• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Tuesday, April 21, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

CM CUP : ಬಹುಮುಖ ಪ್ರತಿಭೆಯ ಕಣಜ ಪ್ರಕಾಶ್ ಪಳನಿ ; ದಿ ಕೆಫೆ ದಿವ್ಯಂ ತಂಡದ ಒಡೆಯ..!

ತಮಗೆ ದೊರೆತ ಪ್ರತಿ ಅವಕಾಶವನ್ನೂ ತಮ್ಮ ಉದ್ಯಮಶೀಲತಾ ಗುಣವನ್ನು ಮತ್ತಷ್ಟು ಅಭಿವೃದ್ಧಿಪಡಿಸಿಕೊಳ್ಳಲು ಬಳಸಿಕೊಂಡವರು ಈ ಪ್ರಕಾಶ್ ಪಳನಿ....

ಪ್ರತಿಧ್ವನಿ by ಪ್ರತಿಧ್ವನಿ
February 18, 2026
in Top Story, ಇದೀಗ, ಕರ್ನಾಟಕ, ಕ್ರೀಡೆ, ಜೀವನದ ಶೈಲಿ, ದೇಶ
0
CM CUP : ಬಹುಮುಖ ಪ್ರತಿಭೆಯ ಕಣಜ ಪ್ರಕಾಶ್ ಪಳನಿ ; ದಿ ಕೆಫೆ ದಿವ್ಯಂ ತಂಡದ ಒಡೆಯ..!
Share on WhatsAppShare on FacebookShare on Telegram

ಬೆಂಗಳೂರು : ಈ ಬಾರಿಯ ಪ್ರತಿಷ್ಠಿತ ಸಿಎಂ ಕಪ್‌ ಶಟಲ್‌ ಬ್ಯಾಡ್ಮಿಂಟನ್‌ ಕ್ರೀಡಾಕೂಟದಲ್ಲಿ ಭಾಗವಹಿಸಿರುವ ತಂಡಗಳ ಪೈಕಿ ಟೀಮ್ ಕೆಫೆ ದಿವ್ಯಂ ಕೂಡ ಎಲ್ಲರನ್ನು ಆಕರ್ಷಿಸುತ್ತಿದೆ. ನ್ಯಾವಿಗೇಟರ್ ಸಿಸ್ಟಮ್ಸ್ ಪ್ರೈವೇಟ್ ಲಿಮಿಟೆಡ್‌ನ ಸಂಸ್ಥಾಪಕರಾಗಿರುವ ಪ್ರಕಾಶ್ ಪಳನಿ ಅವರು ಈ ತಂಡದ ಒಡೆತನ ಹೊಂದಿದ್ದು, 2026 ಸಿಎಂ ಕಪ್‌ ಗಿಟ್ಟಿಸಿಕೊಳ್ಳಬೇಕೆಂಬ ನಿಟ್ಟಿನಲ್ಲಿ ತಂಡಕ್ಕೆ ಬೆಂಬಲವಾಗಿ ನಿಂತಿದ್ದಾರೆ.

ADVERTISEMENT
DR RAJU : ಬಿಪಿಯಿಂದ ಕಾಲು ಊತ ಬರುತ್ತಾ..? #pratidhvani

ಪ್ರಕಾಶ್ ಪಳನಿ. ಮೂಲತಃ ಬೆಂಗಳೂರಿನವರು. ಎಸ್. ಪಳನಿ ಮುದಲಿಯಾರ್ ಮತ್ತು ಚಂದ್ರಾ ಪಳಿ ಅವರ ಸುಪುತ್ರ. ಇನ್‍ಸ್ಟ್ರುಮೆಂಟೇಷನ್ ಟೆಕ್ನಾಲಜಿಯಲ್ಲಿ ಡಿಪ್ಲೋಮಾ ಮತ್ತು ಎಲೆಕ್ಟ್ರಿಕಲ್ ಎಂಜಿನಿಯರಿಂಗ್‍ನಲ್ಲಿ ಬಿಇ ಪದವಿಧರರಾಗಿದ್ದಾರೆ.

ಬಾಲ್ಯದಿಂದಲೇ ಸ್ವಂತ ಬಲದಲ್ಲಿ ಉದ್ಯಮ ಆರಂಭಿಸಿ ಜೀವನ ರೂಪಿಸುವ ಛಲ ಹೊಂದಿದವರು. ಅದಕ್ಕಾಗಿಯೇ ತಮ್ಮ 11ನೇ ವಯಸ್ಸಿನಲ್ಲಿಯೇ ತಮ್ಮ ಮನೆಯ ಬಳಿ ತರಕಾರಿ ವ್ಯಾಪಾರ ಆರಂಭಿಸಿದ್ರು. ಅದರ ಜತೆಜತೆಗೆ ಎಕ್ಸಿಬಿಷನ್ ಸೆಂಟರ್‌ಗಳಲ್ಲೂ ಕಾರ್ಯನಿರ್ವಹಿಸುತ್ತಿದ್ದರು. ತಮ್ಮ ವಿದ್ಯಾಭ್ಯಾಸದ ನಂತರ ಹೆಸರಾಂತ ಪೈಂಟ್ ತಯಾರಿಕೆ ಮತ್ತು ಮಾರಾಟ ಸಂಸ್ಥೆಯೊಂದರ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಆಗಿ ಹೊಸ ವೃತ್ತಿಯನ್ನು ಆರಂಭಿಸಿದರು.

ತಮಗೆ ದೊರೆತ ಪ್ರತಿ ಅವಕಾಶವನ್ನೂ ತಮ್ಮ ಉದ್ಯಮಶೀಲತಾ ಗುಣವನ್ನು ಮತ್ತಷ್ಟು ಅಭಿವೃದ್ಧಿಪಡಿಸಿಕೊಳ್ಳಲು ಬಳಸಿಕೊಂಡವರು ಈ ಪ್ರಕಾಶ್ ಪಳನಿ. ಅದರಂತೆ ಪೈಂಟ್ ಕಂಪೆನಿಯ ಹಿರಿಯ ಅಧಿಕಾರಿಗಳು ಪ್ರಕಾಶ್ ಪಳನಿ ಅವರ ಪ್ರಾಮಾಣಿಕ ಕೆಲಸ ಮತ್ತು ಸಾಮರ್ಥ್ಯವನ್ನು ಗುರುತಿಸಿ ವಿಪ್ರೋದಲ್ಲಿ ಕೆಲಸ ಮಾಡುವ ಅವಕಾಶ ಕಲ್ಪಿಸಿದ್ದರು. ಇದರ ನಡುವೆಯೇ ಸರ್ಕಾರಿ ಉದ್ಯೋಗ ದೊರೆತಿದ್ದರೂ, ಅದನ್ನು ತೊರೆದು ಐಟಿ ಕ್ಷೇತ್ರದಲ್ಲಿ ತಮ್ಮ ಭವಿಷ್ಯ ರೂಪಿಸಲು ಪ್ರಕಾಶ್ ಪಳನಿ ಮುಂದಾಗಿದ್ರು.

ಇದನ್ನೂ ಓದಿ :

ಪ್ರತಿಷ್ಠಿತ ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡಿರುವ ಅನುಭವವನ್ನು ಮುಂದಿಟ್ಟುಕೊಂಡು 1993ರಲ್ಲಿ ತಮ್ಮ ಸ್ವಂತ ಸಾಮರ್ಥ್ಯದಲ್ಲಿ ನ್ಯಾವಿಗೇಟರ್ ಸಿಸ್ಟಮ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯನ್ನು ಸ್ಥಾಪಿಸಿದರು. ಕಳೆದ 30ಕ್ಕೂ ಹೆಚ್ಚಿನ ವರ್ಷಗಳಿಂದ ನ್ಯಾವಿಗೇಟರ್ ಸಿಸ್ಟಮ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ದೇಶದಾದ್ಯಂತ ತನ್ನ ಗ್ರಾಹಕರಿಗೆ ಸಿಸ್ಟಂ ಇಂಟಿಗ್ರೇಷನ್, ಕನ್ಸಲ್ಟಿಂಗ್ ಸರ್ವೀಸ್, ಮ್ಯಾನೇಜಿಂಗ್ ಸರ್ವೀಸಸ್, ಸ್ಟ್ರಾಟೆಜಿಕ್ ಔಟ್‍ಸೋರ್‌ಸಿಂಗ್ ಸೇರಿದಂತೆ ಮತ್ತಿತರ ಸೇವೆಗಳನ್ನು ಒದಗಿಸುತ್ತಿದೆ. ‌

ಈವರೆಗೆ 50 ಲಕ್ಷಕ್ಕೂ ಹೆಚ್ಚಿನ ಗ್ರಾಹಕರಿಗೆ ಅವರ ಬೇಡಿಕೆಗೆ ಅನುಗುಣವಾಗಿ ಪ್ರಕಾಶ್ ಪಳನಿ ಅವರ ನ್ಯಾವಿಗೇಟರ್ ಸಿಸ್ಟಮ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ಸೇವೆಯನ್ನು ನೀಡುತ್ತಿದೆ. ಐಟಿ ಜತೆಗೆ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲೂ ತಮ್ಮ ಛಾಪು ಮೂಡಿಸಿರುವ ಪ್ರಕಾಶ್ ಪಳನಿ ಅವರು, ಹೆಸರಾಂತ ಅನುಭವ ಗ್ರೂಪ್ ಕನ್‍ಸ್ಟ್ರಕ್ಷನ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ.

2008ರಿಂದಲೂ ಅನುಭವ ಗ್ರೂಪ್ ಸಂಸ್ಥೆ ಬೆಂಗಳೂರಿನಲ್ಲಿ ಪರಿಸರ ಸ್ನೇಹಿ ಗೃಹ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ. ಐಷಾರಾಮಿ ಅಪಾರ್ಟ್‍ಮೆಂಟ್ಸ್, ಸೆಮಿ ಲಕ್ಷುರಿ ಅಪಾರ್ಟ್‍ಮೆಂಟ್ಸ್, ವಿಲ್ಲಾಸ್‌, ವಾಣಿಜ್ಯ ಕಟ್ಟಡಗಳ ನಿರ್ಮಾಣ ಮಾಡುತ್ತಾ ಬಂದಿದೆ. ಅನುಭವ ಗ್ರೂಪ್ ಸಂಸ್ಥೆಯು ಪ್ರಕಾಶ್ ಪಳನಿ ಮಾರ್ಗದರ್ಶನದಲ್ಲಿ ಗ್ರಾಹಕರ ಅಗತ್ಯಕ್ಕೆ ತಕ್ಕಂತೆ ಗೃಹ ನಿರ್ಮಾಣ ಯೋಜನೆಗಳನ್ನು ರೂಪಿಸುತ್ತಿದೆ.

ಬಹುಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಪ್ರಕಾಶ್ ಪಳನಿ ಅವರು, ಆತಿಥ್ಯ ಕ್ಷೇತ್ರದಲ್ಲೂ ಹೆಜ್ಜೆಯನ್ನಿಟ್ಟಿದ್ದಾರೆ. ಪಳನಿ ಅವರ ಮಾಲೀಕತ್ವದ ಹಲವು ರೆಸ್ಟೋರೆಂಟ್‍ಗಳು, ಸರ್ವೀಸ್ ಅಪಾರ್ಟ್‍ಮೆಂಟ್ಸ್‍ಗಳಿವೆ. ಹಾಗೆಯೇ, ಚಲನಚಿತ್ರ ಕ್ಷೇತ್ರದತ್ತಲೂ ಆಸಕ್ತಿ ಹೊಂದಿರುವ ಪ್ರಕಾಶ್ ಅವರು, ಈವರೆಗೆ 3 ಚಲನಚಿತ್ರಗಳನ್ನು ನಿರ್ಮಾಣ ಮಾಡಿದ್ದಾರೆ ಹಾಗೂ 40ಕ್ಕೂ ಹೆಚ್ಚಿನ ಚಲನಚಿತ್ರಗಳನ್ನು ವಿತರಣೆ ಮಾಡಿದ್ದಾರೆ.

ಹಾಲಿ ಜಾಲಿವುಡ್ ಫಿಲಂಸ್ ಎಂದು ಹೆಸರು ಬದಲಾವಣೆಯಾಗಿರುವ ಇನ್ನೋವೇಟಿವ್ ಫಿಲ್ಮ್ ಇಂಡಸ್ಟ್ರೀಯ ಪಾಲುದಾರರಾಗಿಯೂ ತಮ್ಮ ಉದ್ಯಮವನ್ನು ವಿಸ್ತರಿಸಿದ್ದಾರೆ. ಉದ್ಯಮಗಳ ಬೆಳವಣಿಗೆಯ ಜತೆಜತೆಗೆ 1 ಸಾವಿರಕ್ಕೂ ಹೆಚ್ಚಿನ ಜನರಿಗೆ ಪ್ರಕಾಶ್ ಪಳನಿ ಉದ್ಯೋಗಾವಕಾಶ ಕಲ್ಪಿಸಿದ್ದಾರೆ. ಇದೀಗ ಸಿಎಂ ಕಪ್ ಬ್ಯಾಡ್ಮಿಂಟನ್ ಟೂರ್ನಿಯ ಭಾಗವಾಗಿರುವ ಪಳನಿ ಪ್ರಕಾಶ್ ಅವರು, ದಿ ಕೆಫೆ ದಿವ್ಯಂ ತಂಡದ ಮಾಲೀಕರಾಗಿದ್ದಾರೆ. ಈ ಮೂಲಕ ಕ್ರೀಡಾ ಕ್ಷೇತ್ರದಲ್ಲೂ ಛಾಪು ಮೂಡಿಸಿದ್ದಾರೆ.

Tags: 9 Dreams By CM CUPBadminton Tournament:Bussiness manCafe Divyam Benglorecm cupcm cup 2026 karnatakaDialogue writterEntertainmentIT CompanyJallywood Studioskannada cinema industryKarnataka CM CUPNavigator Systems PVT LimitedPrakash PalaniPratidhvaniProducerSocial workersports newsWipro Company
Previous Post

Sergio gor:ಆಟೋದಲ್ಲಿ ಅಮೇರಿಕಾ ರಾಯಭಾರಿ ಓಡಾಟ

Next Post

ಬಸ್ ಬಂದ್, ಸಿಡಿದೆದ್ದ ಸಾರಿಗೆ ನೌಕರರು : ಸರ್ಕಾರ ಹೇಳೋದೇನು..?

Related Posts

ಸಿದ್ದರಾಮಯ್ಯನವ್ರೇ ನೀವು ಕರ್ನಾಟಕದ ಮುಖ್ಯಮಂತ್ರಿಗಳೋ ಅಥವಾ ಮೈಸೂರು ಜಿಲ್ಲೆಗೆ ಮಾತ್ರನೋ : ಶಾಸಕ ಕಂದಕೂರ್‌ ಆಕ್ರೋಶ..!
Top Story

ಸಿದ್ದರಾಮಯ್ಯನವ್ರೇ ನೀವು ಕರ್ನಾಟಕದ ಮುಖ್ಯಮಂತ್ರಿಗಳೋ ಅಥವಾ ಮೈಸೂರು ಜಿಲ್ಲೆಗೆ ಮಾತ್ರನೋ : ಶಾಸಕ ಕಂದಕೂರ್‌ ಆಕ್ರೋಶ..!

by ಪ್ರತಿಧ್ವನಿ
April 20, 2026
0

ಬೆಂಗಳೂರು : ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ನಗನೂರು ಗ್ರಾಮದ ಕೃಷಿ ಹೊಂಡದಲ್ಲಿ ಈಜಲು ಹೋಗಿದ್ದ ಒಂದೇ ಕುಟುಂಬದ ನಾಲ್ವರು ಮಕ್ಕಳು‌ ಕಳೆದ ಮಾರ್ಚ್‌ 29ರಂದು ಜಲಸಮಾಧಿಯಾಗಿರುವ ಘಟನೆಗೆ...

Read moreDetails
ಹೊಸ ಪಕ್ಷವೊಂದು MGR ರೀತಿ ಆಗೋಕೆ ಹೊರಟಿದೆ, ಅದೆಲ್ಲ ಸಿನಿಮಾದಲ್ಲಿ ಕೈ ಬೀಸಲಷ್ಟೇ ಇಲ್ಲಿ ನಡೆಯಲ್ಲ  : ಥಳಪತಿ ವಿಜಯ್‌ ವಿರುದ್ಧ ಡಿಕೆ ಶಿವಕುಮಾರ್‌ ವಾಗ್ದಾಳಿ

ಹೊಸ ಪಕ್ಷವೊಂದು MGR ರೀತಿ ಆಗೋಕೆ ಹೊರಟಿದೆ, ಅದೆಲ್ಲ ಸಿನಿಮಾದಲ್ಲಿ ಕೈ ಬೀಸಲಷ್ಟೇ ಇಲ್ಲಿ ನಡೆಯಲ್ಲ : ಥಳಪತಿ ವಿಜಯ್‌ ವಿರುದ್ಧ ಡಿಕೆ ಶಿವಕುಮಾರ್‌ ವಾಗ್ದಾಳಿ

April 20, 2026
“ನಮ್ಮ ಸರ್ಕಾರ ಬುದ್ಧ, ಬಸವ, ಅಂಬೇಡ್ಕರ್ ಕಂಡ ಕನಸಿನ ಸಮಾಜ ನಿರ್ಮಾಣ ಮಾಡುವ ಉದ್ದೇಶ ಹೊಂದಿದೆ”

“ನಮ್ಮ ಸರ್ಕಾರ ಬುದ್ಧ, ಬಸವ, ಅಂಬೇಡ್ಕರ್ ಕಂಡ ಕನಸಿನ ಸಮಾಜ ನಿರ್ಮಾಣ ಮಾಡುವ ಉದ್ದೇಶ ಹೊಂದಿದೆ”

April 20, 2026
ಚಂದ್ರಬಾಬು ನಾಯ್ಡು ಅತ್ಯಂತ ಕಠಿಣ ಪರಿಶ್ರಮಿ‌,ಒಳ್ಳೆಯ ಸ್ನೇಹಿತ : ಆಂಧ್ರ ಸಿಎಂಗೆ ಮೋದಿ,ಶಾ ಸ್ಪೆಷಲ್‌ ವಿಶ್..!

ಚಂದ್ರಬಾಬು ನಾಯ್ಡು ಅತ್ಯಂತ ಕಠಿಣ ಪರಿಶ್ರಮಿ‌,ಒಳ್ಳೆಯ ಸ್ನೇಹಿತ : ಆಂಧ್ರ ಸಿಎಂಗೆ ಮೋದಿ,ಶಾ ಸ್ಪೆಷಲ್‌ ವಿಶ್..!

April 20, 2026
ಹ್ಯಾಕರ್‌ ಶ್ರೀಕಿ ನಂಟು, ನಲಪ್ಪಾಡ್‌ ಬುಡಕ್ಕೆ ಬಿಟ್‌ ಕಾಯಿನ್‌ ಬೆಂಕಿ : ಇಡಿ ರೇಡ್‌ಗೆ ಸಿಎಂ ಏನಂದ್ರು..?

ಹ್ಯಾಕರ್‌ ಶ್ರೀಕಿ ನಂಟು, ನಲಪ್ಪಾಡ್‌ ಬುಡಕ್ಕೆ ಬಿಟ್‌ ಕಾಯಿನ್‌ ಬೆಂಕಿ : ಇಡಿ ರೇಡ್‌ಗೆ ಸಿಎಂ ಏನಂದ್ರು..?

April 20, 2026
Next Post
ಬಸ್ ಬಂದ್, ಸಿಡಿದೆದ್ದ ಸಾರಿಗೆ ನೌಕರರು : ಸರ್ಕಾರ ಹೇಳೋದೇನು..?

ಬಸ್ ಬಂದ್, ಸಿಡಿದೆದ್ದ ಸಾರಿಗೆ ನೌಕರರು : ಸರ್ಕಾರ ಹೇಳೋದೇನು..?

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada