ಬೆಂಗಳೂರು : ನಿಮಗೆ ಧಮ್ ಇದ್ದರೆ ಬಜರಂಗದಳ ಅಥವಾ ಆರ್ಎಸ್ಎಸ್ ಶಾಖೆಯನ್ನು ಬ್ಯಾನ್ ಮಾಡಿ ತೋರಿಸಿ ಅಂತಾ ಮಾಜಿ ಸಚಿವ ಆರ್. ಅಶೋಕ್ ರಾಜ್ಯ ಸರ್ಕಾರಕ್ಕೆ ಸವಾಲೆಸೆದಿದ್ದಾರೆ. ಬೆಂಗಳೂರಿನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಆರ್ಎಸ್ಎಸ್, ಬಜರಂಗದಳ ಬ್ಯಾನ್ ಮಾಡಿದ್ರೆ ಮೂರು ತಿಂಗಳಿಗೆ ನಿಮ್ಮ ಸರ್ಕಾರವೇ ಇರಲ್ಲ ಎಂದು ಕಿಡಿ ಕಾರಿದ್ದಾರೆ.

ನಿಮ್ಮ ತಾತ, ಮುತ್ತಾತನ ಕಾಲದಲ್ಲಿಯೇ ಇದು ಸಾಧ್ಯವಾಗಲಿಲ್ಲ. ಇಡೀ ದೇಶದಲ್ಲಿಯೇ ಕಾಂಗ್ರೆಸ್ ಹೆಸರಿಲ್ಲದೇ ಹೋಗಿದೆ ಎಂದು ಆರ್. ಅಶೋಕ್ ಕಾಂಗ್ರೆಸ್ ಪಕ್ಷಕ್ಕೆ ಲೇವಡಿ ಮಾಡಿದ್ರು.
ನಮ್ಮ ದೇಶದ ಪ್ರಧಾನಿಗಳೂ ಆರ್ಎಸ್ಎಸ್ನವರು ಅನ್ನೋದು ನೆನಪಿರಲಿ. ಆರ್.ಎಸ್ಎಸ್ ಹಿಂದೂಗಳ ಧ್ವನಿ. ಅದನ್ನು ಬ್ಯಾನ್ ಮಾಡಲು ಸಾಧ್ಯವೇ ಇಲ್ಲ ಎಂದಿದ್ದಾರೆ.