2ನೇ ಡೋಸ್ ನಂತರ ರೂಪಾಂತರ ವೈರಸ್ ವಿರುದ್ಧ ಲಸಿಕೆಗಳು ಪರಿಣಾಮಕಾರಿ: ಯುಕೆ ಸಂಶೋಧನೆ

ಯುಕೆ ಸರ್ಕಾರದ ಸಂಶೋಧನೆಯ ಆಧಾರದ ಮೇಲೆ ವರದಿ ಮಾಡಿರುವ ಫೈನಾನ್ಷಿಯಲ್ ಟೈಮ್ಸ್ ಪ್ರಕಾರ, ಭಾರತದಲ್ಲಿ ಮೊದಲು ಗುರುತಿಸಲ್ಪಟ್ಟ ವೈರಸ್ ರೂಪಾಂತರದಿಂದ ಹರಡುವ ರೋಗಲಕ್ಷಣದ ಸೋಂಕಿನ ವಿರುದ್ಧ ಬಲವಾದ ರಕ್ಷಣೆ ನೀಡಲು ಖಡ್ಡಾಯವಾಗಿ ಎರಡು-ಡೋಸ್ ಕೋವಿಡ್ -19 ಲಸಿಕೆಗಳು ಅಗತ್ಯವಾಗಿವೆ. ಮತ್ತು ಭಾರತದಲ್ಲಿನ ರೂಪಾಂತರ ವೈರಸ್ನಿಂದ ಸುರಕ್ಷಿತೆಗಾಗಿ ಎಲ್ಲರಿಗೂ ಎರಡು ಲಸಿಕೆ ಹಾಕುವುದು ಅಗತ್ಯವಾಗಿದೆ ಎಂದು ಯುಕೆ ಸರ್ಕಾರ ತಿಳಿಸಿದೆ.

ಯುಕೆ ಡಿಪಾರ್ಟ್ಮೆಂಟ್ ಆಫ್ ಹೆಲ್ತ್ ಅಂಡ್ ಸೋಶಿಯಲ್ ಕೇರ್ ನ ಕಾರ್ಯನಿರ್ವಾಹಕ ಸಂಸ್ಥೆ ಪಬ್ಲಿಕ್ ಹೆಲ್ತ್ ಇಂಗ್ಲೆಂಡ್ ನಡೆಸಿದ ಅಧ್ಯಯನವು ಆಕ್ಸ್‌ಫರ್ಡ್ ಅಸ್ಟ್ರಾಜೆನೆಕಾ / ಕೋವಿಶೀಲ್ಡ್ ಮತ್ತು ಫಿಜರ್ ಲಸಿಕೆ ಎಂಬ ಎರಡು ಕೋವಿಡ್ -19 ಲಸಿಕೆಗಳು B .1.6172 ಮತ್ತು ಯುಕೆ ಯಲ್ಲಿ ಮೊದಲು ಪತ್ತೆಯಾದ B. 1.1.7 ರೂಪಾಂತರ ವೈರಸ್ ವಿರುದ್ಧ ಹೋರಾಡಲು ಈ ಲಸಿಕೆಗಳು ನೀಡಲೇಬೇಕು ಎಂದು ಹೇಳಿದೆ.

ಅದ್ಯಯನದ ಮಾಹಿತಿ

ಫಿಜರ್-ಬಯೋಂಟೆಕ್ ನ ಎರಡು ಡೋಸ್ ನೀಡಿದ ಎರಡು ವಾರಗಳ ನಂತರ B .1.617.2 ರೂಪಾಂತರ ರೋಗಲಕ್ಷಣ ಕಾಯಿಲೆಯ ವಿರುದ್ಧ ಶೇಕಡಾ 88 ರಷ್ಟು ಪರಿಣಾಮಕಾರಿಯಾಗಿದೆ. B 1.1.7 ರೂಪಾಂತರದ ವಿರುದ್ಧ ಶೇಕಡಾ 93 ರಷ್ಟು ಪರಿಣಾಮಕಾರಿಯಾಗಿದೆ ಎಂದು ವರದಿಯಾಗಿದೆ.

ಅಸ್ಟ್ರಾಜೆನೆಕಾ ಲಸಿಕೆಯ ಎರಡು ಡೋಸ್ ನೀಡದ ಮೇಲೆ B .1.617.2 ರೂಪಾಂತರ ರೋಗಲಕ್ಷಣ ಕಾಯಿಲೆಯ ವಿರುದ್ಧ ಶೇಕಡಾ 60 ರಷ್ಟು ಪರಿಣಾಮಕಾರಿಯಾಗಿದ್ದು, ಬಿ .1.1.7 ರೂಪಾಂತರ ವಿರುದ್ಧದ ಶೇಕಡಾ 66 ರಷ್ಟು ಪರಿಣಾಮಕಾರಿಯಾಗಿದೆ ಎಂದು ವರದಿಯಾಗಿದೆ.

ಕರೋನದ ಎರಡೂ ಲಸಿಕೆಗಳು B.1.617.2 ರೂಪಾಂತರ ರೋಗಲಕ್ಷಣ ಕಾಯಿಲೆಯ ವಿರುದ್ಧ 33% ಪರಿಣಾಮಕಾರಿಯಾಗಿವೆ. ಮೊದಲ ಡೋಸ್‌ನ ಮೂರು ವಾರಗಳ ನಂತರ B.1.1.7 ರೂಪಾಂತರದ ವಿರುದ್ಧ ಶೇಕಡಾ 50 ರಷ್ಟು ಪರಿಣಾಮಕಾರಿಯಾಗಿದೆ ಎಂದು ವರದಿಯಾಗಿದೆ.

ಏಪ್ರಿಲ್ 5 ರಿಂದ ಎಲ್ಲಾ ವಯೋಮಾನದವರ ಡೇಟಾವನ್ನು ಹೊಂದಿದೆ ಮತ್ತು B .1.617.2 ಸೋಂಕಿಗೆ ಒಳಗಾದ 1,054 ಜನರನ್ನು ಒಳಗೊಂಡಿದೆ. 2020 ರ ಡಿಸೆಂಬರ್‌ನಿಂದ 65 ವರ್ಷಕ್ಕಿಂತ ಮೇಲ್ಪಟ್ಟವರನ್ನು ಸಹ ಈ ಡೇಟಾದಲ್ಲಿ ಒಳಗೊಂಡಿದೆ.

ಮೇ 20ರ ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿಯ ಪ್ರಕಾರ, ಇಂಡಿಯನ್ ಸಾರ್ಸ್-ಕೋವಿ -2 ಜೀನೋಮಿಕ್ಸ್ ಕನ್ಸೋರ್ಟಿಯಂನ ಅಡಿಯ ಲ್ಯಾಬ್‌ಗಳಲ್ಲಿ ಪರೀಕ್ಷಿಸಿದ 20,000 ಕ್ಕೂ ಹೆಚ್ಚು ಮಾದರಿಗಳಲ್ಲಿ B .1.617 ಅತ್ಯಂತ ಪ್ರಬಲವಾದ ರೂಪಾಂತರವಾಗಿದೆ ಎಂದು ತಿಳಿಸುದ್ದಾರೆ.

ಮೇ 13 ರಂದು, ಕೇಂದ್ರವು ಕೋವಿಶೀಲ್ಡ್ ಲಸಿಕೆಯ ಮೊದಲ ಮತ್ತು ಎರಡನೆಯ ಪ್ರಮಾಣಗಳ ನಡುವಿನ ಮಧ್ಯಂತರ ಅಂತರವನ್ನು 6-8 ವಾರಗಳಿಂದ 12-16 ವಾರಗಳವರೆಗೆ ವಿಸ್ತರಿಸಿದನ್ನು ನಾವು ನೋಡಬಹುದು.

ಜನವರಿಯಲ್ಲಿ ವ್ಯಾಕ್ಸಿನೇಷನ್ ಡ್ರೈವ್ ಪ್ರಾರಂಭವಾದಾಗಿನಿಂದ ಭಾರತದಲ್ಲಿ ಶೇಕಡಾ 90 ಕ್ಕಿಂತ ಹೆಚ್ಚು ಕೋವಿಶೀಲ್ಡ್ ಲಸಿಕೆಯನ್ನು ನೀಡಿದ್ದಾರೆ ಎಂದು ವರದಿಯಾಗಿದೆ. ಆರೋಗ್ಯ ಸಚಿವಾಲಯದ ಅಂಕಿ ಅಂಶಗಳ ಪ್ರಕಾರ, ಮೇ 23 ರವರೆಗೆ, ಭಾರತದಲ್ಲಿ 19.5 ಕೋಟಿ ಜನರಿಗೆ ಲಸಿಕೆ ಹಾಕಲಾಗಿದೆ, ಅದರಲ್ಲಿ 15 ಕೋಟಿಗೂ ಹೆಚ್ಚು ಜನರು ಮೊದಲ ಪ್ರಮಾಣವನ್ನು ಪಡೆದಿದ್ದಾರೆ.

ಇಷ್ಟು ಬಿಗಡಾಯಿಸುವ ರೂಪಾಂತರ ವೈರಸ್ ಹರಡುವಿಕೆ ಮತ್ತು ಕರೋನ ರೂಪಾಂತರ ವಿರುದ್ಧ ಸುರಕ್ಷಿತವಾಗಿ ಹೋರಾಡಬೇಕು ಎಂದರೆ ಭಾರತದ ಎಲ್ಲರಿಗೂ ಎರಡು ಡೋಸ್ ಲಸಿಕೆ ಅತ್ಯಗತ್ಯವಾಗಿದೆ ಎಂದು ಯುಕೆ ಹೇಳಿದೆ.

ಆದಷ್ಟು ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳಿಗೆ ಲಸಿಕೆ ಸರಬರಾಜು ಮಾಡದಿದ್ದರೆ ರೂಪಾಂತರ ವೈರೆಸ್ಗೆ ಹೆಚ್ಚು ಜನರು ತುತ್ತಾಗಲಿದ್ದಾರೆ. ಮತ್ತು ನಿಗದಿತ ಸಮಯದಲ್ಲಿ ಲಸಿಕೆಯನ್ನು ನೀಡಿ ಜನರನ್ನು ಆತಂಕದಿಂದ ಪಾರು ಮಾಡಬೇಕಾಗಿದೆ.

Related posts

Latest posts

ಕುಂಭ ಮೇಳ ಸಂದರ್ಭದಲ್ಲಿ ಮಾಡಿದ 1 ಲಕ್ಷ ಕೋವಿಡ್-19 ಪರೀಕ್ಷೆಗಳು ನಕಲಿ: ತನಿಖಾ ವರದಿ

ಹರಿದ್ವಾರದ ಕುಂಭ ಮೇಳ ಸಂದರ್ಭದಲ್ಲಿ ಮಾಡಲಾಗಿದ ನಾಲ್ಕು ಲಕ್ಷ ಕೋವಿಡ್ ಟೆಸ್ಟ್ ಫಲಿತಾಂಶಗಳಲ್ಲಿ ಹಲವು ನಕಲಿ ಎಂದು ಉತ್ತರಾಖಂಡ ಆರೋಗ್ಯ ಇಲಾಖೆ ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ. ವಿವರವಾದ ತನಿಖೆಯ 1,600 ಪುಟಗಳಲ್ಲಿ...

ನನ್ನ ಹೇಳಿಕೆಯಿಂದ ನಾನು ಹಿಂದೆ ಸರಿಯಲ್ಲ : ನಟ ಚೇತನ್ ಸ್ಪಷ್ಟನೆ

ಬ್ರಾಹ್ಮಣ್ಯ ವಿರೋಧಿ ಹೇಳಿಕೆ ಎಂಬ ಆರೋಪದ ಅಡಿ ಇಂದು ಬಸವನಗುಡಿ ಪೊಲೀಸರ ಮುಂದೆ ಹಾಜರಾದ ನಟ ಚೇತನ್ ತನ್ನ ಹೇಳಿಕೆಯ ಬಗ್ಗೆ ಪೊಲೀಸರ ಮುಂದೆ ಸ್ಪಷ್ಟನೆ ದಾಖಲಿಸಿದ್ದಾರೆ. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ...

ಚಿಕ್ಕಬಳ್ಳಾಪುರ: ಅರ್ಹ ಫಲಾನುಭವಿಗಳನ್ನು ಗುರುತಿಸುವಲ್ಲಿ ವಿಫಲ: ರೈತರಿಗೆ ಸಿಗುತ್ತಿಲ್ಲ ಪರಿಹಾರ ಧನ

ಕೊರೋನಾ ಲಾಕ್ಡೌನ್ ಸಮಯದಲ್ಲಿ ಸಂಕಷ್ಟಕ್ಕೊಳಗಾದ ರೈತರಿಗೆ ಸರ್ಕಾರ ಪರಿಹಾರದ ಅಭಯ ಕೊಟ್ಟಿತು. ಆದರೆ ಅರ್ಹ ಫಲಾನುಭವಿಗಳನ್ನ ಗುರುತಿಸುವಲ್ಲಿ ವಿಫಲವಾದ ಪರಿಣಾಮ ನಿಜವಾದ ರೈತರಿಗೆ ಪರಿಹಾರ ಸಿಗದಂತಾಗಿದೆ. ಈ ಕುರಿತು ಚಿಕ್ಕಬಳ್ಳಾಪುರದಲ್ಲಿ ರೈತರು ತಮ್ಮ...