Tag: High Court of Karnataka

ಜಾತಿ ನಿಂದನೆ ಆರೋಪ:ವಕೀಲ ಜಗದೀಶ್‌ ಬಂಧನ

ಬೆಂಗಳೂರು: ಜಾತಿ ನಿಂದನೆ ಆರೋಪ ಪ್ರಕರಣವೊಂದರಲ್ಲಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪದಡಿ ವಕೀಲ ಕೆ.ಎನ್‌.ಜಗದೀಶ್‌ ಅವರನ್ನು ಕೊಡಿಗೇಹಳ್ಳಿ ಠಾಣೆ ಪೊಲೀಸರು ಗುರುವಾರ ಗೋವಾದಲ್ಲಿ ಬಂಧಿಸಿದ್ದಾರೆ. 2022ರಲ್ಲಿ ವಕೀಲ ...

Read more

ಡಿಸಿಎಂ ಡಿ.ಕೆ ಶಿವಕುಮಾರ್‌ಗೆ ಹೈಕೋರ್ಟ್‌ನಲ್ಲಿ ಬಿಗ್ ರಿಲೀಫ್!

ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಡಿಸಿಎಂ ಡಿ.ಕೆ ಶಿವಕುಮಾ‌ರ್ ಅವರಿಗೆ ಬಿಗ್ ರಿಲೀಫ್ ಸಿಕ್ಕಿದೆ. ಸಿಬಿಐ ಮತ್ತು ಬಿಜೆಪಿ ನಾಯಕ ಬಸನಗೌಡ ಪಾಟೀಲ್‌ ಯತ್ನಾಳ್ ಅವರು ಸಲ್ಲಿಸಿದ್ದ ...

Read more

ಪ್ರಾಸಿಕ್ಯೂಷನ್​: ಬೀಸುವ ದೊಣ್ಣೆಯಿಂದ ಸಿದ್ದರಾಮಯ್ಯ ಪಾರು!

ಬೆಂಗಳೂರು: ಮುಡಾ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್​ಗೆ ರಾಜ್ಯಪಾಲರ ಅನುಮತಿ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್, ಆಗಸ್ಟ್ 29ಕ್ಕೆ ಮುಂದೂಡಿದೆ. ಸಿಎಂ ...

Read more

ನಟ ದರ್ಶನ್​​​​​ ಮನೆ ಊಟದ ಅರ್ಜಿ. ದಂಡ ವಿಧಿಸುವ ಎಚ್ಚರಿಕೆ ಕೊಟ್ಟ ಕೋರ್ಟ್!

ಬೆಂಗಳೂರು:ರೇಣುಕಾಸ್ವಾಮಿ ಕೊಲೆ ಕೇಸ್​​​​​​​​​​ನ ಆರೋಪಿ ನಟ ದರ್ಶನ್​​ ಅವರು ಪರಪ್ಪನ ಅಗ್ರಹಾರದ ಜೈಲು ಸೇರಿ 2 ತಿಂಗಳು ಕಳೆದಿವೆ. ತಮಗೆ ಜೈಲಿನ ಊಟ ಸೇರುತ್ತಿಲ್ಲ..ಅದರಿಂದ ದೇಹದ ತೂಕ ...

Read more

ಜಮ್ಮಾ ಬಾಣೆ ಭೂಮಿಯ ಪೂರ್ಣ ಹಕ್ಕು ಎಲ್ಲ ಕುಟುಂಬ ಸದಸ್ಯರಿಗೆ ಸೇರಿದ್ದು ; ಹಕ್ಕು ದೃಢಪಡಿಸಿದ ರಾಜ್ಯ ಹೈ ಕೋರ್ಟ್‌ಕೋವರ್‌ ಕೊಲ್ಲಿ ಇಂದ್ರೇಶ್

ಬೆಂಗಳೂರು ; ಮಹತ್ವದ ತೀರ್ಪೊಂದರಲ್ಲಿ ಕರ್ನಾಟಕ ಭೂಕಂದಾಯ (ಮೂರನೇ ತಿದ್ದುಪಡಿ) ಕಾಯ್ದೆ 2011ರ ಸಾಂವಿಧಾನಿಕ ಸಿಂಧುತ್ವವನ್ನು ಎತ್ತಿಹಿಡಿದಿರುವ ಕರ್ನಾಟಕದ ಹೈಕೋರ್ಟ್ ಕೊಡವ ಕುಟುಂಬಗಳ ಹಿತದೃಷ್ಟಿಯಿಂದ ಈ ತಿದ್ದುಪಡಿಯಾಗಿದೆ ...

