ಭಾರತದ ಮೇಲೆ ವಾಟ್ಸಪ್ ಹೇರುತ್ತಿರುವ ಹೊಸ ಗೌಪ್ಯತಾ ನೀತಿ ಯುರೋಪಿನಲ್ಲಿ ನಿಷೇಧ ಸಾಧ್ಯತೆ

ವಾಟ್ಸಾಪ್‌ನ ಹೊಸ ಗೌಪ್ಯತಾ ನೀತಿಯು ತನ್ನ ಮೂಲ ಕಂಪೆನಿ ಫೇಸ್‌ಬುಕ್‌ನೊಂದಿಗೆ ಡೇಟಾ ಹಂಚುವುದನ್ನು ಅನುಮತಿಸುತ್ತದೆ ಎನ್ನುವುದರ ಹಿನ್ನೆಲೆಯಲ್ಲಿ ಜರ್ಮನಿಯು ವಾಟ್ಸಪ್ ಅಪ್ಡೇಟ್ ನ್ನು ಬ್ಯಾನ್ ಮಾಡಿರುವುದರಿಂದ ವಾಟ್ಸಪ್‌ಗೆ ಹಿನ್ನಡೆಯಾಗಿದೆ. ಅಲ್ಲದೆ ಪ್ರಕರಣವನ್ನು ಯುರೋಪಿಯನ್ ಡಾಟಾ ಪ್ರೊಟೆಕ್ಷನ್ ಬೋರ್ಡಿಗೆ ಸಲ್ಲಿಸುವ ಮೂಲಕ ಜರ್ಮನಿಯು ಯುರೋಪಿನಾದ್ಯಂತ ವ್ಯಾಪಕ ನಿಷೇಧಕ್ಕಾಗಿ ಕೋರಿದೆ ಎಂದು ಹೇಳಲಾಗುತ್ತಿದೆ.

ಅಪ್ಲಿಕೇಶನ್‌ನ ಹೊಸ ನಿಯಮಗಳಿಗೆ ಒಪ್ಪಿಕೊಳ್ಳುವಂತೆ ಭಾರತದಲ್ಲೂ ಕಳೆದ ವಾರದಿಂದ ಮೇಲಿಂದ ಮೇಲೆ ನೋಟಿಫಿಕೇಶನ್‌ಗಳು ಬರುತ್ತಲೇ ಇದೆ. ವಾಟ್ಸಪ್‌ನ ಈ ‘ಟೇಕಿಟ್ ಅಥವಾ ಲೀವಿಟ್’ ನೀತಿಯ ವಿರುದ್ಧ ಜಗತ್ತಿನಾದ್ಯಂತ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಅಪ್ಡೇಟ್ ಮಾಡಲೇಬೇಕೆಂದು ವಿಧಿಸಲಾಗಿದ್ದ ಫೆಬ್ರವರಿಯ ಗಡುವನ್ನು ಮೇ ವರೆಗೆ ವಿಸ್ತರಿಸಲಾಗಿತ್ತು.

ಈಗ ಜರ್ಮನಿಯು ನವೀಕರಣಕ್ಕೆ ನಿಷೇಧ ಹೇರಿರುವುದರಿಂದ ಅಪ್ಲಿಕೇಶನ್‌ನಿಂದ ಹಣ ಗಳಿಸುವ ವಾಟ್ಸಾಪ್‌ನ ಮಹತ್ವಾಕಾಂಕ್ಷೆಗೆ ಹಿನ್ನಡೆಯಾದಂತಾಗಿದೆ.

ವಾಟ್ಸಾಪ್‌ನ ಅತಿ ದೊಡ್ಡ ಮಾರುಕಟ್ಟೆಯಾಗಿರುವ ಭಾರತದಲ್ಲಿ ಈ ಅಪ್ಲಿಕೇಶನ್‌ಗೆ 40 ಕೋಟಿ ಗ್ರಾಹಕರಿದ್ದಾರೆ. ತನ್ನ ಡೇಟಾವನ್ನು ಇತರ ಕಂಪೆನಿಗಳೊಂದಿಗೆ ವಾಟ್ಸಪ್ ಹಂಚಿಕೊಳ್ಳಲಿದೆ ಎಂದು ಮೊದಲು ಘೋಷಣೆಯಾದಾಗ ಯುರೋಪಿನ ಬಳಕೆದಾರರಂತೆ ಭಾರತೀಯರು ಸಹ ಇತರ ಮೆಸೇಜಿಂಗ್ ಪ್ಲಾಟ್‌ಫಾರ್ಮ್‌ಗಳಾದ ಸಿಗ್ನಲ್, ಟೆಲಿಗ್ರಾಂನಂತಹ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳುವ ಮೂಲಕ ಪ್ರತಿಭಟಿಸಿದ್ದರು. ಭಾರತೀಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಭಾಗವಾಗಿ ವಾಟ್ಸಪ್ ದೇಶದ ಎಲ್ಲಾ ಪ್ರಮುಖ ದಿನಪತ್ರಿಕೆಗಳಲ್ಲಿ ಮೊದಲ ಪುಟದ ಜಾಹೀರಾತು ನೀಡಿತ್ತು. ಭಾರತದ ಬೃಹತ್ ಡಿಜಿಟಲ್ ಆರ್ಥಿಕತೆಯಲ್ಲಿ ಹೊಸ ಬೆಳವಣಿಗೆ ನಿರೀಕ್ಷಿಸುವ ವಾಟ್ಸಪ್ ಯಾವ ಕಾರಣಕ್ಕೂ ಇಲ್ಲಿನ ಬಳಕೆದಾರರ ಅನ್ನು ಕಳೆದುಕೊಳ್ಳಲು ಇಚ್ಛಿಸಲು ಸಾಧ್ಯವೇ ಇಲ್ಲ.

ಆದರೆ ಗೌಪ್ಯತಾ ಕಾನೂನಗಳಂತಹ ಕಠಿಣ ಕಾನೂನುಗಳನ್ನು ಭಾರತ ಹೊಂದಿಲ್ಲದೇ ಇರುವುದರಿಂದ ಭಾರತೀಯ ಬಳಕೆದಾರರ ಗೌಪ್ಯತೆಯನ್ನು ಪಣಕ್ಕಿಟ್ಟಂತಾಗಿದೆ. ಭಾರತದಲ್ಲಿ ವೈಯಕ್ತಿಕ ಡಾಟಾ ಕಾಯ್ದೆಯನ್ನು ಇನ್ನೂ ಜಾರಿಗೆ ತರಲಾಗಿಲ್ಲ. 

ವಾಟ್ಸಾಪ್ ತನ್ನ ಗೌಪ್ಯತೆ ನವೀಕರಣವನ್ನು ಮೊದಲು ಘೋಷಿಸಿದಾಗ ನವೀಕರಣದ ಕಡ್ಡಾಯ ಸ್ವರೂಪವನ್ನು ಖಂಡಿಸಿ competition commission of India ತನಿಖೆಗೆ ಕರೆ ನೀಡಿತು.  ಭಾರತೀಯ ಮಾರುಕಟ್ಟೆಯಲ್ಲಿ ವಾಟ್ಸಾಪ್ ಮತ್ತು ಫೇಸ್‌ಬುಕ್ ತಮ್ಮ ನೆಟ್‌ವರ್ಕ್‌ನ್ನು ದುರುಪಯೋಗಪಡಿಸಿಕೊಂಡಿದೆ ಎಂದು ಆಯೋಗ ಟೀಕಿಸಿತು. ಆದರೆ ಭಾರತದಲ್ಲಿ ಪ್ರಾಯೋಗಿಕವಾಗಿ ಬಳಕೆದಾರರಿಗೆ ಪ್ಲ್ಯಾಟ್‌ಫಾರ್ಮ್‌ಗಳನ್ನು ಬದಲಾಯಿಸಲು ಸೀಮಿತ ಆಯ್ಕೆಗಳು ಮಾತ್ರ ಇವೆ.

ದೆಹಲಿ ಹೈಕೋರ್ಟಿನಲ್ಲಿ ಫೇಸ್‌ಬುಕ್‌ ‌ನ ಲಾಭಕ್ಕಾಗಿ “ಬಳಕೆದಾರರ ವೈಯಕ್ತಿಕ ಡಾಟಾದ ಮೇಲಿನ ಆಕ್ರಮಣ” ಮತ್ತು ಹೊಸ ಅಪ್ಡೇಟ್ “ಬಳಕೆದಾರರ ಮೇಲಿರುವ ಎರಡಲಗಿನ ಕತ್ತಿ” ಎಂದು ಪ್ರಕರಣ ದಾಖಲಾಗಿದೆ. ಹೈ ಕೋರ್ಟ್ ಮೇ 21ರಂದು ಈ ಸಂಬಂಧ ವಿಚಾರಣೆ ನಡೆಸಲಿದೆ. 

ಈ ಮಧ್ಯೆ ಬಳಕೆದಾರರ ಮಾಹಿತಿಯನ್ನು ಸರ್ಕಾರದ ಕೋರಿಕೆಯ ಮೇರೆಗೆ ಆಡಳಿತಕ್ಕೆ ನೀಡಬೇಕು ಎಂದು ಒತ್ತಾಯಿಸುವ ಹೊಸ ಇಂಟರ್ನೆಟ್ ನೀತಿಯನ್ನು ಜಾರಿಗೊಳಿಸಲು ಭಾರತ ಸರ್ಕಾರ ಹೊರಟಿದೆ. ಇದು ‘ಡಿಜಿಟಲ್ ಸರ್ವಾಧಿಕಾರ’ಕ್ಕೆ ಕಾರಣವಾಗುತ್ತದೆ ಎಂಬ ಟೀಕೆಗಳು ದೇಶಾದ್ಯಂತ ವ್ಯಕ್ತವಾದರೂ ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿಯುವಂತೆ ತೋರುತ್ತಿಲ್ಲ.

ವಾಟ್ಸಾಪ್ ಅನ್ನು ದೈನಂದಿನ ಜೀವನದಲ್ಲಿ ‘ಅತಿ ಅವಶ್ಯಕ’ ಎಂದು ಪರಿಗಣಿಸಲಾಗಿರುವುದರಿಂದ ಮತ್ತು ಗೌಪ್ಯತಾ ನಿಯಮಗಳನ್ನು ನಿಷೇಧಿಸುವ ನಿಯಮಗಳು ಇಲ್ಲಿ ಇಲ್ಲದೇ ಇರುವುದರಿಂದ ಅದರ ಹೆಚ್ಚಿನ ಬಳಕೆದಾರರು ಅಂತಿಮವಾಗಿ ಹೊಸ ಗೌಪ್ಯತೆ ನೀತಿಯನ್ನು ಸ್ವೀಕರಿಸುತ್ತಾರೆ.  ಅಂತಿಮವಾಗಿ ವಾಟ್ಸಪ್ಗೆ ಭಾರತೀಯ ಬಳಕೆದಾರರ ಡೇಟಾವೇ ಮೊದಲ ಟಾರ್ಗೆಟ್ ಆಗಿರುವುದರಿಂದ ಇಲ್ಲಿ ಅದು ತನ್ನ ಗೌಪ್ಯತಾ ನೀತಿಗಳನ್ನು ಬದಲಾಯಿಸುತ್ತದೆ ಎಂದು ಯಾವ ನಿರೀಕ್ಷೆಗಳನ್ನೂ ಇಟ್ಟುಕೊಳ್ಳುವಂತಿಲ್ಲ.

Related posts

Latest posts

ಕುಂಭ ಮೇಳ ಸಂದರ್ಭದಲ್ಲಿ ಮಾಡಿದ 1 ಲಕ್ಷ ಕೋವಿಡ್-19 ಪರೀಕ್ಷೆಗಳು ನಕಲಿ: ತನಿಖಾ ವರದಿ

ಹರಿದ್ವಾರದ ಕುಂಭ ಮೇಳ ಸಂದರ್ಭದಲ್ಲಿ ಮಾಡಲಾಗಿದ ನಾಲ್ಕು ಲಕ್ಷ ಕೋವಿಡ್ ಟೆಸ್ಟ್ ಫಲಿತಾಂಶಗಳಲ್ಲಿ ಹಲವು ನಕಲಿ ಎಂದು ಉತ್ತರಾಖಂಡ ಆರೋಗ್ಯ ಇಲಾಖೆ ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ. ವಿವರವಾದ ತನಿಖೆಯ 1,600 ಪುಟಗಳಲ್ಲಿ...

ನನ್ನ ಹೇಳಿಕೆಯಿಂದ ನಾನು ಹಿಂದೆ ಸರಿಯಲ್ಲ : ನಟ ಚೇತನ್ ಸ್ಪಷ್ಟನೆ

ಬ್ರಾಹ್ಮಣ್ಯ ವಿರೋಧಿ ಹೇಳಿಕೆ ಎಂಬ ಆರೋಪದ ಅಡಿ ಇಂದು ಬಸವನಗುಡಿ ಪೊಲೀಸರ ಮುಂದೆ ಹಾಜರಾದ ನಟ ಚೇತನ್ ತನ್ನ ಹೇಳಿಕೆಯ ಬಗ್ಗೆ ಪೊಲೀಸರ ಮುಂದೆ ಸ್ಪಷ್ಟನೆ ದಾಖಲಿಸಿದ್ದಾರೆ. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ...

ಚಿಕ್ಕಬಳ್ಳಾಪುರ: ಅರ್ಹ ಫಲಾನುಭವಿಗಳನ್ನು ಗುರುತಿಸುವಲ್ಲಿ ವಿಫಲ: ರೈತರಿಗೆ ಸಿಗುತ್ತಿಲ್ಲ ಪರಿಹಾರ ಧನ

ಕೊರೋನಾ ಲಾಕ್ಡೌನ್ ಸಮಯದಲ್ಲಿ ಸಂಕಷ್ಟಕ್ಕೊಳಗಾದ ರೈತರಿಗೆ ಸರ್ಕಾರ ಪರಿಹಾರದ ಅಭಯ ಕೊಟ್ಟಿತು. ಆದರೆ ಅರ್ಹ ಫಲಾನುಭವಿಗಳನ್ನ ಗುರುತಿಸುವಲ್ಲಿ ವಿಫಲವಾದ ಪರಿಣಾಮ ನಿಜವಾದ ರೈತರಿಗೆ ಪರಿಹಾರ ಸಿಗದಂತಾಗಿದೆ. ಈ ಕುರಿತು ಚಿಕ್ಕಬಳ್ಳಾಪುರದಲ್ಲಿ ರೈತರು ತಮ್ಮ...