• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, April 19, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ನಕಲಿ ಎನ್‌ಕೌಂಟರ್‌ ಆರೋಪ.. ತಿರುಗಿ ಬಿದ್ದ ಕಾಂಗ್ರೆಸ್‌‌ ಅಟ್ಯಾಕ್‌‌..

ಕೃಷ್ಣ ಮಣಿ by ಕೃಷ್ಣ ಮಣಿ
December 22, 2024
in Top Story, ಕರ್ನಾಟಕ, ರಾಜಕೀಯ
0
ನಕಲಿ ಎನ್‌ಕೌಂಟರ್‌ ಆರೋಪ.. ತಿರುಗಿ ಬಿದ್ದ ಕಾಂಗ್ರೆಸ್‌‌ ಅಟ್ಯಾಕ್‌‌..
Share on WhatsAppShare on FacebookShare on Telegram

ADVERTISEMENT

ಬೆಳಗಾವಿ ಅಧಿವೇಶನದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ಗೆ ಅವಾಚ್ಯ ಶಬ್ಧ ಬಳಸಿದ್ರು ಅನ್ನೋ ಕಾರಣಕ್ಕೆ ಬಂಧನಕ್ಕೆ ಒಳಗಾಗಿದ್ದ ಪರಿಷತ್‌ ಸದಸ್ಯ ಸಿ.ಟಿ ರವಿಗೆ ಹೈಕೋರ್ಟ್‌ನಿಂದ ರಿಲೀಫ್‌ ಸಿಕ್ಕಿತ್ತು. ಆ ಬಳಿಕ ಶನಿವಾರ ರಾತ್ರಿ ಮೊದಲ ಬಾರಿಗೆ ಹುಟ್ಟೂರಿಗೆ ಎಂಟ್ರಿ ಕೊಟ್ಟಾಗ ಅದ್ಧೂರಿ ಸ್ವಾಗತ ನೀಡಲಾಗಿದೆ. ಸಿ.ಟಿ ರವಿ ಕಾರಿನಲ್ಲಿ ರೋಡ್‌ ಶೋ ಮಾಡಿಕೊಂಡು ಸಾಗ್ತಿದ್ರೆ, ಕಾರ್ಯಕರ್ತರು ಪಟಾಟಿ ಸಿಡಿಸಿ ಸಂಭ್ರಮಿಸಿದ್ದಾರೆ. ಮನೆಯಲ್ಲಿ ಆರತಿ ಬೆಳಗಿ ಸಿ.ಟಿ ರವಿಯನ್ನು ಸ್ವಾಗತಿಸಿದ್ದಾರೆ. ಇದ್ರ ನಡುವೆ ಆ್ಯಂಬುಲೆನ್ಸ್‌ ಬಳಸಿ ಸೈರನ್‌ ಹಾಕಿಕೊಂಡು ಬಂದಿದ್ದು ವಿಶೇಷವಾಗಿದ್ದು, ಪೊಲೀಸರು FIR ಮಾಡಿದ್ದಾರೆ. ಇದೆಲ್ಲರದರ ನಡುವೆ ಸಿ.ಟಿ ರವಿ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ಪ್ರಜಾಪ್ರಭುತ್ವ ಹಾಗು ಸರ್ವಾಧಿಕಾರ ಜೊತೆ ಜೊತೆಯಾಗಿ ಇರಲು ಸಾಧ್ಯವಿಲ್ಲ. ಈ ರೀತಿಯ ಕೇಸ್‌ಗಳಿಗೆ ನಾವು ಹೆದರಲ್ಲ, ಈ ಹಿಂದೆಯೂ ಹೆದರಿಸುವ ಪ್ರಯತ್ನ ನಡೆದಿತ್ತು. ಕಾಲ ಹೀಗೇ ಇರಲ್ಲ.. ಹಿಂದೆ ಸಹಿಸಿಕೊಂಡ ಮಾತ್ರಕ್ಕೆ ಈಗಲೂ ಸಹಿಸಿಕೊಳ್ತೇವೆ ಅನ್ನೋದು ತಪ್ಪು ಎಂದಿದ್ದಾರೆ. ಇನ್ನು ಪೊಲೀಸ್‌ ಠಾಣೆಯಲ್ಲಿ ಇದ್ರೆ ಭದ್ರತೆ ಕೊಡೋಕೆ ಆಗಲ್ಲ ಅಂತಾ ಕಬ್ಬಿನ ಗದ್ದೆ, ಜಲ್ಲಿ ಕ್ರಶರ್‌‌, ಕಾಡಿನ ಒಳಗೆ ಕರೆದುಕೊಂಡು ಹೋಗಿದ್ರು. ಮಾಧ್ಯಮಗಳು ಬೆನ್ನಟ್ಟಿದ್ರಿಂದ ಅನಿವಾರ್ಯವಾಗಿ ಕೋರ್ಟ್‌ಗೆ ಹಾಜರು ಮಾಡಿದ್ರು. ಇಲ್ಲದಿದ್ರೆ ನಕಲಿ ಎನ್‌ಕೌಂಟರ್‌ ನಡೆಯುವ ಸಾಧ್ಯತೆಯಿತ್ತು ಎಂದಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ಸಭೆ ನಡೆಸಿದ ಸಿ.ಟಿ ರವಿ, ಎನ್‌ಕೌಂಟರ್‌ ಮಾಡುವ ಷಡ್ಯಂತ್ರ ನಡೆದಿತ್ತು ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದ್ದಾರೆ. ನ್ಯಾಯಾಂಗ ತನಿಖೆ ಆದ್ರೆ ಸರ್ಕಾರ ಹುಳುಕು ಹೊರಬರುತ್ತೆ ಅನ್ನೋ ಭಯನಾ..? ಎಂದು ಸರ್ಕಾರಕ್ಕೆ ಪ್ರಶ್ನಿಸಿದ್ದಾರೆ. ಆದರೆ ಕಲಬುರಗಿಯಲ್ಲಿ ತಿರುಗೇಟು ನೀಡಿರುವ ಸಿಎಂ ಸಿದ್ದರಾಮಯ್ಯ, ಸಿ.ಟಿ.ರವಿ ಪ್ರಕರಣದಲ್ಲಿ ನ್ಯಾಯಾಂಗ ತನಿಖೆಗೆ ಬಿಜೆಪಿ ಒತ್ತಾಯ ಮಾಡಿದ್ದು, ಪ್ರಕರಣವನ್ನು ನಮ್ಮ ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಇದು ಕ್ರಿಮಿನಲ್ ಅಫೆನ್ಸ್ ಆಗಿದೆ, ಇದ್ರಲ್ಲಿ ನ್ಯಾಯಾಂಗ ತನಿಖೆಗೆ ಯಾಕೆ..? ತಮ್ಮ ತಪ್ಪುಗಳನ್ನು ಮುಚ್ಚಿಕೊಳ್ಳೋಕಾ..? ಎಂದು ಪ್ರಶ್ನಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಬಿ.ಕೆ.ಹರಿಪ್ರಸಾದ್‌, ಅಂಬೇಡ್ಕರ್ ಬಗ್ಗೆ ಅಮಿತ್ ಶಾ ಹೇಳಿಕೆ ಖಂಡಿಸಿ ಚರ್ಚೆಗೆ ಪರಿಷತ್‌ನಲ್ಲಿ ಚರ್ಚೆಗೆ ಅವಕಾಶ ಕೇಳಿದ್ದೆ. ಆದರೆ ಬಿಜೆಪಿಯವ್ರ ಗದ್ದಲ ಮಾಡಿದ್ರು ಎಂದಿರುವ ಹರಿಪ್ರಸಾದ್‌, ನಕಲಿ ಎನ್‌ಕೌಂಟರ್‌ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ಅಮಿತ್‌ ಷಾ ಇದೇ ಪ್ರಕರಣದಲ್ಲಿ ಗಡಿಪಾರು ಆಗಿದ್ದರು ಎನ್ನುವ ಮೂಲಕ ಗುಜರಾತ್‌ನಲ್ಲಿ ನಡೆದಿದ್ದ ಇಶ್ರತ್‌ ಜಹಾನ್‌ ನಕಲಿ ಎನ್‌ಕೌಂಟರ್‌ ಕೇಸ್‌‌ ಬಗ್ಗೆ ಪರೋಕ್ಷವಾಗಿ ವಾಗ್ದಾಳಿ ಮಾಡಿದ್ದಾರೆ.

Kannada Sahitya Sammelana : ಅನುಕೂಲಕ್ಕೆ ಒಬ್ಬ ಗಂ**... ಎಂದ ಮುಸ್ಲಿಂ ನಾಯಕ #pratidhvani #bjpvscongress

ಸಿ.ಟಿ.ರವಿ ಬಂಧನ ಬಗ್ಗೆ ಸಿಬಿಐ ಅಥವಾ ನ್ಯಾಯಾಂಗ ತನಿಖೆಗೆ ಒತ್ತಾಯ ಮಾಡಿರುವುದಕ್ಕೆ ಮಾಜಿ ಸಂಸದ ಡಿ.ಕೆ.ಸುರೇಶ್ ತಿರುಗೇಟು ನೀಡಿದ್ದಾರೆ. ಬಿಜೆಪಿಯವ್ರು ಸಿಬಿಐ‌ನ ಮನೆಯೊಳಗಿನ ಸರಕು ಮಾಡಿಕೊಂಡಿದ್ದಾರೆ. ಮನೆ ಕೆಲಸದವರ ರೀತಿ ಬಳಸಿಕೊಳ್ಳುತ್ತಿದ್ದಾರೆ. ಸಿ.ಟಿ. ರವಿ ನಡೆದುಕೊಂಡ ರೀತಿ ಬಿಜೆಪಿಗೆ ಶೋಭೆ ತರುತ್ತಾ..? ಎಂದಿರುವ ಡಿ.ಕೆ ಸುರೇಶ್‌, ಪದೇ ಪದೇ ಹೆಣ್ಮಕ್ಕಳ ಬಗ್ಗೆ ಲಘುವಾಗಿ ಮಾತನಾಡ್ತಾರೆ. ಬಿಜೆಪಿಯ ಸಂಸ್ಕೃತಿ ಎಲ್ಲೋಯ್ತು ಎಂದು ಪ್ರಶ್ನಿಸಿದ್ದಾರೆ. ಇನ್ನು ಅಂಬೇಡ್ಕರ್ ಮೇಲಿನ ಹೇಳಿಕೆ ಮುಚ್ಚಿ ಹಾಕಲು ಕುತಂತ್ರ ಮಾಡ್ತಿದ್ದಾರೆ ಎಂದಿದ್ದಾರೆ. ಜೊತೆಗೆ ಡಿ.ಕೆ ಶಿವಕುಮಾರ್‌ರಿಂದ ಜೀವ ಬೆದರಿಕೆ ಅನ್ನೋ ವಿಚಾರವಾಗಿ ಮಾತನಾಡಿ, ರಾಜ್ಯ ಪೊಲೀಸ್ ಇಲಾಖೆ ಮೇಲೆ ನಂಬಿಕೆ ಇಲ್ಲ ಅಂದ್ರೆ ಎಸ್‌ಪಿಜಿ ಬಳಕೆ ಮಾಡಿಕೊಳ್ಳಲಿ ಎಂದು ಟಾಂಗ್‌ ಕೊಟ್ಟಿದ್ದಾರೆ.

Tags: ct ravi about lakshmi hebbalkarct ravi about laxmi hebbalkarct ravi lakshmi hebbalkarct ravi lakshmi hebbalkar fightct ravi on lakshmi hebbalkarct ravi statement on lakshmi hebbalkarct ravi vs lakshmi hebbalkarct ravi vs laxmi hebbalkarLakshmi hebbalkarlakshmi hebbalkar lashes out at ct ravilakshmi hebbalkar newslakshmi hebbalkar sonlakshmi hebbalkar speechlakshmi hebbalkar statementlakshmi hebbalkar vs ct ravi
Previous Post

₹15,000 ಕೋಟಿ ವೆಚ್ಚದಲ್ಲಿ ಭದ್ರಾವತಿ ಎಂ.ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಗೆ ಮರುಜೀವ

Next Post

ಬೆಳಗಾವಿ ಪೊಲೀಸ್‌ ಕಮಿಷನರ್‌ ವಿರುದ್ಧ ಕೇಂದ್ರ ಸಚಿವರು ಗರಂ..

Related Posts

​ಕನ್ನಡಿಗ ರಾಹುಲ್​ ಅಬ್ಬರಕ್ಕೆ ಮಣಿದ ಆರ್​ಸಿಬಿ ; ಡೆಲ್ಲಿಗೆ ರೋಚಕ ಜಯ..
Top Story

​ಕನ್ನಡಿಗ ರಾಹುಲ್​ ಅಬ್ಬರಕ್ಕೆ ಮಣಿದ ಆರ್​ಸಿಬಿ ; ಡೆಲ್ಲಿಗೆ ರೋಚಕ ಜಯ..

by ಪ್ರತಿಧ್ವನಿ
April 18, 2026
0

ಬೆಂಗಳೂರು : ಐಪಿಎಲ್ 2026ರ 26ನೇ ಪಂದ್ಯ ಶನಿವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ದೆಹಲಿ ಕ್ಯಾಪಿಟಲ್ಸ್ ನಡುವೆ ನಡೆಯಿತು. ಈ ರೋಚಕ ಪಂದ್ಯದಲ್ಲಿ, ಡೆಲ್ಲಿ ಕ್ಯಾಪಿಟಲ್ಸ್...

Read moreDetails
ನವೀಕರಿಸಬಹುದಾದ ಇಂಧನದಲ್ಲಿ ಭಾರತದಲ್ಲಿ ಕರ್ನಾಟಕ ಮುಂಚೂಣಿಯಲ್ಲಿರುವುದು ಹೆಮ್ಮೆಯ ಸಂಗತಿ : ಸಿಎಂ ಸಂತಸ..

ನವೀಕರಿಸಬಹುದಾದ ಇಂಧನದಲ್ಲಿ ಭಾರತದಲ್ಲಿ ಕರ್ನಾಟಕ ಮುಂಚೂಣಿಯಲ್ಲಿರುವುದು ಹೆಮ್ಮೆಯ ಸಂಗತಿ : ಸಿಎಂ ಸಂತಸ..

April 18, 2026
ಜಿಬಿಎ ಚುನಾವಣೆ ಗೊಂದಲ: ಅಂತಿಮ ಮತದಾರರ ಪಟ್ಟಿ ಪ್ರಕಟ

ಜಿಬಿಎ ಚುನಾವಣೆ ಗೊಂದಲ: ಅಂತಿಮ ಮತದಾರರ ಪಟ್ಟಿ ಪ್ರಕಟ

April 18, 2026
ಮಹಿಳಾ ಮೀಸಲಾತಿ ವಿವಾದ ತೀವ್ರ: ಮಸೂದೆ ಸೋಲಿಗೆ ಕಾರಣವೇನು? ಕಾಂಗ್ರೆಸ್-ಬಿಜೆಪಿ ತರ್ಕ

ಮಹಿಳಾ ಮೀಸಲಾತಿ ವಿವಾದ ತೀವ್ರ: ಮಸೂದೆ ಸೋಲಿಗೆ ಕಾರಣವೇನು? ಕಾಂಗ್ರೆಸ್-ಬಿಜೆಪಿ ತರ್ಕ

April 18, 2026
ಕಾಂಗ್ರೆಸ್, ಡಿಎಂಕೆ ಮೈತ್ರಿಯು 40 ವರ್ಷಗಳ ಇತಿಹಾಸ ಹೊಂದಿದೆ : ದ್ರಾವಿಡ ನೆಲದಲ್ಲಿ ಮೋದಿ ವಿರುದ್ಧ ಗುಡುಗಿದ ಡಿಕೆಶಿ..

ಕಾಂಗ್ರೆಸ್, ಡಿಎಂಕೆ ಮೈತ್ರಿಯು 40 ವರ್ಷಗಳ ಇತಿಹಾಸ ಹೊಂದಿದೆ : ದ್ರಾವಿಡ ನೆಲದಲ್ಲಿ ಮೋದಿ ವಿರುದ್ಧ ಗುಡುಗಿದ ಡಿಕೆಶಿ..

April 18, 2026
Next Post
ನಕಲಿ ಎನ್‌ಕೌಂಟರ್‌ ಆರೋಪ.. ತಿರುಗಿ ಬಿದ್ದ ಕಾಂಗ್ರೆಸ್‌‌ ಅಟ್ಯಾಕ್‌‌..

ಬೆಳಗಾವಿ ಪೊಲೀಸ್‌ ಕಮಿಷನರ್‌ ವಿರುದ್ಧ ಕೇಂದ್ರ ಸಚಿವರು ಗರಂ..

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada