ಇಂದು ಮಹಾಲಕ್ಷ್ಮಿಪುರಂನ ಬಿಜೆಎಸ್ ಕಾಲೇಜಿನಲ್ಲಿ (BGS college) ನಿರ್ಮಲಾನಂದ ಶ್ರಿಗಳನ್ನು (Nirmalananda sri) ಭೇಟಿಯಾಗಿ ಡಿಸಿಎಂ ಶಿವಕುಮಾರ್ (Dk Shivakumar) ಸುದೀರ್ಘ ಮಾತುಕತೆ ನಡೆಸಿದ್ದಾರೆ.ರಾಜಕೀಯ ಬಿರುಗಾಳಿ ಎಬ್ಬಿಸಿರುವ ಜಾತಿ ಜನಗಣತಿ ಸಂಬಂಧ ನಿರ್ಮಲಾನಂದ ಶ್ರಿಗಳ ಜೊತೆಗೆ ಡಿಸಿಎಂ ಶಿವಕುಮಾರ್ ಸುದೀರ್ಘ ಸಮಾಲೋಚನೆ ನಡೆಸಿದ್ದಾರೆ ಎನ್ನಲಾಗಿದೆ.

ಈ ಸಂದರ್ಭದಲ್ಲಿ ತಮ್ಮ ಸಮುದಾಯದ ಹಿತ ಕಾಯುವಂತೆ ನಿರ್ಮಲಾನಂದನಾಥ ಶ್ರೀಗಳು ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.

ಸ್ವಾಮೀಜಿಗಳ ಈ ಸಲಹೆಗೆ ಪ್ರತಿಕ್ರಿಯಿಸಿದ ಡಿಸಿಎಂ ಸ್ಕಾ ಶಿವಕುಮಾರ್, ಇಂದು ಸಮುದಾಯದ ಜನಪ್ರತಿನಿಧಿನಗಳ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ ಮುಂದುವರಿಯುವುದಾಗಿ ಭರವಸೆ ನೀಡಿದ್ದಾರೆ ಎನ್ನಲಾಗಿದೆ.