ಮುಡಾ ಹಗರಣದ (Muda scam) ತನಿಖೆ ನಡಿಸಿದ ಲೋಕಾಯುಕ್ತ ಪೊಲೀಸರು ಈಗಾಗಲೇ ಸಿಎಂ ಸಿದ್ದರಾಮಯ್ಯ ಗೆ (Cm Siddaramaiah) ಕ್ಲೀನ್ ಚಿಟ್ ನೀಡಿ ನ್ಯಾಯಾಲಯಕ್ಕೆ ಬಿ ರಿಪೋರ್ಟ್ (B report) ಸಲ್ಲಿಸಿದ್ದಾರೆ. ಈ ಮಧ್ಯೆ ಇದನ್ನು ಪ್ರಶ್ನಿಸಿ ದೂರುದಾರ ಸ್ನೇಹಮಯಿ ಕೃಷ್ಣ (Snehamayi krishna) ಕೋರ್ಟ್ ಮೊರೆ ಹೋಗಿದ್ದು ವಾದ ಆಲಿಸಿರುವ ನ್ಯಾಯಾಲಯ ತೀರ್ಪು ಕಾಯ್ದಿರಿಸಿದೆ.

ಈ ಕುರಿತು ಸ್ನೇಹಮಯಿ ಕೃಷ್ಣ ಮೈಸೂರಲ್ಲಿ ಮಾತನಾಡಿದ್ದಾರೆ.ಮುಡಾ ಕೇಸ್ ನಲ್ಲಿ ತಮ್ಮ ಹೋರಾಟಕ್ಕೆ ನ್ಯಾಯ ಸಿಕ್ಕೇ ಸಿಗುತ್ತೆ ಎಂಬ ಭರವಸೆಯನ್ನು ಸ್ನೇಹಮಯಿ ಕೃಷ್ಣ ವ್ಯಕ್ತಪಡಿಸಿದ್ದಾರೆ. ಈ ಕುರಿತು ಇವತ್ತು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಆದೇಶ ಬರಲಿದೆ.
ಹೀಗಾಗಿ ಲೋಕಾಯುಕ್ತ ವರದಿ (Lokayukta report) ತಿರಸ್ಕಾರವಾಗುತ್ತೆ. ಲೋಕಾಯುಕ್ತ ಅಧಿಕಾರಿಗಳು, ಆರೋಪಿಗಳನ್ನ ಬಜಾವ್ ಮಾಡಲು ಸುಳ್ಳು ವರದಿ ನೀಡಿದ್ದಾರೆ.ಸಾಕ್ಷಿಗಳ ಕೊರತೆ ಅಂತ ವರದಿಯಲ್ಲಿ ಉಲ್ಲೇಖಿಸಿದ್ದಾರೆ.ನಾನು ಸಾಕಷ್ಟು ದಾಖಲೆಗಳನ್ನ ಕೊಟ್ಟಿದ್ದೆ. ಅದರ ಪ್ರಕಾರ ತನಿಖೆ ಮಾಡಿಲ್ಲ ಎಂದಿದ್ದಾರೆ.

ಹೀಗಾಗಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಸಿಎಂ ಸಿದ್ದರಾಮಯ್ಯ ಸೇರಿ ಎಲ್ಲಾ ಆರೋಪಿಗಳ ಪಾತ್ರವನ್ನು ನಮ್ಮ ವಾದದಲ್ಲಿ ಮಂಡನೆ ಮಾಡಿದ್ದೇನೆ. ಈ ತೀರ್ಪು ಹೇಗೆ ಬಂದರೂ ನಾನು ನನ್ನ ಹೋರಾಟ ಮುಂದುವರಿಸ್ತೀನಿ.ಅಕ್ರಮದ ವಿರುದ್ಧ ಕಾನೂನು ಹೋರಾಟ ನಿಲ್ಲಲ್ಲ ಎಂದು ಹೇಳಿದ್ದಾರೆ.