Tag: Pegasus

ಫ್ರಾನ್ಸ್‌ನ ಐವರು ಸಚಿವರ ಫೋನ್‌ಗಳಲ್ಲಿ ಪೆಗಾಸಸ್‌ ಕುರುಹು ಪತ್ತೆ

ಫ್ರಾನ್ಸ್ ಸರ್ಕಾರದ ಐದು ಹಾಲಿ ಸಚಿವರ ಫೋನ್’ಗಳಲ್ಲಿ ಪೆಗಾಸಸ್ ತಂತ್ರಾಂಶದ ಕುರುಹುಗಳು ಪತ್ತೆಯಾಗಿವೆ. ಮೀಡಿಯಾಪಾರ್ಟ್ ಎಂಬ ಅಂತರ್ಜಾಲ ತಾಣವು ಫ್ರಾನ್ಸ್’ನ ಭದ್ರತಾ ಸಂಸ್ಥೆಗಳನ್ನು ಉಲ್ಲೇಖಿಸಿ ನೀಡಿರುವ ವರದಿಯಲ್ಲಿ ಈ ಮಾಹಿತಿ ಬಹಿರಂಗವಾಗಿದೆ.  ಫ್ರಾನ್ಸ್ ಸರ್ಕಾರದ ಶಿಕ್ಷಣ, ಕೃಷಿ, ವಸತಿ, ವಿದೇಶಾಂಗ ಇಲಾಖೆ ಹಾಗೂ ಪ್ರಾದೇಶಿಕ ಒಗ್ಗಟ್ಟು ಇಲಾಖೆಗಳ ಸಚಿವರ ಫೋನ್’ಗಳನ್ನು ಹ್ಯಾಕ್ ಮಾಡಲಾಗಿದೆ. ಜೀನ್ ಮೈಕಲ್ ಬ್ಲಾಂಕೆರ್, ಜಾಕ್ವೆಲಿನ್ ಗೌರಾಲ್ಟ್, ಜೂಲಿಯನ್ ಡೆನಾರ್ಮಾಂಡಿ, ಇಮ್ಮಾನುಯೆಲ್ ವಾರ್ಗನ್ ಹಾಗೂ ಸೆಬಾಸ್ಟಿಯನ್ ಲೆಕಾರ್ನ್ ಅವರ ಫೋನ್ ಗಳಲ್ಲಿ ಈ ಪೆಗಾಸಸ್ ತಂತ್ರಾಂಶವನ್ನು ಅಳವಡಿಸಲಾಗಿತ್ತು ಎಂದು ವರದಿಯಲ್ಲಿ ಹೇಳಲಾಗಿದೆ.  ಜುಲೈ ಕೊನೆಯ ವಾರದಲ್ಲಿ ಈ ಐವರ ಫೋನ್’ಗಳ ಫೊರೆನ್ಸಿಕ್ ವರದಿ ನೀಡಲಾಗಿತ್ತು. ಈ ವರದಿಯಲ್ಲಿ ಪೆಗಾಸಸ್ ಹೋಲುವ ತಂತ್ರಾಂಶಗಳು ಇವೆಯೆಂದು ತಜ್ಞರು ಅಭಿಪ್ರಾಯಪಟ್ಟಿದ್ದರು. ಇದು ಫ್ರೆಂಷ್ ಸ್ಟೇಟ್ ಇಂಟೆಲಿಜೆನ್ಸ್ ಸರ್ವಿಸಸ್ ಹಾಗೂ ಪ್ಯಾರಿಸ್’ನ ಸರ್ಕಾರಿ ವಕೀಲರು ಸೇರಿ ನಡೆಸಿದಂತಹ ಜಂಟಿ ತನಿಖೆಯ ವರದಿಯಲ್ಲಿ ಪ್ರಸ್ತಾಪಿಸಲಾಗಿದೆ, ಎಂದು ಮೀಡಿಯಾಪಾರ್ಟ್ ಹೇಳಿದೆ.  ಅಂತಾರಾಷ್ಟ್ರೀಯ ಮಟ್ಟದ ಮಾಧ್ಯಮ ಸಂಸ್ಥೆಗಳು ಸೇರಿ ನಡೆಸಿದಂತಹ ತನಿಖೆಯಲ್ಲಿ ಪೆಗಾಸಸ್ ತಂತ್ರಾಂಶದ ಕರಾಳತೆ ಬಹಿರಂಗವಾಗಿತ್ತು. ಈ ವರದಿಯು ವಿಶ್ವದಲ್ಲಿ ಸಂಚಲನ ಮೂಡಿಸಿತ್ತು. ನೂರಾರು ವಿಶ್ವ ನಾಯಕರನ್ನು ಪೆಗಾಸಸ್ ಮೂಲಕ ಕಣ್ಗಾವಲಿನಲ್ಲಿ ಇಡಲಾಗಿತ್ತು ಎಂದು ಈ ವರದಿ ಹೇಳಿತ್ತು. ಈಗ ಫ್ರಾನ್ಸ್ ಸರ್ಕಾರ ದೃಢಪಡಿಸಿರುವ ಐದು ಜನ ಸಚಿವರ ಹೆಸರುಗಳು ಕೂಡಾ ಆ ಪಟ್ಟಿಯಲ್ಲಿತ್ತು.  ಸಚಿವರ ಮೇಲೆ ಕಣ್ಗಾವಲು ಇಡುವ ವೇಳೆಗೆ, ಈ ಐವರಲ್ಲಿ ಎಲ್ಲರೂ ತಮ್ಮ ಹಾಲಿ ಸ್ಥಾನದಲ್ಲಿ ಇರಲಿಲ್ಲ. ಆದರೆ, 2019 ಮತ್ತು 2020ರಿಂದ ಇವರು ಫ್ರಾನ್ಸ್ ಸರ್ಕಾರದ ಪ್ರಮುಖ ಖಾತೆಗಳನ್ನು ಪಡೆದುಕೊಂಡಿದ್ದರು.  ಈಗ ಮಿಡಿಯಾಪಾರ್ಟ್ ನೀಡಿರುವ ವರದಿ ನಿಜವಾಗಿದ್ದಲ್ಲಿ, ಪೆಗಾಸಸ್ ತಂತ್ರಾಂಶವನ್ನು ಬಳಸಿಕೊಂಡು ಬಲವಾದ ಪಾಶ್ಚಾತ್ಯ ಪ್ರಜಾಪ್ರಭುತ್ವ ರಾಷ್ಟ್ರವೊಂದರ ಉನ್ನತ ಮಟ್ಟದ ಮಾಹಿತಿಯನ್ನು ಕದಿಯುತ್ತಿರುವುದು ಸ್ಪಷ್ಟವಾಗುತ್ತದೆ.  ಕೇವಲ ಅಧಿಕೃತ ಸರ್ಕಾರಗಳಿಗೆ ಮಾತ್ರ ಈ ಪೆಗಾಸಸ್ ತಂತ್ರಾಂಶವನ್ನು ಒದಗಿಸುತ್ತಿರುವುದಾಗಿ ಹೇಳಿರುವ ಎನ್ಎಸ್ಒ ಸಂಸ್ಥೆಯು, ಮಾಧ್ಯಮಗಳು ಬಹಿರಂಗಪಡಿಸಿದ ಪಟ್ಟಿಗೂ ತನಗೂ ಸಂಬಂಧವೇ ಇಲ್ಲ ಎಂದು ಹೇಳಿದೆ.  ಗುರುವಾರದಂದು ಹೊಸ ಹೇಳಿಕೆ ನೀಡಿರುವ ಎನ್ಎಸ್ಒ ಸಂಸ್ಥೆ, ನಾವು ಈ ಹಿಂದೆ ಹೇಳಿದಂತೆ ಫ್ರಾನ್ಸ್ ಸಚಿವರು ಪೆಗಾಸಸ್ ತಂತ್ರಾಂಶಕ್ಕೆ ಗುರಿಯಾಗಿರಲಿಲ್ಲ. ಅನಾಮಿಕ ಸುದ್ದಿಮೂಲಗಳಿಂದ ಮಾಹಿತಿ ಪಡೆದು ಪ್ರಕಟಿಸಿರುವ ವರದಿಗೆ ನಾವು ಪ್ರತಿಕ್ರಿಯಿಸುವುದಿಲ್ಲ ಎಂದು ಹೇಳಿದೆ.  ಈ ಕುರಿತಾಗಿ ಪ್ರತಿಕ್ರಿಯಿಸಲು ಆ ಐವರು ಸಚಿವರು ಕೂಡಾ ನಿರಾಕರಿಸಿದ್ದಾರೆ. ಇವರಲ್ಲಿ ಒಬ್ಬ ಸಚಿವರು ತಮ್ಮ ಲ್ಯಾಂಡ್ ಲೈನ್ ಹಾಗು ಮೊಬೈಲ್ ಸಂಖ್ಯೆಯನ್ನು ಬದಲಾಯಿಸಿದ್ದಾರೆ ಎಂಬ ಮಾಹಿತಿಯನ್ನು ಮೀಡಿಯಾಪಾರ್ಟ್ ಬಹಿರಂಗಪಡಿಸಿದೆ.  ಫ್ರಾನ್ಸ್ ಸಚಿವರ ಮೇಲೆ ಬೇಹುಗಾರಿಕೆ ನಡೆಸಲು ಯಾರು ಈ ತಂತ್ರಾಂಶವನ್ನು ಬಳಸಿರಬಹುದು ಎಂಬುದು ಇನ್ನೂ ಖಚಿತವಾಗಿಲ್ಲ. ಆದರೆ, ಯೂರೋಪ್ ಮಾಧ್ಯಮಗಳು ಮೊರಾಕ್ಕೊ ಸರ್ಕಾರದೆಡೆಗೆ ಬೆರಳು ಮಾಡಿ ತೋರಿಸುತ್ತಿವೆ. ಈ ವಾದವನ್ನು ಅಲ್ಲಗೆಳೆದಿರುವ ಮೊರಾಕ್ಕೊ ಸರ್ಕಾರ, ಮಾಧ್ಯಮಗಳ ವಿರುದ್ದ ಮಾನಹಾನಿ ಮೊಕದ್ದಮೆಯನ್ನು ಹೂಡಿದೆ. 

Read moreDetails

ಪೆಗಾಸಸ್ ಹಗರಣ: ಸುಪ್ರೀಂ ಕೋರ್ಟ್‌ ತರಾಟೆಯ ನಂತರ ತನಿಖೆಗೆ ಸಮಿತಿ ರಚಿಸುವುದಾಗಿ ಕೇಂದ್ರ ಒಪ್ಪಿಗೆ!

ಪೆಗಾಸಸ್ ಸ್ನೂಪಿಂಗ್ ಹಗರಣದ ತನಿಖೆಗೆ ತಜ್ಞರ ಸಮಿತಿಯನ್ನು ರಚಿಸಲಾಗುವುದು ಎಂದು ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವಾಲಯವು ಆಗಸ್ಟ್ 16, ಸೋಮವಾರ ಸುಪ್ರೀಂ ಕೋರ್ಟ್‌ಗೆ ಮಾಹಿತಿ ನೀಡಿದೆ. ಭಾರತದ ...

Read moreDetails

ಪೆಗಾಸಸ್ ತನಿಖೆ: ಫ್ರಾನ್ಸ್ ಪ್ರಧಾನಿಗಿರುವ ಧೈರ್ಯ ಮೋದಿಗಿಲ್ಲವೆ?

ಕಳೆದ ತಿಂಗಳಿನಲ್ಲಿ ಅಂತರರಾಷ್ಟ್ರೀಯ ಮಾಧ್ಯಮಗಳು ಸೇರಿಕೊಂಡು ನಡೆಸಿದ ಸಭೆಯಲ್ಲಿ ದೇಶದ ಖಾಸಗಿ ಸುದ್ದಿ ಜಾಲತಾಣವಾದ ದಿ ವೈರ್‌ ಭಾಗವಹಿಸಿ, ಪೆಗಾಸಸ್‌ ಬೇಹುಗಾರಿಕೆ ಬಗ್ಗೆ ಸವಿಸ್ತರವಾದ ವಾದ ಮಂಡಿಸಿದೆ. ...

Read moreDetails

ಪ್ರಜಾಪ್ರಭುತ್ವದ ನಾಲ್ಕು ಸ್ತಂಭಗಳನ್ನು ಕೇಂದ್ರ ಸರ್ಕಾರ ದುರ್ಬಲಗೊಳಿಸುತ್ತಿದೆ: ಸಂಜಯ್ ರಾವುತ್

ಶಿವಸೇನಾ ನಾಯಕ ಸಂಜಯ್ ರಾವುತ್ ಶುಕ್ರವಾರ ಮೋದಿ ಸರ್ಕಾರ ಇಸ್ರೇಲ್‌ ಪೆಗಾಸಸ್ ಸ್ಪೈವೇರ್ ಬಳಸಿ ನುಣುಚಿಕೊಳ್ಳುವ ಮೂಲಕ ಪ್ರಜಾಪ್ರಭುತ್ವದ ನಾಲ್ಕು ಸ್ತಂಭಗಳನ್ನು ದುರ್ಬಲಗೊಳಿಸಿದೆ ಎಂದು ಆರೋಪಿಸಿದ್ದಾರೆ. ದೆಹಲಿಯಲ್ಲಿ ...

Read moreDetails

ಪೆಗಾಸಸ್ ಎರಡನೆ ದಾಳಿ- ಎಳೆಗಳನ್ನು ಜೋಡಿಸಿ ನೋಡಬೇಕಿದೆ

ಭಾರತಕ್ಕೆ ಪೆಗಾಸಸ್ ಹೊಸತೇನಲ್ಲ. 2019ರ ಕೊನೆಯ ದಿನಗಳಲ್ಲಿ ಇದು ನಮ್ಮ ಸಾರ್ವಜನಿಕ ಚರ್ಚೆಯ ಭಾಗವಾಗಿತ್ತು. ಟೊರೋಂಟೋ ವಿಶ್ವವಿದ್ಯಾಲಯದ ಪೌರ ಪ್ರಯೋಗಾಲಯದ ಸಂಶೋಧಕರು ಭಾರತದಲ್ಲಿ ಕೆಲವರ ದೂರವಾಣಿಗೆ ಕರೆ ...

Read moreDetails

ನಿವೃತ್ತ ನ್ಯಾ. ಮಿಶ್ರಾ ಸೇರಿದಂತೆ ಮತ್ತೆ ಐವರ ಹೆಸರು ಪೆಗಸಾಸ್ ಬೇಹುಗಾರಿಕೆ ಪಟ್ಟಿಯಲ್ಲಿ!

ಸುಪ್ರೀಂ ಕೋರ್ಟ್ ರಿಜಿಸ್ಟ್ರಿಯ ಇಬ್ಬರು ಅಧಿಕಾರಿಗಳು, ಅಗಸ್ಟಾವೆಸ್ಟ್ಲ್ಯಾಂಡ್ ಹಗರಣದ ಆರೋಪಿ ಕ್ರಿಶ್ಚಿಯನ್ ಮಿಷೆಲ್ ಪರ ವಕೀಲ ಅಲ್ಜೊ ಜೋಸೆಫ್, ನೀರವ್ ಮೋದಿ ಪರ ವಕೀಲ ವಿಜಯ್ ಅಗರ್ವಾಲ್ ...

Read moreDetails

ಪೆಗಾಸಸ್ ಪ್ರಕರಣ: ಆರು ಟಿಎಂಸಿ ಸಂಸದರು ಅಮಾನತು

ಸಂಸತ್ತಿನಲ್ಲಿ ಪೆಗಾಸಸ್ ವಿರುದ್ದ ನಡೆಯುತ್ತಿರುವ ಪ್ರತಿಭಟನೆ ಬುಧವಾರವೂ ಮುಂದುವರೆದಿತ್ತು. ವಿರೋಧ ಪಕ್ಷದ ನಾಯಕರು ಪೆಗಾಸಸ್ ಪ್ರಕರಣದ ವಿರುದ್ದ ಉನ್ನತ ಮಟ್ಟದ ತನಿಖೆಗಾಗಿ ಬೇಡಿಕೆ ಇಟ್ಟಿದ್ದಾರೆ. ಆದರೆ, ಸರ್ಕಾರ ...

Read moreDetails

ಪೆಗಸಸ್ ಬೇಹುಗಾರಿಕೆ ಪಟ್ಟಿಯಲ್ಲಿರುವ ಐವರು ಪತ್ರಕರ್ತರಿಂದ ಸುಪ್ರೀಂ ಕೋರ್ಟ್ ಗೆ ಅರ್ಜಿ : ತನಿಖೆಗೆ ಆದೇಶಿಸುವಂತೆ ಮನವಿ!

ದಿ‌ ಕ್ವಿಂಟ್ ವರದಿ ಮಾಡಿರುವ ಪ್ರಕಾರ ಪೆಗಸಸ್ ಬೇಹುಗಾರಿಕೆಗೆ ಗುರಿಯಾಗಿದ್ದ ಐವರು ಪತ್ರಕರ್ತರು ಸುಪ್ರೀಂಕೋರ್ಟ್‌ ಮೊರೆ ಹೋಗಿದ್ದಾರೆ. ಸರ್ಕಾರಿ ಸಂಸ್ಥೆಗಳು ಅನಧಿಕೃತವಾಗಿ ಗೂಢಚರ್ಯೆ ನಡೆಸುವುದು ಸಂವಿಧಾನ ಬದ್ಧವಾಗಿ ...

Read moreDetails

ರಾಜ್ಯಸಭಾ ಅಧ್ಯಕ್ಷರ ವಿರುದ್ದ ಅವಿಶ್ವಾಸ ನಿರ್ಣಯ ಮಂಡಿಸಲಿವೆಯೇ ವಿಪಕ್ಷಗಳು?

ಎರಡು ವಾರಗಳು ಕಳೆದರು ಸಂಸತ್ತು ಸರಿಯಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತಿಲ್ಲ ಏಕೆಂದರೆ ವಿರೋಧ ಪಕ್ಷಗಳು ಪೆಗ್ಗಾಸಸ್ ಕದ್ದಾಲಿಕೆ , ಕೃಷಿ ಕಾನೂನು ಮತ್ತು ದೇಶದ ಜ್ವಲಂತ ಸಮಸ್ಯೆಗಳನ್ನು ಚರ್ಚಿಸಲು ...

Read moreDetails

ಪ್ರಭುತ್ವದ ಕಣ್ಗಾವಲು ಮತ್ತು ಪ್ರಜೆಗಳ ಜಾಗೃತಿ

ತನ್ನ ಪ್ರಜೆಗಳ ಪ್ರತಿಯೊಂದು ಚಲನವಲನವನ್ನೂ ಸದಾ ಗಮನಿಸುವ ಒಂದು ಪ್ರಭುತ್ವ ಮೂಲತಃ ಪ್ರಾಮಾಣಿಕವಾಗಿರುವುದಿಲ್ಲ. ಅಥವಾ ಪ್ರಜಾಪ್ರಭುತ್ವ ವ್ಯವಸ್ಥೆಯ ಮೂಲ ತತ್ವಗಳನ್ನು ನಿಷ್ಠೆಯಿಂದ ಅನುಸರಿಸುತ್ತಾ, ಸಾರ್ವಭೌಮ ಪ್ರಜೆಗಳ ನಿತ್ಯ ...

Read moreDetails

ಪ್ರಧಾನಿ ಮೋದಿಯವರೇ ಪೆಗಾಸಸ್ ಸ್ಪೈವೇರ್ ಪ್ರಕರಣದಲ್ಲಿ ನೇರವಾಗಿ ಭಾಗಿಯಾಗಿದ್ದಾರೆ: ಸಿದ್ದರಾಮಯ್ಯ ಆರೋಪ

ದೇಶದ ಪ್ರಧಾನಿಯೇ ದೂರವಾಣಿ ಕದ್ದಾಲಿಕೆ ಪ್ರಕರಣದಲ್ಲಿ ನೇರ ಭಾಗಿಯಾಗಿದ್ದಾರೆ, ಈ ಪೆಗಾಸಸ್ ಸ್ಪೈವೇರ್‌ನ ದೂರವಾಣಿ ಕದ್ದಾಲಿಕೆ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸಬೇಕು. ಸುಪ್ರೀಂಕೋರ್ಟ್ ಹಾಲಿ ನ್ಯಾಯಮೂರ್ತಿಗಳು ತನಿಖೆಯ ...

Read moreDetails

ಪೆಗಾಸಸ್ ಲೀಕ್ಸ್ ಹಗರಣ: ತನಿಖೆಗೆ ಶಶಿ ತರೂರ್ ನೇತೃತ್ವದ ಸಂಸದೀಯ ಸಮಿತಿ

ಭಾರತದಲ್ಲಿ ನೂರಾರು ಜನರ ಮೊಬೈಲ್‌ ಸಂಖ್ಯೆಯನ್ನು ಪೆಗಾಸಸ್ ಸ್ಪೈವೇರ್ ಮಾಡಿ ಆಡಳಿತ ಸರ್ಕಾರಕ್ಕೆ ಸರಬರಾಜು ಮಾಡಿವೆ ಎಂಬ ಆರೋಪವನ್ನು ಜುಲೈ 28 ರಂದು ಕಾಂಗ್ರೆಸ್ ಸಂಸದ ಶಶಿ ...

Read moreDetails

ಪಶ್ಚಿಮ ಬಂಗಾಳಕ್ಕೂ ಹಬ್ಬಿದ ಪೆಗಾಸಸ್ ಭೂತ: ದೀದಿ ಸೋದರಳಿಯ ಟಾರ್ಗೆಟ್

ದೇಶಾದ್ಯಂತ ಪೆಗಾಸಸ್ ಎಂಬ ಪೆಡಂಭೂತ ಭಾರಿ ಸದ್ದು ಮಾಡುತ್ತಿರುವ ಬೆನ್ನಲ್ಲೇ, ಇದರ ಬೇರುಗಳು ಪಶ್ಚಿಮ ಬಂಗಾಳಕ್ಕೂ ಹಬ್ಬಿರುವ ಕುರಿತು ವರದಿಯಾಗಿದೆ. ಇದಕ್ಕೆ ಪೂರಕವೆಂಬಂತೆ ಪಶ್ಚಿಮ ಬಂಗಾಳ ವಿಧಾನಸಭೆಯ ...

Read moreDetails

ಪೆಗಾಸಸ್ ದುರುಪಯೋಗದ ಪ್ರತಿ ಆರೋಪಗಳ ಬಗ್ಗೆ ನಾವು ತನಿಖೆ ನಡೆಸುತ್ತಿದ್ದೇವೆ: ಎನ್‌ಎಸ್ಒ ಸಮೂಹದ ಅಧ್ಯಕ್ಷ

ಸುದ್ದಿ ಸಂಸ್ಥೆಗಳ ಒಕ್ಕೂಟವು ಇಸ್ರೇಲ್ ಮೂಲದ ಸ್ಪೈವೇರ್ ತಯಾರಕರ ಗ್ರಾಹಕರು ಪೆಗಾಸಸ್ ಸ್ಪೈವೇರ್ ಉಪಕರಣವನ್ನು  ಪತ್ರಕರ್ತರ ಮತ್ತು ಇತರ ಗಣ್ಯರ ವಿರುದ್ಧ ಹೇಗೆ ಬಳಸಿದ್ದಾರೆ ಎಂದು ವರದಿಗಳನ್ನು ...

Read moreDetails

ಇಸ್ರೇಲ್ ಮಾಲ್ವೇರ್ ಬಳಸಿ ರಾಜಕಾರಣಿಗಳು, ಪತ್ರಕರ್ತರ ಚಲನವಲನದ ಮೇಲೆ ಕಣ್ಣಿಟ್ಟಿತ್ತೆ ಸರ್ಕಾರ?

ಇಸ್ರೇಲ್‌ ಮೂಲದ ಮಿಲಿಟರಿ ಗ್ರೇಡ್‌ ಸ್ಪೈವೇರ್‌ ಸಂಸ್ಥೆ NSO Group ಪತ್ರಕರ್ತರು, ಹೋರಾಟಗಾರರು ಸೇರಿದಂತೆ ಭಾರತದ ಒಟ್ಟು 300 ಕ್ಕೂ ಅಧಿಕ ಮಂದಿಯ ಫೋನ್ ಕದ್ದಾಲಿಕೆ ಮಾಡುತ್ತಿದೆಯೆಂಬ ...

Read moreDetails

Recent News

Welcome Back!

Login to your account below

Retrieve your password

Please enter your username or email address to reset your password.

error: Content is protected !!