ಮೋದಿ ಸರ್ಕಾರದ ‘ಸಕಾರಾತ್ಮಕತೆ’ ಅಭಿಯಾನಕ್ಕೆ ಸೇರಲು ಆರ್‌ಎಸ್‌ಎಸ್ ಅಧಿಕೃತವಾಗಿ ಒಪ್ಪಿಕೊಂಡಾಗ ಬಿಜೆಪಿ ವಲಯದಲ್ಲಿ ಸಂತೋಷ ಎದ್ದುಕಂಡಿತ್ತು. ಆರ್ಎಸ್ಎಸ್‌ನ ಕೋವಿಡ್ ರೆಸ್ಪಾನ್ಸ್ ತಂಡದಿಂದ ಸಂಯೋಜಿಸಲ್ಪಟ್ಟ ‘ಪಾಸಿಟಿವಿಟಿ ಅನ್ಲಿಮಿಟೆಡ್’ ಎಂಬ ಐದು ದಿನಗಳ ಉಪನ್ಯಾಸ ಸರಣಿಯನ್ನು ದೊಡ್ಡ ಮಾಧ್ಯಮಗಳ ಸಹಾಯದೊಂದಿಗೆ ಮಾರ್ಕೆಟಿಂಗ್ ಮಾಡಲಾಯಿತು. ಇದು ಮೇ 11 ರಂದು ಪ್ರಾರಂಭವಾದ ಈ ಅಭಿಯಾನದಲ್ಲಿ ಸಂಘದ ಪರ ಗುರುಗಳಾದ ಶ್ರೀ ಶ್ರೀ ರವಿಶಂಕರ್ ಮತ್ತು ಸದ್ಗುರು ಜಗ್ಗಿ ವಾಸುದೇವ್, ಸಮಾಜ ಸೇವಕಿ ನಿವೇದಿತಾ ಭಿಡೆ ಮತ್ತು ಅಜೀಮ್ ಪ್ರೇಮ್‌ಜಿಯವರೂ ಇದ್ದರು. ಸರ್ಸಂಗ್‌ಚಾಲಕ್ ಮೋಹನ್ ಭಾಗವತ್ ಅವರ ಉಪಸ್ಥಿತಿಯು ಈ ತಂಡದ ತೂಕವನ್ನು ಮತ್ತಷ್ಟು ಹೆಚ್ಚಿಸಿತು.
ಆದರೆ ಮೋಹನ್ ಭಾಗ್ವತ್ ಅವರು ಮೊದಲ ಕೋವಿಡ್-19 ಅಲೆಯ ನಂತರ ಸುರಕ್ಷತೆಯನ್ನು ಕಡಿಮೆಗೊಳಿಸಿದ್ದಕ್ಕಾಗಿ ಮೇ 15 ರಂದು ಮಾಡಿದ ಭಾಷಣದಲ್ಲಿ ಸರ್ಕಾರ ಮತ್ತು ಅವರ ಅಡಿಯಲ್ಲಿರುವ ಆಡಳಿತಯಂತ್ರವನ್ನು ದೂಷಿಸುತ್ತಾ “ವೈದ್ಯರ ಸೂಚನೆಯ ಹೊರತಾಗಿಯೂ ಸರ್ಕಾರ, ಆಡಳಿತ, ಸಾರ್ವಜನಿಕರು ಎಲ್ಲರೂ ಮೊದಲ ಅಲೆಯ ನಂತರ ತಮ್ಮ ಸುರಕ್ಷತೆಯ ಕಡೆಗೆ ಗಮನಹರಿಸುವುದನ್ನು ಕೈಬಿಟ್ಟರು. ಆದ್ದರಿಂದಲೇ ನಾವು ಈ ಪರಿಸ್ಥಿತಿಯನ್ನು ಎದುರಿಸುತ್ತಿದ್ದೇವೆ ” ಎಂದು ಹೇಳಿದ್ದರು.
ಇದೇ ಟೀಕೆಯನ್ನು ಬೇರೆ ಯಾರಾದರೂ ಮಾಡಿದ್ದರೆ ದುರಂತದ ಹೊಣೆಯನ್ನು ವರ್ಗಾಯಿಸುವ ಪ್ರಯತ್ನ ಎನ್ನಬಹುದಿತ್ತು. ಆದರೆ ಬಿಜೆಪಿಯ ಬೆನ್ನೆಲುಬಿನಂತೆ ಕಾರ್ಯ ನಿರ್ವಹಿಸುವ ಆರ್‌ಎಸ್ಎಸ್ ಮುಖ್ಯಸ್ಥರಾದ ಭಾಗವತ್‌ರಿಂದ ಮೋದಿ ನಾಯಕತ್ವದ ವ್ಯವಸ್ಥೆಯ ಮೇಲಿನ ಟೀಕೆ ಮೊನಚಾದ ದಾಳಿಗೆ ಸಮಾನವಾಗಿದೆ. ಹಾಗಾಗಿಯೇ ಸರ್ಕಾರ ಅದರ ಮಹತ್ವವನ್ನು ಕಡಿಮೆ ಮಾಡುವುದನ್ನು ಮೊದಲ ಆಯ್ಕೆಯಾಗಿ ಪರಿಗಣಿಸಿತು. ಇದರ ಅಂಗವಾಗಿ ಮುಖ್ಯವಾಹಿನಿ ಸರ್ಕಾರಿ ಸ್ನೇಹಿ ಮಾಧ್ಯಮಗಳು ಭಾಗವತ್‌ರ ಹೇಳಿಕೆಗೆ ಪ್ರಾಮುಖ್ಯ ಕೊಡಲಿಲ್ಲ ಅಥವಾ ಕಡಿಮೆ ಪ್ರಾಮುಖ್ಯತೆ ಕೊಟ್ಟಿತು. ಆರ್‌ಎಸ್ಎಸ್ ಮುಖವಾಣಿ ‘ಆರ್ಗನೈಸರ್’ ಸಹ ಭಾಗವತ್ ಟೀಕೆ ಮಾಡಿರುವುದನ್ನು ಪ್ರಕಟಿಸದೆ ಮೋದಿ ಸರ್ಕಾರಕ್ಕೆ ಸಹಾಯ ಮಾಡಿತು. ಅವರ ಟೀಕೆಗಳ ಮಹತ್ವವನ್ನು ಕಡಿಮೆ ಮಾಡಲು ಆರ್‌ಎಸ್ಎಸ್‌ಗೆ ಸಂಬಂಧಿಸಿದ ಅಂಕಣಕಾರರಿಂದ ಸಹ ಸರ್ಕಾರದ ಪರವಾಗಿ ಅಂಕಣ ಬರೆಯಿಸಲಾಯಿತು.
ಭಾಗವತ್ ಟೀಕಿಸುವವರೆಗೂ ಸರ್ಕಾರಿ ಪರ ಚಾನೆಲ್‌ಗಳು ಮತ್ತು ಸುದ್ದಿ ನಿರೂಪಕರು ಕೋವಿಡ್ ಎರಡನೇ ಅಲೆಯ ನಿಯಂತ್ರಣದ ವೈಫಲ್ಯಕ್ಕೆ ‘ವ್ಯವಸ್ಥೆ’ ಕಾರಣವೇ ಹೊರತಾಗಿ ಆಡಳಿತಗಾರರಲ್ಲ ಎಂದು ಪ್ರತಿಪಾದಿಸುತ್ತಿದ್ದವು. ಈ ಪ್ರತಿಪಾದನೆಗೆ ಪೂರಕವಾಗಿ ವ್ಯವಸ್ಥೆಯ ಪ್ರತಿಯೊಂದು ವಿಭಾಗವೂ ವಿಫಲವಾಗಿದೆ ಎಂದೇ ಬಿಂಬಿಸಲಾಗಿತ್ತು. ಸಮಯೋಚಿತ ಸಲಹೆಗಳನ್ನು ನೀಡಲು ವಿಫಲವಾದ ವಿಜ್ಞಾನಿಗಳು, ಕೇಂದ್ರದ ಸಲಹೆಗಳನ್ನು ನಿರ್ಲಕ್ಷಿಸಿದ ರಾಜ್ಯ ಸರ್ಕಾರಗಳು, ಉತ್ಪಾದನೆಯನ್ನು ಹೆಚ್ಚಿಸದ ಲಸಿಕೆ ಉತ್ಪಾದಕರು ಮತ್ತು COVID-19 ನಿಯಮಗಳನ್ನು ನಿರ್ಲಕ್ಷಿಸಿದ ಜನರು ಹೀಗೆ ಎಲ್ಲವನ್ನೂ ವ್ಯವಸ್ಥೆಯ ಮೇಲೆ ಹೊರಿಸಲಾಗಿತ್ತು.

ಭಾಗವತ್ ಅವರ ಭಾಷಣಕ್ಕೆ ಒಂದು ದಿನ ಮೊದಲೂ, ಮಾಧ್ಯಮಗಳು ಇದೇ ರೀತಿಯ ಇನ್ಪುಟ್‌ಗಳನ್ನು ಹೊಂದಿರುವ ಕಥೆಗಳನ್ನು ಪ್ರಕಟಿಸಿದ್ದವು. ಸೆಪ್ಟೆಂಬರ್ 2020 ರಿಂದ ಏಪ್ರಿಲ್ 2021 ರವರೆಗೆ, ಪ್ರಧಾನ ಮಂತ್ರಿ ಎರಡನೇ ಅಲೆಯ ಅಪಾಯದ ಬಗ್ಗೆ ಆರು ಬಾರಿ ರಾಜ್ಯಗಳಿಗೆ ಎಚ್ಚರಿಕೆ ನೀಡಿದ್ದರು. ಆದರೆ ರಾಜ್ಯಗಳು ಅವರ ಸೂಚನೆಗಳನ್ನು ಪಾಲಿಸಲು ವಿಫಲವಾಗಿದೆ ಎಂದೇ ಬರೆಯಲಾಗಿತ್ತು.
ಭಾಗವತ್ ಅವರ ಈ ಹೇಳಿಕೆಯು 2014 ರ ನಂತರ ಆರ್‌ಎಸ್‌ಎಸ್ ಮುಖ್ಯಸ್ಥರಿಂದ ಬಂದ ಮೋದಿ ಸರ್ಕಾರದ ಮೇಲಿನ ಮೊದಲ ಸಾರ್ವಜನಿಕ ಟೀಕೆ.
ಭಗವತ್ ತಮ್ಮ ಸರ್ಕಾರದ ಮೇಲೆ ದಾಳಿ ನಡೆಸಲು ಏಕೆ ಆಯ್ಕೆ ಮಾಡಿಕೊಂಡರು? ಆರ್‌ಎಸ್‌ಎಸ್ ಬೆಂಬಲಿಗರ ಪ್ರತಿಕ್ರಿಯೆಯಿಂದ ಅವರು ಪ್ರಚೋದಿತರಾದರು ಎಂಬುದು ಒಂದು ವಿವರಣೆಯಾಗಿದೆ. ಅಥವಾ ಮೋದಿ ಸುರಕ್ಷತೆಯನ್ನು ಕಡಿಮೆ ಮಾಡುವುದು ಪ್ರಧಾನಮಂತ್ರಿಯ ಕಡೆಯಿಂದ ಆಗುವ ಗಂಭೀರವಾದ ನಷ್ಟವಾಗಿದೆ ಎಂದು ಪ್ರಾಮಾಣಿಕವಾಗಿ ನಂಬುತ್ತಾರೆ. ಮತ್ತು ಅವರು ಇದು ಮೋದಿಗೆ ಎಚ್ಚರಿಕೆ ನೀಡುವ ಸಮಯ ಮತ್ತು ತಿದ್ದಿಕೊಳ್ಳಲು ಒತ್ತಾಯಿಸುವ ಸಮಯ ಎಂದು ಭಾವಿಸುತ್ತಾರೆ.
ಸಾರ್ವಜನಿಕವಾಗಿ ಈ ಟೀಕೆಯಿಂದ ಏನೂ ಆಗಿಲ್ಲ ಎಂಬಂತೆ ವರ್ತಿಸಿದರೂ, ಭಾಗವತ್‌ರ ಭಾಷಣವು ಅದರ ಕೆಲಸ ಮಾಡಿದೆ. ಮೋದಿಯ COVID ವೈಫಲ್ಯಗಳನ್ನು ಮುಚ್ಚಿಹಾಕಲು ಮೇ ಆರಂಭದಲ್ಲಿ, ಮೋದಿಯವರ ಅವರ ‘ಸಮಯೋಚಿತ’ ಮಧ್ಯಸ್ಥಿಕೆಗಳು ಮತ್ತು ‘ನಾಯಕತ್ವ’ದ ಮೂಲಕ ಕೋವಿಡ್ ಅನ್ನು ಯಶಸ್ವಿಯಾಗಿ ನಿಯಂತ್ರಿಸಲಾಗಿದೆ ಎಂದು ಸಾಮಾಜಿಕ ಮಾಧ್ಯಮ ಮತ್ತು ಮಾಧ್ಯಮಗಳಲ್ಲಿ ಪ್ರಚಾರ ಪಡಿಸಲಾಗಿತ್ತು.
ಇದರಂತೆ ಮೇ 4, 2021 ರಂದು ಸರ್ಕಾರಿ ಅಧಿಕಾರಿಗಳಿಗೆ ಮಾಧ್ಯಮ ಕಾರ್ಯಾಗಾರವನ್ನು ನಡೆಸಲಾಯಿತು. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಪಾತ್ರದ ಬಗ್ಗೆ ನಿರ್ದಿಷ್ಟ ಉಲ್ಲೇಖಗಳನ್ನು ಹೊಂದಿರುವ ವಿಶೇಷ COVID- ಸಂಬಂಧಿತ ಪತ್ರಿಕಾ ಹೇಳಿಕೆಗಳು ಇರಬೇಕೆಂದು ಅದು ನಿರ್ಧರಿಸಿತು. “ಪ್ರಧಾನಿ ಮೋದಿಯವರ ನಾಯಕತ್ವದಲ್ಲಿ” ಅಥವಾ “ಪ್ರಧಾನಿ ಮೋದಿ ನಿರ್ಧರಿಸಿದಂತೆ” ಎಂಬಂತಹ ನುಡಿಗಟ್ಟುಗಳ ಬಳಕೆ ಮಾಡಲು ಸೂಚಿಸಲಾಯಿತು.
ಪ್ರತಿ ವಿಭಾಗದ ಜಂಟಿ ಕಾರ್ಯದರ್ಶಿ (ಮಾಧ್ಯಮ) ಸೇರಿದಂತೆ 300 ಕ್ಕೂ ಹೆಚ್ಚು ಉನ್ನತ ಅಧಿಕಾರಿಗಳು ಪರಿಣಾಮಕಾರಿ ಸಂವಹನಗಳ ಬ್ಯಾನರ್ ಅಡಿಯಲ್ಲಿ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು. ‘ಸರ್ಕಾರದ ಸಕಾರಾತ್ಮಕ ಚಿತ್ರಣವನ್ನು ಹೇಗೆ ರಚಿಸುವುದು’ ಮತ್ತು ‘ಸಕಾರಾತ್ಮಕ ಕಥೆಗಳು ಮತ್ತು ಸಾಧನೆಗಳನ್ನು ಪರಿಣಾಮಕಾರಿಯಾಗಿ ಎತ್ತಿ ತೋರಿಸುವ ಮೂಲಕ ಸಾರ್ವಜನಿಕ ಗ್ರಹಿಕೆಗಳನ್ನು ಹೇಗೆ ನಿರ್ವಹಿಸುವುದು’ ಎಂದು ಅಧಿಕಾರಿಗಳಿಗೆ ಗೊತ್ತುಪಡಿಸಲಾಯಿತು.

ಈ ಸಂದರ್ಭದಲ್ಲಿ ಸರ್ಕಾರವು ‘ಸೂಕ್ಷ್ಮವಾಗಿ, ದಿಟ್ಟವಾಗಿ, ತ್ವರಿತವಾಗಿ, ಕಠಿಣವಾಗಿ ಕೆಲಸ ಮಾಡುವುರಂತೆ ಬಿಂಬಿಸಬೇಕು, ಕೋವಿಡ್‌ನಿಂದ ಗುಣಮುಖರಾದವರ ಬಗೆಗಿನ ಡೇಟಾವನ್ನು ಹೈಲೈಟ್ ಮಾಡಬೇಕು ಮತ್ತು ಪ್ರತಿ ಇಲಾಖೆಯು ಪಡೆಯಬಹುದಾದ ಸಕಾರಾತ್ಮಕ ಕಥೆಗಳನ್ನು ಹೆಚ್ಚು ಹೆಚ್ಚು ಪ್ರಚಾರಪಡಿಸಬೇಕು ಎಂಬ ಪ್ರಸ್ತುತಿ ಮುಂದಿಡಲಾಗಿತ್ತು. ಮೋದಿಯ ನೇತೃತ್ವದ ಆಡಳಿತವು ಸಾಂಕ್ರಾಮಿಕ ರೋಗವನ್ನು ಎದುರಿಸಲು ವಿಸ್ತಾರವಾದ ಯೋಜನೆಗಳನ್ನು ಮಾಡದೇ ಇದ್ದಿದ್ದರೆ ಕರೋನಾ ದುರಂತ ಇನ್ನೂ ಕೆಟ್ಟದಾಗಿರುತ್ತಿತ್ತು ಎಂದು ಬಿಂಬಿಸಲಾಯಿತು.
ಆದರೆ ಭಾಗವತ್ ಅವರ ಟೀಕೆಯು ಮೋದಿಯವರು ಬಹಳ ದೂರದೃಷ್ಟಿಯಿಂದ ವರ್ತಿಸಿದ್ದಾರೆ ಮತ್ತು ಭಾರತವನ್ನು ವಿಪತ್ತಿನಿಂದ ರಕ್ಷಿಸಿದ್ದಾರೆ ಎನ್ನುವ ಕಲ್ಪನೆಯಿಂದ ಬಹು ದೂರ ಇದೆ.
ಈ ಹಾನಿಯನ್ನು ಸರಿಪಡಿಸಲು ಸಾಂಕ್ರಾಮಿಕ ರೋಗವನ್ನು ಹತೋಟಿಗೆ ತರಲು ಮೋದಿ ಶಕ್ತಿಮೀರಿ ಶ್ರಮಿಸುತ್ತಿದ್ದಾರೆ ಎಂದು ಬಿಂಬಿಸಲು ಪಕ್ಷದ ಸ್ಟ್ರಾಟರ್ಜಿಸ್ಟ್‌ಗಳು ಹೊಸ ಯೋಜನೆಗಳೊಂದಿಗೆ ಮುಂದೆ ಬಂದಿದ್ದಾರೆ. ಪತ್ರಿಕೆಗಳಲ್ಲಿ ಪರಿಣಾಮಕಾರಿ ಶೀರ್ಷಿಕೆಗಳುಳ್ಳ ಲೇಖನಗಳನ್ನು ಬರೆಯಿಸಲು ಉದ್ದೇಶಿಸಲಾಗಿದೆ. ಉದಾಹರಣೆಗೆ
ಮೃತರಿಗೆ ಗೌರವ ಸಲ್ಲಿಸುವಾಗ ಪ್ರಧಾನಿ ಗಂಟಲು ಕಟ್ಟಿತು: ಈ ವೈರಸ್ ಅನೇಕ ಪ್ರೀತಿಪಾತ್ರರನ್ನು ಕರೆದೊಯ್ಯಿತು (ಮೇ 21)
ಪಿಎಂ ಮೋದಿ ಅವರು ಕೋವಿಡ್ ಲಸಿಕೆ ವ್ಯರ್ಥವಾಗುವುದನ್ನು ತಡೆಯಬೇಕೆಂದು ರಾಜ್ಯಗಳಿಗೆ ಒತ್ತಾಯಿಸಿದ್ದಾರೆ (ಮೇ 20)
ವಾರಣಾಸಿಯ ವೈದ್ಯರೊಂದಿಗೆ ಮತ್ತು ಅರೆ ವೈದ್ಯಕೀಯ ಸಿಬ್ಬಂದಿಯೊಂದಿಗೆಗೆ ಸಂವಹನ ನಡೆಸಲಿರುವ ಪಿಎಂ ಮೋದಿ(ಮೇ21)
ಪಿಎಂ ಮೋದಿ ಯುಪಿ, ರಾಜಸ್ಥಾನ, ಛತ್ತೀಸ್ಗಢದ ಸಿಎಂಗಳೊಂದಿಗೆ ಮಾತನಾಡುತ್ತಾರೆ (ಮೇ 22)
ಬಿಜೆಪಿಯ ಹಿರಿಯ ನಾಯಕರು ಕಾಂಗ್ರೆಸ್‌ನ ನಕಲಿ ‘ಟೂಲ್‌ಕಿಟ್’ ಪ್ರಚಾರ ಮಾಡಿದ್ದು ಪರಿಷ್ಕೃತ ಪಿಆರ್ ಕಾರ್ಯತಂತ್ರದ ಭಾಗವೇ ಅಥವಾ ಮೂಲ ಯೋಜನೆಯೇ ಭಾಗವೇ ಎಂಬುವುದು ಸ್ಪಷ್ಟವಾಗಿಲ್ಲ. ಆದರೆ ಎರಡೂ ರೀತಿಯಲ್ಲಿ ಇದು ಮೋದಿಯವರ ಬಗಿಗಿನ ನಕಾರಾತ್ಮಕ ಅನಿಸಿಕೆಗಳನ್ನು ಹಿಮ್ಮೆಟ್ಟಿಸುವ ಯೋಜನೆ ಎಂಬುವುದು ಸ್ಪಷ್ಟವಾಗಿದೆ. ಆದರೆ ಅವರಿಗಿರುವ ಅಪಾಯವೆಂದರೆ ಅವರ ಬಗೆಗಿನ ಸಾರ್ವಜನಿಕ ಗ್ರಹಿಕೆ ಬದಲಾಗದಿದ್ದರೆ ಚಲಾಯಿಸಲು ಬಿಜೆಪಿಗೆ ಬೇರೆ ಯಾವುದೇ ಕಾರ್ಡ್‌ಗಳಿರುವುದಿಲ್ಲ.
ಕೃಪೆ: ದಿ ವೈರ್