ರಾಜ್ಯ ಸರ್ಕಾರ ಜಾತಿ ಜೇನುಗೂಡಿಗೆ ಕೈಹಾಕಿದ್ದು, ಸದ್ಯ ಜಾತಿ ಜನಗಣತಿ ವರದಿ (Caste census report) ಸಂಪುಟದಲ್ಲಿ (Cabinet) ಚರ್ಚೆಗೆ ಬಂದ ಬೆನ್ನಲ್ಲೇ ರಾಜಕೀಯ ಕಿಚ್ಚು ಹೆಚ್ಚಾಗಿದೆ.ಹೀಗಾಗಿ ರಾಜ್ಯದಲ್ಲಿ ದಿನೇ ದಿನೇ ಜಾತಿ ಜನಗಣತಿ ಜ್ವಾಲೆ ಹೆಚ್ಚಾಗ್ತಿದೆ.ರಾಜ್ಯ ಪ್ರಬಲ ಸಮುದಾಯದ ಪೈಕಿ ಒಂದಾಗಿ ಗುರುತಿಸಿಕೊಂಡಿರುವ ಒಕ್ಕಲಿಗ (Volkkaliga)ಸಮಾಜದ ಸಚಿವರು, ಶಾಸಕರೆಲ್ಲರು ಈ ಬಗ್ಗೆ ಸಭೆ ನಡೆಸಲು ಮುಂದಾದ ಬೆನ್ನಲ್ಲೆ, ಈಗ ಲಿಂಗಾಯತ (Lingayat) ಸಮಾಜ ಅಲರ್ಟ್ ಆಗಿದೆ.

ಹೀಗಾಗಿ ಸದ್ಯದಲ್ಲೇ ಜಾತಿಗಣತಿ ವರದಿಯ ಬಗ್ಗೆ ಚರ್ಚಿಸಲು ಲಿಂಗಾಯತ ನಾಯಕರ ಸಭೆ ಕರೆಯಲಾಗಿದೆ.ಕಾಂಗ್ರೆಸ್ ಹಿರಿಯ ನಾಯಕ, ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ (Shyamanur shiva shankarappa) ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಲಿಂಗಾಯತ ಸಮುದಾಯದ ಶಾಸಕರ ಸಭೆ ಕರೆದಿದ್ದಾರೆ.ಏಪ್ರಿಲ್ 17 ರಂದು ನಡೆಯುವ ವಿಶೇಷ ಸಂಪುಟ ಸಭೆಗೂ ಮುನ್ನ ಈ ಸಭೆ ನಡೆಯಲಿದೆ.

ಈ ಬೆಳವಣಿಗೆ ತೀವ್ರ ಕುತೂಹಲಕ್ಕೆ ಕಾರಣವಾಗಿದ್ದು, ಜಾತಿ ಗಣತಿ ವರದಿಯನ್ನು ವಿರೋಧಿಸುವ ನಿಟ್ಟಿನಲ್ಲಿ ಪಕ್ಷಾತೀತವಾಗಿ ಒಕ್ಕಲಿಗೆ ಮತ್ತು ಲಿಂಗಾಯತ ನಾಯಕರು ಒಂದೇ ವೇದಿಕೆಗೆ ಬರಲಿದ್ದಾರಾ..? ಎಂಬ ಚರ್ಚೆ ರಾಜಕೀಯ ಪಡಸಾಲೆಯಲ್ಲಿ ಜೋರಾಗಿದೆ.