸ್ವಂತ ಇಂಟರ್ನೆಟ್‌ ಹೊಂದಿರುವ ದೇಶದ ಮೊದಲ & ಏಕೈಕ ರಾಜ್ಯ ಕೇರಳ : ಪಿಣರಾಯಿ ವಿಜಯನ್

ಕೇರಳ ಈಗ ತನ್ನದೇ ಆದ ಇಂಟರ್ನೆಟ್ ಸೇವೆಯನ್ನು ಹೊಂದಿರುವ ದೇಶದ ಮೊದಲ ಮತ್ತು ಏಕೈಕ ರಾಜ್ಯವಾಗಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಗುರುವಾರ ಹೇಳಿದ್ದಾರೆ. ಈ ಕುರಿತು ...

Read more

ಕೇರಳದಲ್ಲಿ ಪತ್ತೆಯಾದ ಟೊಮೇಟೋ ಜ್ವರ : ಯಾರಿಗೆ ತಗುಲುತ್ತದೆ? ಏನಿದರ ಗುಣ ಲಕ್ಷಣ?

ಕರ್ನಾಟಕದ ಆರೋಗ್ಯ ಸಚಿವ ಕೆ ಸುಧಾಕರ್ ಅವರು ಮೇ 11 ರ ಬುಧವಾರ, ನೆರೆಯ ಕೇರಳದಲ್ಲಿ ಟೊಮೇಟೊ ಜ್ವರ ಉಲ್ಬಣಗೊಂಡಿರುವ ಹಿನ್ನೆಲೆಯಲ್ಲಿ, ಟೊಮೇಟೋ ಜ್ವರದ ಭಯಪಡುವ ಅಗತ್ಯವಿಲ್ಲ ...

Read more

ಕೇರಳ | ಪೊರೋಟ ತಂದ ಪೊಟ್ಟಣದಲ್ಲಿ ಹಾವಿನ ಪೊರೆ : ಹೊಟೇಲಿಗೆ ಬೀಗ ಜಡಿದ ಅಧಿಕಾರಿಗಳು

ಹೊಟೇಲಿನಿಂದ ತರಿಸಿದ ಆಹಾರದ ಪೊಟ್ಟಣದಲ್ಲಿ ಹಾವಿನ ಚರ್ಮದ ಅವಶೇಷಗಳು ಪತ್ತೆಯಾದ ಬಳಿಕ ತಿರುವನಂತಪುರಂನ ನೆಡುಮಂಗಡದಲ್ಲಿರುವ ಹೋಟೆಲ್ ಅನ್ನು ಆಹಾರ ಸುರಕ್ಷತಾ ಅಧಿಕಾರಿಗಳು ತಾತ್ಕಾಲಿಕವಾಗಿ ಮುಚ್ಚಿದ್ದಾರೆ. ಮೇ 5 ...

Read more

ಕೇರಳ, ತೆಲಂಗಾಣದಲ್ಲಿ ನೆಲೆ ಕಂಡುಕೊಳ್ಳಲು ಬಿಜೆಪಿ ಪ್ರಯತ್ನ

ದೇಶದ ಬಹುತೇಕ ರಾಜ್ಯಗಳಲ್ಲಿ ಅಧಿಕಾರವನ್ನು ಪಡೆಯಲು ಬಿಜೆಪಿ ಯಶಸ್ವಿಯಾಗಿದ್ದರೂ, ದಕ್ಷಿಣ ಭಾರತದಲ್ಲಿ ಮಾತ್ರ ಹೆಚ್ಚಿನ ಯಶಸ್ಸು ಗಳಿಸಲು ಸಾಧ್ಯವಾಗಲಿಲ್ಲ. ಕರ್ನಾಟಕ, ಗೋವಾ ಹೊರತಾಗಿ ಬೇರೆ ಯಾವುದೇ ರಾಜ್ಯದಲ್ಲಿ ಅಧಿಕಾರಿ ಪಡೆಯಲು ಬಿಜೆಪಿ ವಿಫಲವಾಗಿದೆ. ಪ್ರಮುಖವಾಗಿ ಕೇರಳ ಹಾಗೂ ತೆಲಂಗಾಣದಲ್ಲಿ ಬಿಜೆಪಿ ಪ್ರದರ್ಶನ ಅತ್ಯಂತ ಕಳಪೆಯಾಗಿದ್ದು, ಈಗ ಈ ರಾಜ್ಯಗಳಲ್ಲಿ ಬಿಜೆಪಿಗೆ ಜೀವ ತುಂಬುವ ಪ್ರಯತ್ನ ನಡೆಸಲಾಗುತ್ತಿದೆ.  2016ರಲ್ಲಿ ಕೇರಳ ವಿಧಾನಸಭೆಗೆ ಬಿಜೆಪಿ ಮೊತ್ತಮೊದಲು ಪ್ರವೇಶ ಪಡೆದಿತ್ತು.2021ರಲ್ಲಿ ಆ ಸ್ಥಾನವನ್ನೂ ಕಳೆದುಕೊಂಡು ವಿಧಾನಸಭೆಯಲ್ಲಿ ಅಸ್ಥಿತ್ವವೇ ಇಲ್ಲದ ಪರಿಸ್ಥಿಗೆ ಬಿಜೆಪಿ ಇಳಿದಿದೆ. ಇನ್ನು ತೆಲಂಗಾಣ ಸಿಎಂ ಕೆ ಚಂದ್ರಶೇಖರ್ ರಾವ್ ಅವರು ತಮ್ಮನ್ನು ತಾವೇ ಮುಂದಿನ ಪ್ರಧಾನಿ ಹುದ್ದೆಯ ಅಭ್ಯರ್ಥಿ ಎಂಬಂತೆ ಬಿಂಬಿಸಿಕೊಳ್ಳುತ್ತಿದ್ದಾರೆ.  ಇವೆರಡೂ ರಾಜ್ಯಗಳಲ್ಲಿ ಬಿಜೆಪಿಯ ಪ್ರಭಾವ ಅಷ್ಟಕ್ಕಷ್ಟೇ. ಈ ಕಾರಣಕ್ಕೆ, ಕೇರಳ ಹಾಗು ತೆಲಂಗಾಣದಲ್ಲಿ ಬಿಜೆಪಿ ಕಾರ್ಯಕರ್ತರ ಉತ್ಸಾಹ ಹೆಚ್ಚಿಸಲು ಹಾಗೂ ಮುಂಬರುವ ಚುನಾವಣೆಗಳಿಗೆ ತಯಾರಿಯಾಗಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಅವರು ಇಂದು ಮತ್ತು ನಾಳೆ ಭೇಟಿ ನೀಡಲಿದ್ದಾರೆ. ಈ ವೇಳೆ ಸರಣಿ ಸಭೆಗಳನ್ನು ನಡೆಸಿ, ಪಕ್ಷದ ಅಸ್ಥಿತ್ವನ್ನು ಮತ್ತಷ್ಟು ಗಟ್ಟಿಗೊಳಿಸುವ ಕುರಿತು ಚರ್ಚೆ ನಡೆಸಲಿದ್ದಾರೆ.  ತೆಲಂಗಾಣದಲ್ಲಿ ಬಿಜೆಪಿ ಜೊತೆಗಿನ ವೈಮನಸ್ಯವನ್ನು ಟಿಆರ್ಎಸ್ ಮುಂದುವರೆಸಿದೆ. ಈ ಕಾರಣಕ್ಕೆ ಅಲ್ಲಿ ರೈತರ ಸಮಸ್ಯೆಗಳನ್ನು ಚುನಾವಣಾ ಸರಕಾಗಿಸಿ ಪ್ರಚಾರ ಪಡೆಯುವ ಕುರಿತು ಚಿಂತನೆ ನಡೆದಿದೆ. ಕಳೆದ ಚುನಾವಣೆಯಲ್ಲಿ ಕೇವಲ ಮೂರು ವಿಧಾನಸಭಾ ಕ್ಷೇತ್ರಗಳನ್ನು ಗೆಲ್ಲುವಲ್ಲಿ ಸಫಲವಾಗಿದ್ದ ಬಿಜೆಪಿ, ಮುಂದಿನ ಚುನಾವಣೆಗೆ ಈಗಾಗಲೇ ನೀಲಿ ನಕ್ಷೆ ತಯಾರಿಸಿದೆ.  ಟಿಆರ್ಎಸ್ ಸರ್ಕಾರದ ವೈಫಲ್ಯಗಳು, ರೈತರ ಸಮಸ್ಯೆ ಹಾಗೂ ಇನ್ನಿತರ ವಿಚಾರಗಳನ್ನು ಮುಂದಿಟ್ಟುಕೊಂಡು ಕ್ಷೇತ್ರವಾರು ಪ್ರಚಾರಕ್ಕೆ ತಯಾರಿ ನಡೆಸಲಾಗಿದೆ. ಇದರೊಂದಿಗೆ ಪಕ್ಷದ ಕಾರ್ಯಕರ್ತರನ್ನು ಒಗ್ಗೂಡಿಸುವ ಸಲುವಾಗಿ ಹಾಗೂ ಅವರಲ್ಲಿ ಆತ್ಮವಿಶ್ವಾಸ ತುಂಬಿಸಲು ಜೆ ಪಿ ನಡ್ಡಾ ಅವರು ಮೆಹಬೂಬ್ ನಗರದಲ್ಲಿ ಬಹಿರಂಗ ಸಮಾವೇಶವನ್ನೂ ಹಮ್ಮಿಕೊಳ್ಳಲಿದ್ದಾರೆ.  ಕೇರಳದ ಕಲ್ಲಿಕೋಟೆಯಲ್ಲಿಯೂ ಬಹಿರಂಗ ಸಮಾವೇಶವನ್ನು ಏರ್ಪಡಿಸಲಾಗಿದೆ. ಇಲ್ಲಿಯೂ ಪಕ್ಷದ ಪ್ರಮುಖರ ಸಭೆ ಕರೆದು, ಮುಂದಿನ ಲೋಕಸಭಾ ಹಾಗೂ ನಾಲ್ಕು ವರ್ಷಗಳ ನಂತರ ಬರುವ ವಿಧಾನಸಭಾ ಚುನಾವಣೆಗೆ ಈಗಿಂದಲೇ ತಯಾರಿ ನಡೆಸುವ ಕುರಿತು ಚರ್ಚೆ ನಡೆಸಲಾಗುತ್ತದೆ ಎಂದು ವರದಿಯಾಗಿದೆ.  “ರಾಜ್ಯದ ಬಿಜೆಪಿ ಕಾರ್ಯಕರ್ತರನ್ನು ಹುರಿದುಂಬಿಸಲು ರಾಷ್ಟ್ರ ನಾಯಕರು ಆಗಿಸುತ್ತಿದ್ದಾರೆ. ರಾಜ್ಯ ಸರ್ಕಾರದ ವೈಫಲ್ಯಗಳನ್ನು ಡಿಜಿಟಲ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಬಹಿರಂಗಗೊಳಿಸುವ ಕುರಿತು ಚರ್ಚೆ ನಡೆಸಲಾಗುತ್ತದೆ,” ಎಂದು ಕೇರಳದ ಹಿರಿಯ ಮುಖಂಡರೊಬ್ಬರು ತಿಳಿಸಿದ್ದಾರೆ.  ಒಟ್ಟಿನಲ್ಲಿ, ನೆಲೆಯಿಲ್ಲದ ಕಡೆಗಳಲ್ಲಿ ಹೊಸತೊಂದು ನೆಲೆ ಕಂಡುಕೊಳ್ಳಲು ಬಿಜೆಪಿ ಶ್ರಮಪಡುತ್ತಿದೆ. ಎಡರಂಗ ಹಾಗು ಪ್ರಾದೇಶಿಕ ಪಕ್ಷದ ಪ್ರಭಾವವನ್ನು ಮೀರಿ ನಿಂತು ಸರ್ಕಾರ ರಚಿಸಲು ಬಿಜೆಪಿಗೆ ಸಾಧ್ಯವಾಗಬಹುದೇ ಎಂದು ಕಾದುನೋಡಬೇಕಿದೆ. 

Read more
Page 1 of 3 1 2 3

Recent News

Welcome Back!

Login to your account below

Retrieve your password

Please enter your username or email address to reset your password.