ನಿಮ್ಮ ಸರ್ಕಾರ ಮೂರು ತಿಂಗಳು ಇರಲ್ಲ : ಕಾಂಗ್ರೆಸ್ಗೆ ಆರ್.ಅಶೋಕ್ ಟಾಂಗ್
ಬೆಂಗಳೂರು : ನಿಮಗೆ ಧಮ್ ಇದ್ದರೆ ಬಜರಂಗದಳ ಅಥವಾ ಆರ್ಎಸ್ಎಸ್ ಶಾಖೆಯನ್ನು ಬ್ಯಾನ್ ಮಾಡಿ ತೋರಿಸಿ ಅಂತಾ ಮಾಜಿ ಸಚಿವ ಆರ್. ಅಶೋಕ್ ರಾಜ್ಯ ಸರ್ಕಾರಕ್ಕೆ ಸವಾಲೆಸೆದಿದ್ದಾರೆ. ...
Read moreDetailsಬೆಂಗಳೂರು : ನಿಮಗೆ ಧಮ್ ಇದ್ದರೆ ಬಜರಂಗದಳ ಅಥವಾ ಆರ್ಎಸ್ಎಸ್ ಶಾಖೆಯನ್ನು ಬ್ಯಾನ್ ಮಾಡಿ ತೋರಿಸಿ ಅಂತಾ ಮಾಜಿ ಸಚಿವ ಆರ್. ಅಶೋಕ್ ರಾಜ್ಯ ಸರ್ಕಾರಕ್ಕೆ ಸವಾಲೆಸೆದಿದ್ದಾರೆ. ...
Read moreDetails~ಡಾ. ಜೆ ಎಸ್ ಪಾಟೀಲ. "ಏನೆ ಪದ್ಮಾ ˌ ಸಂಜೆ ಆತುˌ ದಿನವೆಲ್ಲ ರಾಷ್ಟ್ರಪ್ರೇಮ ಜಾಗೃತಾ ಕಾರ್ಯ ಮಾಡ್ಲಿಕ್ಕೆ ಅಡ್ಡಾಡಿ ಸುಸ್ತಾಗೇತಿ ಒಂದ್ ವಾಟೆ ಚಹಾನಾದರೂ ತಂದು ...
Read moreDetails21ನೇ ಶತಮಾನದಲ್ಲೂ ಭಾರತೀಯ ಸಮಾಜದಲ್ಲಿ ʼಸ್ಪರ್ಶʼ ಸಾಪೇಕ್ಷವಾಗಿರುವುದು ದುರಂತ ನಾಗರಿಕತೆಯು ಮುಂದುವರೆದಂತೆಲ್ಲಾ ಮನುಜ ಸಮಾಜ ತನ್ನ ಪ್ರಾಚೀನ ಬೇರುಗಳನ್ನು ಸಡಿಲಿಸಿಕೊಂಡು, ಹೊಸ ದಿಗಂತದತ್ತ ಹೆಜ್ಜೆ ಇಡುತ್ತಾ, ತನ್ನ ...
Read moreDetailsಯಾವುದೇ ಸಮಾಜ, ಸಂಘಟನೆಯಾಗಲಿ ಕಾನೂನನ್ನು ಕೈಗೆ ತೆಗೆದುಕೊಳ್ಳದಂತೆ ಶಾಂತಿ ಸುವ್ಯವಸ್ಥೆ ಕಾಪಾಡಲು ಎಲ್ಲ ಕ್ರಮ ತೆಗೆದುಕೊಳ್ಳಲಾಗುವುದು. ಸರ್ಕಾರದ ದೃಷ್ಟಿಯಲ್ಲಿ ಎಲ್ಲರೂ ಸಮಾನರು. ಯಾವುದೇ ಭೇಧಭಾವವಿಲ್ಲದೆ ಕೆಲಸ ಮಾಡುವುದಾಗಿ ...
Read moreDetailsಇಂದು ವ್ಯಾಪಕವಾಗಿ ಚರ್ಚೆಗೊಳಗಾಗಿರುವ ಧಾರ್ಮಿಕ ಚಿಹ್ನೆ, ಲಾಂಛನ ಮತ್ತು ಅಸ್ಮಿತೆಗಳನ್ನೂ, ಇತರ ಧಾರ್ಮಿಕ ಮೌಢ್ಯಾಚರಣೆಗಳನ್ನೂ, ಹಿಂದುತ್ವ ಪ್ರತಿಪಾದಿಸುತ್ತಿರುವ ಸಾಂಪ್ರದಾಯಿಕತೆಯನ್ನೂ ವ್ಯಾಖ್ಯಾನಿಸಬೇಕಿದೆ. ವೈಚಾರಿಕ ಪ್ರಜ್ಞೆ ಮತ್ತು ವೈಜ್ಞಾನಿಕ ಮನೋಭಾವದಿಂದ ...
Read moreDetailsಪಂಜಾಬ್ ಚುನಾವಣೆ ಮುಗಿದಿದೆ. ಪಾಕಿಸ್ತಾನದೊಂದಿಗೆ ಗಡಿಯನ್ನು ಹಂಚಿಕೊಂಡಿರುವ ಈ ರಾಜ್ಯದ ಚುನಾವಣೆಯ ಫಲಿತಾಂಶವು ಭಾರತದ ರಾಜಕೀಯದಲ್ಲಿ ಬಹಳಷ್ಟು ಬದಲಾವಣೆ ತರಲಿದೆ ಎಂದೇ ವ್ಯಾಖ್ಯಾನಿಸಲಾಗುತ್ತಿದೆ.
Read moreDetailsಟೋಪಿ ಧರಿಸಿರುವ ಗಡ್ಡಧಾರಿ ಮುಸ್ಲಿಂ ಪುರುಷರು ನೇಣಿನಲ್ಲಿ ತೂಗುತ್ತಿರುವಂತೆ ತೋರಿಸಿರುವುದು ಯಾವುದೋ ಒಂದು ರೂಪಕವೇ? ಒಟ್ಟಾರೆಯಾಗಿ ಮುಸ್ಲಿಮರು ಭವಿಷ್ಯದಲ್ಲಿ ಎದುರಿಸಲಿರುವ ಹಣೆಬರಹ ಇದು ಎಂದು ಬಿಜೆಪಿಯು ತನ್ನ ...
Read moreDetailsಕರ್ನಾಟಕದ ಹಿಜಾಬ್ ವಿವಾದ ದೇಶ ವಿದೇಶಗಳ ಗಮನ ಸೆಳೆದಿದೆ. ಮಲಾಲಾರಿಂದ ಹಿಡಿದು ಯುಎಇ ರಾಜಕುಮಾರಿಯವರೆಗೆ ಹಲವಾರು ಹಿಜಾಬ್ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಿದ್ದಾರೆ. ಡಿಸೆಂಬರ್‌ನಲ್ಲೇ ಪ್ರಾರಂಭವಾದ ಹಿಜಾಬ್ ...
Read moreDetailsಕಾಲೇಜುಗಳಲ್ಲಿ ತಮ್ಮ ಮೂಲಭೂತ ಹಕ್ಕಿಗಾಗಿ ಹೋರಾಟ ಮಾಡುತ್ತಿರುವ ವಿದ್ಯಾರ್ಥಿನಿಯರ ವೈಯಕ್ತಿಕ ಮಾಹಿತಿಗಳು ವಾಟ್ಸಾಪು ಗ್ರೂಪುಗಳಲ್ಲಿ ಹಂಚಿಕೆಯಾಗುತ್ತಿದೆ. ಅವರ ಮನೆ ವಿಳಾಸ, ಅಂಕಪಟ್ಟಿ, ಫೋನ್ ನಂಬರ್, ಫೋಟೋ, ಪೋಷಕರ ...
Read moreDetailsಕನ್ನಡದ ಕಬೀರ, ಪದ್ಮಶ್ರೀ ಪುರಸ್ಕೃತ ಇಬ್ರಾಹಿಂ ಸುತಾರ್ (76) ಹೃದಯಾಘಾತದಿಂದ ನಿಧನರಾಗಿದ್ದಾರೆ.
Read moreDetailsದಲಿತರ ಮನೆಯಲ್ಲಿ ವಾಸ್ತವ್ಯ ಹೂಡುವುದಕ್ಕಿಂತ ದಲಿತರನ್ನೇ ತಮ್ಮ ಮನೆಗೆ ಕರೆಯಿಸಿ ಊಟ ಹಾಕಿಸಲಿ ಎಂಬ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಅವರ ಹೇಳಿಕೆ ಅತ್ಯಂತ ಸಮಂಜಸವಾಗಿದೆ ಮತ್ತು ...
Read moreDetailsಬಾಂಗ್ಲಾದೇಶದಲ್ಲಿ ಹಿಂದೂ ದೇವಾಲಯಗಳ ಮೇಲೆ ಹಾಗೂ ಹಿಂದೂಗಳ ಮೇಲೆ ನಡೆಯುತ್ತಿರುವ ಹಿಂಸೆಗೆ ಭಾರತ ಸರ್ಕಾರ ನೀಡಿರುವ ಪ್ರತಿಕ್ರಿಯೆ ಕುರಿತು ಅಲ್ಲಿನ ಹಿಂದೂ ಸಂಘಟನೆಗಳು ಅಸಮಾಧಾನ ವ್ಯಕ್ತಪಡಿಸಿವೆ. ಬಾಂಗ್ಲಾದಲ್ಲಿ ಹಿಂದೂಗಳಿಗೆ ರಕ್ಷಣೆ ಸಿಗುತ್ತಿಲ್ಲವಾದರೂ, ಬಿಜೆಪಿ ಕಾಟಾಚಾರಕ್ಕೆ ಮಾತ್ರ ತನ್ನ ಸಹಾನುಭೂತಿ ತೋರುತ್ತಿದೆ. ಬಾಂಗ್ಲಾದೇಶ ಸರ್ಕಾರದ ಮೇಲೆ ಒತ್ತಡ ಹೇರುವ ಯಾವುದೇ ಪ್ರಯತ್ನ ಮಾಡುತ್ತಿಲ್ಲ ಎಂದು ಬಾಂಗ್ಲಾದೇಶ್ ಜಯಿತೊ ಹಿಂದೂ ಮೊಹಾಜೊತೆ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಗೋಬಿಂದ ಚಂದ್ರ ಪ್ರಮಾಣಿಕ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ದುರ್ಗಾ ಪೂಜೆಯ ಪೆಂಡಾಲ್’ಗಳಲ್ಲಿ ಕುರಾನ್’ಗೆ ಅಪಚಾರವೆಸಗಲಾಗಿದೆ ಎಂಬ ಆರೋಪದಡಿ ಅಕ್ಟೋಬರ್ 13ರ ನಂತರ ಹಲವು ಕಡೆಗಳಲ್ಲಿ ಹಿಂದೂಗಳ ಮೇಲೆ ದಾಳಿ ನಡೆಸಲಾಗಿತ್ತು. ಸುಮಾರು ಆರು ದಿನಗಳ ಕಾಲ ನಿರಂತರವಾಗಿ ಹಲವೆಡೆ ಈ ದಾಳಿಗಳು ನಡೆದಿದ್ದವು. ಈ ದಾಳಿಗಳನ್ನು ಖಂಡಿಸಿ ಬಾಂಗ್ಲಾದೇಶದ ಹಲವು ಪ್ರಗತಿಪರ ಸಂಘಟನೆಗಳು ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದವು. ಭಾರತದಲ್ಲಿಯೂ ಹಿಂದೂಪರ ಸಂಘಟನೆಗಳು ದೇಶದಾದ್ಯಂತ ಪ್ರತಿಭಟನೆಗೆ ಕರೆ ನೀಡಿದ್ದವು. ಭಜರಂಗದಳ, ವಿಶ್ವ ಹಿಂದೂ ಪರಿಷತ್, ಆರ್‌ಎಸ್ಎಸ್, ಹಿಂದೂ ಮಹಾಸಭಾ ಸೇರಿದಂತೆ ಹಲವು ಸಂಘಟನೆಗಳು ತೀವ್ರವಾಗಿ ಈ ದಾಳಿಗಳನ್ನು ಖಂಡಿಸಿದ್ದವು. ಆದರೆ, ಸರ್ಕಾರದ ಮಟ್ಟದಲ್ಲಿ ಯಾವ ರೀತಿ ಬಾಂಗ್ಲಾದೇಶದ ಮೇಲೆ ಒತ್ತಡ ಹೇರಲಾಗಿದೆ ಎಂದು ಗಮನಿಸಿದರೆ, ನಿರಾಶದಾಯಕ ಉತ್ತರ ಸಿಕ್ಕಿದೆ, ಎಂದು ಬಾಂಗ್ಲಾದೇಶದ ಹಿಂದೂ ಸಂಘಟನೆಗಳು ಆರೋಪಿಸಿವೆ. ಈ ಕುರಿತಾಗಿ ‘ದಿ ವೈರ್’ಗೆ ಸಂದರ್ಶನ ನೀಡಿರುವ ಗೋಬಿಂದ ಚಂದ್ರ ಪ್ರಮಾಣಿಕ್, ಕಳೆದ ಹಲವು ವರ್ಷಗಳಲ್ಲಿ ಬಾಂಗ್ಲಾದೇಶದ ಹಿಂದೂಗಳ ಮೇಲೆ ನಡೆದಿರುವ ದಾಳಿಗಳಲ್ಲಿ ಆಡಳಿತರೂಢ ಅವಾಮಿ ಲೀಗ್ ನಾಯಕರ ಕೈವಾಡ ಇರುವುದು ಬೆಳಕಿಗೆ ಬಂದಿದೆ. ಸರ್ಕಾರವು ಕೋಮುವಾದಿ ಶಕ್ತಿಗಳ ಬೆಂಬಲಕ್ಕೆ ನಿಂತಿರುವುದು ಈ ಹಿಂದೆಯೂ ಸಾಬೀತಾಗಿದೆ. ಹಾಗಾಗಿ ಇಲ್ಲಿ ಪದೇ ಪದೇ ಹಿಂದೂಗಳ ಮೇಲೆ ದಾಳಿಗಳು ನಡೆಯುತ್ತಲೇ ಇವೆ, ಎಂದಿದ್ದಾರೆ. “ಹಲವು ಪೊಲೀಸ್ ಅಧಿಕಾರಿಗಳ ವರ್ಗಾವಣೆ ಮಾಡಿ, ಆರೋಪಿಗಳನ್ನು ಬಂಧಿಸಿದ್ದರೂ ಇಲ್ಲಿನ ಪರಿಸ್ಥಿತಿಯಲ್ಲಿ ಗಮನಾರ್ಹ ಬದಲಾವಣೆಯಾಗಿಲ್ಲ. ಅಕ್ಟೋಬರ್ 18-19ರಂದು ಕೂಡಾ ಹಿಂದೂಗಳ ಮೇಲೆ ದಾಳಿ ನಡೆಸಲಾಗಿದೆ. ಭಾರತದಲ್ಲಿ ಮುಸ್ಲಿಮರ ಮೇಲೆ ನಡೆಯುತ್ತಿರುವ ದಾಳಿಗೆ ಪ್ರತಿಯಾಗಿ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆಸಿರುವ ಸಾಧ್ಯತೆಗಳಿವೆ ಎಂದು ಈಗಾಗಲೇ ಪ್ರಧಾನಿ ಶೇಖ್ ಹಸೀನಾ ಹೇಳಿದ್ದಾರೆ. ಆದರೆ, ಇದು ಸ್ವೀಕಾರಾರ್ಹವಾದ ಉತ್ತರವಲ್ಲ,” ಎಂದು ಅವರು ಹೇಳಿದ್ದಾರೆ. ಮುಂದುವರೆದು, ಬಹುತೇಕ ಅವಾಮಿ ಲೀಗ್ ನಾಯಕರು ಬಿಜೆಪಿ, ಆರ್ಎಸ್ಎಸ್ ಹಾಗೂ ವಿಶ್ವ ಹಿಂದೂ ಪರಿಷತ್ತನ್ನು ಭಯೋತ್ಪಾದಕ ಸಂಘಟನೆಗಳಂತೆ ಗುರುತಿಸುವ ಕಾರಣದಿಂದ, ಇಲ್ಲಿ ಹಿಂದೂಗಳಿಗೆ ರಕ್ಷಣೆ ಇಲ್ಲದಂತಾಗಿದೆ. ಬಿಜೆಪಿಯನ್ನು ಇಷ್ಟಪಡದ ನಾಯಕರು ಸರ್ಕಾರದಲ್ಲಿ ಹೆಚ್ಚಾಗಿರುವುದರಿಂದ ಭಾರತ ಸರ್ಕಾರದ ಮಾತುಗಳಿಗೆ ಇಲ್ಲಿ ಬೆಲೆಯಿಲ್ಲದಂತಾಗಿದೆ. ಇತ್ತೀಚಿನ ದಿನಗಳಲ್ಲಿ ಆರ್‌ಎಸ್ಎಸ್ ಹಾಗು ವಿ ಹೆಚ್ ಪಿ ಕುರಿತಾಗಿ ಅವಾಮಿ ಲೀಗ್ ನಾಯಕರು ಬೃಹತ್ ಅಭಿಯಾನವನ್ನೇ ಆರಂಭಿಸಿರುವ ಕಾರಣ ಇಲ್ಲಿ ಹಿಂದೂಗಳ ವಿರುದ್ದ ಅಸಹನೆ ಹೆಚ್ಚಾಗಿದೆ, ಎಂದು ಗೋಬಿಂದ್ ಹೇಳಿದ್ದಾರೆ. “ಬಾಂಗ್ಲಾದೇಶದ ಹಿಂದೂಗಳು ಭಾರತ ಸರ್ಕಾರದ ನಡವಳಿಕೆಯ ವಿರುದ್ದ ತೀವ್ರವಾದ ಆಕ್ರೋಶವನ್ನು ಹೊಂದಿದ್ದಾರೆ. ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಭಾರತಕ್ಕೆ ನೇರವಾಗಿ ಎಚ್ಚರಿಕೆ ನೀಡುವ ಮಟ್ಟಿಗೆ ತಲುಪಿದ್ದರೂ, ಭಾರತ ಸರ್ಕಾರ ಇಲ್ಲಿನ ಹಿಂದೂಗಳ ಮೇಲಿನ ದಾಳಿಯನ್ನು ಕನಿಷ್ಟ ಖಂಡಿಸುವ ಹೇಳಿಕೆಯನ್ನೂ ನೀಡಿಲ್ಲ. ಬಾಂಗ್ಲಾ ಸರ್ಕಾರಕ್ಕೆ ಎಚ್ಚರಿಕೆಯನ್ನೂ ರವಾನಿಸಿಲ್ಲ. ಬದಲಾಗಿ, ಹಿಂದೂಗಳ ಮೇಲಿನ ದಾಳಿಗೆ ಕ್ರಮ ಕೈಗೊಂಡ ಶೇಖ್ ಹಸೀನಾ ಅವರಿಗೆ ಭಾರತದ ವಿದೇಶಾಂಗ ಇಲಾಖೆ ಅಭಿನಂದನೆ ತಿಳಿಸಿದೆ. ವಿಶ್ವ ಸಂಸ್ಥೆ ಹಾಗೂ ಅಮ್ನೆಸ್ಟಿ ಇಂಟರ್ನ್ಯಾಷನಲ್ ಸಂಸ್ಥೆ ಈ ದಾಳಿಯನ್ನು ತೀವ್ರವಾಗಿ ಖಂಡಿಸಿವೆ. ಇಂತಹ ಸಂದರ್ಭದಲ್ಲಿ ಭಾರತ ಸರ್ಕಾರದ ಮೌನ ನಿಜಕ್ಕೂ ಬೇಸರ ಮೂಡಿಸಿದೆ,” ಎಂದು ಗೋಬಿಂದ್ ಅವರು ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಇನ್ನು ಭಾರತೀಯ ಮೂಲದ ಹಿಂದೂ ಸಂಸ್ಥೆಗಳ ಬಳಿ ಮನವಿ ಮಾಡಿದರೂ, ಅವರ ನೆರವು ದಕ್ಕದೇ ಇರುವುದು ಮತ್ತಷ್ಟು ನೋವಿಗೆ ಕಾರಣವಾಗಿದೆ ಎಂದು ಹೇಳಿರುವ ಗೋಬಿಂದ್ ಪ್ರಮಾಣಿಕ್, ಬಿಜೆಪಿ, ಆರ್ಎಸ್ಎಸ್ ಹಾಗೂ ವಿ ಹೆಚ್ ಪಿ ಸಂಸ್ಥೆಯೊಂದಿಗೆ ನಿರಂತರವಾಗಿ ನಾವು ಸಂಪರ್ಕದಲ್ಲಿ ಇದ್ದೇವೆ. ಬಾಂಗ್ಲಾ ಸರ್ಕಾರದ ಮೇಲೆ ಒತ್ತಡ ಹೇರಲು ಅವರಲ್ಲಿ ವಿನಂತಿಸಿಕೊಂಡಿದ್ದೇವೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ. ದಿವಂಗತ ಸುಷ್ಮಾ ಸ್ವರಾಜ್, ಆರ್ಎಸ್ಎಸ್’ನ ಹಿರಿಯ ನಾಯಕ ರಾಮ್ ಮಾಧವ್ ಅವರು ನಮ್ಮ ಕುರಿತಾಗಿ ಅಪಾರ ಸಹಾನುಭೂತಿ ಹೊಂದಿದ್ದರು. ಇತರರು ನಮ್ಮನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ. ನಮಗೆ ಅರ್ಥವಾಗದ ಯಾವುದೋ ಕಾರಣಕ್ಕಾಗಿ ಬಾಂಗ್ಲಾ ಸರ್ಕಾರದ ಮೇಲೆ ಒತ್ತಡ ಹೇರಲು ಹಿಂಜರಿಯುತ್ತಿದ್ದಾರೆ, ಎಂದು ಹೇಳಿದ್ದಾರೆ. ಪಶ್ಚಿಮ ಬಂಗಾಳದ ನಾಯಕರಾದ ದಿಲೀಪ್ ಘೋಷ್ ಹಾಗೂ ಸುವೆಂದು ಅಧಿಕಾರಿ ಅಲ್ಪ ಮಟ್ಟಿನ ಬೆಂಬಲವನ್ನು ನಮಗೆ ನಿಡಿದ್ದು ಖುಶಿ ತಂದಿದೆ. ಆದರೆ, ಭಾರತ ಸರ್ಕಾರದ ಮೇಲೆ ನಮಗೆ ಎಳ್ಳಷ್ಟೂ ಭರವಸೆ ಉಳಿದಿಲ್ಲ, ಎಂದು ಗೋಬಿಂದ್ ಅವರು ಹೇಳಿರುವುದು ಆರ್ಎಸ್ಎಸ್ ಹಾಗೂ ಬಿಜೆಪಿಯ ಹಿಂದೂ ಪ್ರೇಮಕ್ಕೆ ಹಿಡಿದಿರುವ ಕೈಗನ್ನಡಿಯಾಗಿದೆ.
Read moreDetailsಆರ್ ಎಸ್ಎಸ್ ನವರು ಶಿಕ್ಷಣ ಸಂಸ್ಥೆ, ವಿದ್ಯಾಲಯಗಳನ್ನು ಆರಂಭಿಸುತ್ತಾ ಸರ್ಕಾರಿ ಹುದ್ದೆ ಸೇರಿದಂತೆ ಎಲ್ಲ ಕ್ಷೇತ್ರಗಳ ಉನ್ನತ ಹುದ್ದೆಗಳಲ್ಲಿ ತಮ್ಮ ಕಾರ್ಯಕರ್ತರನ್ನು ಕೂರಿಸಲು ಪ್ರಯತ್ನಿಸುತ್ತಿದ್ದಾರೆ. ಇನ್ನು ಶಾಲೆ ...
Read moreDetailsಒಂದು ವರ್ಷದ ಹಿಂದೆ ತನ್ನ ಮಗ ಹಿಂದು ಯುವತಿಯನ್ನು ಪ್ರೀತಿಸುತ್ತಿರುವ ವಿಷಯವನ್ನ ತಿಳಿದ ತಾಯಿ ನಜೀಮಾ ಶೇಖ್ ತನ್ನ ಮಗನಾದ ಅರ್ಬಾಜ್ ಮುಲ್ಲಾ(24)ನನ್ನು ಪ್ರಾಣಪಾಯದಿಂದ ಪಾರು ಮಾಡಲು ...
Read moreDetailsಒಂದು ವರ್ಷ ಹಿಂದೆ, ಎರಡು ವರ್ಷ ಮೂರು ತಿಂಗಳಿನ ಮಗುವನ್ನು ದುಡ್ಡಿಗಾಗಿ ಅಪಹರಿಸಿ , ಮಕ್ಕಳಿಲ್ಲದ ಹಿಂದೂ ಪೊಷಕರಿಗೆ ಮಾರಲಾಗಿತ್ತು. ಅದರೆ ಈಗ ಮಗುವನ್ನು ಮೂಲ ಪೋಷಕರೊಂದಿಗೆ ...
Read moreDetailsJNU ನಲ್ಲಿ ಗದ್ದಲವೆಬ್ಬಿಸಲು ಕಾರ್ಯತಂತ್ರ ಹೆಣೆದಿದ್ದ ಎಬಿವಿಪಿ!
Read moreDetails`ಪೌರತ್ವ ವಿರುದ್ಧದ ಪ್ರತಿಭಟನೆ ಸುದ್ದಿ ಹಾಕದಂತೆ ಕೇಂದ್ರ ತಾಕೀತು!
Read moreDetails© 2024 www.pratidhvani.com - Analytical News, Opinions, Investigative Stories and Videos in Kannada