• Home
  • About Us
  • ಕರ್ನಾಟಕ
Wednesday, July 2, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

ಶ್ರೀಮಂತ ಮುಸ್ಲಿಮರು, ಆಕ್ರಮಣಕಾರಿ ಹಿಂದುಗಳು: ಕರಾವಳಿ ಕರ್ನಾಟಕ ಮತ್ತು ಕೇರಳ ಏಕೆ ಹಿಂಸಾತ್ಮಕ ರಾಜಕೀಯದ ಕೇಂದ್ರಗಳಾಗಿವೆ? ಭಾಗ – 1

ಫಾತಿಮಾ by ಫಾತಿಮಾ
June 7, 2022
in ದೇಶ
0
ಶ್ರೀಮಂತ ಮುಸ್ಲಿಮರು, ಆಕ್ರಮಣಕಾರಿ ಹಿಂದುಗಳು: ಕರಾವಳಿ ಕರ್ನಾಟಕ ಮತ್ತು ಕೇರಳ ಏಕೆ ಹಿಂಸಾತ್ಮಕ ರಾಜಕೀಯದ ಕೇಂದ್ರಗಳಾಗಿವೆ? ಭಾಗ – 1
Share on WhatsAppShare on FacebookShare on Telegram

ಕೇರಳದ ಕಣ್ಣೂರಿನ 29 ವರ್ಷದ ಯುವ ಕಾಂಗ್ರೆಸ್ ಮುಖಂಡ  ಶುಹೈಬ್ ಅವರನ್ನು ಟೀ ಅಂಗಡಿಯಲ್ಲಿ ಕೊಲ್ಲಲಾಗಿತ್ತು. ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ-ಮಾರ್ಕ್ಸಿಸ್ಟ್ (ಸಿಪಿಎಂ) ನ ಹಲವಾರು ಸದಸ್ಯರನ್ನು ಆರೋಪಿಗಳಾಗಿ ಹೆಸರಿಸಲಾಯಿತು. ಕಣ್ಣೂರಿನಿಂದ 170 ಕಿಲೋಮೀಟರ್ ದೂರದಲ್ಲಿ, ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರಿಯಲ್ಲಿ ಬಜರಂಗದಳದ ಕಾರ್ಯಕರ್ತ ಮತ್ತು ಗೋಸಂರಕ್ಷಣಾ ಪ್ರಚಾರಕ ಪ್ರಶಾಂತ್ ಪೂಜಾರಿಯವರನ್ನೂ ಕೊಲೆಗೈಯಲಾಯಿತು. ಅವರಿಗೂ 29 ವರ್ಷ ವಯಸ್ಸಾಗಿತ್ತು ಮತ್ತು ಅವರನ್ನು ಅವರ ಹೂವಿನಂಗಡಿಯಲ್ಲಿ ಕೊಲ್ಲಲಾಗಿತ್ತು. ಪಿಎಫ್ಐ ಸಂಘಟನೆಯ ಸದಸ್ಯರು ಅವರನ್ನು ಕೊಂದಿದ್ದಾರೆ ಎಂಬ ಆರೋಪಗಳು ಕೇಳಿ ಬಂತು‌. I wasn’t interested enough that I https://clanchronicles.com/gta-v-casino-heist-points-of-interest/ feel a need to read any more.

ADVERTISEMENT

ಎರಡೂ ಪ್ರಕರಣಗಳಲಿ ಕಥೆಗಳು, ವಿವರಗಳು, ಸಿದ್ಧಾಂತಗಳು ಮತ್ತು ಉದ್ದೇಶಗಳು ವಿಭಿನ್ನವಾಗಿವೆ, ಆದರೆ ರಕ್ತಸಿಕ್ತ, ದ್ವೇಷಪೂರಿತ ಮತ್ತು ವಿಭಜಿಸುವ ರಾಜಕೀಯ ಬ್ರ್ಯಾಂಡ್ ಎರಡೂ ಪ್ರಕರಣಗಳಲ್ಲಿ ಒಂದೇ ಆಗಿದೆ. ಕರ್ನಾಟಕದ ಕರಾವಳಿ ಮತ್ತು ಕೇರಳದಲ್ಲಿ ಹೀಗೆ ಕೊಲೆಗೈಯಲ್ಪಡುವ ಪ್ರತಿ ಪ್ರಕರಣದ ಹಿಂದೆಯೂ ಅಲ್ಪಸಂಖ್ಯಾತರ ಜನಸಂಖ್ಯಾಶಾಸ್ತ್ರ, ಆರ್ಥಿಕ ಸಂಪನ್ಮೂಲಗಳ ಮೇಲಿನ ದೀರ್ಘಕಾಲದ ಪೈಪೋಟಿ, ಭೂಸುಧಾರಣೆಗಳು ಮತ್ತು ರಾಜಕೀಯ ಮಹತ್ವಾಕಾಂಕ್ಷೆ ಎದ್ದು ಕಾಣುತ್ತದೆ. ಎರಡೂ ರಾಜ್ಯಗಳಲ್ಲಿ ನಡೆಯುವ  ರಕ್ತಪಾತಕ್ಕೆ ದೀರ್ಘ ಇತಿಹಾಸವಿದ್ದು ಕೇರಳದ ಉತ್ತರ ಮಲಬಾರ್ ಜಿಲ್ಲೆಗಳಲ್ಲಿ ರಕ್ತಪಾತವು ಹೆಚ್ಚಾಗಿ ಪಕ್ಷ ನಿಷ್ಠೆಯ ಹೆಸರಿನಲ್ಲಿ ನಡೆಯುತ್ತದೆ, ಆದರೆ ಕರ್ನಾಟಕದ ದಕ್ಷಿಣ ಕರಾವಳಿ ಪ್ರದೇಶದಲ್ಲಿ ಇದು ಸಾಮಾನ್ಯವಾಗಿ ಧರ್ಮದ ಹೆಸರಿನಲ್ಲಿ ಕಂಡುಬರುತ್ತದೆ.

ಕ್ರಿಕೆಟ್, ಸಮುದಾಯ, ಸಂಸ್ಕೃತಿ ಮತ್ತು ವಿಭಜಿತ ಸಮಾಜ

“ಡಿಸೆಂಬರ್ ಆರು 1992ರಂದು ಬಾಬರಿ ಮಸೀದಿ ಕೆಡವಲಾಗಿದೆ ಎಂದು ಹೇಳಲು ನಮ್ಮ ಮಸೀದಿಯಿಂದ ಒಬ್ಬರು ಓಡಿ ಬಂದರು.  ಮತ್ತು ನಮ್ಮ ಸ್ಥಳೀಯ ಮಸೀದಿಯನ್ನು ರಕ್ಷಿಸಲು ಎಲ್ಲಾ ಮುಸ್ಲಿಮ ಹುಡುಗರಿಗೆ ಕರೆ ನೀಡಿದರು”.‌ ಹಿಂದೂ ಮತ್ತು ಮುಸ್ಲಿಂ ಸದಸ್ಯರನ್ನು ಹೊಂದಿದ್ದ ‘ಫ್ರೆಂಡ್ಸ್ ಕ್ರಿಕೆಟ್ ಟೀಮ್’ ಎಂದು ಕರೆಯಲ್ಪಡುವ ತಂಡ ಆ ಕ್ಷಣದಲ್ಲಿ  ವಿಭಜನೆಯಾಯಿತು ಎಂದು ನೆನಪಿಸಿಕೊಳ್ಳುತ್ತಾರೆ  ಡೆಮಾಕ್ರಟಿಕ್ ಯೂತ್ ಫೆಡರೇಶನ್ ಆಫ್ ಇಂಡಿಯಾ (ಡಿವೈಎಫ್‌ಐ) ಕರ್ನಾಟಕ ರಾಜ್ಯ ಅಧ್ಯಕ್ಷರಾದ ಮುನೀರ್ ಕಾಟಿಪಳ್ಳ.

“ಆ ದಿನ, ನಾವು ನಮ್ಮ ಬ್ಯಾಟ್‌ಗಳನ್ನು ಬಿಟ್ಟು ಮಸೀದಿಗೆ ಹೋದೆವು ಮತ್ತು ನಮ್ಮ ಹಿಂದೂ ಸ್ನೇಹಿತರು ದೇವಸ್ಥಾನಕ್ಕೆ ಹೋದರು.  ಅಂದಿನಿಂದ ಇಂದಿನವರೆಗೂ ಒಡೆದು ಹೋದ ತಂಡ ಮತ್ತೆ ಒಂದಾಗಿಲ್ಲ” ಎಂದು ಕಾಟಿಪಳ್ಳ ಹೇಳುತ್ತಾರೆ.

6 ಡಿಸೆಂಬರ್ 1992 ರ ಮೊದಲು, ಇಲ್ಲಿನ ಕ್ರಿಕೆಟ್ ತಂಡಗಳು ವಿವಿಧ ಸಮುದಾಯಗಳ ಸದಸ್ಯರನ್ನು ಹೊಂದಿದ್ದವು ಮತ್ತು ‘ಫ್ರೆಂಡ್ಸ್’, ‘ಫೈವ್ ಸ್ಟಾರ್’ ಮುಂತಾದ ಸಾಮಾನ್ಯ ಹೆಸರುಗಳನ್ನು ಹೊಂದಿದ್ದವು.  ಈಗ ಕ್ರಿಕೆಟ್ ತಂಡಗಳು ಕೋಮು ರೇಖೆಗಳಲ್ಲಿ ವಿಭಜಿಸಲ್ಪಟ್ಟಿವೆ ಮತ್ತು ‘ಅಡ್ವಾಣಿ’, ‘ಸದ್ದಾಂ’, ‘ಓಂ ಶಕ್ತಿ’ ಮತ್ತು ‘ಗ್ರೀನ್ ಸ್ಟಾರ್’ ನಂತಹ ಹೆಸರುಗಳನ್ನು ಹೊಂದಿವೆ ಎನ್ನುತ್ತಾರೆ ಮುನೀರ್.

ಸಂಸ್ಕೃತಿಯು ಆಳವಾಗಿ ವಿಭಜಿತವಾಗಿರುವ ಕರಾವಳಿ ಕರ್ನಾಟಕ ಜಿಲ್ಲೆಗಳ ಸೂಕ್ಷ್ಮರೂಪವಾಗಿದೆ ಕ್ರಿಕೆಟ್. ಇಲ್ಲಿ ಬಿರುಕುಗಳು ವರ್ಷಂಪ್ರತಿ ಆಳವಾಗುತ್ತಾ ಹೋಗುತ್ತಿದೆ. ಹಾಗಾಗಿಯೇ ಕರ್ನಾಟಕದ ಈ ಭಾಗ ಹಿಜಾಬ್  ವಿವಾದದ ಕೇಂದ್ರಬಿಂದುವಾಗಿದೆ ಎಂಬುದು ಕಾಕತಾಳೀಯವಲ್ಲ.

ದಶಕಗಳ ಹಿಂದೆ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಇಲ್ಲಿ ತನ್ನ ಕಾರ್ಯಚಟುವಟಿಕೆಗಳನ್ನು ಚುರುಕುಗೊಳಿಸಿದಾಗ ಧಾರ್ಮಿಕ ಬಹುಸಂಖ್ಯಾತ ಮತ್ತು ಅಲ್ಪಸಂಖ್ಯಾತರ ನಡುವಿನ ಸಮೀಕರಣಗಳು ಬದಲಾಗಲಾರಂಭಿಸಿದವು ಎಂಬುದು ರಾಜಕೀಯ ವಿಶ್ಲೇಷಕರು ಮತ್ತು ರಾಜಕೀಯ ವಲಯದಾದ್ಯಂತದ ನಾಯಕರು ಒಪ್ಪಿಕೊಳ್ಳುವ ಸಂಗತಿಯಾಗಿದೆ.

ಕರ್ನಾಟಕದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮತ್ತು ಕಟ್ಟಾ ಆರ್‌ಎಸ್‌ಎಸ್ ನಿಷ್ಠಾವಂತ ಎನ್. ರವಿ ಕುಮಾರ್ ಅವರು ಆರ್‌ಎಸ್‌ಎಸ್ ಕರಾವಳಿ ಕರ್ನಾಟಕವನ್ನು ದಕ್ಷಿಣದ ಕೇಂದ್ರ ಕಚೇರಿಯಾಗಿ ಆಯ್ಕೆ ಮಾಡಿಕೊಂಡಿರುವುದರ ಹಿಂದೆ ಹಲವಾರು ಕಾರಣಗಳಿವೆ ಎಂದು ಹೇಳುತ್ತಾರೆ.  ಇವುಗಳಲ್ಲಿ ಒಂದು, ಈ ಪ್ರದೇಶ ಅತ್ಯಂತ ಸಮೃದ್ಧವಾಗಿತ್ತು ಎನ್ನುವುದಾಗಿದೆ.

“ನೀವು ಸ್ವಯಂಸೇವಕರು ನಡೆಸುವ ಸಂಸ್ಥೆಯನ್ನು ಪ್ರಾರಂಭಿಸಿದಾಗ, ಬಡತನವಿರುವ ಪ್ರದೇಶದಲ್ಲಿ ಸ್ಥಾಪಿಸಲು ಸಾಧ್ಯವಿಲ್ಲ.  ಜನರು ಕೇವಲ ಒಂದು ಕಾರಣ ಅಥವಾ ಸಿದ್ಧಾಂತದ ಕಡೆಗೆ ಮೀಸಲಿಡಲು ಸಮಯ ಹೊಂದಿರುವುದಿಲ್ಲ. Prospect Hall Casino – Welcome Bonus. https://casillascontracting.us/las-vegas-strip-to-red-rock-casino/ ಕರಾವಳಿ ಕರ್ನಾಟಕವು ಸಂಸ್ಕೃತಿ, ಬುದ್ಧಿ, ನಂಬಿಕೆ ಮಾತ್ರವಲ್ಲದೆ ಮಾನವ ಸಂಪನ್ಮೂಲದಲ್ಲಿಯೂ ಶ್ರೀಮಂತವಾಗಿತ್ತು” ಎಂದು ಅವರು ಹೇಳುತ್ತಾರೆ.

ಕೆಲವು ಐತಿಹಾಸಿಕ‌ ಪ್ರಸಂಗಗಳ ಬಗ್ಗೆಯೂ ಉಲ್ಲೇಖ ಮಾಡುವ ರವಿ 18ನೇ ಶತಮಾನದ ಮುಸ್ಲಿಂ ದೊರೆ ಟಿಪ್ಪು ಸುಲ್ತಾನ್‌ ಹಿಂದೂಗಳ ಮೇಲಿನ ದೌರ್ಜನ್ಯ ಮಾಡಿದ್ದರ ಬಗ್ಗೆಯೂ ಇಲ್ಲಿ ಅಂತರ್ಗತ ಕೋಪ ಹರಿಯುತ್ತಿತ್ತು ಎನ್ನುತ್ತಾರೆ. “ಹಿಂದುತ್ವವನ್ನು ತನ್ನ ಹೃದಯದಲ್ಲಿ ಹೊಂದಿರುವ ಸಂಘಟನೆಗೆ ಇಲ್ಲಿ ಹಿಂದೂಗಳನ್ನು ಒಗ್ಗೂಡಿಸಲು ಸುಲಭವಾಯಿತು” ಎಂದು ಎಂಎಲ್‌ಸಿ ಕೂಡ ಆಗಿರುವ ರವಿ ಹೇಳುತ್ತಾರೆ.

2010 ರಿಂದ ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ನಡೆದ ಕೋಮು ಅಪರಾಧಗಳ ಜಾಡು ಹಿಡಿದಿರುವ ಸಾಮಾಜಿಕ ಹೋರಾಟಗಾರ ಸುರೇಶ್ ಭಟ್ ಅವರ ಪ್ರಕಾರ ಆರ್‌ಎಸ್‌ಎಸ್ ಪ್ರಭಾವ ಹೆಚ್ಚಿದಂತೆ ವಿಭಜಕ ರಾಜಕಾರಣವೂ ಬೆಳೆಯಿತ. ಸುರೇಶ್ ಭಟ್ ಅವರು 1980 ಮತ್ತು 1990 ರ ದಶಕದಲ್ಲಿ ಅಯೋಧ್ಯೆಯಲ್ಲಿ ರಾಮ ಮಂದಿರಕ್ಕಾಗಿ ಇಟ್ಟಿಗೆ ಸಂಗ್ರಹದ ಚಾಲನೆ ಮತ್ತು ರಥಯಾತ್ರೆ (ರಥಯಾತ್ರೆ) ನಂತಹ ಘಟನೆಗಳು ಕರ್ನಾಟಕದಲ್ಲಿ ಕೋಮು ಜ್ವಾಲೆಯನ್ನು ಹುಟ್ಟುಹಾಕಿದವು ಎಂದು ನೆನಪಿಸಿಕೊಳ್ಳುತ್ತಾರೆ.

ಈ ಸಮಯದಲ್ಲಿ, ಕರಾವಳಿ ಕರ್ನಾಟಕದಲ್ಲಿ ಆರ್‌ಎಸ್‌ಎಸ್ ಪ್ರಜ್ಞಾಪೂರ್ವಕವಾಗಿ ಗೌಡ ಸಾರಸ್ವತ ಬ್ರಾಹ್ಮಣರ ಸಂಘಟನೆ ಎಂದು ತನ್ನ ಮೇಲಿರುವ ಆರೋಪವನ್ನು  ಬದಲಾಯಿಸಲು ಪ್ರಾರಂಭಿಸಿತು.  ಬದಲಾಗಿ, ಬಿಲ್ಲವ, ಮೊಗವೀರ ಮತ್ತು ಈಡಿಗನಂತಹ ಹಿಂದುಳಿದ, ತುಳು ಮಾತನಾಡುವ ಸಮುದಾಯಗಳ ಯುವಕರನ್ನು ಸಕ್ರಿಯವಾಗಿ ಸೆಳೆಯಿತು ಎಂದು ಭಟ್ ಹೇಳುತ್ತಾರೆ.

“ಕೇರಳದೊಂದಿಗೆ ಭೌಗೋಳಿಕ ಸಾಮೀಪ್ಯ ಹೊಂದಿರುವ ಈ ಪ್ರದೇಶದಲ್ಲಿ ಎಡಪಂಥೀಯ ಸಿದ್ಧಾಂತವು ಪ್ರಬಲವಾಗಿತ್ತು. ಆದರೆ RSS ಹಿಂದುಳಿದ ವರ್ಗಗಳ ಜನರನ್ನು ಹಿಂದೂ ಹೆಸರಿನಲ್ಲಿ ಸೆಳೆಯಿತು” ಎಂದು ಭಟ್ ಹೇಳುತ್ತಾರೆ. ಈ ಸೈದ್ಧಾಂತಿಕ ಯೋಜನೆಯು ಸಾಂಸ್ಕೃತಿಕ ಸಹಕಾರದ ತಂತ್ರವನ್ನು ಒಳಗೊಂಡಿತ್ತು.

“ಇದು ತುಳುನಾಡು, ಇಲ್ಲಿನ ತುಳು ಜನರು ಸನಾತನ ಧರ್ಮದ ಅಡಿಯಲ್ಲಿ ಹಿಂದುಗಳಲ್ಲ.  ಇಲ್ಲಿ ಜನರು ಭೂತಗಳು ಮತ್ತು ದೈವಗಳು ಎಂದು ಕರೆಯಲ್ಪಡುವ ಪೂರ್ವಜರ ಆತ್ಮಗಳನ್ನು ಪೂಜಿಸುತ್ತಾರೆ.  ಆದರೆ, ಆರ್‌ಎಸ್‌ಎಸ್ ತಮ್ಮ ಸಾಂಸ್ಕೃತಿಕ ಆಚರಣೆಗಳನ್ನು ಸಮುದಾಯ, ದೇವಾಲಯಗಳ ಮೇಲೆ ನಿಯಂತ್ರಣ ಸಾಧಿಸಿ ಯಕ್ಷಗಾನ ಮತ್ತು ಬಯಲಾಟಗಳಂತಹ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತದೆ” ಎಂದು ಅವರು ಹೇಳುತ್ತಾರೆ.

ವಿಶ್ವ ಹಿಂದೂ ಪರಿಷತ್ತಿನ (ವಿಎಚ್‌ಪಿ) ಮಂಗಳೂರು ವಿಭಾಗದ ಕಾರ್ಯದರ್ಶಿ ಶರಣ್ ಪಂಪ್‌ವೆಲ್, ಹಿಂದೂ ಬಲವರ್ಧನೆಯು ಆರ್‌ಎಸ್‌ಎಸ್ ಪರವಾಗಿ ಕೆಲಸ ಮಾಡಿದೆ ಎಂದು ನಂಬುತ್ತಾರೆ. “ದಶಕಗಳ ಹಿಂದೆಯೇ ಕರಾವಳಿಯಲ್ಲಿ ಆರ್‌ಎಸ್‌ಎಸ್ ನೆಲೆ ಸ್ಥಾಪಿಸಿ ಹಿಂದೂಗಳನ್ನು ಒಗ್ಗೂಡಿಸುತ್ತಿದೆ.  ಇಲ್ಲಿರುವ ಪ್ರತಿಯೊಂದು ಹಿಂದೂ ಮನೆಯಲ್ಲೂ ಒಬ್ಬ ಸಂಘದ ಕಾರ್ಯಕರ್ತ  ಇರುತ್ತಾನೆ” ಎಂದು ಪಂಪ್‌ವೆಲ್ ಹೇಳುತ್ತಾರೆ.

ಪಂಪ್‌ವೆಲ್ ಪ್ರಕಾರ, ‘ಇಸ್ಲಾಮಿಕ್ ಶಕ್ತಿಗಳು’  ಕರಾವಳಿಯ ‘ಐತಿಹಾಸಿಕ ದೇವಾಲಯಗಳ’ ಕಾರಣದಿಂದ ಕರಾವಳಿ ಕರ್ನಾಟಕವನ್ನು ಗುರಿಯಾಗಿಸಿಕೊಂಡಿದೆ ಮತ್ತು ‘ಭಾರತವನ್ನು ಇಸ್ಲಾಮೀಕರಣಗೊಳಿಸುವ’ ಪ್ರಯತ್ನಗಳನ್ನು ವಿರೋಧಿಸುವುದು  ಹಿಂದುತ್ವ ಸಂಘಟನೆಗಳ ಮುಖ್ಯ ಆಶಯವಾಗಿದೆ .

ಬಾಬರಿ ಮಸೀದಿ ಧ್ವಂಸವು ಇಲ್ಲಿನ ರಾಜಕೀಯ ವಾತಾವರಣವನ್ನು ಹಾಳುಮಾಡಿದೆ ಎಂದು ಪಂಪ್‌ವೆಲ್ ಒಪ್ಪುವುದಿಲ್ಲ. Are no deposit bonuses worth it? https://starlitenewsng.com/max-seceret-casino-chips-per-day-dfo/ ಆದರೆ 1998 ರಲ್ಲಿ ಮಂಗಳೂರಿನ ಬಳಿಯ ಸುರತ್ಕಲ್‌ನಲ್ಲಿ ನಡೆದ ಗಲಭೆಗಳವರೆಗೆ ಮಂಗಳೂರಿನಲ್ಲಿ ಹಿಂಸಾತ್ಮಕ ಕೋಮು ಘರ್ಷಣೆಗಳು ಇರಲಿಲ್ಲ ಎಂದು ಅವರು ಒಪ್ಪಿಕೊಳ್ಳುತ್ತಾರೆ.

ಆರ್‌ಎಸ್‌ಎಸ್‌ ಶಕ್ತಿ ಹೆಚ್ಚಾದಂತೆ ಮುಸ್ಲಿಮರ ಪ್ರತಿಸಂಘಟನೆಯೂ ಆಯಿತು.  ಸುರೇಶ್ ಭಟ್ ಅವರ ಪ್ರಕಾರ, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI) ಆಗಮನದೊಂದಿಗೆ 2006 ರ ನಂತರ ಮುಸ್ಲಿಂ ರಾಜಕೀಯ ಚಟುವಟಿಕೆಯು ಸುಸಂಘಟಿತವಾಯಿತು.

“ದಕ್ಷಿಣ ಕನ್ನಡದಲ್ಲಿ ಪಿಎಫ್‌ಐ ಪ್ರವೇಶಿಸಿದ ನಂತರವೇ ಮುಸ್ಲಿಮರಿಂದ ಪ್ರತೀಕಾರವು ಸಂಘಟಿತ ರೀತಿಯಲ್ಲಿ ಪ್ರಾರಂಭವಾಯಿತು.  ಆರ್‌ಎಸ್‌ಎಸ್ ಮತ್ತು ಪಿಎಫ್‌ಐ ಎರಡೂ ಕೋಮು ಸಂಘಟನೆಗಳು” ಎಂದು ಭಟ್ ಹೇಳುತ್ತಾರೆ. This is because European Roulette offers players a lower house edge https://clanchronicles.com/orleans-casino-west-tropicana-avenue-las-vegas-nv/ than American Roulette.

ಇಂದು ವಿಭಜನೆ ತುಂಬಾ ಆಳವಾಗಿದೆ, ವಿವಿಧ ಸಮುದಾಯಗಳ ಮಕ್ಕಳು ಇಲ್ಲಿ ಒಟ್ಟಿಗೆ ಬೆರೆಯುತ್ತಿಲ್ಲ ಎಂದು ಕಾಟಿಪಳ್ಳ ಹೇಳುತ್ತಾರೆ.  “ದಕ್ಷಿಣ ಕನ್ನಡದಲ್ಲಿ ಮುಸ್ಲಿಮರು ಬ್ಯಾರಿ ಮಾತನಾಡುತ್ತಾರೆ ಮತ್ತು ಹಿಂದೂಗಳು ತುಳು ಮಾತನಾಡುತ್ತಾರೆ.  ಮಕ್ಕಳಾದ ನಾವು ಆಡುವಾಗ ಅಥವಾ ಸುತ್ತಾಡುವಾಗ ಪರಸ್ಪರರ ಭಾಷೆಯನ್ನು ಕಲಿಯುತ್ತೇವೆ.  ಇಂದು ನಮ್ಮ ಮಕ್ಕಳು ತುಳು ಮಾತನಾಡುವುದಿಲ್ಲ ಮತ್ತು ಹಿಂದೂ ಮಕ್ಕಳು ಬ್ಯಾರಿಯನ್ನು ತಿರಸ್ಕರಿಸುತ್ತಾರೆ” ಎಂದು ವಿಷಾದ ವ್ಯಕ್ತಪಡಿಸುತ್ತಾರೆ.

ಕೇರಳದ ಕರಾವಳಿಯಲ್ಲೂ ಕೋಮು ವಿಭಜನೆಗಳು ಬೆಳೆದಿವೆ.  ಬಿಜೆಪಿಯ ‘ಲವ್ ಜಿಹಾದ್’ ಎಂಬ ಕಲ್ಪನೆಯನ್ನು ಪರಿಚಯಿಸಿದ್ದು ಕೇರಳದಲ್ಲೇ ಮತ್ತು ಅದರ ಹಿಂದೂ ಮತ್ತು ಕ್ರಿಶ್ಚಿಯನ್ ಪ್ರತಿಪಾದಕರೇ ಅದನ್ನು ಪ್ರಚಾರಕ್ಕೆ ತಂದದ್ದು.‌ (ಕರ್ನಾಟಕದಂತಲ್ಲದೆ ಇಲ್ಲಿ ಗೋಮಾಂಸವು ವಿವಾದಾತ್ಮಕ  ವಿಷಯವಲ್ಲ, ಏಕೆಂದರೆ ಅನೇಕ ಸಮುದಾಯಗಳು ಅದನ್ನು ಸೇವಿಸುತ್ತವೆ. When it comes to free casino games, download can have a larger selection of https://casillascontracting.us/how-many-casinos-in-north-carolina/ games to choose from, particularly when it comes to gaming apps. )  ಆದರೆ, ಕೇರಳದಲ್ಲಿ, ರಾಜಕೀಯ ಹಿಂಸಾಚಾರದಲ್ಲಿನ  ಪಕ್ಷದ ಕಾರ್ಯಕರ್ತರ ನಡುವಿನ ಕ್ರೂರ ಸಂಘರ್ಷವು ಕೋಮು ಸಂಘರ್ಷವನ್ನು ಮುಚ್ಚಿ ಹಾಕುವಷ್ಟು ಭೀಕರವಾಗಿದೆ.

ಅಲ್ಲದೆ, ಆರ್‌ಎಸ್‌ಎಸ್‌ಗೆ ಕರ್ನಾಟಕದ ಕರಾವಳಿ ಪ್ರದೇಶಗಳಲ್ಲಿ ಕೆಳಜಾತಿಗಳ ಹಿಂದೂಗಳನ್ನು ಓಲೈಸಲು ಸಾಧ್ಯವಾಯಿತು, ಆದರೆ ಈ ತಂತ್ರವು ಕೇರಳದಲ್ಲಿ ಪರಿಣಾಮಕಾರಿಯಾಗಿರಲಿಲ್ಲ. ಆರ್‌ಎಸ್‌ಎಸ್ ಕೇರಳ ರಾಜ್ಯದಲ್ಲಿ ಪ್ರತಿದಿನ 4,500 ಸಭೆಗಳನ್ನು ನಡೆಸುತ್ತದೆ ಎಂದು ವರದಿಯಾಗಿದೆ, ಇದು ದೇಶದಲ್ಲೇ ಅತ್ಯಧಿಕವಾಗಿದೆ, ಆದರೆ ಅದು ಅಲ್ಲಿ ದೊಡ್ಡದಾಗಿ ಪ್ರಭಾವ ಬೀರಲು ಸಾಧ್ಯವಾಗಿಲ್ಲ.

“ಇದರ ಕ್ರೆಡಿಟ್ ಸಾಮಾಜಿಕ ಸುಧಾರಕ ಮತ್ತು ಆಧ್ಯಾತ್ಮಿಕ ನಾಯಕ ನಾರಾಯಣ ಗುರುಗಳಿಗೆ ಮತ್ತು ಕೇರಳದಲ್ಲಿ ಅವರು ಕೈಗೊಂಡ ಸಾಮಾಜಿಕ ಸುಧಾರಣಾ ಕಾರ್ಯಗಳಿಗೆ ಸಲ್ಲುತ್ತದೆ.  ಹಿಂದುಳಿದ ವರ್ಗಗಳು ನಾರಾಯಣ ಗುರುಗಳ ಜಾತಿ-ವಿರೋಧಿ ಸುಧಾರಣೆಗಳೊಂದಿಗೆ ಎಷ್ಟು ಬಲವಾಗಿ ಜೋಡಿಸಲ್ಪಟ್ಟಿವೆ ಎಂದರೆ ಹಿಂದುತ್ವದ ದೊಡ್ಡ ಆಮಿಷವು ಅಲ್ಲಿ ಕೆಲಸ ಮಾಡುತ್ತಿಲ್ಲ” ಎಂದು ಸುರೇಶ್ ಭಟ್ ಹೇಳುತ್ತಾರೆ.

(ಮುಂದುವರಿಯಲಿದೆ)

ಮೂಲ: ಅನುಷಾ ರವಿ ಸೂದ್, ‘ದಿ ಪ್ರಿಂಟ್‘

Tags: Basavaraj BommaiBJPCoastal KarnatakaHindutvaKarnatakaKeralamuslimPFIPinarayi VijayanRSSVHPvishva hindu parishadಆರ್‌ಎಸ್‌ಎಸ್ಕರಾವಳಿಕರ್ನಾಟಕಕಾಂಗ್ರೆಸ್ಕೇರಳಧರ್ಮ ಗಲಾಟೆಪಿಎಫ್ಐಪಿಣರಾಯಿ ವಿಜಯನ್‌ಬಸವರಾಜ್‌ ಬೊಮ್ಮಾಯಿಬಾಬರಿ ಮಸೀದಿಬಿಜೆಪಿಮುಸ್ಲಿಂವಿಎಚ್ಪಿವಿಶ್ವ ಹಿಂದೂ ಪರಿಷತ್ಹತ್ಯೆಹಿಂದೂತ್ವ
Previous Post

ರಾಜ್ಯಗಳಿಗೆ ಹೆಚ್ಚಿನ ಅಧಿಕಾರ ನೀಡಲು ಸಂವಿಧಾನ ತಿದ್ದುಪಡಿ ಅಗತ್ಯವಿದೆ ಎಂದ ಸ್ಟಾಲಿನ್ !

Next Post

ಹಾವೇರಿಯ ನವೀನ್‌ ಬಲಿ | ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಹೇಳಿಕೆಗೆ ವ್ಯಾಪಕ ಖಂಡನೆ

Related Posts

Top Story

CM Siddaramaiah: ಬಿಜೆಪಿ ಹಗಲುಗನಸು ಕಾಣುತ್ತಿದೆ: ಸಿ.ಎಂ.ಸಿದ್ದರಾಮಯ್ಯ

by ಪ್ರತಿಧ್ವನಿ
July 2, 2025
0

ಬಿಜೆಪಿಯವರು ಅಧಿಕಾರದಲ್ಲಿದ್ದಾಗ ಏನು ಸಾಕ್ಷಿ ಗುಡ್ಡೆಯನ್ನು ಬಿಟ್ಟುಹೋಗಿದ್ದಾರೆ? :ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನೆ ಸರ್ಕಾರದಲ್ಲಿ ಅಧಿಕಾರ ಬದಲಾವಣೆ ಬಗ್ಗೆ ಬಿಜೆಪಿ ಹಗಲು ಗನಸು ಕಾಣುತ್ತಿದೆ. ಬಿಜೆಪಿಯವರು ಸುಳ್ಳನ್ನು ಮಾತ್ರ...

Read moreDetails
ಹೃದಯಾಘಾತ ಪ್ರಕರಣಗಳಿಗೂ ಕೋವಿಡ್ ವಾಕ್ಸಿನ್ ಗೂ ಯಾವುದೇ ಸಂಬಂಧವಿಲ್ಲ : ಕೇಂದ್ರ ಆರೋಗ್ಯ ಇಲಾಖೆ ಸ್ಪಷ್ಟನೆ 

ಹೃದಯಾಘಾತ ಪ್ರಕರಣಗಳಿಗೂ ಕೋವಿಡ್ ವಾಕ್ಸಿನ್ ಗೂ ಯಾವುದೇ ಸಂಬಂಧವಿಲ್ಲ : ಕೇಂದ್ರ ಆರೋಗ್ಯ ಇಲಾಖೆ ಸ್ಪಷ್ಟನೆ 

July 2, 2025

Mitra: “ಮಹಾನ್” ಚಿತ್ರದಲ್ಲಿ ಮಿತ್ರ. .

July 2, 2025
ರೈಲ್ವೇ ಟಿಕೆಟ್ ದರ ಏರಿಕೆಯನ್ನು ತಕ್ಷಣವೇ ಹಿಂಪಡೆಯಬೇಕು

ರೈಲ್ವೇ ಟಿಕೆಟ್ ದರ ಏರಿಕೆಯನ್ನು ತಕ್ಷಣವೇ ಹಿಂಪಡೆಯಬೇಕು

July 2, 2025
ಸ್ಮಾರ್ಟ್‌ ಸಿಟಿ ಎಂಬ ಕನಸು ಮತ್ತು ವಾಸ್ತವ

ಸ್ಮಾರ್ಟ್‌ ಸಿಟಿ ಎಂಬ ಕನಸು ಮತ್ತು ವಾಸ್ತವ

July 1, 2025
Next Post
ಹಾವೇರಿಯ ನವೀನ್‌ ಬಲಿ | ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಹೇಳಿಕೆಗೆ ವ್ಯಾಪಕ ಖಂಡನೆ

ಹಾವೇರಿಯ ನವೀನ್‌ ಬಲಿ | ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಹೇಳಿಕೆಗೆ ವ್ಯಾಪಕ ಖಂಡನೆ

Please login to join discussion

Recent News

Top Story

“ಕೊರಗಜ್ಜ” ಸಿನಿಮಾಗೆ ಕಾಸ್ಟ್ಯೂಮ್ ಮತ್ತು ಆರ್ಟ್ ಡೈರೆಕ್ಷನ್ ಗೆ ಟಿಪ್ಸ್ ನೀಡಿದ್ದೇ 96ವರ್ಷದ ಎಂ ಎಸ್ ಸತ್ಯು- ನಿರ್ದೇಶಕ ಸುಧೀರ್ ಅತ್ತಾವರ್

by ಪ್ರತಿಧ್ವನಿ
July 2, 2025
Top Story

ನಂದಿ ಗಿರಿಧಾಮದಲ್ಲಿ ಸಿಎಂ, ಡಿಸಿಎಂ ಸಚಿವ ಸಂಪುಟ ಸಭೆ..!

by ಪ್ರತಿಧ್ವನಿ
July 2, 2025
Top Story

CM Siddaramaiah: ಬಿಜೆಪಿ ಹಗಲುಗನಸು ಕಾಣುತ್ತಿದೆ: ಸಿ.ಎಂ.ಸಿದ್ದರಾಮಯ್ಯ

by ಪ್ರತಿಧ್ವನಿ
July 2, 2025
‘I have no other option’ – ಸಿಎಂ ಬದಲಾವಣೆ ಬಗ್ಗೆ ಹಿಂಗಂದಿದ್ದ್ಯಾಕೆ ಡಿಕೆ ಶಿವಕುಮಾರ್ ..?! 
Top Story

‘I have no other option’ – ಸಿಎಂ ಬದಲಾವಣೆ ಬಗ್ಗೆ ಹಿಂಗಂದಿದ್ದ್ಯಾಕೆ ಡಿಕೆ ಶಿವಕುಮಾರ್ ..?! 

by Chetan
July 2, 2025
ಹೃದಯಾಘಾತ ಪ್ರಕರಣಗಳಿಗೂ ಕೋವಿಡ್ ವಾಕ್ಸಿನ್ ಗೂ ಯಾವುದೇ ಸಂಬಂಧವಿಲ್ಲ : ಕೇಂದ್ರ ಆರೋಗ್ಯ ಇಲಾಖೆ ಸ್ಪಷ್ಟನೆ 
Top Story

ಹೃದಯಾಘಾತ ಪ್ರಕರಣಗಳಿಗೂ ಕೋವಿಡ್ ವಾಕ್ಸಿನ್ ಗೂ ಯಾವುದೇ ಸಂಬಂಧವಿಲ್ಲ : ಕೇಂದ್ರ ಆರೋಗ್ಯ ಇಲಾಖೆ ಸ್ಪಷ್ಟನೆ 

by Chetan
July 2, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

“ಕೊರಗಜ್ಜ” ಸಿನಿಮಾಗೆ ಕಾಸ್ಟ್ಯೂಮ್ ಮತ್ತು ಆರ್ಟ್ ಡೈರೆಕ್ಷನ್ ಗೆ ಟಿಪ್ಸ್ ನೀಡಿದ್ದೇ 96ವರ್ಷದ ಎಂ ಎಸ್ ಸತ್ಯು- ನಿರ್ದೇಶಕ ಸುಧೀರ್ ಅತ್ತಾವರ್

July 2, 2025

ನಂದಿ ಗಿರಿಧಾಮದಲ್ಲಿ ಸಿಎಂ, ಡಿಸಿಎಂ ಸಚಿವ ಸಂಪುಟ ಸಭೆ..!

July 2, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada