ಸಂಪೂರ್ಣವಾಗಿ ಕೇಂದ್ರದ ಬೊಕ್ಕಸಕ್ಕೆ ಸಂಗ್ರಹವಾಗುವ ಸೆಸ್ ಮತ್ತು ಸರ್ ಜಾರ್ಜ್ (C&S) ಕುರಿತು ಈ ಬಾರಿ ಬಹುಮುಖ್ಯ ಚರ್ಚೆ ನಡೆದಿತ್ತು. ರಾಜ್ಯಗಳಿಗೆ ಕೊಡಬೇಕಾದ ತೆರಿಗೆ ಪಾಲನ್ನು ಕಡಿಮೆಗೊಳಿಸಿ ಕೇವಲ ತನಗೆ ಮಾತ್ರ ದೊರಕುವ C&Sನ್ನು ಹೆಚ್ಚಿಸುತ್ತಾ ಬಂದಿರುವ ಮೋದಿ ಸರ್ಕಾರದ ಈ ನೀತಿಯನ್ನು ವಿರೋಧ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳು ವಿರೋಧಿಸಿದ್ದರು. 2009ರಲ್ಲಿ ಒಟ್ಟು ತೆರಿಗೆಯ ಅಂದಾಜು ಶೇ.9ರಷ್ಟಿದ್ದ C&S 2022ರ ವೇಳೆಗೆ ಅಂದಾಜು ಶೇ.22ರಷ್ಟಾಗಿದೆ.
ಸಿದ್ದರಾಮಯ್ಯನವರು C&Sನ ಶೇ.5ರಷ್ಟು ಪ್ರಮಾಣವನ್ನು ಮಾತ್ರ ಕೇಂದ್ರ ಉಳಿಸಿಕೊಂಡು ಮಿಕ್ಕ ಮೊತ್ತವನ್ನು ರಾಜ್ಯಗಳ ಬಾಬ್ತಿಗೆ ಜಮೆಯಾಗಬೇಕೆಂದು ಆಯೋಗಕ್ಕೆ ಒತ್ತಾಯಿಸಿದ್ದಾರೆ. ಇದು ಸ್ವಾಗತಾರ್ಹ. ಆದರೆ ಆಯೋಗವು C&S ತನ್ನ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳಿ ಕೈತೊಳೆದುಕೊಂಡಿದೆ.
ಹಾಗೆಯೇ ತೆರಿಗೆಯೇತರ ಆದಾಯವನ್ನು ರಾಜ್ಯಗಳ ಬಾಬ್ತಿಗೆ ತರಬೇಕು, ಒಟ್ಟು ತೆರಿಗೆ ಪ್ರಮಾಣದಲ್ಲಿ ರಾಜ್ಯಗಳ ಪಾಲನ್ನು ಶೇ.50ಕ್ಕೆ ಹೆಚ್ಚಿಸಬೇಕೆಂದು ಸಿದ್ದರಾಮಯ್ಯನವರು ಒತ್ತಾಯಿಸಿದ್ದಾರೆ. ಮುಖ್ಯಮಂತ್ರಿಗಳ ಈ ನ್ಯಾಯಬದ್ಧವಾದ ಹಕ್ಕೊತ್ತಾಯಕ್ಕೆ ಆಯೋಗವು ತಾರಮ್ಮಯ್ಯ ಎಂದು ಕೈಯಾಡಿಸಿದೆ.ಇದು ಆತಂಕದ ವಿಚಾರ.
ಸಿದ್ದರಾಮಯ್ಯನವರು ಈ ಕೂಡಲೆ ವಿರೋಧ ಪಕ್ಷ ಅಧಿಕಾರದಲ್ಲಿರುವ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆಯಬೇಕು, ತಮ್ಮದೇ ಆದ ಒಂದು ವೇದಿಕೆ ಸ್ಥಾಪಿಸಿ ಕೊಳ್ಳಬೇಕು. ಮತ್ತು ರಾಜ್ಯಗಳ ಪಾಲಿನ ಶೇ.50ರಷ್ಟು ತೆರಿಗೆ ಪರವಾಗಿ ಮತ್ತು ಸೆಸ್ & ಸರ್ ಚಾರ್ಜ್ ಮೊತ್ತದ ರಾಜ್ಯಗಳ ಪಾಲಿನ ಪರವಾಗಿ ಜನಾಂದೋಲನ ರೂಪಿಸಬೇಕು