ಜಾತಿಗಣತಿ ವರದಿ (Caste census) ಕುರಿತು ಮೇಲ್ವರ್ಗಗಳ ವಿರೋಧ ವ್ಯಕ್ತವಾಗಿರುವ ವಿಚಾರಕ್ಕೆ ಸಂಬಂಧಪಟ್ಟಂತೆ ಇಂದು ವಿಕಾಸಸೌಧದಲ್ಲಿ ಕಾರ್ಮಿಕ ಸಚಿವ ಸಂತೋಷ್ ಲಾಡ್ (Santosh lad) ಮಾತನಾಡಿದ್ದಾರೆ.
ಪ್ರಪಂಚದಲ್ಲಿ ಯಾವುದೇ ದೇಶದಲ್ಲಿ ಪೊಲಿಟಿಕಲ್ ಜಸ್ಟಿಫೈ ಮಾಡಲು ಜಾತಿಗಣತಿ ಬೇಕು. ನನಗಿರುವ ಮಾಹಿತಿ ಪ್ರಕಾರ ಅಸೆಂಬ್ಲಿವಾರು ಜಾತಿಗಣತಿ ಕುರಿತು ಸಿಡಿ ಕೊಡುವ ಸಾಧ್ಯತೆ ಇದೆ ಎಂದಿದ್ದಾರೆ.ನಿಮ್ಮ ನಿಮ್ಮ ಸಮುದಾಯ ಎಷ್ಟಿದೆ ಅಂತ ಚೆಕ್ ಮಾಡಿ ಜಸ್ಟಿಫೈ ಮಾಡಲು ಅವಕಾಶ ಇದೆ ಎಂದಿದ್ದಾರೆ.

ರಾಜಕೀಯವಾಗಿ ಜಾತಿಗಣತಿಯೇ ಅತಿಮುಖ್ಯ.ಅಸೆಂಬ್ಲಿ ಚುನಾವಣೆ ನಡೆದ ಆರು ತಿಂಗಳಲ್ಲಿ ಲೋಕಸಭೆ ಚುನಾವಣೆಗೆ ನಲವತ್ತು ಲಕ್ಷ ಮತಗಳು ಹೆಚ್ಚಾಗುತ್ತೆ. ಹೀಗಾಗಿ ಜಾತಿಗಣತಿ ಬೇಕಾಗಿದೆ, ಸಮೀಕ್ಷೆ ಮಾಡಿರೋದು ಟೀಚರ್‌ಗಳು.ಟೀಚರ್‌ಗಳಿಗೆ ಇಂತಹದ್ದೆ ಮನೆಗೆ ಹೋಗಿ ಅಂತ ಹೇಳಕಾಗುತ್ತಾ..? ಎಂದಿದ್ದಾರೆ.
ಇನ್ನು ವರದಿಯನ್ನೇ ನೋಡದೆ ಸಾರಾಸಗಟಾಗಿ ಸರಿ ಇಲ್ಲ ಎನ್ನುವುದು ಎಷ್ಟು ಸರಿ.? ನಿಮ್ಮ ಮನೆಗೆ ಬಂದಿಲ್ಲ ಅಂದ್ರೆ 95% ಮನೆಗೆ ಹೋಗಿದ್ದಾರಲ್ಲ.ಸಿಡಿ ಬಂದ ಮೇಲೆ ನಮ್ಮ ನಮ್ಮ ಸಮಾಜ ಎಷ್ಟಿದೆ ಅಂತ ನೋಡಿಕೊಳ್ಳಿ. ಡಿಕೆಶಿಯವ್ರು ಸಭೆ ಕರೆದಿದ್ದಾರೆ ಅಂದ್ರೆ ಸಹಜವಾಗಿ ಆ ಸಮುದಾಯಗಳಿಗೆ ಆತಂಕ ಇರುತ್ತೆ, ಅದಕ್ಕೆ ಸಭೆ ಕರೆದಿರ್ತಾರೆ ಎಂದಿದ್ದಾರೆ.

ಈ ಸ್ವಾಮೀಜಿಗಳು, ಜಾತಿ ಸಂಘಟನೆಗಳ ಲೆಕ್ಕಾಚಾರ ಕೇಳದ್ರೆ ಕರ್ನಾಟಕದಲ್ಲಿ ಜನಸಂಖ್ಯೆ 12 ಕೋಟಿ ಆಗುತ್ತೆ.ಸರ್ಕಾರದಿಂದ ಅಧಿಕೃತವಾಗಿ ವರದಿ ಬಂದಿದೆ. ಆ ವರದಿ ನೋಡೋಣ, ಸಾರ್ವಜನಿಕ ಚರ್ಚೆಗೆ ಬರಲಿ.ವರದಿಯಲ್ಲಿ ಬದಲಾವಣೆ ತರಲು ಅವಕಾಶ ಇದ್ರೆ ತರೋಣ ಎಂದಿದ್ದಾರೆ.