• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, May 15, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಮಹಿಳಾ ಮೀಸಲಾತಿ ಡಿಎಂಕೆ ರಾಜಕೀಯ ಹುನ್ನಾರಕ್ಕೆ ರಾಜ್ಯದ ಹಿತ ಬಲಿ:ಬಸವರಾಜ ಬೊಮ್ಮಾಯಿ

ಸಿಎಂ ತಜ್ಞರ ಜೊತೆ ಚರ್ಚಿಸಿ ಕ್ರಾಂತಿಕಾರಿ ಬದಲಾವಣೆಗೆ ಬೆಂಬಲಿಸಬೇಕು:ಬಸವರಾಜ ಬೊಮ್ಮಾಯಿ

ಪ್ರತಿಧ್ವನಿ by ಪ್ರತಿಧ್ವನಿ
April 23, 2026
in Top Story, ಇದೀಗ, ಕರ್ನಾಟಕ, ದೇಶ, ರಾಜಕೀಯ, ವಾಣಿಜ್ಯ, ವಿಶೇಷ, ಶೋಧ
0
ಮಹಿಳಾ ಮೀಸಲಾತಿ ಡಿಎಂಕೆ ರಾಜಕೀಯ ಹುನ್ನಾರಕ್ಕೆ ರಾಜ್ಯದ ಹಿತ ಬಲಿ:ಬಸವರಾಜ ಬೊಮ್ಮಾಯಿ
Share on WhatsAppShare on FacebookShare on Telegram

ಹಾವೇರಿ: ಮಹಿಳಾ ಮೀಸಲಾತಿ ಮತ್ತು ಕ್ಷೇತ್ರ ಮರುವಿಂಗಡಣೆ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಡಿಎಂಕೆಯವರ ರಾಜಕೀಯ ಹುನ್ನಾರಕ್ಕೆ ನಮ್ಮ ರಾಜ್ಯದ ಹಿತಾಸಕ್ತಿ ಬಲಿಕೊಟ್ಟಿದ್ದಾರೆ. ಸಿಎಂ ತಜ್ಞರ ಜೊತೆ ಚರ್ಚಿಸಿ, ಸ್ಪಷ್ಟತೆಯಿಂದ ಮರು ಚಿಂತನೆ ಮಾಡಿ, ತಮ್ಮ ಪಕ್ಷದ ನಾಯಕರನ್ನು ಒಪ್ಪಿಸಿ ಕ್ರಾಂತಿಕಾರಿ ಬದಲಾವಣೆಗೆ ದೊಡ್ಡ ಬೆಂಬಲ ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಮನವಿ ಮಾಡಿದರು.

ADVERTISEMENT

ಹಾವೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ಮಹಿಳೆಯರಿಗೆ ಮೀಸಲಾತಿ ನೀಡುವ ಪ್ರಥಮ ರಾಜ್ಯಗಳಲ್ಲಿ ಒಂದು. ರಾಮಕೃಷ್ಣ ಹೆಗಡೆಯವರು ಮುಖ್ಯಮಂತ್ರಿಯಾಗಿದ್ದಾಗ ಮಾಡಿರುವಂತ ಅಧಿಕಾರ ವಿಕೇಂದ್ರಿಕರಣದ ಜೊತೆಗೆ ಮಹಿಳಾ ಮೀಸಲಾತಿಯನ್ನು ಜಾರಿ ಮಾಡಲಾಯಿತು. ಆದಾದ ನಂತರ1993 ರಲ್ಲಿ ದೇವೇಗೌಡರು ಮುಖ್ಯಮಂತ್ರಿಯಾಗಿದ್ದಾಗ ಅದನ್ನು ಮತ್ತೊಮ್ಮೆ ಜಾರಿ ಮಾಡಲಾಯಿತು. ಅದನ್ನು ನೋಡಿಕೊಂಡು 1994 ರಲ್ಲಿ ಕೇಂದ್ರದಲ್ಲಿ ಪಿ.ವಿ. ನರಸಿಂಹರಾವ್ ಸರ್ಕಾರ ಕೇಂದ್ರದಲ್ಲಿ ಸಂವಿಧಾನದ 73ನೇ ತಿದ್ದುಪಡಿ ಮಾಡಿ ಮಹಿಳಾ ಮೀಸಲಾತಿ ಜಾರಿಗೆ ತಂದರು. ಸಿದ್ದರಾಮಯ್ಯ ಮಹಿಳಾ ಮೀಸಲಾತಿ ಮೊದಲು ಕಾಂಗ್ರೆಸ್ ತಂದಿದೆ ಅಂತ ಹೇಳುತ್ತಾರೆ. ಆದರೆ, ಕಾಂಗ್ರೆಸ್ಸೇತರ ಸರ್ಕಾರ ಮೊದಲು ಮಹಿಳಾ ಮೀಸಲಾತಿ ಜಾರಿಗೆ ತಂದಿದೆ. ಸಿದ್ದರಾಮಯ್ಯ ಅವರು ಕಾಂಗ್ರೆಸ್ ಮೆಚ್ಚಿಸಲು ಹೇಳುತ್ತಾರೆ. ಅಧಿಕೃತವಾಗಿ ಸ್ವಾತಂತ್ರ್ಯ ಭಾರತದಲ್ಲಿ ಪ್ರಥಮ ಬಾರಿಗೆ ಹೇಳಿದವರು ಡಾ. ಬಾಬಾಸಾಹೇಬ್ ಅಂಬೇಡ್ಕರ್. ಹಿಂದೂ ಕೋಡ್ ಬಿಲ್ ತಂದಾಗ ಅದರಲ್ಲಿ ಮಹಿಳೆಯರಿಗೆ ಎಲ್ಲ ರಂಗದಲ್ಲಿ ಸಂಸತ್ತು ಹಾಗೂ ವಿಧಾನಸಭೆಗಳಲ್ಲಿ ಮೀಸಲಾತಿ ಸಿಗಬೇಕು ಎಂದು ಹೇಳಿದ್ದರು ಎಂದರು.

ಸಂವಿಧಾನ ತಿದ್ದುಪಡಿ ಮಾಡಲು ಸಂಸತ್ತಿನಲ್ಲಿ ಮೂರನೇ ಎರಡಷ್ಟು ಬಹುಮತ ಬೇಕು. ಕೆಲವು ಪ್ರಾದೇಶಿಕ ಪಕ್ಷಗಳು ವಿರೋಧ ಮಾಡುತ್ತ ಬಂದಿದ್ದವು. 1984 ರಿಂದ 89 ರಲ್ಲಿ ರಾಜೀವ್ ಗಾಂಧಿ ಪ್ರಧಾನಿ ಇದ್ದಾಗ ಅವರಿಗೆ ಮೂರನೇ ಎರಡರಷ್ಟು ಬಹುಮತ ಇತ್ತು. ಆಗಲೇ ಮಾಡಿದ್ದರೆ ಮೂವತ್ತು ವರ್ಷ ಆಗುತ್ತಿತ್ತು. ಆದರೆ, ಅದನ್ನು ಬಿಟ್ಟು ರಾಜೀವ್ ಗಾಂಧಿಯವರು ಮುಸ್ಲಿಂ ಮಹಿಳೆಗೆ ವಿಚ್ಚೇದನ ಆದಾಗ ಅವಳ ಜೀವನ ನಿರ್ವಹಣೆಗೆ ಪರಿಹಾರ ಕೊಡುವಂತೆ ಸುಪ್ರೀಂ ಕೋರ್ಟ್ ಆದೇಶ ಮಾಡಿತ್ತು. ಆ ಆದೇಶ ರದ್ದುಪಡಿಸಲು ಸಂಸತ್ತಿನ ಬಹುಮತ ಬಳಸಿಕೊಂಡು ವಿಶೇಷ ಕಾನೂನು ತಂದರು. ಆ ಮೇಲೆ 1996 ರಲ್ಲಿ ದೇವೇಗೌಡರ ಸರ್ಕಾರ ರಾಜ್ಯಸಭೆಯಲ್ಲಿ ತಂದರು. ಆ ಸರ್ಕಾರ ಹೋಯಿತು. ಇದೆಲ್ಲದರ ಹಿನ್ನೆಲೆಯಲ್ಲಿ 2023 ರಲ್ಲಿ ಇದಕ್ಕೆಲ್ಲ ಪರಿಹಾರ ಕಂಡುಕೊಳ್ಳಬೇಕು ಎಂದು ಈಗಿನ ಕೇಂದ್ರ ಸರ್ಕಾರ ತಿದ್ದುಪಡಿ ತಂದರು. ಅದರಲ್ಲಿ ಮಹಿಳೆಯರಿಗೆ ಶೇ 33 ರಷ್ಟು ಮೀಸಲಾತಿ ಹಾಗೂ ಲೋಕಸಭೆ ಹಾಗೂ ವಿಧಾಸಭೆಗಳ ಸಂಖ್ಯೆಯನ್ನು ಈಗಿರುವ ಕ್ಷೇತ್ರಗಳ ಶೇ 50 ರಷ್ಟು ಹೆಚ್ಚಳ ಮಾಡುವ ತಿದ್ದುಪಡಿ ಮಾಡಿ, ಅದನ್ನು ಮುಂದಿನ ಜನಗಣತಿ ನಂತರ ಜಾರಿ ಮಾಡಲು ತೀರ್ಮಾಣಿಸಲಾಯಿತು ಎಂದು ಹೇಳಿದರು.

ದಕ್ಷಿಣಕ್ಕೆ ಅನ್ಯಾಯ
ಜನಗಣತಿ ಎರಡು ವರ್ಷ ವಿಳಂಬವಾಗಿದ್ದರಿಂದ ಜನರ ವಿಶ್ವಾಸ ಗಳಿಸಲು 2029 ರಲ್ಲಿ ಜಾರಿ ಮಾಡಲು ಕಾಂಗ್ರೆಸ್ ಸೇರಿದಂತೆ ಎಲ್ಲ ಪಕ್ಷಗಳ ಒತ್ತಡವೂ ಇತ್ತು. ಅದಕ್ಕೆ ಕೇಂದ್ರ ಸರ್ಕಾರ ಮತ್ತೆ ತಿದ್ದುಪಡಿ ತಂದರು. ಶೇ 50 ರಷ್ಟು ಸೀಟು ಹೆಚ್ಚಳವಾಗಬೇಕೆಂದರೆ ಡಿಲಿಮಿಟೇಷನ್ ಆಗಬೇಕು. ಡಿಲಿಮಿಟೇಷನ್ ಕಮಿಟಿ ಆಗಬೇಕು. ಇದರ ಜೊತೆಗೆ ಮಹಿಳಾ ಮಹಿಳೆಯರಿಗೆ ಶೇ 33 ಮೀಸಲಾತಿ 2029 ಕೈ ಜಾರಿಗೆ ಬರಬೇಕು ಎನ್ನುವುದು ಆಗಿತ್ತು. ಆದರೆ, ಪ್ರತಿಪಕ್ಷಗಳು ಡಿಲಿಮಿಟೇಷನ್ ಯಾವಾಗಲೂ ಆಗಿಯೇ ಇಲ್ಲ ಅನ್ನುವಂತೆ ಮಾತನಾಡುತ್ತಾರೆ. ಸಂವಿಧಾನದ ಆರ್ಟಿಕಲ್ 81, 82 ರ ಪ್ರಕಾರ ಪ್ರತಿ ಜನಗಣತಿ ಆದ ನಂತರ ಕ್ಷೇತ್ರಗಳ ಡಿಲಿಮಿಟೇಷನ್ ಆಗಬೇಕು. 1971ರ ಜನಗಣತಿಯನ್ನು 1976 ರಲ್ಲಿ ಇಂದಿರಾ ಗಾಂಧಿಯವರು ಎಮರ್ಜೆನ್ಸಿ ಸಂದರ್ಭದಲ್ಲಿ 2020 ರವರೆಗೆ ಫ್ರೀಜ್ ಮಾಡಿದ್ದರು. ಆಗ ಕಾಂಗ್ರೆಸ್ ಮಾಡಿರುವ ನೀತಿಯಿಂದ ದಕ್ಷಿಣ ಭಾರತಕ್ಕೆ ಅನ್ಯಾಯವಾಗಿದೆ. ಆಗಿನ ಜನಸಂಖ್ಯೆಯ ಆಧಾರದಲ್ಲಿ ಮಾಡಿದ್ದಾರೆ. ಅದನ್ನು ಎಲ್ಲರೂ ಒಪ್ಪಿಕೊಂಡಿದ್ದಾರೆ. ಸಿಎಂ ಸಿದ್ದರಾಮಯ್ಯ 2026 ರ ಜನಸಂಖ್ಯೆ ಆಧಾರದ ಮೇಲೆ ಡಿಲಿಮಿಟೇಷನ್ ಆಗಲಿ ಎಂದು ಹೇಳಿದ್ದಾರೆ. ಹೊಸ ಜನಗಣತಿ ಆಧಾರದ ಮೇಲೆ ಡಿಲಿಮಿಟೇಷನ್ ಆಗಲಿ ಎಂದರೆ ದಕ್ಷಿಣ ಭಾರತಕ್ಕೆ ಮತ್ತೆ ಅನ್ಯಾಯವಾಗಲಿದೆ. ಇದರ ಅರಿವಿದೆಯೋ ಇಲ್ಲವೋ ಕೇವಲ ರಾಜಕಾರಣಕ್ಕಾಗಿಯೇ ವಿತಂಡವಾದ, ಸತ್ಯಕ್ಕೆ ದೂರ ಇರುವ ವಾದ ಮಾಡಿ ದಕ್ಷಿಣ ಭಾರತದ ಜನರು, ಜನ ಪ್ರತಿನಿಧಿಗಳ ಆಯ್ಕೆಗೆ ಮತ್ತು ಕ್ಷೇತ್ರಗಳ ಸಂಖ್ಯೆಗೆ ಕಾಂಗ್ರೆಸ್ ಮತ್ತು ಮಿತ್ರಪಕ್ಷಗಳು ದೊಡ್ಡ ಅನ್ಯಾಯ ಮಾಡುತ್ತಿವೆ ಎಂದು ಆರೋಪಿಸಿದರು.

ಒಳ್ಳೆಯ ಅವಕಾಶ ತಪ್ಪಿತು

ನನ್ನ ಪ್ರಕಾರ ಒಂದು ಅವಕಾಶ ಇತ್ತು. ಈಗ ಸರಾಸರಿ ಅನುಪಾತದಲ್ಲಿ ಕ್ಷೇತ್ರಗಳ ಹೆಚ್ಚಳ ಮಾಡಬೇಕೆಂದು ತೀರ್ಮಾನ ಮಾಡಲಾಗಿತ್ತು. ಕರ್ನಾಟಕದಲ್ಲಿ 28 ಲೋಕಸಭಾ ಕ್ಷೇತಗಳು ಇದ್ದದ್ದು 42 ಕ್ಷೇತ್ರ ಮಾಡಬೇಕೆಂದು ತೀರ್ಮಾನ ಮಾಡಿದ್ದೇವು. ಈ ಅವಕಾಶ ಕಳೆದುಕೊಳ್ಳಬಾರದು. ದಕ್ಷಿಣದ ರಾಜ್ಯಗಳು ಇದನ್ನು ಒಪ್ಪಿಕೊಳ್ಳಬೇಕು. ಇದು ಜನಸಂಖ್ಯೆ ಆಧಾರದ ಮೇಲೆ ಇಲ್ಲ. ಜನಸಂಖ್ಯೆ ಆಧಾರ ಮಾಡಬೇಕೆನ್ನುವ ಅಂಶಕ್ಕೆ ತಿದ್ದುಪಡಿ ಮಾಡಲು ಅವಕಾಶ ಇದೆ. ತಿದ್ದುಪಡಿ ಮಾಡಿ ಸೀಟುಗಳನ್ನು ಹೆಚ್ಚಳ ಮಾಡುವುದು. 2011 ರ ಜನಸಂಖ್ಯೆ ಆಧಾರದಲ್ಲಿ ಒಂದು ಲೋಕಸಭಾ ಕ್ಷೇತ್ರದಲ್ಲಿ ಎಷ್ಟು ಜನ ಮತದಾರರು ಇರಬೇಕು ಎನ್ನುವುದಷ್ಟೇ ನಿರ್ಧರಿಸಲಾಗುವುದು. ಕ್ಷೇತಗಳು ಸರಾಸರಿ ಶೇ 50% ರಷ್ಟು ಹೆಚ್ಚಳ ಆಗಿಯೇ ಆಗುತ್ತದೆ. 2011 ರಲ್ಲಿ ನಮ್ಮ ಕರ್ನಾಟಕದ ಜನಸಂಖ್ಯೆ 5 ಕೋಟಿ ಇತ್ತು. ಆ ಜನಸಂಖ್ಯೆಯನ್ನು 42 ಸೀಟುಗಳಿಗೆ ಹಂಚಿಕೆ ಮಾಡಲಾಗುತ್ತದೆ. ಇದನ್ನು ಅರ್ಥ ಮಾಡಿಕೊಳ್ಳದೆ ಕೇವಲ ರಾಜಕೀಯ ಕಾರಣಕ್ಕೆ ಡಿಎಂಕೆಯವರ ರಾಜಕೀಯ ಹುನ್ನಾರಕ್ಕೆ ನಮ್ಮ ಸಿಎಂ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ನಮ್ಮ ರಾಜ್ಯದ ಹಿತಾಸಕ್ತಿ ಬಲಿಕೊಟ್ಟಿದ್ದಾರೆ ಎಂದು ಆರೋಪಿಸಿದರು.

ನಮ್ಮ ಸಿಎಂ ಸ್ಪಷ್ಟತೆಯಿಂದ ಚಿಂತನೆ ಮಾಡಿ ಬರುವಂತ ದಿನಗಳಲ್ಲಿ ಇದಕ್ಕೆ ಒಪ್ಪಿಗೆ ಸೂಚಿಸಿದರೆ ಮತ್ತು ಅವರ ಪಕ್ಷದ ನಾಯಕರು ಒಪ್ಪಿಗೆ ಸೂಚಿಸಿದರೆ ದೊಡ್ಡ ಕ್ರಾಂತಿಕಾರಿಯಾಗುತ್ತದೆ. ಮಹಿಳೆಯರಿಗೆ ಮೀಸಲಾತಿ ಕೊಡುವ ವಿಚಾರದಲ್ಲಿ ಅನ್ಯಾಯವಾಗಿದೆ. ಅದನ್ನು ಸರಿಪಡಿಸಲು ಸಾಧ್ಯವಾಗುತ್ತದೆ. ಅದೇ ಬಿಜೆಪಿಯ ಗುರಿ ಇದರಲ್ಲಿ ಕ್ರೆಡಿಟ್ ತೆಗೆದುಕೊಳ್ಳಲು ಬಿಜೆಪಿ ಬಯಸುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಸಿಎಂ ತಜ್ಞರ ಜೊತೆ ಚರ್ಚಿಸಿ, ಸ್ಪಷ್ಟತೆಯಿಂದ ಮರು ಚಿಂತನೆ ಮಾಡಿ, ತಮ್ಮ ನಾಯಕರನ್ನು ಒಪ್ಪಿಸಿ ಕ್ರಾಂತಿಕಾರಿ ಬದಲಾವಣೆಗೆ ದೊಡ್ಡ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.

ಕಾಂಗ್ರೆಸ್ ಕ್ರೆಡಿಟ್ ತೆಗೆದುಕೊಳ್ಳಬಹುದಿತ್ತು

ಬಿಜೆಪಿ ಮಹಿಳಾ ಮೀಸಲಾತಿ ಜೊತೆಗೆ ಡಿಲಿಮಿಟೇಷನ್ ತಿದ್ದುಪಡಿ ತಂದಿರುವುದಕ್ಕೆ ಕಾಂಗ್ರೆಸ್ ವಿರೋಧ ಮಾಡಿದೆ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಹಾಗೂ ಎಲ್ಲ ಪಕ್ಷಗಳು ಶೇ 50 ರಷ್ಟು ಸೀಟುಗಳು ಹೆಚ್ಚಳವಾಗಬೇಕೆಂದು ತೀರ್ಮಾಣ ಮಾಡಿದ್ದವು. ಅದರ ಆಧಾರದ ಮೇಲೆಯೇ ತಿದ್ದುಪಡಿ ತರಲಾಗಿತ್ತು. ಡಿಲಿಮಿಟೇಷನ್ ಆಗಿಯೇ ಆಗುತ್ತದೆ. ಇವರು ಡಿಎಂಕೆ ರಾಜಕೀಯ ಒತ್ತಡಕ್ಕೆ ಮಣಿದಿದ್ದಾರೆ. ಡಿಎಂಕೆ ಯಾವಾಗಲೂ ಪ್ರಾದೇಶಿಕ ಭಾವನೆಗಳಿಗೆ ಒತ್ತು ಕೊಟ್ಟು ಇಡೀ ದೇಶ ಒಂದು ಎಂದರೆ ಅವರು ಬೇರೆ ಎಂದು ವಾದಿಸುತ್ತಿದ್ದಾರೆ. ಅವರ ಈ ವಾದಕ್ಕೆ ಕಾಂಗ್ರೆಸ್ ಮಾತ್ರ ಬೆಂಬಲ ಕೊಟ್ಟಿದೆ. ಅದಕ್ಕೆ ಕೇರಳ, ಆಂಧ್ರಪ್ರದೇಶ ಬೆಂಬಲ ಕೊಟ್ಟಿಲ್ಲ. ಕ್ಷೇತಗಳ ಸಂಖ್ಯೆಯನ್ನು ಸರಾಸರಿ ಹೆಚ್ಚಳ ಮಾಡುತ್ತೇವೆ ಎನ್ನುವುದು ಗೊತ್ತಿದ್ದರೂ, ಸುಮ್ಮನೇ ವಿರೋಧ ಮಾಡುತ್ತಿದ್ದಾರೆ. ಈಗಿರುವ ಸ್ಥಾನಗಳಲ್ಲಿಯೇ ಮಹಿಳೆಯರಿಗೆ ಮೀಸಲಾತಿ ನೀಡಬೇಕೆಂಬ ಪ್ರತಿಪಕ್ಷಗಳ ಬೇಡಿಕೆಯನ್ನು ಹಿಂದೆ ತಿದ್ದುಪಡಿ ಮಾಡುವ ಸಂದರ್ಭದಲ್ಲಿಯೇ ಹೇಳಬೇಕಿತ್ತು. ಈ ವಿಚಾರದಲ್ಲಿ ನಾನು ಒಬ್ಬನೇ ಕೆಡಿಟ್ ತೆಗೆದುಕೊಳ್ಳುವುದಿಲ್ಲ. ಇದನ್ನು ಪಾಸ್ ಮಾಡಿದರೆ ಎಲ್ಲರಿಗೂ ಕೆಡಿಟ್ ಸಿಗುತ್ತದೆ ಎಂದು ಪ್ರಧಾನಿ ಹೇಳಿದರು. ಪಂಚ ರಾಜ್ಯಗಳ ಚುನಾವಣೆಯಲ್ಲಿ ನೀತಿ ಸಂಹಿತೆ ಆಯಾ ರಾಜ್ಯಗಳಿಗೆ ಮಾತ್ರ ಸೀಮಿತ ಆಗಿದೆ. ದೇಶದ ಬೇರೆ ರಾಜ್ಯಗಳಲ್ಲಿ ನೀತಿ ಸಂಹಿತೆ ಜಾರಿಯಲ್ಲಿಲ್ಲ. ಪ್ರತಿಪಕ್ಷಗಳು ಈ ವಿಧೇಯಕ್ಕೆ ಬೆಂಬಲ ನೀಡಿ ಚುನಾವಣೆಯಲ್ಲಿ ಅ

Previous Post

ತಮಿಳುನಾಡು ಅಭಿವೃದ್ಧಿಗೆ ಮತದಾನ ಮಾಡಿ: ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಕರೆ

Next Post

ಇನ್ನು ಮುಂದೆ ಬೆಂಗಳೂರು ಒನ್ ಕೇಂದ್ರಗಳಲ್ಲೂ ಇ-ಸ್ವತ್ತು ಅರ್ಜಿ ಸಲ್ಲಿಸಬಹುದು. ಸಚಿವ ಪ್ರಿಯಾಂಕ ಖರ್ಗೆ

Related Posts

ಮೋದಿ ಎಚ್ಚರಿಕೆಯ ಬೆನ್ನಲ್ಲೆ ದಿಢೀರ್‌ ಪೆಟ್ರೋಲ್‌, ಡಿಸೇಲ್‌ ಬೆಲೆ ಏರಿಕೆ
Top Story

ಮೋದಿ ಎಚ್ಚರಿಕೆಯ ಬೆನ್ನಲ್ಲೆ ದಿಢೀರ್‌ ಪೆಟ್ರೋಲ್‌, ಡಿಸೇಲ್‌ ಬೆಲೆ ಏರಿಕೆ

by ಪ್ರತಿಧ್ವನಿ
May 15, 2026
0

ಬೆಂಗಳೂರು : ಮಧ್ಯಪ್ರಾಚ್ಯದಲ್ಲಿ ಯುದ್ಧದ ಸ್ಥಿತಿ ಹಾಗೂ ಉದ್ವಿಗ್ನ ಪರಿಸ್ಥಿತಿ ಪರಿಣಾಮ ಇದೀಗ ಭಾರತಕ್ಕೂ ತಟ್ಟಿದೆ, ಇದರ ಮುನ್ನೇಚ್ಚರಿಕೆ ಕ್ರಮವಾಗಿ ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ...

Read moreDetails
ನೀಟ್ ಯುಜಿ 2026 ಮರುಪರೀಕ್ಷೆಗೆ ದಿನಾಂಕ ಘೋಷಣೆ

ನೀಟ್ ಯುಜಿ 2026 ಮರುಪರೀಕ್ಷೆಗೆ ದಿನಾಂಕ ಘೋಷಣೆ

May 15, 2026
ವಸ್ತ್ರಸಂಹಿತೆ ವಿವಾದಕ್ಕೆ ಹೊಸ ತಿರುವು; ಸರ್ಕಾರದ ಆದೇಶಕ್ಕೆ ಖಾಸಗಿ ಶಾಲೆಗಳ ವಿರೋಧ

ವಸ್ತ್ರಸಂಹಿತೆ ವಿವಾದಕ್ಕೆ ಹೊಸ ತಿರುವು; ಸರ್ಕಾರದ ಆದೇಶಕ್ಕೆ ಖಾಸಗಿ ಶಾಲೆಗಳ ವಿರೋಧ

May 15, 2026
ಕೇರಳದ ನೂತನ ಸಿಎಂ: ವೇಣುಗೋಪಾಲ್‌ಗೆ ನಿರಾಸೆ? ಫಸ್ಟ್ ರಿಯಾಕ್ಷನ್ ಏನು

ಕೇರಳದ ನೂತನ ಸಿಎಂ: ವೇಣುಗೋಪಾಲ್‌ಗೆ ನಿರಾಸೆ? ಫಸ್ಟ್ ರಿಯಾಕ್ಷನ್ ಏನು

May 15, 2026
64ನೇ ವಸಂತಕ್ಕೆ ಡಿಕೆಶಿ; ಸಿಎಂ ಕುರ್ಚಿ ಕನಸು ಈಡೇರುತ್ತಾ ಎಂಬ ಕುತೂಹಲ

64ನೇ ವಸಂತಕ್ಕೆ ಡಿಕೆಶಿ; ಸಿಎಂ ಕುರ್ಚಿ ಕನಸು ಈಡೇರುತ್ತಾ ಎಂಬ ಕುತೂಹಲ

May 15, 2026
Next Post
ಇನ್ನು ಮುಂದೆ ಬೆಂಗಳೂರು ಒನ್ ಕೇಂದ್ರಗಳಲ್ಲೂ ಇ-ಸ್ವತ್ತು ಅರ್ಜಿ ಸಲ್ಲಿಸಬಹುದು. ಸಚಿವ ಪ್ರಿಯಾಂಕ ಖರ್ಗೆ

ಇನ್ನು ಮುಂದೆ ಬೆಂಗಳೂರು ಒನ್ ಕೇಂದ್ರಗಳಲ್ಲೂ ಇ-ಸ್ವತ್ತು ಅರ್ಜಿ ಸಲ್ಲಿಸಬಹುದು. ಸಚಿವ ಪ್ರಿಯಾಂಕ ಖರ್ಗೆ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada