• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, July 31, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ಗೋವಾಗೂ ವಿಸ್ತರಿಸಿದ TMC : ಖ್ಯಾತ ಟೆನಿಸ್‌ ಆಟಗಾರ ಲಿಯಾಂಡರ್ ಪೇಸ್, ನಟಿ ನಫೀಸಾ ಅಲಿ ಪಕ್ಷ ಸೇರ್ಪಡೆ – ಗೆಲುವಿನ ವಿಶ್ವಾಸದಲ್ಲಿ ದೀದಿ

ಪ್ರತಿಧ್ವನಿ by ಪ್ರತಿಧ್ವನಿ
October 30, 2021
in ದೇಶ, ರಾಜಕೀಯ
0
ಗೋವಾಗೂ ವಿಸ್ತರಿಸಿದ TMC : ಖ್ಯಾತ ಟೆನಿಸ್‌ ಆಟಗಾರ ಲಿಯಾಂಡರ್ ಪೇಸ್, ನಟಿ ನಫೀಸಾ ಅಲಿ ಪಕ್ಷ ಸೇರ್ಪಡೆ – ಗೆಲುವಿನ ವಿಶ್ವಾಸದಲ್ಲಿ ದೀದಿ
Share on WhatsAppShare on FacebookShare on Telegram

ಟೆನಿಸ್ ದಿಗ್ಗಜ ಲಿಯಾಂಡರ್ ಪೇಸ್ ಅವರು ಶುಕ್ರವಾರ ತೃಣಮೂಲ ಕಾಂಗ್ರೆಸ್(ಟಿಎಂಸಿ) ಮುಖ್ಯಸ್ಥೆ ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಭೇಟಿಯಾಗಿ TMC ಪಕ್ಷಕ್ಕೆ ಸೇರ್ಪಡೆಗೊಂಡರು.

ADVERTISEMENT

2022ರ ಗೋವಾ ವಿಧಾನಸಭೆ ಚುನಾವಣೆ ಹಿನ್ನೆಯಲ್ಲಿ ಮೂರು ದಿನಗಳ ಭೇಟಿಗಾಗಿ ಗೋವಾ ರಾಜ್ಯಕ್ಕೆ ಬಂದಿರುವ ಬ್ಯಾನರ್ಜಿ ಸಮ್ಮುಖದಲ್ಲಿ ಲಿಯಾಂಡರ್ ಪೇಸ್ ಅವರು ಶುಕ್ರವಾರ ಟಿಎಂಸಿಗೆ ಸೇರಿದ್ದಾರೆ.

2004 ರ ಲೋಕಸಭಾ ಚುನಾವಣೆಯಲ್ಲಿ ದಕ್ಷಿಣ ಕೋಲ್ಕತ್ತಾದಿಂದ ಬ್ಯಾನರ್ಜಿ ವಿರುದ್ಧ ಸ್ಪರ್ಧಿಸಿದ್ದ ಹಿರಿಯ ನಟಿ ನಫೀಸಾ ಅಲಿ ಕೂಡ ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.

48ರ ಹರೆಯದ ಲಿಯಾಂಡರ್ ಪೇಸ್ ಎಂಟು ಡಬಲ್ಸ್ ಮತ್ತು 10 ಮಿಶ್ರ ಡಬಲ್ಸ್ ಗ್ರ್ಯಾನ್ ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಅವರು 1996-1997ರಲ್ಲಿ ಭಾರತದ ಅತ್ಯುನ್ನತ ಕ್ರೀಡಾ ಗೌರವವಾದ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ, 1990 ರಲ್ಲಿ ಅರ್ಜುನ ಪ್ರಶಸ್ತಿ, 2001 ರಲ್ಲಿ ಪದ್ಮಶ್ರೀ ಪ್ರಶಸ್ತಿ ಮತ್ತು ಭಾರತದ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಭೂಷಣವನ್ನು ಜನವರಿ 2014 ರಲ್ಲಿ ಸ್ವೀಕರಿಸಿದ್ದಾರೆ. 2020ರಲ್ಲಿ ಟೆನ್ನಿಸ್ನಿಂದ ನಿವೃತ್ತಿ ಹೊಂದಿದ್ದಾರೆ.

ಗೋವಾದ ಬಿಜೆಪಿ ಕಾರ್ಯಕರ್ತರು ಆಕೆಯನ್ನು ಹಿಂದೂ ವಿರೋಧಿ ಎಂದು ಕರೆದಿದ್ದು, ತಿರುಗೇಟು ನೀಡಿರುವ ದೀದಿ , ಅವರಿಗೆ “ಕ್ಯಾರೆಕ್ಟರ್ ಸರ್ಟಿಫಿಕೇಟ್” ನೀಡುವ ಅಧಿಕಾರ ಯಾರು ಕೊಟ್ಟಿದ್ದು? ಆ ಅಧಿಕಾರ ಅವರಿಗಿಲ್ಲ ಮತ್ತು ತೃಣಮೂಲ ಕಾಂಗ್ರೆಸ್ ಪಕ್ಷದ ಮೊದಲಕ್ಷರವಾದ ‘ಟಿಎಂಸಿ’ ಎಂದರೆ ದೇವಸ್ಥಾನ, ಮಸೀದಿ ಮತ್ತು ಚರ್ಚ್ ಎಂದಿದ್ದಾರೆ.

ಬಿಜೆಪಿ ಆಡಳಿತವಿರುವ ರಾಜ್ಯಕ್ಕೆ ಮೂರು ದಿನಗಳ ಭೇಟಿಯ ಭಾಗವಾಗಿ ಗುರುವಾರ ಸಂಜೆ ಗೋವಾಕ್ಕೆ ಆಗಮಿಸಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ, “ತಮ್ಮ ಪಕ್ಷವು ಇಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸುವುದು ಮತಗಳನ್ನು ವಿಭಜಿಸಲು ಅಲ್ಲ ಮತ್ತು ನಾನು ಇಲ್ಲಿ ನಿಮ್ಮ ಅಧಿಕಾರ ಕಸಿದುಕೊಳ್ಳಲು ಬಂದಿಲ್ಲ, ನಿಮಗೆ ಸಹಾಯ ಮಾಡಲು ಬಂದಿದ್ದೇನೆ. ಗೋವಾದ ಸಂಸ್ಕ್ರತಿ ಮತ್ತು ಪರಂಪರೆಯನ್ನು ಉಳಿಸಲು ಸಂಪೂರ್ಣ ಸುರಕ್ಷೆ ನೀಡಬೇಕಿದೆ. ನಾವು ಅಭಿಮಾನದಿಂದ ಬದುಕಬೇಕು. ನನ್ನ ಧರ್ಮದ ಚಾರಿತ್ರ್ಯ ಪ್ರಮಾಣಪತ್ರ ನೀಡಲು ಬಿಜೆಪಿ ಯಾರು? ನಾನು ಹಿಂದೂ ಎಂಬ ಅಭಿಮಾನವಿದೆ” ಎಂದರು.

”ನಾವು ಪ್ರಜಾಪ್ರಭುತ್ವದ ಪದ್ಧತಿಯಲ್ಲಿಯೇ ಚುನಾವಣೆ ಎದುರಿಸುತ್ತೇವೆ, ಆದರೆ ಬಿಜೆಪಿಯು ಚುನಾವಣೆಯ ಸಂದರ್ಭದಲ್ಲಿ ದಂಗೆ ಎಬ್ಬಿಸಲು ನೋಡುತ್ತಿದೆ. ಗೋವಾದ ಯುವಕರಿಗೆ ನಾವು ಮುಂಬರುವ ದಿನಗಳಲ್ಲಿ ಹೊಸ ಅವಕಾಶವನ್ನು ಸೃಷ್ಠಿಸಿಕೊಡಲಿದ್ದೇವೆ” ಎಂದು ಮಮತಾ ಬ್ಯಾನರ್ಜಿ ನುಡಿದರು.

ಟಿಎಂಸಿ ಸೇರ್ಪಡೆಯಾದ ಬಳಿಕ ಮಾತನಾಡಿದ ಲಿಯಾಂಡರ್ ಪೇಸ್, ನಾನು ಟೆನ್ನಿಸ್ನಿಂದ ನಿವೃತ್ತನಾಗಿದ್ದೇನೆ. ಇನ್ನು ಮುಂದೆ ರಾಜಕೀಯ ಎಂಬ ವಾಹನವನ್ನೇರಿ ಜನ ಸೇವೆ ಮಾಡಲು ನಿರ್ಧಾರ ಮಾಡಿದ್ದೇನೆ. ಮಮತಾ ಬ್ಯಾನರ್ಜಿ ನಿಜಕ್ಕೂ ಒಬ್ಬ ಚಾಂಪಿಯನ್ ಎಂದು ಹೇಳಿದ್ದಾರೆ.

ಅಕ್ಟೋಬರ್ 24 ರಂದು ಗೋವಾದಲ್ಲಿ ಸುಮಾರು 300 ಜನರು ತೃಣಮೂಲ ಕಾಂಗ್ರೆಸ್ ಅನ್ನು ಸೇರ್ಪಡೆಗೊಂಡಿದ್ದಾರೆ. ಪಣಜಿ, ನಾವೆಲಿಮ್ ಮತ್ತು ಸಾಂಗೇಮ್ನಲ್ಲಿ ಕಾರ್ಯಕ್ರಮಗಳು ನಡೆದಿದ್ದು 300 ರಷ್ಟು ಜನರು ತೃಣಮೂಲ ಕಾಂಗ್ರೆಸ್ ಜೊತೆಯಾಗಿದ್ದಾರೆ ಎಂದು ತೃಣಮೂಲ ಕಾಂಗ್ರೆಸ್ ಬಿಡುಗಡೆ ಮಾಡಿದ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ನಮ್ಮ ಅಧ್ಯಕ್ಷೆ ಮಮತಾ ಬ್ಯಾನರ್ಜಿ ಅವರ ಸಮ್ಮುಖದಲ್ಲಿ ಲಿಯಾಂಡರ್ ಪೇಸ್ ಇಂದು ನಮ್ಮೊಂದಿಗೆ ಸೇರಿಕೊಂಡಿದ್ದಾರೆ ಎಂದು ಹೇಳಲು ತುಂಬಾ ಸಂತೋಷವಾಗುತ್ತಿದೆ ಎಂದು ಟಿಎಂಸಿ ಟ್ವೀಟ್ ಮಾಡಿದೆ.

Tags: 'TempleChurch'Goa pollsLeander PaesMosqueNafisa AliTMCಖ್ಯಾತ ಟೆನಿಸ್‌ ಆಟಗಾರಗೋವಾ ಚುನಾವಣೆ 2022ಟಿಎಂಸಿದೀದಿನಟಿ ನಫೀಸಾ ಅಲಿಪಶ್ಚಿಮ ಬಂಗಾಳಮಮತಾ ಬ್ಯಾನರ್ಜಿಲಿಯಾಂಡರ್ ಪೇಸ್
Previous Post

ಉತ್ತರ ಪ್ರದೇಶದಲ್ಲಿ ‘ಕಾನೂನು ಬಾಹಿರ’ ಕೊಲೆಗಳ ರಾಜ್ಯಭಾರ ; ಸಂತ್ರಸ್ಥರೇ ಇಲ್ಲಿ ಆರೋಪಿಗಳು

Next Post

ಪ್ರಧಾನಿ ಮೋದಿ ಸಲಹೆಯನ್ನು ಧಿಕ್ಕರಿಸಿದ ಅವರದ್ದೇ ಸಂಪುಟದ ಸಹೋದ್ಯೋಗಿಗಳು!

Related Posts

ಕಾವು ಹೆಚ್ಚಿಸಿದ ಕಾವೇರಿ ವಿವಾದ: ಸರ್ವಪಕ್ಷ ಸಭೆ ಕರೆದ ಸಿಎಂ
Top Story

ಕಾವು ಹೆಚ್ಚಿಸಿದ ಕಾವೇರಿ ವಿವಾದ: ಸರ್ವಪಕ್ಷ ಸಭೆ ಕರೆದ ಸಿಎಂ

by ಪ್ರತಿಧ್ವನಿ
July 30, 2026
0

ಬೆಂಗಳೂರು: ಕಾವೇರಿ ನೀರಿನ ವಿಚಾರವಾಗಿ ಬರುವ ಭಾನುವಾರ (ಆಗಸ್ಟ್ 2) ಗೃಹ ಕಚೇರಿ ಕೃಷ್ಣಾದಲ್ಲಿ ಸರ್ವಪಕ್ಷ ಸಭೆ ಕರೆಯಲಾಗಿದೆ. ರಾಜ್ಯದ ಮಾಜಿ ಮುಖ್ಯಮಂತ್ರಿಗಳು, ಕಾವೇರಿ ಜಲಾನಯನ ಪ್ರದೇಶದ...

Read moreDetails
BREAKING NEWS : ಕರ್ನಾಟಕಕ್ಕೆ ಕಾವೇರಿ ಆಘಾತ : ತಮಿಳುನಾಡಿಗೆ ಮತ್ತೆ ನೀರು ಹರಿಸಲು ಆದೇಶ..!

BREAKING NEWS : ಕರ್ನಾಟಕಕ್ಕೆ ಕಾವೇರಿ ಆಘಾತ : ತಮಿಳುನಾಡಿಗೆ ಮತ್ತೆ ನೀರು ಹರಿಸಲು ಆದೇಶ..!

July 30, 2026
ಸೌರ ಕೃಷಿ ಪಂಪ್‌ಸೆಟ್‌ಗೆ ರೈತರ ಒಲವು: ರಾಜ್ಯದಲ್ಲಿ ಹೊಸ ದಾಖಲೆ

ಸೌರ ಕೃಷಿ ಪಂಪ್‌ಸೆಟ್‌ಗೆ ರೈತರ ಒಲವು: ರಾಜ್ಯದಲ್ಲಿ ಹೊಸ ದಾಖಲೆ

July 30, 2026
ಮಧ್ಯಪ್ರಾಚ್ಯ ಯುದ್ಧದ ಕಾರ್ಮೋಡ, ದೇಶದಲ್ಲಿ ಇಂಧನ ಅಭದ್ರತೆ..? ; ತುರ್ತು ಹೈವೋಲ್ಟೇಜ್‌ ಸಂಪುಟ ಸಭೆ ನಡೆಸಿದ ಪ್ರಧಾನಿ ಮೋದಿ..

ಮಧ್ಯಪ್ರಾಚ್ಯ ಯುದ್ಧದ ಕಾರ್ಮೋಡ, ದೇಶದಲ್ಲಿ ಇಂಧನ ಅಭದ್ರತೆ..? ; ತುರ್ತು ಹೈವೋಲ್ಟೇಜ್‌ ಸಂಪುಟ ಸಭೆ ನಡೆಸಿದ ಪ್ರಧಾನಿ ಮೋದಿ..

July 30, 2026
ಕಲ್ಲಿದ್ದಲು ಕೇಸ್‌ನಲ್ಲಿ ಮನಮೋಹನ ಸಿಂಗ್ ನಿರ್ದೋಷಿ: ‘ಕುಸಿದ ಬಿಜೆಪಿ ಸುಳ್ಳಿನ ಮಹಲು’..!

ಕಲ್ಲಿದ್ದಲು ಕೇಸ್‌ನಲ್ಲಿ ಮನಮೋಹನ ಸಿಂಗ್ ನಿರ್ದೋಷಿ: ‘ಕುಸಿದ ಬಿಜೆಪಿ ಸುಳ್ಳಿನ ಮಹಲು’..!

July 30, 2026
Next Post
ಪ್ರಧಾನಿ ಮೋದಿ ಸಲಹೆಯನ್ನು ಧಿಕ್ಕರಿಸಿದ ಅವರದ್ದೇ ಸಂಪುಟದ ಸಹೋದ್ಯೋಗಿಗಳು!

ಪ್ರಧಾನಿ ಮೋದಿ ಸಲಹೆಯನ್ನು ಧಿಕ್ಕರಿಸಿದ ಅವರದ್ದೇ ಸಂಪುಟದ ಸಹೋದ್ಯೋಗಿಗಳು!

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada