ಥೈರಾಯ್ಡ್ ಅನ್ನೋದು ಇತ್ತೀಚಿನ ದಿನಗಳಲ್ಲಿ ತುಂಬಾನೇ ಕಾಮನ್ ಆದ ಸಮಸ್ಯೆಯಾಗಿದ್ದು ಹೆಚ್ಚಿನ ಹೆಣ್ಣು ಮಕ್ಕಳಲ್ಲಿ ಈ ಪ್ರಾಬ್ಲಮ್ ಜಾಸ್ತಿಯಾಗಿದೆ. ಅಯೋಡಿನ್ ಅಂಶದ ಕೊರತೆ ಹಾಗೂ ನಿಯಮಿತವಾಗಿ ದೇಹದ ಬೆಳವಣಿಗೆ ಮತ್ತು ಪೋಷಣೆಗೆ ಬೇಕಾದ ಪೌಷ್ಟಿಕ ಆಹಾರ ಸೇವಿಸದೇ ಇರುವುದು ಕೂಡ ಥೈರಾಯ್ಡ್ ಸಮಸ್ಯೆಗೆ ಕಾರಣವಾಗುತ್ತದೆ. ನಮ್ಮ ಜಡ ಜೀವನ ಶೈಲಿ, ಆಹಾರ ಪದ್ಧತಿ ಮುಖ್ಯವಾಗಿ ಇದೆಲ್ಲದರ ಜೊತೆಗೆ ನಮ್ಮ ಡೈಲಿ ಫಿಸಿಕಲ್ ಹಾಗೂ ಮೆಂಟಲ್ ಆಕ್ಟಿವಿಟಿಗಳು. ಮಾನಸಿಕ ಒತ್ತಡದಿಂದಲೂ ಹಾಗೂ ವ್ಯಾಯಾಮ ಎಕ್ಸರ್ಸೈಜ್ ಏನು ಮಾಡದೆ ಇದ್ದರೂ ಕೂಡ ಥೈರಾಯ್ಡ್ ಕಾಡುತ್ತದೆ. ಇನ್ನು ಥೈರಾಯ್ಡ್ ಬಂದಾಗ ಯಾವ ರೀತಿಯ ಸಿಂಪ್ಟಮ್ ನಮ್ಮನ್ನು ಕಾಡುತ್ತದೆ ಅನ್ನುವ ಮಾಹಿತಿ ಹೀಗಿದೆ

- * ಹೆಚ್ಚು ಆಯಾಸ ಏನೇ ಕೆಲಸ ಮಾಡಿದ್ದರು ದಣಿವು , ಸೋಮಾರಿತನ ಹಾಗೂ ಶಕ್ತಿಯ ಕೊರತೆಯ ಭಾವನೆ.
- * ಇದಕ್ಕಿಂತ ಹಾಗೆ ತೂಕ ಹೆಚ್ಚಾಗುವಂತದ್ದು ಅದು ಕೂಡ ದೇಹದ ಮಧ್ಯ ಭಾಗದಲ್ಲಿ ಅಂದ್ರೆ ಸೊಂಟ ಹಾಗೂ ಹೊಟ್ಟೆಯ ಭಾಗದಲ್ಲಿ ಫ್ಯಾಟ್ ಜಾಸ್ತಿ ಆಗುತ್ತದೆ.
- *ಚರ್ಮ ಒಣಗುವಂತದ್ದು ತುಂಬಾನೇ ರಫ್ ಆಗುತ್ತದೆ ಹಾಗೂ ಚರ್ಮದಲ್ಲಿ ತುರಿಕೆ ಜಾಸ್ತಿಯಾಗುತ್ತದೆ.
- *ಸೌಮ್ಯ ವಾತಾವರಣ ಇದ್ದರೂ ಕೂಡ ಚಳಿ ಅಥವಾ ಶೀತ ಹೆಚ್ಚು ಕಾಡುವುದು .
- *ಹೆಚ್ಚು ಜನಕ್ಕೆ ಥೈರಾಯಿಡ್ ಸಮಸ್ಯೆ ಎದುರಾದಾಗ ಮೊದಲಿಗೆ ಶುರುವಾಗುವುದು ಕೂದಲು ಉದುರುವುದು ಹಾಗೂ ದಟ್ಟವಾದ ಕೂದಲು ತುಂಬಾನೇ ತೆಳ್ಳಗಾಗುವುದು.
- *ಕಾನ್ಸ್ಟಿಪೇಶನ್ ಸಮಸ್ಯೆ ಕೂಡ ಒಂದಾಗಿದ್ದು ಜೀರ್ಣಕ್ರಿಯೆ ಸರಿಯಾಗಿ ಆಗುವುದಿಲ್ಲ ಹಸಿವು ಹೆಚ್ಚಿರುವುದಿಲ್ಲ ಹಾಗೂ ಮಲ ವಿಸರ್ಜನೆಗೆ ಕಷ್ಟವಾಗುವಂತದ್ದು.
- *ಥೈರಾಯ್ಡ್ ಸಮಸ್ಯೆ ಇದ್ದಾಗ ಹಾರ್ಮೋನ್ ಅಲ್ಲೂ ಕೂಡ ಬದಲಾವಣೆಗಳಾಗುತ್ತದೆ. ಇದರಿಂದ ಡಿಪ್ರೆಶನ್ ಗೆ ಹೋಗುವಂತ ಚಾನ್ಸಸ್ ಜಾಸ್ತಿ ಇರುತ್ತದೆ ಕೋಪ ನಗು ಹೀಗೆ ಮೂಡ್ ಸ್ವಿಂಗ್ ಹೆಚ್ಚು .
- *ಮುಖ್ಯವಾಗಿ ಥೈರಾಯ್ಡ್ ಇದ್ದವರಿಗೆ ಪಿರೇಡ್ಸ್ ಸರಿಯಾಗಿ ಆಗುವುದಿಲ್ಲ ಕೆಲವೊಬ್ಬರಿಗೆ ಪಿರಿಯಡ್ಸ್ ಇರ್ರೆಗುಲರ್ ಇದ್ರೆ ,ಇನ್ನು ಕೆಲವರಿಗೆ ಪಿರಿಯಡ್ಸ್ ಸಂದರ್ಭದಲ್ಲಿ ಬ್ಲೀಡಿಂಗ್ ಹೆಚ್ಚಿರುತ್ತದೆ.