• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Tuesday, May 26, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಪಾಕಿಸ್ತಾನ ವಿರುದ್ಧದ ಕ್ರಮಕ್ಕೆ ಭಾರತದಲ್ಲಿ ಒಗ್ಗಟ್ಟು ಪ್ರದರ್ಶನ..

ಕೃಷ್ಣ ಮಣಿ by ಕೃಷ್ಣ ಮಣಿ
April 25, 2025
in Top Story, ದೇಶ, ರಾಜಕೀಯ, ವಿಶೇಷ
0
ಪಾಕಿಸ್ತಾನ ವಿರುದ್ಧದ ಕ್ರಮಕ್ಕೆ ಭಾರತದಲ್ಲಿ ಒಗ್ಗಟ್ಟು ಪ್ರದರ್ಶನ..
Share on WhatsAppShare on FacebookShare on Telegram
ಕೇಂದ್ರ ಸರ್ಕಾರ ಕರೆದಿದ್ದ ಸರ್ವಪಕ್ಷ ಸಭೆಯಲ್ಲಿ  ಕಾರ್ಜುನ ಖರ್ಗೆ, ರಾಜನಾಥ್ ಸಿಂಗ್,  ಅಮಿತ್ ಶಾ ಕೂಡ ಅಲ್ಲಿದ್ದರು.

ಕಾಶ್ಮೀರದ ಪಹಲ್ಗಾಮ್​ನಲ್ಲಿ ಉಗ್ರರು ನಡೆಸಿದ ಮಾರಣಹೋಮದ ಹಿಂದಿನ ಕೈವಾಡ ಪಾಕಿಸ್ತಾನದ್ದು ಅನ್ನೋ ಕಾರಣಕ್ಕೆ ಪಾಕಿಸ್ತಾನದ ವಿರುದ್ಧ ಭಾರತ ಕಠಿಣ ನಿಲುವುಗಳನ್ನು ತೆಗೆದುಕೊಳ್ಳುತ್ತಿದೆ. ಪಾಕಿಸ್ತಾನಿ ನಿವಾಸಿಗಳು ಭಾರತವನ್ನು ಬಿಟ್ಟು ತೊಲಗಿ ಎಂದಿದ್ದ ಭಾರತ, 48 ಗಂಟೆಗಳ ಗಡುವು ನೀಡಿತ್ತು. ಇನ್ನು ಮುಂದೆ ಪಾಕಿಸ್ತಾನಿಗಳಿಗೆ ವೀಸಾ ನಿರಾಕರಣೆ ಮಾಡಲಾಗುವುದು, ರಾಯಭಾರ ಕಚೇರಿಯ ರಾಜತಾಂತ್ರಿಕ ಅಧಿಕಾರಿಗಳನ್ನು ವಾಪಸ್​ ಕಳುಹಿಸುವುದು, ಇಂಡಸ್​ ವ್ಯಾಲಿ ಒಪ್ಪಂದ ರದ್ದು ಸೇರಿದಂತೆ ಸಾಕಷ್ಟು ಕಠಿಣ ನಿಲುವು ಘೋಷಣೆ ಆಗಿತ್ತು. ಆ ಬಳಿಕ ನಿನ್ನೆ ನಡೆದ ಸರ್ವ ಪಕ್ಷಗಳ ಸಭೆಯಲ್ಲಿ ಒಗ್ಗಟ್ಟಿನ ಮಂತ್ರ ಉಚ್ಚಾರಣೆ ಆಗಿದೆ.

ADVERTISEMENT

Santosh Lad and  Team In Srinagar : ಜಮ್ಮು-ಕಾಶ್ಮೀರಕ್ಕೆ ಯಾರೂ ಪ್ರವಾಸಕ್ಕೆ ಹೋಗ್ಬೇಡಿ!  | Pahalgam Attack

ಭಾರತ ಭಯೋತ್ಪಾದನೆ ವಿರುದ್ಧ ಹೋರಾಟ ಮಾಡುವ ಮುನ್ನ ಕೇಂದ್ರ ಸರ್ಕಾರ ಆಲ್​ ಪಾರ್ಟಿ ಮೀಟಿಂಗ್​ ಆಯೋಜನೆ ಮಾಡಿತ್ತು. ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ನೇತೃತ್ವದಲ್ಲಿ ಸಂಸತ್​ ಭವನದಲ್ಲಿ ನಡೆದ ಸಭೆಗೆ ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್​ ಗಾಂಧಿ, ರಾಜ್ಯಸಭಾ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುಕ ಖರ್ಗೆ ಸೇರಿದಂತೆ ಎನ್​ಸಿಪಿ, ಶಿವಸೇನೆ, ಡಿಎಂಕೆ, ಟಿಎಂಸಿ ಸೇರಿದಂತೆ ಸಾಕಷ್ಟು ಪಕ್ಷಗಳ ಮುಖಂಡರು ಹಾಜರಿದ್ದರು. ಈ ವೇಳೆ ಭಯೋತ್ಪಾದಕರ ಮಟ್ಟ ಹಾಕಲು ಕೇಂದ್ರ ಸರ್ಕಾರ ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೆ ನಾವು ಬದ್ಧ ಎನ್ನುವ ಒಗ್ಗಟ್ಟಿನ ಮಂತ್ರ ಪಠಣ ಆಗಿದೆ ಎನ್ನಲಾಗಿದೆ.

ಸರ್ವ ಪಕ್ಷ ಸಭೆಯಲ್ಲಿ ಪಕ್ಷ ಭೇದ ಮರೆತು ಒಗ್ಗಟ್ಟು ಪ್ರದರ್ಶನ ಮಾಡಿದ್ದು, ಕೇಂದ್ರ ಸರ್ಕಾರದ ಹೋರಾಟದಲ್ಲಿ ಸರ್ಕಾರದೊಂದಿಗೆ ನಿಲ್ಲುವುದಾಗಿ ಪ್ರತಿಜ್ಞೆ ಮಾಡಿದ್ದಾರೆ. ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಸೇರಿ ಪ್ರಮುಖ ನಾಯಕರು ಭಾಗಿಯಾಗಿದ್ದ ಸಭೆಯಲ್ಲಿ ‘ಹಮ್ ಸಬ್ ಸಾಥ್ ಹೈ, ಆಕ್ಷನ್ ಲೋ’ ಎಂಬ ಘೋಷಣೆ ಮಾಡಿದ್ದಾರೆ. ಮುಂದಿನ ಹೋರಾಟದ ಬಗ್ಗೆ ಸಭೆಯಲ್ಲಿ ವಿಸ್ತೃತವಾಗಿ ಚರ್ಚೆ ಮಾಡಿದ್ದು, ಉಗ್ರರ ಈ ಕೃತ್ಯವನ್ನು ಸಹಿಸಿಕೊಳ್ಳಲು ಸಾಧ್ಯವೇ ಇಲ್ಲ ಎನ್ನುವ ಮಾತುಗಳು ಸಭೆಯಲ್ಲಿ ಕೇಳಿ ಬಂದಿವೆ.

ಕೇಂದ್ರ ಸಚಿವ ಕಿರಣ್ ರಿಜಿಜು ಮಾತನಾಡಿ ಪಾಕಿಸ್ತಾನಕ್ಕೆ ಸಂಬಂಧಿಸಿದಂತೆ CCS ನಿರ್ಧಾರಕ್ಕೆ ಎಲ್ಲರ ಬೆಂಬಲ ಸಿಕ್ಕಿದೆ. ಎಲ್ಲಾ ನಾಯಕರು ಸರ್ವಾನುಮತದಿಂದ ಕೇಂದ್ರ ಸರ್ಕಾರದ ನಿರ್ಧಾರವನ್ನು ಬೆಂಬಲಿಸಿದರು. ಉಗ್ರರ ಬಗ್ಗೆ ಕೇಂದ್ರ ಸರ್ಕಾರ ಶೂನ್ಯ ಸಹಿಷ್ಣುತೆ ಹೊಂದಿರುತ್ತದೆ. ಕೇಂದ್ರ ಸರ್ಕಾರದ ಮುಂದಿನ ಕಠಿಣ ಕ್ರಮಗಳಿಗೆ ಎಲ್ಲಾ ನಾಯಕರು ಒಗ್ಗಟ್ಟನ್ನು ವ್ಯಕ್ತಪಡಿಸಿದರು ಎಂದಿದ್ದಾರೆ.

ರಾಜ್ಯಸಭಾ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ಎಲ್ಲಾ ರಾಜಕೀಯ ಪಕ್ಷಗಳು ದಾಳಿಯನ್ನು ಖಂಡಿಸಿವೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿ ಕಾಪಾಡಬೇಕು. ಕೇಂದ್ರ ಸರ್ಕಾರ ಎಲ್ಲಾ ರೀತಿಯ ಕ್ರಮ ಕೈಗೊಳ್ಳಬೇಕೆಂದು ನಾವು ಹೇಳಿದ್ದೇವೆ. ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಕೇಂದ್ರ ಸರ್ಕಾರದ ಜೊತೆಗೆ ಇರುತ್ತೇವೆ ಎಂದಿದ್ದಾರೆ. ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮಾತನಾಡಿ, ಸರ್ವ ಪಕ್ಷದ ಸಭೆಯಲ್ಲಿ ಎಲ್ಲರೂ ಭಯೋತ್ಪಾದಕರ ದಾಳಿಯನ್ನು ಖಂಡಿಸಿದ್ದಾರೆ. ಭಯೋತ್ಪಾದನೆಯ ವಿರುದ್ಧ ಕೇಂದ್ರ ಸರ್ಕಾರ ತೆಗೆದುಕೊಳ್ಳುವ ಯಾವುದೇ ಕ್ರಮವನ್ನ ಬೆಂಬಲಿಸುತ್ತೇವೆ ಎಂದು ಘೋಷಿಸಿದ್ದಾರೆ.

Tags: BJPbjp vs congresscongressCongress PartyModimodi attack congressmodi congress partymodi newsmodi on congressmodi shakes hands with rahulmodi slams congressModi speechmodi speech todaynarendra modimodi us congressmodi us congress speechmodi vs rahulmodi vs rahul gandhimodi with adaniNarendra ModiPM Modipm modi attacks congresspm modi jibe at congresspm modi on congresspm modi speechpm modi speech todaypm modi us congresspm modi us congress speechPM Narendra Modipm narendra modi speechrahul gandhi attack on modirahul gandhi attacks modirahul gandhi hugs modirahul gandhi hugs pm modirahul gandhi hugs prime minister narendra modirahul gandhi on pm modirahul gandhi vs narendra modirahul hugs modirahul hugs narendra modirahul modi handshake in parliamentrahul vs modiUS Congressಬಿಜೆಪಿ
Previous Post

ಪಾಕಿಸ್ತಾನಕ್ಕೆ ಸಿಂಧೂ ನದಿ ನೀರು ಬಂದ್ – ಅಮಿತ್ ಶಾ ಕಛೇರಿಯಲ್ಲಿ ಮಹತ್ವದ ಸಭೆ 

Next Post

ಹಮಾಸ್ ಉಗ್ರರನ್ನು ಭೇಟಿಯಾಗಿದ್ರಂತೆ ರಕ್ತಪಿಪಾಸುಗಳಿ – ಇಸ್ರೇಲ್ ಮೇಲಿನ ದಾಳಿಯಂತೆ ಸ್ಕೆಚ್ ಹಾಕಿದ್ದ ಭಯೋತ್ಪಾದಕರು 

Related Posts

“ಸರ್ಕಾರದಲ್ಲಿ ‘ಕುರ್ಚಿ’ಗಾಗಿ ಕಚ್ಚಾಟ, ದೆಹಲಿ ‘ಹೈಕಮಾಂಡ್’ ಮುಂದೆ ಸಾಷ್ಟಾಂಗ ನಮಸ್ಕಾರ!”
Top Story

“ಸರ್ಕಾರದಲ್ಲಿ ‘ಕುರ್ಚಿ’ಗಾಗಿ ಕಚ್ಚಾಟ, ದೆಹಲಿ ‘ಹೈಕಮಾಂಡ್’ ಮುಂದೆ ಸಾಷ್ಟಾಂಗ ನಮಸ್ಕಾರ!”

by ಪ್ರತಿಧ್ವನಿ
May 26, 2026
0

ಬೆಂಗಳೂರು : ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಸೇರಿದಂತೆ ಸಚಿವ ಸಂಪುಟ ವಿಸ್ತರಣೆಯ ಹಿನ್ನೆಲೆಯಲ್ಲಿ ಇಡೀ ರಾಜ್ಯ ಸರ್ಕಾರವೇ ನವದೆಹಲಿಗೆ ಶಿಫ್ಟ್‌ ಆಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ...

Read moreDetails
ಬೆಂಗಳೂರಿನಲ್ಲಿ ‘ಪೆದ್ದಿ’ ಪ್ರಮೋಷನ್..ರಾಮ್ ಚರಣ್ ಗೆ ರಾಷ್ಟ್ರಪ್ರಶಸ್ತಿ ಕೊಡ್ಬೇಕು ಎಂದ ಶಿವಣ್ಣ

ಬೆಂಗಳೂರಿನಲ್ಲಿ ‘ಪೆದ್ದಿ’ ಪ್ರಮೋಷನ್..ರಾಮ್ ಚರಣ್ ಗೆ ರಾಷ್ಟ್ರಪ್ರಶಸ್ತಿ ಕೊಡ್ಬೇಕು ಎಂದ ಶಿವಣ್ಣ

May 26, 2026
ದೆಹಲಿಯಲ್ಲಿ ಹೈ ವೋಲ್ಟೇಜ್‌ ಸಭೆಯಲ್ಲಿ ಡಿಕೆ, ಸಿದ್ದು ಚರ್ಚಿಸಿದ್ದೇನು..?

ದೆಹಲಿಯಲ್ಲಿ ಹೈ ವೋಲ್ಟೇಜ್‌ ಸಭೆಯಲ್ಲಿ ಡಿಕೆ, ಸಿದ್ದು ಚರ್ಚಿಸಿದ್ದೇನು..?

May 26, 2026
ಕುರ್ಚಿ ಕ್ಲೈಮ್ಯಾಕ್ಸ್‌ನಲ್ಲಿ ಸಿದ್ದರಾಮಯ್ಯ ಟೀಂ ಪ್ಲ್ಯಾನ್‌ ಏನು..? : ಹೈ ವೋಲ್ಟೇಜ್‌ ಸಭೆಯಲ್ಲಿ ಏನಾಗಬಹುದು..?

ಕುರ್ಚಿ ಕ್ಲೈಮ್ಯಾಕ್ಸ್‌ನಲ್ಲಿ ಸಿದ್ದರಾಮಯ್ಯ ಟೀಂ ಪ್ಲ್ಯಾನ್‌ ಏನು..? : ಹೈ ವೋಲ್ಟೇಜ್‌ ಸಭೆಯಲ್ಲಿ ಏನಾಗಬಹುದು..?

May 26, 2026
ಗುರುಗ್ರಾಮದಲ್ಲಿ ಕುಳಿತು ‘ಡಿಜಿಟಲ್ ಅರೆಸ್ಟ್’ ನಾಟಕ;  ಮಹಿಳೆ ಟಾರ್ಗೆಟ್

ಗುರುಗ್ರಾಮದಲ್ಲಿ ಕುಳಿತು ‘ಡಿಜಿಟಲ್ ಅರೆಸ್ಟ್’ ನಾಟಕ;  ಮಹಿಳೆ ಟಾರ್ಗೆಟ್

May 26, 2026
Next Post
ಹಮಾಸ್ ಉಗ್ರರನ್ನು ಭೇಟಿಯಾಗಿದ್ರಂತೆ ರಕ್ತಪಿಪಾಸುಗಳಿ – ಇಸ್ರೇಲ್ ಮೇಲಿನ ದಾಳಿಯಂತೆ ಸ್ಕೆಚ್ ಹಾಕಿದ್ದ ಭಯೋತ್ಪಾದಕರು 

ಹಮಾಸ್ ಉಗ್ರರನ್ನು ಭೇಟಿಯಾಗಿದ್ರಂತೆ ರಕ್ತಪಿಪಾಸುಗಳಿ - ಇಸ್ರೇಲ್ ಮೇಲಿನ ದಾಳಿಯಂತೆ ಸ್ಕೆಚ್ ಹಾಕಿದ್ದ ಭಯೋತ್ಪಾದಕರು 

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada