• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Tuesday, September 22, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಶಾಸಕ ಸ್ಥಾನಕ್ಕೆ ರಾಜೀನಾಮೆ ಹೇಳಿಕೆ : ಹೆಚ್.ಕೆ. ಪಾಟೀಲರಿಗೆ ದಿನೇಶ್ ಗೂಳಿಗೌಡ ಬಹಿರಂಗ ಪತ್ರ

ಪ್ರತಿಧ್ವನಿ by ಪ್ರತಿಧ್ವನಿ
September 21, 2026
in Top Story, ಕರ್ನಾಟಕ, ರಾಜಕೀಯ
0
ಶಾಸಕ ಸ್ಥಾನಕ್ಕೆ ರಾಜೀನಾಮೆ ಹೇಳಿಕೆ : ಹೆಚ್.ಕೆ. ಪಾಟೀಲರಿಗೆ ದಿನೇಶ್ ಗೂಳಿಗೌಡ ಬಹಿರಂಗ ಪತ್ರ
Share on WhatsAppShare on FacebookShare on Telegram

ಬೆಂಗಳೂರು: ಗದಗ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಹೆಚ್.ಕೆ. ಪಾಟೀಲ್ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ನೀಡಿರುವ ಹೇಳಿಕೆಗೆ ವಿಧಾನ ಪರಿಷತ್ ಸದಸ್ಯ ಹಾಗೂ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ದಿನೇಶ್ ಗೂಳಿಗೌಡ ಅವರು ಈ ಸಂಬಂಧ ಹೆಚ್.ಕೆ. ಪಾಟೀಲರಿಗೆ ಸುದೀರ್ಘ ಪತ್ರ ಬರೆದಿದ್ದಾರೆ.

ADVERTISEMENT

ಬರ ಘೋಷಣೆಯ ಮಾನದಂಡಗಳು ಹಾಗೂ ಸರ್ಕಾರದ ಬದ್ಧತೆಯನ್ನು ವಿವರಿಸಿದ್ದು, ರಾಜೀನಾಮೆಯಂತಹ ನಿರ್ಧಾರದಿಂದ ಹಿಂದೆ ಸರಿದು ಸರ್ಕಾರಕ್ಕೆ ಮಾರ್ಗದರ್ಶನ ನೀಡುವಂತೆ ಮನವಿ ಮಾಡಿದ್ದಾರೆ.

Rahul Gandhi : ದೇಶದ 'ವ್ಯವಸ್ಥೆ'ಯ ಚುಕ್ಕಾಣಿ ಹಿಡಿದಿರುವ 6 ಹೆಸರುಗಳು ಇಲ್ಲಿವೆ.. #pratidhvani

ಏನಿದೆ ಪತ್ರದಲ್ಲಿ?

ಗದಗ ವಿಧಾನಸಭಾ ಕ್ಷೇತ್ರದ ಶಾಸಕರಾಗಿ, ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾಗಿ ಹಾಗೂ ಕೃಷಿ, ಕಾನೂನು, ಸಂಸದೀಯ ಸಚಿವರಾಗಿ ಹಲವು ಪ್ರಮುಖ ಖಾತೆಗಳನ್ನು ಸಮರ್ಥವಾಗಿ ನಿಭಾಯಿಸಿರುವ ತಾವು, ಸರ್ಕಾರದ ನೀತಿ ನಿಯಮಗಳ ಬಗ್ಗೆ ಅಪಾರ ಅನುಭವ ಹೊಂದಿದ್ದೀರಿ. ಅಂತಹ ಹಿರಿಯ ನಾಯಕರಾದ ತಾವು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತಹ ಹೇಳಿಕೆ ನೀಡಿರುವುದು ತೀವ್ರ ಬೇಸರವನ್ನು ಉಂಟುಮಾಡಿದೆ ಎಂದು ದಿನೇಶ್ ಗೂಳಿಗೌಡ ತಿಳಿಸಿದ್ದಾರೆ.

ರೈತರ ಸಂಕಷ್ಟದ ಬಗ್ಗೆ ತಮ್ಮ ಕಾಳಜಿ ಹಾಗೂ ಗದಗ ಜಿಲ್ಲೆಯ ಜನರ ಪರವಾಗಿ ತಮಗೆ ಇರುವ ಆತಂಕದಂತೆಯೇ, ರಾಜ್ಯದ ಸಮಗ್ರ ರೈತರ ಬಗ್ಗೆ ಸರ್ಕಾರಕ್ಕೂ ಅಪಾರ ಕಾಳಜಿ ಇದೆ. ಬರ ಘೋಷಣೆ ವಿಚಾರದಲ್ಲಿ ಸರ್ಕಾರ ಯಾವುದೇ ರೀತಿಯ ರಾಜಕೀಯ ಒತ್ತಡ ಅಥವಾ ಪಕ್ಷಪಾತವನ್ನು ಮಾಡುವುದಿಲ್ಲ. ಈ ವಿಚಾರದಲ್ಲಿ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದ ನಿಯಮಾವಳಿಗಳನ್ನು ಕಡ್ಡಾಯವಾಗಿ ಪಾಲಿಸಬೇಕಾಗುತ್ತದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಕೇಂದ್ರ ಸರ್ಕಾರದ ನಿಗದಿತ ಬರ ನಿರ್ವಹಣಾ ಮಾರ್ಗಸೂಚಿ, ವೈಜ್ಞಾನಿಕ ಮಾನದಂಡಗಳು ಹಾಗೂ ನೆಲದ ವಾಸ್ತವ ಪರಿಸ್ಥಿತಿಯ ಆಧಾರದ ಮೇಲೆ ಬರ ಘೋಷಣೆ ಮಾಡಲಾಗುತ್ತದೆ. ಪ್ರಮುಖವಾಗಿ ಕೇಂದ್ರ ಸರ್ಕಾರದ ‘ಬರ ನಿರ್ವಹಣಾ ಕೈಪಿಡಿ-2020’ (Manual for Drought Management) ಹಾಗೂ ವಿಪತ್ತು ನಿರ್ವಹಣಾ ಮಾರ್ಗಸೂಚಿಗಳ ಅನ್ವಯ ಬರಗಾಲವನ್ನು ಘೋಷಿಸಲಾಗುತ್ತದೆ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

Rahul Gandhi : ಮೋದಿಯ ಆಪ್ತರ ವಿರುದ್ಧ ರಾಹುಲ್ ವಾಗ್ದಾಳಿ.. #pratidhvani

ಪ್ರಮುಖ ಮಾನದಂಡಗಳು

ಮಳೆ ಕೊರತೆ: ಸಾಮಾನ್ಯ ಮಳೆ ಪ್ರಮಾಣ ಹಾಗೂ ಸುರಿದ ಮಳೆಯ ನಡುವಿನ ವ್ಯತ್ಯಾಸ ಮತ್ತು ಶೇಕಡಾವಾರು ಮಳೆ ಕೊರತೆ.

ಒಣ ಮಳೆಯಾವಧಿ: ಸತತವಾಗಿ ಮಳೆಯಿಲ್ಲದೆ ಒಣ ಹವೆಯು ಮುಂದುವರಿದ ದಿನಗಳ ಅವಧಿ.

ಮಳೆ ಕೊರತೆಯ ಅವಧಿ ಮತ್ತು ತೀವ್ರತೆ: ಮಳೆ ಇಲ್ಲದಿರುವ ಸಮಯ ಹಾಗೂ ಹವಾಮಾನ ವೈಪರೀತ್ಯ.

ಬೆಳೆ ಹಾನಿ ಮತ್ತು ಬಿತ್ತನೆ ಪ್ರದೇಶ: ಬಿತ್ತನೆಯಾಗಿರುವ ಕ್ಷೇತ್ರದ ಇಳುವರಿ ಹಾಗೂ ಬೆಳೆಗಳ ಮೇಲಾಗುವ ವ್ಯತಿರಿಕ್ತ ಪರಿಣಾಮ.

ಉಪಗ್ರಹ ಚಿತ್ರಗಳು ಮತ್ತು ತೇವಾಂಶದ ಲಭ್ಯತೆ.

ಅಂತರ್ಜಲ ಕುಸಿತ ಹಾಗೂ ಜಲಾಶಯಗಳಲ್ಲಿ ನೀರಿನ ಲಭ್ಯತೆ ಆಧಾರದ ಮೇಲೆ ಬರಪೀಡಿತ ತಾಲೂಕುಗಳನ್ನು ಘೋಷಿಸಲಾಗುತ್ತದೆ. ಇದರಲ್ಲಿ ಗದಗ ಜಿಲ್ಲೆಯನ್ನು ಕೈಬಿಡಬೇಕು, ಮಂಡ್ಯ ಜಿಲ್ಲೆಯನ್ನು ಸೇರಿಸಬೇಕು ಅಥವಾ ಇನ್ನೊಂದು ಜಿಲ್ಲೆಯನ್ನು ಹೊರಗಿಡಬೇಕು ಎಂಬ ತಾರತಮ್ಯ ಇರುವುದಿಲ್ಲ. SDRF/NDRF ನಿಯಮಾವಳಿಗಳನ್ವಯ ರಾಜ್ಯದ ಬರ ಪರಿಸ್ಥಿತಿಯನ್ನು ಪರಿಶೀಲಿಸಲಾಗುತ್ತದೆ. ಅದರಂತೆಯೇ ಕೇಂದ್ರ ಸರ್ಕಾರ ಪರಿಹಾರ ನೀಡುವುದು.ಗದಗ ಸೇರಿದಂತೆ ಬರದ ಪರಿಸ್ಥಿತಿ ಎದುರಿಸುತ್ತಿರುವ ಯಾವುದೇ ಪ್ರದೇಶಕ್ಕೆ ಅನ್ಯಾಯವಾಗದಂತೆ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದ್ದಾರೆ.

ಬರಪೀಡಿತ ತಾಲೂಕುಗಳ ಪಟ್ಟಿಯನ್ನು ಹಂತ ಹಂತವಾಗಿ ಪರಿಷ್ಕರಿಸಲಾಗುತ್ತಿದ್ದು, ಉಳಿದ ತಾಲೂಕುಗಳನ್ನೂ ಪರಿಶೀಲಿಸಲಾಗುತ್ತಿದೆ. ಹೆಚ್.ಕೆ. ಪಾಟೀಲ್ ಅವರು ಪಕ್ಷದ ಹಿರಿಯ ನಾಯಕರು. ರಾಜಕೀಯ ಜೀವನದಲ್ಲಿ ಅಪಾರ ಅನುಭವ ಹೊಂದಿರುವ ನೀವು ರಾಜೀನಾಮೆ ಅಂತಹ ನಿರ್ಧಾರ ಪ್ರಕಟಿಸುವುದು ತರವಲ್ಲ ಎಂದಿದ್ದಾರೆ.

ಗದಗ ರೈತರ ಹಿತಾಸಕ್ತಿಯನ್ನು ಕಾಪಾಡಲು ಸರ್ಕಾರ ಬದ್ಧವಾಗಿದೆ. ರೈತರ ಹಿತವೇ ಸರ್ಕಾರದ ಮೊದಲ ಆದ್ಯತೆ. ಗದಗ ತಾಲೂಕಿನಲ್ಲಿ ಬರ ಪರಿಸ್ಥಿತಿ ಕುರಿತು ಈಗಾಗಲೇ ಅಧಿಕಾರಿಗಳು ವರದಿ ನೀಡಿದ್ದಾರೆ. ಕೇಂದ್ರ ಸರ್ಕಾರದ ನಿಯಮಾವಳಿಗಳಂತೆ ಸರ್ಕಾರ ಕ್ರಮಕೈಗೊಳ್ಳಲಿದೆ. ತಾವು ಸರ್ಕಾರದ ಮಾರ್ಗದರ್ಶಕರಾಗಬೇಕೇ ಹೊರತು ರಾಜೀನಾಮೆ ಅಂತಹ ನಿರ್ಧಾರ ಪ್ರಕಟಿಸಬಾರದು.ರಾಜ್ಯಕ್ಕೆ ಈಗ ಸಂಕಷ್ಟದ ಸಮಯ. ಈ ಸಮಯದಲ್ಲಿ ನಾವೆಲ್ಲರೂ ರೈತರ ಜೊತೆ ನಿಲ್ಲಬೇಕು. ಅದಕ್ಕಿಂತ ಮೊದಲು ಸರ್ಕಾರದ ಬೆನ್ನೆಲುಬಾಗಬೇಕು. ಆಗ ಮಾತ್ರ ರೈತರಿಗೆ ಪರಿಹಾರ ಸಿಗಲು ಸಾಧ್ಯ.

ಸರ್ಕಾರಕ್ಕೆ ನಿಮ್ಮ ಸಲಹೆ ಅಗತ್ಯವಿದೆ. ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ರೀತಿಯಲ್ಲಿ ಸರ್ಕಾರಕ್ಕೆ ಮಾರ್ಗದರ್ಶನ ನೀಡಬೇಕು. ಗದಗ ರೈತರು ಮಾತ್ರವಲ್ಲ ರಾಜ್ಯದ ರೈತರ ಹಿತಕಾಯಲು ನೀವು ಮುಂದಾಗಬೇಕು ಎಂದು ದಿನೇಶ್ ಗೂಳಿಗೌಡ ತಮ್ಮ ಪತ್ರದಲ್ಲಿ ಮನವಿ ಮಾಡಿದ್ದಾರೆ.

Tags: bengaluruCongress PartyDinesh GooligowdaDrought CrisisDrought DeclarationFarmers ReliefGadag MLAHK PatilKarnataka DroughtKarnataka PoliticsOpen LetterResignation Statement
Previous Post

ಗೃಹಲಕ್ಷ್ಮೀ ಫಲಾನುಭವಿಗಳಿಗೆ ಸಿಹಿಸುದ್ದಿ : 33 ಕಂತಿನ ಹಣ ಬಿಡುಗಡೆ ಬಗ್ಗೆ ಬಿಗ್ ಅಪ್ ಡೇಟ್.!

Next Post

ಶಾಸಕ ಹೆಚ್.ಕೆ.ಪಾಟೀಲ್ ಬರದ ಬಗ್ಗೆ ಪತ್ರ ಬರೆದಿರುವುದು ರಾಜ್ಯ ಸರ್ಕಾರದ ನಿಷ್ಕ್ರೀಯ ಆಡಳಿತಕ್ಕೆ ಸಾಕ್ಷಿ : ಜೆಡಿಎಸ್ ವ್ಯಂಗ್ಯ

Related Posts

ಸಿಎಂ ಹುದ್ದೆಗಾಗಿ ಡಿಕೆಶಿ ಕಸರತ್ತು: ಡಿಸಿಎಂ, ಸಿಎಂ ಆಗೋಕೆ ಇನ್ನೆಷ್ಟು ದಿನ..?
Top Story

KPSC ಮುಚ್ಚುವ ಬಗ್ಗೆ ಚಿಂತನೆ : ಸಿಎಂ ಡಿ.ಕೆ ಶಿವಕುಮಾರ್ ಮಹತ್ವದ ಹೇಳಿಕೆ

by ಪ್ರತಿಧ್ವನಿ
September 22, 2026
0

ಬೆಂಗಳೂರು : ಕೆಪಿಎಸ್ ಸಿಯಲ್ಲಿ ಹಗರಣಗಳು ಹೆಚ್ಚಿವೆ. ಇದನ್ನು ಕಾನೂನು ಚೌಕಟ್ಟಿನಲ್ಲಿ ಮುಚ್ಚುವ ಚಿಂತನೆಯಲ್ಲಿದ್ದೇವೆ ಎಂದು  ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಹೇಳಿದರು. https://youtu.be/nqHVSFNYLq0?si=YvQSA59nqZ9EPAmg ಸುದ್ದಿಗಾರರೊಂದಿಗೆ...

Read moreDetails
ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಿಂದ ವಿವಿಧ ಯೋಜನೆಗಳಡಿ ಸೌಲಭ್ಯ ನೀಡಲು ಅರ್ಜಿ ಆಹ್ವಾನ

ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಿಂದ ವಿವಿಧ ಯೋಜನೆಗಳಡಿ ಸೌಲಭ್ಯ ನೀಡಲು ಅರ್ಜಿ ಆಹ್ವಾನ

September 22, 2026
SBI ಕಳ್ಳಾಟಕ್ಕೆ ಚಾಟಿ ಬೀಸಿದ ಸುಪ್ರೀಂಕೋರ್ಟ್​..! ನಾಳೆ ಲಾಸ್ಟ್​ ಡೇಟ್​..

SBI ಮಹತ್ವದ ಸೂಚನೆ: ವೇತನ ಹಾಗೂ ಪಿಂಚಣಿದಾರರು ಸೆಪ್ಟೆಂಬರ್ 25ರೊಳಗೆ ಈ ಕೆಲಸ ಮುಗಿಸಿಕೊಳ್ಳಿ!

September 22, 2026
ಏಷ್ಯನ್ ಗೇಮ್ಸ್: ಸ್ಮೃತಿ ಮಂಧಾನ ಭರ್ಜರಿ ಆಟ; ಭಾರತ ಮಹಿಳಾ ಕ್ರಿಕೆಟ್ ತಂಡಕ್ಕೆ ಚಿನ್ನದ ಪದಕ

ಏಷ್ಯನ್ ಗೇಮ್ಸ್: ಸ್ಮೃತಿ ಮಂಧಾನ ಭರ್ಜರಿ ಆಟ; ಭಾರತ ಮಹಿಳಾ ಕ್ರಿಕೆಟ್ ತಂಡಕ್ಕೆ ಚಿನ್ನದ ಪದಕ

September 22, 2026
ಸರ್ಕಾರಿ ಪಿಯು ಕಾಲೇಜುಗಳಲ್ಲಿ 814 ಉಪನ್ಯಾಸಕರ ಹುದ್ದೆಗಳ ನೇರ ನೇಮಕಾತಿಗೆ ರಾಜ್ಯ ಸರ್ಕಾರ ಅನುಮೋದನೆ

ಸರ್ಕಾರಿ ಪಿಯು ಕಾಲೇಜುಗಳಲ್ಲಿ 814 ಉಪನ್ಯಾಸಕರ ಹುದ್ದೆಗಳ ನೇರ ನೇಮಕಾತಿಗೆ ರಾಜ್ಯ ಸರ್ಕಾರ ಅನುಮೋದನೆ

September 22, 2026
Next Post
ಶಾಸಕ ಹೆಚ್.ಕೆ.ಪಾಟೀಲ್ ಬರದ ಬಗ್ಗೆ ಪತ್ರ ಬರೆದಿರುವುದು ರಾಜ್ಯ ಸರ್ಕಾರದ ನಿಷ್ಕ್ರೀಯ ಆಡಳಿತಕ್ಕೆ ಸಾಕ್ಷಿ : ಜೆಡಿಎಸ್ ವ್ಯಂಗ್ಯ

ಶಾಸಕ ಹೆಚ್.ಕೆ.ಪಾಟೀಲ್ ಬರದ ಬಗ್ಗೆ ಪತ್ರ ಬರೆದಿರುವುದು ರಾಜ್ಯ ಸರ್ಕಾರದ ನಿಷ್ಕ್ರೀಯ ಆಡಳಿತಕ್ಕೆ ಸಾಕ್ಷಿ : ಜೆಡಿಎಸ್ ವ್ಯಂಗ್ಯ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada