ಭಾರತಕ್ಕೆ ನಿಯೋಜನೆಗೊಂಡಿರು ಅಮೆರಿಕ ರಾಯಭಾರಿ ಸರ್ಗಿಯೊ ಗೋರ್ ಅವರು ಬೆಂಗಳೂರು ನಗರಕ್ಕೆ ಮಂಗಳವಾರ ಭೇಟಿ ನೀಡಿದ್ದು, ಸಂಸದ ತೇಜಸ್ವಿ ಸೂರ್ಯ ಅವರ ಜತೆಗೆ ಆಟೊದಲ್ಲಿ ತಿರುಗಾಡಿದ್ದಾರೆ.ಇಂದಿರಾನಗರದ ಹೋಟೆಲ್‌ವೊಂದಕ್ಕೆ ಖುಷಿಯಿಂದ ಹೋಗಿ ಸರ್ಗಿಯೊ ಗೋರ್ ಮಸಾಲೆ ದೋಸೆ ತಿಂದು ಕಾಫಿ ಕುಡಿದಿದ್ದಾರೆ.
ಬೆಂಗಳೂರಿನಲ್ಲಿ 700 ಕ್ಕೂ ಹೆಚ್ಚು ಅಮೇರಿಕನ್ ಕಂಪನಿಗಳು ಕಾರ್ಯನಿರ್ವಹಿಸುತ್ತಿದ್ದು, ಭಾರತದ ಸಾಫ್ಟ್‌ವೇರ್ ರಫ್ತಿನ ಶೇ. 43 ರಷ್ಟಿದೆ ಮತ್ತು ದೇಶದ ಗ್ಲೋಬಲ್ ಕೆಪಾಬಿಲಿಟಿ ಸೆಂಟರ್‌ಗಳಲ್ಲಿ (ಜಿಸಿಸಿ) ಶೇ. 40 ರಷ್ಟು ನೆಲೆಯಾಗಿದೆ ಅಮೆರಿಕವು ಬೆಂಗಳೂರಿನಲ್ಲಿ ಕಾನ್ಸುಲೇಟ್ ಕಚೇರಿ ತೆರೆಯುವ ಯೋಜನೆಯನ್ನು ಘೋಷಿಸಿದ್ದು, ಇದು ಬಹುಕಾಲದಿಂದ ಬಾಕಿ ಉಳಿದಿದ್ದ ಬೇಡಿಕೆಯನ್ನು ಈಡೇರಿಸಿದೆ.ಎಂದು ತೇಜಸ್ವಿ ಸೂರ್ಯ ಹೇಳಿದರು.

ಭಾರತ, ಅಮೆರಿಕದ ಬಾಂಧವ್ಯ, ವ್ಯಾಪಾರ, ತಂತ್ರಜ್ಞಾನ ಹಾಗೂ ಹೊಸ ಸಂಶೋಧನೆಗಳ ಬಗ್ಗೆ ಸರ್ಗಿಯೊ ಗೋರ್ ಅವರೊಂದಿಗೆ ಚರ್ಚಿಸಲಾಯಿತು. ಅವರಿಗೆ ‘ನಮ್ಮ ಆಟೊ’ ಪರಿಚಯಿಸಲಾಯಿತು. ಅವರೊಂದಿಗೆ ನಡೆಸಿದ ಆಟೊ ಸಂಚಾರವು ಸ್ಮರಣೀಯವಾಗಿತ್ತು’ ಎಂದು ತೇಜಸ್ವಿ ಸೂರ್ಯ ಅವರು ‘ಎಕ್ಸ್’ನಲ್ಲಿ ತಿಳಿಸಿದ್ದಾರೆ.

ಬೆಂಗಳೂರು ತಂತ್ರಜ್ಞಾನ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡುತ್ತಿದೆ. ಆದರೂ, ಸಂಪ್ರದಾಯವನ್ನು ಮರೆತಿಲ್ಲ. ದೇಶದ ಸಾಫ್ಟ್‌ವೇರ್ ಕ್ಷೇತ್ರದ ರಫ್ತಿನ ಪ್ರಮಾಣದಲ್ಲಿ ಬೆಂಗಳೂರಿನ ಪಾಲು ಶೇ 43ರಷ್ಟು ಇದೆ. ಭಾರತ ಹಾಗೂ ಅಮೆರಿಕದ ಆರ್ಥಿಕ ಸಂಬಂಧ ಗಟ್ಟಿಗೊಳ್ಳಲು ನಗರವು ಮಹತ್ವದ ಕೊಡುಗೆ ನೀಡುತ್ತಿದೆ’ ಎಂದು ಸರ್ಗಿಯೊ ಗೋರ್ ಹೇಳಿದ್ದಾರೆ.






