• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, March 12, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ದತ್ತಾತ್ರೇಯ ಪೀಠ ವಿವಾದ: ಹೈ ಕೋರ್ಟ್ ಆದೇಶದಲ್ಲಿ ಇರುವುದಾದರು ಏನು ?

ಕರ್ಣ by ಕರ್ಣ
September 30, 2021
in ಕರ್ನಾಟಕ
0
ಶಾಲೆಗಳಲ್ಲಿ ಕನ್ನಡ ಕಡ್ಡಾಯ ಪ್ರಶ್ನಿಸಿ 4ನೇ ತರಗತಿ ವಿದ್ಯಾರ್ಥಿ ಮನವಿ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್
Share on WhatsAppShare on FacebookShare on Telegram

ಚಿಕ್ಕಮಗಳೂರು ಜಿಲ್ಲೆಯ ದತ್ತಾತ್ರೇಯ ಪೀಠದಲ್ಲಿ ಪೂಜಾ ವಿಧಿ ವಿಧಾನ ನೆರವೇರಿಸಲು ಮುಸ್ಲಿಂ ಮೌಲ್ವಿ ಸೈಯದ್ ಗೌಸ್ ಮೊಹಿದ್ದೀನ್ ಅವರನ್ನು ನೇಮಿಸಿ ಧಾರ್ಮಿಕ ದತ್ತಿ ಇಲಾಖೆ ಆಯುಕ್ತರು 2018ರಲ್ಲಿ ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್‌ ರದ್ದುಪಡಿಸಿದೆ. ಸರ್ಕಾರದ ಆದೇಶ ಪ್ರಶ್ನಿಸಿ ಶ್ರೀಗುರು ದತ್ತಾತ್ರೇಯ ಪೀಠ ದೇವಸ್ಥಾನ ಸಂವರ್ಧನಾ ಸಮಿತಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಪೂರ್ಣಗೊಳಿಸಿ ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಮೂರ್ತಿ ಪಿ.ಎಸ್. ದಿನೇಶ್ ಕುಮಾರ್ ಅವರಿದ್ದ ಪೀಠ ವಿಚಾರಿಸಿ ತೀರ್ಪು ಪ್ರಕಟಿಸಿದೆ. ಈ ವೇಳೆ ಧಾರ್ಮಿಕ ದತ್ತಿ ಆಯುಕ್ತರು 2018ರ ಮಾರ್ಚ್ 19ರಂದು ಹೊರಡಿಸಿದ್ದ ಆದೇಶವನ್ನು ರದ್ದುಪಡಿಸಿದ ಪೀಠ, ಪ್ರಕರಣವನ್ನು ರಾಜ್ಯ ಸರ್ಕಾರ ಹೊಸದಾಗಿ ಕಾನೂನು ರೀತಿ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಈ ಕುರಿತು ಹಿಂದೆ ಉನ್ನತ ಮಟ್ಟದ ಸಮಿತಿ ನೀಡಿದ್ದ ವರದಿಯನ್ನು ಪರಿಗಣಿಸಬಾರದು ಎಂದು ನಿರ್ದೇಶಿಸಿತು. ಈ ಪ್ರಕರಣ ರಾಜ್ಯದಲ್ಲಿ ಅಲ್ಲೋಲ ಕಲ್ಲೋಲ ಉಂಟು ಮಾಡಿದ ಪ್ರಕರಣವಾಗಿತ್ತು. ಬಿಜೆಪಿ ಚಿಕ್ಕಮಗಳೂರು ಕಡೆ ತನ್ನ ಬೇರು ಗಟ್ಟಿಗೊಳಿಸಲು ಈ ಪ್ರಕರಣವನ್ನು ಬಳಸಿಕೊಂಡಿತ್ತು. ಮತ್ತು ಅದರಲ್ಲಿ ಬಿಜೆಪಿಯವರು ಯಶಸ್ವಿ ಕೂಡ ಆಗಿದ್ದರು. ಹೀಗಾಗಿ ಈ ಪ್ರಕರಣದ ಕುರಿತು ಇತ್ತೀಚೆಗೆ ಹೊರ ಬಿದ್ದ ತೀರ್ಪಿನ ಮುಖ್ಯಾಂಶಗಳು ʻಪ್ರತಿಧ್ವನಿʼ ಓದುಗಾರರಾದ ನೀವು ತಿಳಿದುಕೊಳ್ಳುವ ಅಗತ್ಯವಿದೆ.

ADVERTISEMENT

ತೀರ್ಪಿನ ಮುಖ್ಯಾಂಶಗಳು : 

•2010ರಲ್ಲಿ ಸುಪ್ರೀಂಕೋರ್ಟ್‌ಗೆ ಧಾರ್ಮಿಕ ದತ್ತಿ ಆಯುಕ್ತರು ಸಲ್ಲಿಸಿರುವ ವರದಿಯಲ್ಲಿ ಒಟ್ಟು 1015 ಜನರಿಂದ ಹೇಳಿಕೆಗಳನ್ನು ಪಡೆಯಲಾಗಿದೆ. ಅವರಲ್ಲಿ ಬಹುತೇಕ ಮಂದಿ ಹಿಂದು ಹಾಗೂ ಮುಸ್ಲಿಂ ಸಮುದಾಯದ ಇಬ್ಬರೂ ಪೂಜೆ ಹಾಗೂ ಪ್ರಾರ್ಥನೆಗಳನ್ನು ಸಲ್ಲಿಸುತ್ತಿದ್ದರು ಎಂದು ಹೇಳಿದ್ದಾರೆ. ಈ 1015 ಜನರಲ್ಲಿ 1969 ರಿಂದ  1975ರವರೆಗೆ ಮುಜಾವರ್ ಆಗಿದ್ದ ಎಂ.ಎನ್. ಬಾಷಾ ಅವರ ಹೇಳಿಕೆಯೂ ಇದ್ದು, ದೇವಾಲಯದಲ್ಲಿದ್ದ ಪಾದುಕೆಗಳನ್ನು ಬ್ರಾಹ್ಮಣ ಅಥವಾ ಲಿಂಗಾಯತ ಅರ್ಚಕರು ಅವರ ಸಂಪ್ರದಾಯದ ಪ್ರಕಾರ ಪೂಜೆ ನೆರವೇರಿಸುತ್ತಿದ್ದರು ಎಂದು ತಿಳಿಸಿದ್ದಾರೆ. ಜತೆಗೆ, ಹಳೆಯ ಪದ್ಧತಿಯನ್ನೇ ಮುಂದುವರಿಸಿಕೊಂಡು ಹೋಗಬೇಕೆಂದು ಬಾಷಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

• ದಾಖಲೆಗಳ ಪ್ರಕಾರ ಮೈಸೂರು ಮಹಾರಾಜರು ದತ್ತಾತ್ರೇಯ ದೇವರು ಹಾಗೂ ಬಾಬಾ ಬುಡನ್ ದರ್ಗಾ ಎರಡಕ್ಕೂ ಪ್ರತ್ಯೇಕವಾಗಿ ದತ್ತಿ ಹಾಗೂ ಅನುದಾನಗಳನ್ನು ನೀಡಿದ್ದಾರೆ. 1995ರ ಬಳಿಕ ಇನಾಮು ನಿಷೇಧಗೊಂಡ ಬಳಿಕ ಪ್ರತ್ಯೇಕ ತಸ್ತಿಕ್ ನಿಗದಿಪಡಿಸಲಾಗಿದೆ. ಆದರೆ, ಸರ್ಕಾರ ಪೂಜಾ ವಿಧಿ ವಿಧಾನ ಪೂರೈಸಲು ಮುಜಾವರ್ ನೇಮಕ ಮಾಡಿ, ಅವರಿಗೆ ಮಾತ್ರ ಗುಹೆಯೊಳಗೆ ಪ್ರವೇಶಿಸಲು ಹಾಗೂ ಹಿಂದು ಮತ್ತು ಮುಸ್ಲಿಮರಿಬ್ಬರಿಗೂ ತೀರ್ಥ ವಿತರಿಸಲು ಅವಕಾಶ ಕಲ್ಪಿಸಲಾಗಿದ್ದು, ಪಾದುಕೆಗಳಿಗೆ ಹೂವುಗಳನ್ನಿಡಲು ಹಾಗೂ ನಂದಾದೀಪ ಬೆಳಗಿಸಲು ಅವಕಾಶ ನೀಡಲಾಗಿದೆ. ಈ ವಿಚಾರಗಳು ಮುಸ್ಲಿಮರ ಆಚರಣೆಗಳಿಗೆ ವಿರುದ್ಧವಾಗಿವೆ. ಏಕೆಂದರೆ, ಇಸ್ಲಾಂ ಧರ್ಮದಲ್ಲಿ ವಿಗ್ರಹ ಆರಾಧನೆಗೆ ಮಾನ್ಯತೆ ಇಲ್ಲ.

•ಮೊದಲನೆಯದಾಗಿ, 2018ರ ಮುಜಾವರ್ ನೇಮಿಸುವ ಮೂಲಕ ಸರ್ಕಾರ ಹಿಂದು ಸಂಪ್ರದಾಯದ ಪ್ರಕಾರ ಪೂಜೆ, ಅರ್ಚನೆಗಳನ್ನು ನೆರವೇರಿಸುವ ಹಿಂದು ಸಮುದಾಯದ ಜನರ ಹಕ್ಕುಗಳನ್ನು ಮೊಟಕುಗೊಳಿಸಲಾಗಿದೆ ಎಂದು ಕೆಲವರು ಆರೋಪಿಸಿದ್ದರು. ಎರಡನೆಯದಾಗಿ, ಇಸ್ಲಾಂ ನಂಬಿಕೆಗಳಿಗೆ ವಿರುದ್ದವಾಗಿ ದೇವಾಲಯದಲ್ಲಿರುವ ಪಾದುಕೆಗಳಿಗೆ ಹೂವು ಇಡುವ ಹಾಗೂ ನಂದಾದೀಪ ಬೆಳಗಿಸುವ ಕೆಲಸವನ್ನು ಮುಜಾವರ್ ಮೇಲೆ ಹೇರಲಾಗಿದೆ. ಈ ಅಂಶಗಳು ಸಂವಿಧಾನದ ಪರಿಚ್ಛೇದ 25ರ ಅಡಿಯಲ್ಲಿ ಎರಡೂ ಸಮುದಾಯಗಳಿಗೆ ನೀಡಿರುವ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯಾಗಿದೆ.

• ಧಾರ್ಮಿಕ ದತ್ತಿ ಆಯುಕ್ತರ ಮುಂದೆ ಹೇಳಿಕೆ ನೀಡಿರುವವರಲ್ಲಿ ಹೆಚ್ಚಿನ ಸಂಖ್ಯೆಯ ಭಕ್ತರು ಹಿಂದು ಹಾಗೂ ಮುಸ್ಲಿಂ ಇಬ್ಬರೂ ಅವರವರ ಸಂಪ್ರದಾಯಗಳ ಪ್ರಕಾರ ಪೂಜೆ ನೆರವೇರಿಸುತ್ತಿದ್ದರು ಎಂದು ಹೇಳಿಕೆ ನೀಡಿದ್ದರೂ, ಸರ್ಕಾರ ಉನ್ನತ ಮಟ್ಟದ ಸಮಿತಿಯ ವರದಿಯನ್ನೇ ಅಂತಿಮವಾಗಿ ಪರಿಗಣಿಸಿದೆ.

• ಇದು ಪೂಜಾ ಸ್ಥಳವನ್ನು ಪರಿವರ್ತಿಸಿದ ಪ್ರಕರಣವಲ್ಲ. ಹಿಂದು ಮತ್ತು ಮುಸ್ಲಿಂ ಇಬ್ಬರೂ ಪೂಜೆ ಮಾಡುವಂತಹ ಸ್ಥಳವಾಗಿದೆ. ಆದರೆ, ಪೂಜೆ ನೆರವೇರಿಸಲು ಮೌಲ್ವಿಯನ್ನು ನೇಮಿಸಲು ಶಿಫಾರಸು ಮಾಡುವ ಮೂಲಕ ಉನ್ನತ ಮಟ್ಟದ ಸಮಿತಿಯು ಪಕ್ಷಪಾತ ಎಸಗಿದೆ.

• ನಂಬಿಕೆ ಎಂಬುದು ವೈಯಕ್ತಿಕ ವಿಚಾರ. ಅದು ನಿಜವಾದ ನಂಬಿಕೆ ಎಂಬುದಾಗಿ ಒಪ್ಪಲು ಕೋರ್ಟ್‌ಗೆ ಸೂಕ್ತ ದಾಖಲೆ ದೊರೆತಾಗ ನಂಬುವವರಿಗೆ ಬಿಟ್ಟುಬಿಡಬೇಕಾಗುತ್ತದೆ. ಹಿಂದು ಅಥವಾ ಮುಸ್ಲಿಂ ಪೈಕಿ ಯಾರೇ ಆಗಲಿ ಅವರ ಧಾರ್ಮಿಕ ನಂಬಿಕೆಯನ್ನು ಗುರುತಿಸಬೇಕಾಗುತ್ತದೆ. ಸಂಪ್ರದಾಯವನ್ನು ಸಮಾನವಾಗಿ ಗೌರವಿಸುವುದೇ ಜಾತ್ಯಾತೀತ ಸಂವಿಧಾನದ ಮೌಲ್ಯವಾಗಿರುತ್ತದೆ ಎಂದು ಸುಪ್ರೀಂಕೋರ್ಟ್ ರಾಮಜನ್ಮಭೂಮಿ ಪ್ರಕರಣದಲ್ಲಿ ಆದೇಶಿಸಿದ್ದ ಈ ಮಾತನ್ನು ಪುನಃ ಮತ್ತೆ ಇಲ್ಲಿ ನೆನಪಿಸಿಕೊಳ್ಳಲಾಯ್ತು.

ಪ್ರಕರಣದ ಹಿನ್ನೆಲೆ  :

ದತ್ತಾತ್ರೇಯ ಪೀಠದಲ್ಲಿ ಪೂಜಾ ವಿಧಿ ವಿಧಾನ ನೆರವೇರಿಸುವ ವಿಚಾರವಾಗಿ ವಿವಾದ ಉದ್ಭವಿಸಿದಾಗ ಪ್ರಕರಣ ಕೋರ್ಟ್ ಮೆಟ್ಟಿಲೇರಿತ್ತು. ಈ ಸಂಬಂಧ ಸಲ್ಲಿಸಿದ್ದ ಸಿವಿಲ್‌ ಮೇಲ್ಮನವಿಯ ಸಂಬಂಧ 2010ರ ಮಾರ್ಚ್ 10ರಂದು ಅಂದಿನ ಧಾರ್ಮಿಕ ದತ್ತಿ ಇಲಾಖೆ ಆಯುಕ್ತರು ಸುಪ್ರೀಂ ಕೋರ್ಟ್‌ಗೆ ವರದಿ ಸಲ್ಲಿಸಿ, ನಿತ್ಯ ಪೂಜೆ ನೆರವೇರಿಸಲು ಆಡಳಿತ ಸಮಿತಿಯು ಹಿಂದು ಅರ್ಚಕರೊಬ್ಬರನ್ನು ನೇಮಿಸಬೇಕೆಂದು ತಿಳಿಸಿತ್ತು. ಆ ವರದಿಯನ್ನು ಸಜ್ಜದ್‌ ನೌಶೀನ್‌ ಹಾಗೂ ಇತರೆ ಪ್ರತಿವಾದಿಗಳು ಆಕ್ಷೇಪಿಸಿದ್ದರು. ಈ ವೇಳೆ ರಾಜ್ಯ ಸರ್ಕಾರ ಪ್ರಕರಣದಲ್ಲಿ ಸೂಕ್ಷ್ಮ ವಿಚಾರಗಳು ಅಡಗಿದ್ದು, ಸಚಿವ ಸಂಪುಟದಲ್ಲಿ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುವುದಾಗಿ ಸುಪ್ರೀಂಕೋರ್ಟ್‌ಗೆ ಭರವಸೆ ನೀಡಿತ್ತು. ಹೇಳಿಕೆ ಪರಿಗಣಿಸಿದ್ದ ಸುಪ್ರೀಂಕೋರ್ಟ್, ಸಿವಿಲ್ ಮೇಲ್ಮನವಿಯನ್ನು 2015ರ ಸೆಪ್ಟೆಂಬರ್ 3ರಂದು ಇತ್ಯರ್ಥಪಡಿಸಿತ್ತು.

ಆದರೆ, ರಾಜ್ಯ ಸರ್ಕಾರವು ಸುಪ್ರೀಂಕೋರ್ಟ್‌ಗೆ ನೀಡಿದ್ದ ಭರವಸೆಯಂತೆ ಸಚಿವ ಸಂಪುಟದಲ್ಲಿ ನಿರ್ಧಾರ ಕೈಗೊಳ್ಳದೆ, ಧಾರ್ಮಿಕ ದತ್ತಿ ಆಯುಕ್ತರ ವರದಿ ಪರಿಶೀಲಿಸಲು ಉನ್ನತ ಮಟ್ಟದ ಸಮಿತಿಯನ್ನು ನೇಮಿಸಿತ್ತು. ಈ ಸಮಿತಿ 2017ರ ಡಿಸೆಂಬರ್ 3ರಂದು ವರದಿ ಸಲ್ಲಿಸಿ,1947ರ ಆಗಸ್ಟ್ 15ಕ್ಕೂ ಮುನ್ನ ಯಾವ ಪೂಜೆ ನೆರವೇರಿತ್ತೋ, ಅದೇ ರೀತಿ ಪೂಜೆ ನೆರವೇರಿಸಬೇಕು ಎಂದು ಶಿಫಾರಸ್ಸು ಮಾಡಿತ್ತು. ಈ ವರದಿ ಆಧರಿಸಿ ರಾಜ್ಯ ಸರ್ಕಾರ ದತ್ತಪೀಠದಲ್ಲಿ ಪೂಜೆ ನೆರವೇರಿಸಲು ಮುಸ್ಲಿಂ ಮೌಲ್ವಿಯನ್ನು ನೇಮಿಸಿ 2018ರ ಮಾರ್ಚ್ 19ರಂದು ಆದೇಶಿಸಿತ್ತು.

ಹೈ ಕೋರ್ಟ್‌ ಆದೇಶದ/ತೀರ್ಪಿನ ಪ್ರತಿ ಇಲ್ಲಿದೆ : 

judgment-1Download
Tags: BJPChikkamagalur DistrictCongress PartyHigh Court of Karnatakahighcourtಬಿಜೆಪಿ
Previous Post

ಕಾಂಗ್ರೆಸ್‌ ಹಿಂದಿಯನ್ನು ವಿರೋಧಿಸುತ್ತಿಲ್ಲ ಆದರೆ, ಜನ ಒಪ್ಪುವ ಹಾಗೆ ಹಿಂದಿ ಬೇಕು : Brijesh Kalappa

Next Post

ಬಳ್ಳಾರಿ ಎಂಎಲ್‌ಸಿ ಚುನಾವಣೆ: ಗಣಿ ಮಾಫಿಯಾದ ಗಿಣಿ ಕಾಂಗ್ರೆಸ್‌ನ ಕೊಂಡಯ್ಯ ಮತ್ತು ರೆಡ್ಡಿ-ರಾಮುಲುಗಳ ನಡುವೆ ಮ್ಯಾಚ್ ಫಿಕ್ಸಿಂಗ್ !

Related Posts

ಜನಾಶೀರ್ವಾದ, ಶಾಸಕರ ಬೆಂಬಲವೇ 17 ನೇ ಬಜೆಟ್‌ ಮಂಡನೆಗೆ ಕಾರಣ : ಸಿದ್ದರಾಮಯ್ಯ ಸಂತಸ..!
Top Story

ಜನಾಶೀರ್ವಾದ, ಶಾಸಕರ ಬೆಂಬಲವೇ 17 ನೇ ಬಜೆಟ್‌ ಮಂಡನೆಗೆ ಕಾರಣ : ಸಿದ್ದರಾಮಯ್ಯ ಸಂತಸ..!

by ಪ್ರತಿಧ್ವನಿ
March 12, 2026
0

ಬೆಂಗಳೂರು : ಎರಡನೇಯ ಬಾರಿಗೆ ರಾಜ್ಯದ ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯ ದಾಖಲೆಯ 17 ನೇ ಬಜೆಟ್‌ ಮಂಡನೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಬುಧವಾರ ನಡೆದ ಶಾಸಕಾಂಗ ಸಭೆಯಲ್ಲಿ ಸಿಎಂ...

Read moreDetails

ವಿಧಾನಸಭೆ ಬಜೆಟ್ ಅಧಿವೇಶನ ನೇರಪ್ರಸಾರ..!

March 12, 2026
ಸಾಮಾಜಿಕ ಆರೈಕೆಯೂ ದುಡಿಮೆಯ ಪ್ರತಿಫಲವೂ

ಸಾಮಾಜಿಕ ಆರೈಕೆಯೂ ದುಡಿಮೆಯ ಪ್ರತಿಫಲವೂ

March 12, 2026
LPG ಸಿಲಿಂಡರ್ ಸರಬರಾಜು ಸ್ಥಗಿತ: ಹೋಟೆಲ್, ಪಿ.ಜಿ, ಹಾಸ್ಟೇಲ್ ಗಳಿಗೆ ಬಿಸಿ ತಟ್ಟಿದ್ದು ಹೀಗೆ!

LPG ಸಿಲಿಂಡರ್ ಸರಬರಾಜು ಸ್ಥಗಿತ: ಹೋಟೆಲ್, ಪಿ.ಜಿ, ಹಾಸ್ಟೇಲ್ ಗಳಿಗೆ ಬಿಸಿ ತಟ್ಟಿದ್ದು ಹೀಗೆ!

March 12, 2026
IPL ಹಬ್ಬಕ್ಕೆ ದಿನಾಂಕ ಫಿಕ್ಸ್‌..! : ಉದ್ಘಾಟನಾ ಪಂದ್ಯ ಎಲ್ಲಿ ಗೊತ್ತಾ..?

IPL ಹಬ್ಬಕ್ಕೆ ದಿನಾಂಕ ಫಿಕ್ಸ್‌..! : ಉದ್ಘಾಟನಾ ಪಂದ್ಯ ಎಲ್ಲಿ ಗೊತ್ತಾ..?

March 11, 2026
Next Post
ಬಳ್ಳಾರಿ ಎಂಎಲ್‌ಸಿ ಚುನಾವಣೆ: ಗಣಿ ಮಾಫಿಯಾದ ಗಿಣಿ ಕಾಂಗ್ರೆಸ್‌ನ ಕೊಂಡಯ್ಯ ಮತ್ತು ರೆಡ್ಡಿ-ರಾಮುಲುಗಳ ನಡುವೆ ಮ್ಯಾಚ್ ಫಿಕ್ಸಿಂಗ್ !

ಬಳ್ಳಾರಿ ಎಂಎಲ್‌ಸಿ ಚುನಾವಣೆ: ಗಣಿ ಮಾಫಿಯಾದ ಗಿಣಿ ಕಾಂಗ್ರೆಸ್‌ನ ಕೊಂಡಯ್ಯ ಮತ್ತು ರೆಡ್ಡಿ-ರಾಮುಲುಗಳ ನಡುವೆ ಮ್ಯಾಚ್ ಫಿಕ್ಸಿಂಗ್ !

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada