ಕೆಪಿಸಿಸಿಯಿಂದ ಗಾಂಧಿ ನಡಿಗೆ ಕಾರ್ಯಾಗಾರ : ವೀರಪ್ಪ ಮೊಯ್ಲಿ
ಈ ತಿಂಗಳು 26ರಂದು ದೇವನಹಳ್ಳಿಯಲ್ಲಿ ಹಾಗೂ 29ರಂದು ಯಲಹಂಕ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 'ಗಾಂಧಿ ನಡಿಗೆ' ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮುಂದಿನ ತಿಂಗಳು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ...
Read moreDetailsಈ ತಿಂಗಳು 26ರಂದು ದೇವನಹಳ್ಳಿಯಲ್ಲಿ ಹಾಗೂ 29ರಂದು ಯಲಹಂಕ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 'ಗಾಂಧಿ ನಡಿಗೆ' ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮುಂದಿನ ತಿಂಗಳು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ...
Read moreDetailsಮೈಸೂರಿನಲ್ಲಿ ನಡೆದ ವಿದ್ಯಾರ್ಥಿನಿಯ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಾನಸಭೆಯಲ್ಲಿ ಮಾಜಿ ಮುಖ್ಯಮಂತ್ರಿಗಳು ಹಾಗೂ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಇಂದು ...
Read moreDetailshttps://youtu.be/sUz_8MBADBc
Read moreDetailshttps://youtu.be/GMvfNXJqkJc
Read moreDetails‘ಚಾಣಕ್ಯ ವಿಶ್ವವಿದ್ಯಾಲಯ ವಿಧೇಯಕದ ಮೂಲಕ ಕಾನೂನುಬಾಹಿರವಾಗಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಜಮೀನು ನೀಡುವ ಮೂಲಕ ರಾಜ್ಯ ಬಿಜೆಪಿ ಸರಕಾರವು ಅಧಿಕಾರ ದುರ್ಬಳಕೆ ಮಾಡಿಕೊಂಡಿದೆ ಎಂದು ...
Read moreDetailshttps://youtu.be/L2snowH9mbM
Read moreDetailsಚಾಣಕ್ಯ ವಿಶ್ವವಿದ್ಯಾಲಯ ಸ್ಥಾಪನೆಗೆ ಸಂಬಂಧಿಸಿದಂತೆ ಸೆಂಡರ್ ಫಾರ್ ಎಜ್ಯುಕೇಷನ್ ಅಂಡ್ ಸೋಷಿಯಲ್ ಸ್ಟಡೀಸ್ ಸಂಸ್ಥೆಗೆ (ಸೆಸ್) ಕಡಿಮೆ ದರದಲ್ಲಿ ನೂರಾರು ಎಕರೆ ಭೂಮಿ ನೀಡುವ ತೀರ್ಮಾನವನ್ನು ಕೈ ...
Read moreDetailsಭಾರತೀಯ ರಾಜಕೀಯ ಕ್ಷೇತ್ರದಲ್ಲಿ ಹೊಸ ಪರ್ವ ಶುರುವಾಗಿದೆ. ಮಾರ್ಚ್ನಿಂದ ಈ ವರೆಗೆ ಭಾರತದ 5 ರಾಜ್ಯಗಳಲ್ಲಿ 6 ಮುಖ್ಯಮಂತ್ರಿಗಳನ್ನು ಬದಲಾವಣೆ ಮಾಡಲಾಗಿದೆ. ಐವರು ಮುಖ್ಯಮಂತ್ರಿಗಳು ತಮ್ಮ ಅಧಿಕಾರವಧಿ ...
Read moreDetailshttps://youtu.be/L2snowH9mbM
Read moreDetailsಕರ್ನಾಟಕದಲ್ಲಿ ಒಂದು ತಿಂಗಳ ಕಾಲ ನಡೆದ ಕ್ಷಯರೋಗ ಸಮೀಕ್ಷೆಯಲ್ಲಿ 225 ಜನರು ಕ್ಷಯರೋಗ (TB) ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂದು ತಿಳಿದು ಬಂದಿದೆ . ಆರೋಗ್ಯ ಮತ್ತು ಕುಟುಂಬ ...
Read moreDetailsಕಲಬುರಗಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಪೂರ್ಣ ಬಹುಮತ ಸಿಗದೆ ಅತಂತ್ರವಾಗಿದೆ. ಕಾಂಗ್ರೆಸ್, ಬಿಜೆಪಿ ಯಾರೇ ಅಧಿಕಾರಕ್ಕೆ ಬರಬೇಕಾದರೂ ಜೆಡಿಎಸ್ ಬೆಂಬಲ ಅತ್ಯಗತ್ಯ. ಆದರೆ, ಜೆಡಿಎಸ್ ...
Read moreDetailsಬೆಲೆ ಏರಿಕೆಯಿಂದ ಜನರ ಆಕ್ರೋಶ ಒಳಗೊಳಗೆ ಕುದಿಯುತ್ತಿದೆ. ಈ ಸರ್ಕಾರ ತೊಲಗಿದರೆ ಸಾಕು, ಮತ್ತೆ ಚುನಾವಣೆ ಬಂದರೆ ಸಾಕು ಎಂದು ಕಾಯುತ್ತಿದ್ದಾರೆ. ಒಬ್ಬ ಯಡಿಯೂರಪ್ಪ ಅಲ್ಲ, ಯಡಿಯೂರಪ್ಪ ...
Read moreDetailsಸೆಪ್ಟೆಂಬರ್ 16 ರವರೆಗೆ ಭಾರತದ ಶೇ. 56 ರಷ್ಟು ನಾಗರಿಕರಿಗೆ ಕೋವಿಡ್ ಲಸಿಕೆಗಳನ್ನು ನೀಡಲಾಗಿದೆ. ಆದರೂ ಕೃತಕವಾಗಿ ಇಂಜೆಕ್ಟ್ ಮಾಡಲಾದ ರೋಗನಿರೋಧಕದ (Adverse Events Following Immunization (AEFI) ) ...
Read moreDetailsಅಧಿಕಾರಿಗಳು ಭಾವ ಶೂನ್ಯರಾಗಿರಬೇಕೆಂದು ಈ ಮೂಲಕ ಸಿಎಂ ಬೊಮ್ಮಾಯಿ ಸರ್ಕಾರ ಉದ್ದೇಶಿಸಿದಂತಿದೆ. ಹೀಗೆ ಬಿಜೆಪಿ ಸರ್ಕಾರ ಕಾನೂನಿನ ನೆರಳಲ್ಲೇ ತನ್ನ ಹಿಟ್ಲರ್ ಧೋರಣೆಯನ್ನು ಒಂದೊಂದೇ ಆಗಿ ಜಾರಿ ...
Read moreDetailsಜಿಲ್ಲಾ ಮತ್ತು ತಾಲೂಕು ಪಂಚಾಯ್ತಿ ಚುನಾವಣೆಗಾಗಿ ಕ್ಷೇತ್ರ ಪುನರ್ ವಿಂಗಡಣೆ, ಮೀಸಲಾತಿ ಮತ್ತು ಮತಗಟ್ಟೆ ನಿಗದಿಯಂತಹ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಚುನಾವಣಾ ದಿನಾಂಕಕ್ಕಾಗಿ ಆಯೋಗ ಎದುರುನೋಡುತ್ತಿರುವಾಗ, ದಿಢೀರನೇ ರಾಜ್ಯ ಸರ್ಕಾರ ದಿಢೀರನೇ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ತಿದ್ದುಪಡಿ) ವಿಧೇಯಕ ಅಂಗೀಕಾರದ ಮೂಲಕ ಕಳೆದ ಒಂದು ವರ್ಷದಿಂದ ನಡೆದ ತಯಾರಿಗಳನ್ನು ತಿರುವುಮುರುವು ಮಾಡಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ವಿರೋಧದ ನಡುವೆಯೂ ಪ್ರತಿಪಕ್ಷ ಸದಸ್ಯರ ಸಭಾತ್ಯಾಗದ ಅವಕಾಶವನ್ನೇ ಬಳಸಿಕೊಂಡು ಸರ್ಕಾರ, ವಿವಾದಿತ ವಿಧೇಯಕಕ್ಕೆ ಯಾವುದೇ ವಿಸ್ತೃತ ಚರ್ಚೆಯಿಲ್ಲದೆ ವಿಧಾನಮಂಡಲದ ಉಭಯ ಸದನಗಳ ಅನುಮೋದನೆ ಪಡೆದಿದೆ. ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಕ್ಷೇತ್ರಗಳ ಪುನರ್ವಿಂಗಡನೆಯಿಂದ ಆರಂಭವಾಗಿ, ಕ್ಷೇತ್ರ ನಿಗದಿ, ಮೀಸಲಾತಿ ಮರು ನಿಗದಿ ಸೇರಿದಂತೆ ಹಾಲಿ ಇರುವ ಜಿಲ್ಲಾ ಮತ್ತು ಪಂಚಾಯ್ತಿಗಳ ಸಂಪೂರ್ಣ ಕ್ಷೇತ್ರ ಸ್ವರೂಪವನ್ನೇ ಬದಲಾಯಿಸುವ ಮಹತ್ತರ ಉದ್ದೇಶದಿಂದ ಕರ್ನಾಟಕ ಪಂಚಾಯತ್ ರಾಜ್ ಕ್ಷೇತ್ರ ಪುನರ್ವಿಂಗಡನೆ ಆಯೋಗ(ಡಿಲಿಮಿಟೇಷನ್ ಕಮಿಷನ್) ರಚಿಸುವ ಉದ್ದೇಶದಿಂದ ಈ ತಿದ್ದುಪಡಿ ವಿಧೇಯಕ ಮಂಡಿಸಿ ಅನುಮೋದನೆ ಪಡೆಯಲಾಗಿದೆ. ಈ ಹಿಂದೆ ರಾಜ್ಯ ಚುನಾವಣಾ ಆಯೋಗ ಮಾಡಿದ ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಕ್ಷೇತ್ರ ಪುನರ್ವಿಂಗಡನೆ ಅವೈಜ್ಞಾನಿಕ ಹಾಗೂ ಕಾನೂನು ಬಾಹಿರವಾಗಿದೆ ಎಂದು ಆಕ್ಷೇಪಿಸಿ ರಾಜ್ಯ ಹೈಕೋರ್ಟ್‌ನಲ್ಲಿ ಹಲವಾರು ಆಕ್ಷೇಪಣಾ ಅರ್ಜಿಗಳು ಸಲ್ಲಿಕೆಯಾಗಿವೆ. ಆ ಅರ್ಜಿಗಳನ್ನೇ ನೆಪವಾಗಿರಿಸಿಕೊಂಡು ರಾಜ್ಯ ಬಿಜೆಪಿ ಸರ್ಕಾರ, ದಿಢೀರನೇ ಕ್ಷೇತ್ರ ಪುನರ್ವಿಂಗಡನೆ ಆಯೋಗ ರಚನೆಗಾಗಿ ವಿಧೇಯಕವನ್ನು ತಂದಿದೆ. ಸಹಜವಾಗೇ ಉಭಯ ಸದನಗಳ ಅನುಮೋದನೆ ಪಡೆದಿರುವ ವಿಧೇಯಕ ರಾಜ್ಯಪಾಲರ ಅಂಕಿತದೊಂದಿಗೆ ಜಾರಿಗೆ ಬರಲಿದೆ. ವಿಧೇಯಕ ಜಾರಿಯಾಗುತ್ತಲೇ ಈಗಾಗಲೇ ಚುನಾವಣಾ ಆಯೋಗ ಮಾಡಿರುವ ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಕ್ಷೇತ್ರ ಪುನರ್ವಿಂಗಡನೆ ಅಧಿಸೂಚನೆ ತನ್ನಿಂತಾನೆ ರದ್ದಾಗಲಿದೆ. ಜೊತೆಗೆ, ಆ ಕ್ಷೇತ್ರ ಪುನರ್ವಿಂಗಡನೆ ಆಧಾರದಲ್ಲಿ ಜಾರಿಯಲ್ಲಿರುವ ಕ್ಷೇತ್ರಗಳ ಮೀಸಲು ಅಧಿಸೂಚನೆ ಕೂಡ ರದ್ದಾಗಲಿದೆ. ಅಂದರೆ; ಜಿಲ್ಲಾ ಪಂಚಾಯ್ತಿ ಮತ್ತು ತಾಲೂಕು ಪಂಚಾಯ್ತಿ ಅವಧಿ ಪೂರ್ವನಿಗದಿಯಾಗಿರುವಾಗ, ಕಳೆದ ಎರಡು ವರ್ಷಗಳಿಂದ ಬಿಜೆಪಿಯ ಸರ್ಕಾರವೇ ಅಧಿಕಾರದಲ್ಲಿರುವಾಗ ಕ್ಷೇತ್ರಗಳ ಪುನರ್ ವಿಂಗಡಣೆಯ ಬಗ್ಗೆಯಾಗಲೀ, ಮೀಸಲಾತಿ ನಿಗದಿಯ ಬಗ್ಗೆಯಾಗಲೀ ಗಂಭೀರವಾಗಿ ಯೋಚಿಸದೇ ಇದ್ದ ಬಿಜೆಪಿ, ಇದೀಗ ಚುನಾವಣೆಗೆ ಆಯೋಗ ಎಲ್ಲಾ ತಯಾರಿ ಮಾಡಿಕೊಂಡಿರುವಾಗ, ಕ್ಷೇತ್ರ ಪುನರ್ ವಿಂಗಡಣೆ ಮತ್ತು ಮೀಸಲಾತಿ ಅಧಿಸೂಚನೆಗಳನ್ನು ಹೊರಡಿಸಿರುವಾಗ, ದಿಢೀರನೇ ಚುನಾವಣಾ ಆಯೋಗದ ಎಲ್ಲಾ ಕೆಲಸಗಳನ್ನು ತಿರುವುಮುರುವು ಮಾಡಲು ಮುಂದಾಗಿದೆ. ಅದೂ ಕ್ಷೇತ್ರ ಪುನರ್ ವಿಂಗಡನೆಗೆ ಪ್ರತ್ಯೇಕ ಆಯೋಗ ರಚನೆಯ ಮೂಲಕ, ಚುನಾವಣಾ ಆಯೋಗದ ಕಾರ್ಯವಿಧಾನದಲ್ಲಿ ಮೂಗು ತೂರಿಸುವ ಯತ್ನ ಕೂಡ ನಡೆದಿದೆ. ವಾಸ್ತವವಾಗಿ ಈವರೆಗೆ ಯಾವುದೇ ಚುನಾವಣಾ ಕ್ಷೇತ್ರದ ಕ್ಷೇತ್ರ ಪುನರ್ ವಿಂಗಡನೆ ಎಂಬುದು ಸಂಪೂರ್ಣವಾಗಿ ಆಯಾ ಚುನಾವಣಾ ಆಯೋಗದ ವಿವೇಚನೆ ಮತ್ತು ಅಧಿಕಾರಕ್ಕೆ ಬಿಟ್ಟ ವಿಷಯವಾಗಿತ್ತು. ಇದೀಗ ಬಿಜೆಪಿ ಚುನಾವಣಾ ಆಯೋಗದ ಆ ಅಧಿಕಾರವನ್ನು ಕಿತ್ತುಕೊಂಡು, ಪ್ರತ್ಯೇಕ ಆಯೋಗದ ಮೂಲಕ ಕ್ಷೇತ್ರ ಪುನರ್ ವಿಂಗಡನೆಗೆ ಮುಂದಾಗಿದೆ. ಆ ಹಿನ್ನೆಲೆಯಲ್ಲಿಯೇ ಪ್ರತಿಪಕ್ಷಗಳು ಈ ವಿಧೇಯಕಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿವೆ. ಈ ವಿಧೇಯಕವನ್ನು ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿ ಚುನಾವಣೆ ಮುಂದೂಡುವ ಉದ್ದೇಶದಿಂದಲೇ ತರಲಾಗಿದೆ. ಬಿಜೆಪಿ ಮೀಸಲಾತಿ ವಿರುದ್ಧವಾಗಿದೆ. ಹಾಗಾಗಿಯೇ ಮೀಸಲಾತಿ ಬದಲಾಯಿಸುವ ಮೂಲಕ ಹಿಂದುಳಿದವರು, ದಲಿತರು ಮತ್ತು ಅಲ್ಪಸಂಖ್ಯಾತ ಸಮುದಾಯಗಳ್ನು ಅಧಿಕಾರದಿಂದ ದೂರವಿಡುವ ದುರುದ್ದೇಶದಿಂದಲೇ ತಿದ್ದುಪಡಿಗೆ ಮುಂದಾಗಿದೆ. ಇದೊಂದು ಸಂವಿಧಾನ ವಿರೋಧಿ ಕರಾಳ ವಿಧೇಯಕ” ಎಂದು ವಿಧಾನಸಭಾ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ವಿಧಾನಪರಿಷತ್ ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ್ ಕೂಡ ಮೇಲ್ಮನೆಯಲ್ಲಿ, “ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಮೀಸಲಾತಿ ಮತ್ತು ಕ್ಷೇತ್ರಗಳ ಪುನರ್ ವಿಂಗಡಣೆ ಅಧಿಕಾರವನ್ನು ಚುನಾವಣಾ ಆಯೋಗದಿಂದ ವಾಪಸ್ ಪಡೆಯುವ ತಿದ್ದುಪಡಿ ವಿಧೇಯಕಕ್ಕೆ ನಮ್ಮ ವಿರೋಧವಿದೆ, ಚುನಾವಣಾ ಆಯೋಗಕ್ಕೆ ನೀಡಿದ ಅಧಿಕಾರ ವಾಪಸ್ ಪಡೆದರೆ ಹೇಗೆ? ಇದರಿಂದ ಮೀಸಲಾತಿ ಮತ್ತು ಕ್ಷೇತ್ರ ಮರು ವಿಂಗಡಣೆ ಮನಸ್ಸೋ ಇಚ್ಚೆ ಆಗಲಿದೆ. ಸಂವಿಧಾನದಲ್ಲಿ ಪಾರದರ್ಶಕ ಕೆಲಸಕ್ಕೆ ಚುನಾವಣಾ ಆಯೋಗಗಳನ್ನು ರಚಿಸಲಾಗಿದೆ. ಅದರ ಆ ಹಕ್ಕನ್ನೇ ಕಿತ್ತುಕೊಳ್ಳುವುದು ಸರಿಯಲ್ಲ” ಎಂದು ಹೇಳಿದ್ದಾರೆ. ಅಂದರೆ, ಮುಖ್ಯವಾಗಿ ಪ್ರತಿಪಕ್ಷಗಳು ಸರಿಯಾಗಿಯೇ ಗುರುತಿಸಿರುವಂತೆ ಈ ಹೊಸ ವಿಧೇಯಕದ ಮೂಲಕ ಬಿಜೆಪಿ, ಮೊದಲನೆಯದಾಗಿ ಕ್ಷೇತ್ರ ಪುನರ್ ವಿಂಗಡಣೆ, ಮೀಸಲಾತಿ ನಿಗದಿಯಂತಹ ಸಂವಿಧಾನಿಕ ಕಾರ್ಯಗಳ ಅಧಿಕಾರವನ್ನು ಚುನಾವಣಾ ಆಯೋಗದಿಂದ ಕಿತ್ತುಕೊಂಡು, ತಾನೇ ರಚಿಸುವ ಆಯೋಗಕ್ಕೆ ನೀಡಲು ಮುಂದಾಗಿದೆ. ಎರಡನೆಯದಾಗಿ ಹಾಗೇ ಸಂವಿಧಾನಿಕ ಸಂಸ್ಥೆಯೊಂದರಿಂದ ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿಗೆ ಸಂಬಂಧಿಸಿದಂತೆ ಮಹತ್ವದ ಪ್ರಕ್ರಿಯೆಯ ಅಧಿಕಾರ ಕಿತ್ತುಕೊಳ್ಳುವ ಮೂಲಕ ತನ್ನ ಮೂಗಿನ ನೇರಕ್ಕೆ ಕ್ಷೇತ್ರ ಪುನರ್ ವಿಂಗಡಣೆ ಮತ್ತು ಮೀಸಲಾತಿ ನಿಗದಿ ಮಾಡುವ ಮೂಲಕ ರಾಜಕೀಯ ಲಾಭ ಪಡೆಯುವ ತಂತ್ರಗಾರಿಕೆ ಹೆಣೆದಿದೆ. ಹಾಗಾಗಿ ಬಿಜೆಪಿ ಸರ್ಕಾರದ ಈ ನಡೆ, ಜಾತಿ, ಧರ್ಮ ಮತ್ತು ಲಿಂಗಾಧಾರಿತ ತಾರತಮ್ಯ ಮತ್ತು ಶೋಷಣೆಯನ್ನು ಅಳಿಸಿ ಹಾಕುವ ಮತ್ತು ಅಧಿಕಾರ ವಿಕೇಂದ್ರೀಕರಣದ ಮೂಲಕ ಎಲ್ಲಾ ವರ್ಗಗಳಿಗೂ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಭಾಗಿಯಾಗುವ ಮತ್ತು ಅಧಿಕಾರದ ಪಾಲು ಪಡೆಯುವ ಆಶಯದಿಂದ ಜಾರಿಗೆ ತಂದಿರುವ ಪಂಚಾಯತ್ ರಾಜ್ ವ್ಯವಸ್ಥೆಯನ್ನೇ ಬುಡಮೇಲು ಮಾಡಲಿದೆ. ಆದರೆ, ಸರ್ಕಾರದ ನಡೆಯನ್ನು ಸಮರ್ಥಿಸಿಕೊಂಡಿರುವ ಕಾನೂನು ಸಚಿವ ಮಾಧುಸ್ವಾಮಿ, “ಈ ಬಾರಿ ಕ್ಷೇತ್ರ ಮರುವಿಂಗಡಣೆ ನಿರೀಕ್ಷೆ ಇರಲಿಲ್ಲ, ಹೊಸ ಜನ ಗಣತಿ ನಂತರ ಮಾಡಬೇಕು. 2022ಕ್ಕೆ ನಿರೀಕ್ಷೆ ಮಾಡಿದ್ದೆವು. ಆದರೆ ಚುನಾವಣಾ ಆಯೋಗ ಅವೈಜ್ಞಾನಿಕವಾಗಿ ಮರು ವಿಂಗಡಣೆ ಮಾಡಿದೆ. ಇದರಿಂದ ತಕರಾರು ಅರ್ಜಿ ಹೆಚ್ಚಾಗುತ್ತಿವೆ, ಹೀಗಾದಲ್ಲಿ ಚುನಾವಣೆ ಮಾಡಲು ಸಾಧ್ಯವಿಲ್ಲ. ಹಾಗಾಗಿ ಹೆಗಡೆ, ನಜೀರ್ ಸಾಬ್, ದೇವೇಗೌಡರ ಕಾಲದಲ್ಲಿ ಏನಿತ್ತೋ ಅದನ್ನೇ ನಾವು ಈಗ ವಿಧೇಯಕದ ಮೂಲಕ ಇಟ್ಟಿದ್ದೇವೆ, ಬೇರೆ ಏನಿಲ್ಲ, ಚುನಾವಣೆ ಆಯೋಗವೇ ಚುನಾವಣೆ ಮಾಡಲಿದೆ, ಚುನಾವಣಾ ಆಯೋಗ ಮೀಸಲಾತಿ ಮಾಡಲು ಸಾಧ್ಯವಿಲ್ಲ, ಅದನ್ನು ಸರ್ಕಾರವೇ ಕೊಡುವುದು. ಹಳೆ ಜಿಲ್ಲಾ ಪರಿಷತ್ ಕಾಯ್ದೆಯ ಪ್ರಕಾರವೇ ಎಲ್ಲವೂ ನಡೆಯಲಿದೆ” ಎಂದು ಹೇಳಿದ್ದಾರೆ. ಈ ನಡುವೆ, ಈಗಾಗಲೇ ಚುನಾವಣಾ ಆಯೋಗದ ಮೂಲಕವೇ ನಡೆದಿರುವ ಕ್ಷೇತ್ರ ಪುನರ್ ವಿಂಗಡಣೆಯ ಪ್ರಕ್ರಿಯೆಯಲ್ಲಿ ಕೂಡ ಹಲವಾರು ದೋಷಗಳಾಗಿವೆ. ಅಂತಿಮವಾಗಿ ಆಯೋಗದ ಕೆಲಸ ಕೂಡ ಜಿಲ್ಲಾಧಿಕಾರಿಗಳು ಮತ್ತು ಉಪ ವಿಭಾಗಾಧಿಕಾರಿಗಳ ಮೂಲಕವೇ ಜಾರಿಯಾಗುವುದರಿಂದ ಮತ್ತು ಜಿಲ್ಲಾ ಮತ್ತು ಉಪ ವಿಭಾಗ ಮಟ್ಟದ ಅಧಿಕಾರಶಾಹಿ ಸಾಮಾನ್ಯವಾಗಿ ಆಳುವ ಪಕ್ಷದ ತಾಳಕ್ಕೆ ಕುಣಿಯುವ ಸಾಧ್ಯತೆಗಳೇ ಹೆಚ್ಚಿರುವುದರಿಂದ ಬಹುತೇಕ ಕಡೆ ಬಿಜೆಪಿಗೆ ಅನುಕೂಲವಾಗುವಂತೆಯೇ ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿ ಕ್ಷೇತ್ರಗಳ ಪುನರ್ ವಿಂಗಡಣೆ ಮತ್ತು ಮೀಸಲಾತಿ ನಿಗದಿ ಮಾಡಲಾಗಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಹಾಗೂ ಪಕ್ಷೇತರರಾಗಿ ಸಾಕಷ್ಟು ಪ್ರಭಾವ ಬೆಳೆಸಿಕೊಂಡಿರುವ ಮತ್ತು ರಾಜಕಾರಣದಲ್ಲಿ ಬೆಳೆಯುವ ಭರವಸೆ ಹುಟ್ಟಿಸಿರುವ ಹಲವು ಯುವ ನಾಯಕರನ್ನು ಸ್ಪರ್ಧೆಯಿಂದ ಹೊರಗಿಡುವ ಲೆಕ್ಕಾಚಾರದಲ್ಲಿ ಮೀಸಲಾತಿ ನಿಗದಿಯಾಗಿದೆ ಎಂಬ ವ್ಯಾಪಕ ದೂರುಗಳು ಕೇಳಿಬಂದಿವೆ. ಇಂತಹ ಹಿನ್ನೆಲೆಯಲ್ಲಿ, ಭವಿಷ್ಯದ ನಾಯಕತ್ವ ರೂಪಿಸುವ ಮತ್ತು ಆರೋಗ್ಯಕರ ರಾಜಕಾರಣಕ್ಕೆ ಅವಕಾಶ ನೀಡುವ ನಿಟ್ಟಿನಲ್ಲಿ ಕನಿಷ್ಟ ಪಕ್ಷಾತೀತ ಧೋರಣೆ ತಳೆಯಬೇಕಿದ್ದ ಬಿಜೆಪಿ ಸರ್ಕಾರ, ಇದೀಗ ವಿಧೇಯಕದ ಮೂಲಕ ಮತ್ತೊಂದು ಹೆಜ್ಜೆ ಮುಂದೆ ಹೋಗಿ, ಸಂಪೂರ್ಣ ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿ ವ್ಯವಸ್ಥೆಯನ್ನು ತನ್ನ ರಾಜಕೀಯ ಲಾಭಕ್ಕೆ ಬಳಸಿಕೊಳ್ಳುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದೆ. ಚುನಾವಣಾ ರಾಜಕೀಯ ವ್ಯವಸ್ಥೆಯಲ್ಲಿ ಭವಿಷ್ಯದ ನಾಯಕರನ್ನು ತಯಾರು ಮಾಡುವ ಕಾರ್ಖಾನೆ ಎಂದೇ ಹೇಳಲಾಗುವ ಮತ್ತು ಪ್ರಜಾಸತ್ತೆಯ ಪ್ರಯೋಗಶಾಲೆ ಎನ್ನಲಾಗುವ ಪಂಚಾಯ್ತಿ ವ್ಯವಸ್ಥೆಯಲ್ಲಿ ಹೀಗೆ ಆಡಳಿತರೂಢ ಪಕ್ಷ ಇಡಿಯಾಗಿ ಹಸ್ತಕ್ಷೇಪ ನಡೆಸುವುದು ಮತ್ತು ಇಡೀ ವ್ಯವಸ್ಥೆಯನ್ನು ತನ್ನ ರಾಜಕೀಯ ಲಾಭಕ್ಕೆ ತಕ್ಕಂತೆ ರೂಪಿಸುವುದು ಅಪಾಯಕಾರಿ ಬೆಳವಣಿಗೆ. ಹಾಗಾಗಿ ಅಧಿಕಾರ ವಿಕೇಂದ್ರೀಕರಣದ ಪರಮ ಉದ್ದೇಶದ ಇಡೀ ಪಂಚಾಯತ್ ರಾಜ್ ವ್ಯವಸ್ಥೆಯನ್ನೇ ಈ ಪ್ರಯತ್ನ ಬುಡಮೇಲು ಮಾಡಲಿದೆ. https://www.youtube.com/watch?v=uHDorwnx3SY
Read moreDetails'ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇನೆ ಎಂದಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ನುಡಿದಂತೆ ನಡೆದುಕೊಳ್ಳಲು ವಿಫಲರಾಗಿದ್ದಾರೆ. ಹೀಗಾಗಿ ನಿರುದ್ಯೋಗ ದಿನ ಆಚರಣೆ ಜತೆಗೆ ನಿರುದ್ಯೋಗಿ ...
Read moreDetailsರಾಜ್ಯಸಭಾ ಸದಸ್ಯ, ಬಿಜೆಪಿ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ ಪ್ರಧಾನಿ ಮೋದಿಯನ್ನು ಬಹಿರಂಗವಾಗಿ ಟೀಕಿಸುತ್ತಲೇ ಆಡಳಿತರೂಢ ಬಿಜೆಪಿಯನ್ನು ಪದೇ ಪದೇ ಮುಜುಗರಕ್ಕೀಡಾಗಿಸುತ್ತಿದ್ದಾರೆ. ಇದೀಗ ಮತ್ತೆ ಪ್ರಧಾನಿ ಮೋದಿಯನ್ನು ...
Read moreDetailsಮುಂದಿನ ಎರಡು ತಿಂಗಳ ಒಳಗೆ ಕಲ್ಯಾಣ ಕರ್ನಾಟಕ ಹೂಡಿಕೆದಾರರ ಸಮಾವೇಶ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಕಲಬುರಗಿಯಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯಲ್ಲಿ ಮಾತನಾಡಿದ ...
Read moreDetails2011 ಮತ್ತು 2021 ರ ನಡುವೆ ಪತ್ರಕರ್ತರು, ಮಾಧ್ಯಮ ಸಿಬ್ಬಂದಿ ಮತ್ತು ಪ್ರತಿಭಟನಾಕಾರರ ವಿರುದ್ಧ ದಾಖಲಾಗಿರುವ 5,570 ಪ್ರಕರಣಗಳನ್ನು ಹಿಂಪಡೆಯುವಂತೆ ತಮಿಳುನಾಡು ಸರ್ಕಾರ ಮಂಗಳವಾರ ಆದೇಶ ಹೊರಡಿಸಿದೆ.ತಮಿಳುನಾಡು ...
Read moreDetails© 2024 www.pratidhvani.com - Analytical News, Opinions, Investigative Stories and Videos in Kannada