Read more

ಸಾಲಕ್ಕಾಗಿ ಆಸ್ತಿ ಜಪ್ತಿ ಮಾಡಲು ಅವಕಾಶ ಇಲ್ಲ: ಹೈಕೋರ್ಟ್​ ಆದೇಶ

ಬೆಂಗಳೂರು:ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪಂಗಡಗಳ (ಕೆಲವು ಜಮೀನುಗಳ ಹಸ್ತಾಂತರ ನಿಷೇಧ) ಕಾಯ್ದೆ (ಪಿಟಿಸಿಎಲ್)ಯಡಿ ಮಂಜೂರಾದ ಜಮೀನನ್ನು ಜನರಲ್ ಪವರ್ ಆಫ್ ಅಟಾರ್ನಿ(ಜಿಪಿಎ) ಮಾಡಿಕೊಂಡ ಗೃಹ ನಿರ್ಮಾಣ ...

Read more

ಭದ್ರಾ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಹರಿಸುವ ಹೈ ವೋಲ್ಟೇಜ್ ಸಭೆಯತ್ತ ಇದೀಗ ಎಲ್ಲರ ಚಿತ್ತ..!

ಇದೀಗ ರಾಜ್ಯದ ಎಲ್ಲರ ಚಿತ್ತ ಭದ್ರಾ ಡ್ಯಾಂನತ್ತ ನೆಟ್ಟಿದೆ. ಯಾಕೆಂದರೆ ಭದ್ರಾ ಜಲಾಶಯದಿಂದ ಆಗಸ್ಟ್ 10ರಿಂದ ನೀರು ಹರಿಸಲಾಗುತ್ತಿದೆ. ಇದು ಈಗ ಪರ -ವಿರೋಧಕ್ಕೂ ಕಾರಣವಾಗಿದೆ. ಈ ...

Read more

ಪ್ರಜ್ವಲ್‌ ರೇವಣ್ಣ ಸಂಸದ ಸ್ಥಾನ ಅನರ್ಹ.. ಕಾರಣ ಏನು..? ಮುಂದಿನ ಹಾದಿ ಯಾವುದು..?

ಲೋಕಸಭಾ ಚುನಾವಣೆಗೆ ನಿಧಾನವಾಗಿ ಕಾವು ಏರುತ್ತಿದೆ. 2024ರಲ್ಲಿ ಲೋಕಸಭಾ ಚುನಾವಣೆ ನಡೆಯಲಿದೆ. ಆದರೆ ಕರ್ನಾಟಕ ಹೈಕೋರ್ಟ್‌ ಪ್ರಜ್ವಲ್‌ ರೇವಣ್ಣ ಅವರ ಸಂಸದ ಸ್ಥಾನವನ್ನು ಅನರ್ಹ ಮಾಡಿ ಆದೇಶ ...

Read more

ತನ್ನ ಕಾಲಿನ ಮೇಲೆ ತಾನೇ ಕಲ್ಲು ಹಾಕಿಕೊಂಡ್ರಾ ರಿಯಲ್​ ಸ್ಟಾರ್​ ಉಪೇಂದ್ರ..? ಕೋರ್ಟ್​ ತಡೆ ಯಾಕೆ..?

‘ಊರು ಇದ್ದಲ್ಲಿ ----------- ಇರುತ್ತೆ’ ಗಾದೆ ಮಾತನ್ನು ಬಳಸಿ ಮಾತನಾಡಿದ್ದ ನಟ ಉಪೇಂದ್ರ ( Actor upendra ) ದಲಿತ ( Dalit ) ಸಮುದಾಯಗಳ ಕೆಂಗಣ್ಣಿಗೆ ...

Read more

ಸಿಎಂ ಸಿದ್ದರಾಮಯ್ಯ ಶಾಸಕ ಆಯ್ಕೆ‌ ಅಸಿಂಧು ಕೋರಿ ಅರ್ಜಿ ಸಲ್ಲಿಕೆ

ಸಮಾಜ ಸಚಿವ ವಿ.ಸೋಮಣ್ಣ ವಿರುದ್ಧ ತಮ್ಮ ಕ್ಷೇತ್ರ ವರುಣಾದಿಂದ ಶಾಸಕರಾಗಿ ಆಯ್ಕೆಯಾದ ಸಿದ್ದರಾಮಯ್ಯ ಈಗ ಮುಖ್ಯಮಂತ್ರಿಯಾಗಿಯೂ ಆಯ್ಕೆಯಾಗಿದ್ದು, ಇವರ ಆಯ್ಕೆ ಕಾನೂನು ವಿರೋಧಿಯಾಗಿದೆ ಎಂಬ ಆರೋಪ ಕೇಳಿ ...

Read more

`ಧರ್ಮದ ಅತ್ಯಗತ್ಯ ಆಚರಣೆಗಳು’ಮತ್ತು ಕೋರ್ಟ್ ತೀರ್ಪುಗಳು

ಕಾಲೇಜಿಗೆ ಹಿಜಾಬ್ ಧರಿಸಲು ಅನುಮತಿ ನೀಡುವಂತೆ ಕೋರಿ ಮುಸ್ಲಿಂ ವಿದ್ಯಾರ್ಥಿನಿಯರು ಸಲ್ಲಿಸಿರುವ ಅರ್ಜಿಗಳನ್ನು ವಿಚಾರಣೆ ನಡೆಸುತ್ತಿರುವ ಕರ್ನಾಟಕ ಹೈಕೋರ್ಟ್ ವಿಚಾರಣೆ ವೇಳೆ ಹಿಜಾಬ್ ಇಸ್ಲಾಂ ಧರ್ಮದ 'ಅತ್ಯಗತ್ಯ' ...

Read more

ಹಿಜಾಬ್ ನಿಷೇಧದ ಹಿಂದಿನ ಬಲಪಂಥೀಯ ಹುನ್ನಾರಗಳೇನು?

ಹೈಸ್ಕೂಲ್ ವಿದ್ಯಾರ್ಥಿನಿಯೊಬ್ಬಳನ್ನು ಮಾಧ್ಯಮ ಪ್ರತಿನಿಧಿಯೊಬ್ಬರು ಅಟ್ಟಾಡಿಸಿಕೊಂಡು ಹೋಗಿ ವರದಿ ಮಾಡಿದ ಘಟನೆ ಇನ್ನೂ ಹಸಿ ಹಸಿಯಾಗಿರುವಾಗಲೇ ಕರ್ನಾಟಕ ಸರ್ಕಾರ ಪಿಯು ಮತ್ತು ಡಿಗ್ರಿ ಕಾಲೇಜ್ (Degree Collage) ...

Read more

BBMP ಚುನಾವಣೆ : ತುರ್ತು ಅರ್ಜಿ ವಿಚಾರಣೆಗೆ ಒಪ್ಪಿದ ಸುಪ್ರೀಂ ಕೋರ್ಟ್‌!

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಚುನಾವಣೆಗೆ ಸಂಬಂಧಿಸಿದಂತೆ ಸಲ್ಲಿಸಿರುವ ಅರ್ಜಿಗಳ ತುರ್ತು ವಿಚಾರಣೆಗೆ ಸುಪ್ರೀಂಕೋರ್ಟ್ (Supreme Court) ಸಮ್ಮತಿ ನೀಡಿದೆ. ಮುಖ್ಯ ನ್ಯಾಯಮೂರ್ತಿ ಎನ್ ವಿ ...

Read more

ದತ್ತಾತ್ರೇಯ ಪೀಠ ವಿವಾದ: ಹೈ ಕೋರ್ಟ್ ಆದೇಶದಲ್ಲಿ ಇರುವುದಾದರು ಏನು ?

ಚಿಕ್ಕಮಗಳೂರು ಜಿಲ್ಲೆಯ ದತ್ತಾತ್ರೇಯ ಪೀಠದಲ್ಲಿ ಪೂಜಾ ವಿಧಿ ವಿಧಾನ ನೆರವೇರಿಸಲು ಮುಸ್ಲಿಂ ಮೌಲ್ವಿ ಸೈಯದ್ ಗೌಸ್ ಮೊಹಿದ್ದೀನ್ ಅವರನ್ನು ನೇಮಿಸಿ ಧಾರ್ಮಿಕ ದತ್ತಿ ಇಲಾಖೆ ಆಯುಕ್ತರು 2018ರಲ್ಲಿ ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್‌ ರದ್ದುಪಡಿಸಿದೆ. ಸರ್ಕಾರದ ಆದೇಶ ಪ್ರಶ್ನಿಸಿ ಶ್ರೀಗುರು ದತ್ತಾತ್ರೇಯ ಪೀಠ ದೇವಸ್ಥಾನ ಸಂವರ್ಧನಾ ಸಮಿತಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಪೂರ್ಣಗೊಳಿಸಿ ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಮೂರ್ತಿ ಪಿ.ಎಸ್. ದಿನೇಶ್ ಕುಮಾರ್ ಅವರಿದ್ದ ಪೀಠ ವಿಚಾರಿಸಿ ತೀರ್ಪು ಪ್ರಕಟಿಸಿದೆ. ಈ ವೇಳೆ ಧಾರ್ಮಿಕ ದತ್ತಿ ಆಯುಕ್ತರು 2018ರ ಮಾರ್ಚ್ 19ರಂದು ಹೊರಡಿಸಿದ್ದ ಆದೇಶವನ್ನು ರದ್ದುಪಡಿಸಿದ ಪೀಠ, ಪ್ರಕರಣವನ್ನು ರಾಜ್ಯ ಸರ್ಕಾರ ಹೊಸದಾಗಿ ಕಾನೂನು ರೀತಿ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಈ ಕುರಿತು ಹಿಂದೆ ಉನ್ನತ ಮಟ್ಟದ ಸಮಿತಿ ನೀಡಿದ್ದ ವರದಿಯನ್ನು ಪರಿಗಣಿಸಬಾರದು ಎಂದು ನಿರ್ದೇಶಿಸಿತು. ಈ ಪ್ರಕರಣ ರಾಜ್ಯದಲ್ಲಿ ಅಲ್ಲೋಲ ಕಲ್ಲೋಲ ಉಂಟು ಮಾಡಿದ ಪ್ರಕರಣವಾಗಿತ್ತು. ಬಿಜೆಪಿ ಚಿಕ್ಕಮಗಳೂರು ಕಡೆ ತನ್ನ ಬೇರು ಗಟ್ಟಿಗೊಳಿಸಲು ಈ ಪ್ರಕರಣವನ್ನು ಬಳಸಿಕೊಂಡಿತ್ತು. ಮತ್ತು ಅದರಲ್ಲಿ ಬಿಜೆಪಿಯವರು ಯಶಸ್ವಿ ಕೂಡ ಆಗಿದ್ದರು. ಹೀಗಾಗಿ ಈ ಪ್ರಕರಣದ ಕುರಿತು ಇತ್ತೀಚೆಗೆ ಹೊರ ಬಿದ್ದ ತೀರ್ಪಿನ ಮುಖ್ಯಾಂಶಗಳು ʻಪ್ರತಿಧ್ವನಿʼ ಓದುಗಾರರಾದ ನೀವು ತಿಳಿದುಕೊಳ್ಳುವ ಅಗತ್ಯವಿದೆ. ತೀರ್ಪಿನ ಮುಖ್ಯಾಂಶಗಳು :  •2010ರಲ್ಲಿ ಸುಪ್ರೀಂಕೋರ್ಟ್‌ಗೆ ಧಾರ್ಮಿಕ ದತ್ತಿ ಆಯುಕ್ತರು ಸಲ್ಲಿಸಿರುವ ವರದಿಯಲ್ಲಿ ಒಟ್ಟು 1015 ಜನರಿಂದ ಹೇಳಿಕೆಗಳನ್ನು ಪಡೆಯಲಾಗಿದೆ. ಅವರಲ್ಲಿ ಬಹುತೇಕ ಮಂದಿ ಹಿಂದು ಹಾಗೂ ಮುಸ್ಲಿಂ ಸಮುದಾಯದ ಇಬ್ಬರೂ ಪೂಜೆ ಹಾಗೂ ಪ್ರಾರ್ಥನೆಗಳನ್ನು ಸಲ್ಲಿಸುತ್ತಿದ್ದರು ಎಂದು ಹೇಳಿದ್ದಾರೆ. ಈ 1015 ಜನರಲ್ಲಿ 1969 ರಿಂದ  1975ರವರೆಗೆ ಮುಜಾವರ್ ಆಗಿದ್ದ ಎಂ.ಎನ್. ಬಾಷಾ ಅವರ ಹೇಳಿಕೆಯೂ ಇದ್ದು, ದೇವಾಲಯದಲ್ಲಿದ್ದ ಪಾದುಕೆಗಳನ್ನು ಬ್ರಾಹ್ಮಣ ಅಥವಾ ಲಿಂಗಾಯತ ಅರ್ಚಕರು ಅವರ ಸಂಪ್ರದಾಯದ ಪ್ರಕಾರ ಪೂಜೆ ನೆರವೇರಿಸುತ್ತಿದ್ದರು ಎಂದು ತಿಳಿಸಿದ್ದಾರೆ. ಜತೆಗೆ, ಹಳೆಯ ಪದ್ಧತಿಯನ್ನೇ ಮುಂದುವರಿಸಿಕೊಂಡು ಹೋಗಬೇಕೆಂದು ಬಾಷಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. • ದಾಖಲೆಗಳ ಪ್ರಕಾರ ಮೈಸೂರು ಮಹಾರಾಜರು ದತ್ತಾತ್ರೇಯ ದೇವರು ಹಾಗೂ ಬಾಬಾ ಬುಡನ್ ದರ್ಗಾ ಎರಡಕ್ಕೂ ಪ್ರತ್ಯೇಕವಾಗಿ ದತ್ತಿ ಹಾಗೂ ಅನುದಾನಗಳನ್ನು ನೀಡಿದ್ದಾರೆ. 1995ರ ಬಳಿಕ ಇನಾಮು ನಿಷೇಧಗೊಂಡ ಬಳಿಕ ಪ್ರತ್ಯೇಕ ತಸ್ತಿಕ್ ನಿಗದಿಪಡಿಸಲಾಗಿದೆ. ಆದರೆ, ಸರ್ಕಾರ ಪೂಜಾ ವಿಧಿ ವಿಧಾನ ಪೂರೈಸಲು ಮುಜಾವರ್ ನೇಮಕ ಮಾಡಿ, ಅವರಿಗೆ ಮಾತ್ರ ಗುಹೆಯೊಳಗೆ ಪ್ರವೇಶಿಸಲು ಹಾಗೂ ಹಿಂದು ಮತ್ತು ಮುಸ್ಲಿಮರಿಬ್ಬರಿಗೂ ತೀರ್ಥ ವಿತರಿಸಲು ಅವಕಾಶ ಕಲ್ಪಿಸಲಾಗಿದ್ದು, ಪಾದುಕೆಗಳಿಗೆ ಹೂವುಗಳನ್ನಿಡಲು ಹಾಗೂ ನಂದಾದೀಪ ಬೆಳಗಿಸಲು ಅವಕಾಶ ನೀಡಲಾಗಿದೆ. ಈ ವಿಚಾರಗಳು ಮುಸ್ಲಿಮರ ಆಚರಣೆಗಳಿಗೆ ವಿರುದ್ಧವಾಗಿವೆ. ಏಕೆಂದರೆ, ಇಸ್ಲಾಂ ಧರ್ಮದಲ್ಲಿ ವಿಗ್ರಹ ಆರಾಧನೆಗೆ ಮಾನ್ಯತೆ ಇಲ್ಲ. •ಮೊದಲನೆಯದಾಗಿ, 2018ರ ಮುಜಾವರ್ ನೇಮಿಸುವ ಮೂಲಕ ಸರ್ಕಾರ ಹಿಂದು ಸಂಪ್ರದಾಯದ ಪ್ರಕಾರ ಪೂಜೆ, ಅರ್ಚನೆಗಳನ್ನು ನೆರವೇರಿಸುವ ಹಿಂದು ಸಮುದಾಯದ ಜನರ ಹಕ್ಕುಗಳನ್ನು ಮೊಟಕುಗೊಳಿಸಲಾಗಿದೆ ಎಂದು ಕೆಲವರು ಆರೋಪಿಸಿದ್ದರು. ಎರಡನೆಯದಾಗಿ, ಇಸ್ಲಾಂ ನಂಬಿಕೆಗಳಿಗೆ ವಿರುದ್ದವಾಗಿ ದೇವಾಲಯದಲ್ಲಿರುವ ಪಾದುಕೆಗಳಿಗೆ ಹೂವು ಇಡುವ ಹಾಗೂ ನಂದಾದೀಪ ಬೆಳಗಿಸುವ ಕೆಲಸವನ್ನು ಮುಜಾವರ್ ಮೇಲೆ ಹೇರಲಾಗಿದೆ. ಈ ಅಂಶಗಳು ಸಂವಿಧಾನದ ಪರಿಚ್ಛೇದ 25ರ ಅಡಿಯಲ್ಲಿ ಎರಡೂ ಸಮುದಾಯಗಳಿಗೆ ನೀಡಿರುವ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯಾಗಿದೆ. • ಧಾರ್ಮಿಕ ದತ್ತಿ ಆಯುಕ್ತರ ಮುಂದೆ ಹೇಳಿಕೆ ನೀಡಿರುವವರಲ್ಲಿ ಹೆಚ್ಚಿನ ಸಂಖ್ಯೆಯ ಭಕ್ತರು ಹಿಂದು ಹಾಗೂ ಮುಸ್ಲಿಂ ಇಬ್ಬರೂ ಅವರವರ ಸಂಪ್ರದಾಯಗಳ ಪ್ರಕಾರ ಪೂಜೆ ನೆರವೇರಿಸುತ್ತಿದ್ದರು ಎಂದು ಹೇಳಿಕೆ ನೀಡಿದ್ದರೂ, ಸರ್ಕಾರ ಉನ್ನತ ಮಟ್ಟದ ಸಮಿತಿಯ ವರದಿಯನ್ನೇ ಅಂತಿಮವಾಗಿ ಪರಿಗಣಿಸಿದೆ. • ಇದು ಪೂಜಾ ಸ್ಥಳವನ್ನು ಪರಿವರ್ತಿಸಿದ ಪ್ರಕರಣವಲ್ಲ. ಹಿಂದು ಮತ್ತು ಮುಸ್ಲಿಂ ಇಬ್ಬರೂ ಪೂಜೆ ಮಾಡುವಂತಹ ಸ್ಥಳವಾಗಿದೆ. ಆದರೆ, ಪೂಜೆ ನೆರವೇರಿಸಲು ಮೌಲ್ವಿಯನ್ನು ನೇಮಿಸಲು ಶಿಫಾರಸು ಮಾಡುವ ಮೂಲಕ ಉನ್ನತ ಮಟ್ಟದ ಸಮಿತಿಯು ಪಕ್ಷಪಾತ ಎಸಗಿದೆ. • ನಂಬಿಕೆ ಎಂಬುದು ವೈಯಕ್ತಿಕ ವಿಚಾರ. ಅದು ನಿಜವಾದ ನಂಬಿಕೆ ಎಂಬುದಾಗಿ ಒಪ್ಪಲು ಕೋರ್ಟ್‌ಗೆ ಸೂಕ್ತ ದಾಖಲೆ ದೊರೆತಾಗ ನಂಬುವವರಿಗೆ ಬಿಟ್ಟುಬಿಡಬೇಕಾಗುತ್ತದೆ. ಹಿಂದು ಅಥವಾ ಮುಸ್ಲಿಂ ಪೈಕಿ ಯಾರೇ ಆಗಲಿ ಅವರ ಧಾರ್ಮಿಕ ನಂಬಿಕೆಯನ್ನು ಗುರುತಿಸಬೇಕಾಗುತ್ತದೆ. ಸಂಪ್ರದಾಯವನ್ನು ಸಮಾನವಾಗಿ ಗೌರವಿಸುವುದೇ ಜಾತ್ಯಾತೀತ ಸಂವಿಧಾನದ ಮೌಲ್ಯವಾಗಿರುತ್ತದೆ ಎಂದು ಸುಪ್ರೀಂಕೋರ್ಟ್ ರಾಮಜನ್ಮಭೂಮಿ ಪ್ರಕರಣದಲ್ಲಿ ಆದೇಶಿಸಿದ್ದ ಈ ಮಾತನ್ನು ಪುನಃ ಮತ್ತೆ ಇಲ್ಲಿ ನೆನಪಿಸಿಕೊಳ್ಳಲಾಯ್ತು. ...

Read more

ಸೈಕೋಪಾತ್‍ ಅತ್ಯಾಚಾರಿ, ಸರಣಿ ಹಂತಕ ಉಮೇಶರೆಡ್ಡಿಗೆ ಗಲ್ಲು ಶಿಕ್ಷೆ ಖಾಯಂ: ಹೈಕೋರ್ಟ್‌ ಮಹತ್ವದ ತೀರ್ಪು

ಈ ಮೃಗೀಯ ವ್ಯಕ್ತಿತ್ವದ, ವಿಕ್ಷಿಪ್ತ ಮನಸ್ಸಿನ, ವಿಕೃತ ಕಾಮನೆಗಳ ಸೈಕೋಪಾಥ್‍ಗೆ ಎಂದೋ ಗಲ್ಲು ಶಿಕ್ಷೆಯಾಗಿತ್ತು. ಅದು ಇವತ್ತು ಖಾಯಂ ಮತ್ತು ಅಂತಿಮ ಎಂದು ಘೋಷಿಸಲ್ಪಟ್ಟಿದೆ. ಈತನ ವಿಕೃತಿಗೆ ...

Read more

ಶಾಲೆಗಳಲ್ಲಿ ಕನ್ನಡ ಕಡ್ಡಾಯ ಪ್ರಶ್ನಿಸಿ 4ನೇ ತರಗತಿ ವಿದ್ಯಾರ್ಥಿ ಮನವಿ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್

ರಾಜ್ಯದ ಎಲ್ಲಾ ಶಾಲೆಗಳಲ್ಲೂ ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯನ್ನಾಗಿ ಕಲಿಸುವುದನ್ನು ಕಡ್ಡಾಯಗೊಳಿಸಿರುವ ರಾಜ್ಯ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ 4ನೇ ತರಗತಿ ವಿದ್ಯಾರ್ಥಿಯೊಬ್ಬ ಕರ್ನಾಟಕ ಹೈಕೋರ್ಟ್‌ನಲ್ಲಿ ಮನವಿ ...

Read more

ಮೌಢ್ಯ ಪ್ರಸರಣ ಕೇಂದ್ರಗಳನ್ನು ತೆರವುಗೊಳಿಸಬೇಕಿದೆ

ಮೈಸೂರಿನಲ್ಲಿ ಚಾರಿತ್ರಿಕ ಮಹತ್ವ ಇರುವ ಒಂದು ಸರ್ಕಾರಿ ಹೆಣ್ಣು ಮಕ್ಕಳ ಶಾಲೆಯನ್ನು ನುಂಗಿಹಾಕಲು ಆಧುನಿಕ ಅಧ್ಯಾತ್ಮ ಮಾರುಕಟ್ಟೆ ಶತ ಪ್ರಯತ್ನ ಮಾಡುತ್ತಿದೆ. ಭೂಮಿ, ನೆಲದ ಮೌಲ್ಯ, ಸ್ಥಿರಾಸ್ಥಿಯ ...

Read more

ಆನೆಗಳನ್ನು ಪೂಜೆ ಕಾರ್ಯಕ್ಕೆ ಬಳಸುವುದು ತಪ್ಪು; ಆನೆ ಕಾಡಿನಲ್ಲಿ ಇರಬೇಕು, ದೇವಸ್ಥಾನದಲ್ಲಿ ಅಲ್ಲ: ಕರ್ನಾಟಕ ಹೈಕೋರ್ಟ್

ಬೆಂಗಳೂರಿನ ದೇವಸ್ಥಾನವೊಂದರಲ್ಲಿ ಪೂಜಾ ಕಾರ್ಯಕ್ಕೆ ಬಳಸಲು ಆನೆಯನ್ನು ಇರಿಸಿಕೊಂಡಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಹೈಕೋರ್ಟ್‌, ಆನೆಗಳು ಕಾಡಿನಲ್ಲಿ ಇರಬೇಕು ಹೊರತು ದೇವಸ್ಥಾನದಲ್ಲಿ ಅಲ್ಲ ಎಂದು‌ ಮಹತ್ವದ ತೀರ್ಪು ನೀಡಿದೆ. ...

Read more
Page 1 of 2 1 2

Recent News

Welcome Back!

Login to your account below

Retrieve your password

Please enter your username or email address to reset your password.

error: Content is protected !!